மரண வாயிலின் நுனியை உணர்த்தும் சாகசம். புற்றுநோய் தாக்கி சிகிச்சை பெற்றவரின் அனுபவப் பகிர்வு. நோய், நோயின் தன்மை, சோதனைகள், மருத்துவச் சிகிச்சைகள், மருத்துவச்சிகிச்சையின் பாதிப்புகள்... என்று உடலியல், நோயியல் ரீதியான ஓர் ஓட்டம்... இன்னொருபுறம் நோயளியின் உறவுகள், நட்புகள், இயல்பிலிருந்து மாறுபடும் துயர்கள்... மெல்லிய உணர்வு இழைகள். நோயை மறப்பது. நோயிலிருந்து மீள்வது... நோய் பற்றிய கவனத்தையும், நோயாளி பற்றிய அக்கறையையும் வாழ்க்கை குறித்த அர்த்தத் தேடலையும் இந்தச் சிறிய, எளிய படைப்பு தூண்டிவிடுகிறது...
ಭಾರತಿ ಬಿ ವಿ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ. ಬಿ.ಕಾಂ ಪದವೀಧರೆಯಾಗಿರುವ ಇವರಿಗೆ ಕವಿತೆ ರಚನೆ, ಅನುವಾದ, ಪ್ರವಾಸ ಹವ್ಯಾಸಗಳಾಗಿವೆ.
ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಇವರು 'ಸಾಸಿವೆ ತಂದವಳು', 'ಮಿಸಳ್ ಭಾಜಿ', 'ಕಿಚನ್ ಕವಿತೆಗಳು', 'ಜಸ್ಟ್ ಮಾತ್ ಮಾತಲ್ಲಿ', 'ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ', 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ', 'ಎಲ್ಲಿಂದಲೋ ಬಂದವರು' ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ 'ಸಾಸಿವೆ ತಂದವಳು' ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ ಇಂದಿರಾ ಪ್ರಶಸ್ತಿ ಹಾಗೂ 'ಮಿಸಾಳ್ ಬಾಜಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.
ನಾವು ಡಿಗ್ರಿ ಓದುವಾಗ ಯಾವುದೇ ವಿಷಯ ಆಯ್ದುಕೊಂಡಿದ್ದರು ಪರಿಸರ ವಿಜ್ಞಾನ ( environment science ) ಹಾಗೂ ಭಾರತೀಯ ಸಂವಿಧಾನ ಕಡ್ಜಾಯ ಪತ್ರಿಕೆಗಳಾಗಿ ಓದಲೇ ಬೇಕಿತ್ತು. ಹಾಗೆಯೇ ಭಾರತಿ ಮೇಡಮ್ರವರ ಈ ಪುಸ್ತಕ ಹೊಸದಾಗಿ ಓದುವವರು, ಪಳಗಿದ ಓದುಗರು, occasional ಓದುಗರು ರೋಗಿಗಳು, ವೈದ್ಯರು, ರೋಗಿಗಳ ಸಂಬಂದಿಕರು ಹೀಗೆ ಎಲ್ಲರೂ ಓದ ಬೇಕಾದ ಪುಸ್ತಕ. ಇದರ ಮುಂದೆ ಪುಸ್ತಕದ ಬಗ್ಗೆ ಬರೆಯಲು ನಾನು ಶಕ್ಯಳಲ್ಲ. ನಾನು ಇಷ್ಟು ತಡವಾಗಿ ಓದಿದ್ದಕೆ ನನ್ನ ಮೇಲೆ ಬೇಸರವಿದೆ. ಯಾರಿಗಾದರು ಉಡುಗೊರೆ ಕೊಡ ಬೇಕೆಂದರೆ ನನ್ನ ಮೊದಲ ಆಯ್ಕೆ ಈ ಪುಸ್ತಕ.
