Jump to ratings and reviews
Rate this book

ಫಣಿಯಮ್ಮ

Rate this book
ಹಸಿಯಿದ್ದಳು ಬಿಸಿಯಾದಳು
ಸಸಿಯಿದ್ದ ಹುಡುಗಿ
ಹುಸಿಯರಿಯದ ಹುಡುಗಿ
......................................

ಪಾಡಾದಳು ಹಣ್ಣಾದಳು
ಮಣ್ಣಾದಳು ಹುಡುಗಿ
ನೆನಪಾದಳು ಕಥೆಯಾದಳು
ವ್ಯಥೆಯಾದಳು ಕಥೆಯಾದಳು
ಎದೆಯಲ್ಲಿಯೆ ಮಡಗಿ

- ಅಂಬಿಕಾತನಯದತ್ತ

104 pages, Unknown Binding

First published January 1, 1994

9 people are currently reading
142 people want to read

About the author

M.K. Indira

60 books19 followers
Malooru Krishnarao Indira (Kannada: ಮಾಳೂರು ಕೃಷ್ಣರಾವ್ ಇಂದಿರ; 5 January 1917 – 15 March 1994) was a well-known Indian novelist in the Kannada language. She has written novels like Phaniyamma which has won various prestigious awards. She started writing novels at the age of forty-five. Some of her novels have been made into movies.

Born to a prosperous agriculturist, her formal education lasted for seven years before she got married at the age of twelve to M. Krishna Rao. She studied Kannada poetry and also had a good knowledge of Hindi literature.

Indira's novels, Tungabhadra, Sadananda, Navaratna and Phaniyamma have won her the Kannada Sahitya Akademi awards. This annual award is given to the best Kannada literature of the year. In view of her contribution to literature, an award is constituted in Indira's name and is given to the best women writers.

Thejaswini Niranjana, has translated Phaniyamma to English, and this translation has won her the Sahitya Akademi of India award and more awards.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
20 (27%)
4 stars
37 (50%)
3 stars
15 (20%)
2 stars
1 (1%)
1 star
1 (1%)
Displaying 1 - 12 of 12 reviews
Profile Image for Vasanth.
115 reviews22 followers
January 11, 2026
ಮೂಕಜ್ಜಿಯನ್ನು ನೆನಪು ಮಾಡುವ ಫಣಿಯಮ್ಮ. ಹೌದು, ಮೂಕಜ್ಜಿಯಂತೆ ಫಣಿಯಮ್ಮನೂ ದೀರ್ಘ ಕಾಲ ಬದುಕಿ ಜೀವನದ ಸತ್ಯದರ್ಶನವನ್ನು ಮಾಡಿಸುವವರೇ.

ಒಂಬತ್ತನೇ ವಯಸ್ಸಿಗೆ ಮದುವೆಯಾಗಿ ಹತ್ತನೇ ವಯಸ್ಸಿಗೆ ಬಾಲ ವಿಧವೆಯೆನಿಸಿಕೊಂಡು ನೂರ ಹನ್ನೆರಡು ವರ್ಷಗಳು ಬದುಕಿದವರೊಬ್ಬರ ನೈಜ ಘಟನೆಗಳೇ “ಫಣಿಯಮ್ಮ” ಕಾದಂಬರಿಯಾಗಿದೆ. ಈ ಕಾದಂಬರಿಯ ಲೇಖಕಿಯಾದ ಎಂ ಕೆ ಇಂದಿರಾ ಅವರ ಅಜ್ಜನ ತಂಗಿಯಂತೆ ಫಣಿಯಮ್ಮ, ಅವರನ್ನು ಒಂದಷ್ಟು ವರ್ಷಗಳ ಕಾಲ ಹತ್ತಿರದಿಂದ ನೋಡಿ ಅರಿತು ಕೇಳಿ ತಿಳಿದ ಇತಿಹಾಸವನ್ನು ಇಲ್ಲಿ ನಾವು ಕಾಣಬಹುದು.

“ಫಣಿಯಮ್ಮ” ನೂರೈವತ್ತು ವರ್ಷಗಳ ಹಿಂದಿನ ಜೀವನ ಮತ್ತು ಸಾಮಾಜಿಕ ಕ್ರಮವನ್ನು ತಿಳಿಸುವ ಕಾದಂಬರಿ. ಸಮಾಜದ ಕಟ್ಟುಪಾಡುಗಳು ಮತ್ತು ಅತೀ ಮಡಿವಂತಿಕೆ ತನ್ನದಲ್ಲದ ಒಬ್ಬ ಹೆಣ್ಣಿನ ಪೂರ್ತಿ ಜೀವನವನ್ನೇ ಬಲಿ ಪಡೆಯುವುದನ್ನು ಇಲ್ಲಿ ನೋಡಬಹದು. ಸರಿಯೋ ತಪ್ಪೋ ಆದರೆ ಕಟ್ಟಾ ಸಂಪ್ರದಾಯನಿಷ್ಠರ ಕಾಲದಲ್ಲಿ ಹುಟ್ಟಿದ ಆಕೆ ಅಸಹಾಯಕಳು. ಆಕೆ ಎಷ್ಟು ಮುಗ್ಧೆ ಮತ್ತು ಅಸಹಾಯಕಳು ಎಂದರೆ, ಆಕೆಯ ಗಂಡ ಸತ್ತಾಗ ಸಂಪ್ರದಾಯದಂತೆ ಕೈತುಂಬ ತೊಟ್ಟ ಬಳೆ ಒಡೆಸುತ್ತಾರೆ. ಆಕೆ ಅಳ್ತಾಳೆ, ಗಂಡ ಸತ್ತದಕ್ಕಲ್ಲ ಮೊನ್ನೆಯಷ್ಟೇ ಜಾತ್ರೆಯಲ್ಲಿ ತೊಟ್ಟ ಹೂವಿನ ಬಳೆಗಳು ಅನ್ಯಾಯವಾಗಿ ಒಡೆದು ಹೋದವಲ್ಲ ಎಂದು. ಆಕೆಗೆ ಯಾವುದೇ ಬಂಧನವಿರಲಿಲ್ಲ, ಸಾಮಾಜಿಕ ಬಂಧನವಿತ್ತು. ಮುಟ್ಟನ್ನೂ ಹೊಲಸು ಎನ್ನುವ ನಿರ್ಲಿಪ್ತಿ ಆಕೆಗೆ ಬಂದಿತ್ತು, ಸಾಯುವವೆರೆಗೂ ಬೇರೆಯರಿಗೆ ತನ್ನನ್ನು ಸವೆಸಿಕೊಳ್ಳುವ ಫಣಿಯಮ್ಮ ಅಥವಾ ಅಂಚೆ ಅತ್ತೆ ಪುಣ್ಯ ಜೀವಿಯೇ.

