Vasudhendra (ವಸುಧೇಂದ್ರ) was born at Sandur in Ballari district, Karnataka. After working as a software professional for more than twenty years, Vasudhendra now runs his own publication house, Chanda Pustaka, which publishes and encourages new writing in Kannada and has instituted the Chanda Pustaka Award which recognizes young short story writers. He is also associated with local support groups for LGBT individuals. The author of thirteen books in Kannada, that have sold over 80,000 copies, Vasudhendra has won many literary awards, including the Kannada Sahitya Academy Book Prize, the Da Raa Bendre Story Award and the Dr U.R. Ananthamurthy Award.
#ಅಕ್ಷರವಿಹಾರ_೨೦೨೨ ಕೃತಿ: ಚೇಳು ಲೇಖಕರು: ವಸುಧೇಂದ್ರ ಪ್ರಕಾಶಕರು: ಛಂದ ಪುಸ್ತಕ ಬೆಂಗಳೂರು
ವಸುಧೇಂದ್ರ ಅವರ ಏಳು ಕಥೆಗಳುಳ್ಳ ಕಥಾಸಂಕಲನ. ಒಂದೆರಡು ಕಥೆಗಳನ್ನು ಹೊರತುಪಡಿಸಿ ಬೇರೆಯದೆಲ್ಲವೂ ನನಗೆ ಇಷ್ಟವಾಯಿತು. ಕತೆಯ ವಸ್ತುವಿನ ಜೊತೆಗೆ ಸುತ್ತಲಿನ ಪರಿಸರದ ಅಥವಾ ಹಿನ್ನೆಲೆಯಲ್ಲಿ ಬರುವ ವಿವರಗಳು ಕತೆಗಳಿಗೆ ಪೂರಕವಾಗಿದ್ದುಕೊಂಡು ಮನದಲ್ಲಿ ಅಚ್ಚಳಿಯದೆ ಉಳಿದುಕೊಳ್ಳುವಂತೆ ಬರೆಯುವ ಶೈಲಿ ಸುಲಲಿತವಾಗಿ ಓದಿಸಿಕೊಳ್ಳುವಂತೆ ಮಾಡುತ್ತದೆ.
'ಚೇಳು' ಶತಮಾನಗಳಿಂದ ಪ್ರಚಲಿತದಲ್ಲಿರುವ ನಾಟಿ ಔಷಧಿಗಳು ಇಂದು ಬಹುತೇಕ ಕಣ್ಮರೆಯಾಗುತ್ತಿರುವ ಬಗ್ಗೆ, ಆಧುನಿಕ ಕೀಟನಾಶಕಗಳು ನಾಟಿ ಔಷಧಿಯನ್ನು ಬಲಿ ತೆಗೆದುಕೊಳ್ಳುವ ಕುರಿತಾದ ಕತೆ. ನಾಟಿ ಔಷಧಿಗಳ ಪಂಡಿತರು ಔಷಧೀಯ ಸಸ್ಯಗಳ ಮಾಹಿತಿಯನ್ನು ಬಚ್ಚಿಡುವುದರಲ್ಲಿರುವ ಉದ್ದೇಶ ಸ್ವಾರ್ಥವೇ ಅಥವಾ ಸಹಜವಾಗಿ ಎಲ್ಲರಿಗೂ ತಿಳಿದರೆ ಲೋಭ ಮನೋಭಾವದಿಂದ ಆ ಸಸ್ಯಸಂಪತ್ತು ನಾಶವಾಗಿ ಹೋಗಬಹುದೆಂಬ ಭಯವೇ ಎಂಬ ಸಂಶಯ ನನ್ನನ್ನು ಕಾಡತೊಡಗಿತು. ಏನೇ ಆದರೂ ಈ ಎರಡು ಕಾರಣಗಳಿಂದ ಹೊಸ ತಲೆಮಾರು ಒಂದು ಅಮೂಲ್ಯವಾದ ಜ್ಞಾನದಿಂದ ವಂಚಿತವಾಗುತ್ತಿರುವುದು ಮಾತ್ರ ದುರ್ದೈವ. ಕೀಟನಾಶಕಗಳು ಬರೀ ಕೀಟಗಳನ್ನಷ್ಟೇ ಅಲ್ಲದೇ ನಾಟಿ ಔಷಧಿಯನ್ನು ಸಹ ನುಂಗಿ ನೀರು ಕುಡಿದದ್ದು ಸುಳ್ಳಲ್ಲ.
