Dr. K.N. Ganeshaiah is an agricultural scientist and professor at the University of Agricultural Sciences, Bangalore. He is also a novelist specializing in thrillers, and writes in the Kannada language.
Education: Ph. D. University of Agricultural Sciences, Bangalore, India, l983 M.Sc. (Agri.) in Genetics & Plant Breeding, UAS, Bangalore, l979 B.Sc (Agri.), University of Agricultural Sciences, Bangalore, l976.
Prof Ganeshaiah has pioneered a new style of writing novels and short stories in Kannada that seamlessly mixes facts and fiction in the form of thrillers. Through this style, his writings have captured a new generation of readers in Kannada contributing to the growth of story writing in Kannada.
Though an agriculture scientist, his novels and stories bring to the reader, the lesser-known and hidden facts of history along with science. Some of his novels are also aimed at bringing the most complicated elements of science to the general reader.
Recognizing the novelty in the style of writing, he was awarded Kannada Sahitya Academy Datti Award for his novel Kanaka Musuku, which combines both history and science. As some experts have inferred, his thrillers have drawn a large number of new readers to Kannada.
In recognition of his novel contribution to Kannada Literature, Prof Ganeshaiah has also been honored with the Honorary President of Kolar District Sahitya Parishat during 2013
Prof Ganeshaiah has written Nine novels, and 41 short/long stories (in eight collections) and over 63 essays in the areas related Science and Society. His recent book Sasya Sagga on the wonders of plant life as told through his own journey in the field of botany and evolution has attracted your readers. Several of his novels and stories were serialized in Kannada Weekly Magazines
ಕೆಲವು ಲೇಖಕರ ಪುಸ್ತಕಗಳು ಹೇಗೆ ಆವರಿಸಿಕೊಳ್ಳುತ್ತವೆ ಎಂದರೇ ಅದರಲ್ಲಿ ಉಲ್ಲೇಖವಾಗಿರುವ ವಿಷಯಗಳು ದೃಢವಾಗಿ ಹೋದಲ್ಲಿ ನಮ್ಮ ಇತಿಹಾಸವೇ ಸುಳ್ಳಾ ಎಂದನಿಸಿಬಿಡುತ್ತದೆ. ಆ ರೀತಿಯ ಹಲವಾರು ಪ್ರಶ್ನೆಗಳನ್ನು ಓದುಗನೊಡಲಿಗೆ ಸುರಿಯುವ, ಅತಿ ಚಾಣಾಕ್ಷ ರೀತಿಯಲ್ಲಿ ಹೆಣೆದಿರುವ ಪುಸ್ತಕ ಕಪಿಲಿಪಿಸಾರ. ಪುಸ್ತಕದ ಹೆಸರೇ ಹೇಳುವಂತೆ ಇದೊಂದು ರೋಚಕ ಕಾದಂಬರಿ. ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಇಂಟರ್‌ನ್ಯಾಷನಲ್ ಸ್ಮಗ್ಲಿಂಗ್, ಭಾರತೀಯ ವಿಜ್ಞಾನ, ಪುರಾಣಗಳು ಎಲ್ಲವನ್ನೂ ಮಿಳಿತಗೊಳಿಸಿ ಕೆ.ಎನ್ ಗಣೇಶಯ್ಯರವರು ಎಂದಿನಂತೆ ಓದುಗರನ್ನು ಸೆಳೆದುಕೊಂಡಿದ್ದಾರೆ.
ಶುರುವಾತಿನಲ್ಲಿ ಹಲವಾರು ಸ್ಥಳಗಳನ್ನು ಉಲ್ಲೇಖ ಮಾಡುತ್ತಾ ಅದರ ವೃತ್ತಾಂತ ಹೇಳುತ್ತಾ ಕಥೆಯನ್ನು ಓಪನ್ ಎಂಡ್ ಮಾಡಿರುವ ಲೇಖಕರು, ಕಥೆ ಮುಂದೆ ಸಾಗಿದಂತೆ ಎಲ್ಲವನ್ನೂ ಸೇರಿಸುತ್ತಾ ಓದುಗನೂ ಒಂದು ಪಾತ್ರವಾಗಿ ಹೋಗುವಂತೆ ಮಾಡಿದ್ದಾರೆ. ವಿಷಯದ ಆಯ್ಕೆ ಬಹಳ ವಿಶಿಷ್ಠವಾಗಿದೆ.
ಪುರಾಣಗಳಲ್ಲಿ ವೈದ್ಯರು ಎಂದು ಭಾವಿಸಲಾಗಿರುವ ಅಶ್ವಿನಿಗಳ ಲಿಪಿರೂಪದಲ್ಲಿರದ ವೈದ್ಯಕೀಯ ರಹಸ್ಯಗಳನ್ನು ತಿಳಿಯಲು ಹೋಗುವ ಭಟ್, ಮಂಗಗಳನ್ನು ಕುರಿತು ಅಧ್ಯಯನ ಮಾಡುವ ರಾಣಾ ಮತ್ತು ಜರವಾ ಜನಾಂಗದೊಡನೇ ಬೆರೆತು ಅವರ ವಿಷಯಗಳನ್ನು ತಿಳಿದುಕೊಳ್ಳುವ ಮೀರಾ ಪುಸ್ತಕದ ಪ್ರಮುಖ ದಾಳಗಳು! ಪ್ರಾಣಿ ಮತ್ತು ಮನುಷ್ಯನ ನಡುವೆ ಇರುವ ಆರೋಗ್ಯ ವ್ಯವಸ್ಥೆಯ ವ್ಯತ್ಯಾಸಗಳ ಕೊಂಡಿಯನ್ನು ಹಿಡಿದು ಏನನ್ನೋ ಹುಡುಕಲು ಹೊರಡುವ ರಾಣಾ, ಭಟ್ ಮತ್ತು ಮೀರಾ ಒಂದು ಕಡೆಯಾದರೇ, ಅದರಿಂದ ಪ್ರಪಂಚದ ವ್ಯವಸ್ಥೆಯನ್ನೇ ಬದಲಿಸುವ ಯೋಜನೆಯನ್ನು ರೂಪಿಸಿಕೊಂಡಿರುವ ಮಾಫಿಯಾ ದೊರೆ ಪ್ರೈಸ್ ವಾರೆನ್ ಎಂಬ ವಿದೇಶಿ ಒಂದು ಕಡೆ. ಪ್ರೈಸ್ ವಾರೆನ್‌ನ ಕುಬುದ್ದಿಯ ಅರಿವು ಇಲ್ಲದ ಭಾರತದ ಅಶೋಕ ವೃಕ್ಷ ಎಂಬ ಎನ್‌ಜಿಓದ ವಿಜ್ಞಾನಿಗಳು ಅವನ ಸಂಘದ ಅನುದಾನ ಪಡೆದು ಅವನ ಟ್ರ್ಯಾಪ್‌ನಲ್ಲಿ ಸಿಲುಕುತ್ತಾರೆ.
