ಕನ್ನಡ ಸಾಹಿತ್ಯದಲ್ಲಿ ಒಂದು ತಿರುವು ತಂದದ್ದು ಐಟಿ ಬಿಟಿ ಮಂದಿ ಕಥೆ ಬರೆಯಲು ಶುರು ಮಾಡಿದ್ದು. ನಿಂತ ನೀರಾಗಿದ್ದ ಕಥಾಜಗತ್ತಿಗೆ ಹೊಸ ನೀರು ಬಂದದ್ದು ಆಗ. ಆ ಸಾಲಿನಲ್ಲಿ ಕೆಲವು ಅತ್ಯುತ್ತಮ ಕಥೆಗಳ ಬರೆದವರು ಇವರು.
೧೬ ಕಥೆಗಳನ್ನು ಒಳಗೊಂಡ ಪುಸ್ತಕ IT ಪ್ರೊಫೆಷನ್ ಅದರ ಸುತ್ತ ಹೆಣೆದ ಕಥೆ. ಕೆಲವು ಕಡೆ ಬೇಕಂತಲೇ ತುರುಕಿದ ಹಾಗೆ ಭಾಸವಾದ ಅನೈತಿಕ ಸಂಬಂಧ, ಲಿವಿನ್ ರಿಲೇಶನ್ ಶಿಪ್ ತರದ ವಿಚಾರಗಳು ಅದನ್ನು ಬಿಟ್ಟರೆ ಎಲ್ಲೂ ಬೇಜಾರ್ ಅನಿಸದ ಕಥೆಗಳು ಓದಿಸಿಕೊಂಡು ಹೋಗುತ್ತದೆ. ಕನಕಾಭಿಷೇಕ, ಪೇಣಿ, ಪ್ರೊಜೆಕ್ಟ್ ಬ್ರಿಡ್ಜ್ ನನಗೆ ಹಿಡಿಸಿದೆ ಕಥೆಗಳು.