Jump to ratings and reviews
Rate this book

ಪ್ಯಾಪಿಲಾನ್ (೩) | Pappilon

Rate this book
Translated work

Unknown Binding

8 people are currently reading
108 people want to read

About the author

K.P. Poornachandra Tejaswi

58 books1,100 followers
K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.

Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.

He has won several awards for his contribution to literature such as the Rajyotsava and Kannada Sahitya Academy awards.

Poornachandra Tejaswi died of cardiac arrest at the age of 69

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
43 (55%)
4 stars
26 (33%)
3 stars
9 (11%)
2 stars
0 (0%)
1 star
0 (0%)
Displaying 1 - 6 of 6 reviews
Profile Image for Rekha Her Spirit.
34 reviews28 followers
February 13, 2022
ನನ್ನ ಜೀವನದಲ್ಲೇ ನಾ ಓದಿದ ಅತ್ಯದ್ಭುತ (Best) ಕೃತಿ ಇದು!
ನಿಮ್ಮ ಆತ್ಮೀಯರಲ್ಲಿ, ಪರಿಚಯದವರಲ್ಲಿ, ಜೀವನದಲ್ಲಿ ಬಹಳವೇ ಸೋತವರು, ಮೋಸ ಹೋದವರು, ತುಳಿಯಲ್ಪಟ್ಟವರಿದ್ದರೆ ಖಂಡಿತ ಇದನ್ನು ಓದಲು ಸಲಹೆ ನೀಡಿ. ಅಂಥವರಿಗೆ ಈ ಕೃತಿ ಮುಂದಕ್ಕೆ ಬೇಕಾದ ಮನೋಭಾವ (attitude) ಅಣಿಗೊಳಿಸಿ, ಆತ್ಮವಿಶ್ವಾಸ ಹುರುಪುಗೊಳಿಸಿ, ಹೊಸ ಚೈತನ್ಯವನ್ನು ತುಂಬಿ, ಅಗತ್ಯವಿರುವ ಹೊಸ ಆಲೋಚನೆಯ, ಕ್ರಿಯೆಗಳ ದಿಕ್ಕನ್ನು ತೋರಿಸಿ ಕೊಡುತ್ತದೆ!

ಅಷ್ಟೇಕೆ ಪ್ರತಿಯೊಬ್ಬ ಜೀವನ ಪ್ರೇಮಿಯೂ, ಪುಸ್ತಕ ಪ್ರೇಮಿಯೂ ಓದಲೇ ಬೇಕಾದ ಪುಸ್ತಕವಿದು ❤️❤️❤️

ಖೈದಿಗಳ ಮೇಲೆ ಸಾಮಾನ್ಯವಾಗಿ ಈ ಸಮಾಜಕ್ಕಿರುವ ಒಂದೇ ಅಭಿಪ್ರಾಯ, ಅಂದರೆ, ದುರಭಿಪ್ರಾಯವನ್ನು ಬದಲಾಯಿಸುತ್ತದೆ, ಈ ಕುರಿತಂತೆ ನಮ್ಮಲ್ಲಿರುವ ತಿಳುವಳಿಕೆ ಹಾಗೂ ಅನುಭವಗಳ ಕೊರತೆಯನ್ನೂ ಎತ್ತಿ ತೋರಿಸುತ್ತದೆ, ಅದು ಈ ಕೃತಿಯ ಯಶಸ್ಸೂ ಹೌದು!

ಅನ್ಯಾಯ, ದೌರ್ಜನ್ಯಗಳ ಪರಾಕಾಷ್ಠೆ ತಿಳಿಯಬೇಕೆಂದರೆ, ಕರುಣೆ, ಮಾನವೀಯತೆಗಳ ಅಗತ್ಯದ ಪಾಠ ಕಲಿಯಬೇಕೆಂದರೆ ಇದನ್ನೋದಬೇಕು!

