Jump to ratings and reviews
Rate this book

ಏನಾಯ್ತು ಮಗಳೇ

Rate this book
Enaayithu Magale [Paperback] Ravi Belegere

94 pages, Paperback

14 people are currently reading
176 people want to read

About the author

Ravi Belagere

108 books429 followers
Ravi Belagere was a writer and journalist based in Bengaluru, Karnataka, India. He was the editor of Kannada language tabloid Hi Bangalore,which he founded along with R. T. Vittalamurthy, Ra. Somanath, Jogi, and I. H. Sangam Dev. He used to run a show called Crime Diary, which used to air on a regional Kannada-language channel ETV Kannada, that focused on crime in Karnataka, and he started Prarthana, a school for children in Bangalore.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
14 (34%)
4 stars
10 (24%)
3 stars
11 (26%)
2 stars
4 (9%)
1 star
2 (4%)
Displaying 1 - 7 of 7 reviews
Profile Image for Gowthami.
31 reviews9 followers
June 9, 2023
ಪುಸ್ತಕ: ಆರುಷಿ ಮರ್ಡರ್( ಏನಾಯ್ತು ಮಗಳೇ?)
ಲೇಖಕ : ರವಿ ಬೆಳೆಗೆರೆ
ವಿಭಾಗ: ಕೊಲೆ ರಹಸ್ಯ, ಸತ್ಯ ಘಟನೆ


ಗೊತ್ತಿರುವ ಹಾಗೆ ಈ ಪುಸ್ತಕ 15 ವರ್ಷದ ಹಿಂದೆ ನಡೆದ ಅಂದರೆ 16 ಮೇ 2008 ನಡೆದ ಆರುಷಿ ತಲ್ವಾರ್ ( ಡಾ. ರಾಜೇಶ್ ತಲ್ವಾರ್ ಹಾಗೂ ನೂಪುರ್ ತಲ್ವಾರ್ ದಂಪತಿಯ ಪುತ್ರಿ) ಮತ್ತು ಹೇಮರಾಜ್ ನ ಜೋಡಿ ಕೊಲೆಯ ಸುತ್ತ ಇರುವ ತನಿಖಾ ವರದಿ.

ಪೋಲೀಸ್ ಕೈ ಇಂದ ಸಿ.ಬಿ.ಐ ತೆಕ್ಕೆಗೆ ಬಿದ್ದ ಈ ಪ್ರಕರಣದ ತನಿಖೆ ಮತ್ತೆ ಸಿ.ಬಿ.ಐ ನ ಇನ್ನೊಂದು ತಂಡಕ್ಕೆ ರವಾನಿಸಲ್ಪಟ್ಟು, ಕೈ ಇಂದ ಕೈಗೆ , ತಂಡದಿಂದ ತಂಡಕ್ಕೆ , ಇಲಾಖೆ ಇಂದ ಇಲಾಖೆ ಗೆ 5 ವರ್ಷ ತಿರುಗುತ್ತಲೇ ಇರುತ್ತದೆ.

ಸಿ.ಬಿ.ಐ ಅಲ್ಲಿ ಲೋಪ ದೋಷಗಳೆ ಇಲ್ಲ , ಎಲ್ಲಾ hifi ಪ್ರಕರಣಗಳು ಅವರ ತೆಕ್ಕೆಗೆ ಕೊಡಲಿ ನ್ಯಾಯ ಸಿಗುತ್ತದೆ ಎನ್ನುವ ಎಲ್ಲರೂ ಆರುಷಿ ಪ್ರಕರಣದ ಬಗ್ಗೆ ಓದಲೇ ಬೇಕು. ಸಿ.ಬಿ.ಐ ಮೇಲಿರುವ ನಂಬಿಕೆಯ ಹುಸಿ ಮಾಡಲು ಒಂದರ ನಂತರ ಒಂದು ತಂಡ ಜಿದ್ದಿಗೆ ಬಿದ್ದು ಆರೋಪಿಗಳ ಹಿಡಿಯುವುದರಲ್ಲಿ ಎಡವುದು ನೋಡಬಹುದು.

