Jump to ratings and reviews
Rate this book

ಆತ್ಮ [Aathma]

Rate this book
Aathma [Paperback] [Jan 01, 2016] Ravi Belegere

232 pages, Paperback

Published January 1, 2016

5 people are currently reading
93 people want to read

About the author

Ravi Belagere

104 books403 followers
Ravi Belagere was a writer and journalist based in Bengaluru, Karnataka, India. He was the editor of Kannada language tabloid Hi Bangalore,which he founded along with R. T. Vittalamurthy, Ra. Somanath, Jogi, and I. H. Sangam Dev. He used to run a show called Crime Diary, which used to air on a regional Kannada-language channel ETV Kannada, that focused on crime in Karnataka, and he started Prarthana, a school for children in Bangalore.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
9 (37%)
4 stars
7 (29%)
3 stars
1 (4%)
2 stars
3 (12%)
1 star
4 (16%)
Displaying 1 - 6 of 6 reviews
Profile Image for ನವೀನ್  ಮಣಿಕುಂಡಲಂ.
13 reviews1 follower
May 31, 2024
**** ಆತ್ಮ ****

ಮೊದಲಿಗೆ ಇದು ಯಾವುದೋ ಆತ್ಮಗಳ ಬಗ್ಗೆ ಅಥವಾ ದೆವ್ವಗಳ ಕಥೆ ಎಂದು ತಿಳಿದು ಓದಬೇಡಿ. ಆತ್ಮ ಎಂಬ ಪಾತ್ರದ ಸುತ್ತ ನಡೆಯುವ ಕಥೆಯೇ ವಿನಃ ಬೇರೆ ಯಾವುದೋ ಕುತೂಹಲವಾದ ಅತಿಮಾನುಷ ವಿಷಯಗಳು ಈ ಪುಸ್ತಕದಲ್ಲಿ ಇದೆ ಎಂದುಕೊಂಡು ನನ್ನ ತರಹ ಈ ಪುಸ್ತಕ ತೆಗೆದುಕೊಳ್ಳಬೇಡಿ!!!!

ರವಿ ಬೆಳೆಗೆರೆಯವರ ಬೇರೆ ಪುಸ್ತಕಗಳಂತೆ ಈ ಪುಸ್ತಕ ಅಷ್ಟು ಇಷ್ಟ ಆಗಲಿಲ್ಲ. ಬರಹ sharpಆಗಿ ಇಲ್ಲ, ತುಂಬಾ ಎಳೆದೆಳೆದು ಬರೆದಿದ್ದಾರೆ ಅನ್ನಿಸ್ತು. Underworld ಕಥಾಹಂದರ ಇರುವ ಕಾದಂಬರಿ. ಕೆಲವು ಘಟ್ಟದಲ್ಲಿ ಬರುವ twistಗಳು ಇಷ್ಟ ಆಯ್ತು. ಅದೇ ಜಯರಾಜ್, ಕೊತ್ವಾಲ್, ಬೆಕ್ಕಿನ ಕಣ್ಣು ರಾಜೇಂದ್ರ, ಶ್ರೀರಾಂಪುರ ಕಿಟ್ಟಿ ಮುಂತಾದ real underworld ಪಾತ್ರಗಳು ಅವಾಗವಾಗ ಕಾಣಿಸುತ್ತವೆ. ಪೊಲೀಸ್ ಆಶೋಕ್ ಕುಮಾರ್ ಮತ್ತು ಜರ್ನಲಿಸ್ಟ್ ರವಿ ಪಾತ್ರನು real life inspired ಆಗಿರೋ ಪಾತ್ರಗಳೇ... ಆದ್ರೆ "ಆತ್ಮ"ನ ಪಾತ್ರ ಒಂಥರಾ ಇಷ್ಟ ಆಯಿತು. ಬಹಳ ಚಿಕ್ಕ ವಯಸ್ಸಿಗೆ ಜೀವನ ಅಂದರೆ ಏನು, ಜನ, ಜಗತ್ತು ಹೆಂಗಿದೆ ಎಲ್ಲ ತಿಳ್ಕೊಂಡಿರೋ ಒಬ್ಬ ಹುಡುಗನ ಪಾತ್ರ. ಅವನಿಗೆ ಅತಿಮಾನುಷ ಶಕ್ತಿ ಬೇರೆ ಕೊಟ್ಟಿದಾರೆ ಬೆಳೆಗೆರೆ ಅವರು. ಅದೇ ಪಾತಕ, ಅವೇ ಕೊಲೆಗಳು ಎನ್ಕೌಂಟರ್ಗಳು ಬೇರೆ ಏನು ಹೊಸತಿಲ್ಲ. ಮುಖ್ಯ ಘಟ್ಟದಲ್ಲಿ ಬರುವ ನೀಲಿಮಾ ಪಾತ್ರ ಕೂಡ ನನಗೆ ಬಹಳ ಸಪ್ಪೆಯಾಗಿದೆ.