ಅಪರಾಧಿಗಳಿಗೂ, ಯಾರದೋ ಅಪರಾಧಗಳಿಗೆ ಬಲಿಪಶುಗಳಾದವರಿಗೂ ಮುಂದೆ ಬದುಕು, ದಾರಿಗಳಿಲ್ಲ ಎಂಬ ಮನಸ್ಥಿತಿಯ ಬಹುಪಾಲು ಜನರಿಗೆ, ವೆನಿಜುವೆಲಾದಂಥ ವಿಶಾಲ ಮನಸಿನ, ದೂರದೃಷ್ಟಿಯ ದೇಶಗಳು ಕೊಡುವ ಹೊಸ ಬದುಕು - ಒಳ್ಳೆಯ ಜನರ, ಒಳ್ಳೆಯ ಸಮಾಜದ ಸಾಧ್ಯತೆಯ ಕುರಿತು ಭರವಸೆ ಹುಟ್ಟಿಸುತ್ತವೆ. ಅದು ಸಾಧ್ಯವಾಗುವುದು, ಸಾಧ್ಯವಾಗಿದ್ದು, ಪ್ಯಾಪಿಲಾನ್ ಹೇಳುವಂತೆ ಅಂತಹ ದೇಶ ನಡೆಸುವ ಮಹಾನ್ ನಾಯಕರಿಂದ!

ಈ ನಿಜ ಕಥೆಯ ನಾಯಕ ಪ್ಯಾಪಿಲಾನ್ ಮಹಾ ಸಾಹಸಿ, ಜೀವನ ಪ್ರೇಮಿ, ಬಲು ಬುದ್ಧಿವಂತ. ಅವನ ಈ ಎಲ್ಲಾ ಸಂಗತಿಗಳೇ ಅವನೊಬ್ಬ ಒಳ್ಳೆಯ ಬರಹಗಾರನಾಗಲೂ ಕಾರಣವೂ ಆಗಿರುವುದು.

ಇಂಥಾ ಮಹೋನ್ನತ ಕೃತಿ ಕನ್ನಡಕ್ಕೆ ಬರಲು ಕಾರಣರಾದ ಪೂರ್ಣಚಂದ್ರ ತೇಜಸ್ವಿ ಹಾಗೂ ಪ್ರದೀಪ್ ಕೆಂಜಿಗೆಯವರನ್ನ (ಪುಸ್ತಕ ಕೆಳಗಿಡಲೇ ಆಗದಂತೆ ಚಂದದ ಅನುವಾದ ಮಾಡಿದ್ದಾರೆ) ನೆನೆಯದಿದ್ದರೆ ನಾವು ನಿಜವಾದ ಪುಸ್ತಕಪ್ರೇಮಿಗಳಲ್ಲ 🙂
Profile Image for Sanjay Manjunath.
200 reviews10 followers
September 8, 2024
ಮೊದಲೆರಡು ಭಾಗದಲ್ಲಿ ಸ್ವತಂತ್ರ ಜೀವನಕ್ಕೆ ಹೋರಾಡುವ ಪ್ಯಾಪಿಯು, ಅದರಲ್ಲಿ ಯಶಗಳಿಸಿ ವೆನೆಜುವೆಲಾ ದೇಶದ ಒಂದು ಸಣ್ಣ ಹಳ್ಳಿಯಲ್ಲಿ ಸ್ವತಂತ್ರ ಜೀವನಕ್ಕೆ ಅಡಿಯಿಡುತ್ತಾನೆ.

ಅಲ್ಲಿಂದ ಮತ್ತೊಂದು ಮಗ್ಗುಲಿಗೆ ಬದಲಿಸುವ ಅವನ ಜೀವನ ಅನೇಕ ಸಂಗತಿಗಳಿಗೆ, ಅನೇಕ ತಿರುವುಗಳಿಗೆ ಸಿಲುಕಿ ಸಾಗುತ್ತಾ ಹೋಗುತ್ತೆ.