14 ವರ್ಷದ ಕೂಸು ತನ್ನ ಮನುಷ್ಯ ಸಹಜ ಆಸೆಗಳಿಗೆ , ಬೇರೆಯವರ ಕೋಪಕ್ಕೆ ತುತ್ತಾಗಿ ಸಾವಿನ ಕದ ತಟ್ಟಿದ್ದು ಈಗಲೂ ಜೀವ ಹಿಂಡತ್ತೆ . ತಿದ್ದಿ ಬುದ್ಧಿ ಹೇಳುವ ವಯಸ್ಸಲ್ಲಿ ತಮ್ಮ ತೃಷೆ ತೀರಿಸಿಕೊಳ್ಳುವ , ಕೋಪ ತೀರಿಸಿಕೊಳ್ಳುವ ಮನುಷ್ಯರ ( so called ದೊಡ್ಡವರ/ಹಿರಿಯರ) ಮೇಲೆ ಕೋಪ ತರಿಸುತ್ತೆ . ವೈದ್ಯರ ಮೇಲೆ ಅಪನಂಬಿಕೆ ಹುಟ್ಟಿಸುತ್ತೆ. ಕಾನೂನು ಇರುವುದೇ ನ್ಯಾಯದ ಪರವಾಗಿ ಎನ್ನುವ ಕ್ರೈಂ ಡಿಪಾರ್ಟ್ಮೆಂಟ್ ಅವರೇ ಲಾಬಿಯ ಪ್ರಭಾವಕ್ಕೆ ಬಿದ್ದು ಅನ್ಯಾಯದ ಹಾದಿ ಹಿಡಿಯುತ್ತಾರೆ. ಇನ್ನು ಟಿ.ಆರ್.ಪಿ ಗಾಗೆ ಬದುಕುತ್ತಿರುವ, ಸಮಾಜಿಕ ಜವಾಬ್ದಾರಿಯಿಲ್ಲದ ಸುದ್ದಿ ವಾಹಿನಿಗಳು ಕೀಳು ಮಟ್ಟಕ್ಕೆ ಇಳಿಯುವುದು ಹೇಸಿಗೆ ಹುಟ್ಟಿಸುತ್ತೆ .

ಹೀಗೆ ದೊಡ್ಡವರು ಎನಿಸಿಕೊಂಡವರು , 14 ವರ್ಷದ ಕೂಸಿನ ಮೇಲೆ ಕಾಮ , ಕ್ರೋಧ , ಅನ್ಯಾಯ, ಚಾರಿತ್ರ್ಯವಧೆ ಎಲ್ಲವೂ ಮಾಡುವಾಗ , ಪುಟ್ಟ ಹುಡುಗಿ ಮಾಡಿದ ದೇಹ ಸಹಜ , ಮನುಷ್ಯ ಸಹಜ ಮಾಡಿದ ತಪ್ಪುಗಳು ದೊಡ್ಡವಾಗಿ ಹೋದವು .


ಇನ್ನು ರವಿ ಬೆಳೆಗೆರೆ ಸಾರ್ ಆಂತು ಎಲ್ಲವನ್ನೂ ಚೆನ್ನಾಗಿ ವಿವರಿಸಿದ್ದಾರೆ , ಮಾಹಿತಿ ಕಲೆ ಹಾಕುವುದರಲ್ಲಿ ಮತ್ತೊಮ್ಮೆ ಎತ್ತಿದ ಕೈ ಅವರು ಎಂದು ನಿರೂಪಿಸಿ ಬಿಟ್ಟರು.

"ತಪ್ಪನ್ನ ತಿದ್ದುವ ಅವಕಾಶವಿದ್ದರೆ? ತಿದ್ದಿ. ಇನ್ನೊಂದು ತಪ್ಪು ಮಾಡದಿರಿ ".

ಆರುಷಿ ಬದುಕಿದ್ದಿದ್ದರೆ ಇವತ್ತಿಗೆ ನನ್ನದೇ ವಯಸ್ಸು ಅವಳಿಗೆ.
Profile Image for Prashanth Bhat.
2,203 reviews141 followers
December 2, 2017
'ರವಿ ಬೆಳಗೆರೆ'ಯ 'ಏನಾಯ್ತು ಮಗಳೇ?'


