Jump to ratings and reviews
Rate this book

ದಿ ಗಾಡ್ ಫಾದರ್ [The Godfather]

Rate this book
This book is based on the movie 'GOD-FATHER' series.

347 pages, Paperback

13 people are currently reading
150 people want to read

About the author

Ravi Belagere

105 books413 followers
Ravi Belagere was a writer and journalist based in Bengaluru, Karnataka, India. He was the editor of Kannada language tabloid Hi Bangalore,which he founded along with R. T. Vittalamurthy, Ra. Somanath, Jogi, and I. H. Sangam Dev. He used to run a show called Crime Diary, which used to air on a regional Kannada-language channel ETV Kannada, that focused on crime in Karnataka, and he started Prarthana, a school for children in Bangalore.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
29 (40%)
4 stars
30 (41%)
3 stars
8 (11%)
2 stars
4 (5%)
1 star
1 (1%)
Displaying 1 - 11 of 11 reviews
Profile Image for ಸುಶಾಂತ ಕುರಂದವಾಡ.
424 reviews25 followers
September 23, 2021
ಇದೊಂದು ಪಕ್ಕಾ underworld ಕಥೆ. ಕಥೆ ಓದಿದಾಗ ರವಿ ಬೆಳಗೆರೆ ಎಷ್ಟು ಸಲ ರೌಡಿ ಶೀಟರಗಳ ಜೊತೆ ಮಾತುಕತೆ ನಡಿಸಿರಬಹುದು, ಅವರ ತಲೆಯಲ್ಲಿ ಏನೇನು ಓಡುತ್ತಿರುತ್ತದೆ ಅಂತ ತಿಳಿಯುತ್ತೆ. ಚಲನಚಿತ್ರಗಳಲ್ಲಿ ನೋಡಿದಾಗ ಭೂಗತ ದೊರೆ ಹೇಗಿರುತ್ತಾರೆ ಅಂತ ನಾವು ಬೇರೆಯ ಕಲ್ಪನೆಯನ್ನೇ ಹೊಂದಿರುತ್ತೇವೆ. ಆದರೆ ಹಾಗಿರುವುದಿಲ್ಲ, ಅವರದೇ ಒಂದಿಷ್ಟು rules ಇರುತ್ತವೆ, ನಂಬಿಕೆಗಳಿರುತ್ತವೆ. ಅವರು ಆ ಪಥದಲ್ಲಿ ಸಾಗಿದಾಗ ಅವರು ಮಾಡಿದ ಕೊಲೆಗಳು ತಪ್ಪು ಅಂತ ಅನಿಸಿದರೂ, ಅದರ ಹಿಂದೆ ಒಂದು ಪ್ರಬಲ ಕಾರಣವಿರುತ್ತದೆ. ಇದನ್ನೇ ಹೇಳಲು ಪ್ರಯತ್ನಿಸಿದ್ದಾರೆ ಲೇಖಕರು.
ಅದರ ಜೊತೆಗೆ, ಆ ಕಸುಬಿನಲ್ಲಿ ಭೂಗತ ದೊರೆಗೆ ಉಂಟಾದ ಆಘಾತಗಳು, ಸಾವನ್ನು ಹತ್ತಿರದಿಂದ ಕಂಡರೂ ಅದಕ್ಕೆ ಹೆದರದೆ ಮತ್ತೆ ತನ್ನ ಸಾಮ್ರಾಜ್ಯದಲ್ಲಿ ಕುಳಿತು ಮೆರೆದ ಅಪ್ಪಟ ಭೂಗತ ದೊರೆ. ನಂತರ ಹುಲಿಗೆ ಹುಲೀನೆ ಹುಟ್ಟೋದು ಅನ್ನುವ ಹಾಗೆ ಈ ದೊರೆಯ ಮಗನೂ ಕೂಡ ತನ್ನದೇ ತದ್ರೂಪ ಅಂತ ಎನಿಸಿದಾಗ ಆ ಮಗನಿಗೆ ಪಟ್ಟಾಭಿಷೇಕ ಮಾಡಿ ತಾನು ಕೊನೆಯುಸಿರೆಳೆಯುತ್ತಾನೆ.
ಪುಸ್ತಕವನ್ನು ಒಂದು ಸಲ ಕೈಯಲ್ಲಿ ಹಿಡಿದಾಗ ಕೆಳಗೆ ಇಡಲು ಮನಸ್ಸಾಗುವುದಿಲ್ಲ.
Profile Image for Sanjay Manjunath.
200 reviews10 followers
July 20, 2023
"ದಿ ಗಾಡ್ ಫಾದರ್", ಒಂದು ವಾಕ್ಯದಲ್ಲಿ ಹೇಳುವುದಾದರೆ ಚಿನ್ನಮ್ಮಾದಿ ರೆಡ್ಡಿ ಎಂಬ ದೊಡ್ಡವರು.