ಮೊದಲಿಗೆ ಚಿನ್ನದ ಗಣಿಯಲ್ಲಿ ಕೆಲಸ ಸಿಗುತ್ತದೆ. ಆದರೆ ಅಲ್ಲಿ ಕೆಲಸಕ್ಕಿಂತ ಹೆಚ್ಚಾಗಿ ಚಿನ್ನದ ಮೇಲೆ ಮೋಹಗೊಳ್ಳುತ್ತಾನೆ. ಅದಕ್ಕಿಂತ ಮೊದಲು ಮಾರಿಯಾ ಎಂಬ ಹರೆಯದ ಚೆಲುವೆಯೊಂದಿಗೆ ಅವನ ಸರಸ ಸಲ್ಲಾಪ, ಪ್ರೇಮಮನ್ನೊಳಗೊಂಡ ಜೀವನ ಸಾಗುತ್ತಿರುತ್ತದೆ. ಚಿನ್ನದ ಮೇಲಿನ ಆಸೆ ತೊರೆದು ಪಟ್ಟಣ ಸೇರುವ ಸನ್ನಾಹದಲ್ಲಿದ್ದಾಗ ಯಾವುದೋ ಕಾರಣದಿಂದ ಅದು ಮುಂದುವರಿಯುವುದಿಲ್ಲ.
ಮತ್ತೆ ಹಳ್ಳಿಗೆ ಹಿಂದಿರುಗುವ ಅವನು, ಮತ್ತೊಂದು ಸಾಹಸಮಯ ಹೋರಾಟಕ್ಕೆ ಧುಮುಕುತ್ತೇನೆ. ಅದು ಒಂದು ಜೂಜಿನ ದಂಧೆ. ಅಲ್ಲಿ ಸಿಗುವ ವಿಚಿತ್ರ ವ್ಯಕ್ತಿಗಳು, ವಿಚಿತ್ರ ಸನ್ನಿವೇಶಗಳು ಎಲ್ಲವೂ ವಿಚಿತ್ರ ತೆರನಾದವೆ. ಅಲ್ಲಿಂದ ಹೊರಬರುವ ಅವನು ನಂತರ ಪಟ್ಟಣಕ್ಕೆ ಹೊರಡುತ್ತಾನೆ.

ಅಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದಾಗ ಅಚಾನಕ್ಕಾಗಿ ಸಿಕ್ಕ ಗೆಳೆಯನಿಂದ ಅಲ್ಪಾವಧಿಯಲ್ಲಿ ಐಶ್ವರ್ಯವಂತನಾಗುವ ಬ್ಯಾಂಕ್ ದರೋಡೆ ಮಾಡುವಂಥ ಘಟನೆ ಸಂಭವಿಸುತ್ತದೆ. ಆದರೆ ಅದು ಕೂಡ ಫಲಿಸುವುದಿಲ್ಲ.

ಹೀಗೆ ಸಾಗುತ್ತಿದ್ದ ಜೀವನದಲ್ಲಿ ಮತ್ತೊಬ್ಬ ಗೆಳೆಯನಿಂದ ಇನ್ನೊಮ್ಮೆ ಹಣಗಳಿಸುವುದಕ್ಕೆ ಅವಕಾಶ ಸಿಗುತ್ತದೆ. ಅದು ಕೂಡ ಕಳ್ಳತನವೇ.
ಅವರಂದುಕೊಂಡಂತೆ ಎಲ್ಲವೂ ಆಗುತ್ತದೆ. ಹಣವನ್ನು ಒಂದು ಕಡೆ ಭದ್ರಪಡಿಸುತ್ತಾನೆ ಪ್ಯಾಪಿ. ಆದರೆ ಪೊಲೀಸರಿಂದ ಬಂಧನಕ್ಕೊಳಗಾಗುತ್ತಾರೆ. ಆ ಬಂಧನದಿಂದ ಹೊರಬರುವುದು ಮತ್ತೊಮ್ಮೆ ಹುಟ್ಟಿ ಬಂದಂತಾಗುತ್ತದೆ. ಆದರೂ ಆ ದರೋಡೆ ಹಣ ಪ್ಯಾಪಿಗೆ ಧಕ್ಕುವುದಿಲ್ಲ.

ಇನ್ನೊಮ್ಮೆ, ಕ್ರಾಂತಿಯೊಳಗೆ ಇಷ್ಟವಿಲ್ಲದಿದ್ದರೂ ಸೇರಿಕೊಂಡು, ಅದೂ ಕೂಡ ಫಲಿಸದೆ ಹೊರಬರುತ್ತಾನೆ.

ಅಡುಗೆ ಭಟ್ಟನಾಗಿ ಸೇರಿಕೊಂಡು, ನಂತರ ಅದೇ ಕಂಪೆನಿ ವಹಿಸಿದ ತೈಲ ನಿಕ್ಷೇಪದ ಹುಡುಕಾಟದಲ್ಲಿ ಆದಿವಾಸಿಗಳ ನಾಡಲ್ಲಿ ಸಿಕ್ಕಿಹಾಕಿಕೊಂಡು, ಅಲ್ಲೂ ತನ್ನ ಚತುರತೆಯಿಂದ ಬಚಾವಾಗಿ, ಕೆಲಸವನ್ನು ಮುಗಿಸಿ ಕಂಪೆನಿಗೆ ದೊಡ್ಡ ಸಹಾಯವನ್ನೇ ಮಾಡುತ್ತಾನೆ ಮತ್ತು ಅದರಿಂದ ಹಣವನ್ನು ಗಳಿಸುತ್ತಾನೆ.

ಇಷ್ಟೆಲ್ಲ ಆದರೂ ಮನಸ್ಸಿಗೆ ಇನ್ನೂ ಏನೂ ಬೇಕೆನ್ನುವ
ಪ್ಯಾಪಿಯು ಕಂಪನಿಯಿಂದ ಹೊರಟು ನಿಲ್ಲುತ್ತಾನೆ.

ಹೊರಬಂದ ನಂತರ ಅವನ ಬಾಳಲ್ಲಿ ರೀಟಾ ಎಂಬ ಮಹಿಳೆಯಿಂದ ಹೊಸ ಹರುಷವೇ ತುಂಬುತ್ತದೆ. ಅವರಿಬ್ಬರೂ ಪ್ರೇಮಿಸುತ್ತಾರೆ, ಮದುವೆಯಾಗುತ್ತಾರೆ, ನೈತಿಕತೆಯಿಂದ ದುಡಿಯುತ್ತಾರೆ, ಹಣ ಗಳಿಸುತ್ತಾರೆ. ವೆನಿಜುವೆಲಾ ದೇಶದ ಒಬ್ಬ ಗೌರವಾನ್ವಿತ ದಂಪತಿಗಳಿಗಾಗಿ ಬದುಕುತ್ತಾರೆ.

ಇಷ್ಟರ ನಡುವೆ ರೀಟಾ, ಪ್ಯಾಪಿಯ ಕುಟುಂಬವನ್ನು ಹುಡುಕಿ ಅವರೆಲ್ಲರನ್ನೂ ಬರಮಾಡಿಕೊಂಡು ಪ್ಯಾಪಿಗೆ ಸಂಭ್ರಮವನ್ನು ತರುತ್ತಾಳೆ.

ನಂತರ ಫ್ರಾನ್ಸ್ ದೇಶವು ಅವನಿಗೆ ದೇಶಕ್ಕೆ ಬರಲು ಒಪ್ಪಿಗೆ ಕೊಡುತ್ತದೆ. ಅಲ್ಲಿಗೆ ಹೋದ ಅವನು ತನ್ನದಲ್ಲದ ತಪ್ಪಿನಿಂದ ಇಷ್ಟು ವರ್ಷ ಪಡಿಪಾಟಲಿಗೆ ಕಾರಣವಾದ ಆ ಕೊಲೆಯ ಬಗ್ಗೆ ತನಿಖೆ ನಡೆಸಿ, ವಿಷಯಗಳನ್ನು ಗಳಿಸಿಕೊಳ್ಳುತ್ತಾನೆ.

ಒಟ್ಟಾರೆ ಪ್ಯಾಪಿಯ ಜೀವನ, ಸಂಘರ್ಷಗಳಿಂದ ಕೂಡಿದ ಹೋರಾಟದ ಬದುಕಾದರೂ, ಜೀವನದ ಎಲ್ಲಾ ರಸಪಾಕವನ್ನೊಳಗೊಂಡ ಅದ್ಭುತ ಬದುಕೆನ್ನಬಹುದು.

