ಅಮೆರಿಕದಂಥ ಬಲಿಷ್ಠ ರಾಷ್ಟ್ರವನ್ನು ತಡವಿ ಮೈಮೇಲೆಳೆದುಕೊಳ್ಳುವ ತಾಕತ್ತು ಈ ಪ್ರಪಂಚದಲ್ಲಿದ್ದುದು ಕಮ್ಯುನಿಸ್ಟ್ ನೇತೃತ್ವದ ಸೋವಿಯತ್ ರಷ್ಯಕ್ಕೆ ಮಾತ್ರ. ಆದರೆ ಆ ದೇಶವೇ ಒಡೆದು ಛಿನ್ನಾಭಿನ್ನವಾಗಿ ಹೋಯಿತು. ಆ ಮೇಲೆ ತಾನು ಅದ್ವಿತೀಯನೆಂದುಕೊಂಡಿತು ಅಮೆರಿಕಾ! ಅಂಥ ಅಮೆರಿಕವನ್ನು ಎದುರು ಹಾಕಿಕೊಂಡು ಯುದ್ಧಕ್ಕೆ ಆಹ್ವಾನಿಸಬಲ್ಲ ತಾಕತ್ತು ಇಡೀ ಪ್ರಪಂಚದಲ್ಲಿ ಒಬ್ಬನಿಗೆ ಮಾತ್ರ ಇತ್ತು. ಮತ್ತು ಅವನು ಆ ಕೆಲಸ ಮಾಡಿಬಿಟ್ಟ! ಅವನ ಹೆಸರು ಮುಸ್ಲಿಂ. ಅಂಥದೊಂದು ದುಸ್ಸಾಹಸವನ್ನು ಅವನು ಮಾತ್ರ ಮಾಡಬಲ್ಲವನಾಗಿದ್ದ. ಏಕೆಂದರೆ - ಅವನ ಹೆಸರು ಮುಸ್ಲಿಂ! - ರವಿ ಬೆಳೆಗೆರೆ
Ravi Belagere was a writer and journalist based in Bengaluru, Karnataka, India. He was the editor of Kannada language tabloid Hi Bangalore,which he founded along with R. T. Vittalamurthy, Ra. Somanath, Jogi, and I. H. Sangam Dev. He used to run a show called Crime Diary, which used to air on a regional Kannada-language channel ETV Kannada, that focused on crime in Karnataka, and he started Prarthana, a school for children in Bangalore.
ನನ್ನನ್ನು ಈ ಪುಸ್ತಕ ಓದಲು ಪ್ರೇರೇಪಿಸಿದ್ದು ಪುಸ್ತಕದ Intro. "ಅಮೆರಿಕದಂಥ ಬಲಿಷ್ಠ ರಾಷ್ಟ್ರವನ್ನು ಎದುರು ಹಾಕಿಕೊಂಡ, ಅವನ ಹೆಸರು ಮುಸ್ಲಿಂ" ಎಂದು ಓದಿದಾಗ, ವಾಹ್ ಎನ್ line ಗುರು ಇದನ್ನು ಓದಲೇಬೇಕು ಅನಿಸ್ತು. ರವಿ ಬೆಳಗೆರೆ ಇದರ ಲೇಕಖರು ಅಂದ್ಮೇಲೆ ಓದೋದು ಫಿಕ್ಸ್ ಆಯಿತು.