ಸಾಸಿವೆ ತಂದವಳು ಕಥೆಯನ್ನು ಓದುತ್ತಾ ಹೋದಂತೆ ನಮ್ಮೊಳಗೊಂದು ಹೊಸ ತುಡಿತ, ಪುಟಿತ ಮೂಡುವುದರಲ್ಲಿ ಸಂಶಯವಿಲ್ಲ.
ಅಲ್ಪಸ್ವಲ್ಪ ಒತ್ತಡಗಳ ನಡುವೆಯೂ ನಮ್ಮದೇ ಬದುಕಲ್ಲಿ ನಾವು ಆರಾಮವಾಗಿ ಬದುಕುತ್ತಾ ಇರುತ್ತೀವಿ. ಒಂದು ಜ್ವರಕ್ಕೆ ಅಥವಾ ಕೈ ಕಾಲು ಮುರಿದುಕೊಂಡಾಗ ಸ್ವಲ್ಪ ಆತಂಕಕ್ಕೆ ಒಳಗಾಗುವುದು ನಿಜ. ಆದರೆ ಕಾಯಿಲೆಯೊಂದು ನಮ್ಮ ಬದುಕನ್ನೇ ಆಪೋಶನ ತೆಗೆದುಕೊಳ್ಳುತ್ತದೆ ಎಂದರೆ ನಮ್ಮ ಜಂಘಾಬಲವೇ ಹುದುಗಿ ಹೋಗುವುದಂತೂ ಖಂಡಿತ ನಿಜ. ಅಂತಹ ಕಾಯಿಲೆಯಾದ ಕ್ಯಾನ್ಸರ್ ನನ್ನು ಮಣಿಸಿ ಗೆದ್ದು ಬಂದ ಕಥೆ ಈ ಸಾಸಿವೆ ತಂದವಳು.
ತುಂಬಾ ಹೇಳುವುದಕ್ಕೇನಿಲ್ಲ. ಒಮ್ಮೆ ಓದಿ. ಎಲ್ಲೂ ತಮ್ಮ ಕ್ಯಾನ್ಸರ್ ಕಥೆಯನ್ನು ಗೋಳಿನ ಕಥೆಯಾಗಿಸದೆ ನವಿರಾದ ಶೈಲಿಯಲ್ಲಿ ಪ್ರಸ್ತುತಪಡಿಸುತ್ತ, ಅಲ್ಲಲ್ಲಿ ಸ್ವಲ್ಪ ಅಳಿಸಿ, ನಗಿಸಿ, ಬದುಕಿಗೆ ಮತ್ತಷ್ಟು ಉತ್ಸಾಹವನ್ನು ತುಂಬಿ ಕಳುಹಿಸುತ್ತಾರೆ ಈ ಕೃತಿಯ ಕರ್ತೃ Bharathi B V ma'am.
ಭಾರತಿ ಅವರಿಗೆ ಕ್ಯಾನ್ಸರ್ ಬಂದು-ಹೋದವರೆಗಿನ ಪಯಣದ ಅನುಭವಗಾಥೆ ಈ ಕೃತಿ. ಕೆಲವೊಮ್ಮೆ ಎದುರಿಗೆ ಕುಳಿತು ಅವರೇ ಹೇಳುತ್ತಿರುವಂತೆ ಆಪ್ತವೆನಿಸುವ ಬರಹ. ತಮ್ಮ ಎಂದಿನ ಹಾಸ್ಯ ಪ್ರಜ್ಞೆಯೊಂದಿಗೆ ಬದುಕಿನ ಬಗ್ಗೆ ನಮ್ಮ ನೋಟವನ್ನೇ positivity ಕಡೆಗೆ ಬದಲಿಸುವ ಎಲ್ಲರೂ ಒದಲೇಬೇಕಾದ ಕೃತಿ.
It might sound wierd when I say I didn't wanted to read this book at all in the first place after knowing the gist/outline of the book.