ನಾನಿಲ್ಲಿ ಈ ಕೃತಿಯ ಬಗ್ಗೆ ಬರೆದಿರುವುದು ತುಂಬ ಕಮ್ಮಿ. ಅದರ ರಸಸ್ವಾದನೆ ತುಂಬ ಹೆಚ್ಚೆ ಇದೆಯೆನ್ನಬಹುದು.

ಮೊದಲೆರಡು ಭಾಗಕ್ಕಿಂತ ಮೂರನೆಯ ಭಾಗದಲ್ಲಿ ಸ್ವಲ್ಪ ಉತ್ಪ್ರೇಕ್ಷೆ ,ಕೆಲವು ವಿಚಿತ್ರ ಸಂಘಟನೆಗಳಿಂದ ಕೂಡಿದೆ. ಕೆಲವನ್ನು ನಂಬುವುದು ಕಷ್ಟ ಕೂಡ.

ಒಟ್ಟಾರೆ ಜೀವನ ಪ್ರೀತಿಯೆಂದರೇನು ಅಂತ ತಿಳಿಯಲು ಮತ್ತು ಕನ್ನಡದ ಮೊದಲ ಓದು ಶುರುಮಾಡುವ ಬಯಸವವರು ಓದಲೇ ಬೇಕಾದ ಪುಸ್ತಕವಿದು.

ಒಂದೊಳ್ಳೆ ಪುಸ್ತಕ ನೀಡಿದ ತೇಜಸ್ವಿಗೆ (ಅವರ ಕಾರ್ಯ ಇದರಲ್ಲಿ ಜಾಸ್ತಿ ಇಲ್ಲದೇ ಇದ್ದರೂ ಅಲ್ಲಲ್ಲಿ ಬರುವ ಕೆಲವು ಕನ್ನಡತನ ಪದಗಳು ಅವರದೇ ಎನ್ನಬಹುದು) ಮತ್ತು ಪ್ರದೀಪ್ ಕೆಂಜಿಗೆ ಅವರಿಗೆ ಧನ್ಯವಾದಗಳು.
This entire review has been hidden because of spoilers.
Profile Image for Swathi Kamath.
22 reviews
January 29, 2021
The papillon series is one of the best escape series I have ever read. This book focuses so much on the importance of a proper judicial system. Punishing even a single innocent could be so grave. The way the whole espace and the life afterwards has been jotted down is so amazing. Characters come to life with this kind of narration. But of all the three books in the series, maybe this is the one that was the least gripping. It could be because the escape sequence was already over in the previous book and this one focused more on his revenge and the ways he plans to take the revenge.
This entire review has been hidden because of spoilers.
Profile Image for Gowrav Shenoy.
18 reviews
June 12, 2019
ಹೆನ್ರಿ ಶರಾರೆ ಆಲಿಯಾಸ್ ಪ್ಯಾಪಿಲಾನ್ ನ ಸಾಹಸಗಾಥೆ. ಸುಳ್ಳು ಕೊಲೆಯ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ತಳ್ಳಲ್ಪಟ್ಟು, ಭೀಕರ ಜೈಲುಗಳಲ್ಲಿ ದಶಕಗಳಷ್ಟು ಹೋರಾಟ ನಡೆಸಿದ ಪ್ಯಾಪಿ ಕೊನೆಗೊಮ್ಮೆ ಸ್ವತಂತ್ರನಾಗುತ್ತಾನೆ. ತನ್ನ ಮೇಲಾದ ದೌರ್ಜನ್ಯಕ್ಕೆ ಪ್ರತೀಕಾರ ತೋರುವ ಆತನ ಮನಸ್ಥಿತಿ ಕ್ರಮೇಣ ಬದಲಾಗಿ, ಸಮಾಜದಲ್ಲಿ ಗಣ್ಯವ್ಯಕ್ತಿಯಾಗಿ ಬದಲಾಗುತ್ತಾನೆ. ಇದು ಒಟ್ಟು ಕತೆಯ ಒಟ್ಟು ರೂಪ, ಸ್ವಾರಸ್ಯವೆನಿಸುವುದು ಅದಲ್ಲ, ಆತನ ಕೆಚ್ಚೆದೆಯ ಹೋರಾಟ, ಹಲವಾರು ವರ್ಷಗಳ ಏಕಾಂತ ಶಿಕ್ಷೆ, ಬ್ಲಾಕ್ ಹೋಲ್ ನಂತಹ ನರಕದ ಶಿಕ್ಷೆ, ಹಲವಾರು ಪಲಾಯನದ ಪ್ರಯತ್ನ, ತಂತ್ರಗಾರಿಕೆ, ವೈಫಲ್ಯ, ಸಾವಿರಾರು ಮೈಲಿಗಳ ತೇಲುವ ತೆಪ್ಪದ ಯಾನ, ಹಲವು ಬಾರಿ ಪಲಾಯನಗೊಂಡಾಗಲೂ ಸಾಮಾನ್ಯ ಬದುಕನ್ನು ನಿರಾಕರಿಸಿ ಮತ್ತೆ ಸೆಣಸಾಟ, ಮತ್ತೆ ಕಾಣುವ ಜೈಲು, ಸೋಲು, ಭ್ರಷ್ಟ ವ್ಯವಸ್ಥೆ, ಯೋಚಿಸಲಾಗದ ರೀತಿಯಲ್ಲಿ ದೊರೆಯುವ ಸಹಾಯ ಹಸ್ತ, ಆತನ ಸ್ನೇಹ, ವೃತ್ತಿಪರತೆ, ಧೈರ್ಯ, ಕೊನೆಗೊಮ್ಮೆ ಜೀವನದಲ್ಲಿ ಒಂದೊಂದಾಗಿ ಹೆಚ್ಚಿನದನ್ನು ಗಳಿಸಿದ ಸಾಹಸದ ಕತೆ.

