Kuppali Venkatappa Puttappa widely known by the pen name Kuvempu was a Kannada writer and poet, widely regarded as the greatest poet of 20th century Kannada literature. He is immortalised by some of his phrases, and in particular for his contribution to Universal Humanism or in his own words Vishwa maanavataa Vaada. He has penned the Karnataka State anthem Jaya Bharata Jananiya Tanujate.
He has written several Poems, stories and plays. His work Sri Ramayana Darshanam, the rewriting of the great ancient Indian epic Ramayana in modern Kannada, is regarded as revival of the era of Mahakavya (Epic poetry) in a contemporary form and charm.
He has received several awards for his works in the field of literature such as, Jnanpith Award, Sahitya Akademi Award , Pampa Award , Karnataka Ratna. He has also received The Padma Bhushan, the third highest civilian award in the Republic of India and Padma Vibhushan, the second highest civilian award in the Republic of India. He is the second among Kannada poets to be revered as Rashtrakavi
His son K P Poornachandra Tejaswi was a famous writer as well.
ಎರಡೇ ದೃಶ್ಯವಿರುವ ಚಿಕ್ಕ ನಾಟಕ "ಜಲಗಾರ". ಗಾತ್ರದಲ್ಲಿ ಚಿಕ್ಕದ್ದೇ ಆದರೂ ಸತ್ವದಲ್ಲಿ ಹಿರಿದಾಗಿರುವ ಈ ನಾಟಕ ಪ್ರತಿ ಸಾಲಿನಲ್ಲೂ ಜಲಗಾರನ ಪೊರಕೆಯಿಂದ ಕಾವ್ಯರಸವನ್ನು ಚೆಲ್ಲುತ್ತ ಹೋಗುತ್ತದೆ.
ಕುವೆಂಪುರವರು 1928 ರಲ್ಲಿ ತಮ್ಮ ಉನ್ನತ ಶಿಕ್ಷಣದ ಸಮಯದಲ್ಲಿ ಬರೆದಿದ್ದಾರೂ ಪ್ರಕಟಗೊಂಡದ್ದು 1931ರಲ್ಲಿ, ಅಂದರೆ ಅಸ್ಪುರ್ಶ್ವತೆ ಎಂಬ ಸಾಮಾಜಿಕ ಪಿಡುಗು ಕ್ರೂರ ರೂಪದಲ್ಲಿ ಇದ್ದ ಸಮಯದಲ್ಲಿ.. ಈ ಪಿಡುಗನ್ನು ವಿಭಿನ್ನ ರೀತಿಯಲ್ಲಿ ಕಂಡ ಪುಟ್ಟಪ್ಪನವರು ನಾಟಕದ ಮೂಲಕ ತಮ್ಮ ಆಲೋಚನೆ ಹಾಗೂ ಧೋರಣೆಗಳನ್ನು ನಿರೂಪಿಸಿದ್ದಾರೆ.
ಎರಡನೇ ದೃಶ್ಯ ಅತ್ಯಾಮೋಘವಾಗಿ ಮೂಡಿ ಬಂದಿದೆ.... ಡಾಂಬಿಕ ಭಕ್ತಿಯನ್ನು ತೊರೆದು, ಕಾಯಕವೇ ಕೈಲಾಸವೆಂದು ನಂಬುವ ಜಲಗಾರನಿಗೆ, ಶಿವ ಜಲಗಾರನಾಗೇ ಪ್ರತ್ಯಕ್ಷನಾಗಿ "ನಾನೊಬ್ಬ ಜಲಗಾರ, ಅಂಜದಿರು ಸೋದರನೆ ಜಗದ ಜಲಗಾರ ನಾನು, ಶಿವನೆಂದು ಕರೆಯುವರು ಎನ್ನ" ಎಂದು ಕರೆದು "ಬಾ ಎನ್ನ ಸೋದರನೇ, ನೀನೆನ್ನ ನಿಜಭಕ್ತ,! ನಿನ್ನದೇ ಶಿವಭಕ್ತಿ, ನೀನೇ ಶಿವಭಕ್ತ, ನೀನೇ ನಾನಾಗಿಹೆನು, ನಾನೆ ನೀನಾಗಿರುವೆ, ಶಿವ ನೀನು, ಶಿವ ನೀನು" ಎಂದೇಳಿ ಶಿವ ಮೌಢ್ಯವನ್ನಳಿಸುತ್ತಾನೆ.