ಎಂ.ಕೆ. ಇಂದಿರಾ ಅವರ ಬರವಣಿಗೆ ಮತ್ತು ನಿರೂಪಣೆ ಉತ್ಕೃಷ್ಟ ಮಟ್ಟದ್ದು, ಬರೀ ಎಂಬತ್ತೆಂಟು ಪುಟಗಳಲ್ಲಿ ಫಣಿಯಮ್ಮನ ಕಥೆಯಲ್ಲದೆ ಆಕೆಯ ಮನೆತನದ ಕಥೆ, ಆಗಿನ ಮಲೆನಾಡಿನ ಪರಿಸರ ಮತ್ತು ಪರಿಸ್ಥಿತಿ, ಬದಲಾದ ಜೀವನಶೈಲಿ, ಗೊಡ್ಡು ಸಂಪ್ರದಾಯ ಮತ್ತು ಮಡಿವಂತಿಕೆಯ ಪರಮಾವಧಿ ಇವೆಲ್ಲವನ್ನೂ ಅಚ್ಚುಕಟ್ಟಾಗಿ ಹಿಡಿದಿಟ್ಟಿದ್ದಾರೆ. ವಾರಾಂತ್ಯಕ್ಕೊಂದು ಒಳ್ಳೆಯ ಮತ್ತು ತೃಪ್ತಿಕರ ಓದು. ಇಷ್ಟವಾಯ್ತು, ಚಲನಚಿತ್ರವೂ ಇದೆಯಂತೆ, ನಾನು ನೋಡಿಲ್ಲ. ಸಾಧ್ಯವಾದ್ರೆ ಪುಸ್ತಕವನ್ನೇ ಓದಿ.

- ವಸಂತ್
೧೧/೦೧/೨೦೨೬
Profile Image for Gowthami.
31 reviews9 followers
May 17, 2025
ಸ್ವಾತಂತ್ರ್ಯ ಪೂರ್ವ ಬರೋಬ್ಬರಿ ನೂರ ಹನ್ನೆರಡು ವರ್ಷ ಬದುಕಿದ ಫಣಿಯಮ್ಮ ಎಂಬ ಮುಗ್ಧೆಯ ಕಥನ .

ಜೀವನ ಎಂದರೇನು? ಮದುವೆ ಎಂದರೇನು? ಮಕ್ಕಳು ಎಂದರೇನು ? ವೈಧವ್ಯ ಯಾಕೆ? ಗಂಡು ಮಕ್ಕಳಿಗೆ ಇಲ್ಲದ ಕಟ್ಟು ಕಾರ್ಪಣೆಗಳು ಹೆಣ್ಣಿಗೆ ಮಾತ್ರ ಯಾಕೆ ? ಇವೆಲ್ಲ ಪ್ರಶ್ನೆಗಳ ಹೊತ್ತು ಬದುಕಿದ್ದ , ಜೀವ ಸವೆಸಿದ್ದ , ಕೈಲಾದಷ್ಟು ಕೆಲಸ , ಸಹಾಯ ಮಾಡಿ ಒಬ್ಬರ ಮನಸ್ಸು ಎಂದಿಗೂ ನೋಯಿಸದ ಸಹನಾಮೂರ್ತಿ ಅದು. M.K ಇಂದಿರಾ ಅವರು ಅವರ ಅಜ್ಜನ ತಂಗಿಯ ಬಗ್ಗೆ ಸತ್ಯ - ಮಿಥ್ಯಗಳ ಜೊತೆಯಾಗಿಸಿ ಲಘು ಓದಿನಲ್ಲಿ ನಮಗೆ" ಅಂಚೆ - ಅತ್ತೆ" ಯನ್ನು ತಂದು ಮುಟ್ಟಿಸಿಬಿಟ್ಟರು.

9 ವರ್ಷದ ಮಗು ಅದು ಹಿರಿಯರ , ಸಮಾಜದ ಕಟ್ಟಪ್ಪಣೆಯಂತೆ ಬಾಲ ವಧುವಾದಳು. ಮದುವೆಯಾಗಿ ಮೂರು ತಿಂಗಳಿಗೆ ಬಾಲ ವಿಧವೆ , ಪುಟ್ಟ ಮಡಿ ಹೆಂಗಸಾದಳು ಆಕೆ .
ಬಳೆ, ಕುಂಕುಮ , ಹೂವು , ರಂಗು ರಂಗಿನ ಬಟ್ಟೆ , ಒಡವೆ , ಗೆಜ್ಜೆ ಹಾಕಿ ನಲಿಯ ಬೇಕಿದ್ದ ಹೆಣ್ಣಿಗೆ ಬಿಳಿ ಸೀರೆ , ತಲೆ - ಕೈ - ಕಾಲು - ಜೀವನ ಎಲ್ಲವನ್ನೂ ಬೋಳು ಮಾಡಿ ಕೂಡಿಸಿ ಬಿಟ್ಟರು .

ಹೂವಿನಂತೆ ಅರಳಿ, ಕಾಯಾಗಿ, ಹಣ್ಣಾಗಬೇಕಿದ್ದ ಜೀವವನ್ನು ಚಿವುಟಿ ಹಾಕಿದ್ದರು. ಇಷ್ಟೆಲ್ಲಾ ಆದರೂ ಕೆಲವು ಅಹಿತಕರ ಘಟನೆಗಳಿಗೆ ಸಾಕ್ಷೀ ಯಾದರೂ ಖಂಡ ತುಂಡವಾಗಿ ಮಾತಾಡಿ ಇತರರ ಮನ ನೋಯಿಸಿದ್ದು ಇಲ್ಲ . ಕಾಯಕವೇ ಕೈಲಾಸ ಎಂಬಂತಿದ್ದ ಹೆಣ್ಣು ಅದು.

19ನೇ ಶತಮಾನದಿಂದ 20ನೇ ಶತಮಾನದ ತನಕ ಆದ ಆಗು- ಹೋಗುಗಳು, ಸಾವು - ನೋವುಗಳು, ಪ್ರತೀ ಪೀಳಿಗೆಯಲ್ಲಿ ಆದ ಬದಲಾವಣೆಗಳು ಎಲ್ಲದಕ್ಕೂ ಮೂಕ ಪ್ರೇಕ್ಷಕಿಯಾಗಿದ್ದ "ಅಂಚೆ -ಅತ್ತೆ" ಜೀವನವನ್ನು ಒಮ್ಮೆ ಓದಿ .
Profile Image for Prashanth Bhat.
2,159 reviews139 followers
May 17, 2018
ಚಿಕ್ಕ ಪ್ರಾಯದಲ್ಲೇ ಮದುವೆಯಾದ ಫಣಿಯಮ್ಮ ಇನ್ನು ಪ್ರಸ್ತ ಆಗುವ ಮೊದಲೇ ಗಂಡನನ್ನು ಕಳಕೊಂಡು , ಸೂಲಗಿತ್ತಿ ,ಮನೆಗೆಲಸ ಮಾಡುವ ವಿಧವೆಯಾಗಿ ಜೀವನ‌ ನಡೆಸಬೇಕಾದ ಪರಿಸ್ಥಿತಿ ಗೆ ಬಂದ ಕತೆ ಇದು. ಕತೆ ಅನ್ನುವುದಕ್ಕಿಂತ ಅಂದಿನ ಬ್ರಾಹ್ಮಣ ಸಮಾಜದ ಚಿತ್ರಣ ಇದರಲ್ಲಿ ನಡೆದ ಘಟನೆಗಳು ಸತ್ಯ ಎಂದು ಲೇಖಕಿ ಹೇಳಿಕೊಂಡಿದ್ದಾರೆ. ಫಣಿಯಮ್ಮನ‌ ತರಹ ಬದುಕಿದ ಹಲವರ ನಾನು ಕಂಡಿದ್ದೇನೆ. ಬದುಕಿನ ಅರ್ಥವೇನು ಎಂದು ಗಾಢವಾಗಿ ಚಿಂತಿಸುವಂತೆ ಮಾಡುವ ಕಷ್ಟ ಕಾರ್ಪಣ್ಯಗಳ ಬದುಕು ಅವರದ್ದು
173 reviews22 followers
January 6, 2022
#ಅಕ್ಷರವಿಹಾರ_೨೦೨೨

