Jump to ratings and reviews
Rate this book

Matagathi #2

ಸರ್ಪ ಸಂಬಂಧ [Sarpa Sambandha]

Rate this book
Is there God? is there any dark power? No one knows for sure. How everyone believes in god and worships him, there are also few who believes in black magic and try to achieve powers. "Sarpa Sambandha" is a second installment in the series "Matagathi".

396 pages, Paperback

First published January 1, 2000

Loading...
Loading...

About the author

Ravi Belagere

123 books446 followers
Ravi Belagere was a writer and journalist based in Bengaluru, Karnataka, India. He was the editor of Kannada language tabloid Hi Bangalore,which he founded along with R. T. Vittalamurthy, Ra. Somanath, Jogi, and I. H. Sangam Dev. He used to run a show called Crime Diary, which used to air on a regional Kannada-language channel ETV Kannada, that focused on crime in Karnataka, and he started Prarthana, a school for children in Bangalore.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
112 (47%)
4 stars
67 (28%)
3 stars
33 (14%)
2 stars
11 (4%)
1 star
11 (4%)
Displaying 1 - 13 of 13 reviews
Profile Image for That dorky lady.
434 reviews87 followers
September 13, 2025
ರವಿ ಬೆಳಗೆರೆಯ ಬರವಣಿಗೆ ಮತ್ತು ಬದುಕುಗಳ ಬಗ್ಗೆ ಪಾಸಿಟಿವ್ ಮತ್ತು ನೆಗೆಟಿವ್ ಎರಡನ್ನೂ ಸ್ವತಃ ರವಿಯಿಂದ  ಅವರ ಶತೃ - ಮಿತ್ರ ಮತ್ತು ಓದುಗರನೇಕರಿಂದ ಕೇಳುತ್ತ, ಓದುತ್ತಲೇ ಬೆಳೆದ ಜನರೇಶನ್ ನನ್ನದು. ಹಾಯ್'ನಲ್ಲಿ ಬಾಟಮ್ ಐಟಮ್, ಖಾಸ್ ಓದಲು ಅಮ್ಮನ ಜೊತೆ ಕಿತ್ತಾಡಿದ ದಿನಗಳು ಎಷ್ಟು ಸತ್ಯವೋ,'ದೇವರಾಣೆ, ನನ್ನ ಕೈಲಿ ಇದನ್ನ ಓದಕ್ಕಾಗಲ್ಲ ಗುರೂ' ಅಂತ ಬೈದುಕೊಳ್ಳುತ್ತಾ "ಹೇಳಿ ಹೋಗು ಕಾರಣ" ಪುಸ್ತಕವನ್ನ ಎತ್ತಿ ಎಸೆದಿದ್ದೂ ಅಷ್ಟೇ ಸತ್ಯ. 

ವಾರಕ್ಕೆ ಕನಿಷ್ಟ ನಾಲಕ್ಕೈದು ಹೊಸ ಪುಸ್ತಕಗಳು ಬಿಡುಗಡೆಯಾಗುತ್ತಾ, ನನ್ನ ಕಪಾಟಿನಲ್ಲಿ ಸೇರಿ ಬಂಧಿಯಾಗುತ್ತಿರೋ ಸಮಯದಲ್ಲೇ ಯಾಕೋ ಓದಿನಿಂದ ವಿರುದ್ಧ ದಿಕ್ಕಿಗೆ ಮನಸ್ಸು ಹೊರಳಲು ಶುರುವಾಗಿತ್ತು. ಜ್ವರದಿಂದ ಜಡ್ಡುಗಟ್ಟಿದ ನಾಲಿಗೆ ಖಾರದ ಕುರುಕಲು ತಿಂಡಿ- ಜಂಕ್ ಫುಡ್ ಬಯಸುವಂತೆ ಸರಳ ಓದಿನಿಂದ ವಿಮುಖವಾದ ಮನಸ್ಸು ಸ್ವಲ್ಪ ವಿಲಕ್ಷಣ ಓದಿಗೆ ತೆರೆದುಕೊಂಡಿತು. 