ರವಿ ಬೆಳಗೆರೆಯವರ ಪುಸ್ತಕಗಳು ಎಂದಿಗೂ ಆರಾಮಾಗಿ ಓದಿಸಿಕೊಳ್ಳುತ್ತವೆ. ನಾನು ಓದಿದ ಅವರ ಪುಸ್ತಕಗಳಲ್ಲಿ ಈ ಪುಸ್ತಕ ಹೆಚ್ಚು ಹಿಡಿಸಿತು.

ಗಾಡ್ ಫಾದರ್ ಎಂಬ ಇಂಗ್ಲಿಷ್ ಮೂವಿಯನ್ನು ತುಂಬ ಹಿಂದೆ ನೋಡಿದ್ದು ಮಸುಕು ಮಸುಕಾಗಿ ನೆನಪಿತ್ತು. ಈ ಪುಸ್ತಕ ಓದುತ್ತಾ ಹೋದಂತೆ ಆ ಚಲನಚಿತ್ರವು ಮತ್ತೆ ಕಣ್ಮುಂದೆ ಸುಳಿಯುತ್ತಿತ್ತು. ಓದಿ ಮುಗಿಸಿದ ಮೇಲೆ ಅನಿಸಿದ್ದು- ಬೆಂಗಳೂರಿನಲ್ಲೇ ನಡೆದಿರುವಂತೆ ಚಿತ್ರಿಸಿರುವ ಈ ಪುಸ್ತಕವನ್ನು ಯಾರಾದರೂ ಕನ್ನಡದಲ್ಲಿ ಒಂದು ಅದ್ಭುತ ವೆಬ್ ಸೀರಿಸ್ ಮಾಡಬಹುದು ಎಂದು.

ಇಂಗ್ಲಿಷ್ ನ ಗಾಡ್ ಫಾದರ್ ಪುಸ್ತಕವನ್ನು ಕನ್ನಡದ್ದೇ ಎಂಬಂತೆ ಭಾವಾನುವಾದ ಮಾಡಿದ್ದಾರೆ ರವಿ ಬೆಳಗೆರೆ.

ಆಂಧ್ರದ ಯಾವುದೋ ಮೂಲೆಯಿಂದ ವಲಸೆ ಬಂದ ಚಿನ್ನಮಾದಿರೆಡ್ಡಿ ಎಂಬ ಹುಡುಗ, ಇಡೀ ಬೆಂಗಳೂರು ಭೂಗತ ಜಗತ್ತಿನ ಅಧಿನಾಯಕನಾಗಿ ಬೆಳೆದು ದೊಡ್ಡವರು ಎಂಬ ಬಿರುದನ್ನು ಪಡೆದು, ತನ್ನದೇ ದೃಷ್ಟಿಯಿಂದ ತಾನೇ ಕಂಡುಕೊಂಡಿರುವ ನಿಯಮಗಳಿಗನುಸಾರವಾಗಿ ತನ್ನ ಕತ್ತಲ ಸಾಮ್ರಾಜ್ಯವನ್ನು ಆಳುತ್ತಿರುತ್ತಾನೆ. ಅದರಲ್ಲಿ ಅವನು ಗಳಿಸಿದ-ಕಳೆದುಕೊಂಡ ಜೀವಗಳು-ಜೀವನಗಳು ಏನೇನು ಎಂಬುದರ ಬಗ್ಗೆ, ಎಲ್ಲೂ ಹದ ತಪ್ಪದಂತೆ ವಿಶಿಷ್ಟವಾಗಿ ನಿರೂಪಿತವಾಗಿದೆ ಕಥಾಹಂದರ.

ಒಂದು ಕ್ರೈಮ್ ಹೇಗೆ, ಯಾವಾಗ, ಎಲ್ಲಿ, ಯಾರು- ಮಾಡಿದರೂ, ಮಾಡಬಹುದು ಎಂಬ ವಿವರಗಳನ್ನ ಮತ್ತು ಭಾವಾನಾತ್ಮಕ ಸನ್ನಿವೇಶಗಳನ್ನ ಪಾತ್ರಗಳ ಮೂಲಕ ಕಟ್ಟಿಕೊಟ್ಟಿರೋ ರೀತಿ ಅನನ್ಯ. ಅದನ್ನು ಓದಿಯೇ ಸವಿಯಬೇಕು.