ಕಷ್ಟಗಳು ಪ್ಯಾಪಿಯನ್ನು ಅದೆಷ್ಟು ಬಂಡೆಯಾಗಿಸಿದ್ದವೆಂದರೆ ಭಾವನೆಗಳು, ನೋವು, ಸಾವು, ಹಸಿವು, ಶಿಕ್ಷೆ ಇದ್ಯಾವುದೂ ಗಣನೆಗೆ ಬರದಂತೆ. ಸರಣಿಯ ಮೂರು ಕೃತಿಗಳನ್ನು ಓದಿದಾಗ ಇಷ್ಟೊಂದು ಕಷ್ಟಗಳು ಒಬ್ಬನಿಗೇ ಬರುವುದುಂಟೇ ಎನ್ನುವ ಪ್ರಶ್ನೆ ಖಂಡಿತ ಬರುವುದು, ಅದೆಷ್ಟು ದೌರ್ಭಾಗ್ಯವಿರಬಹುದು ಎಂದನಿಸುತ್ತದೆ. ಹಾಗೆಂದು ಲೇಖಕರು ಎಂದಿಗೂ ಪ್ಯಾಪಿಯ ಮೇಲೆ ಕರುಣೆ ಬರುವಂತೆ ಚಿತ್ರಿಸಿಲ್ಲ, ಬದಲಾಗಿ ಪ್ರತೀ ಬಾರಿ ಏಟು ಬಿದ್ದಾಗಲೂ ಹೇಗೆ ಪ್ಯಾಪಿ ಮೈ ಕೊಡವಿ ನಿಂತ ಎನ್ನುವುದನ್ನು ನಿರೂಪಿಸಿದ್��ಾರೆ. ಕಷ್ಟಪಟ್ಟು ಬಂದ ಸ್ವಾತಂತ್ರ್ಯ, ಅದನ್ನು ಅನುಭವಿಸಲಾಗದ ಚಡಪಡಿಕೆ, ವ್ಯವಸ್ಥೆಯ ಮೇಲಿದ್ದ, ಸಿಟ್ಟು ಸೇಡು, ಪ್ರತೀ ಬಾರಿ ಸೋತಾಗಿನ ಹತಾಶೆ, ಎಲ್ಲದ್ದಕ್ಕೂ ಹೆಚ್ಚಾ���ಿ ಇನ್ನು ಕಳೆದುಕೊಳ್ಳಲು ಏನೂ ಉಳಿದಿಲ್ಲ ಎನ್ನುವಂತಹ ಮನೋಧರ್ಮದ ಪ್ರಯತ್ನ. ಪ್ರತೀ ದಿನವೂ ಸಾವಿನೊಂದಿಗೆ ಸೆಣಸಾಡುವ ಬದುಕು. ಭೂಗತಲೋಕದ ಅಂಗಳದಲ್ಲೇ ಬೆಳೆದರೂ ಅಹಿಂಸೆ, ಶೋಷಿತರ ಪರವಾಗಿ ದನಿಯೆತ್ತುವ ನಡೆ, ವಿಚಿತ್ರವೆನ್ನಿಸುವ ನಡವಳಿಕೆಗಳು, ಹಲವೊಮ್ಮೆ ಎಲ್ಲವೂ ಸರಿಯಿದ್ದಾಗಲೂ ಮತ್ತೆ ಕಷ್ಟಗಳೆಡೆಗೆ ಮುಖ ಮಾಡುತ್ತಿದ್ದ ಪ್ಯಾಪಿಯನ್ನು ನೋಡಿದಾಗ ಕತೆಯಂತೂ ಜಿಗುಟೆನಿಸುವುದು. ಕತೆಯಾದರೆ ಸರಿ, ಆದರೆ ಇದು ಹೆನ್ರಿಯ ಜೀವನ, ನಾವು ನಿರೀಕ್ಷಿಸುವ ಸ್ಕ್ರಿಪ್ಟೆಡ್ ಕತೆಯಲ್ಲ.

ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಲೊಂದಾಗು ಎನ್ನುವ ಗುಂಡಪ್ಪನವರ ಮಾತಿಗೆ ಅನ್ವರ್ಥವೆನ್ನುವಂತಹ ಪ್ಯಾಪಿಯ ಹೋರಾಟದ ಕತೆ, ಪ್ರದೀಪರ ಅನುವಾದ ಓದಿಸಿಕೊಂಡು ಹೋಗುತ್ತದೆ. ಇಷ್ಟು ಸಾಕು, ಮಿಕ್ಕಿದ್ದು ನೀವು ಓದಿ. ಪುಸ್ತಕವೂ ನನ್ನ ಬಳಿ ಇದೆ ಎರವಲು ಪಡೆಯುವುದಾದರೆ.
Profile Image for Bharath Manchashetty.
122 reviews2 followers
December 22, 2025
“ಆರು ದಿನದಲ್ಲಿ ಪ್ಯಾಪಿಲಾನ್-೧,೨,೩ ಓದಿದ ಮೇಲೆ ನನ್ನಮೇಲೆ ಗಾಢವಾದ ಪರಿಣಾಮ ಬೀರಿದೆ ಎಂದರೆ ತಪ್ಪಿಲ್ಲ. self confidence ಜಾಸ್ತಿ ಆಯ್ತು ಸ್ವಲ್ಪ ಅನ್ಕೊಳ್ಳಿ ಮತ್ತು ಓದುಗನ ಪ್ರತೀ ನಿಮಿಷಕ್ಕೂ, ಪುಟಕ್ಕೂ ಅರ್ಥ ಕೊಡುವಂತಹ ಕೃತಿ.

ಜೈಲಿಂದ ತಪ್ಪಿಸಿಕೊಂಡು ಒಂದು ದೇಶದ ಪ್ರಜೆಯಾಗಿ , ಉತ್ತಮ ಜೀವನ ಕಟ್ಟಿಕೊಳ್ಳುವ ಹಸಿವು , ತಂದೆ-ತಾಯಿಯನ್ನು ಕಾಣುವ ಹಂಬಲ ಮತ್ತು ತನ್ನ ದೇಶಕ್ಕೆ ಮರುಹೋಗಿ ಅಲ್ಲಿನ ವಿದ್ಯಾಮಾನಗಳ ಜೊತೆ ತನ್ನನ್ನು ಸಮೀಕರಿಸಿಕೊಂಡು ತನ್ನ ಬಾಲ್ಯದಲ್ಲಿನ ಮೊಂಡುತನ ಹೇಗೆ ತನ್ನ ಕ್ರೂರ ವ್ಯವಸ್ಥೆಯ ತೆಕ್ಕೆಗೆ ಸೆಳೆದುಕೊಂಡಿತು ಎನ್ನುವುದು ಈ ಮೂರನೇ ಭಾಗದಲ್ಲಿದೆ.