ಭಟ್ ಮತ್ತು ಮೀರಾಳಿಗಿಂತ ತುಸು ಹೆಚ್ಚೇ ತೊಂದರೆಗೆ ಸಿಲುಕುವ ರಾಣಾನನ್ನು ಹುಡುಕಲು ಹೊರಡುವ ಅವನ ಹೆಂಡತಿ ಸೀಮಾಗೆ ಆತ ಸಿಗುತ್ತಾನಾ? ಜೀವಂತವಾಗಿ? ಜೊತೆಗೆ ಆ ಮೂರು ವಿಜ್ಞಾನಿಗಳ ಸಂಶೋಧನೆಗೆ ಫಲದಾಯಕವಾಗುತ್ತದಾ? ಆದರೇ, ಅದನ್ನು ಪ್ರೈಸ್ ವಾರೆನ್ ತನ್ನ ವಶಕ್ಕೆ ಪಡೆಯುತ್ತಾನಾ? ಉತ್ತರ ಪುಸ್ತಕದಲ್ಲಿ.
ಜರವಾ ಜನಾಂಗದ ಬಗ್ಗೆ ಇರುವ ಉಲ್ಲೇಖಗಳು ಇನ್ನಷ್ಟು ಓದಿಗೆ ಅನುವು ಮಾಡಿಕೊಡುತ್ತವೆ. ಅಂಡಮಾನ್‌ನ ದ್ವೀಪದ ಕಥೆ, ವಾಲ್ಮೀಕಿ ರಾಮಾಯಣದ ಬಗ್ಗೆ ಇರುವ ಪ್ರಶ್ನೆಗಳೂ ಕೂಡ ಹೊಸ ಚಿಂತನೆಯನ್ನು ಹುಟ್ಟಿಸುತ್ತವೆ. ಒಂದು ಸಿ.ಡಿಯನ್ನು ಎನ್‌ಕ್ರಿಪ್ಟ್ ಮಾಡಿರುವ ರೀತಿ ಇಂದಿನ ಯಾವ ಕಂಪ್ಯೂಟರ್ ಹ್ಯಾಕರ್‌ಗೂ ವಾವ್ ಎನ್ನುವಂತೆ ಮಾಡುತ್ತವೆ. ಅಂದಹಾಗೇ, ಪುಸ್ತಕ ಮುದ್ರಣವಾಗಿದ್ದು ೨೦೦೯ರಲ್ಲಿ. ಇದರಲ್ಲಿ ಕೊರೋನಾವೇ ಎನಿಸುವಂತಹ ಕೊರೊನಿಯಾಸಿಸ್ ಎಂಬ ರೋಗದ ಬಗ್ಗೆ ಬರೆದಿರುವುದು ಅಚ್ಚರಿಯೆನಿಸಿದೆ.
ಪುಸ್ತಕದ ಮುಖಪುಟದ ಮೇಲಿರುವ ಚಿತ್ರಗಳಿಗೂ ವಿಶೇಷ ಅರ್ಥವಿದೆ. ಪುಸ್ತಕ ಓದಿದರೆ ನಿಮಗೆ ಅರಿವಾಗುತ್ತದೆ.
ನನ್ನ ಪ್ರಶ್ನೆಗಳಿಗೆ ಉತ್ತರಿಸಿದ ನನ್ನ ವೈದ್ಯ ಮಿತ್ರರಿಗೂ ಅನಂತಾನಂತ ವಂದನೆಗಳು!
ಸಮಯ ಸಿಕ್ಕರೆ ನೀವೂ ಓದಿ! ಈಗಾಗಲೇ ಓದಿದ್ದಲ್ಲಿ ಎಂದಿನಂತೆ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೂ ಹಂಚಿಕೊಳ್ಳಿ.
My second book of K N Ganeshaiah after ಕನಕ ಮುಸುಕು. Honestly, I have become a big fan of his writing that mixes factual history with fiction. A master in creating and connecting interesting sequences with what has happened in the past.
It starts of with introduction of lot of characters in the first few pages without creating any connections between them, confusing an average reader like me (Ofcourse later realised that connecting those would spoil the thrill). Later, the story moves with connected sequences between characters in different locations running in parallel.
I was impressed with one of the sequences where the military personnel helping Seema made sure to check her genuineness though they were helping her in all ways possible. It caught me off guard while reading, totally unexpected. The writer just showed the seriousness of the Indian Army (Proud).
Impressive twists, lead characters share almost equal times, various environments including forests, temples, hotels provides for a movie experience.
Also, I missed to say in my review of his first book, personally liked the use of references to links, other books etc.