This book speaks about cancer and things following it, to the author. But the best part of the book is, no where it gets into patho mode. ಯಾಕಪ್ಪಾ ಈ book ಓದಕೆ ಶುರು ಮಾಡಿದೆ ಅಂತ ಎಲ್ಲೂ ಅನ್ಸಲ್ಲ. This book could be a ray of hope to somewhere someone who is going through the same kind of treatment which the author went through. There are few catchy bits in the book where the author speaks about living and loving the life to the fullest(These bits were my personal favorites from the book). Liked the way on how she could write on such a serious topic but still maintain that humor in the book. I would definitely recommend this book for a quick read.
ಬೌದ್ಧ ಕಥನ ಕಿಸಾ ಗೋತಮಿಯಲ್ಲಿ ತೀವ್ರ ಶೋಕದಲ್ಲಿದ್ದ ತಾಯಿ ತನ್ನ ಸತ್ತ ಮಗನನ್ನು ಬದುಕಿಸಲು ಬುದ್ಧನನ್ನು ಕೇಳುತ್ತಾಳೆ. ಆಗ ಬುದ್ಧನು, ಸಾವಿಲ್ಲದ ಮನೆಯೊಂದರಿಂದ ಸಾಸಿವೆ ತರುವಂತೆ ಹೇಳುತ್ತಾನೆ. ಅದವಳಿಂದ ಅಸಾಧ್ಯವಾದಾಗ ಸಾವು ಅನ್ನೋ ಸತ್ಯವನ್ನ ಸ್ವೀಕರಿಸುತ್ತಾಳೆ.
ಕ್ಯಾನ್ಸರ್ ಕಾಯಿಲೆನ ಗೆದ್ದು ಬಂದಂತಹ ಭಾರತಿ ಬಿ ವಿ ಅವರ ಆತ್ಮಚರಿತ್ರೆಗೆ 'ಸಾಸಿವೆ ತಂದವಳು' ಒಂದು ಸೂಕ್ತ ಹೆಸರೇ ಅನ್ನಬಹುದು. ಓದುಗರಿಗೆ ಈ ಪುಸ್ತಕ ಒಂದು ಸುಖಾಂತ್ಯ ಕಾದಂಬರಿಯಾದರೆ, ಕ್ಯಾನ್ಸರ್ ಕಾಯಿಲೆಗೆ ಒಳಗಾದವರಿಗೆ ಹೊಸ ಜೀವನಕ್ಕೆ ಪ್ರೇರಣೆ, ಮಾನಸಿಕ ಉತ್ಸಾಹ ನೀಡುವುದು ಖಂಡಿತ. ಸರಳ ಭಾಷೆಯ ಉಪಯೋಗ, ಹಾಸ್ಯಭರಿತ ಬರವಣಿಗೆ ಪುಸ್ತಕ ಇಡದೆ ಓದುತ್ತಾ ಕೊಂಡೊಯ್ಯುತ್ತದೆ.
ಒಂದು ಗಮನಕ್ಕೆ ಬಂದ ವಿಷಯ. ತಮ್ಮ ಈ ಹೋರಾಟದಲ್ಲಿ ಕ್ಯಾನ್ಸರ್ ಇರಬಹುದು ಎಂದಾಗ ಹುಟ್ಟಿದ ಭಯ, ಹಾಗೂ ಗುಣವಾದ ಮೇಲೆ ಪೂರ್ತಿ ಗುಣವಾಯ್ತೋ ಇಲ್ವೋ ಅನ್ನೋ ಗೊಂದಲದಲ್ಲಿದ್ದಾಗಿನ ಭಯ ಅವ್ರ ಚಿಕಿತ್ಸೆಯ ಸಮಯದಲ್ಲಿ ಎಲ್ಲೂ ಕಾಣಲಿಲ್ಲ, ಅಥವಾ ಅದಿದ್ದರೂ ತಮ್ಮ ಆತ್ಮವಿಶ್ವಾಸ ಕುಂದುವಷ್ಟು ಇರಲಿಲ್ಲ.