ಈಗಿಂದ 20 ವರ್ಷ ಹಿಂದೇನೆ ಮಾಡಿದ ರವಿ ಬೆಳಗೆರೆ ಅವರ ಈ ಸಾಹಸಕ್ಕೆ ಒಂದು salute. ಪುಸ್ತಕದಲ್ಲಿ ಬರುವ ಯುದ್ಧ ಸನ್ನಿವೇಶಗಳು, ತಾಲಿಬಾನ್ ಬಗ್ಗಿನ ವಿವರಣೆಗಳು ಓದಿದಾಗ ನನಗನಿಸಿದ್ದು, ಈಗಲೂ ಅದೇ ಸನ್ನಿವೇಶ ಅದೇ ಯುದ್ಧ, ಅದೇ ಮತಾಂಧತೆ, ಅದೇ ತಾಲಿಬಾನ್ ಈಗಲೂ ಅಫ್ಘಾನಿಸ್ತಾನದಲ್ಲಿ ಸರ್ಕಾರ(?) ನಡೆಸುತ್ತಿದೆ. ಈ ಪುಸ್ತಕ ಓದುತ್ತಿರುವಾಗ ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬರ್ಗೆ 30 ಜನ ಸಾವು ಎಂಬ news ನೋಡಿದೆ. ನಗಬೇಕ ? ಅಳಬೇಕ ? ಗೊತ್ತಾಗಲಿಲ್ಲ😄. ಇಸ್ಲಾಂನಲ್ಲಿರುವ ದೈವ ಸೈನಿಕರು ಕಣ್ಣಿದ್ದೂ ಕುರುಡರಂತೆ. ಸ್ವರ್ಗ ಸಿಗುತ್ತೆ, 72 ಕನ್ಯೇಯರು ಸಿಗುತ್ತಾರೆ... ಮುಂತಾದ ಕುರುಡು ಭರವಸೆಗಳನ್ನು ಯೋಚಿಸದೆಯೇ ಹೋಗಿ ಅಮಾಯಕ ಜನರ ಪ್ರಾಣಹಾನಿ ಮಾಡುತ್ತಾರಲ್ಲ ?? ದೇವರು ಒಪ್ಪುವ ಕೆಲಸವೇ ಇದು?? ನಂಗೆ ಹಾಗನಿಸಲ್ಲ. 9/11 attacks ಬಗ್ಗೆ ಪುಸ್ತಕದಲ್ಲಿ ಓದುವಾಗ, ಇಂಟರ್ನೆಟ್ನಲ್ಲಿ ಸ್ವಲ್ಪ research ಮಾಡಿದೆ. ಆ ಕೆಲಸ ಮಾಡಿದ ಮಹಾನುಭಾವರೆಲ್ಲ ಓದಿದವರು, Europeನಲ್ಲಿ phd ಎಲ್ಲ ಓದಿದವರಾಗಿದ್ದರು!!!!. ಆಗ ನನಗನಿಸಿದ್ದು, Education has nothing to do with the world terrorism ಅಂತ. ಆಫಘಾನಿಸ್ತಾನದ ಹೆಣ್ಣು ಮಕ್ಕಳು ಸ್ನಾನ ಮಾಡುವ ಹಾಗಿಲ್ಲ ಎಂದು ತಾಲಿಬಾನ್ ತಂದ ನಿಯಮ, ಅಲ್ಲಿನ ಹೆಂಗಸರ ನರಕ ಜೀವನ ನಮಗೆ ಪರಿಚಯಿಸುತ್ತದೆ. ಇನ್ನು ಪೇಶಾವರದ ಗನ್ ಮಾರ್ಕೆಟ್, ಅಲ್ಲಿನ ಬಡತನ, ಉಗ್ರಗಾಮಿ ಚಟುವಟಿಕೆ ಎಲ್ಲ ನೋಡಿದರೆ, ಭಾರತ ಇಬ್ಭಾಗ ಆಗಿರದಿದ್ದರೆ, ಆ ಪ್ರಾಂತ್ಯ ನಮ್ಮ control ಅಲ್ಲಿ ಇದ್ದಿದರೆ ಹೀಗಾಗಲು ನಾವು ಬಿಡುತ್ತಿದ್ದವೆ?? ಎನ್ನಿಸಿತು. ರಷ್ಯಾ, ಅಮೆರಿಕ ರಾಜಕೀಯ, ಅದಕ್ಕಾಗಿ ಬಡ ರಾಷ್ಟ್ರಗಳನ್ನು ಕೆಟ್ಟದಾಗಿ ಬಳಸಿಕೊಳ್ಳುವುದು, ಆದರೆ ಮೇಲೆ ಆಕ್ರಮಣ ಮಾಡುವುದು ಈಗಲೂ ಇರುವ ಸ್ಥಿತಿಯೇ. 20 ವರ್ಷ ಆದರೂ ಏನೂ ಬದಲಾಗಿಲ್ಲ. ರವಿ ಬೆಳಗೆರೆ ಅವರ ಬರಹದ ಬಗ್ಗೆ ಎರಡು ಮಾತಿಲ್ಲ. ಅಷ್ಟು ರಸವತ್ತಾಗಿ ಎಲ್ಲಾ ದಾಖಲಿಸಿ ಕೊಟ್ಟಿದ್ದಾರೆ.