ಪುರಾಣ,ಇತಿಹಾಸದ ತುಣುಕುಗಳು,ಅಮೂಲ್ಯ ವಸ್ತುಗಳಿಗಾಗಿ ಶೋಧ,ವಿದೇಶಿ ಮಾಫಿಯ, ದೇಶೀಯರ ದುರಾಸೆ,ಇವುಗಳನ್ನು ಬೆನ್ನಟ್ಟಿ ಅವರ ತಂತ್ರಗಳನ್ನು ಬುಡಮೇಲು ಮಾಡುವ ತನಿಖಾ ಇಲಾಖೆಯ ಎಂದಿನ ಶೈಲಿಯಲ್ಲಿ ರಚಿತವಾದ ರೋಚಕ ಕಾದಂಬರಿ "ಕಪಿಲಿಪಿಸಾರ"..... ನಮ್ಮ ಪುರಾಣಗಳಲ್ಲಿ ಉಲ್ಲೇಖಿಸಲಾಗಿರುವ ಸಂಜೀವಿನಿ ಸಸ್ಯದ ಕುರಿತಾದ ಸಂಶೋಧನೆ ಮುಖ್ಯ ಭೂಮಿಕೆಯಲ್ಲಿದೆ…..
ಸಸ್ಯಶಾಸ್ತ್ರದ ಬಗೆಗಿನ ಅಸಡ್ಡೆಯಿಂದ ಕಳೆದು ಹೋಗಿರುವ ಅನೇಕ ವೈದ್ಯಕೀಯ ಉಪಯೋಗಗಳು, ಭಾಷಾ ಲಿಪಿಗಳು ಪ್ರವರ್ಧಮಾನಕ್ಕೆ ಬರುವ ಮುನ್ನ ಸಂಜ್ಞೆಗಳ ಮೂಲಕ ನಡೆಯುತ್ತಿದ್ದ ವ್ಯವಹಾರ, ರಾಮಾಯಣ ಯುದ್ಧದ ತರುವಾಯ ಹನುಮಂತ ಮತ್ತು ಆತನ ಸಹಚರರು ಪಯಣಿಸಿದ ಗಂಧಮಾದನ ಗಿರಿಗಳು ಇವತ್ತಿನ ಯಾವ ಪ್ರದೇಶವಾಗಿರಬಹುದು? ಅಂಡಮಾನ್ ದ್ವೀಪದ ಜರವಾ ಆದಿವಾಸಿಗಳು ವಿಷಬಾಣ ಪ್ರಯೋಗಕ್ಕೆ ತುತ್ತಾದವರನ್ನು ಬದುಕಿಸಲು ಬಳಸುವ ಸಸ್ಯಪ್ರಭೇದ ಹಾಗೂ ಆಂಜನೇಯ ಹೊತ್ತು ತಂದ ಸಂಜೀವಿನಿ ಸಸ್ಯಕ್ಕೆ ಏನಾದರೂ ಸಂಬಂಧವಿದೆಯೇ? ನಿಜವಾಗಿ ಸಂಜೀವಿನಿ ಸಸ್ಯ ಎಂಬುದು ಅಸ್ತಿತ್ವದಲ್ಲಿ ಇದ್ದಿರಬಹುದಾ ಅಥವಾ ಅದಕ್ಕೆ ಬೇರೆ ಬೇರೆ ವ್ಯಾಖ್ಯಾನಗಳಿರಬಹುದೇ, ಮಂಗರಸನಿಂದ ರಚಿಸಲ್ಪಟ್ಟ ಖಗೇಂದ್ರ ಮಣಿದರ್ಪಣದ ವೈದ್ಯಕೀಯ ಪ್ರಾಮುಖ್ಯತೆಗಳು ಇಂದಿಗೂ ಲಭ್ಯವಿದೆಯೇ ಮುಂತಾದ ವಿಚಾರಗಳು ಬಹಳ ಆಸಕ್ತಿದಾಯಕವಾಗಿದೆ.
ಒಂದೇ ಒಂದು ಆಕ್ಷೇಪ ಏನೆಂದರೆ ಲೇಖಕರ ಇತರ ಕಾದಂಬರಿಗಳ ತರಹ ರೋಚಕತೆಯಿಂದ ತುಂಬಿದ್ದರೂ ನಿರೂಪಣೆ ಸ್ವಲ್ಪ ಸಡಿಲವಾದಂತೆ ಅನಿಸಿತು….. ಒಂದೇ ಸಿಟ್ಟಿಂಗಲ್ಲಿ ಓದಿ ಮುಗಿಸಬಹುದಾದ ಪುಸ್ತಕ….
ಕಪಿಲಿಪಿಸಾರ ಕಾದಂಬರಿ ಓದಿದೆ. ಮತ್ತೊಂದು ಪೌರಾಣಿಕ + ಸಸ್ಯಶಾಸ್ತ್ರ ಮತ್ತು ಈಗಿನ ವೈದ್ಯಕೀಯದ ಅಂತರರಾಷ್ಟ್ರೀಯ ಜಾಲದ ಬಗ್ಗೆ ಹೆಣೆದ ಆಸಕ್ತಿಕರ ಕಥಾವಸ್ತು. ಸಂಜೀವಿನಿ ಸಸ್ಯ ಈಗಲೂ ಇದ್ದು ಬಿಟ್ಟರೆ ದುರಾಸೆಯುಳ್ಳ ಅಂತರ ರಾಷ್ಟ್ರೀಯ ಮಾಫಿಯಾ ಹೇಗೆಲ್ಲ ವಿಜ್ಞಾನಿಗಳನ್ನು ಸಂಶೋಧನೆಗೆ ಅನುದಾನದ ಹೆಸರಿನಲ್ಲಿ ಅಪಾಯದ ಅಂಚಿಗೆ ತಳ್ಳಬಲ್ಲುದು ಎಂಬುದು ಮುಖ್ಯ ತಿರುಳು.