ಭಾರತಿ ಅವರು ನಿಜಜೀವನದಲ್ಲಿ ಎಷ್ಟು ಹ್ಯೂಮರಸ್ ಪರ್ಸನಾಲಿಟಿ ಅನ್ನೋದಂತೂ ಪುಸ್ತಕಪೂರ್ತಿ ತುಂಬಿಕೊಂಡಿದೆ. ಕೆಲವೊಂದು ಸಿಲ್ಲಿ ಸನ್ನಿವೇಶಗಳು ಓದಿದಾಗ ನನ್ನನ್ನೇ ನಾ ಪ್ರಶ್ನಿಸಿದೆ - ಕ್ಯಾನ್ಸರ್ ಬಂದಾಗ ಈ ಧೈರ್ಯ ಸಾಧ್ಯನಾ? ಇಷ್ಟು ಖುಷಿಯಾಗಿರಲು ಸಾಧ್ಯನಾ?
ಡ್ರೈನ್ ಪೈಪ್ ಹಿಡ್ಕೊಂಡು ಆಟೋದಲ್ಲಿ ಫ್ರೆಂಡ್ ಮನೆಗೆ ಹೋದಾಗ ಡ್ರೈವರ್ನ ಪ್ರತಿಕ್ರಿಯೆ, ಒಂದ್ಕಡೆ ಆಸ್ಪತ್ರೆ ಇನ್ನೊಂದ್ಕಡೆ ತಿಥಿ ಮನೆ ನೋಡಿ ಇಲ್ಲಿನ ಕೆಲ್ಸ ಮುಗೀತು ಅಂದ್ರೆ ಅಲ್ಲಿಗೆ ಶಿಫ್ಟ್ ಆಗೋದು ಅನ್ನೋ ಹೇಳಿಕೆ, ನೋವು to the power of n, ಕಣ್ಣು ಮುಚ್ಚಿ ತಿಂದರೆ ಚಪಾತಿಯೋ ಚಪ್ಪಲಿಯೋ, out of the way ಹೋಗಿ ಸಹಾಯ ಮಾಡು ಅಂತ ದೇವರ ಹತ್ತಿರ ಬೇಡ್ಕೊಳೋದು, ಹೀಗೆ ಅನೇಕ ಹಾಸ್ಯಭರಿತ ಸಂಗತಿಗಳು ಇಲ್ಲಿವೆ.
"Health is Wealth" ಅನ್ನೋ ಮಾತಿದೆ ಆದರೆ ಎಷ್ಟರ ಮಟ್ಟಿಗೆ ನಾವು ಆ wealthನ ಕಾಪಾಡಿಕೊಳ್ಳುತ್ತಿದ್ದೀವಿ? ಬಹಳ ವೇಗವಾಗಿ ಬದಲಾಗುತ್ತಿರುವ ಈ ಜಗತ್ತಲ್ಲಿ ಕೆಲಸ ಮತ್ತು ಕುಟುಂಬದ ಕೆಲ ಒತ್ತಡಗಳ ನಡುವೆ ಆರೋಗ್ಯಕರ ದೇಹವನ್ನಿಟ್ಟುಕೊಳ್ಳುವುದು ಸವಾಲಿನ ವಿಷಯವೇ ಸರಿ. ಎಷ್ಟೇ ಹಣವಂತರಾಗಿರಿ, ಆರೋಗ್ಯವಂತರಾಗಿರಿ ಆದರೆ ನಾವ್ಯಾರೂ ಊಹಿಸಿಕೊಂಡಿರದ ಸಾವು ಮತ್ತು ರೋಗಗಳನ್ನ ತಡೆಯೋದು ಅಸಾಧ್ಯ. ಹೀಗ್ಯಾಕೆ ಯೋಚನೆ ಮಾಡ್ತೀರ ? ಆಶಾವಾದಿಗಳಾಗಿ ಜೀವನ ಮಾಡಬೇಕು ಅಂತ ನೀವು ಅನ್ನಬಹುದು. ನಿಜ, ನಾನು ಎಲ್ಲರಂತೆ ನನ್ನ ಬದುಕನ್ನ ಪ್ರೀತಿಸ್ತೀನಿ. ಏನೇ ಕಷ್ಟ ಬಂದ್ರೂ ದಿಟ್ಟವಾಗಿ ಎದ್ರುಸ್ತೀನಿ ಅನ್ನೋ optimistic ವ್ಯಕ್ತಿ ನಾನು.
