Jump to ratings and reviews
Rate this book

Baadada Hoo

Rate this book
Baadada Hoo [Paperback] [Jan 01, 2013] Saisute

Paperback

62 people are currently reading
948 people want to read

About the author

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ಅವರು ಸ್ವಂತಹ ಶ್ರದ್ಧೆಯಿಂದ ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆ ಕಲಿತರು. ಶಿವರಾಮ ಕಾರಂತ, ಎಸ್.ಎಲ್.ಭೈರಪ್ಪ, ಅ.ನ.ಕೃಷ್ಣರಾಯರು ಮತ್ತು ತ.ರಾ.ಸುಬ್ಬರಾವ್‌ ಅvರ ಕಾದಂಬರಿಗಳ ಓದು ಬರವಣಿಗೆಗೆ ಪ್ರೇರಣೆ ನೀಡಿತು.

ಬಹುತೇಕ ಲೇಖಕರ ಹಾಗೆ ಕಾವ್ಯಕಟ್ಟುವ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದರು. ಆ ಮೇಲೆ ಕಾದಂಬರಿಗಳತ್ತ ತಿರುಗಿದರು. 'ಮಿಂಚು' (1960) ಮೊದಲ ಕಾದಂಬರಿ. ಆಕರ್ಷಕ ಶೈಲಿಯ ಕಥನಕಟ್ಟುವಿಕೆ, ಸರಳ ನಿರೂಪಣೆ, ಆರ್ದ್ರ ಬರವಣಿಗೆ ಮತ್ತು ಸಮರ್ಪಕ ಪಾತ್ರ ಪೋಷಣೆಯಿಂದ ಜನಜನಿತರಾದರು. ಸತತ ನಾಲ್ಕು ದಶಕಗಳ ಕಾಲ ನಿರಂತರ ಸಾಹಿತ್ಯ ಕೃಷಿ ಮಾಡಿರುವ ಸಾಯಿಸುತೆ ಅವರು 140 ಕಾದಂಬರಿ ಪ್ರಕಟಿಸಿದ್ದಾರೆ.
ಸಪ್ತಪದಿ, ಬಾಡದ ಹೂವು, ಕಲ್ಯಾಣರೇಖೆ, ಇಬ್ಬನಿ ಕರಗಿತು, ಗಂಧರ್ವಗಿರಿ, ಶ್ವೇತಗುಲಾಬಿ, ಚಿರಬಾಂಧವ್ಯ, ಮಿಡಿದ ಶೃತಿ ಮುಂತಾದ ಹತ್ತಾರು ಕಾದಂಬರಿಗಳು ಚಲನಚಿತ್ರಗಳಾಗಿ ಜನಪ್ರಿಯವಾಗಿವೆ.
'ಪಾಪಚ್ಚಿ' ಮುಂತಾದ ಪತ್ರಿಕೆಗಳಿಗೆ ಶಿಶುಸಾಹಿತ್ಯ ಹಾಗೂ ಬಾನುಲಿ ಕೇಂದ್ರಕ್ಕಾಗಿ ಹಲವಾರು ನಾಟಕ ರಚಿಸಿದ್ದಾರೆ. ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಸಾಹಿತ್ಯ ಸಂಪನ್ನೆ ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ, ಮಹಿಳಾ ಸಮ್ಮೇಳನಗಳ ಅಧ್ಯಕ್ಷತೆಯ ಗೌರವ ದೊರೆತಿವೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
43 (38%)
4 stars
26 (23%)
3 stars
27 (23%)
2 stars
8 (7%)
1 star
9 (7%)
Displaying 1 - 10 of 10 reviews
Profile Image for Prashant Mujagond.
40 reviews9 followers
January 14, 2023
೧೯೭೯ ರಲ್ಲಿ ಪ್ರಕಟವಾಗದ “ಬಾಡದ ಹೂ” ಸಾಯಿಸುತೆ ಅವರ ಮೊದಲ ಕಾದಂಬರಿ. ಸುಮಾರು ೪೦ ವರ್ಷಗಳ ಹಿಂದೆ ಪ್ರಕಟವಾದ ಕಾದಂಬರಿಯನ್ನು ಓದಿ ಮುಗಿಸಿದಾಗ, ಮುಂದಿನ ಪೀಳಿಗೆಯ ಓದುಗರು ಓದಿದಾಗ ಇದನ್ನು ಹೇಗೆ ಅನುಭವಿಸಬಹುದು ಎಂಬ ಪ್ರಶ್ನೆ ಮೂಡಿತು. ಈ ರೀತಿಯ ಕತೆಗಳನ್ನೋ ಅಥವಾ ಚಲನ ಚಿತ್ರಗಳನ್ನು ನೋಡುತ್ತಾ ಬಂದಿದ್ದ ೯೦ ರ ದಶಕದ ನಮಗೆ ಕತೆ ಅಷ್ಟೊಂದು ಅಚ್ಚರಿಯನ್ನು ಮೂಡಿಸುವುದು ಕಡಿಮೆ. ಹೇಮಾ ಮತ್ತು ಪ್ರಸಾದ್ ಅವರ ಪ್ರೀತಿ ಮತ್ತು ಮಿಲನ ಈ ಕಾದಂಬರಿಯ ಕಥಾ ವಸ್ತು. “ವೇದಾಂತ ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ, ಮನುಷ್ಯ ಸುಖದಲ್ಲಿರುವಾಗ ಆದರ್ಶ ವೇದಾಂತ ಬಾಯಲ್ಲಿ ಹೇಳಬಹುದು. ಆದರೆ ಕಷ್ಟಕ್ಕೆ ಸಿಕ್ಕಿಕೊಂಡಾಗ ಅವೆಲ್ಲ ಗಾಳಿಯಲ್ಲಿ ಹಾರಿಹೋಗುತ್ತೆ” ಎಂಬ ತಂದೆಯ ಮಾತು, ದೇವರು ಪೂಜೆ, ಮಡಿ, ಮೈಲಿಗೆ ಅಂತ ವ್ರತ ಪಾಲಿಸುತ್ತ ಮನೆಯಲ್ಲೇ ಸಮಯ ಕಳೆಯುವ ತಾಯಿ, ಇವರಿಬ್ಬರನ್ನು ಹಾಗೂ ಹೀಗೂ ಒಪ್ಪಿಸಿ ಕೆಲಸಕ್ಕೆ ಸೇರುವ ಹೇಮಾ. ಕೆಲಸಕ್ಕೆ ಸೇರಿದ ಫ್ಯಾಕ್ಟರಿಯ ಮಾಲೀಕನಾದ ಆಗರ್ಭ್ ಶ್ರೀಮಂತ ಪ್ರಸಾದ್ ಇವಳನ್ನು ಮೆಚ್ಚುವ ಬಗೆ. ಹೀಗೆ ಕತೆ ತುಂಬಾ ಸಹಜವಾಗಿ ಓದಿಸಿಕೊಂಡು ಹೋಗುತ್ತದೆ.
Profile Image for Prathima Deepak.
156 reviews4 followers
April 7, 2017
A simple story with lot of details added to each and every scene. The story goes fast and tempts us to finish at one go. Not a must read, enjoyed reading this book though.
1 review1 follower
June 23, 2020
Hey yar I wanna read it , as everyone told me it's a good story ... Help me how to read it...
This entire review has been hidden because of spoilers.
Displaying 1 - 10 of 10 reviews