ಆದರೆ ರಾಮಾಯಣದ ಸತ್ಯಾಸತ್ಯತೆಯ ಬಗ್ಗೆ ಹಲವಾರು ಅನುಮಾನಗಳೂ, ಹನುಮಂತನ ರಾಮಾಯಣ ನಂತರ ಜೀವನದ ಬಗ್ಗೆ ಊಹಾ-ಪೋಹಗಳು, ಸಂಜೀವಿನಿಗೂ, ಆಫ್ರಿಕನ್ ಬುಡಕಟ್ಟಿನ ಮೂಲದ ಜರವಾ ಜನ ಅಂಡಮಾನ್ ನಲ್ಲಿ ಇರುವುದರ ಸಂಬಂಧಗಳು ಬಗ್ಗೆ ಎಲ್ಲಾ ಸೇರಿ ಸ್ವಲ್ಪ ಗೊಂದಲವಾದಂತೆನಿಸಿತು. ಅದು ಕೆಲವು ವರ್ಗದ ಓದುಗರಿಗೆ ಇಷ್ಟವಾಗದಿರಬಹುದು. ಅಂತ್ಯ ಸ್ವಲ್ಪ ಆ್ಯಂಟಿ ಕ್ಲೈಮ್ಯಾಕ್ಸ್ ಆಯಿತೆನಿಸಿತು. ಕೊಂಡ ಕಾಸಿಗೆ ಮೋಸವಿಲ್ಲ, ಒಮ್ಮೆ ಓದಲರ್ಹ ಪುಸ್ತಕ. ಕೇವಲ ಕೆ ಎನ್ ಗಣೇಶಯ್ಯನವರ ಕ್ರಿಯಾಶೀಲತೆಗೆ ಮತ್ತು ಮಾಹಿತಿಭರಿತ ಸಂಶೋಧನೆ ಹೇಗೆ ಈಗಿನ ಕಾಲ್ಪನಿಕ ಸನ್ನಿವೇಶಗಳಿಗೆ ಹೊಂದಿಕೆಯಾಗಿದೆ ಎಂಬ ಕುತೂಹಲಕ್ಕಾಗಿಯೇ ಓದತಕ್ಕ ಕಾದಂಬರಿ
ಇವರ books ಓದೋಕೆ ಶುರು ಮಾಡಿದ್ರೆ ಅದು ಮುಗಿಸೋವರೆಗೂ ಬೇರೆ ಏನು ಮಾಡೋ ಮನಸ್ಸು ಆಗಲ್ಲ.
ಕಪಿಲಿಪಿಸಾರ - book ಓದಿ ಮುಗ್ಸಿದ ನಂತರ ಅನ್ಸತ್ತೆ ಎಷ್ಟು ಸಮಂಜಸ title ಅಂತ.
ಸಸ್ಯ ಶಾಸ್ತ್ರ, ಪ್ರಾಣಿ ಶಾಸ್ತ್ರ, ಪುರಾಣ(ರಾಮಾಯಣ) ಮತ್ತೆ ಪತ್ತೇದಾರಿ ಎಲ್ಲ ಸೇರಿದ್ರೆ ಸಿಗುವ final result ಕಪಿಲಿಪಿಸಾರ!! ಕಥೆ ಆರಂಭದಲ್ಲಿ ಎಲ್ಲ ಎಳೆಗಳು ಅಪೂರ್ಣ ಅನ್ಸತ್ತೆ. ಆದ್ರೆ ಕಥೆ ಮುಗಿತ ಬಂದ ಹಾಗೆ ಅದನ್ನೆಲ್ಲ ಒಟ್ಟಿಗೇ ಸೇರಿಸಿ ಒಳ್ಳೆ ಮುಕ್ತಾಯ ಕೊಟ್ಟಿದ್ದಾರೆ.
ಇವರ ಬೇರೆ ಪುಸ್ತಕಗಳಂತೆ ಇದು ಕೂಡ ಮುಂದೇನು ಅನ್ನೋ ತರ ಓದಿಸ್ಕೊಂಡ್ ಹೋಗತ್ತೆ. ಇವರ ಯಾವುದೇ books ಓದಿದ ನಂತರ ಅವರು ಕೊಟ್ಟಿರೋ ಒಂದಷ್ಟು references ಅನ್ನು Google ಮಾಡಿದ್ರೆ ಮತ್ತಷ್ಟು ಮಾಹಿತಿ ಸಿಗತ್ತೆ. ಇದು ಇವರ books ಓದಿದಕ್ಕೆ bonus points.
*ಕಪಿಲಿಪಿಸಾರ* : ಗಣೇಶಯ್ಯನವರ ರೋಚಕ ಕಾದಂಬರಿ ಕಪಿಲಿಪಿಸಾರ, *ರಾಣ ರವರ ಮಂಗರಾಜ, ಮೀರ ರವರ ಮಾರುತಿ, ಭಟ್ ರವರ ಮಂಗರಸ* ಸಂಶೋಧನೆಯ ಬಗ್ಗೆ ಕಾದಂಬರಿ ಓದಿದರೆ ಉತ್ತಮ.
*ಮಂಗರಾಜ* : ರಾಣರವರು ಹಲವಾರು ರೋಗಗಳಿಗೆ ಔಷಧಿಯನ್ನು ಹುಡುಕಲು ಮಂಗಗಳನ್ನು ಉಪಯೋಗಿಸುತ್ತಿದ್ದರು. *ಉದಾಹರಣೆಗೆ ಮಲೇರಿಯ ರೋಗಕ್ಕೆ ಔಷಧಿ ಕಂಡುಕೂಳ್ಳಲು ಮಲೇರಿಯ ಜೀವಾಣುಗಳನ್ನು ಮಂಗಕ್ಕೆ ಇಂಜೆಕ್ಟ ಮಾಡಿ, ಆ ರೋಗವನ್ನು ನಿವಾರಿಸಿಕೊಳ್ಳಲು ಮಂಗವು ಆ ರೋಗಕ್ಕೆ ತಕ್ಕಂತೆ ಗಿಡ ಮೂಲಿಕೆಯನ್ನು ಹುಡಿಕಿ ತನ್ನ ರೋಗವನ್ನು ನಿವಾರಿಸಿ ಕೊಳ್ಳುತ್ತದೆ* . ಇದೇ ರೀತಿ ಭಾರತದಲ್ಲಿ ಹಲವಾರು ರೋಗಗಳಿಗೆ ಔಷಧವನ್ನು ಕಂಡುಕೂಂಡಿದ್ದಾರೆ. ಆದರೆ ನಮ್ಮವರ ಬೇಜವಾಬ್ದಾರಿತನದಿಂದ ಈ ಮಾಹಿತಿಯನ್ನು ಇತರ ದೇಶದವರು ಕೂಳ್ಳೆ ಹೊಡೆದು ನಮಗಿಂತ ಅಭಿವೃದ್ಧಿ ಹೊಂದಿದ್ದಾರೆ.