ಅಮೆರಿಕದಂಥ ಬಲಿಷ್ಠ ರಾಷ್ಟ್ರವನ್ನು ತಡವಿ ಮೈಮೇಲೆಳೆದುಕೊಳ್ಳುವ ತಾಕತ್ತು ಈ ಪ್ರಪಂಚದಲ್ಲಿದ್ದುದು ಕಮ್ಯುನಿಸ್ಟ್ ನೇತೃತ್ವದ ಸೋವಿಯತ್ ರಷ್ಯಕ್ಕೆ ಮಾತ್ರ. ಆದರೆ ಆ ದೇಶವೇ ಒಡೆದು ಛಿನ್ನಾಭಿನ್ನವಾಗಿ ಹೋಯಿತು. ಆ ಮೇಲೆ ತಾನು ಅದ್ವಿತೀಯನೆಂದುಕೊಂಡಿತು ಅಮೆರಿಕಾ! ಅಂಥ ಅಮೆರಿಕವನ್ನು ಎದುರು ಹಾಕಿಕೊಂಡು ಯುದ್ಧಕ್ಕೆ ಆಹ್ವಾನಿಸಬಲ್ಲ ತಾಕತ್ತು ಇಡೀ ಪ್ರಪಂಚದಲ್ಲಿ ಒಬ್ಬನಿಗೆ ಮಾತ್ರ ಇತ್ತು. ಮತ್ತು ಅವನು ಆ ಕೆಲಸ ಮಾಡಿಬಿಟ್ಟ! ಅವನ ಹೆಸರು ಮುಸ್ಲಿಂ. ಅಂಥದೊಂದು ದುಸ್ಸಾಹಸವನ್ನು ಅವನು ಮಾತ್ರ ಮಾಡಬಲ್ಲವನಾಗಿದ್ದ. ಏಕೆಂದರೆ ಅವನ ಹೆಸರು ಮುಸ್ಲಿಂ!
- ರವಿ ಬೆಳಗೆರೆ
ಇದು ಪುಸ್ತಕದಿಂದ ಆಯ್ದು ಬೆನ್ನಿನಲ್ಲಿ ಬರೆದಿರುವ ಪ್ಯಾರಾಗ್ರಾಫ್! ಅವನ ಹುಂಬ ಧೈರ್ಯಕ್ಕೆ, ಧರ್ಮಶ್ರದ್ಧೆ(?!)ಗೆ, ಧರ್ಮದ ಪ್ರಚಾರಕ್ಕೆ, ಸ್ವಧರ್ಮೀಯರ, ಧರ್ಮ ಸಂರಕ್ಷಣೆಗೆ ಅವನು ಎಲ್ಲಿಗಾದರೂ ಹೋಗಲು ಸಿದ್ದನಿದ್ದ. ಅವನು ಖಂಡಿತಾ "ಮುಸ್ಲಿಮನಲ್ಲ". ಹಿಂದೂ ಮುಸ್ಲಿಂ ಕ್ರೈಸ್ತ ಪಾರ್ಸಿ ಬೌದ್ಧ ಮತ್ತಿತರ ಧರ್ಮಗಳಿಗಿಂತ ಮಿಗಿಲಾದ ಮಾನವ ಧರ್ಮ ಮರೆತವನು. ಅವನು ಯುದ್ದಪಿಪಾಸು, ಅಂಧ ಧರ್ಮಿಷ್ಠ ಎಂದು ಓದುಗ ಕೊನೆಗೊಂದು ಷರಾ ಬರೆದುಕೊಳ್ಳುತ್ತಾನೆ.