ಆರುಷಿ ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದ ಜೋಡಿ ಕೊಲೆ ಪ್ರಕರಣ. ಇದಾದ ಸಮಯದಲ್ಲಿ ನಾನು ಆಗಷ್ಟೇ ಕೆಲಸಕ್ಕೆ ಸೇರಿದ್ದರಿಂದ ಮಾಧ್ಯಮಗಳ ಹುಚ್ಚಾಟ ಸಿಕ್ಕಿರಲಿಲ್ಲ. ಕಳೆದ ವರ್ಷ avirook sent ಬರೆದ aarushi ಓದಿದ್ದೆ. ಬಳಿಕ ಇತ್ತೀಚೆಗೆ ಮತ್ತೆ ತಲ್ವಾರ್ ದಂಪತಿಗಳ ಬಿಡುಗಡೆಯಾದ ಬಳಿಕ ಈ ಪ್ರಕರಣ ಮುನ್ನೆಲೆಗೆ ಬಂದಿತ್ತು. ಆಗ ಓದದೆ ಬಿಟ್ಟಿದ್ದ ರವಿ ಬೆಳಗೆರೆಯ ಈ ಪುಸ್ತಕ ನೆನಪಾಗಿತ್ತು.ಇವತ್ತು ನುಡಿಸಿರಿಯಲ್ಲಿ ಕೊಂಡೆ.ಚಿಕ್ಕ ಪುಸ್ತಕ, ಬೇಗ ಮುಗಿಯಿತು.
ಅವಿರೂಕ್ ಸೇನ್ ನ ಪುಸ್ತಕ ಹೆಚ್ಚು ವಿವರಗಳಿಂದ ಕೂಡಿದ್ದು ಅದು ತಲ್ವಾರ್ ದಂಪತಿಗಳ ನಿರಪರಾಧಿತ್ವ ಪರವಾಗಿದ್ದರೆ ,ಇದು ಅಲ್ಲಲ್ಲಿ ಬಂದ ವರದಿಗಳ, ಅನಗತ್ಯ ವಿವರಣೆಗಳ, ಬರಿಯ ಬೆಳಗೆರೆ ಶೈಲಿಯ ನೂರು ಪುಟದ ಪದಜೋಡಣೆಯಾಗಿದೆ. ಇದು ತಲ್ವಾರ್ ದಂಪತಿಗಳು ಕೊಲೆಗಾರರು ಎಂಬ ಕೋನದಿಂದ ಇರುವ ಕಾರಣ ಓದಲಾಗಿದ್ದು!
ರವಿ ಬೆಳಗೆರೆ ನನ್ನ ಒಂದು ಕಾಲದ ಗಿಲ್ಟಿ ಪ್ಲೆಷರ್. ತೀರಾ 2011 ರವರೆಗೂ ವಾರ ವಾರವೂ 'ಹಾಯ್ ಬೆಂಗಳೂರು' ಓದುತ್ತಿದ್ದೆ ನಾನು. ಖಾಸ್ಬಾತು, ಮಾಟಗಾತಿ ,ಸರ್ಪ ಸಂಬಂಧ ಒಂದೇ ಎರಡೇ. ಬೆಳಗೆರೆಯ ಬರಹಗಳು ಅಷ್ಟು ಹುಚ್ಚು ಹಿಡಿಸುತ್ತಿದ್ದವು. ಕಾಲ ಸರಿಯಿತು. ಅತಿ ವೈಭವೀಕರಣದ 'ಪಾಪಿಗಳ ಲೋಕದಲ್ಲಿ' ಗಿಂತ , ಕೊಂಚ ಸ್ವಪ್ರಶಂಸೆಯ ತಣ್ಣಗಿನ 'ದಾದಾಗಿರಿಯ ದಿನಗಳು ' ಇಷ್ಟವಾಗಿತ್ತು. ಬೆಳಗೆರೆ ಮಂಕಾದರು. ಆಮೇಲೆ ಬಿಡಿ ಕಾಮರಾಜಮಾರ್ಗ ಅಂತ ಸೆಕ್ಸ್ ಬುಕ್ಕು, ನೂರು ಪುಟದ ಪುಸ್ತಕ ನೂರು ರೂಪಾಯಿ ಎಲ್ಲಾ ತಂದು ತಂದು ಸುರಿದರು. ಓದುವ ಅಂತ ಪುಟ ತೆರೆದರೆ ಅದೇ ಹಳೆಯ ಶೈಲಿ ಬೇಸರ ತರಿಸುತ್ತಿತ್ತು. ಕೊಂಚ ಓದುವಾಗಲೇ ಕೊನೆಯ ಪುಟ ಮುಟ್ಟಿ ಆಗುತ್ತಿತ್ತು. ಹೇಳಿ ಹೋಗು ಕಾರಣ, ನೀ ಹಿಂಗ್ಯ ನೋಡಬ್ಯಾಡ ನನ್ನ ಎಲ್ಲ ಎಳೆದ ರಬ್ಬರಂತಾಗಿತ್ತು ಕೊನೆ ಕೊನೆಗೆ! ಇತ್ತೀಚಿನ ರಾಜ್ ಲೀಲಾ ವಿನೋದ ಅಂತೂ ಶುದ್ಧ ಕಸ‌.
ಎಷ್ಟೇ ತಕರಾರಿದ್ದರೂ ಇವತ್ತಿಗೂ ಎಷ್ಟೋ ಜನಕ್ಕೆ ಓದಿನ ರುಚಿ ಹತ್ತಿಸಿದ್ದು ರವಿ ಬೆಳಗೆರೆಯೇ. ಅವರನ್ನು ಓದ್ತಾನೆ ಅಂದರೆ ಜನ ಮುಖ ಕಿವಿಚಿಕೊಳ್ಳುವಂತೆ ಮಾಡಿದ್ದೂ ಅವರದೇ ತಪ್ಪು!
