Prabhaker Acharya turned to creative writing after he retired as the Head of the Department of English, K.C. College, Mumbai.
His first novel, was titled 'The Suragi Tree' (Mapin Publishing, Ahmedabad, 2006).
Prof. Acharya also writes in Kannada. His recent book, Kaviteya Odu (Reading Poetry), (Desi Pustaka, Bengaluru, 2013) explores the nature of poetic communication, both in English and Kannada.
He lives at Koteshwar, a small sea - side village in Udupi District, Karnataka State.
ಒಂದು ಪುಸ್ತಕ ಓದುವ ಮೊದಲು ನಮಗೆ ನಿರೀಕ್ಷೆಗಳಿರುತ್ತವೆ. ಹೀಗಿರಬಹುದು ಹಾಗಿರಬಹುದು ಅಂತ. ತುಂಬಾ ಸಲ ನಿರಾಸೆ. ಕೆಲವು ಸಲ ನಿರೀಕ್ಷೆಗೂ ಮೀರಿದ ತೃಪ್ತ ಭಾವ.
ಆದರೆ ಈ ಪುಸ್ತಕ ಹೇಗಿರಬಹುದು ಅಂತ ಊಹಿಸಿದ್ದೆನೋ ಹಾಗೇ ಇತ್ತು.
ಲೇಖಕರ ಸ್ವಂತ ಜೀವನದ ಕಥೆಯೋ ಎಂಬ ಅನುಮಾನ ಹುಟ್ಟಿಸುವ ಹಾಗೆ. ತನ್ನ ಊರು ಬಿಟ್ಟು ಕಾರ್ಯನಿಮಿತ್ತ ಮುಂಬಯಿವಾಸಿಯಾಗುವ ಕಥಾನಾಯಕ ನಿವೃತ್ತನಾಗಿ ತನ್ನೂರಿಗೆ ವಾಪಸ್ ಬರುತ್ತಾನೆ.
ಅವನು ತನ್ನ ಜೀವಮಾನವ ಮೆಲುಕು ಹಾಕುವುದೇ ಕಥಾವಸ್ತು. ಬಾಲ್ಯದ ಒಡನಾಟ, ಶಾಲೆ,ಆಟಪಾಠ, ಶಿಕ್ಷಕರು, ಗೆಳೆಯರು, ಕಲಿಕೆ, ದೇವರು,ಆಚಾರ, ತಂದೆ ತಾಯಿ ,ವೃತ್ತಿ ನಿಮಿತ್ತ ಪಟ್ಟಣವಾಸದ ಅನುಭವ, ಗೆಳತಿಯರು ಹೀಗೆ ಒಂದಿಡೀ ಜೀವನದ ಚಿತ್ರಣ ಅತ್ಯಂತ ಸರಳವಾಗಿ ಬಂದಿದೆ.
ಎಷ್ಟು ಅಂದರೆ ಇದು ಕನ್ನಡದಲ್ಲೇ ಓದ್ತಾ ಇದೇವೋ ಅನ್ನುವಷ್ಟು..