ಕೃತಿ: ಫಣಿಯಮ್ಮ

ಲೇಖಕರು: ಎಂ.ಕೆ. ಇಂದಿರಾ

ಪ್ರಕಾಶಕರು: ಇಂದಿರಾ ಪ್ರಕಾಶನ, ಬೆಂಗಳೂರು


ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ ಬಾಲವಿಧವೆಯಾಗಿ ಬದುಕಿನುದ್ದಕ್ಕೂ ಸನ್ಯಾಸಿನಿಯಂತೆ ಬಾಳಿದ ಲೇಖಕಿಯ ಹತ್ತಿರದ ಸಂಬಂಧಿಯೋರ್ವರ ಜೀವನಗಾಥೆ ಈ ಕಾದಂಬರಿ. ಮುನ್ನುಡಿಯಲ್ಲಿ ಅವರೇ ಹೇಳಿಕೊಂಡಂತೆ ಅಲ್ಲಲ್ಲಿ ಕೆಲವು ಘಟನೆಗಳು ಮಾರ್ಪಾಡು ಆಗಿರುವುದರಿಂದ ಇದನ್ನು ಕಾದಂಬರಿ ಅಥವಾ ಜೀವನ ಚರಿತ್ರೆ ಎಂದು ನಿಖರವಾಗಿ ಹೇಳಲು ಬರುವುದಿಲ್ಲ. ಆದರೆ ಸನಾತನ ಧರ್ಮದಲ್ಲಿ ಆಚರಣೆಯಲ್ಲಿದ್ದ ಕೆಲವು ಮೂಢನಂಬಿಕೆಗಳು ಅಂಧಶ್ರದ್ಧೆಗಳು ಸ್ತ್ರೀಯರ ಜೀವನವನ್ನು ಅಂಧಕಾರದ ಕೂಪಕ್ಕೆ ತಳ್ಳುತ್ತಿತ್ತು ಎಂದು ಯಾವುದೇ ಮುಚ್ಚುಮರೆಯಿಲ್ಲದೆ ಬಿಡಿಸಿಡುತ್ತದೆ ಈ ಕೃತಿ.


ತನ್ನ ಎಂಟನೇ ವಯಸ್ಸಿನಲ್ಲಿ ಮದುವೆಯಾಗಿ ಮರುವರ್ಷ ಗಂಡ ಆಕಸ್ಮಿಕ ಸಾವನ್ನಪ್ಪಿದ ದಾರುಣ ಘಟನೆ ಫಣಿಯಮ್ಮನ ಜೀವನದ ಮುಂದಿನ ವಿಪ್ಲವಗಳಿಗೆ ನಾಂದಿ ಹಾಡುತ್ತದೆ. ಇಷ್ಟರಲ್ಲೇ ಕಾಕತಾಳೀಯ ಎಂಬಂತೆ ನಡೆದ ಎರಡು ಘಟನೆಗಳು ಅವಳ ಭವಿಷ್ಯದ ಮುನ್ಸೂಚನೆಯನ್ನು ಕೊಟ್ಟಿತ್ತು ಎಂಬ ಹುಂಬ ವಾದವನ್ನು ಇಂದಿನ ಕಾಲ ಘಟ್ಟದ ಜನರೂ ಒಪ್ಪಿಕೊಳ್ಳುವ ಮನಸ್ಥಿತಿ ಇದೆ. ತಾನು ಬದುಕಿತ್ತಿರುವ ಸಮಾಜದ ಕಟ್ಟುಪಾಡುಗಳು ಜೀವನವನ್ನು ನರಕಸದೃಶವನ್ನಾಗಿ ಮಾಡಿದರೂ,ಚಾಲ್ತಿಯಲ್ಲಿದ್ದ ಆಗಿನ ಕಾಲದ ನಂಬಿಕೆಗಳ ಕುರಿತಾಗಿ ಅನೇಕ ಪ್ರಶ್ನೆಗಳಿದ್ದರೂ, ಯಾವುದನ್ನು ಹೊರಗೆ ತೋರಗೊಡದೆ, ಅಂತರಂಗದಲ್ಲಿ ವಿಚಾರಗಳ ತಾಕಲಾಟ ಮತ್ತು ಹೊರಗಡೆ ಸಂಪ್ರದಾಯದ ಹೆಸರಿನಲ್ಲಿ ಆಗುತ್ತಿರುವ ಶೋಷಣೆಯ ವಿರುದ್ಧದ ಮೌನ ಹೋರಾಟದ ಬದುಕು ಆಕೆಯದ್ದು. ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಜೀವಿಸಿದ ಫಣಿಯಮ್ಮ ಆರಿಸಿಕೊಂಡ ದಾರಿ ತನ್ನ ಕುಟುಂಬದ ಮತ್ತು ಸಮಾಜದ ಸೇವೆ. ಅಸ್ಪೃಶ್ಯರ ನೆರಳು ಸೋಕಿದರೂ ಪಾಪವೆಂಬಂತಹ ಕಾಲದಲ್ಲಿ ಅವರ ಮನೆಯಲ್ಲಿ ಹೆರಿಗೆಗೆ ಸಹಾಯ ಮಾಡಿದ್ದು ಆಕೆ ಎಂತಹಾ ಗಟ್ಟಿಗಿತ್ತಿ ಎಂಬುದಕ್ಕೆ ಉದಾಹರಣೆ.


ಜೀವನಪೂರ್ತಿ ಕಷ್ಟನಷ್ಟಗಳನ್ನು ಎದುರಿಸಿದರೂ ಕಾಲಕಳೆದಂತೆ ಬದಲಾವಣೆಯ ಗಾಳಿ ಬೀಸತೊಡಗಿದಾಗ ಅದನ್ನು ಸಹ ಮೌನವಾಗಿ ಸ್ವೀಕರಿಸಿ ಸಹಮತವನ್ನು ತೋರಿಸುವ ಮೂಲಕ ಇತರ ಮಹಿಳೆಯರ ಬದುಕು ನರಕವಾಗದಂತೆ ತಡೆದು ಮಾದರಿಯಾದ ಫಣಿಯಮ್ಮನಂತಹ ಸ್ತ್ರೀಯರಿಗೆ ನಮೋ ನಮಃ. ಕಾದಂಬರಿಯ ಈ ಸಾಲುಗಳನ್ನು ಓದಿದಾಗ ಆಕೆಯ ವ್ಯಕ್ತಿತ್ವದ ಸರಳ ಪರಿಚಯ ಆಗಬಹುದು…..

