*ನಾವಲ್ಲ* :
ಆರು ಕಥಾಸಂಕಲನಗಳನ್ನು ( *ಮೋಕ್ಷ, ಮೌನಿ, ಕಾತ್ಯಾಯಿನಿ, ಸಂಭವಾನಿ, ಸ್ಮಾರಕ ಹಾಗು ನಾವಲ್ಲ*) ಒಳಗೊಂಡ ಸೇತುರಾಮರವರ ಕಾದಂಬರಿ *ನಾವಲ್ಲ*. ಸ್ತ್ರೀಪರ ಕಾಳಜಿ ಹಾಗೂ ಸ್ತ್ರೀಯರನ್ನು ಕೆಲ ಪುರುಷರು ಎಷ್ಟು ಕ್ರೂರವಾಗಿ ಶೋಷಿಸುತ್ತಾರೆಂಬುದು ಎಲ್ಲಾ ಕಥಾಸಂಕಲನಗಳಲ್ಲಿ ಬೇರೆ ಬೇರೆ ಪಾತ್ರ ಸೃಷ್ಟಿಸಿ ವಿವರಿಸಿದ್ದಾರೆ.
ಮಠದ ಸ್ವಾಮಿಗಳನ್ನು ಉಪಯೋಗಿಸಿಕೊಂಡು ಟ್ರಸ್ಟಿಗಳು ಮಠವನ್ನು ತಮ್ಮ ಸ್ವಂತ ಕೆಲಸಗಳಿಗೆ ಹೇಗೆ ದುರೂಪಯೋಗ ಪಡಿಸಿಕೊಳ್ಳುತ್ತಾರೆಂಬುದು *ಮೋಕ್ಷ* ಕಥಾಸಂಕಲನದಲ್ಲಿ ವಿವರಿಸಿದ್ದಾರೆ. ದುಡ್ಡಿಗೆ ಬೆಲೆ ಕೊಟ್ಟು ಹೆತ್ತ ತಂದೆ ತಾಯಿಯರನ್ನೇ ತಮ್ಮ ಸ್ವಂತ ಕಾರ್ಯಕ್ಕಾಗಿ ದುರೂಪಯೋಗ ಪಡಿಸಿಕೂಳ್ಳುವ ಆತರಹದ ಹೆಂಗಸರೂ ನಮ್ಮ ಸಮಾಜದಲ್ಲಿ ಇದ್ದಾರೆ ಅಂತಹವರ ಬಗ್ಗೆ *ಸ್ಮಾರಕ*ದಲ್ಲಿ ವಿವರಿಸಿದ್ದಾರೆ.
*ಮೌನಿ* ಕಥಾಸಂಕಲನ ಅರ್ಥಪೂರ್ಣವಾಗಿದೆ, ಮಂದಾಕಿನಿಗೆ ಮದುವೆಯಾಗಿ ಎಷ್ಟೋ ವರ್ಷಗಳಾದರೂ ಮಕ್ಕಳಾಗದಿದ್ದಾಗ ತನ್ನವರು ಹಾಗೂ ಸಮಾಜವು ಯಾವ ದೃಷ್ಟಿಕೋನದಿಂದ ನೋಡುತ್ತದೆಂದು ಕಾಣಬಹುದು. ಸಮಾಜವು ಹೆಣ್ಣನ್ನೇ ಏಕೆ ದೂಷಿಸುತ್ತದೆ?ಹೆಣ್ಣಲ್ಲೆ ಲೋಪವಿದೆಯಂದು ತೀರ್ಮಾನಿಸಿ ಬಿಡುತ್ತದೆ?ಗಂಡನಲ್ಲೂ ಲೋಪವಿರ ಬಹುದಲ್ಲವೆ? ಈ ಎಲ್ಲಾ ಪ್ರಶ್ನೆಗಳಿಗೆ ಮಂದಾಕಿನಿಯ ಪಾತ್ರದ ಮೂಲಕ ವಿವರಿಸಿದ್ದಾರೆ. ಮಂದಕಿನಿಯು ಮೌನಿಯಾಗುತ್ತಾಳೊ ಅಥವಾ ಸಮಾಜವನ್ನು ಎದುರಿಸಿ ಬದುಕುತ್ತಾಳೊ?ಓದಿದರೆ ಉತ್ತಮ.