ಹೆಚ್ಚೆನೂ ಇಲ್ಲ. ಒಂದು ವರದಿ ಮತ್ತು ಲೈಂಗಿಕತೆ ಬಗೆಗಿನ ಬೆಳಗೆರೆ ಶೈಲಿಯ ಪಾಠ ಮಾಡಿಸಿಕೊಂಡಂತಹ ಪುಸ್ತಕ ಇದು!
Profile Image for Vilas.
29 reviews
October 3, 2024
I read this book quite late. As of now, the Talwars are acquitted from the murder case due to insufficient evidence. But the book still holds relevance to the case and explains judgement, conjectures and theories to good effect in a typical Ravi belagere style. Belagere’s narration fails to dive deep into various possible explanations for what might have happened on the fateful night. That is because the book focuses more on the session court’s judgement rather than various possible conjectures. Overall this is wonderful book which illustrates the details of one of the most controversial cases in India.
October 15, 2022
ಒಂದು ಕೊಲೆ, ಅದರ ಸುತ್ತ ಇರುವ ರಹಸ್ಯಗಳು, ಹಂತಕರು ಮಾಡಿದ ತಪ್ಪುಗಳು
ಎಲ್ಲದರ ಬಗೆಗೆ ಲೇಖಕರು ಮಾಡಿದ ಅಧ್ಯಯನ ಇದೆಯಲ್ಲ ಅದು ಶ್ಲಾಘನೀಯ🙇🏻‍♂️🙇🏻‍♂️
Profile Image for Gautami Krishnan.
33 reviews4 followers
August 5, 2015
It's horrible when you realise that everything in this book is real and the book has to be this good to make you realise the things that happen around you.
Profile Image for Nayaz Riyazulla.
437 reviews93 followers
September 11, 2019
Its a bad read, Because he has written book by deciding that Parents are victims which is dangerous to a journalist, Journalist should pass a message to readers and readers should decide.
Displaying 1 - 7 of 7 reviews

Can't find what you're looking for?

Get help and learn more about the design.