"ತಿಂಗಳು ತಿಂಗಳು ಹಜಾಮನನ್ನು ಮುಟ್ಟಿಸಿಕೊಂಡು ಕೇಶಮುಂಡನ ಮಾಡಿಕೊಳ್ಳುವವರು ಮಡಿ. ಯಾರಿಂದಲೂ ಮುಟ್ಟಿಸಿಕೊಳ್ಳದ ಸಕೇಶಿಯರು ಮೈಲಿಗೆ".....


ಆ ಕಾಲಕ್ಕೆ ಮಠಮಂದಿರಗಳಲ್ಲಿ ನಡೆಯುತ್ತಿದ್ದ ಅವ್ಯವಹಾರ, ಶೈಶವಾವಸ್ಥೆಯಲ್ಲಿದ್ದ ಅಂಚೆಯ ಮನೆಗಳು, ಮನೆ ಮನೆಗೆ ಅಂಚೆ ಹಂಚಿಕೆಯಾಗುತ್ತಿದ್ದ ರೀತಿ, ಕಾಶೀಯಾತ್ರೆಗಿದ್ದ ಅನನುಕೂಲಗಳು, ಆತ್ಮಶ್ರಾಧ್ಧ ಮುಂತಾದ ಹಲವು ವಿಚಾರಗಳು ಓದುಗರ ಗಮನ ಸೆಳೆಯುತ್ತವೆ. ನಮ್ಮ ದೇಶದಲ್ಲಿ ಇಂತಹ ಒಂದು ಕಾಲಘಟ್ಟವಿತ್ತು ಎಂದು ಪರಿಚಯಿಸಿದ ಕಾದಂಬರಿ….


ನಮಸ್ಕಾರ,

ಅಮಿತ್ ಕಾಮತ್


    
Profile Image for Raghavendra T R.
70 reviews17 followers
December 30, 2022
ಬಾಲ್ಯದಲ್ಲಿಯೇ ಗಂಡನನ್ನು ಕಳೆದುಕೊಂಡು ವಿರಕ್ತಳಂತೆ ಬದುಕಿದ ಹೆಣ್ಣೊಬ್ಬಳ ಕತೆ. ಶೂನ್ಯವನ್ನೇ ತುಂಬಿಕೊಂಡು ಬದುಕನ್ನು ಕಳೆಯುವ ಅನಿವಾರ್ಯತೆಯಲ್ಲಿಯೂ ಗಟ್ಟಿಗಿತ್ತಿಯಾಗಿ ಬದುಕಿದವಳು ಫಣಿಯಮ್ಮ.
Profile Image for Nayaz Riyazulla.
424 reviews94 followers
August 27, 2020
ಚಿಕ್ಕ ಪ್ರಾಯದಲ್ಲೇ ಮದುವ��ಯಾಗಿ, ವಿಧವೆಯು ಆಗಿ ಸೂಲಗಿತ್ತಿಯಾಗಿ ಗಟ್ಟಿಗಿತ್ತಿಯಾಗಿ ಬಾಳುವ ಫಣಿಯಮ್ಮನ ಕಥೆಯಿದು.... ಎರಡನೇ ಬಾರಿ ಓದಿದಾಗ ಫಣಿಯಮ್ಮ ಇನ್ನು ಹತ್ತಿರವಾಗುತ್ತಾರೆ ಮತ್ತೆ ನನ್ನನ್ನು ಓದು ಎನ್ನುತ್ತಾರೆ...
Profile Image for Mamatha Venkatesh.
9 reviews5 followers
January 5, 2021


ಎಂಕೆ.ಇಂದಿರಾರವರು ಕನ್ನಡ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ ಕೃತಿಗಳನ್ನು ನೀಡಿದವರು. ಈ ಸ್ತ್ರೀ ರತ್ನದ ನೆನಪಿನಲ್ಲಿ ಇವರ ಮೇರುಕೃತಿಯ ವಿಮರ್ಶೆ.

ಅಡುಗೆಮನೆ ಸಾಹಿತ್ಯ ಎಂತಲೇ ಹೆಸರು ವಾಸಿಯಾದ ಕಾಲದಲ್ಲಿ ತಮ್ಮ ಮಹಿಳಾಪರ ಕೃತಿಗಳಿಂದ ..ಪುರುಷ ಪ್ರಧಾನವಾದ ಸಾಹಿತ್ಯ ಲೋಕಕ್ಕೆ ಸದ್ದು ಸುದ್ದಿಯಿಲ್ಲದೇ ಸೆಡ್ಡು ಹೊಡೆದವರು.ಇವರ ಕಾದಂಬರಿಗಳು ಏಕತಾನತೆಯಿಂದ ದೂರ.ವಿಭಿನ್ನ ಕಥಾವಸ್ತುಗಳು ಇವರ ಕೃತಿವಿಶೇಷ.ಸರಳ,
ಸರಾಗವಾದ ..ಮಲೆನಾಡಿನ ವಿಶೇಷ ಶೈಲಿಯ ಭಾಷೆಯ ಸಿಹಿಯನ್ನು ಇವರ ಕಾದಂಬರಿಗಳಲ್ಲಿ ಸವಿಯಬಹುದು.ಇವರು ಪುರುಷ ಪ್ರಧಾನ ವ್ಯವಸ್ಥೆಯ ಪ್ರಬಲ ವಿರೋಧಿಯಾದರೂ ಸಹ ಇವರದ್ದು ನಿಗಿ ನಿಗಿ ಬೆಂಕಿಯಂತೆ ಜ್ವಲಿಸುವ ಉಗ್ರ ಪ್ರತಿಭಟನೆಯಲ್ಲ.ಬದಲಿಗೆ ತಣ್ಣನೆ ಕೊರೆವ ಮಂಜಿನಂತಹ ಶೀತಲ ವಿರೋಧ.ತನ್ನ ಪಾತ್ರಗಳ ಮೂಲಕ ಕಂದಾಚಾರದ ವಿರುದ್ಧ ದನಿಯೆತ್ತುವ ಇಂದಿರಾರವರು ಸಹಜ ಭಾಷೆ ಬಳಸುವಾಗ ಶಿಷ್ಟತೆಯ ಪರಿವೆ ಇಟ್ಟವರಲ್ಲ.

ಬ್ರಾಹ್ಮಣ ಸಮಾಜದಲ್ಲಿ ಹೆಣ್ಣು ಪೂಜನೀಯಳು ಎಂದಿದ್ದರೂ ಸಹ ಇತರ ವರ್ಗಗಳ ಹಾಗೆಯೇ ಅವಳ ಮೇಲಿನ ಶೋಷಣೆ ತಪ್ಪಿರಲಿಲ್ಲ. ಕರ್ಮಠ ಸಂಪ್ರದಾಯಸ್ಥ ಕುಟುಂಬಗಳು ಆ ಕಾಲದಿಂದ ರೂಢಿಯಾಗಿ ಬಂದ ಪದ್ಧತಿಗಳನ್ನು ಚಾಚು ತಪ್ಪದೆ ಪಾಲಿಸುತ್ತಿದ್ದರು. ಇಂತಹ ಒಂದು ವ್ಯವಸ್ಥೆಗೆ ಬಲಿಯಾದ ಹೆಣ್ಣು ಮಗಳ ಕಥೆಯೇ ಫಣಿಯಮ್ಮ .