ಚಿನ್ನ ಮಾದಿರೆಡ್ಡಿ ಪಾತ್ರದಂತೆ ಜಿಮ್ಮಿ, ಸನ್ನಿ, ಕಾರ್ತಿ, ಕ್ಲೆಮೆಂಟ್, ಪೂಂಜಾ ಮತ್ತು ಇತರ ಪಾತ್ರಗಳು ಕೂಡ ಮನಸ್ಸಿನಲ್ಲುಳಿಯುತ್ತವೆ. ಆದರೆ ದೊಡ್ಡವರನ್ನು ಮಾತ್ರ ಮರೆಯಲು ಸಾಧ್ಯವಿಲ್ಲ.

ಉತ್ತಮ ಪುಸ್ತಕ.
Profile Image for Sangeetha.
62 reviews22 followers
February 1, 2021
Exciting journey to the underworld and fun and sad part of their lives. RB made it amazing way to read the original story in regional language. I am sure I wouldn't have enjoyed the plot if I had read the original by PuzoThe Godfather .
Profile Image for Triplets .
47 reviews6 followers
June 7, 2021
Only 5 star...😣i want to give 10 and 100 starts to this book.....always favourite book...when i was reading i didn't know that this book became one of my best book...basically its all about underworld but their point of view its amazing....i read this book just 2 times till now....😍😘🤗love this book....
Profile Image for Vinod.
33 reviews2 followers
October 7, 2024
The late Ravi Belagere's Godfather remains more of a homage to Mario Puzo’s The Godfather than a direct copy. Readers familiar with Puzo’s work might appreciate the local twist, especially the incorporation of Bengaluru's underworld and Andhra Reddy factionalism. However, some may find the writing average. A key critique is that several characters lack depth. While an underworld figure is typically shaped by intense life experiences, which mold their personas, Belagere’s focus on their physical attributes often overshadows the psychological complexity. Even though Belagere attempts to explore the mental resilience of these strong characters, the effort feels brief and fleeting. At times, the narrative feels reminiscent of a typical gangster masala film rather than a rich, intricate portrayal of the criminal underworld. This may partly be due to a bias formed by exposure to films like Coppola’s Godfather or similar movies. It’s a one-time read, but not something I would consider a shelf-worthy classic.
Profile Image for Sampat Badiger.
28 reviews
January 10, 2023
ಭೂಗತ ಲೋಕದ ಬಗ್ಗೆ ನಾನು ಓದಿದ ಅದ್ಭುತ ಪುಸ್ತಕ. ರವಿ ಬೆಳಗೆರೆ ಅವರ ಕಥಾ ವಸ್ತುವೆ ಅಂತಹದ್ದು. ಇದು ಅನುವಾದ ಕೃತಿಯಾದರು ಸ್ಥಳಿಯ ಪರಿಸರಕ್ಕೆ ಸಂಬಂಧಿಸಿದ ಕೃತಿಯಾಗಿದೆ.
Profile Image for Abhi.
89 reviews20 followers
January 2, 2021
|!• ದಿ ಗಾಡ್‌ಫಾದರ್ •!|

ರೌಡಿಸಂ, ಕ್ರೌರ್ಯ, ಡಾನ್ ವೃತ್ತಿ, ಭೂಗತ ಲೋಕ, ಅವರ ಫ್ಯಾಮಿಲಿ, ಅವರ ಒಪ್ಪಂದಗಳು, ಫೀಲ್ಡಿಂಗ್, ಸ್ಕೆಚ್, ಡಬಲ್ ಕ್ರಾಸಿಂಗ್‌ ಇವೆಲ್ಲವನ್ನು ಫಾಂಟಸೈಸ್ ಮಾಡಿ ಬರೆಯುವುದು ಸುಲಭವಲ್ಲ. ಚೂರು ಹೆಚ್ಚು ಕಡಿಮೆಯಾದರೂ ಓದುಗರಲ್ಲಿ ಒಂದು ರೀತಿಯ ಆಭಾಸ ಉಂಟಾಗಿಬಿಡುತ್ತದೆ. ಆದರೆ, ಈ ಪುಸ್ತಕದಲ್ಲಿ ಭೂಗತ ಲೋಕದ ಅಷ್ಟು ಏರಿಳಿತಗಳ ಹದವಾದ ಮಿಶ್ರಣವಿದೆ. ರವಿ ಬೆಳಗೆರೆರವರ ಅದ್ಭುತ ಬರಹ ಶೈಲಿ, ಗಟ್ಟಿಯಾದ ಕಥೆ, ಕುತೂಹಲಕಾರಿ ವಿಸ್ತರಣೆ ಈ ಪುಸ್ತಕದ ಓಘಕ್ಕೆ ಪುಷ್ಟಿ ನೀಡಿದೆ. ಅಕ್ಷರ ಮಾಂತ್ರಿಕನ ಮೋಡಿ ತುಂಬಿದ ೩೪೭ ಪುಟಗಳ ಕಾದಂಬರಿಯು ಓದುಗನಿಗೆ ಹಿತವಾದ ಕ್ರೌರ್ಯದ ಅನುಭವ ನೀಡುತ್ತದೆ.

