What do you think?

ಗಾಳಿಗೆ ಮೆತ್ತಿದ ಬಣ್ಣ
Unknown Binding
About the author
Karki Krishnamurthy
7 books4 followersಕರ್ಕಿ ಕೃಷ್ಣಮೂರ್ತಿ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಯವರು. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. ಕೆಲಸದ ನಿಮಿತ್ತ ಮಸ್ಕತ್ ಹಾಗೂ ದುಬೈನಲ್ಲಿ ಕೆಲ ವರ್ಷ ನೆಲೆಸಿದ್ದು, ಪ್ರಸ್ತುತ ಬೆಂಗಳೂರಿನ ಕೊಲಿಯರ್ರ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿದ್ದಾರೆ. ಓದು, ಸಿನೆಮಾ, ನಾಟಕ, ಪರ್ಯಟನೆ ಇವರ ಆಸಕ್ತಿಯ ಕ್ಷೇತ್ರಗಳು.
'ಮಳೆ ಮಾರುವ ಹುಡುಗ' 'ಗಾಳಿಗೆ ಮೆತ್ತಿದ ಬಣ್ಣ' ಅವರ ಕಥಾಸಂಕಲನಗಳು. 'ಚುಕ್ಕಿ ಬೆಳಕಿನ ಜಾಡು' ಕಾದಂಬರಿ ಪ್ರಕಟಿತ. 'ಸುಗಂಧಿ' ವಿಶೇಷಾಂಕದ ಸಂಪಾದಕರಾಗಿದ್ದರು. ‘ಮಾಸ್ತಿ ಕಥಾ ಪುರಸ್ಕಾರ, ಬೇಂದ್ರೆ ಗ್ರಂಥ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಆರ್.ಎನ್ ಹಬ್ಬು ದತ್ತಿ ಪ್ರಶಸ್ತಿ, ಸ್ವಸ್ತಿ ಪ್ರಕಾಶನದ ಬಹುಮಾನ’ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಹಲವು ಕಥೆಗಳು ಹಿಂದಿಗೆ ಅನುವಾದವಾಗಿವೆ. 'ಕಾಣದ ಗೆರೆಗಳು' ಕಥೆ ಪ್ರಜಾವಾಣಿ 2018ರ ದೀಪಾವಳಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದೆ.

Ratings & Reviews
Friends & Following
Create a free account to discover what your friends think of this book!
Community Reviews
Displaying 1 - 2 of 2 reviews
July 1, 2017
ಕರ್ಕಿ ಕೃಷ್ಣಮೂರ್ತಿಯವರ "ಗಾಳಿಗೆ ಮೆತ್ತಿದ ಬಣ್ಣ" ನಾನು ಓದಿದ ಮೊದಲ ಪುಸ್ತಕ. ಈ ಪುಸ್ತಕದ ಮೊದಲ ಕಥೆಯನ್ನು ಓದುವಾದಲೆ ಕೃಷ್ಣಮೂರ್ತಿಗಳ ಬರಹ ನನಗೆ ಆತ್ಮೀಯವಾಯಿತು. ಒಂದು ಘಟನೆಯನ್ನು ತಿಳಿಸಿ ಇನ್ಯಾವುದೋ ಘಟನೆಗಳನ್ನು ವಿವರಿಸುತ್ತ ಇನ್ನೆಲ್ಲಿಗೊ ಕರೆದುಕೊಂಡು ಹೋಗಿ ಕೊನೆಗೆ ಮೊದಲಿನ ಘಟನೆಗೆ ಜೋಡಿಸುವ ಅವರ ತಂತ್ರ ವೈಶಿಷ್ಟ್ಯವಾದದ್ದು. ಜಗವನ್ನು ಗೃಹಿಸುವ ಪರಿ, ಎಲ್ಲರಿಗೂ ತ್ಯಾಜ್ಯವಾಗ ವಿಷಯಗಳನ್ನು ಕಥಾ ವಿಷವನ್ನಾಗಿ ತೆಗೆದುಕೊಂಡು ಸುಲಭವಾಗಿ ಕಥಾ ಹಂದರವನ್ನು ಹೆಣೆಯುವ ಶೈಲಿ ಓದುಗರನ್ನು ಪುಸ್ತಕದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಇದರಲ್ಲಿ ಬರುವ ಎಲ್ಲ ಕಥೆಗಳ ನಿರೂಪಕರೂ ಲೇಖಕರೆ, ಯಾವ ಪಾತ್ರಕ್ಕೂ ನಿರೂಪಣಾ ಸ್ವಾತಂತ್ರ್ಯ ಕೊಟ್ಟಿಲ್ಲ. ಅವರು ಅಲ್ಲಲ್ಲಿ ಕೊಡುವ ಟಿಪ್ಪಣಿ ತರಹ ನಿರೂಪಣೆ ಪಳಗಿದ ಪ್ರಾದ್ಯಾಪಕ ಮಾಡಿದ ಪಾಠದಂತೆ ಕಥನ ಸಾಗುತ್ತದೆ. ಕೊನೆಗೆ ಕಥನದ ಎಲ್ಲಾ ಎಳೆಗಳನ್ನು ಜೋಡಿಸಿ ಅದನ್ನು ಓದುಗರಕೈಗೆ ಕೊಟ್ಟು ಅದನ್ನು ಅರ್ಥಮಾಡಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟುಬಿಡುತ್ತಾರೆ. ಇದು ಕಥನಕಾರರ ಜಾಣ್ಮೆ. ದಿನನಿತ್ಯ ನಡೆಯುವ ಘಟನೆಗಳನ್ನೇ ಹೊಸ ದನಿಯಲ್ಲಿ ಹೇಳಿದಂತಿರುವ ಕಥೆಗಳು ಓದುಗರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತವೆ. ರಂಧ್ರ, ಇಂಚು, ವದ್ಧಾ, ಉತ್ಸರ್ಗ, ಗಾಳಿಗೆ ಮೆತ್ತಿದ ಬಣ್ಣ ಕಥೆಗಳು ತುಂಬಾ ಇಷ್ಟವಾದವು. ಕೊನೆಯ ಮೂರು ಕಥೆಗಳು ತಂದು ತುರುಕಿದ ಹಾಗೂ ಹೆರಿಕೆಯ ಕಥೆಗಳು ಅನ್ನಿಸವಂತಿವೆ.