ತುಂಬು ಕುಟುಂಬದ ಶ್ರೀಮಂತ ಮನೆತನದಲ್ಲಿ ಹುಟ್ಟಿದ ಫಣಿಯಮ್ಮಳಿಗೆ ಬಾಲ್ಯದಲ್ಲಿಯೇ ವಿವಾಹವಾಗುತ್ತದೆ.
ಚಿಕ್ಕಂದಿನಲ್ಲಿ ಜಾತ್ರೆಯಲ್ಲಿ ಜಡೆ ಬಂಗಾರ ತೊಟ್ಟ ನೆಪವೋ ಏನೋ ಫಣಿಯಮ್ಮ ನ ಜಡೆ ಕಳ್ಳರ ಪಾಲಾಗುತ್ತದೆ .

ಇದೇ ಅಪಶಕುನದ ಸೂಚನೆ ಎಂಬಂತೆ ಒಂಬತ್ತನೆಯ ವಯಸ್ಸಿಗೆ ಗಂಡನನ್ನು ಕಳೆದುಕೊಂಡು ಋತುಮತಿಯಾದ ತಕ್ಷಣ ತಲೆ ಬೋಳಿಸಿ ಕೊಂಡು ಮಡಿಯಾಗಬೇಕಾಗುತ್ತದೆ .ಆಟವಾಡುವ ವಯಸ್ಸಿನಲ್ಲಿ ಬಾಲ ವಿಧವೆಯಾಗಿ ಅವರು ಪಡುವ ಪಾಟಲು ಯಾರಿಗೂ ಅರ್ಥವಾಗುವುದಿಲ್ಲ .ಇಟ್ಟು ತೊಟ್ಟು ಖುಷಿಪಡುವ ವಯಸ್ಸಿನಲ್ಲಿ ತಲೆಬೋಳಿಸಿಕೊಂಡು ಮೂಲೆಯಲ್ಲಿ ಇರಬೇಕಾಗುವುದು ಎಂತಹ ದುರಾದೃಷ್ಟ. ಅಲ್ಲಿಂದ ಅವರ ನೀರಸ ವರ್ಣರಹಿತ ಜೀವನದ ಆರಂಭವಾಗುತ್ತದೆ. ಹದಿಹರೆಯದ ವಯಸ್ಸಿನಲ್ಲಿ ಕಂಡಕಂಡ ಸಂಬಂಧಿಕರ ಮನೆಯಲ್ಲಿ ಆಳಾಗಿ ದುಡಿದ ಅವರ ಬಗ್ಗೆ ಎಲ್ಲರಿಗೂ ಗೌರವ.

ಆದರೂ ಸಹ ಅವರದೇ ಮನೆಯೂ ಇಲ್ಲ .ಅವಳ ಬಗ್ಗೆ ಯೋಚಿಸುವ ಮನೆಯವರು ಇಲ್ಲ. ಆದರೂ ಸಹ ಎಲ್ಲರ ಕಷ್ಟಕ್ಕೂ ಸಹ ನೆರವಾಗಿ ಹೊರೆಗಲ್ಲಾಗಿ ಎಲ್ಲರ ಆಪತ್ತು ತನ್ನದೆಂದು ಭಾವಿಸಿ ನಿರ್ವಿಕಾರವಾಗಿ ...ನಿರಾತಂಕವಾಗಿ ಬಂದ ಬಾಳನ್ನು ಭೇದವಿಲ್ಲದೆ ...ಖೇದವು ಇಲ್ಲದೆ...ತಕರಾರೂ ಇಲ್ಲದೇ ಅಪ್ಪಿಕೊಳ್ಳುತ್ತಾರೆ.

ಎಲ್ಲರೂ ಹೇಳುವಂತೆ ಅವರದು ಋಷಿಯಂತಹ ಬದುಕು.
ಪರೋಪಕಾರವೇ ಅವರ ತಪಸ್ಸು. ಒಪ್ಪತ್ತು ಊಟ, ಬಿಳಿ ಸೀರೆ ,ಜಪ ಸರ ಅವರ ಸರ್ವಾಲಂಕಾರ.ಕಣ್ಣ ಮುಂದೆ ಕಾಣುವ ಸುಬ್ಬಿ ಮತ್ತು ಪುಟ್ಟಾ ಜೋಯಿಸರ ಪ್ರಸಂಗ ಅವರಲ್ಲಿ ದೈಹಿಕ ಸಂಬಂಧದ ಬಗ್ಗೆ ಹೇಯ ಭಾವನೆಯನ್ನು ಮೂಡಿಸುತ್ತದೆ. ಹೆರಿಗೆಯ ಸಂಕಷ್ಟವನ್ನು ಕಂಡು ಹೆರಿಗೆ ಮಾಡಿಸುವ ಕ್ರಿಯೆಯಲ್ಲಿ ಪಾಲ್ಗೊಂಡು ಮದುವೆಯೂ ಬೇಡ...ಇಂಥ ಕಷ್ಟವಾಗಲಿ ಬೇಡ.... ಎಂದು ದೇವರಲ್ಲಿ ಮೊರೆ ಇಡುವ ಫಣಿಯಮ್ಮನ ಬಗ್ಗೆ ಅನುಕಂಪ ಎನಿಸುತ್ತದೆ.

ಕರ್ಮಯೋಗಿಯಾಗಿ ..ಪ್ರತಿಫಲಾಪೇಕ್ಷೆಯಿಲ್ಲದೆ ..ಇತರರ ಒಳಿತನ್ನೇ ತೋರುವ ಪುಣ್ಯಜೀವಿ ಫಣಿಯಮ್ಮ. ದಾಕ್ಷಾಯಿಣಿಯ ಪ್ರಸಂಗದಲ್ಲಿ ಅವರು ತೆಗೆದುಕೊಳ್ಳುವ ನಿಲುವು ಯಾವ ಆಧುನಿಕ ಮಹಿಳೆಗೂ ಕಮ್ಮಿ ಇಲ್ಲ .ವಿಧವೆಯರ ತಲೆ ಬೋಳಿಸಿ.. ಮೂಲೆಗೆ ಕೂಡಿಸುವುದರ ಬಗ್ಗೆ ಅವರಿಗೆ ಅಸಮಾಧಾನವಿರುವುದು ಕಂಡುಬರುತ್ತದೆ. ಹೀಗಾಗಿ ಅವರು ವ್ಯವಸ್ಥೆಯ ವಿರುದ್ಧ ದನಿಯೆತ್ತುವ ಪ್ರಯತ್ನವನ್ನು ಮಾಡುತ್ತಾರೆ .

ಹರೆಯದ ವಿಧವೆಯರಿಗೆ ಮರುವಿವಾಹ ಮಾಡುವ ವಿಷಯದಲ್ಲೂ ಸಹ ಅವರದು ಔದಾರ್ ದ ಮನೋಭಾವ. ಹೀಗಾಗಿ ಇತರರಿಗೆ ಇವರ ಬಗ್ಗೆ ಅಸಮಾಧಾನ ವಾದದ್ದು ಉಂಟು. ತಣ್ಣಗೆ ದನಿ ಎತ್ತುವ ..ಮೃದು ಮನೋಭಾವದ ಇವರು ಜಾತಿವ್ಯವಸ್ಥೆಯ ಕಡೆಗೂ ಅತಿಯಾದ ಒಲವು ತೋರಿಸುವುದಿಲ್ಲ. ಹಸಲರ ಹೆಣ್ಣಿಗೆ ಹೆರಿಗೆ ಮಾಡಿಸುವ ಪ್ರಸಂಗವಂತೂ ಇವರ ದೊಡ್ಡತನದ ಪ್ರತೀಕ.