ಇಂಥದೊಂದು ವಿಲಕ್ಷಣ ಪುಸ್ತಕವನ್ನು ಬರೆಯಲು ಪ್ರಾಯಶಃ ರವೀ ಸರ್ ಅವರನ್ನು ಬಿಟ್ಟು ಬೇರೆ ಯಾರಿಗೂ ಸಾಧ್ಯವಿಲ್ಲವೇನೋ. ನಾಗರೀಕತೆಯ ಗಡಿಯಾರ ನಿಂತು ಹೋದ ಅಫ್ಘಾನಿಸ್ತಾನದ ಯುದ್ಧ ಭೂಮಿಗಳಲ್ಲಿ, ತಝಕಿಗಳ ಬಡತನಕ್ಕೆ ಸ್ವತಃ ಸಾಕ್ಷಿಯಾಗಿ ಬಂದು ಮತ್ತಷ್ಟು ಸಂಶೋಧಿಸಿ ಬರೆದ ಮನಕಲಕುವ ಪುಸ್ತಕ - ಮುಸ್ಲಿಂ. ಈ ಪುಸ್ತಕ ಮತದ ಮೂಲಕ ತನ್ನನ್ನು ಗುರುತಿಸಿಕೊಂಡಿರುವುದು ಕೇವಲ ಜಾಹೀರಾತಿಗಾಗಿ ಇರಬಹುದು. ಇಲ್ಲಿ ನರಳಿರುವುದು ಮನು ಸಂಕುಲ.
ಎಡಪಂಥೀಯ ಬಲಪಂಥೀಯ ಗುಂಪುಗಾರಿಕೆಗಳು ನಮ್ಮ ನಡುವೆ ಸಾಮಾನ್ಯ. ಇಷ್ಟೊಂದು ನಿಕೃಷ್ಟ ಇತಿಹಾಸವನ್ನು ಓದಿದ ನಂತರ ಮನಸ್ಸಿನಲ್ಲಿ ಎಡ/ಬಲಗಳು ಗೌಣವಾಗಿ ವಿಶ್ವಮಾನವನಾಗಿ ಯೋಚಿಸತೊಡಗುತ್ತೇವೆ. ನನಗನಿಸಿದಂತೆ, ಹಿಂಸಾ ಪಂಥ, ಶೋಷಿತ ಪಂಥ ಹಾಗೂ ಸಾತ್ವಿಕ ಪಂಥಗಳಷ್ಟೇ, ಈ ಪಂಥಗಳು ಶಾಂತಿಯುತವಾಗಿ ಒಂದಾದರೇ ವಿಶ್ವ ಶಾಂತಿ ಸ್ಥಾಪನೆಯಾಗಬಹುದು. ಒಡೆದ ಮನಸ್ಸುಗಳನ್ನು ಸೇರಿಸಿದಂತೆ ಒಡೆದ ಮನುಷ್ಯ-ಮನುಷ್ಯರನ್ನು ಸೇರಿಸಲಾಗದ ಮಟ್ಟಿಗೆ ಧರ್ಮದ ಹೆಸರಿನಲ್ಲಿ ಹದಗೆಟ್ಟಿದೆಯಲ್ಲ ಎಂಬ ಅಸಹಾಯಕತೆ ಕಾಡುತ್ತದೆ.
