ಪ್ರಕಾಶ್ ರೈ ಅವರ "ಅವರವರ ಭಾವಕ್ಕೆ" ಓದಿ ತುಂಬಾ ಇಷ್ಟ ಪಟ್ಟು ಅವರ ಮತ್ತೊಂದು ಪುಸ್ತಕ ಓದಬೇಕೇಂದು ಆಸೆ ಆಗಿದ್ದ ನನಗೆ ಸಿಕ್ಕಿದ್ದೆ "ಇರುವುದೆಲ್ಲವ ಬಿಟ್ಟು "ಈ ಪುಸ್ತಕದಲ್ಲೂ ಪ್ರಕಾಶ್ ರೈ ತಮ್ಮ ಜೀವನದ ಅನುಭವಗಳನ್ನು, ನಡೆದ ಘಟನೆಗಳನ್ನು ಹಾಗೂ ಜೀವನದ ಮೌಲ್ಯಗಳನ್ನು ,ಲೇಖನಗಳ ರೂಪದಲ್ಲಿ ಬಹಳ ಸುಂದರವಾಗಿ ಪ್ರಕಟಿಸಿದ್ದಾರೆ...ಇವರ ಬರವಣಿಗೆ ಶೈಲಿಯಲ್ಲಿ ಹಾಗೂ ಕಥೆ ಹೇಳುವ ಶೈಲಿಯಲ್ಲಿ ಏನೋ ಮ್ಯಾಜಿಕ್ ಇದ್ದಂತೆ ಅನಿಸುತ್ತದೆ...ಎಲ್ಲರಿಗಿಂತ ವಿಭಿನ್ನ ಯೋಚನೆ ಇವರ ಬರಹಗಳಲ್ಲಿ ಇದೆ ಎಂದು ಓದಿದ ಮೇಲೆ ಅನಿಸುತ್ತದೆ. ಒಂದೊಂದು ಲೇಖನವು ಅವರ ಜೀವನದಲ್ಲಿ ನಡೆದ ಘಟನೆಗಳನ್ನು ನೆನಪಿಸುತ್ತಾ ಕೊನೆಯಲ್ಲಿ ಜೀವನದ ಸಿದ್ಧಾಂತಗಳನ್ನು ಬದುಕಿನ ಮೌಲ್ಯಗಳನ್ನು,ಹಾಗೂ ವೈಯಕ್ತಿಕ ಜೀವನವನ್ನು ಬಹಳ ಸುಂದರವಾಗಿ ತೆರೆದಿಟ್ಟಿದ್ದಾರೆ ಲೇಖಕರು.ಇದರಲ್ಲಿ ಭಾವನಾತ್ಮಕ ವಿಷಯಗಳು ಜಾಸ್ತಿ ಇದ್ದು ಲೇಖಕರು ಮನಸ್ಸು ಬಿಚ್ಚಿ ಬರೆದಿದ್ದಾರೆ ಎನ್ನುವುದರಲ್ಲಿ ಅನುಮಾನವಿಲ್ಲ.ಇದು ಓದಲೇಬೇಕಾದ ಪುಸ್ತಕವಂತೂ ಹೌದು