Jump to ratings and reviews
Rate this book

ಕಾಕನ ಕೋಟೆ

Rate this book
Kakana kote

107 pages, Kindle Edition

First published January 1, 1938

Loading...
Loading...

About the author

Masti Venkatesha Iyengar

49 books41 followers
ಮಾಸ್ತಿ ವೆಂಕಟೇಶ ಅಯ್ಯಂಗಾರರು ಕನ್ನಡದ ಒಬ್ಬ ಅಪ್ರತಿಮ ಲೇಖಕರು. ಕನ್ನಡ ಸಾಹಿತ್ಯ ಲೋಕದಲ್ಲಿ ಮಾಸ್ತಿ ಎಂದೇ ಖ್ಯಾತರಾಗಿರುವ ಈ ಸಾಹಿತಿ ಶ್ರೀನಿವಾಸ ಎಂಬ ಕಾವ್ಯನಾಮದಡಿಯಲ್ಲಿ ಬರೆಯುತ್ತಿದರು. ಅನೇಕ ಸಣ್ಣ ಕಥೆಗಳನ್ನು ಬರೆದ ಮಾಸ್ತಿ 'ಸಣ್ಣ ಕಥೆಗಳ ಜನಕ' ಎಂದು ಕರೆಯಲ್ಪಡುತ್ತಿದ್ದರು. ಅವರು ತಮ್ಮ ಅಪ್ರತಿಮ ಸಾಹಿತ್ಯ ಕೃಷಿಯಿಂದಾಗಿ 'ಮಾಸ್ತಿ ಕನ್ನಡದ ಆಸ್ತಿ' ಎಂದು ಪ್ರಚಲಿತರಾಗಿದ್ದರು. ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತು ಬರೆದ 'ಚಿಕವೀರ ರಾಜೇಂದ್ರ' ಎಂಬ ಕೃತಿಗೆ ೧೯೮೩ ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
17 (36%)
4 stars
18 (39%)
3 stars
3 (6%)
2 stars
3 (6%)
1 star
5 (10%)
Displaying 1 - 5 of 5 reviews
Profile Image for Nayaz Riyazulla.
458 reviews93 followers
March 19, 2026
ಕನ್ನಡ ನಾಟಕಗಳ ಓದು ಕೊಡುವ ರಮ್ಯ ಅನುಭವ ಅದನ್ನು ಸುಖಿಸುವವರಿಗೆ ಮಾತ್ರ ತಿಳಿಯುತ್ತದೆ, ಕಾರ್ನಾಡರ ತಲೆದಂಡ, ರಾಕ್ಷಸ ತಂಗಡಿ, ಹಯವದನ, ಕುವೆಂಪುರ ಶೂದ್ರ ತಪಸ್ವಿ, ಸ್ಮಶಾನ ಕುರುಕ್ಷೇತ್ರ, ಚಂದ್ರಹಾಸ, ಮಹಾರಾತ್ರಿ, ವಾಲ್ಮೀಕಿಯ ಭಾಗ್ಯ, ಪುತಿನರ ಅಹಲ್ಯೆ, ಗೋಕುಲ ನಿರ್ಗಮನ, ಬಿಎಂಶ್ರೀ ಅವರ ಅಶ್ವತ್ಥಾಮನ್, ಪ್ರಭುಶಂಕರರ ಅಂಗುಲೀಮಾಲ, ಮಾಸ್ತಿ ಅವರ ಕಾಳಿದಾಸ, ಯಶೋಧರೆ ಈ ನಾಟಕಗಳ ಓದು ನವೋದಯ ಮತ್ತು ನವ್ಯ ಕಾಲದಲ್ಲಿ ಮುಖ್ಯವಾಗಿ ನವೋದಯ ಕಾಲದಲ್ಲಿ ಎಷ್ಟು ಶ್ರೀಮಂತ ನಾಟಕಗಳ ರಚನೆಯಾಗಿತ್ತು ಎಂಬುದು ಅಭಿಮಾನ ಮೂಡಿಸುತ್ತದೆ, ನನ್ನ ಪ್ರಿಯವಾದ ನಾಟಕಗಳ ಪಟ್ಟಿಗೆ 'ಕಾಕನಕೋಟೆ' ನಾಟಕವೂ ಈಗ ಸೇರಿದೆ, ಕಾವ್ಯೇಶು ನಾಟಕಂ ರಮ್ಯಂ ಎಂಬ ಮಾತಿಗೆ ಇನ್ನಷ್ಟು ಪುಷ್ಟಿ ಕೊಟ್ಟಿದೆ.

ಇದು ಮಾಸ್ತಿರವರ ಮುಖ್ಯ ನಾಟಕ, ಅವರು ಜಿಲ್ಲಾಧಿಕಾರಿಗಳಾಗಿದ್ದ ಸಮಯದಲ್ಲಿ ಹೆಗ್ಗಡೆದೇವನಕೋಟೆ ತಾಲೂಕಿನ ಕಾಕನಕೋಟೆ ಕಾಡಿನ ಐತಿಹ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಿದಾಗ ಅವರಿಗೆ ಕಾಡುಕುರುಬರ ಮೂಲ ಪುರುಷ ಎಂದು ನಂಬಬಹುದಾದ ಕರಿಹೈದನೆಂಬನ ಜಾನಪದ ಕಥೆಯೊಂದು ಸಿಗುತ್ತದೆ, ಅದರ ಮೇಲಿನ ಕಾವ್ಯವನ್ನು ರಚಿಸಬೇಕೆಂದುಕೊಂಡಾಗ ಅದು ಬೇರೆ ರೀತಿಯಾಗಿ ಈ ನಾಟಕವಾಯಿತು. ಇಲ್ಲಿನ ಕಥಾವಸ್ತು - ಕಾಡುಕುರುಬರು ಮತ್ತು ಅಲ್ಲಿನ ಹೆಗ್ಗಡೆಗಳ ನಡುವೆ ಕಂದಾಯದ ವಿಷಯವಾಗಿ ನಡೆದ ವಾಗ್ವಾದಗಳ ಸರಣಿ, ಕೊನೆಗೆ ಪ್ರಭು ರಣಧೀರ ಕಂಠೀರವರು ಬಂದು ಈ ವಿಷಯವನ್ನು ಇತ್ಯರ್ಥ ಮಾಡುತ್ತಾರೆ.