ನಾಟಕದ ಶೈಲಿ ಕುವೆಂಪು ಅವರ ಭಾಷೆಯಲ್ಲಿ, ಕುವೆಂಪು ಅವರ ಬರಹ ಓದೋದೇ ಒಂದು ಅದ್ಭುತ. ಜಲಗಾರ ಪುಸ್ತಕ 26 ಪುಟಗಳು ಭಾಷೆ,ಭಾವ, ಕಥೆಯ ಕಟ್ಟಿತನ ಅದು ಓದಿದಾಗ ಮಾತ್ರ ಅದರ ರುಚಿ ಅನುಭವಿಸುವುದಕ್ಕೆ ಸಾಧ್ಯ. ಪಾತ್ರಗಳು ಸೀಮಿತವಾಗಿದೆ ಆ ಪಾತ್ರಗಳ ಪ್ರವೇಶ ಹಾಗೂ ನಿರ್ಗಮನ ಹಾಡಿನ ರೂಪಾಂತರ ಮಾತುಕತೆ. ಜಲಗಾರನಲ್ಲೂ ಶಿವನನ್ನು ಕಾಣುವ ಕುವೆಂಪು.
Before reading this, I felt like my Kannada reading ability was a solid 8/10, but Kuvempu can make you feel like it is actually 2/10 with his intense 'sandhi' game.
But, what a powerful play! There was so much contemporarily relevant commentary in this 24 page play written almost a hundred years ago. Commentaries on saviour complex, philanthropy, Brahminical + Hindutva co-option of folk deities and folk beliefs (Kantara), class commentary, caste commentary, etc.
And some unforgettable lines of poetry!
I think there is a market opportunity to open an antifa page to counter every Hindutva-Sanghi right wing talking point with just Kuvempu quotes.
ಕುವೆಂಪು ಅವರ "ಜಲಗಾರ" ನಾಟಕವನ್ನು ಓದಿದಾಗ, ಅದು ಕೇವಲ ಒಂದು ಐತಿಹಾಸಿಕ ಕೃತಿಯಾಗಿ ಉಳಿಯದೆ, ಇಂದಿಗೂ ಸಮಾಜಕ್ಕೆ ಪ್ರಸ್ತುತವಾಗುವಂತಹ ಗಂಭೀರ ಸಂದೇಶಗಳನ್ನು ಹೊತ್ತು ನಿಂತಿದೆ ಎಂದು ಅನಿಸುತ್ತದೆ. ಈ ನಾಟಕ, ದೇವಾಲಯದ ಸುತ್ತ ನಡೆಯುವ ಒಂದು ಸರಳ ಕಥೆಯ ಮೂಲಕ, ನಮ್ಮ ಸಮಾಜದಲ್ಲಿ ಶತಮಾನಗಳಿಂದ ಬೇರೂರಿರುವ ಜಾತಿ ವ್ಯವಸ್ಥೆ ಮತ್ತು ಮೂಢನಂಬಿಕೆಗಳ ಮೇಲೆ ತೀವ್ರವಾದ ಪ್ರಶ್ನೆಗಳನ್ನು ಎತ್ತುತ್ತದೆ. ಬೀದಿ ಕಸ ಗುಡಿಸುವ ಜಲಗಾರ ಅಸ್ಪೃಶ್ಯ ಸಮುದಾಯಕ್ಕೆ ಸೇರಿದವನಾಗಿದ್ದರೂ, ಅವನ ನಿಷ್ಠೆ ಮತ್ತು ಕಾಯಕ ನಿಷ್ಠೆ ಅಪಾರ. ಆದರೆ, ಅವನ ಜಾತಿಯ ಕಾರಣದಿಂದ ಸಮಾಜ ಅವನನ್ನು ದೂರವಿಡುವ, ಅವನ ನೀರನ್ನು ಅಪವಿತ್ರವೆಂದು ಭಾವಿಸುವ ವೈರುಧ್ಯವನ್ನು ಕುವೆಂಪು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಕುವೆಂಪು ಅವರ ನಾಟಕದ ಶೈಲಿ ಅದ್ಭುತವಾಗಿದೆ. ಅವರ ಸಂಭಾಷಣೆಗಳು ಕಾವ್ಯಾತ್ಮಕವಾಗಿ, ಪ್ರಾಸಬದ್ಧವಾಗಿ ಹರಿಯುತ್ತವೆ, ಆದರೆ ಅವುಗಳ ಹಿಂದಿರುವ ತಾತ್ವಿಕ ಆಳ ಗಹನವಾದುದು. ಜಲಗಾರನ ಪಾತ್ರ, ಅಂತರಂಗದ ಶುದ್ಧತೆಗೆ ಹೊರಗಿನ ಅಸ್ಪೃಶ್ಯತೆಯ ಕಟ್ಟುಪಾಡುಗಳು ಅಡ್ಡಿಯಾಗಬಾರದು ಎಂಬುದನ್ನು ಸಾರಿ ಹೇಳುತ್ತದೆ. ಪುರೋಹಿತರ ಪಾತ್ರಗಳು ಕಂದಾಚಾರಗಳ ಪ್ರತೀಕವಾಗಿದ್ದರೆ, ಉಳಿದ ಪಾತ್ರಗಳು ಮಾನವನ ಮನಸ್ಸಿನಲ್ಲಿರುವ ಒಳ್ಳೆಯ ಮತ್ತು ಕೆಟ್ಟ ಅಂಶಗಳ ಸಂಘರ್ಷವನ್ನು ಅನಾವರಣಗೊಳಿಸುತ್ತವೆ. ನಿಜವಾದ ಪಾವಿತ್ರ್ಯತೆ ಮನಸ್ಸಿನಲ್ಲಿದೆಯೇ ಹೊರತು, ಬಾವಿ, ಕೆರೆಗಳ ನೀರಿನಲ್ಲಿಲ್ಲ ಅಥವಾ ಜಾತಿಯಲ್ಲಿಲ್ಲ ಎಂಬ ಕುವೆಂಪು ಅವರ ಸಂದೇಶ "ಜಲಗಾರ" ನಾಟಕದ ಹೃದಯ. ಈ ನಾಟಕ, ಮನುಷ್ಯನನ್ನು ಅವನ ಕಾಯಕ ಮತ್ತು ಗುಣಗಳಿಂದ ಅಳೆಯಬೇಕೇ ಹೊರತು, ಅವನ ಜಾತಿ ಅಥವಾ ಕುಲದಿಂದಲ್ಲ ಎಂದು ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ. ಇಂದಿಗೂ ನಮ್ಮ ಸಮಾಜದಲ್ಲಿ ಕಾಣುವ ಅಸಮಾನತೆ, ತಾರತಮ್ಯಗಳ ವಿರುದ್ಧ ಧ್ವನಿ ಎತ್ತಲು ಈ ನಾಟಕ ಒಂದು ಪ್ರೇರಣೆ. "ಜಲಗಾರ" ನಾಟಕ ಓದುಗರಿಗೆ ಕೇವಲ ಒಂದು ಸಾಹಿತ್ಯಿಕ ಅನುಭವ ನೀಡುವುದಿಲ್ಲ, ಬದಲಿಗೆ ಅವರ ಮನಸ್ಸಿನಲ್ಲಿ ಮಾನವೀಯ ಮೌಲ್ಯಗಳ ಕುರಿತು ಆಳವಾದ ಚಿಂತನೆಯನ್ನು ಪ್ರಚೋದಿಸುತ್ತದೆ.
ಜಲಗಾರ ಕುವೆಂಪು ವಿರಚಿತ ಅತ್ಯಂತ ಸಣ್ಣ ನಾಟಕ. ಭಾರತ ಸಮಾಜದ ಹೀನ ಜಾತಿ ವ್ಯವಸ್ಥೆಯನ್ನು ಅಣುಕಿಸುವುದರೊಂದಿಗೆ, ಕೆಳವರ್ಗದವರ ಕಾಯಕನಿಷ್ಠೆಯನ್ನು ನಿರೂಪಿಸುವುದೇ ನಾಟಕದ ಕಥಾವಸ್ತು, "ಜಲಗಾರ" ಈ ನಾಟಕದ ಕಥಾ ನಾಯಕ.