ಅಂದಕಾಲತ್ತಿಲೈ ಹಾಯ್'ನಲ್ಲಿ ಧಾರಾವಾಹಿಯಂತೆ ಕಂತುಗಳಲ್ಲಿ ಮಾಟಗಾತಿ, ಸರ್ಪಸಂಬಂಧ, ಗಾಡ್ ಫಾದರ್ ಇತ್ಯಾದಿ ಕಾದಂಬರಿಗಳನ್ನು ಓದಲು ಪ್ರಯತ್ನಿಸಿದ್ದಿದೆ. ಆದರೆ ಬೆಳಗೆರೆಯ ಬರವಣಿಗೆಯ inconsistencyಗೆ ರೋಸಿಹೋಗಿ ಇವುಗಳ ಸಹವಾಸವೇ ಬೇಡ, ಪುಸ್ತಕವಾದಮೇಲೆ ಓದುವ ಅಂದುಕೊಂಡಿದ್ದೆನಾದರೂ ಸಾಧ್ಯವಾಗಿರಲಿಲ್ಲ. 

ಯಾವುದೇ ಪುಸ್ತಕವಿರಲಿ, ಅದನ್ನು ಓದಬೇಕು/ಬೇಡಗಳು ಮತ್ತು ಸಾಧಕಬಾಧಕಗಳು ನಮ್ಮನಮ್ಮ ಓದಿನ ಉದ್ದೇಶದ ಮೂಲಕ ನಿರ್ಧಾರವಾಗುತ್ತದೆ.  
ವಿದ್ಯಾರ್ಜನೆ ಮತ್ತು ವಿಷಯ ಸಂಗ್ರಹಕ್ಕೆ ಓದುವ ಓದಿಗೂ ಮನೋರಂಜನೆಗೆ ಓದುವ ಓದಿಗೂ ಅಜಗಜಾಂತರ. ನನ್ನದು ಹೆಚ್ಚಾಗಿ ಮನೋರಂಜನೆಯ ಹಾದಿಯೇ. ಹಾಗಾಗಿ ಸರ್ಪ ಸಂಬಂಧ ಓದಿ ಸಮಯ ವ್ಯರ್ಥವಾಯ್ತು ಅಂತೆಲ್ಲ ಬೇಸರ ಏನಿಲ್ಲ. ಮಹತ್ತರವಾದದ್ದೇನನ್ನೋ ಓದಿದೆ ಅನ್ನೋ ಖುಷಿಯೂ ಕೂಡ ಇಲ್ಲ‌. 

ಇನ್ನು ಸರ್ಪ ಸಂಬಂಧ ಎನ್ನೋ ಪುಸ್ತಕದ ಬಗ್ಗೆ ಏನನ್ನಾದರೂ ಹೇಳಬೇಕು ಎಂದರೆ.... ಏನಿದೆ ಮಣ್ಣು, its a toxic package of high dosage adrenaline, dopamine and cortisol rush. Read at your own risk. 