ಅಂತರ್ಧರ್ಮೀಯ ಕಲಹಗಳಲ್ಲಿ ಎಲ್ಲ ಮುಖ್ಯ ಧರ್ಮಗಳು ನಲುಗಿವೆ. ೧೯೫೦ರ ಆಚೆಯಿಂದ ನಡೆದ ಅದೆಷ್ಟೋ ವಿಷಯಗಳನ್ನು ಅಚ್ಚುಕಟ್ಟಾಗಿ ರವೀ ಸರ್ ಕಟ್ಟಿಕೊಟ್ಟಿದ್ದಾರೆ. ಒಂದು ಹಂತದಲ್ಲಿ ಬಸಿರಿಗೆ ಬೆಂಕಿ ಸೋಕಿದಂತನಿಸಿತು. ಉಸಿರೆಲ್ಲಾ ಬಿಗ್ಗಬಿಗಿಯಾಗುತ್ತಿತ್ತು. ಪ್ರವಾದಿ ಮೊಹಮ್ಮದರ ಜಿಹಾದ್‌ನ ಅರ್ಥ ಅಂತರ್ಯುದ್ಧ ಗೆಲ್ಲುವುದು ಮತ್ತು ಇಸ್ಲಾಂ ಧರ್ಮವನ್ನು ಕಾಫಿರರಿಂದ ರಕ್ಷಿಸುವುದಷ್ಟೇ ಎಂದು ಪುಸ್ತಕದಲ್ಲಿ ಬರೆಯಲಾಗಿದೆ. ಈ ಅರ್ಥ ಹೇಗೆ ಎಲ್ಲಿ ಬದಲಾಯಿತು ಎಂಬುದು ಯಕ್ಷಪ್ರಶ್ನೆ.
ಧರ್ಮವನ್ನು ಉಳಿಸುವ ಪಥದಲ್ಲಿ ಸಾಗುತ್ತಾ ಸ್ವಧರ್ಮೀಯರನ್ನೇ/ಮನುಷ್ಯರನ್ನು ಹಿಂಸಿಸುವ ಫತ್ವಾಗಳನ್ನು ಯಾಕೆ ಹೊರಡಿಸಿದರೋ ಗೊತ್ತಿಲ್ಲ. ಅಫ್ಘಾನಿಸ್ತಾನದಂಥ ನರದೃಷ್ಟ ರಾಷ್ಟ್ರವೊಂದರ ಹೆಣ್ಣುಮಕ್ಕಳ ನೆನೆದರೆ ಈಗಲೂ ಕಣ್ಣಾಲಿ ಒದ್ದೆಯಾಗುತ್ತದೆ. ಪುಸ್ತಕದ ಕೊನೆಯ ಟಿಪ್ಪಣಿಗಳಲ್ಲಿ ಬರುವ ಫಾತಿಮಾ ಎಂಬ ಏಳು ಮಕ್ಕಳ ತಾಯಿಯೊಬ್ಬಳ ವ್ಯಥೆ ಭೂಮಿಯ ಮೇಲೆ ಮತ್ತೆ ಯಾವ ಹೆಣ್ಣಿಗೂ ಬರಬಾರದೆಂಬ ಪ್ರಾರ್ಥನೆಯೊಂದು ನಮಗರಿವಿಲ್ಲದೇ ಹೊರಡುತ್ತದೆ. ಅಲ್ಲಾಹುವಿಗೆ, ರಾಮನಿಗೆ, ಯೇಸುವಿಗೆ!!!