Rating: [2.75/5]

- ನವೀನ😎
31.05.2024
ಶುಕ್ರವಾರ.
Profile Image for Mukund.
59 reviews3 followers
July 24, 2018
ಅತಿಮಾನುಷ ಶಕ್ತಿಗಳು ಮತ್ತು ಭೂಗತ ಜಗತ್ತು ಇವರೆಡು ಕಥಾವಸ್ತು ಇರೋ ಪುಸ್ತಕವನ್ನು ರವಿ ಬೆಳಗೆರೆ ಅಲ್ಲದೆ ಇನ್ನ್ಯಾರಿಂದ ಬರಿಯೋಕೆ ಸಾಧ್ಯ. ಅವರು ಬರೆದಿರೋ ಈ ಪುಸ್ತಕವು ರೋಮಾಂಚಕಾರಿಯಾಗಿದೆ. ಮುಂಚೆ ಹೇಳಿರೋ ಕಥಾ ವಸ್ತುಗಳಲ್ಲಿ ಯಾರಿಗಾದ್ರೂ ಆಸಕ್ತಿ ಇದ್ದಾರೆ ಇದನ್ನು ತಪ್ಪದೆ ಓದಬಹುದು.

ಪುಸ್ತಕದ ಹೆಸರು ಹಾಗೂ ಅವರು ಕೊಟ್ಟಿರೋ ಸಣ್ಣ ಪರಿಚಯವೇ ಸಾಕಷ್ಟು ಕುತೂಹಲಕಾರಿಯಾಗಿದೆ. ಮುಂದೆ ಓದ್ತಾ ಓದ್ತಾ ಆಸಕ್ತಿ ಹೆಚ್ಚುತ್ತಾ ಹೋಗುತ್ತೆ. ಇಲ್ಲಿ ಕಾಲ್ಪನಿಕ ಹಾಗೂ ನಿಜವಾದ ಪಾತ್ರಗಳು ಕೂಡ ಬರುತ್ತವೆ.
This entire review has been hidden because of spoilers.
Profile Image for Manasa Kulkarni.
23 reviews
April 11, 2025
ಬರೆಯುವ ಕಲೆ ಸಿದ್ಧಿಸಿದೆ ಅಂದ ಮಾತ್ರಕ್ಕೆ ಬರೆದ ಪುಸ್ತಕ ಇದು. ಓದಿಸಿಕೊಂಡು ಹೋಗತ್ತೆ ಆದರೆ ಸದಾ ಸ್ಮೃತಿಯಲ್ಲಿ ಉಳಿಯುವ ಒಂದೇ ಒಂದು ವಾಕ್ಯ ಕೊನೆಯಲ್ಲಿ ಉಳಿಯುವುದಿಲ್ಲ. ಓದದೇ ಇದ್ದರೆ ವಾಸಿ .. ಅಂದ ಹಾಗೆ ಇದು ಆತ್ಮಗಳ ಕಥೆ ಅಲ್ಲ. ಆತ್ಮ ಅನ್ನೋ ಹುಡುಗನ ಅತಿಮಾನುಷ ಶಕ್ತಿ ಕೇವಲ ಭೂಗತ ಪಾತಕಿ ಲೋಕಕ್ಕೆ ಮಾತ್ರ ಸೀಮಿತವಾದ ವಿಚಿತ್ರ ಕಥೆ.
11 reviews
September 13, 2025
strange story, a boy who is always a fortune teller and talks with spirits and he likes a rowdy story between them
Profile Image for Prashanth Bhat.
2,150 reviews138 followers
February 23, 2020
ಆತ್ಮ - ರವಿ ಬೆಳಗೆರೆ

ಮೊದಲಿಗೇ ಒಂದು ಮಾತು ಸ್ಪಷ್ಟಪಡಿಸುತ್ತೇನೆ.ಬೆಳಗೆರೆ ಅವರ 'ಹಾಯ್ ಬೆಂಗಳೂರ್' ಸತತ ಆರು ವರ್ಷ ಓದಿದವ ನಾನು . ಆಮೇಲೆ ಒಂದು ದಿನ ಅವರಾಗೇ 'ಇದು ನಾನಲ್ಲ' ಎಂದು ಒಪ್ಪಿಕೊಂಡ ಬಳಿಕ ಹಣ ಕೊಟ್ಟು ಓದುವ ಆಸಕ್ತಿ ಸತ್ತು ಹೋಯಿತು. ಚಂದ್ರಶೇಖರ ಆಲೂರರ 'ಒಲಿದಂತೆ ಹಾಡುವೆ' ಜಾನಕಿ ( ಜೋಗಿ)ಯವರ 'ಜಾನಕಿ ಕಾಲಂ' ಗಾಗಿ ಓದ್ತಾ ಇದ್ದೆ. ಕಾಲಕ್ರಮೇಣ ಅದೂ ನಿಂತು ಹೋಯಿತು.ರೋಚಕವಾಗಿ ಬರೆವ ಅವರ ಶೈಲಿ ಸಾಕು ಎನಿಸಿತು. ಅದಾಗ್ಯೂ ಅವರ 'ಮಾಟಗಾತಿ' (ಸೂಕ್ಷ್ಮವಾಗಿ ಗಮನಿಸಿದರೆ ಲಂಕೇಶ್ ಮತ್ತು ತೇಜಸ್ವಿನಿ ಶ್ರೀ ರಮೇಶ್ ಅವರ ಬಗ್ಗೆ ಬರೆದರಾ ಅಂತ ಅನುಮಾನ ಇದೆ) ,'ಸರ್ಪ ಸಂಬಂಧ' ರೋಚಕ ಓದು.
ಒಟ್ಟಾರೆ ಕಥೆಗಳು ಎಂಬ ಸೃಜನಶೀಲ ಪುಸ್ತಕದ ಬಳಿಕ ಅವರು ಸ್ವಂತ ಅಂತ ಬರೆದರಾ? ಇಲ್ಲ.
ಅವರ ಕಾದಂಬರಿಯ ಎಳೆಗಳು ಹಾಲಿವುಡ್ಡು ಸಿನಿಮಾಗಳಿಂದ ,ಕಾದಂಬರಿಗಳಿಂದ ತೆಗೆದುಕೊಂಡವು.
ಇನ್ನು 'ಹೇಳಿ ಹೋಗು ಕಾರಣ' 'ನೀ ಹೀಂಗ ನೋಡಬ್ಯಾಡ ನನ್ನ' ಎಲ್ಲ ಭಾವುಕರಿಗೆ ಬಿಟ್ಟರೆ ಇತರ ಓದುಗರಿಗೆ ಸ್ಪಷ್ಟವಾಗೇ ಅವು ಸಂತೆಯ ಹೊತ್ತಿನ ಮೂರು ಮೊಳ ಅಂತ ಗೊತ್ತಾಗುತ್ತದೆ.
ಪ್ರತೀ ಅಧ್ಯಾಯದ ಕೊನೆಯ ತಿರುವು, ಮೆಗಾ ಸೀರಿಯಲ್‌ಗಳ ಶುಕ್ರವಾರ ಸಂಜೆಯ ಎಪಿಸೋಡಿನ ಕೊನೆಯ ಹಾಗೆ,ಸಿನಿಮಾ ಮಧ್ಯಂತರದ ಹಾಗೆ! ಒಂದು ಕಾದಂಬರಿ ಧಾರಾವಾಹಿ ಜನಪ್ರಿಯವಾದರೆ ಈ ಸಮಾರಂಭಗಳಲ್ಲಿ ಸಾರು ರುಚಿಯಾಗಿ ಬೇಗ ಖಾಲಿಯಾಗತೊಡಗಿದರೆ ನೀರು ಸೇರಿಸಿ ಅದನ್ನು 'ಉದ್ದ' ಮಾಡ್ತಾರಲ್ಲ ಹಾಗೆ!

