What do you think?

ನೀನು ನಿನ್ನೊಳಗೆ ಖೈದಿ | Neenu Ninnolage Khaidi
240 pages, Paperback
Published January 1, 2017
About the author
ಅನುಷ್ ಎ. ಶೆಟ್ಟಿ | Anush A. Shetty
7 books31 followersಅನುಷ್ ಜನಿಸಿದ್ದು ಮಂಗಳೂರಿನಲ್ಲಿ. ವಿದ್ಯಾಭ್ಯಾಸ ಹುಣಸೂರು, ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ವಿದ್ಯುನ್ಮಾನ ಮಾಧ್ಯಮದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಇವರು ಕನ್ನಡಪ್ರಭಾ, ಸಾಧ್ವಿ ದಿನಪತ್ರಿಕೆಗಳಲ್ಲಿ, ಜೀ ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 15 ವರ್ಷಗಳ ಕಾಲ ಮೃದಂಗ ವಾದನ ಕಲಿತ ಇವರು, ಅನೇಕ ಲಯವಾದ್ಯಗಳನ್ನು ನುಡಿಸಬಲ್ಲವರಾಗಿದ್ದು, ತಮ್ಮ ಗೆಳೆಯರೊಂದಿಗೆ ಸೇರಿ ಆರಂಭಿಸಿರುವ 'ನಾವು' ಮತ್ತು 'ರಿದಂ ಅಡ್ಡ' ಬ್ಯಾಂಡ್‌ಗಳ ಮೂಲಕ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕೆಲವು ವರ್ಷಗಳಿಂದ ರಂಗ ಸಂಗೀತವನ್ನೂ ಮಾಡುತ್ತ ದೇಶಾದ್ಯಂತ ಓಡಾಡುತ್ತಿದ್ದಾರೆ. ಅನುಗ್ರಹ ಪ್ರಕಾಶನವನ್ನು ಮುನ್ನಡೆಸುತ್ತಿದ್ದಾರೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳಿಂದ ಪ್ರೇರಿತರಾಗಿ ಸಾಹಿತ್ಯ ಸೃಜಿಸುವೆಡೆಗೆ ಬಂದ ಅನುಷ್‌ರ ಈವರೆಗಿನ ಬರಹದ ಮೂಲವಸ್ತು ಪ್ರಕೃತಿಮೇ ಆಗಿದೆ. ಸಣ್ಣ ವಿಷಯಗಳಲ್ಲೂ ಕೌತುಕ ತೋರುತ್ತ, ಸದಾ ಊರಿಂದ ಊರಿಗೆ ಓಡಾಡುತ್ತ, ಹಾಡುತ್ತ, ಬರೆಯುತ್ತ ಇರುವ ಇವರು ಸದ್ಯ ಮಡದಿ ಡಾ. ಅನುಷಾ ಅವರೊಂದಿಗೆ ಮೈಸೂರಿನಲ್ಲಿ ನೆಲೆಸಿದ್ದಾರೆ.

Ratings & Reviews
Friends & Following
Create a free account to discover what your friends think of this book!
Community Reviews
Displaying 1 - 30 of 39 reviews
August 16, 2021
ಒಂಥರಾ ಮಜಾ ಇತ್ತು ಈ book ಓದೋವಾಗ.
A very nice science fiction .
Last 5% of the bookನ ಎರಡು ಸರಿ ಓದಬೇಕಾಯ್ತು ಅರ್ಥ ಆಗಕ್ಕೆ.