*ಕಾತ್ಯಾಯಿನಿ*: ಗಂಡು ಹೆಣ್ಣು ಒಬ್ಬರಿಗೊಬ್ಬರು ಇಷ್ಟಪಟ್ಟು ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸದಿದ್ದರೆ ವ್ಯರ್ಥ, ಈ ಕಥಾಸಂಕಲನದಲ್ಲಿ ಬರುವ ಪ್ರತಿಯೊಂದು ವಾಕ್ಯವನ್ನು ಅಂಡರ್ಲೈನ್ ಮಾಡಬೇಕು ಅಷ್ಟು ಅರ್ಥಪೂರ್ಣವಾಗಿದೆ. ಕಾತ್ಯಾಯಿನಿ ಮತ್ತು ಸೀತರಾಮ್, ಈ ಇಬ್ಬರೂ ಬಾಲ್ಯದಿಂದಲೇ ಒಳ್ಳೆಯ ಸ್ನೇಹಿತರು. ಬೆಳೆಯುತ್ತಾ ಒಬ್ಬರಿಗೂಬ್ಬರು ಇಷ್ಟವಿದ್ದರೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸದೇ ಬೇರೆ ಬೇರೆ ಮದುವೆಯಾಗುತ್ತಾರೆ. ಮದುವೆಯಾಗಿ ಸೀತಾರಾಂ ಸಂತೋಷವಾಗಿರುತ್ತಾನೆ, ಆದರೆ ಕಾತ್ಯಾಯಿನಿಯ ಜೀವನ ಕ್ರೂರ, ಒಂದು ಕಡೆ ಸೇತುರಾಮರವರು ಹೀಗೆ ಹೇಳಿದ್ದಾರೆ. *ಅದ್ಯಾಕೋ ಗೊತ್ತಿಲ್ಲ, ಒಳ್ಳೆ ಹೆಂಗಸರೆಲ್ಲರೂ ಕೆಟ್ಟ ಗಂಡಸರನ್ನೇ ಮದುವೆಯಾಗುತ್ತಾರೆ ಹಾಗು ಸುಖ ಸವಿವರವಾಗಿ ಬಿಚ್ಚಿಟ್ಟು ಹಂಚಿದಷ್ಟೂ ಶಕ್ತಿ, ದುಃಖ ಹಾಗಲ್ಲ,ಮುಚ್ಚಿಟ್ಟುಕೊಂಡರೇನೆ ಶಕ್ತಿ ಹಾಗು ಈ ಗಂಡಸ್ರೇ ಹೀಗೆ ಶಕ್ತಿ ಇದ್ದಾಗ ಉಪಯೋಗಕ್ಕೆ ಬರೋಲ್ಲ ಎಲ್ರನ್ನು ಉಪಯೋಗಿಸಿಕೋತಾರೆ,ಅವರು ಉಪಯೋಗ ಆಗೋದು ಶಕ್ತಿ ಹೋದ ಮೇಲೇನೆ.*. ಮತ್ತೆ ಭೇಟಿಯಾದಾಗ ಕಾತ್ಯಾಯಿನಿಯ ಸ್ಥಿತಿಯನ್ನು ಕಂಡು ವ್ಯಥೆ ಪಡುತ್ತಾನೆ, ತಾನಾದರೂ ಕಾತ್ಯಾಯಿನಿಯನ್ನು ಮದುವೆಯಾಗಬೇಕಿತ್ತೆಂದು, ಆದರೇ ಅವರಿಬ್ಬರು ಒಳ್ಳೆಯ ಸ್ನೇಹಿತರಾಗಿ ಉಳಿಯುತ್ತಾರೆ. *ನಮ್ಮ ಮನೋಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ತಂದೆ ತಾಯಿ,ಹಂಡತಿ,ತಮ್ಮ,ತಂಗಿ,ಸ್ನೇಹಿತ ಯಾರಾದರೇನು ನಮ್ಮ ಮನೋಭಾವನೆಗಳಿಗೆ ಸ್ಪಂದಿಸುವ ವ್ಯಕ್ತಿ ದೊರಕಿದರೆ ಅದೃಷ್ಟ*
------ *ಕಾರ್ತಿಕ್*