ಕ್ಯಾನ್ಸರ್ ಜೊತೆಗಿನ ದೀರ್ಘ ಹೋರಾಟದ ಪಯಣದ ಅನುಭವವನ್ನು ನಾವು ಬಿ ವಿ ಭಾರತಿಯವರ "ಸಾಸಿವೆ ತಂದವಳು" ಕೃತಿಯಲ್ಲಿ ಕಾಣಬಹುದು. ಕ್ಯಾನ್ಸರ್ಗೆ ಇನ್ನೊಂದು ಹೆಸರೇ ಸಾವು ಅಂತ ನಂಬುವವರೇ ಜಾಸ್ತಿ, ಕ್ಯಾನ್ಸರ್ ಗೆದ್ದ ಎಷ್ಟೋ ಉದಾಹರಣೆಗಳು ನಮ್ಮ ಮುಂದೆ ಇದ್ರೂ ಕೂಡ. ಕ್ಯಾನ್ಸರ್ ರೋಗದ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳು ಮತ್ತು ಭಯವನ್ನು ತೊಡೆದುಹಾಕುವ ಕೃತಿ ಇದು, Myth-Buster ಅಂತೀವಲ್ಲ ಆ ರೀತಿ. ಕ್ಯಾನ್ಸರ್ ವಿರುದ್ಧದ ಹೋರಾಟದ ಅನುಭವಗಾಥೆ ಎಂದ ಮಾತ್ರಕ್ಕೆ ಭಾರತಿಯವರು ತಮ್ಮ ಪಯಣದ ನೋವನ್ನೇ ಪುಸ್ತಕದಲ್ಲಿ ತುಂಬಿಸಿಲ್ಲ. ಚಿಕಿತ್ಸೆ ನೆಡೆಯುವಾಗಲೂ, ಆ ನೋವಿನ ಮಧ್ಯದಲ್ಲೂ ನಾನು ನನ್ನ Identity ಕಳ್ಕೊಬಾರದು, ಪರಾವಲಂಬಿಯಾಗಬಾರದು ಅಂತ ಯೋಚನೆ ಮಾಡೋ ಭಾರತಿಯವರು ಎಲ್ಲಾ ಸರಿಯಿರುವ ನಮಗೆ ಸ್ಫೂರ್ತಿದಾಯಕ ವ್ಯಕ್ತಿ. ಲೇಖಕರ ಹಾಸ್ಯಪ್ರಜ್ಞೆಗೊಂದು ಸಲಾಂ, ಓದಿನ ಕೆಲವೊಂದು ಕಡೆ ನಗು ಮೂಡಿಸಿದ್ದಂತೂ ನಿಜ.