 
21 reviews
March 13, 2025
ಅತ್ಯಂತ ಕೆಟ್ಟ ರೀತಿಯಳ್ಳಿ ಬರೆದ ಕಾದಂಬರಿ. ನನ್ನ ಜೀವನದ 5 ದಿನಗಳನ್ನು ಈ ಕಸದ ಮೇಲೆ ವ್ಯರ್ಥ ಮಾಡಿದಂತೆ ನಾನು ಭಾವಿಸುತ್ತೇನೆ. ನಿಮ್ಮ ಸಮಯವನ್ನು ವ್ಯರ್ಥ ಮಾಡಲು ನೀವು ಬಯಸಿದರೆ ನೀವು ಓದಬಹುದು.
ವಿಶ್ವನಾಥ್ ಮತ್ತು ಚೈತ್ರಾ ಅವರಂತಹ ಪಾತ್ರಗಳು ಕಥೆಯಲ್ಲಿ ಯಾವುದೇ ಪ್ರಭಾವ ಅಥವಾ ಅರ್ಥವನ್ನು ಹೊಂದಿಲ್ಲ. ಈ ಪಾತ್ರಗಳನ್ನು ಸುಲಭವಾಗಿ ಬಿಟ್ಟುಬಿಡಬಹುದಾಗಿತ್ತು. ಕಾತ್ಯಾಯಿನಿ ಪಾತ್ರವನ್ನು ಅನಗತ್ಯವಾಗಿ ಪರಿಚಯಿಸಲಾಗುತ್ತದೆ ಮತ್ತು ಸಂಪೂರ್ಣವಾಗಿ ವ್ಯರ್ಥ ಮಾಡಲಾಗುತ್ತದೆ. ಜೋಗತಿಗೆ ತೇಜಮ್ಮನ ಸೇವಕಿಯಾಗಲು ಕಾರಣವೇನು ಮತ್ತು ಹೇಗೆ ಎಂಬ ಬಗ್ಗೆ ಯಾವುದೇ ಹಿನ್ನಲೆಯನ್ನು ಲೇಖಕರು ಕೊಟ್ಟಿಲ್ಲ. ಪುಸ್ತಕದ ಪುಟಗಳನ್ನು ಹೆಚ್ಚಿಸಲು ಅಗ್ನಿನಾಥನು ತೇಜಮ್ಮನನ್ನು ಅನೇಕ ಬಾರಿ ಕೊಲ್ಲದೆ ಜಾರಲು ಬಿಟ್ಟನು. ಕೊನೆಯಲ್ಲಿ ಕಮಲನಾಥ ಸೇರಿದಂತೆ ಅನೇಕ್ ಅಘೋರಿಗಳ್ಳನು ಪರಿಚಯಿಸಲಾಗಿದೆ ಕೊಲ್ಲುವ ಒಂದೇ ಉದ್ದೇಶದಿಂದ ಅವರು ಇದ್ದರು ಬಿಟ್ಟರು ಕಥೆಯಮೇಲೆ ಯಾವುದೇ ಪರಿಣಾಮವಾಗಿರುತ್ತಿಲ್ಲ . ಸಂಕ್ಷಿಪ್ತವಾಗಿ ಹೇಳುವುದಾದರೆ ಸಂಪೂರ್ಣ ಸಮಯ ವ್ಯರ್ಥ
8 reviews1 follower
July 6, 2023
ಮಾಟಗಾತಿಯ ಭಯಂಕರ, ಭೀವತ್ಸ , ರೋಮಾಂಚನ ಕಾರಿ ಪುಸ್ತಕದ ಮುಂದುವರೆದ ಭಾಗವೇ ಸರ್ಪ ಸಂಬಂಧ.
ವಾಮಲೋಕದಲ್ಲಿ ಅಧಿಪತ್ಯ ಸಾಧಿಸಲು ಹೊರಟ ತೇಜಮ್ಮಳನ್ನು ಶಕ್ತಿಹೀನಳನ್ನಾಗಿ ಮಾಡಿ ಅಘೋರಿಗಳ ಸುಪರ್ದಿಗೆ ತಂದು ಬಿಸಾಕಿದ ಅಗ್ನಿನಾಥ ತನ್ನೆಲ್ಲ ಸಾಧನೆಗಳನ್ನು ವಿಸರ್ಜಿಸಿ ನಿಹಾರಿಕಾಳ ಜೊತೆ ದಾಂಪತ್ಯ ಜೀವನ ನಡೆಸುತ್ತಿರುವಾಗ ೧೬ ವರ್ಷಗಳ ನಂತರ ಅದೇ ತೇಜಮ್ಮಳು ಇನ್ನಷ್ಟು ಬಲಶಾಲಿಯಾಗಿ ಇಡೀ ಸರ್ಪ ಸಂಕುಲದ ಜೊತೆ ಅಗ್ನಿನಾಥನನ್ನು ನಾಶಮಾಡಲು ಬರುವ ಕಥೆ ಇದು.
ಇಲ್ಲಿ ತಂತ್ರ ಮಂತ್ರ ವಿಧ್ಯೆಗಳಿವೆ, ಭೂತ ಪ್ರೇತಾತ್ಮಗಳಿವೆ, ಅಘೋರಿಗಳ ಹಠ ಸಾಧನೆಗಳಿವೆ, ಕುಳಿತಲ್ಲೇ ಬೆವರಿಳಿಸುವ ಸನ್ನಿವೇಶಗಳಿಗಂತು ಕೊರತೆ ಇಲ್ಲ. ಆಸಕ್ತಿಯುಳ್ಳವರು ಓದಬಹುದು.
Profile Image for Basavaraju Shivamurthy.
2 reviews
October 30, 2026
This book is a continuation of Matagaati. It explores the cruel world and tactics of the Black magic. Gripping narrative. People with curiosity towards Black magic world can give it a read.
Displaying 1 - 13 of 13 reviews