*ಮಾರುತಿ* : ಅಂಡಮಾನಿಗೆ ಅಂಡಮಾನ್ ಎಂಬ ಹೆಸರು ಬರುವುದಕ್ಕೆ ಕಾರಣ ಹನುಮಂತನೆಂದು, ಹನುಮಂತನು ಸಂಜೀವಿನಿ ಗಿಡ ಮೂಲಿಕೆಗಾಗಿ ಅಂಡಾಮಾನಿಗೆ ಬಂದಿದ್ದನೆಂದು ಮೀರಾರವರು ಸಂಶೋಧಿಸುತ್ತಾರೆ. ರಾಮಾಯಣದಲ್ಲಿ ಬರುವ ಪ್ರಸಂಗ ಹನುಮಂತನು ಸಂಜೀವಿನಿಯನ್ನು ಅಂಡಮಾನಿನಿಂದ ತಂದು ಲಕ್ಷ್ಮಣನ ಮೂರ್ಚೆಯನ್ನು ನಿವಾರಿಸುತ್ತಾನೆ. *ಸಂಜೀವಿನಿ ಮೂಲಿಕೆಯು ನಿಜವಾಗಿಯು ಲಭ್ಯವಿದೆಯೋ ಇಲ್ಲವೋ, ಮೂರ್ಚೆಯನ್ನು ನಿವಾರಿಸುವ ಗುಣ ನಿಜವಾಗಿಯು ಇದೆಯೋ ಎಂಬುದನ್ನು ಮತ್ತು ಅಂಡಮಾನಿನ ಜರವಾ ಜನಾಂಗದ ಬಗ್ಗೆ* ಕಾದಂಬರಿ ಓದಿದರೆ ಉತ್ತಮ.
*ಹಿಂದಿನ ಕಾಲದಲ್ಲಿ ಸುಮಾರು ಕ್ರಿ.ಪೂ. ೨೫೦ ರ ಹಿಂದೆ ಭಾರತದಲ್ಲಿ ಅಕ್ಷರಗಳ ಲಿಪಿ ಲಭ್ಯವಿರಲಿಲ್ಲ, ಆ ಕಾಲದಲ್ಲಿ ಎಲ್ಲ ಮುಖ್ಯ ಮಾಹಿತಿಗಳನ್ನು ಎಲ್ಲರೂ ಕಂಠಪಾಟ ಮಾಡುತ್ತಿದ್ದರು ಕಾರಣ ಮುಖ್ಯ ಮಾಹಿತಿಗಳನ್ನು ಗುಟ್ಟಾಗಿಡಲು. ಅದಕ್ಕೂ ಮುನ್ನ ಇಲ್ಲಿದ್ದದ್ದು ಚಿನ್ಹೆಗಳಾಧರಿತ ಹರಪ್ಪ ಲಿಪಿ. ಅಂದರೆ ಭಾರತದಲ್ಲಿ ಅಕ್ಷರಗಳ ಲಿಪಿ ಪ್ರಾರಂಭವಾದದ್ದೆ ರಾಮಾಯಣ ನಡೆದ ಎಷ್ಟೋ ಸಾವಿರವರ್ಷಗಳ ನಂತರ. ಸಂಸ್ಕೃತಕ್ಕೆ ತನ್ನದೇ ಆದ ಲಿಪಿಯಿಲ್ಲ.ಹಾಗಾಗಿ ಮೂಲ ಸಂಸ್ಕೃತ ರಾಮಾಯಣವನ್ನು ಪಾಲಿ ಅಥವಾ ದೇವನಾಗರಿ ಅಥವಾ ಬ್ರಾಹ್ಮಿ ಲಿಪಿಯನ್ನು ಉಪಯೋಗಿಸಿ ಬರೆಯಲು ಪ್ರಾರಂಭಿಸಿದ ಮೇಲೆ ವಾಲ್ಮೀಕಿ ರಾಮಾಯಣವು ಲಿಪಿಯರೂಪ ತಾಳಿರಬೇಕು ಎಂಬುದನ್ನು ಕಾದಂಬರಿ ಮೂಲಕ ತಿಳಿಯಬಹುದು*.