ಒಟ್ಟಿನಲ್ಲಿ ಕಥಾ ಸಂಕಲನ ಇಷ್ಟವಾಯಿತು.
ಒಟ್ಟಿನಲ್ಲಿ ಕಥಾ ಸಂಕಲನ ಇಷ್ಟವಾಯಿತು.
March 9, 2017
ಗಾಳಿಗೆ ಮೆತ್ತಿದ ಬಣ್ಣ(ಕಥಾ ಸಂಕಲನ)- ಕರ್ಕಿ ಕೃಷ್ಣಮೂರ್ತಿ
ಛಂದ ಪ್ರಕಾಶನ; ಲೇಖಕರ ಎರಡನೆಯ ಕಥಾಸಂಕಲನ. ಮುಖಪುಟವೂ ಒಳಗಿನ ಕತೆಗಳೂ ಒಂದಕ್ಕೊಂದು ಹೆಣಕೊಂಡಂತಿವೆ.ಅಷ್ಟು ಅರ್ಥವತ್ತಾಗಿದೆ. ನಗರ ಬದುಕಿನಲ್ಲಿ ಸಂಬಂಧಗಳ,ಕೆಲಸದ ಸಮಸ್ಯೆಗಳ ಕುರಿತಾಗಿರುವ 'ರಂಧ್ರ' ದ ಅನಿರೀಕ್ಷಿತ ಅಂತ್ಯ, ಪಕ್ಕದ ಸೈಟಿನ ಕುರಿತಾಗಿ ತಲೆ ಕೆಡಿಸಿಕೊಂಡು ಪಾಡು ಪಡುವ 'ಇಂಚು', ಮೂರು ಪದರಗಳಾಗಿ ಬಿಚ್ಚಿಕೊಳ್ಳುವ 'ಉತ್ಸರ್ಗ', ಹಳೆಯ ಗೆಳೆಯನ ಮರುಭೇಟಿಯ ಅಪರಿಚಿತತೆ ಕೀಳರಿಮೆಯ ಭಾವ ಹೊಮ್ಮಿಸುವ 'ವದ್ಧಾ', ಇಲ್ಲಿರಲಾರದೆ ಅಲ್ಲಿಯೂ ಇರಲಾರದ 'ಗಾಳಿಗೆ ಮೆತ್ತಿದ ಬಣ್ಣ' ,ಬಾಲ್ಯದ ನೆನಪುಗಳ ಹುಡುಕಾಟದ 'ಘಾಟಿಯ ತಿರುವು' ಹೀಗೆ ವೈವಿಧ್ಯಮಯ ಕತೆಗಳು.
ಅನಿರೀಕ್ಷಿತ ಅಂತ್ಯ ಮತ್ತು ಕಳೆದ ಬಾಲ್ಯದ ನೆನಪು ಹೆಚ್ಚಿನ ಕತೆಗಳ ಸಾಮಾನ್ಯ ಅಂಶ. ಎಲ್ಲಾ ಕತೆಗಳೂ ಖುಷಿಯಿಂದ ಓದಿಸಿಕೊಳ್ಳುತ್ತದೆ ಅನ್ನುವುದು ಬರಿಯ ಮೆಚ್ಚುಗೆಯಲ್ಲ.
ಕತೆಯೆಂದರೆ ದಾರಿಯ ನಿಲ್ದಾಣ ಮತ್ತು ಅರೆ ಬೆಳಕಿನ ನೋಟ ಉಳಿದದ್ದು ಕಲ್ಪನೆ ಅನ್ನುವುದು ಇಲ್ಲಿಯ ಕತೆಗಳಲ್ಲಿ ಚೆನ್ನಾಗೇ ಗೊತ್ತಾಗುತ್ತದೆ.