ಪುಸ್ತಕದ ಬೆನ್ನುಡಿಯಲ್ಲಿ ಹೀಗೊಂದು ವಾಕ್ಯವಿದೆ - "ಚಿನ್ನ ಮಾದಿರೆಡ್ಡಿಯ ಫ್ಯಾಮಿಲಿಯಲ್ಲಿ ನೀವೂ ಒಬ್ಬರಾಗಿಬಿಡುತ್ತೀರಿ" ಅಂತಾ. ಅದೊಂದು ವಾಕ್ಯ ಸಾಕು ಪುಸ್ತಕದ ಆಳಾಂತರಾಳ ತಿಳಿಯಲು!!!

ಕಾದಂಬರಿಯ ವಸ್ತು ಭೂಗತ ಲೋಕದ ಸೇಡು ಮತ್ತು ಸೆಡವುಗಳು. ಬೆಂಗಳೂರಿನ ದಂಧೆಗಳು ಭೂಗತ ಲೋಕದ ಐದು ಫ್ಯಾಮಿಲಿಗಳ ನಡುವೆ ಹರಿದು ಹಂಚಿ‌ ಹೋಗಿರುತ್ತವೆ. ಅವರೆಲ್ಲರಿಗೂ ಇರುವ ಮುಖ್ಯಸ್ಥ, ಡಾನ್ ಚಿನ್ನ ಮಾದಿರೆಡ್ಡಿ ಅಲಿಯಾಸ್ ದೊಡ್ಡೋರು ಅಲಿಯಾಸ್ ದಿ ಗಾಡ್‌ಫಾದರ್‌. ಅವರ ಮೇಲೆ ಅನಿರೀಕ್ಷಿತವಾಗಿ ಆಗುವ ಅಟ್ಯಾಕ್‌ ಬೆಂಗಳೂರನ್ನು ನಡುಗಿಸುತ್ತದೆ.‌ ಅಲ್ಲಿಂದ ಕಾದಂಬರಿಯು ಹೊಸದಾಗಿ ಆರಂಭವಾಗುತ್ತದೆ. ಪಾತಕ ಲೋಕದಲ್ಲಿರುವ ಪ್ರಾಮಾಣಿಕತೆ,‌ ನಿಷ್ಠೆ-ನಿಷ್ಟೂರತೆಗಳು ಕಾದಂಬರಿ ಸಾಗಿದಂತೆ ಕಾಣಸಿಗುತ್ತವೆ. ನಾವು ನೋಡಿರದ ಲೋಕವೊಂದಕ್ಕೆ ಬೆಳಗೆರೆರವರು ಕರೆದುಕೊಂಡು ಹೋಗುತ್ತಾರೆ ಎಂದರೂ ಅದು ಪ್ರಾಯಶಃ ತಪ್ಪಾಗುವುದಿಲ್ಲ. ಅಟ್ಯಾಕ್ ನಡೆಯಲು ಕಾರಣಗಳನ್ನು ದೊಡ್ಡವರ ಫ್ಯಾಮಿಲಿಯವರು, ಅವರ ಬಲಗೈ ಬಂಟನಂತಿದ್ದ ಜಿಮ್ಮಿಯೊಂದಿಗೆ ಹುಡುಕುತ್ತಾರೆ. ಕಾರಣಗಳು ಸಿಗುತ್ತವೆ ಕೂಡ.

ಪುಸ್ತಕದುದ್ದಕ್ಕೂ ನಡೆಯುವ ಕೋಲ್ಟ್ ಬ್ಲಡೆಡ್ ಮರ್ಡರ್‌ಗಳು ಅವರ ಲೋಕದ ನಿಯಮಾವಳಿಗಳ ಪ್ರಕಾರ ನೈತಿಕವೆನಿಸುತ್ತವೆ. ಕೆಲವನ್ನು ಹೊರತು ಪಡಿಸಿ!!! ಯಾರು ಉಳಿದರು ಯಾರು ಅಳಿದರು‌ ಬೆಂಗಳೂರಿನ ಡಾನ್‌ಗಿರಿ ಯಾರಿಗೊಲಿಯಿತು. ನಂತರ ಏನಾಯಿತು?

