ವಸುಮತಿ ಉಡುಪರ ಓದಲು ಭಯ ನನಗೆ. ಬ್ರಾಹ್ಮಣ ಅದರಲ್ಲೂ ಮಲೆನಾಡಿನ ಹವ್ಯಕ ಬ್ರಾಹ್ಮಣ ಕುಟುಂಬವ ಕೇಂದ್ರವಾಗಿಟ್ಟುಕೊಂಡು ಅವರು ಬರೆವ ಕತೆಗಳಲ್ಲಿ 'ಇನ್ನೇನೂ ಆಗುತ್ತದಪ್ಪಾ' ಎಂದು ಆತಂಕ ಹುಟ್ಟಿಸುತ್ತಾ ಕತೆ ಬೆಳೆಯುತ್ತದೆ. ಕೊನೆಗೆ ವ್ಯಥೆ ಮಾತ್ರ. ಈ ಪುಸ್ತಕ ತಗೊಂಡು ಓದಲಾಗದೆ ಮೇಲೆ ಎತ್ತಿ ಇಟ್ಟಿದ್ದೆ. ವಸುಧೇಂದ್ರ ಅವರ ಜೊತೆಗಿನ ಭೇಟಿಯಲ್ಲಿ ಅವರು ಮಾಡಿದ ಪ್ರಸ್ತಾಪ ಮತ್ತೆ ಆಸಕ್ತಿ ಬೆಳೆಯುವಂತೆ ಮಾಡಿತು. ಯಾಕೆಂದರೆ ಇಲ್ಲಿನ ಕತೆಗಳು ನನಗೆ ಖಾಸಗಿ. ಸಂಬಂಧದ ಕರಾಳ ಮುಖಗಳ ದರ್ಶನ; ಕೂಡು ಕುಟುಂಬದ ಕಷ್ಟಗಳು,ಕೃಷಿಕರ ನಿಟ್ಟುಸಿರುಗಳು,ಗ್ರಹ ದೋಷ,ಮದುವೆ, ನಂಬಿಕೆಯ ಪ್ರಶ್ನೆ. ಇವೆಲ್ಲವ ಭೂತಗನ್ನಡಿಯಲ್ಲಿ ದೊಡ್ಡದಾಗಿ ಕಂಡು ನೆನಪುಗಳ ಕೆದಕುತ್ತವೆ.
ಓದಿ ನೋಡಿ. ಕುಟುಂಬ ಅದರ ಕಷ್ಟಗಳು ಎಲ್ಲರಿಗೂ ಇರುವಂತಹವೇ ಅಲ್ವಾ!