ಊರಿನ ಜನರೆಲ್ಲಾ ದೇವರ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಿ ಸಂಭ್ರಮಿಸುತ್ತಿದ್ದರೆ ಜಲಗಾರ ಮಾತ್ರ ಆ ಯಾವ ಗೋಜಿಗೂ ಹೋಗದೆ ತನ್ನ ನಿತ್ಯ ಕಾಯಕವಾದ ನಗರ ಸ್ವಚ್ಛ ಗೊಳಿಸುವುದರಲ್ಲಿ ಮಗ್ನನಾಗಿರುತ್ತಾನೆ , ಈ ಸಮಯದಲ್ಲಿ ದಾರಿಯಲ್ಲಿ ಭೇಟಿಯಾಗುವ ಯುವಕ,ರೈತ,ಕವಿ ಮತ್ತು ಕಣ್ಣಿಲ್ಲದ ತಿರುಕನೊಂದಿಗಿ ನೆಡೆಯುವ ವಿವೇಕ ಭರಿತ ಸಂಭಾಷಣೆಯೇ ಈ ನಾಟಕ. ನಾಗರಿಕತೆಯ ಪ್ರಾರಂಭದಲ್ಲಿ ಮನುಷ್ಯನಿಗೆ ಧರ್ಮದ ಅರಿವಿಲ್ಲದಿದ್ದರು ದೈವಾರಾಧನೆಯನ್ನು ಮಾಡಿಕೊಂಡು ಬಂದಿದ್ದ ,ಆದರೆ ಇಂದಿನ ಗುಡಿಯಲ್ಲಿರುವ ದೇವರ ಮೂರ್ತ ರೂಪ ಪಡೆದ್ದದ್ದು ಮಾತ್ರ ನಂತರದ ಕಾಲಘಟ್ಟದಲ್ಲಿ. ಧರ್ಮ ಭಕ್ತಿ ಪ್ರಾಧಾನ್ಯತೆಯಿಂದ, ಆಚರಣೆಯ ಸೊಗಡಾಗಿ ಮಾರ್ಪಾಡಾಗಿ, ದೇವರನ್ನೇ ಕೆಲ ವರ್ಗದವರ ಸ್ವತ್ತಾಗಿಸಿಕೊಂಡು ಗುಡಿ / ದೇವಸ್ಥಾನಗಳಲ್ಲಿ ಬಂಧಿಸಿದ್ದಾರೆ ಎಂದು ಸೂಕ್ಷ್ಮವಾಗಿ ಕುವೆಂಪು ಈ ನಾಟಕದಲ್ಲಿ ವಿವರಿಸಿದ್ದಾರೆ. ನಾಟಕದ ಅಂತ್ಯದಲ್ಲಿ, ಈ ಗುಡಿಯಲ್ಲಿ ಬಂದಿಯಾಗಿರುವ ಶಿವ ಜಲಗಾರನಿರುವಲ್ಲಿಗೆ ಬಂದು ನಾನು ಕೂಡ ನಿಮ್ಮವ, ನಾನು ಲೋಕದ ಕೊಳಕನ್ನು ತೊಳೆಯುವ ಜಲಗಾರ, ನೀನೆ ನನ್ನ ನಿಜಭಕ್ತ ಸೋದರ ಎಂದು ಸಂವಾದಿಸುವುದು ವಿಶೇಷ.
ನಾಟಕದಲ್ಲಿ ಬರುವ ಕುರುಡ ಮತ್ತು ಕವಿಯ ಪಾತ್ರಗಳು ವಿಶೇಷವಾದವು: ಕಣ್ಣಿಲ್ಲದ ತಿರುಕ ಹಸಿವಿನಿಂದ ಬಳಲಿ ಅನ್ನಕ್ಕಾಗಿ ಭಿಕ್ಷೆ ಬೇಡುವಾಗ , ಯುವಕ ಕುರುಡನನ್ನು ಗೇಲಿ ಮಾಡಿ ಥಳಿಸಿಬಿಡುತ್ತಾನೆ ಪರಾನುಬೂತಿಗಿಂತ ಮಿಗಿಲಾದ ಧರ್ಮ ಇನ್ನೊಂದಿಲ್ಲ , ಹಸಿದವಗೆ ಅನ್ನ ನೀಡಿ ಸಂತೈಸುವುದಕ್ಕಿಂತ ಮಿಗಿಲಾದ ದೈವಾರಾಧನೆಯಿಲ್ಲ ಎಂಬ ಶೂಷ್ಕ್ಮ ಸಂದೇಶವನ್ನು ಈ ಸನ್ನಿವೇಶ ನೀಡುತ್ತದೆ.