ತೀರಾ ಸಂಪ್ರದಾಯಸ್ಥ ಮನೆತನದಲ್ಲಿ ಹುಟ್ಟಿ ಸಂಪ್ರದಾಯಗಳನ್ನು ಪಾಲಿಸುತ್ತಿದ್ದು ಸಹ ಅದೇ ವ್ಯವಸ್ಥೆಯ ವಿರುದ್ಧ ತಣ್ಣನೆಯಶೀತಲ ಬಂಡಾಯ ಸಾರುವ ಇವರು ಉಗ್ರ ಸಂಪ್ರದಾಯವಾದಿಯಲ್ಲ... ಬದಲಿಗೆ ವಿಶಾಲಮನೋಭಾವದ ಉದಾತ್ತ ಜೀವಿ.ಪರೋಪಕಾರವೇ ದೇವರ ಸೇವೆಯೆಂದು ನಂಬಿದ ನಿಸ್ವಾರ್ಥಿ ಹೆಣ್ಣು .ವಿಧವೆಯರ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ ಈ ಕೃತಿಯು ಆ ಕಾಲಕ್ಕೆ ತುಂಬಾ ಜನಪ್ರಿಯವಾಗಿ ಇಂದಿರಾ ರವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು.

ಸಾರ್ವಕಾಲಿಕವಾಗಿ ಉತ್ತಮ ಕೃತಿಗಳ ಪಟ್ಟಿಯಲ್ಲಿ ಸದಾ ಮುಂಚೂಣಿಯಲ್ಲಿ ನಿಲ್ಲುವ ಪುಸ್ತಕವಿದು.ಇದು ಇಂದಿರಾರವರ ಸಂಬಂಧಿಯವರ ನಿಜ ಜೀವನ ಆರಾಧಿತ ಕೃತಿಯೆಂದು ಹೇಳುತ್ತಾರೆ.ಇದೇ ಹೆಸರಿನಲ್ಲಿ ಚಲನಚಿತ್ರವೂ ಆಗಿದೆ
Profile Image for Manasa Kulkarni.
23 reviews
February 25, 2025
ಫಣಿಯಮ್ಮ

ಎಂ.ಕೆ.ಇಂದಿರಾ ಅವರ ಫಣಿಯಮ್ಮ ಒಂದು ಮನಮುಟ್ಟುವ ಕಾದಂಬರಿ. ಲೇಖಕರ ಅಜ್ಜನವರ ತಂಗಿ ಈ ಫಣಿಯಮ್ಮ- ಕಥಾನಾಯಕಿ. ಲೇಖಕಿಯೇ ಹೇಳುವ ಹಾಗೆ ಇದು ಸಂಪೂರ್ಣ ಕಪೋಲಕಲ್ಪಿತವಲ್ಲ ಹಾಗಂತ ಶೇಕಡ 100 ನಡೆದದ್ದೂ ಅಲ್ಲ. ರಸೋತ್ಪತ್ತಿಗೆ ಬೇಕಾದ ಮಾರ್ಪಾಡುಗಳನ್ನು ಮಾಡಿಕೊಳ್ಳುವಷ್ಟು ಸ್ವಾತಂತ್ರ್ಯ ಇದೆಯಷ್ಟೆ.

9 ನೇ ವರ್ಷಕ್ಕೆ ಮದುವೆಯಾಗಿ ಮೈನೆರೆಯುವ ಮುನ್ನವೇ 10 ನೇ ವರ್ಷಕ್ಕೆ ವಿಧವೆಯಾಗುವ ಫಣಿಯಮ್ಮ ಬದುಕಿದ್ದು ಬರೋಬ್ಬರಿ 112 ವರ್ಷ. ಕಷ್ಟ ಸಹಿಷ್ಣು. ಕೇವಲ ವಿಧವೆಯಾದರೇನೆ ಒಂದು ಬಗೆಯ ಕಷ್ಟ ಇನ್ನು ಈಕೆ ಮಡಿ ಬೇರೆ ಆಗುತ್ತಾಳೆ. ಜೀವನವನ್ನು ಕಣ್ತೆರೆದು ನಿಬ್ಬೆರಿಗಿನಿಂದ ನೋಡುವ ವಯಸ್ಸಿಗೆ ವೈರಾಗ್ಯ ಬೆನ್ನುಬೀಳುತ್ತದೆ ಫಣಿಯಮ್ಮನಿಗೆ. ಜೀವನ ಇರುವುದೇ ಹೀಗೆ ಎಂದು ಸ್ವೀಕರಿಸಿ ಬದುಕಿದ ಕಾಯಕ ಯೋಗಿ. ತನ್ನ ಒಂದು ಶತಮಾನದ ಜೀವಿತಾವಧಿಯಲ್ಲಿ, ಕೂಡು ಕುಟುಂಬ ಒಡೆದು ಹೋಗಿದ್ದು, ಸಾಮಾಜಿಕವಾಗಿ ಆದ ಹಲವಾರು ಬದಲಾವಣೆಗಳು ಎಲ್ಲವನ್ನೂ ಕಂಡಳು ಫಣಿಯಮ್ಮ.

ಈ ಕೃತಿ ಓದುವಾಗ ಅದೆಷ್ಟು ಮನಸ್ಸಿಗೆ ಹತ್ತಿರವಾಗುತ್ತಾ ಹೋಗುತ್ತದೆಯೆಂದರೆ ನಮ್ಮ ಮುಂದೆಯೇ ಇದ್ದ ಪುಟ್ಟ ಹುಡುಗಿ ಪಟ್ಟಪಾಡು, ಕೊನೆಗೆ ನಮ್ಮ ಮನೆಯದೇ ಒಂದು ಅಜ್ಜಿಯ ಕಥೆಯಾಗಿ ಫಣಿಯಮ್ಮ ಮನದಲ್ಲಿ ನಿಲ್ಲುತ್ತಾಳೆ.

