ಕೊಡಗು ಜಿಲ್ಲೆಯವರಾದ ಶಾಂತಿ ಕೆ. ಆಪ್ಪಣ್ಣ ಅವರು ವಿಭಿನ್ನ ಕತೆಗಳ ಮೂಲಕ ಓದುಗರ ಗಮನ ಸೆಳೆದಿದ್ದಾರೆ. ವೃತ್ತಿ ನಿಮಿತ್ತ ಚೆನ್ನೈನಲ್ಲಿ ವಾಸವಾಗಿರುವ ಅವರು 'ಮನಸು ಅಭಿಸಾರಿಕೆ' ಕಥಾ ಸಂಕಲನ ಪ್ರಕಟಿಸಿದ್ದಾರೆ. ಅವರ ಈ ಸಂಕಲನಕ್ಕೆ ಛಂದ ಪುಸ್ತಕ ಬಹುಮಾನ ಸಂದಿದೆ. ಹಾಗೆಯೇ 2017ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಡಾ.ಎಚ್ ಶಾಂತಾರಾಮ್ ಪ್ರಶಸ್ತಿ ಕೂಡ ಈ ಕೃತಿಗೆ ಲಭಿಸಿದೆ.