ಇದು ವೈದ್ಯಕೀಯ ಪುಸ್ತಕವಲ್ಲ, ತಮ್ಮ ಅನುಭವಕ್ಕೆ ಬಂದಷ್ಟು ಕ್ಯಾನ್ಸರ್ ಕುರಿತಾಗಿ, ಚಿಕಿತ್ಸೆಯ ಒಂದಷ್ಟು ಮಾಹಿತಿಗಳನ್ನು, "ಇವತ್ತು ನಂಗೆ ಕ್ಯಾನ್ಸರ್ ಇದೆ" ಮತ್ತು "ಇವತ್ತು ನಾನು ಕ್ಯಾನ್ಸರ್ ಮುಕ್ತಳು" ಎನ್ನುವ ದಿನದವರೆಗಿನ ಪೂರ್ತಿ ಪಯಣವನ್ನು ಈ ಕೃತಿಯಲ್ಲಿ ನಾವು ಕಾಣಬಹುದು. "The Last Lecture" ಮತ್ತು "When Breath Becomes Air" ಈ ಎರಡು ಪುಸ್ತಕಗಳು ಕ್ಯಾನ್ಸರ್ ವಿರುದ್ಧ ಹೋರಾಟದ ಬಗೆಗಿನ ಪುಸ್ತಕಗಳೇ ಮತ್ತು ಓದುಗ ಸಮೂಹದಲ್ಲಿ ಬಹಳ ಜನಪ್ರಿಯ. "ಸಾಸಿವೆ ತಂದವಳು" ಕೃತಿಯನ್ನು ಇಂಗ್ಲೀಷಿಗೆ ಅನುವಾದ ಮಾಡಿದ್ದೆ ಆದರೆ ಮೇಲಿನ ತಿಳಿಸಿದ ಪುಸ್ತಕಗಳಷ್ಟೇ popular ಆಗೋ ಎಲ್ಲಾ ಅಂಶಗಳು ಇದರಲ್ಲೂ ಇವೆ ಅನ್ನೋದು ನನ್ನ ಅಭಿಪ್ರಾಯ.
ಕಷ್ಟಗಳು ಮನುಷ್ಯಂಗೆ ಬರದ್ದೆ ಮರಕ್ಕೆ ಬರತ್ತ? ಬಂದ ಕಷ್ಟಗಳನ್ನು ಎದುರಿಸಬೇಕು ಅಂತ ಎಲ್ಲರು ಕಷ್ಟಕಾಲಕ್ಕೆ ತಿಳಿ ಹೇಳುತ್ತಾರೆ. ಇದು ಅನಾರೋಗ್ಯದ ಸಮಯದಲ್ಲಿ ಕೂಡ ಅನ್ವಯವಾಗುವ ಮಾತು. ಆದರೆ ಅದನ್ನು ಎದುರಿಸುತ್ತಿರುವವರಿಗೆ ಇದೆಲ್ಲ ಗೊತ್ತಿದ್ದೂ ಅವರನ್ನು ಧೃತಿಗೆಡುವಂತೆ ಮಾಡುವುದು ಅವರ ಪರಿಸ್ಥಿತಿ.
ಒಮ್ಮೆ ಎಲ್ಲರು ನಮ್ಮ ಜೊತೆಗಿದ್ದು ಕಾಳಜಿ ತೋರಿಸಲಿ, ಆರೈಕೆ ಮಾಡಲಿ ಅನಿಸುತ್ತದೆ. ಆದರೆ ಮರುಕ್ಷಣ ಅದೆ ಜೀವ ಹಿಂಡುತ್ತದೆ. ಒಂದು ಮಾತನಾಡಿದರೆ ಕಡಿಮೆ, ಎರಡು ಹೆಚ್ಚು ಎಂಬ ಭಾವ. ಜೊತೆಗೆ ಮಾತಿಗೆ ನಿಲ್ಲುವವರು ಬೇಕು, ಆದರೆ ಮಾತನಾಡುವಾಗ ಅವರ ಮುಖಭಾವ ಎಷ್ಟೊ ಸಲ ನಮ್ಮಲ್ಲೊಂದು ಹೆದರಿಕೆ ಹುಟ್ಟಿಸುತ್ತದೆ. ಜೀವ ಬಲಿ ಪಡೆಯುವ ರೋಗವೇ ಇರಲಿ ಅಥವಾ ಜೀವಕ್ಕೇನು ಅಪಾಯ ಮಾಡದೆ ಸದಾ ನಮ್ಮೊಂದಿಗಿರುವ ಒಂದು ಅನಾರೋಗ್ಯವೇ ಇರಲಿ ಅದು ನೀಡುವ ಮಾನಸಿಕ ಹಿಂಸೆಯನ್ನು ಮೆಟ್ಟಿ ನಿಲ್ಲುವುದು ಸಾಧಾರಣದ ಕೆಲಸವಲ್ಲ.