ಗಣೇಶಯ್ಯನವರಿಗೆ ಈ ಕಾದಂಬರಿ ಬರೆಯುವುದಕ್ಕೆ ಚಿತ್ರದಲ್ಲಿರುವ ಚಿನ್ಹೆಯೇ ಆಧಾರ ಅರ್ಥ : *ಸೂರ್ಯ ವಂಶದ ರಾಜನ ಯೋಧ ಸಾಗರ ದಾಟಿ ದ್ವೀಪ ಸೇರಿದ* . ಮತ್ತೂಂದು ಅರ್ಥ : *ರಾಮ ಭಕ್ತನಾದ ಹನುಮಂತ ಸಾಗರವನ್ನು ದಾಟಿ ಅಂಡಮಾನ್ ಸೇರಿದ* . ------- *ಕಾರ್ತಿಕ್*
ವೃತ್ತಿಯಲ್ಲಿ ಕೃಷಿ ವಿಜ್ಞಾನಿಯಾದ ಲೇಖಕರು ಕನ್ನಡ ಸಾಹಿತ್ಯಕ್ಕೆ ಅನೇಕ ಕಥೆ ಕಾದಂಬರಿಗಳನ್ನೂ ಕೊಡುಗೆಯಾಗಿ ಕೊಟ್ಟು ತಮ್ಮದೇ ಆದೆ ಛಾಪು ಮೂಡಿಸಿ ಹೊಸ ಓದುಗ ವರ್ಗವನ್ನೇ ಸೃಷ್ಟಿಸಿದ್ದಾರೆ. ಜೀವ ವಿಕಾಸ ಇವರ ಸಂಶೋಧನಾಶಕ್ತಿ ವಿಷಯ. ಪುಸ್ತಕದ ಹಿಂಪುಟದಲ್ಲಿ ಪ್ರಕಾಶಕರು ಹೇಳಿರುವಂತೆ **ಕನ್ನಡಕೊಬ್ಬರೇ ಗಣೇಶಯ್ಯ** ಎಂಬುದು ಇವರ ಪುಸ್ತಕಗಳನ್ನ ಓದಿದವರಿಗೆ ನಿಜವೆನಿಸದೆ ಇರಲಾರದು. ಪಾಶ್ಚಾತ್ಯ ದೇಶಗಳು ನಮ್ಮ ದೇಶವದಲ್ಲಿರುವ ಜ್ಞಾನ ಮತ್ತು ಔಷಧೀಯ ಸಂಪತ್ತನ್ನು ಲೂಟಿ ಮಾಡಲೆತ್ನಿಸುವ ಸುತ್ತಲೂ ಒಂದು ರೋಚಕ ಕಥೆಯೊಂದನ್ನು ಎಣೆದಿದ್ದಾರೆ. ಪ್ರಮುಖವಾಗಿ ಮೂರು ರೀತಿಯ ಸಂಶೋಧಕ ಪಾತ್ರಗಳು ಪುಸ್ತಕದಲ್ಲಿವೆ. ಮಂಗನಿಂದ ಮಾನವ ಎಂಬ ಮಾತಿನಂತೆ ಮಂಗಗಳಿಗೂ ಮನುಷ್ಯನ ರೀತಿಯೇ ತಾನು, ತನ್ನದು, ಒಳಿತು-ಕೆಡುಕುಗಳ ಭಾವನೆಗಳಿರುತ್ತವೆಂದೂ, ಮಂಗಗಳಿಗಿರುವ ಔಷದಿ ಸಸ್ಯಗಳ ಜ್ಞಾನದ ಬಗ್ಗೆ ಸಂಶೋಧನೆ ಮಾಡುವ ರಾಣಾ. ಮಂಗಗಳಿಗೆ ನಿರ್ಧಿಷ್ಟ ರೋಗ ಬರುವ ಇಂಜೆಕ್ಷನ್ ಕೊಟ್ಟು ಅವುಗಳನ್ನು ಹಿಂಬಾಲಿಸಿ , ಅವು ಯಾವ ಬಗೆಯ ಸಸ್ಯಔಷದಿಯನ್ನು ಯಾವ ರೀತಿ ತೆಗೆದುಕೊಂಡು ತಮ್ಮ ರೋಗ ವಾಸಿಮಾಡಿಕೊಳ್ಳುತ್ತವೆಂಬುದುದರ ಬಗ್ಗೆ ಸಂಶೋಧನೆ ಮಾಡಿ, ಕಂಡುಕೊಂಡ ಉತ್ತರಗಳನ್ನು ಮಂಗಗಳ ರಕ್ಷಣೆಯಲ್ಲಿಯೇ ಸಂರಕ್ಷಿಸುತ್ತಾನೆ. ಸಂಜೀವಿನಿ ಗಿಡದ ಇರುವಿಕೆ ಬಗ್ಗೆ ತಿಳಿದುಕೊಳ್ಳಲು "ಜರವಾ" ಎಂಬ ಜನಾಂಗದೊಂದಿಗೆ ಸೇರಿಕೊಳ್ಳುವ ಮೀರಾ ಒಂದು ಕಡೆಯಾದರೆ ಅಪಾರ ವೈದ್ಯಕೀಯ ಜ್ಞಾನ ಹಾಗು ಸಸ್ಯ ವೈದ್ಯ ಜ್ಞಾನವನ್ನು ದುಷ್ಟರಿಗೆ ತಿಳಿಯಬಾರದೆಂದು ಕಂಠಪಾಠದ ಮೂಲಕ ಅತಿ ನಂಬುಗಸ್ಥರಿಗೆ ಮಾತ್ರ ಕಲಿಸುತ್ತಾ ಬಂದಿರುವ ಅಶ್ವಿನಿಗಳೆಂಬ ಒಂದು ರಹಸ್ಯ ಗುಂಪಿಗೆ ಸೇರಿ "ಖಗೇಂದ್ರ ಮಣಿ ದರ್ಪಣ"ವೆಂಬ ವೈದ್ಯಕೃತಿಯ ರಹಸ್ಯ ಭೇದಿಸಲು ಬೇಕಾದ ಮಾರ್ಗಗಳನ್ನು ಕಂಡುಹಿಯಲೆತ್ನಿಸುವ ಡಾ.ಭಟ್ ಇನ್ನೊಂದು ಕಡೆ. ಈ ಮೂರು ಸಂಶೋಧನೆಯ ಜೊತೆ ಜೊತೆಗೆ ಮುಖಪುಟದಲ್ಲಿರುವ ಚಿತ್ರಗಳ ಒಳ ಅರ್ಥವನ್ನು ತಿಳಿಯುವ ಹಾಗು ಹನುಮಾನ್ ಎಂಬ ಹೆಸರು ಅಂಡಮಾನ್ ಆಗಿರಬಹುದಾ ? ಹೀಗೆ ಎಷ್ಟೋ ಪ್ರಶೆಗಳನ್ನು ಓದುಗರ ಮನದಲ್ಲಿ ಎಬ್ಬಿಸಿ ಒಂದೇ ಬಾರಿಗೆ ಪುಸ್ತಕ ಓದಿ ಮುಗಿಸುವಂತೆ ಮಾಡುತ್ತಾರೆ ಲೇಖಕರು. ರೋಚಕ/ಥ್ರಿಲ್ಲರ್ ಇಷ್ಟ ಪಡುವರು ಒಮ್ಮೆ ಇವರ ಪುಸ್ತಕ ಓದಿ, ಪಕ್ಕ ಗಣೇಶಯ್ಯರವರ fanಆಗ್ತೀರ.
