ಮುಕ್ತಿ
ಶಾಂತಿನಾಥ ದೇಸಾಯಿ
ಚಿತ್ತಾಲರು ಬೆನ್ನುಡಿಯಲ್ಲಿ ಹೇಳಿದಂತೆ , “ತನ್ನ ಬದುಕನ್ನು ತಾನೇ ಬದುಕಬೇಕು. ತನ್ನ ಅನುಭವಗಳ ಶಿಲುಬೆಯ ಭಾರವನ್ನು ಬಾಳಿನುದ್ದಕ್ಕೂ ತಾನೇ ಹೊರಬೇತು. ತನ್ನ ರೀತಿ ನಿಯಮಗಳನ್ನು, ಮೌಲ್ಯಗಳನ್ನು ತನ್ನ ಇರುವಿಕೆಯೇ ನಿಶ್ಚಯಿಸಬಲ್ಲದೇ ಹೊರತು, ಪರರಿಂದ ಎರವಲು ತಂದ ಮೌಲ್ಯಗಳು ತನಗೆ ಸಾಲವು ಎಂಬ ಪ್ರಜ್ಞೆಯುಳ್ಳ ವಿಶಿಷ್ಟ ಕಾದಂಬರಿ ಮುಕ್ತಿ, ಗೌರೀಶ ತನಗೆ ಬಂದ ಪ್ರಚಂಡ ಅನುಭವಗಳಿಂದ , ರೂಪ ಆಕಾರವಿಲ್ಲದೆ ಘಾಸಿಗೊಳಿಸುವ ಭೂತಕಾಲದ ಭೂತದಿಂದ ಬಿಡುಗಡೆ ಪಡೆಯಲು ನಡೆಸಿದ ಹೋರಾಟವೆ ಈ ಕೀದಂಬರಿಯ ವಸ್ತು”.
ನೌಕರಿ ಒಳ್ಳೆಯದೋ ? ಕೆಟ್ಟದ್ದೋ ? ನೈರೋಬಿ ಎಂಥ ಊರೋ ಏನೋ ಅಂತೂ ತನ್ನ ನಿರ್ಧಾರದಲ್ಲಿ ಬದಲಾವಣೆಯಿಲ್ಲ. ಎಲ್ಲರನ್ನು ತ್ಯಜಿಸಿ, ಎಲ್ಲವನ್ನೂ ತ್ಯಜಿಸಿ ಪರದೇಶಕ್ಕೆ ಮುಕ್ತಿ ಪಡೆಯಲು ಹೊರಟ ಗೌರೀಶನ ಕಥೆ ಇಲ್ಲಿ ಕಾಣಬಹುದು. ತನ್ನ ಜೀವನದಲ್ಲಿ ಶ್ರೀಕಾಂತ, ಕಾಮಿನಿ,ಡಾಲಿಯರ ಪಾತ್ರಗಳು ಆತನ ಮೇಲೆ ಯಾವ ರೀತಿ ಪರಿಣಾಮ ಬೀರಿತೆನ್ನುವುದು ಇಲ್ಲಿ ಕಾಣಬಹುದು.