ಅಂತಹದರಲ್ಲಿ ಮಾರಣಾಂತಿಕ ಕ್ಯಾನ್ಸರ್ ನ್ನು ಗುಣಪಡಿಸಿಕೊಂಡು, ಮನಸನ್ನು ಇನ್ನಷ್ಟು ಪಕ್ವವಾಗಿಸಿಕೊಂಡು, ತಮ್ಮ ಅಗಾಧವಾದ ನೋವಿನ ದಿನಗಳನ್ನೂ ಬೇರೆಯವರ ಬದುಕಿಗೆ ಒಂದು ಪಾಠವನ್ನಾಗಿ ಕೊಟ್ಟ ಭಾರತಿಯವರಿಗೆ ತುಂಬಾ ತುಂಬಾ ಥಾಂಕ್ಯು.
ಸಾಸಿವೆ ತಂದವಳು ಎಂಬ ಶೀರ್ಷಿಕೆ, ಮುಖಪುಟದ ಚಿತ್ರ ಎರಡು ನೋಡಿ ಪುಸ್ತಕ ಬಂದು 15 ದಿನ ಕಳೆದರೂ ಓದುವ ಧೈರ್ಯವೇ ಬಂದಿರಲಿಲ್ಲ. ಆದರೆ ಇವತ್ತು ಹುಡುಕಿ ಇದೇ ಪುಸ್ತಕ ಓದೋಣ ಎಂದು ಕುಳಿತೆ. ಒಂದೇ ಗುಟುಕಿಗೆ ಓದಿ ಮುಗಿಸಿ ಸುಮ್ಮನೆ ಕುಳಿತೆ. ಒಂದಷ್ಟು ಪುಟಗಳನ್ನು ಮತ್ತೆ ಮತ್ತೆ ತಿರುವಿ ಹಾಕಿದೆ. ಇದು ಓದಿ ಮುಗಿಯದ ಪುಸ್ತಕ, ಮತ್ತೆ ಮತ್ತೆ ಬೇಕು ಇದು ನನ್ನ ಓದಿಗೆ.
ಅಡಿಗೆಯಾಕೆಯ ಬಗ್ಗೆ ಅವರು ಬರೆದದ್ದು ಓದುವಾಗ ಅದು ತಿಳಿಹಾಸ್ಯ ಎನಿಸಿದರೂ, ರುಚಿಕಟ್ಟಾದ ಊಟವಿರದಿದ್ದರೆ ಮನಸು ಪುಟಿದೇಳುವುದು ಕಷ್ಟ ಅಂತ ನನಗೂ ಎಷ್ಟೊ ಸಲ ಅನಿಸಿದ್ದಿದೆ. ರುಚಿಯಾದ ಊಟ, ಹಿತವಾದ ಸಾಮಿಪ್ಯ, ಆತ್ಮಶಕ್ತಿ ಹೆಚ್ಚಿಸುವ ವೈದ್ಯರು, ನಮ್ಮ ಅನಾರೋಗ್ಯವನ್ನು ಮರೆಯಿಸುವ ಸ್ನೇಹಿತರು, ಒಳಿತಾಗಲಿ ಎಂದವರು, ಕಾಳಜಿಯ ಮಾತುಗಳಿಂದಲೇ ತಿವಿದವರು.. ಹೀಗೆ ಎಲ್ಲ ಅನುಭವಗಳ ಕುರಿತು ಅವರು ಕಟ್ಟಿಕೊಟ್ಟ ಅಕ್ಷರಗಳು ಅಕ್ಷರಶಃ ಹೌದೆನಿಸುತ್ತವೆ.