ಜೀವನದುದ್ದಕ್ಕೂ ಬೆಳಿಗ್ಗೆ 4 ಗಂಟೆಗೆ ಪ್ರಾರಂಭವಾಗುವ ಆಕೆಯ ದಿನಚರಿ, ರಾತ್ರಿ 12 ಅಥವಾ 1 ಗಂಟೆಗೋ ಮುಗಿಯುವ ಕೆಲಸ. ಬಾಣಂತನ - ಯಾರಾದರು ಒಬ್ಬರು ಬಂದು ಕರೆದುಕೊಂಡು ಹೋಗುವರು, ಹಬ್ಬಕ್ಕೆ ತಯಾರಿ, ವರ್ಷಕ್ಕಾಗುವಷ್ಟು ಹಪ್ಪಳ, ಶಾವಿಗೆ, ಸಂಡಿಗೆ, ಉಪ್ಪಿನಕಾಯಿ ಹೀಗೆ ಗಾಣದ ತರಹ ಕೆಲಸ. ನಿದ್ರೆ ಒತ್ತರಿಸಿಕೊಂಡು ಬರುವವರೆಗೂ ರಾತ್ರಿ ಧ್ಯಾನ. ಇಷ್ಟಾಗಿ ಮೊದಮೊದಲು ಒಪ್ಪತ್ತು ಊಟ ಮಾಡುತ್ತಿದ್ದ ಫಣಿಯಮ್ಮ ಅವರ 50ನೇ ಅಥವಾ 60ನೇ ವರ್ಷದ ಆಸುಪಾಸಿನಲ್ಲಿ ಆ ಒಂದು ಹೊತ್ತು ಊಟವನ್ನು ಸಹ ನಿಲ್ಲಿಸಿಬಿಡುತ್ತಾರೆ. ಮಧ್ಯಾಹ್ನ ಎರಡು ಬಾಳೆಹಣ್ಣು, ಒಂದು ಲೋಟ ಮಜ್ಜಿಗೆ ಅಷ್ಟೇ ಮುಗಿಯಿತು. ರುಚಿರುಚಿಯಾಗಿ ಎಲ್ಲರಿಗೂ ಅಡುಗೆ ಮಾಡುವ ಫಣಿಯಮ್ಮನ ಊಟ ಇಷ್ಟೇ. ನಿಜ ಕರ್ಮಯೋಗಿನಿಯಂತೆ ಬದುಕಿದ್ದು ಫಣಿಯಮ್ಮ.

ಫಣಿಯಮ್ಮನನ್ನು ಅವರ ಮನೆಗೆ ಕರೆದೊಯ್ಯಲು ಎಲ್ಲರು ನಾ ಮುಂದು ತಾ ಮುಂದು ಎಂದು ಬರುವವರೇ. ಏಕೆಂದರೆ ಯಾವ ಖರ್ಚೂ ಇಲ್ಲ. ಎರಡು ಬಾಳೆಹಣ್ಣು, ಒಂದು ಲೋಟ ಮಜ್ಜಿಗೆ, ಎರಡು ಮೂರು ವರ್ಷಗಳಿಗೊಮ್ಮೆ ಎರಡು ಬಿಳಿ ಸೀರೆ. ನಿರುಪದ್ರವಿ ಅಜ್ಜಿ, ತಾನಾಯ್ತು ತನ್ನ ಕೆಲಸವಾಯ್ತು. ಎಂದೂ ಕೂಡ ಒಂದು ನಿಮಿಷ ಸುಮ್ಮನೆ ಕೂತವರೇ ಅಲ್ಲ ಫಣಿಯಮ್ಮ. ಸುಸ್ತು, ಜ್ವರ ಎಂದು ಒಂದು ದಿನವೂ ಮಲಗಿದವರಲ್ಲ.

ಕೆಲವು ವಿಷಯಗಳ ಕುರಿತು ಬಹು ಮಾರ್ಮಿಕವಾಗಿ ಮಾತನಾಡುತ್ತಾಳೆ ಫಣಿಯಮ್ಮ. ಗಂಡಸರಿಗಾದರೆ ವಿದುರನಾಗಿ ಎರಡನೇ ಮದುವೆ ಸಾಧ್ಯವಿದೆ ಆದರೆ ಹೆಣ್ಣಿಗೆ ಮಡಿಯಾದರೆ ಮಾತ್ರ ಮರ್ಯಾದೆ ಸಕೇಶಿಯಾದರೆ ಹೀನವಾಗಿ ನಡೆಸಿಕೊಳ್ಳುವ ಕಾಲ. ಮಡಿಯಾಗಿ ತಿಂಗಳಿಗೊಮ್ಮೆಯಾದರೂ ಹಜಾಮನಿಂದ ತಲೆಕೂದಲು ಕತ್ತರಿಸುವುದಕ್ಕಾದರೂ ಮುಟ್ಟಿಸಿಕೊಳ್ಳಬೇಕಾದ ಮಡಿ ಹೆಂಗಸು ಶ್ರೇಷ್ಠ; ಆದರೆ ಸಕೇಶಿಯಲ್ಲ, ಇದ್ಯಾವ ನ್ಯಾಯ ಎನ್ನುತ್ತಾಳೆ ಫಣಿಯಮ್ಮ. ಆಗಿನ ಕಾಲಮಾನದಲ್ಲಿ ಈ ತರಹದ ವಿಚಾರಧಾರೆ ಅದು ಅನಕ್ಷರಸ್ಥೆ ಎಂದು ಬಗೆಯುವ ಒಬ್ಬ ಹೆಣ್ಣುಮಗಳಲ್ಲಿ, ಸಮಾಜದ ವ್ಯವಹಾರದಲ್ಲಿ ತೊಡಗದ ಒಬ್ಬ ಮಹಿಳೆಯಲ್ಲಿ ಸ್ಫುರಿಸಿದ ಈ ವಿಚಾರವೇ ಕ್ರಾಂತಿಕಾರಕ. ಸ್ವ ವೈದ್ಯಕೀಯವನ್ನು ತಿಳಿದ ಫಣಿಯಮ್ಮ ಉಮ್ಮತ್ತಳದ ಕಾಯಿಯನ್ನು ತಲೆಗೆ ಸವರಿಕೊಂಡು ಶಾಶ್ವತವಾಗಿ ಹಜಾಮನಿಂದ ಮುಕ್ತಿ ಪಡೆಯುತ್ತಾಳೆ.

ಈ ತರಹ ಒಬ್ಬ ಯೋಗಿನಿಯ ಹಾಗೆ, ಪರರ ಕೆಲಸವನ್ನು ಮಾಡಿ ತೀರಿಸುವುದೇ ನನ್ನ ಈ ಜನ್ಮಕ್ಕೆ ಒದಗಿಬಂದದ್ದು ಎಂಬ ಅತ್ಯಂತ ಕಠಿಣ ನಿರ್ಲಿಪ್ತತೆಯಿಂದ ಬದುಕುವುದು ಸಾಧ್ಯವಾ ಎಂದು ಆಶ್ಚರ್ಯವಾಗುತ್ತದೆ. ತನ್ನ ಕೆಲವು ರಹಸ್ಯಗಳನ್ನು ತುಂಬ ನಂಬುಗೆಯ ಲೇಖಕಿಯ ತಾಯಿ ಬನಶಂಕರಿಯವರ ಹತ್ತಿರ ತೀರ ಮನಸ್ಸಿಗೆ ನೋವಾದಾಗ ಹಂಚಿಕೊಂಡ ಕೆಲವು ಮಾತ್ರ ತಿಳಿದವು. ಇನ್ನು ಯಾವುದನ್ನು ಹಂಚಿಕೊಳ್ಳದೇ ಆ ಮಹಾತಾಯಿ ಹೊಟ್ಟೆಯಲ್ಲಿಟ್ಟುಕೊಂಡೇ ಉಳಿದ ವಿಷಯಗಳೆಷ್ಟೋ....!

ಕಾದಂಬರಿ ಅತ್ಯಂತ ಇಷ್ಟವಾಯಿತು. ಫಣಿಯಮ್ಮ ಸಿನಿಮಾ ಕೂಡ ನೋಡಿದೆ. ಆದರೆ, ಕಾದಂಬರಿಯಷ್ಟು ನನ್ನ ಮನಸ್ಸಿಗೆ ನಾಟಲಿಲ್ಲ. ಕಾದಂಬರಿ ತುಂಬಾ ಪ್ರಭಾವ ಬೀರಿತು.