ಪಕ್ಕಾ ಡಾ|| ಕೆ. ಎನ್. ಗಣೇಶಯ್ಯ ಅವರ ಶೈಲಿಯ ಒಂದು ರೋಚಕ ಕಾದಂಬರಿ. ವಾಸ್ತವದಲ್ಲಿ ಇರುವ ವಿಷಯ, ಪುರಾವೆಗಳನ್ನು ಇಟ್ಟುಕೊಂಡು ಅವುಗಳ ಸುತ್ತ ಕಥೆ ಹೆಣೆಯುವ ಅವರ ಬರವಣಿಗೆ ನನಗೆ ಬಹಳ ಇಷ್ಟವಾಗುತ್ತದೆ. ಅವರ 'ಬೆಳ್ಳಿಕಾಳ ಬೆಳ್ಳ' ಹಾಗು 'ಕರಿಸಿರಿಯಾನ' ಓದಿದ ಮೇಲೆ ಅವರ 'ಕಪಿಲಿಪಿಸಾರ' ಓದಿದೆ. ಆದರೆ ಮೊದಲೆರಡು ಕಾದಂಬರಿಗಳು ಕೊಟ್ಟ ಮನರಂಜನೆ ಹಾಗು kick ಈ ಕಾದಂಬರಿಯಲ್ಲಿ ನನಗೆ ಸಿಗಲಿಲ್ಲ. ಆಸಕ್ತಿಕರ ವಿಷಯವನ್ನು ಇಟ್ಟುಕೊಂಡು ಅದನ್ನು ಕಥೆಯಲ್ಲಿ blend ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ. ಮಂಗಗಳು ಒಂದು ಪ್ರಾಚೀನ ಬುದ್ಧ ಸ್ತುಪವನ್ನು ರಕ್ಷಣೆ ಮಾಡುವುದು, commands ಕೊಟ್ಟಾಗ ದಾಳಿ ಮಾಡುವುದು, Data ಸಂರಕ್ಷಣೆ ಮಾಡುವುದು... ಇಂತಹ ಸನ್ನಿವೇಶಗಳು ವಾಸ್ತವಕ್ಕಿಂತ ಬಹಳ ದೂರ, ಹಾಗಾಗಿ ನನಗೆ ಅಷ್ಟೊಂದು interesting ಅನ್ನಿಸಲಿಲ್ಲ. ಪುರಾಣ ಹಾಗು ಚರಿತ್ರೆಗಳು ಯಾವಾಗಲೂ ಗೆದ್ದವರ ಕಥೆಯನ್ನೇ ಹೇಳುತ್ತದೆ ಎಂಬ ಸತ್ಯ ನನಗೆ ಈ ಪುಸ್ತಕದಲ್ಲಿ ಬಹಳ ಹಿಡಿಸಿತು. ಎಲ್ಲ ಮನುಷ್ಯನಲ್ಲಿ Gray character ಇದ್ದೇ ಇರುತ್ತದೆ ಎನ್ನುವುದಕ್ಕೆ ಇದೊಂದು ಪುರಾವೆ. ಭಾರತದೇಶದ ಪುರಾಣ, ಇತಿಹಾಸ, ಲಿಪಿಗಳು ಬೆಳೆದು ಬಂದ ಹಾದಿ, ಆರ್ಥಿಕ ಚಿಹ್ನೆ, ಚಿತ್ರಗಳ ಭಾಷೆ ಮುಂತಾದ ಬಹಳ ಆಸಕ್ತಿದಾಯಕ conceptಗಳನ್ನು ಗಣೇಶಯ್ಯ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಒಟ್ಟಿನಲ್ಲಿ ಒಂದು ಸಲ ಕೈಗೆ ಎತ್ತಿಕೊಂಡರೆ ಕಡೆಯವರೆಗೂ ಓದಿಸಿಕೊಂಡು ಹೋಗುವ ಒಂದು ಒಳ್ಳೆ ಕಾದಂಬರಿ.
ಪುರಾಣಗಳಲ್ಲಿ ವೈದ್ಯರು ಎನ್ನಲಾಗುತ್ತಿದ್ದ ಅಶ್ವಿನಿಗಳು ಔಷಧ ತಯಾರಿಸುವ ಬಗೆಯನ್ನು ತಮ್ಮದೇ ಲಿಪಿರೂಪದಲ್ಲಿ ವೈದ್ಯಕೀಯ ರಹಸ್ಯಗಳನ್ನು ಗೌಪ್ಯವಾಗಿ ಕಾಪಾಡಿಕೊಳ್ಳುತ್ತಿದ್ದರು, ಏಕೆಂದರೆ ಈ ಔಷಧ ಎನ್ನುವುದು ಎಲ್ಲಾ ಜನ ಸಾಮಾನ್ಯರಿಗೂ ತಲುಪುವಂತಿರಬೇಕು ಮತ್ತು ಇದು ಲಿಖಿತ ರೂಪದಲ್ಲಿ ಸಿಕ್ಕಿದ್ದೇ ಆದರೆ ದುಡ್ಡು ಮಾಡುವ ಉದ್ದೇಶದಿಂದ ಇದು ವ್ಯಾಪಾರವಾಗಿ ಮಾರ್ಪಾಡುಗೊಂಡು ಆರ್ಥಿಕವಾಗಿ ಪ್ರಬಲವಾಗಿರುವವರಿಗೆ ಮಾತ್ರ ದಕ್ಕುವಂತಾಗುತ್ತದೆ ಎಂದು ಎಷ್ಟೋ ವರ್ಷಗಳ ಹಿಂದೆಯೇ ದೂರಾಲೋಚನೆ ಮಾಡಿದ್ದಾರೆ ಮತ್ತು ಪ್ರಸ್ತುತ ಕಾಲಘಟ್ಟದಲ್ಲಿ ವ್ಯಾಪಾರವೇ ಆಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
ಇದರಲ್ಲಿ ಬರುವ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಭಾರತೀಯ ಸಂಸ್ಕೃತಿ -ವಿಜ್ಞಾನ, ಪುರಾಣಗಳಲ್ಲಿ ಬರುವ ಸಂಜೀವಿನಿ..ಹೇಗೆ ಒಂದಕ್ಕೊಂದು ಹೆಣೆದುಕೊಂಡಿವೆ ಎಂಬುದನ್ನು ರೋಚಕವಾಗಿ ಬರೆದಿದ್ದಾರೆ.”