'ಕ್ಷಿತಿಜ ಹಿಡಿಯ ಹೊರಟವರು', 'ಹಲೋ ಭಾರತಿ' ಮತ್ತು 'ಗುಳ್ಳೆ' ಕತೆಗಳು ಕಾರ್ಪೋರೇಟ್ ಜಗತ್ತಿನ ಬಗೆಗಿನ ಕತೆಗಳು. 'ಕ್ಷಿತಿಜ ಹಿಡಿಯ ಹೊರಟವರು' ಕತೆಯಲ್ಲಿ ಬರುವ ಇಂಜಿನಿಯರ್ ವೃತ್ತಿಯಲ್ಲಿರುವವರ ಮಾನಸಿಕ ತೊಳಲಾಟಗಳು, ಇನ್ನಷ್ಟು ಮತ್ತಷ್ಟು ಬೇಕೆನಿಸಿ ಸದಾ ಒಂದಿಲ್ಲೊಂದು ಆಸೆಯ ಬೆನ್ನುಹತ್ತಿ ವೈಯಕ್ತಿಕ ಹಾಗೂ ಕೌಟುಂಬಿಕ ಸಮಯವನ್ನು ಕಳೆದುಕೊಂಡವರು, ಇವೆಲ್ಲದರ ನಡುವೆ ಅರಿವಿಗೇ ಬಾರದಂತೆ ಮನಸ್ಸುಗಳು ವಿಕ್ಷಿಪ್ತವಾಗಿ ರಂಜನೆಯನ್ನು ಬಯಸುವುದರ ವಿವರಗಳು ನಾವು ಎತ್ತ ಸಾಗುತ್ತಿದ್ದೇವೆ ಎಂಬುದರ ದಿಕ್ಸೂಚಿಯಾಗಿವೆ. ಈ ಕತೆಯಲ್ಲಿ ಬರುವ ಅಪಾರ್ಟ್ಮೆಂಟ್,ಟ್ರಾಫಿಕ್,ರಸ್ತೆಯಲ್ಲಿ ನಡೆಯುವ ಜಗಳಗಳು,ಮೊಬೈಲ್ ಟವರ್,ಚಲಿಸುವ ರೈಲಿನ ವಿವರಗಳು ಒಟ್ಟು ಮಹಾನಗರಗಳ ಜೀವನದ ಚಿತ್ರಣವನ್ನು ಕಟ್ಟಿಕೊಡುತ್ತದೆ. 'ಹಲೋ ಭಾರತಿ' ಮತ್ತು 'ಗುಳ್ಳೆ' ಕಾರ್ಪೋರೇಟ್ ಜಗತ್ತು ಹಾಗೂ ಮನಸ್ಥಿತಿಯ ಸಾಧಕ ಬಾಧಕಗಳ ಕುರಿತಾದ ಕತೆಗಳಾಗಿವೆ.