ಜಲಗಾರ ಗೀತಾ ನಾಟಕವಾಗಿರುವುದರಿಂದ, ಕವಿಯ ಪಾತ್ರವನ್ನು ಜೀವನ ತತ್ವವನ್ನು ಹೇಳಲು ನಾಟಕದುದ್ದಕ್ಕೂ ಬಹಳ ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದು ಕುವೆಂಪು ರವರ ಅಘಾಧ ಕಾವ್ಯ ಪ್ರಜ್ಞೆಯನ್ನು ತೋರಿಸುತ್ತದೆ. ನಾಟಕದ ಹಲವು ಸನ್ನಿವೇಶಗಳಲ್ಲಿ ಜೀವನ ಮೌಲ್ಯಗಳನ್ನು ತಿಳಿಸುವ ಉತ್ತ್ಕ್ರುಷ್ಟ ಕಾವ್ಯ ಜಲಗಾರ ನಾಟಕದಲ್ಲಿದೆ.
ಸಮಾಜದ ಹೀನ ಆಚರಣೆಗೆ ಯತಾವತ್ತಾಗಿ ಕೈಗನ್ನಡಿ ಹಿಡಿಯಿವುದೇ ಪ್ರಗತಿಪರ ಸಾಹಿತ್ಯದ ಆಶಯ. ಭಾರತದಲ್ಲಿ ಸಂಪೂರ್ಣವಾಗಿ ಜಾತಿ ವ್ಯವಸ್ಥೆ ಅಂತ್ಯವಾಗುವವರೆಗೂ ಕುವೆಂಪು ರವರ ಜಲಗಾರ ಪ್ರಸ್ತುತವಾಗಿರುತ್ತಾನೆ. ನಾವೆಲ್ಲರೂ ಓದಲೇ ಬೇಕಾದಂತ ನಾಟಕ ಇದು.
This entire review has been hidden because of spoilers.
“ಜಲಗಾರ-ಈ ಕೃತಿಯನ್ನು ಎಷ್ಟುಬಾರಿ ಓದಿದೆನೋ ಲೆಕ್ಕವಿಲ್ಲ. ಪ್ರತಿಸಲ ಓದಿಗೂ ಹೊಸ ಅನುಭವ, ಹೊಸ ವೈಚಾರಿಕತೆ. ಕುವೆಂಪು ಅವರ ನುಡಿಗೂ ನಡೆಗೂ ವ್ಯತ್ಯಾಸವಿಲ್ಲ. ಕೇವಲ ೩೦ ಪುಟಗಳ ಈ ಕೃತಿಯ ಅನುಭವ ಅಗಾಧ.“ ಪದ್ಯ ರೂಪದಲ್ಲಿದ್ದರೂ ಅರ್ಥವಾಗುತ್ತದೆ.
“ಜಾತಿ ಮತಗಳ ವಿರೋಧಭಾವನೆ ನನ್ನ ಹುಟ್ಟುಗುಣ, ಸಂಸ್ಕಾರ ರೂಪದಲ್ಲಿಯೇ ಅದು ನನ್ನ ಜನ್ಮಕ್ಕಂಟಿಕೊಂಡು ಬಂದೀತೆಂದು ತೋರುತ್ತದೆ. ಅಸ್ಪೃಶ್ಯತೆ ಮಹಾಪಾಪವೆಂದು ಗಾಂಧೀಜಿ ಘೋಷಿಸಿದಾಗ ಈ ಕೃತಿ ರಚಿಸಿದ್ದು. ದೇವಾಲಯಗಳಿಗೆ ಹರಿಜನರ ಪ್ರವೇಶಕ್ಕೆ ಅವಕಾಶ ದೊರೆತರೂ ಅವರು ಹೋಗಬಾರದೆಂದು ಈ ಮೂಲಕ ತಮ್ಮ ಮಾತುಗಳನ್ನು ವ್ಯಕ್ತಪಡಿಸುತ್ತಾರೆ. ನೂರಾರು ದೇವತೆಗಳನ್ನು ಪೂಜಿಸಿಯೇ ನಮ್ಮ ದೇಶ ಈ ಸ್ಥಿತಿಗೆ ಬಂದು ತಲುಪಿದೆ . ಉತ್ತಮ ವರ್ಗದವರು ಸೃಷ್ಟಿಸಿರುವ ಪುರಾಣ ಪುಣ್ಯಕಥೆಗಳನ್ನು, ಮೌಢ್ಯ ಸಂಪ್ರದಾಯಗಳನ್ನು ಅವರು ಪೂರ್ಣವಾಗಿ ತಿರಸ್ಕರಿಸಿಬೇಕು ಎಂದು ಹೇಳುತ್ತಾರೆ.”