ಒಮ್ಮೆ ನೀವು ಕೂಡ ಓದಿ......
This entire review has been hidden because of spoilers.
218 reviews76 followers
January 8, 2018
Maybe it's much more evocative in the Kannada original, and maybe, given the subject, translations are difficult.

But the book worked for me only as a chronicle of an earlier time, as a necessary book written at a time when women did not have a say in their own destinies. Although we women have privileges today that were hard-earned because of women like the author, M.K. Indira, as chronicler, as well as the character she writes about, Phaniyamma, whose quiet acceptance of her destiny may rankle today's feminists. I suspect, publishing a book like this, about a woman, by a woman, itself is an act of defiance.

And I have to say this - the book dwells on an upper caste household, and also portrays caste as having very little to do with the way women had no control over their destinies.
Profile Image for Crystal John.
Author 5 books8 followers
July 11, 2023
The novel Phaniyamma narrates the story of Phani, who became a widow at the age of nine and lived to be 112 years of age.
Phaniyamma is a 1983 Indian Kannada award-winning drama film directed and produced by Prema Karanth.
V sad 😔
Profile Image for Bharath Manchashetty.
127 reviews2 followers
January 2, 2026
“ಎಂ.ಕೆ ಇಂದಿರಾ ಅವರ “ಫಣಿಯಮ್ಮ” ೧೯೭೬ ರಲ್ಲಿ ಪ್ರಕಟವಾದ ಕನ್ನಡ ಸಾಹಿತ್ಯದಲ್ಲಿನ ಮಹತ್ವದ ಕಾದಂಬರಿಗಳಲ್ಲಿ ಒಂದು. ಈ ಕೃತಿ ಒಂದು ಸಂಪ್ರದಾಯಸ್ಥ ಬ್ರಾಹ್ಮಣ ವಿಧವೆಯಾದ ಫಣಿಯಮ್ಮನ ಬದುಕಿನ ಮೂಲಕ ಸಮಾಜದ ಶೋಷಣೆಯನ್ನು, ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯ ಮೇಲೆ ಹೇರಲಾಗುವ ನಿಯಮಗಳನ್ನು, ಮೈಲಿಗೆ-ಮಡಿವಂತಿಕೆ, ಮೂಢನಂಬಿಕೆಗಳು ಆಕೆಯ ಅಸಹಾಯಕ ಪರಿಸ್ಥಿತಿಯನ್ನು ಹೃದಯವೇದಕವಾಗಿ ಚಿತ್ರಿಸುತ್ತದೆ.

ಫಣಿಯಮ್ಮನ ಬದುಕು ನೋವು, ತಾಳ್ಮೆ, ಮತ್ತು ನಿರಂತರ ಹೋರಾಟಗಳ ಸಂಕೇತ. ೯ ವರ್ಷದ ಬಾಲ್ಯದಲ್ಲಿಯೇ ವಿಧವೆಯಾಗಿರುವ ಆಕೆಯ ಜೀವನವು ಕನ್ನಡ ಸಮಾಜದ ಪಿತೃಸತ್ವದ ಕ್ರೂರತೆಯ ಪ್ರತಿಬಿಂಬವಾಗಿದೆ. ಆದರೆ, ಆಕೆ ತನ್ನ ಶಕ್ತಿಯ ಮೂಲಕ ಎಲ್ಲವನ್ನು ಎದುರಿಸಿ ಸಮಾಜದ ಕಣ್ಣು ತೆರೆಯುವಂತೆ ಮಾಡುತ್ತಾಳೆ ಮತ್ತು ಇಂತಹ ಹೆಣ್ಣು ಜೀವಗಳು ಎಷ್ಟೋ ನರಳಿ ಸತ್ತಿವೆ, ಸಾಯುತ್ತಿವೆ ಕೂಡ. ಮುಟ್ಟು, ವಿಧವೆಯ ಕಷ್ಟ, ಮಡಿವಂತಿಕೆಯ ಹಲವು ಸ್ವರೂಪಗಳು ಓದುಗನನ್ನು ಚಿಂತನೆಗೆ ಹಚ್ಚುತ್ತವೆ. ಯಾರ ಹಂಗೂ ಇಲ್ಲದೆ, ಯಾರನ್ನು ನೆಚ್ಚಿಕೊಳ್ಳದೆ ಜೀವನ ನಡೆಸಿದ ಹೆಣ್ಣಿನ ಆತ್ಮಕಥೆಯೂ ಆಗಿದೆ.”

ಈ ಕೃತಿಯ ಶೈಲಿ ಸರಳವಾದರೂ ಮನಸ್ಸಿಗೆ ತಾಕುವಂತಹದ್ದು. ಓದುಗರಲ್ಲಿ ಕರುಣೆ, ಆಕ್ರೋಶ, ಹಾಗೂ ಚಿಂತನೆ ಮೂಡಿಸುವ ಸಾಮರ್ಥ್ಯ ಹೊಂದಿದೆ. “ಫಣಿಯಮ್ಮ” ಕನ್ನಡದಲ್ಲಿ ಮಹಿಳಾ ಕೇಂದ್ರಿತ ಕಾದಂಬರಿಗಳ ಹೊಸ ದಿಕ್ಕನ್ನು ತೋರಿದ ಕೃತಿಯಾಗಿದೆ.

ಮಡಿವಂತಿಕೆಯ ಬಗ್ಗೆ ಮಾತನಾಡುವ ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ. ಮೈಲಿಗೆ-ಮಡಿವಂತಿಕೆಯ ಸಮಾಜವನ್ನು ಪ್ರಶ್ನಿಸಲು, ಮಾನವೀಯತೆಯನ್ನು ಅರ್ಥಮಾಡಿಕೊಳ್ಳಲು, ಮಹಿಳೆಯ ಬಾಳಿನ ನೋವಿನ ಅನುಭವವನ್ನು ಪಕ್ಷಿ ನೋಟದಿಂದ ನೋಡಲು ಇದೊಂದು ಸಮರ್ಥ ಕೃತಿ ಎನ್ನಬಹುದು. ಓದಿದ ನಂತರ ಹೆಣ್ಣಿನ ಜೀವನ ಎಷ್ಟೊಂದು ಸುಧಾರಿಸಿದೆ ಇವತ್ತಿನ ಕಾಲದಲ್ಲಿ ಎನಿಸಿತು.”

“ಕೃತಿಯನ್ನು ಓದಿ ಮತ್ತು ಸಿನಿಮಾ ಕೂಡ ಆಗಿದೆ ನೋಡಿ.”
Profile Image for Jyotsna Sreenivasan.
Author 11 books38 followers
June 26, 2016
This is one of my favorite books of all time -- about the life of a child-widow in southern India in the late 1800s and early 1900s. Even in translation (it was originally written in Kannada), the language comes across as pure and simple, yet incredibly powerful. This is a well-known book in India, and was made into a movie in 1983.
Displaying 1 - 12 of 12 reviews

Can't find what you're looking for?

Get help and learn more about the design.