'ಅನಘ' ಭಿನ್ನ ಲೈಂಗಿಕತೆಯಲ್ಲಿ ಆಸಕ್ತಿಯನ್ನು ಹೊಂದಿರುವ ವ್ಯಕ್ತಿಗಳನ್ನು ಕುರಿತಾದ ಅಸಹ್ಯ ಮತ್ತು ತಾತ್ಸಾರದ ಮನೋಭಾವದ ಕುರಿತಾದ ಕತೆ. ಇದು ಸಹಜವೋ ಅಲ್ಲವೋ ಎಂಬ ಪ್ರಶ್ನೆಗಿಂತ ಆ ವಿಚಾರವನ್ನು ಹೊರತುಪಡಿಸಿ ಉಳಿದಂತೆ ಅವನು ಸಹ ಒಬ್ಬ ಮನುಷ್ಯ ಎಂಬ ತಿಳುವಳಿಕೆಯ ಅಗತ್ಯತೆ ಇದೆ ಎಂಬುದನ್ನು ತಿಳಿಸುತ್ತದೆ. ಇಲ್ಲಿ ಸುಮಾರು ಹದಿನೈದು ವರ್ಷಗಳ ಕೆಳಗಿನ ಪರಿಸ್ಥಿತಿಯ ಚಿತ್ರಣವಿದೆ. ಅಲ್ಲಿಂದ ಬಹುತೇಕರ ಮನಃಸ್ಥಿತಿ ಈ ವಿಚಾರದ ಕುರಿತಾಗಿ ಬದಲಾಗಿರುವುದು, ಬದಲಾಗುತ್ತಿರುವುದು ಒಳ್ಳೆಯ ಬೆಳವಣಿಗೆ.
ಒಟ್ಟಿನಲ್ಲಿ ವಿಭಿನ್ನ ಕತೆಗಳನ್ನು ಒಳಗೊಂಡಿರುವ ಕಥಾಸಂಕಲನ ಒಳ್ಳೆಯ ಓದು.
ವಸುಧೇಂದ್ರ ಅವರ ಕೃತಿ ಹಾಗೂ ಕಥೆಗಳು ಬಳ್ಳಾರಿ ಜಿಲ್ಲೆ ಹಾಗೂ ಬೆಂಗಳೂರಿನ ಜೀವನ ಜೊತೆಗೆ ಟ್ರಾಫಿಕ್ ಗುದ್ದಾಟ ,ಬದುಕು, ಯಶಸ್ಸು ,ನಿರೀಕ್ಷೆ , ಅವಮಾನ ,ಸೋಲು-ಗೆಲುವು, ಮನದಾಳದ ಗುಟ್ಟು, ಹುಟ್ಟು-ಸಾವು ,ಎಲ್ಲವನ್ನು ಒಟ್ಟುಗೂಡಿ ಚೇಳು ಏಳು ಕಥೆಗಳನ್ನು ರೂಪಗೊಂಡಿವೆ .
ಚೇಳು -- ಬಳ್ಳಾರಿ ಜಿಲ್ಲೆಯ ಪುಟ್ಟ ಊರಿನಲ್ಲಿ ಚೇಳುಗಳು ಹಾವಳಿ ಶುರುವಾಗಿದ್ದು ಆ ಸಂದರ್ಭದಲ್ಲಿ ಅದೇ ಊರಿನಲ್ಲಿ ವಾಸವಾಗಿರುವ ವೆಂಕಮ್ಮ ,ವೆಂಕಮ್ಮ ನಿಗೂ ಹಾಗೂ ಚೇಳು ಅಪಾರ ನಂಟು! ಮುಂದೆ ಒಂದು ದಿನ ಅದೇ ಅವಳಿಗೆ ಮುಳುವಾಗುತ್ತದೆ .
ಕ್ಷಿತಿಜ ಹಿಡಿಯ ಹೊರಟಿರುವ -- ಜೀವನದ ಜಂಜಾಟದಲ್ಲಿ ನಿದ್ದೆ, ಊಟ, ಆರೋಗ್ಯ ,ಮರೆತು ಕೆಲಸದ ಹೊಸ ಪ್ರೊಪೋಸಲ್ ಪ್ರಜೆಕ್ಟ್ ಮೈಮೇಲೆ ಹಾಕಿಕೊಂಡು ದುಡಿಯುತ್ತಿದ್ದರು ಈ ಕೆಲಸ ನನ್ನ ಕೈಯಿಂದ ಆಗುವುದಿಲ್ಲ ಹೇಳುವ ನೆಪ ಬಲು ಸುಲಭ .