ಇಂತಹ ಸಾಹಸಮಯ ಬದುಕುವುದು ಎಲ್ಲರಿಗೂ ಸಾಧ್ಯವಿಲ್ಲವೆನಿಸುತ್ತೆ. ಬದುಕಿನಲ್ಲಿ ಬರುವ ತೊಂದರೆಗಳಿಗೆ ಸೋತು ಜೀವನವೇ ಮುಗಿದುಹೋಯ್ತು ಎಂದುಕೊಂಡು ಬದುಕನ್ನು ಮೊಟಕುಗೊಳಿಸಿಕೊಳ್ಳಬೇಕು ಎಂದು ಯೋಚಿಸುವ ಪ್ರತಿಯೊಬ್ಬರೂ ಈ ಕೃತಿ ಓದಿದಾದರೆ ಆತ್ಮಹತ್ಯೆ ಎನ್ನುವ ಕೆಟ್ಟ ಬೀಜ ಮನಸ್ಸಿನಲ್ಲಿ ಸುಳಿಯೋದಕ್ಕೆ ಸಾಧ್ಯವೇ ಇಲ್ಲವೆನಿಸುತ್ತೆ.

ಒಬ್ಬ ವ್ಯಕ್ತಿ ಹಲವು ಸೋಲುಗಳನ್ನು ಕಂಡರೂ ಹತಾಶೆ ಕಳೆದುಕೊಳ್ಳದೆ ಮುಂದೆ ನಡೆಯುವ ಬದುಕಿನ ಹೋರಾಟವನ್ನು ಹೆದರಿಸರು ಬೇಕಾಗುವ ಸ್ಥೈರ್ಯವನ್ನು ಹೆಚ್ಚಿಸುವ ಈ ಕೃತಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯಾಗಿದ್ದಾಗಲೇ ಓದಿದರೆ ಉತ್ತಮ ಎನ್ನುವುದು ನನ್ನ ಭಾವನೆ.”

ತೇಜಸ್ವಿಯವರ ಜೀವನದಲ್ಲಿನ ವೈವಿಧ್ಯ ದೃಷ್ಟಿ ಕೋನಗಳು ಈ ಕೃತಿಯನ್ನು ಕನ್ನಡದಲ್ಲಿ ಭಾವಾನುವಾದ ಮಾಡಲು ಪ್ರೇರೇಪಿಸಿದೆ ಎಂದರೆ ತಪ್ಪಾಗಲಾರದು. ಇಂತಹ ಅಪರೂಪದ ಆತ್ಮಕಥಾನಕವನ್ನು ಕನ್ನಡೀಕರಿಸಿದ ತೇಜಸ್ವಿ ಮತ್ತು ಪ್ರದೀಪ ಕೆಂಜಿಗೆ ಅವರಿಗೆ ಅನಂತ ಧನ್ವ್ಯವಾದಗಳು.

-ಭರತ್ ಎಂ.
ಓದಿದ್ದು ೨೨.೧೨.೨೦೨೫
Profile Image for Sampat Badiger.
28 reviews
January 14, 2023
ಜೀವನದಲ್ಲಿ ಮನುಷ್ಯನಿಗೆ ಭರವಸೆ ತುಂಬಾ ಮುಖ್ಯ, ಮನುಷ್ಯನ ಜೀವನದಲ್ಲಿ ಏಳು ಬೀಳು ಸಹಜ. ಅದನ್ನು ಎದುರಿಸಲು ಚೈತನ್ಯ ಬೇಕಾಗುತ್ತದೆ. ಇಂತಹ ಪುಸ್ತಕ ಅದನ್ನು ಒದಗಿಸುತ್ತದೆ ಎಂಬುದು ನನ್ನ ಅಭಿಪ್ರಾಯ.
Displaying 1 - 6 of 6 reviews

Can't find what you're looking for?

Get help and learn more about the design.