Very thrilling story. But too much information in so less content will make you feel lost at times. Definitely keeps you gripping and you would not want to keep the book down. Such novel in kannada is a rare thing. Would recommend this to a mystery - thriller lover.
ಶೀರ್ಷಿಕೆಯಲ್ಲಿ ಇರುವಂತೆ ಇದೊಂದು ರೋಚಕ ಕಾದಂಬರಿಯೇ ಸರಿ. ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಅದೆಷ್ಟೋ ರೋಗಗಳನ್ನು ಗಿಡಮೂಲಿಕೆಗಳಿಂದ ವಾಸಿಮಾಡುತ್ತಿದ್ದರೋ.. ಅವೆಲ್ಲ ಲಿಪಿಯ ಉಗಮವಾಗಿಲ್ಲದ್ದರಿಂದ ಅಥವಾ ದುಷ್ಟರ ಕೈಗೆ ಸಿಕ್ಕಿ ದುರುಪಯೋಗವಾಗತ್ತದೆ ಎಂದು ಬರಹಗಳಲ್ಲಿ ಬರೆದಿಡದಿಲ್ಲದಿರಬಹುದೋ ಹಾಗೆ ಇನ್ನೂ ಕೆಲವು ಕಾರಣಾಂತರಗಳಿಂದ ರಹಸ್ಯವಾಗಿಯೇ ಉಳಿದಿದೆ.... ವಾಸ್ತವದಲ್ಲಿ ಇಂತಹ ರಹಸ್ಯಗಳನ್ನು ತಿಳಿಯಲು ಭಾರತದಲ್ಲಿ ನಿಗೂಢ ಸಂಶೋಧನೆಗಳು ನಡೆಯುತ್ತಿರುತ್ತವೆ. ಮೂರು ಮಾರ್ಗಗಳಲ್ಲಿ ನೆಡೆಯುವ ಸಂಶೋಧನೆಯೂ,ಮಾನವನ ವಿಕಾಸದ ಪೂರ್ವಜರಾದ ಮಂಗಗಳಿಗೆ ಕಾಯಿಲೆ ತರುವ ರೋಗಾಣುಗಳ ಇಂಜೆಕ್ಷನ್ ಕೊಟ್ಟು ರಾಣ ಅವುಗಳು ರೋಗ ನಿವಾರಣೆಗೆ ಉಪಯೋಗಿಸುವ ಸಸ್ಯಗಳ ವಿವರಗಳನ್ನು ಸಂಗ್ರಹಿಸುತ್ತಿದ್ದ. ಅದೆಷ್ಟೋ ವರ್ಷಗಳಿಂದ ಅಜ್ಞಾತವಾಗಿ ಕಾಡುಗಳಲ್ಲಿ ಯಾರ ಕಣ್ಣಿಗೂ ಕಾಣಿಸಿಕೊಳ್ಳದೇ ಆಯುರ್ವೇದದ ಅಮೂಲ್ಯ ಜ್ಞಾನ ಹೊಂದಿರುವ ಅಶ್ವಿನಿಗಳ ಗುಂಪಿನೊಳಗೆ ವೇಷ ಮರೆಸಿಕೊಂಡು ಡಾ! ಭಟ್ಟ್ ರಹಸ್ಯಾವಾಗಿ ಕಾರ್ಯಚರಣೆ ಮಾಡುತ್ತಿದ್ದ.. ಅಂಡಮಾನ್ ಕಾಡುಗಳಲ್ಲಿ ಜರವಾ ಜನಾಂಗದವರು ದೇಹದಲ್ಲಿ ಸೇರಿರುವ ವಿಷದ ಅಂಶವನ್ನು ನಿಷ್ಕ್ರಿಯಗೊಳಿಸಲು ಬಳಸುವ ರಾಮಾಯಣ ಕಾಲಕ್ಕೆ ಸೇರಿದ ಸಂಜೀವಿನಿ ಗುಂಪಿಗೆ ಸೇರಿದ ಸಸ್ಯದ ಬಗ್ಗೆ ಅಧ್ಯಾಯನ ಮಾಡುತ್ತಿದ್ದ ಮೀರಾ.. ಇವುಗಳ ಹಿಂದೆ ಸಂಶೋಧನೆಗೆ ಧನಸಹಾಯ ಮಾಡುವ ನಿಟ್ಟಿನಲ್ಲಿ ಅತ್ಯಮೂಲ್ಯ ಮಾಹಿತಿಯನ್ನು ಕೊಳ್ಳೆ ಹೊಡೆದು ಲಕ್ಷ ಲಕ್ಷ ಡಾಲರ್ಗಳನ್ನು ಗಳಿಸಲು ಪ್ರಯತ್ನಿಸುವ ಪಾಶ್ಚಿಮಾತ್ಯ ದೇಶಗಳು.. ಈ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಸಾಗುವ ಕಥೆಯು ವಿಶಿಷ್ಟವಾಗಿದೆ..