ಅನಘ -- ಹೆಣ್ಣಿನ ಸ್ವಭಾವದಂತೆ ಗಂಡಿನ ಮನಸಿನಲ್ಲೂ ಕೂಡ ಇರುತ್ತದೆ ಇದೇ ರೀತಿ ಸೂಳೆಯರನ್ನು ಜಗತ್ತು ಹತ್ತಿರ ಸೇರಿಸಿಕೊಳ್ಳುವುದಿಲ್ಲ!
ಹಲೋ ಭಾರತ್ -- ನಮ್ಮ ದಿನನಿತ್ಯ ಜೀವನದಲ್ಲಿ ಸುಳ್ಳು ಹೇಳುವುದು ಸುಳ್ಳು ಕೇಳೋದು ಸರ್ವೇಸಾಮಾನ್ಯ .ಆದರೆ ಸುಳ್ಳು ಬಹಳ ದಿನ ಬದುಕುವುದಿಲ್ಲ !
ಹೊಟ್ಟೆಯೊಳಗಿನ ಗುಟ್ಟು -- ಸತ್ತು ಹೋದವರಿಗೆ ಕಾಗೆ ಪಿಂಡ ಹಾಕ್ತಿವಿ ಆದರೆ ಕಾಗೆ ಪಿಂಡ ಮುಟ್ಟಲಿಲ್ಲ ಅಂದರೆ ಅವರ ಆಸೆ ಪೂರ್ತಿಗೊಂಡಿಲ್ಲ ಅಂತ ಅರ್ಥ, ಕಾಗೆ ಪಿಂಡ ಮುಟ್ಟಿದರು ಕೂಡ ಒಂದಿಷ್ಟು ವಿಷಯಗಳು ಹೊಟ್ಟೆಯೊಳಗೆ ಗುಟ್ಟಾಗಿ ಉಳಿದುಬಿಡುತ್ತದೆ .
ಗುಳ್ಳೆ -- ತಪ್ಪು ಮಾಡಿದರೂ ಕೂಡ ಹೊರನೋಟಕ್ಕೆ ಮುಖವಾಡ ಹೊತ್ತುಕೊಂಡು ನಡೆಯುತ್ತಿರುತ್ತವೆ. ಭಗವಂತನಿಗೆ ಮಾತ್ರ ದಯವಿಟ್ಟು ಕ್ಷಮಿಸು ಎಂದು ಪ್ರಾರ್ಥಿಸುತ್ತೇವೆ .
ಶ್ರೀದೇವಿ ಮಹಾತ್ಮೆ-- ಚಿತ್ತೂರಿನ ಸಮೀಪದ ಹಳ್ಳಿ ಹುಡುಗಿ ದೇವಿ ಬೆಂಗಳೂರಿಗೆ ಬಂದು ಮೊದಲ ಪಾಠ ಕಲಿತಿದ್ದು "ಸೀಯೂ.. ಬಾಯ್ ಬಾಯ್ "
ಲೇಖಕರು ಬರೆದಿರುವ ಏಳು ಕಥೆಗಳು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಳೆದುಹೋಗಿರುವ ಘಟನೆಗಳು ಹಾಗೂ ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಘಟನೆಗಳು ,ಕೆಲವು ಕತೆಗಳು ಹೇಳಿರುತ್ತೇವೆ , ಚೇಳು ಕಥೆಗಳಲ್ಲಿ ಬರುವ ಕೆಲವೊಂದು ಸಾಲುಗಳು ಹಾಗೂ ಕಥೆಗಳು ಓದುವಾಗ ನನ್ನ ಜೊತೆ ನಡೆದಿರುವ ಘಟನೆಗಳು ಎಂದು ಅನಿಸಿದೆ .
