6 ವರ್ಷದ ಹಿಂದೆ ಬಿಡುಗಡೆಯಾದ ಈ ಸಂಕಲನವನ್ನು ಈಗ ಓದುತ್ತಿರುವದರಿಂದ ಬಹುಷಃ ಇಲ್ಲಿನ ಕಥೆಗಳು ನನಗೆ ಹಳೆಯ ಸರಕು ಎನಿಸಿತೋ ಏನೋ, ಇತ್ತೀಚಿನ ಕಥೆಗಾರರು ಬರೆಯುತ್ತಿರುವುದು ಇಂತದೇ ಕಥೆಗಳು, ಅವೇ ಟ್ರಾಫಿಕ್ ಜಾಮ್, ಅವೇ ಕಾರ್ಪೊರೇಟ್ ಕಲ್ಚರ್, ಅವೇ ಜಂಜಾಟಗಳು.... ಹಾಗಾಗಿ ಮನಸ್ಸಿಗೆ ತಾಗಲಿಲ್ಲದ ಕಥೆಗಳೇ ಬಹುತೇಕ ಇಲ್ಲಿನ ಸಂಕಲನದಲ್ಲಿದೆ... ಹಳ್ಳಿಯ ಪರಿಸರದ ಕಥೆಗಳು ಗಟ್ಟಿಯಾಗಿವೆ, ದೇವನೂರು ಕಥೆಗಳ ಪರಿಸರವನ್ನು ನೆನಪಿಸುವಷ್ಟು ಗಟ್ಟಿ, ಗ್ರಾಂಟು ಮತ್ತು ಚೌರ ನೆನಪಿನಲ್ಲಿ ಉಳಿಯಬಹುದಾದ ಕಥೆಗಳು...
ಹೊಸಬರ ಕಥಾಸಂಕಲನ ಅಂತ ಮಾಫಿ ಮಾಡಬೇಕಿಲ್ಲದ ಕತೆಗಳು. ನಗರದ ಕತೆಗಳು ಏಕತಾನತೆ ಅನಿಸಿದರೂ( ಇತ್ತೀಚೆಗೆ ಓದಿದ ಹೆಚ್ಚಿನ ಕತೆಗಳು) ಗ್ರಾಮ ಕೇಂದ್ರಿತ ಕತೆಗಳ ಭಾಷೆ ಇಷ್ಟವಾಯಿತು. ಭರವಸೆಯ ಕತೆಗಾರರು