ಮೇಲೆ ಹೇಳಿದಂತೆ ಇಂಥದೊಂದು ವಿಲಕ್ಷಣ ವಸ್ತುವಿನ ಕುರಿತು ಖುದ್ದಾಗಿ ಭೇಟಿ ನೀಡಿ ಬರೆಯುವುದು ರವೀ ಸರ್ ಅವರನ್ನು ಹೊರತು ಪಡಿಸಿದರೇ ಮತ್ತಾರು ಇಲ್ಲ. ಇದ್ದರೂ ಬೆರಳೆಣಿಕೆಯಷ್ಟು ಮಾತ್ರ. ಜಲಾಲಾಬಾದ್ ಎಂಬ ಜಾಗಕ್ಕೆ ಹೋಗಬೇಕಾಗಬರುತ್ತದೆ. ಆದರೆ ಕೆಲಕಾರಣಗಳಿಂದ ರವೀ ಸರ್ ಅವರು ಹೋಗದೇ ಹಿಂದೆ ಉಳಿಯುತ್ತಾರೆ. ಅವರೊಡನಿದ್ದ ಇತರ ಪತ್ರಕರ್ತರು ತೆರಳಲು ನಿರ್ಧರಿಸುತ್ತಾರೆ. ಅಂದು ಸಂಜೆ ಆ ಪತ್ರಕರ್ತರೆಲ್ಲರನ್ನು ದಾರುಣವಾಗಿ ಹತ್ಯೆಗೈಯ್ಯಲಾಗುತ್ತದೆ. ಒಂದು ಪಕ್ಷ, ರವೀ ಸರ್ ಅಂದು ಜಲಾಲಾಬಾದ್‌ಗೆ ಅಂದು ಹೋಗಿದ್ದರೇ...
ಒಸಾಮಾ ಬಿನ್ ಲಾಡೆನ್‌ನ ಬಗ್ಗೆ ಹತ್ಹತ್ತಿರ ೧೭೦-೧೮೦ ಪುಟಗಳಷ್ಟು ಬರೆಯಲಾಗಿದೆ. ಆತನ ಬೃಹತ್ ಹೆಜ್ಜೆ ಮನುಕುಲದ ಮೇಲೆ ಬೀರಿದ ಪರಿಣಾಮ ಮಾಡಿರುವ ನಷ್ಟವನ್ನು ಭರಿಸಲಾಗುವುದಿಲ್ಲ. ದುಡ್ಡಿನ ಲೆಕ್ಕದಲ್ಲಿ ಅಳೆಯುತ್ತೇವೆಯೆಂದರೇ ಸರಿಸುಮಾರು ೧೫೦ ಬಿಲಿಯನ್ ಡಾಲರ್‌ಗಳು. ಜೀವಗಳ ಲೆಕ್ಕದಲ್ಲಿ ಅಳೆಯುವುದಾದರೇ ೫೦,೦೦೦ ವಿಧವೆಯರ ಕಣ್ಣೀರಿನ, ಆರ್ತನಾದದ ಕಿಮ್ಮತ್ತು!!!
ರವೀ ಸರ್ ಅವರು ಒಬ್ಬ ಉಗ್ರಗಾಮಿಯನ್ನು ಸಂದರ್ಶಿಸುವಾಗ ಆತ ಹೇಳಿದ ವಿಷಯವೊಂದಕ್ಕೆ ನನ್ನೊಳಗಿನ ಭಾರತೀಯನಿಗಿಂತ ಮನುಷ್ಯ ಜಾಗೃತನಾದ. ಆ ರೀತಿಯ ಪರಿಸ್ಥಿತಿಯೊಂದು ಬರುವ ಮುನ್ನ ಶಾಂತಿ ನೆಲೆಸಲಿ...!!! ರಾಮ ಅಲ್ಲಾಹು ಯೇಸುವಿನ ಕರುಣೆಯಿರಲಿ.
ಸರ್ವಜನಾಂಗದ ಶಾಂತಿಯ ತೋಟ - ಇದು ನಾಡಗೀತೆಯಲ್ಲ, ವಿಶ್ವಗೀತೆಯಾಗಲಿ ಎಂಬ ಅಚಲ ಪ್ರಾರ್ಥನೆಯೊಂದಕ್ಕೆ ನಾವೆಲ್ಲರೂ ಭಾಗಿಯಾಗಬೇಕು ಅನಿಸುತ್ತದೆ. ಇದೊಂದು ಪುಸ್ತಕ ಓದಿ.
This is my reread.. when I first read I was not able to understand the significance of the book as i was not well versed with international politics. But this read made me appreciate the book a lot more.
It's one of the best travelogue of a war ridden country. It's unique for kannada literature. It not only talks about Afghanistan but it talks about the overall war mongering of all countries. Even though it's written in 2002 at the time of Afghan US war, it's relevant today.