ಕ್ಷಿತಿಜ ಹಿಡಿಯಲು ಹೊರಟವರು ನಮ್ಮ ಬೆಂಗಳೂರಿನ ಬದುಕಿಗೆ ಹಿಡಿದ ಕನ್ನಡಿ, ಗುಳ್ಳೆ ಕಥೆ ೨೦೦೮ ರ ರಿಸೆಶನ್ ನೋಡಿದವರಿಗೆ ಅರ್ಥ ಆಗುತ್ತೆ. ಅನಘ ಕಥೆಗೆ ಯಾಕೆ ಆ ಹೆಸರಿಟ್ಟರು ಅಂತ ಯೋಚನೆ ಮಾಡ್ತಾ ಇದ್ದೆ, ಅನಘ ಅಂದರೆ ಅರ್ಥನೇ ಪಾಪವಿಲ್ಲದವನು/ಳು. ಕಲ್ಲೇಶಿಗೆ ಅವನ ತಂದೆ ಹೊಡೆಯುವಾಗ ಹೊಟ್ಟೇಲಿ ಸಂಕಟ ಆಗುತ್ತೆ. ಒಮ್ಮೆಗೆ ಓದಿ ಮುಗಿಸಬಹುದಾದ ಪುಸ್ತಕ.
ಒಂದು ಕಥಾಸಂಕಲನ ಅಂದಮೇಲೆ ಉತ್ತಮ ಕಥೆಗಳೂ ಇರುತ್ವೆ ಹಾಗೂ ಸಾಧಾರಣ ಕಥೆಗಳೂ ಇರುತ್ವೆ; ಹಾಗೆಯೇ ಇಲ್ಲಿಯೂ ಕೂಡ ಅದೇ ಸರ್ವೇಸಾಮಾನ್ಯವಾದ ಪ್ಯಾಟ್ರನ್ ಇದೆ. ಒಟ್ಟು ಏಳು ಸೃಜನಶೀಲ ಕಥೆಗಳನ್ನ ಒಳಗೊಂಡ ಈ ಸಂಕಲನದಲ್ಲಿ 'ಚೇಳು' ನನ್ನ ಮನಸ್ಸಿಗೆ ಹತ್ತಿರವಾಯ್ತು. ಸಾಮಾಜದಲ್ಲಿನ ಕೆಲವು ದ್ವಂದ್ವಗಳ ನಿದರ್ಶನವನ್ನ ಲೇಖಕರು ಇಲ್ಲಿ ನೀಡಿದ್ದಾರೆ. ಉದಾಹರಣೆಗೆ ಲೋಕೋದ್ಧಾರ ಮಾಡಿದಂತಹ ಕೆಲವು ಕಸುಬುಗಳಿಗೆ ಆಧುನಿಕತೆ ಎನ್ನುವ ಪಿಡುಗು ಬಂದು, ಆ ಕಸುಬು ಹಾಗೂ ಕಸುಬುದಾರರ ವಿನಾಶವಾದ ವಿಚಾರ ಒಂದು ಕಡೆಯಾದರೆ ಮಡಿಮೈಲಿಗೆಯನ್ನ ಮೈಗೂಡಿಸಿಕೊಂಡಂತಹ ಸಮಾಜ ಗಂಡಾಂತರವೊದಗಿದಾಗ ಅವುಗಳನ್ನ ತೂರಿಬಿಡುವಂತಹ ವಿಚಾರ ಮಗದೊಂದು ಕಡೆ. ಒಟ್ನಲ್ಲಿ ಕಥೆಯೊಂದೇ, ಭಾವ ಹಲವು!
Excellent writing by Vasudhendra.Chelu is a brilliant story which I have read recently.The rise of Venkamma gives us sweet experience but the fall gives sad wrapped by tears!