ಇದೆಲ್ಲ ವಿಮರ್ಶೆ ಅಲ್ಲ. ಅವರ ಪತ್ರಿಕೆ, ಪುಸ್ತಕ ಮಾರಾಟವಾಗಲು ಹೂಡಿದ ಮಾರ್ಕೆಟಿಂಗ್ ತಂತ್ರಗಳು ಅಷ್ಟೇ. ಇನ್ನೂ ಹಲವಿವೆ. ಎರಡು ಚಿತ್ರಗಳನ್ನು ಇಟ್ಟುಕೊಂಡು 'ಪೋಟೋಗಳಿವೆ ' ಅಂತ ' ರಾಜ್ ಲೀಲಾ ವಿನೋದ' ಬರೆದದ್ದು. ಇದೇ 'ಆತ್ಮ' ಹದಿನೆಂಟು ಮೀರಿದವರಿಗೆ ಅಂತ ಸುಮ್ಮನೇ ಹಾಕ್ಕೊಂಡಿದ್ದು..ಹೀಗೆ

ಆ ಎಲ್ಲಾ ಹಿನ್ನೆಲೆಯಲ್ಲಿ ಈ ಪುಸ್ತಕವನ್ನು ಗಮನಿಸಿಬೇಕು. ಇದು ' ಸಿಕ್ಸ್ತ್ ಸೆನ್ಸ್' ಅನ್ನುವ ಸಿನಿಮಾವನ್ನೂ ,' ಒಮರ್ಟಾ' ಎಂಬ ಅವರದೇ ಕಾದಂಬರಿಯನ್ನೂ,' ಪಾಪಿಗಳ ಲೋಕದಲ್ಲಿ' ಎಂಬ ಅವರದೇ ಪುಸ್ತಕದ ಪಾತ್ರಗಳನ್ನೂ,ಘಟನೆಗಳನ್ನೂ ಎಲ್ಲ ಹಾಕಿ ಕಲಸಿ ತೆಗೆದ ಪ್ರಾಡಕ್ಟ್.
ಹಾಗಾಗೇ ಓದಿಸಿಕೊಂಡು ಹೋದರೂ ಈ ಅನವಶ್ಯಕ ಅಧ್ಯಾಯಗಳ ತಿರುವುಗಳು ಎಂಬ ರೋಲರದ ಕೋಸ್ಟರ್ ಪಯಣ ನಿಮ್ಮ ನಜ್ಜುಗುಜ್ಜಾಗಿಸುತ್ತದೆ.

ನಿಮಗೊಂದು ಮುಖ್ಯ ವಿಷಯ ಹೇಳುತ್ತೇನೆ. ರವಿ ಬೆಳಗೆರೆ ಅವರ ಅರ್ತಿ, ಗೋಲಿಬಾರ್, ವಿವಾಹ ಬಿಟ್ಟರೆ ಬಾಕಿ‌ ಎಲ್ಲ ಓದಿದ ಕಾರಣ ನನಗೆ ಇದೆಲ್ಲ ಓದಿ ಆಗಿದೆ ಎಂಬ ಭಾವ ಹುಟ್ಟಿಸಿತು. ನಿಮಗೂ ಹಾಗೆ ಆಗಬೇಕು ಅಂತ ಇಲ್ಲ.
ಹಾಗಾಗಿ ಓದಲು ಹೊರಡುವಾಗ ಇದನ್ನೆಲ್ಲ ಗಮನಕ್ಕೆ ತೆಗೆದುಕೊಳ್ಳಿ‌.
Displaying 1 - 6 of 6 reviews

Can't find what you're looking for?

Get help and learn more about the design.