ಕಥೆಯ ಜೊತೆ ಜೊತೆಗೆ ಮೂಲ ಪುರುಷ ಕರಿಹೈದನ ಮೇಲಿನ ಕಾವ್ಯವು ದೃಶ್ಯಗಳ ನಡುವೆ ಬರುವುದು ಈ ನಾಟಕದ ಚೆಲುವನ್ನು ಹಿಗ್ಗಿಸಿದೆ. ನಾಟಕದ ಭಾಷೆ ಮತ್ತು ಸಂಭಾಷಣೆ ರಸವತ್ತಾಗಿದೆ.

ಓದಿ ಓದಿಸಿ.
45 reviews1 follower
January 5, 2025
ನಾನು ಓದಿದ ಮೊದಲನೇ ಮಾಸ್ತಿಯವರ ಪುಸ್ತಕ. ಮೊದಮೊದಲಿಗೆ ಭಾಷೆ ಅರ್ಥ ಮಾಡಿಕೊಳಲ್ಲು ತಡವರಿಸಿದೆ ನಂತರ ಕಥೆಯ ಹಂದರ ಸಿಕ್ಕಿತು. ಕಾಡಿನ ಕಥೆ ಸುಂದರವಾಗಿದೆ. ಕಥೆಯಲ್ಲಿ ಕಾಡಿನ ಜನರ ಬದುಕು, ಮುಗ್ಧತನ, ಅಲ್ಲಿನ ಆಗಿನ ಸಮಸ್ಯೆಗಳು, ತೆರಿಗೆಯ ಸಮಸ್ಯೆ, ಪ್ರೀತಿ, ಎಲ್ಲವೂ ಇದೆ.

ನನಗೆ ಇಷ್ಟವಾದ ಕೆಲವೊಂದು ಮಾತುಗಳು
ಗಂಡಾಗಲಿ ಹೆಣ್ಣಾಗಲಿ ಮನಸ್ಸು ಕಾಯಬೇಕು, ಮನಸು ಬೆರೆಯಬೇಕು. ಮನಸ್ಸು ಬೆರೆತಮೇಲೆ, ಕಾಡಿಗೆ ಹೋಗಬೇಕು. ಕಾಡಿಗೆ ಹೋಗಿದ್ದು ಬೂಡಿಗೆ ಬರಬೇಕು . ಬೂಡಿಗೆ ಬಂದಮೇಲೆ ಜೊತೆಯಾಗಿ ನಡೀಬೇಕು. ಒಬ್ಬರು ಮೆಚ್ಚಿದೀವಿ ಅಂದರೆ ಸಾಲದು, ಇಬ್ಬರು ಮೆಚ್ಚಬೇಕು. ಇಬ್ಬರು ಮೆಚ್ಚಿದ ಮೇಲೆ ಮೈ ಕೂಡಬೇಕು.

ಒಲ್ಲದಿದ್ದರೆ ಒಲ್ಲೆ ಅನ್ನಬೇಕು. ಸುಮ್ಮಕಿರಬಾರದು. ಸುಮ್ಮಕ್ಕಿದರೆ ಗಂಡು ಪರದಾಡುತ್ತಾನೆ.

ಹಿರಿಯರು ಅಂದಿದ್ದಾರೆ ಕಾಡು ನಡಾಗಬೇಡ ನಾಡು ಬಯಲಾಗಬೇಡ ಅಂತ ಕಾಡ ದೇವರು ಒಳಿದಿರೋ ಮಂದಿ ಊರ ಕಟ್ಟತ್ತೀವಿ ಅನ್ನಬಾರ್ದಂತೆ.

ನಮ್ ಹಕ್ಕಳು ಕಾಡಾಗೆ ನಡೀತಿರಲಿಕೆ ಹರಿದಾರಿಲೀರೋ ಆನೆ ಕಂಪು ಮೂಗಿಗೆ ತಿಳೀತದೆ . ತರಗಿನೊಳಗೆ ತೆಕ್ಕೆ ಬಿದ್ದಿರೋ ಸರಪಾ ಕಣ್ಣಿಗೆ ಕಾಣತದೆ. ಜಿಂಕೆ ಹಿಂದೆ ನಡಿಯೋ ಹುಲಿ ಹೆಜ್ಜೆ ಸಪ್ಪಳ ಕೊಂಬಿನ ದೂರದಲ್ಲಿ ಕಿವಿಗೆ ಕೇಳ್ತದೆ. ಜೇನ ಹುಡುಕುತ ಹೋಗತಿದ್ರೆ ನೊಣ ಬಂದು ದಾರಿ ತೋರುತದೆ. ಊರು ಕಟ್ಟಿ ನಿಂತಿವಿ, ಇದೊಂದು ಆಗಲ್ಲ.
13 reviews1 follower
October 29, 2015
Simple plot,easy read,poems/songs interwoven between dialogues. i read the text version of it,dont know if it has other versions,but text version was completly plain.
1 review
April 4, 2019
Gud fantastic osm book
This entire review has been hidden because of spoilers.
Displaying 1 - 5 of 5 reviews