ದೊಡ್ಡವರ ಕಡೆಯವರು ಸೇಡಿಗಾಗಿ ಹವಣಿಸುತ್ತಾರೆ.‌ ಹಿರಿಯ ಮಗ ಕೋಪಿಷ್ಟ, ಎರಡನೆಯವನು ಫ್ಯಾಮಿಲಿಗೆ ಸೇರಿಲ್ಲವೇನೋ ಎನಿಸಿದರೆ ಮೂರನೆಯ ಮಗ ಮಿಲಿಟರಿ ಸೇರಿರುತ್ತಾನೆ. ಕ್ಲೆಮೆಂಟ್, ಕಿರೀಟಿ, ನಚ್ಚಿರೆಡ್ಡಿ, ಚಂದ್ರಹಾಸ ನಾಯ್ಡು ಮುಂತಾದ ಪಾತ್ರಗಳು ಕಾದಂಬರಿಯ‌ತಿರುವುಗಳಿಗೆ ಅವಶ್ಯಕವೆನಿಸುತ್ತಾರೆ. ಲೋಕಿ ಎಂಬ ಹೆಸರಿನ ಫೀಲ್ಡರ್‌ ಕುರಿತು ಮೊದಮೊದಲ ಪುಟಗಳಲ್ಲಿ ಓದುವಾಗ ರೌಡಿಸಂನ ಬಗ್ಗೆ ವಿಶೇಷ ಆಕರ್ಷಣೆ ಉಂಟಾಗುತ್ತದೆ. ಅವರ ಚಲನ‌ ವಲನಗಳು, ಮೈಯೆಲ್ಲಾ‌ ಕಣ್ಣಾಗಿರುವ ರೀತಿ ಮತ್ತಿತರ ವಿಷಯಗಳು ಆ ವೃತ್ತಿಯೆಡೆಗೆ ಸೆಳೆತವನ್ನುಂಟು ಮಾಡುತ್ತವೆ. ಲೋಕಿಯ ಪಾತ್ರದ ಇರುವಿಕೆ ತುಸು ಚಿಕ್ಕದಾಯಿತೇನೋ ಎಂಬ ಸಣ್ಣ ಕೊರಗು ಉಳಿದುಹೋಯಿತು.

ಕೊನೆ ಕೊನೆಗೆ ಪಾತಕ ಲೋಕದಲ್ಲಿ ಕೇವಲ ರಕ್ತಪಾತವಿಲ್ಲ. ಇದ್ದರೂ ಪ್ರತಿ ಹನಿ‌ ರಕ್ತಕ್ಕೂ ಅಲ್ಲಿ ಲೆಕ್ಕವಿರುತ್ತದೆ, ಸ್ಟ್ರಾಂಗ್ ಪ್ರೊವೋಕಿಂಗ್ ಇರುತ್ತದೆ ಎಂಬುದು ತಿಳಿಯುತ್ತದೆ.‌ ಕಾದು ಹೊಡೆಯುವ ಬುದ್ಧಿವಂತಿಕೆ ಇರುತ್ತದೆ ಪಾತಕಿಗಳಲ್ಲಿ. ಅಂಥ ಬುದ್ದಿವಂತನೊಬ್ಬ ಗನ್ನು ಹಿಡಿದು ನಿಂತರೇ ಏನೆಲ್ಲಾ ನಡೆಯುತ್ತದೆ ಎಂಬುದು ತಿಳಿಯಲು ಪುಸ್ತಕ ಓದಿ. ಆ ಬುದ್ದಿವಂತ ಪಾತಕಿಯ ಹೆಸರು - "ಕಾರ್ತವೀರ್ಯಾರ್ಜುನ ರೆಡ್ಡಿ"

ಎಂದಿನಂತೆ ಈ ಪುಸ್ತಕವನ್ನು ಈಗಾಗಲೇ ಓದಿದ್ದರೆ ನಿಮ್ಮ ಅಭಿಪ್ರಾಯವನ್ನು ನನ್ನೊಂದಿಗೂ ಹಂಚಿಕೊಳ್ಳಿ!!!

ಅಭಿ...
Displaying 1 - 11 of 11 reviews

Can't find what you're looking for?

Get help and learn more about the design.