" ಇಡಿಯ ತಲಾಶ್ ನಲ್ಲಿರುವ ಬಿಡಿಗಳು " . ಇದು ರವೆ ಉಂಡೆ ತಿನ್ನುವಾಗ ದ್ರಾಕ್ಷಿ ಗೋಡಂಬಿಗಳು ಸಿಕ್ಕುವಂತೆ ಅವರ ಸಾಹಿತ್ಯ ಬೊಗಸೆಯಲ್ಲಿ ಬಿಡಿಯಾಗಿ ಕೈಗೆ ಸಿಕ್ಕುವ ಬರಹಗಳ ಸಂಗ್ರಹ. ಬದುಕಿನ ಸಾಮಾನ್ಯ ಕ್ಷಣಗಳನ್ನು ಅವರದ್ದೇ ಆದ ವಿಶಿಷ್ಟ ಕನ್ನಡಕದೊಂದಿಗೆ ನೋಡುತ್ತಾ ನಮಗೂ ಆ ನೋಟವನ್ನು ಹೊಳೆಯಿಸುತ್ತಾ ಸಾಗುವ ಅವರ ಬರಹದ ಲಾಲಿತ್ಯ ಸಂಗೀತದಂತೆಯೇ ತೋರುತ್ತದೆ. ಈ ಬಿಡಿ ಬರಹಗಳ ಸಂಗ್ರಹ ಅವರ ಒಟ್ಟು ಜೀವನಪ್ರೀತಿಗೆ ಸಾಕ್ಷಿ. ಕಾರ್ನಾಡರು ಹೇಳುವ " ಓದಬೇಕು ಎನ್ನಿಸುವ ಅಪೂರ್ವ ಸೆಳೆತದ ಲೇಖಕ ಜಯಂತ " ಎನ್ನುವ ಮಾತು ಇದರಲ್ಲೂ ಬಹಳ ಸತ್ಯವೆನಿಸಿದೆ.
Jayanth Kaikini is an Indian poet, short stories author and a lyricist working in Kannada cinema. ಜಯಂತ ಗೌರೀಶ ಕಾಯ್ಕಿಣಿ(ಜನನ : ೨೪,ಜನವರಿ, ೧೯೫೫) ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಜಯಂತ್ ರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು.ಇಳಿಸಂಜೆಯ ಬಿಸಿಲು,ಬಿಸಿಲುಕೋಲು,ಪಾತರಗಿತ್ತಿ,ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ,ಮೆಲುದನಿಯ ವ್ಯಕ್ತಿತ್ವ ಅವರದು.[೩] ಸಾಹಿತ್ಯ ಪ್ರಕಾರಗಳ ಹಲವು ವಿಭಾಗಗಳಲ್ಲಿ, ಕವಿಯಾಗಿ, ಈಟಿವಿ ಕನ್ನಡ ವಾಹಿನಿಯಲ್ಲಿ ಸಂದರ್ಶಕನಾಗಿ, ಸಿನೆಮಾ ಹಾಡುಗಳ ಸಾಹಿತಿ,ಸಂಭಾಷಣೆಗಾರನಾಗಿ, ಅಂಕಣಕಾರ ನಾಗಿ, ನಾಟಕಕಾರನಾಗಿ, ಕಥೆಗಾರನಾಗಿ, ಮತ್ತು ಕನ್ನಡಿಗರ (ಸಾಗರದಾಚೆಗೂ ನೆಲೆ ನಿಂತಿರುವ ಕನ್ನಡಿಗರ) ಅಚ್ಚುಮೆಚ್ಚಿನ ಲೇಖಕರಾಗಿದ್ದಾರೆ.
ಜಯಂತರ ಬಿಡಿ ಬರಹಗಳನ್ನು ಓದೋದಕ್ಕೆ ಬೇರೆಯದ್ದೇ ಒಂದು ಲಹರಿ ಬೇಕು. ಸುತ್ತಮುತ್ತಲ ಅತ್ಯಂತ ನಗಣ್ಯ ಎಂದೆನಿಸುವ ಎಷ್ಟೋ ವಿಷಯಗಳು ಅವರ ಬರಹದ ಹಂದರ.
ಶಬ್ದ ಹಾಗೂ ತೀರ ಎಂಬ ಎರಡು ಭಾಗಗಳನ್ನು ಹೊಂದಿರುವ ಈ ಸಂಕಲನದ, ಮೊದಲ ಭಾಗದಲ್ಲಿ ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸುವ ಲೇಖಕರಾಗಿ ಜಯಂತರನ್ನು ಕಾಣಬಹುದು. ಎರಡನೇ ಭಾಗ 'ತೀರ'ದಲ್ಲಿ ಹೆಚ್ಚಾಗಿ, ಬೇರೆ ಲೇಖಕರ ಸಂಕಲನಗಳ ವಿಮರ್ಶೆಗಳಿವೆ.
ಶಬ್ಧ ತೀರದಲ್ಲಿ 'ಮುಂಬಯಿ ಗೀತೆ' ಅನ್ನೊ ಲೇಖನ ಓದುತ್ತಿದ್ದೆ. ಇಡೀ ಮುಂಬಯಿ ಈ ಲೇಖನ ಆಧರಿಸಿ ಬದುಕುತ್ತದೆಯೇನೊ ಅನ್ನಿಸುವಷ್ಟು ಸತ್ಯವಾಗಿದೆ ಮತ್ತು ಆಳವಾಗಿದೆ. ಒಂದೊಂದು ಸಾಲು ಬಹಳ ಹೇಳುತ್ತವೆ. ಈಗ ನಿಲ್ಲಿಸಿದ ಪೂರ್ಣವಿರಾಮದಿಂದ ಮತ್ತೊಂದು ಪೂರ್ಣವಿರಾಮದ ವರೆಗೆ ಹೊಸ ಬದುಕು ಚಮತ್ಕಾರವೆಂಬಂತೆ ಚಿತ್ರಣಗೊಂಡುಬಿಡುತ್ತದೆ. ಅವಸರವಾಗಿ ಓದಿದರೆ ಏನೂ ಅರ್ಥವಾಗುವುದಿಲ್ಲ. ಅರ್ಥಮಾಡಿಕೊಂಡು ಓದಿದರೆ ಮುಂಬಯಿಯೇ ದಕ್ಕುತ್ತದೆ. ಏನು ಬೇಕಾದರೂ ಆಗಿ ಬಿಡುವ ಸ್ವತಂತ್ರ ಈ ಸಾಲುಗಳಲ್ಲಿದೆ. ಇಡೀ ಪುಸ್ತಕದ ಬಗ್ಗೆ ಬರೆಯುವ ಹುಮ್ಮಸ್ಸಿದೆ. ಆದರೆ ಇನ್ನೂ ಓದುವುದೂ ಸಾಕಷ್ಟಿದೆ 😍