ಶಿರ್ಸಿಯಿಂದ ಕಾಲೇಜು ವಿದ್ಯಾಭ್ಯಾಸಕ್ಕೆ ಧಾರವಾಡಕ್ಕೆ ಹೋದ ಗೌರೀಶನಿಗೆ ಮೊದಲು ತನಗೆ ಅನುಕೂಲ ಮಾಡಿಕೊಟ್ಟಿದ್ದೇ ತನ್ನ ಬಾಲ್ಯ ಸ್ನೇಹಿತ ಸತ್ಯೇಂದ್ರ. ಸತ್ಯೇಂದ್ರನ ಮೂಲಕ ಪರಿಚಯವಾದ ಶ್ರೀಕಾಂತ ತನ್ನ ಬಾಳಿನಲ್ಲಿ ಆದರ್ಶ ವ್ಯಕ್ತಿಯಾದ, ಕಾರಣ ಹಲವು: ನೋಡುವುದಕ್ಕೆ ಸುಂದರ, ಒಳ್ಳೆಯ ವ್ಯಕ್ತಿತ್ವ, ಬುದ್ಧಿವಂತ, ಆತನಿಗಿದ್ದ ಲೋಕಾನುಭವ. ಅಂತೂ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಶ್ರೀಕಾಂತನ ಸಲಹೆಗಳಿಗೇ ಮಾರುಹೋಗುತ್ತಿದ್ದ. ಓದುವಾಗ ಕೆಲವೊಮ್ಮೆ ನನಗೆ ಅನಿಸುದ್ದುಂಟು ಪ್ರತಿ ಬಾರಿಯೂ ಶ್ರೀಕಾಂತ ಶ್ರೀಕಾಂತ ಅಂದರೆ ಆತನ ಪ್ರಭಾವವೂ ಗೌರೀಶನ ಜೀವನದಲ್ಲಿ ಎಷ್ಟು ಮಹತ್ವದ್ದು ಎಂದು ಓದುತ್ತಾ ಅರಿವಾಗ ತೊಡಗಿತು. ಕ್ರಮೇಣ ಅವರ ಸ್ನೇಹ ಗಟ್ಟಿಯಾಗತೊಡಗಿತು, ಸದಾ ಪುಸ್ತಕದ ಬಗ್ಗೆ, ಜೀವನದ ಬಗ್ಗೆ, ಇನ್ನಿತರೆ ವಿಷಯಗಳ ಬಗ್ಗೆ ಕಾಲೇಜಿನಲ್ಲಿ, ಶ್ರೀಕಾಂತನ ಮನೆಯಲ್ಲಿ ಅದರ ಕುರಿತೇ ಚರ್ಚೆ. ಹೀಗೆ ಶ್ರೀಕಾಂತನ ಮನೆಯಲ್ಲಿ ಕಾಮಿನಿಯನ್ನು ಕಂಡು ಆಕೆಯ ಸೌಂದರ್ಯಕ್ಕೆ ಮಾರುಹೋಗುತ್ತಾನೆ, ಪ್ರೀತಿ ಹುಟ್ಟುತ್ತದೆ, ಆದರೆ ವ್ಯಕ್ತಪಡಿಸಲು ಧೈರ್ಯ ಸಾಲದು ಕಾರಣ ಶ್ರೀಕಾಂತನ ಸ್ನೇಹವನ್ನು ಎಲ್ಲಿ ಕಳೆದುಕೊಳ್ಳುವನೆಂದು ಭಯ. ಕ್ರಮೇಣ ಗೌರೀಶ ಕಾಮಿನಿ ಹತ್ತಿರವಾಗುತ್ತಾರೆ, ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದಾಗ ಆಕೆ ನಿರಾಕರಿಸುತ್ತಾಳೆ. ತಾಯಿ ತಂಗಿಯರ ಬಗ್ಗೆ ಹೆಚ್ಚು ಯೋಚನೆಯಿಲ್ಲದ ಶ್ರೀಕಾಂತನು ತನ್ನ ಲೋಕದಲ್ಲೇ ವಿಹರಿಸುತ್ತಾ ಹೆಚ್ಚು ಗಮನ ಕೊಡದೆ ಕಾಮಿನಿಯನ್ನು ಸ್ವಾತಂತ್ರವಾಗಿ ಓಡಾಡಲು ಬಿಟ್ಟಿರುತ್ತಾನೆ, ಹೆಣ್ಣಿಗೂ ಸ್ವಾತಂತ್ರ ಮುಖ್ಯ ಎಂಬುದು ಶ್ರೀಕಾಂತನ ತತ್ವ, ಆದರೆ ಆ ಸ್ವಾತಂತ್ರ ಕಾಮಿನಿ ದುರುಪಯೋಗ ಪಡಿಸಿಕೊಳ್ಳುತ್ತಾಳೆ, ಗಂಡಸರ ಜೊತೆ ತಿರುಗುತ್ತಾಳೆಂಬ ಸುದ್ದಿ ಹರಡುತ್ತಾ ಶ್ರೀಕಾಂತನ ಹಾಗು ಗೌರೀಶನ ಕಿವಿಗೂ ಮುಟ್ಟುತ್ತದೆ, ಶ್ರೀಕಾಂತ ಅವಳ ವರ್ತನೆಯನ್ನು ಕಂಡು ಆಕೆಯನ್ನು ತ್ಯಜಿಸಿಯೇ ಬಿಟ್ಟಿರುತ್ತಾನೆ. ಆದರೆ ಗೌರೀಶನಿಗೆ ದುಃಖವಾಗುತ್ತದೆ. ಆಕೆಯ ಮೇಲೆ ಅನುಮಾನಗಳಿಂದ ಹಲವು ಚುಚ್ಚು ಮಾತುಗಳಿಂದ ಆಕೆಯನ್ನು ನಿಂದಿಸ ತೊಡಗುತ್ತಾನೆ. ಅವಳನ್ನು ತಾನೇ ಮದುವೆಯಾಗಬೇಕು ತನಗೆ ಸೇರಿದ್ದು ಎಂಬ ಭಾವನೆ, ಆದರೆ ತಾನು ನಿಸ್ಸಹಾಯಕ ಕಾಮಿನಿಗೆ ಬುದ್ಧಿವಾದ ಹೇಳಿದರೂ ಆಕೆಯು ತಿದ್ದುಕೊಳ್ಳದೆ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದೆ ತನ್ನನ್ನು ಸ್ನೇಹಿತನಂತೆಯೇ ಕಾಣುತ್ತಾಳೆ. ಅಂತೂ ತಮ್ಮ ಸಂಬಂಧ ಸತ್ಯೇಂದ್ರನ ದೃಷ್ಟಿಯಲ್ಲಿ ಬರಿಯ ಭಾನಗಡಿ ಯಾಗಿತ್ತು.
ಶ್ರೀಕಾಂತನ ಪ್ರಭಾವ ತನ್ನನ್ನು ಸೋಶಿಯಲಿಸ್ಟನನ್ನಾಗಿ ಮಾಡಿತು, ಜನ ಸೇವೆ, ದಲಿತ ಜನತೆಯ ಉದ್ಧಾರ, ಸ್ವಾತಂತ್ರ್ಯ ಮುಂತಾದ ಆದರ್ಶಗಳನ್ನು ಜನರಿಗೆ ಹೇಗೆ ತಲುಪಿಸಬೇಕೆಂಬುದೇ ತಮ್ಮ ಧ್ಯೇಯ. ನಂತರ ಶ್ರೀಕಾಂತ ಸಾಯುವನೆಂದು ತಿಳಿಯಿತು, ಅವನಿಗೆ ಟೀ.ಬೀ ಯಾಗಿತ್ತು, ಮೊದಲಿನ ಹಂತದಲ್ಲೇ ಡಾಕ್ಟರರು ಅದನ್ನು ಗೊತ್ತು ಮಾಡಿ ಚಿಕಿತ್ಸೆ ಕೊಟ್ಟರು, ಕೆಲವು ವರ್ಷಗಳ ಕಾಲ ಚಿಕಿತ್ಸೆಯಿಂದ ಚೇತರಿಸಿಕೊಂಡನು ಆದೇ ಸಮಯದಲ್ಲಿ ತನ್ನ ತಂದೆಯ ಆಜ್ಞೆಯಂತೆ ಶ್ರೀಕಾಂತ ಕಾಮಿನಿಯನ್ನು ಬಿಟ್ಟು ಓದಲು ಮುಂಬಯಿಗೆ ಹೋಗುತ್ತಾನೆ. ಮುಂಬಯಿಗೆ ಹೋದ ಕೆಲವು ದಿನಗಳಲ್ಲೇ ಇತ್ತ ಶ್ರೀಕಾಂತನ ಸಾವಾಗುತ್ತದೆ,ಆತನ ಮೃತ್ಯು ವಿಚಾರ ಬಂದಾಗ ತನ್ನ ಶಕ್ತಿಯೇ ಉಡುಗಿಹೋಗುತ್ತದೆ. ಏನೋ ವೇದನೆ, ದುಃಖ, ತನ್ನ ಆತ್ಮೀಯನನ್ನು ಕಳೆದುಕೊಂಡು ತಾನು ಬದುಕಿದ್ದು ಪ್ರಯೋಜನವೇನು ತಾನು ಏಲ್ಲಿಯಾದರೂ ಓಡಿ ಹೋಗಬೇಕೆಂದು ನಿರ್ಧರಿಸಿ ನೈರೋಬಿಗೆ ಹೋಗಲು ಸಿದ್ಧನಾಗುತ್ತಾನೆ. ಗಂಡಸರ ಸಂಪರ್ಕವಿದ್ದ ಕಾಮಿನಿ ಒಮ್ಮೆಲೆ ಒಂದು ದಿನ ತನ್ನ ಪ್ರೀತಿಯನ್ನು ಒಪ್ಪಿಕೊಂಡಾಗ ಆಕೆಯು ಮಾಡಿದ ತಪ್ಪಗಳನ್ನು ತನ್ನನ್ನು ಮದುವೆಯಾಗಿ ಸರಿಪಡಿಸಿ ಕೊಳ್ಳುಲೆಂದು ಆಕೆ ಹುನ್ನಾರ ಹೂಡುತ್ತಿರುವನೆಂದು ಅನುಮಾನ ಪಟ್ಟು ಆಕೆಯನ್ನು ತ್ಯಜಿಸುತ್ತಾನೆ. ಹೀಗೆ ಶ್ರೀಕಾಂತನ ಸಾವು, ಕಾಮಿನಿಯ ನಿರಾಕರಣೆ, ತಾಯಿ ತಂದೆಯರ ಅಸಮಾಧಾನ ತನ್ನನ್ನು ದುಃಖಕ್ಕೀಡು ಮಾಡುತ್ತದೆ.
ನಂತರ ಕೆಲಸಕ್ಕೆ ಸೇರಿಕೊಳ್ಳುತ್ತಾನೆ, ಡಾಲಿಯ ಪರಿಚಯವಾಗುತ್ತದೆ, ಆಕೆಯ ಸ್ನೇಹದಲ್ಲಿ ಕಾಮಿನಿಯನ್ನು ಮರೆಯಲು ಯತ್ನಿಸುತ್ತಾನೆ. ತನ್ನ ಬಾಳಿನಲ್ಲಿ ಶ್ರೀಕಾಂತ ಕಾಮಿನಿಯರ ಪಾತ್ರದ ಮಹತ್ವವನ್ನು ಡಾಲಿಗೆ ವಿವರಿಸುತ್ತಾನೆ. ಕ್ರಮೇಣ ತನ್ನ ನೈರೋಬಿಗೆ ಹೋಗಲು ನಿರ್ಧಾರ ಗಟ್ಟಿಯಾಗುತ್ತದೆ ಆದರೆ ಒಂಟಿಯಾಗಿ ಅಲ್ಲ. ತನ್ನ ಜೀವನದಲ್ಲಿ ನಡೆದ ಕಹಿ ಪ್ರಸಂಗಗಳನ್ನು ಮರೆತು ಹೊಸ ಜೀವನ ನಡೆಸಲು ನಿರ್ಧರಿಸುತ್ತಾನೆ. ಆದರೆ ತನ್ನ ಜೀವನದಲ್ಲಿ ಯಾರಿಗೆ ಸ್ಥಾನ ಕೊಡಬೇಕೆಂದು ಚಿಂತೆಗೀಡಾಗುತ್ತಾನೆ. ತನ್ನ ತಪ್ಪು ಒಪ್ಪಿಕೊಂಡು ಕ್ಷಮೆ ಕೋರಿದ ಕಾಮಿನಿಗಾ ಅಥವಾ ತನ್ನ ಒಂಟಿ ಬಾಳಿನಲ್ಲಿ ಬಂದು ತನ್ನನ್ನು ಸದಾ ಪ್ರೋತ್ಸಾಹಿಸಿದ ಡಾಲಿಗಾ?.
“ಬದುಕಿನಿಂದ ಪಾಲಾಯನ ಹೇಳಬೇಕು ಎಂಬ ನಿಶ್ಚಯದಿಂದ ಆರಂಭವಾದ ಕತೆ, ಅದೇ ತಾನೇ ಜೀವ ತಳೆಯತ್ತಿರುವ ಆರೋಗ್ಯವಂತ ಸದೃಢ ಹೊಸ ಸಂಬಂಧದ ಸೂಚನೆಯೊಂದಿಗೆ ಮುಗಿಯುತ್ತದೆ.”
*ಕಾರ್ತಿಕೇಯ*