ನಮಗೆಷ್ಟೇ ಗೊತ್ತಿದ್ದರು ಈ ತರಹದ ಬರಹ, ಮಾತುಗಳು ನಮ್ಮಲ್ಲೊಂದು ಚೈತನ್ಯ ಹುಟ್ಟಿಸುತ್ತವೆ. ಥಾಂಕ್ಯು ಭಾರತಿ ಮೇಡಂ ಇಂತಹ ಚಂದದ ಪುಸ್ತಕಕ್ಕಾಗಿ...
ಕೆಲವೊಮ್ಮೆ ಈ ಸಂಘರ್ಷಗಳ ಕತೆಗಳನ್ನ ಓದ್ಬೇಕಾದ್ರೆ, ಓದುಗರಾಗಿ ನಾವು ಹ್ಯಾಪಿ ಎಂಡಿಗ್ನ ಬಯಸೋದು ನಮ್ಮ ಹಕ್ಕು ಅನ್ಕೊಂಡು ಓದ್ತೀವಿ. ಇಷ್ಟೆಲ್ಲಾ ಅಳಿಸಿದ್ದೀರಾ,ತುದೀಲಿ ಕ್ಯಾನ್ಸರ್ ಮೇಲೆ ಜಯ ಸಾಧಿಸಿದ ಮೇಲೆ ನಿಮಗಾದ ಸಂತೋಷಗಳನ್ನ, ಗೆದ್ದಮೇಲೆ ಜೀವನ ಎಷ್ಟು ಸರಳ ಆಯ್ತು ಅನ್ನೋದನ್ನ ಹೇಳಿ ಅಂತ ಕುತ್ತಿಗೆ ಪಟ್ಟಿ ಹಿಡಿದು ಕೇಳೋದಕ್ಕೆ ನಿಂತು ಬಿಡ್ತೀವಿ. ಆದರೆ ಭಾರತಿಯವರ ಪುಸ್ತಕದಲ್ಲಿ ಸಂತೋಷಗಳು, ಸಣ್ಣ ಸಣ್ಣ ವಿಷಯಕ್ಕೆ ಅವರಿಗೆ ಅವರೇ ಕಾಲೆಳೆದುಕೊಳ್ಳುವುದರ ಮಧ್ಯ, ಸಾವಿನ ಜೊತೆಗಿನ ಯುದ್ದವನ್ನ ನೋಡಬಹುದು!
ಸಾವಿಲ್ಲದ ಮನೆಯಿಂದ ಸಾಸಿವೆ ತಂದರೂ ಬದುಕು ಅನಿಯಮಿತ ಅನಿಶ್ಚಿತತೆಯ ಗೊಂಚಲು ಅನ್ನೋದು ವಿಧಿತ. ಈ ಪುಸ್ತಕ ನಿಮ್ಮ ಮುಖದ ಮೇಲೊಂದು ಮುಗುಳ್ನಗೆಯನ್ನ ಖಂಡಿತಾ ತಂದೀತು.
ಬದುಕಿನ ಮೇಲೆ ಪ್ರೀತಿ ಹೆಚ್ಚಿಸುತ್ತದೆ ಈ ಪುಸ್ತಕ. ಭಾರತಿಯವರ ಮನೋಸ್ಥೈರ್ಯದ ಯಶೋಗಾಥೆಯಾಗಿರುವ 'ಸಾಸಿವೆ ತಂದವಳು ' ನನಗೆ ಬಹಳ ಖುಷಿಯಾಯಿತು. ಅವರ ಭಾಷೆ, ಹಾಸ್ಯಪ್ರಜ್ಞೆ, ಬರವಣಿಗೆ ಶೈಲಿ, ಎಲ್ಲವೂ ಅತ್ಯುತ್ತಮ ✨ ಇನ್ನೊಮ್ಮೆ ಓದಬೇಕು ಅನ್ನಿಸೋಂತಹ ಪುಸ್ತಕವಿದು.