February 25, 2022
ಸ್ವಲ್ಪ ದಿನಗಳ ಹಿಂದೆಯಷ್ಟೇ ದೇಜಾವು ಕುರಿತ ತಮಿಳಿನ ಮಾನಡು ಸಿನೆಮಾ ನೋಡಿದ್ದೆ. ನಂತರ ನಡೆದ ಮಾತುಕತೆಯಲ್ಲಿ ನನ್ನ ಗೆಳೆಯರ ಬಳಗದಲ್ಲಿ ಈ ಪುಸ್ತಕದ ಬಗ್ಗೆ ಮಾತು ಬಂತು, ಯಾರೋ ಇದನ್ನ ಕನ್ನಡದ ಬೆಲ್ಬಾಟಮ್ 3 ಸಿನೆಮಾ ಮಾಡಿದ್ರೆ,ಇದೆ ಕಥೆ ಸೂಕ್ತ ಅಂತಲೂ ಹೇಳಿದ್ದರೂ. ಒಂದೇ ಓಟದಲ್ಲಿ ಓದಿ ಮುಗಿಸಿದೆ . ನನ್ನ ಮೊದಲ ಅನುಷ್ ರವರ ಪುಸ್ತಕ, ಶೀಘ್ರದಲ್ಲೇ ಅವರ ಎಲ್ಲಾ ಪುಸ್ತಕಗಳನ್ನು ಮುಗಿಸಲೆಬೇಕೂ ಅನಿಸ್ತಾ ಇದೆ.. ಈಗ ಅವರ ಇತರ ಪುಸ್ತಕಗಳ ಬಗ್ಗೆಯೂ ಗೆಳೆಯರ ಬಳಗದಲ್ಲಿ ಚರ್ಚೆ ಆರಂಭವಾಗಿದೆ. ಥಾಂಕ್ಸ್ ಅನುಷ್ ಸರ್ , ನಿಮ್ಮ ಪುಸ್ತಕದ ಮೂಲಕ ನಮ್ಮನ ಮತ್ತೊಂದು ಲೋಕಕ್ಕೆ ಕರೆದುಕೊಂಡು ಹೋಗಿದ್ದೀರಿ, ಮತ್ತೆ ವಾಪಸ್ ಬಂದು ಈಗ ಬೆಳಗಿನ ಜಾವ 3 ಗಂಟೆಗೆ ರಿವ್ಯೂ ಬರೆಯುತ್ತಿದ್ದೇನೆ.😉.
August 20, 2023
ಕನ್ನಡದಲ್ಲಿ ದೇಜಾವು ಬಗ್ಗೆ ಬರೆದ Sci-Fi ಕೃತಿ ಇದಾಗಿದೆ. ಕುತೂಹಲಕಾರಿಯಾಗಿಯೂ, ಒಮ್ಮೆಲೇ ಕೂತು ಮುಗಿಸುವಂತಹ ಪುಸ್ತಕ.
August 3, 2021
ನಾನು ಅನುಷ್ರವರ ಹುಲಿ ಪತ್ರಿಕೆ ಮಾತ್ರ ಓದಿದ್ದೆ. ಕೂತೂಹಲಕಾರಿಯಾಗಿ ಇತ್ತು. ಎರಡನೇ ಭಾಗ ನೀನು ನಿನ್ನೊಳಗೆ ಕೈದಿ ಪುಸ್ತಕಕ್ಕೆ ಪೋಣಿಸಲ್ಪಟ್ಟಿದೆ ಅನ್ನೋದು ನೋಡಿ ಇದನ್ನ ಮೊದಲು ಓದಿದೆ. ಸರಾಹವಾಗ ಓದು, ಅತ್ಯಂತ ವಿಶಿಷ್ಚವಾದ ಕಥಾ ವಸ್ತು ಇದರಲ್ಲಿದೆ. ನಾನು ಓದಿದ ಒಂದು ಒಳ್ಳೆ ಸೈನ್ಸ್ ಫಿಕ್ಷನ್. ಇಂತಹ ಕತೆ ಸಿನೇಮಾದಲ್ಲಿ ನೋಡಿದ್ರೆ ಅರ್ಥ ಆಗದು ಕಷ್ಟ ಅಂತಹದರಲ್ಲಿ ಅದನ್ನು ಬರವಣಿಗೆಯಲ್ಲಿ ಸುಲಲಿತವಾಗಿ ಹೇಳಿದ್ದಾರೆ. ಇದು ಯುವ ಬರಹಗಾರರಿಗೆ ಮಾದರಿ ಅನ್ಸುತ್ತೆ. ಹಲವು ಸಾಲುಗಳು ಓದಿದ ನಂತರವು ಮನಸ್ಸಲ್ಲಿ ಉಳಿಯುತ್ತೆ. ನಾನು ಹೆಚ್ಚು ಪುಸ್ತಕನ ಎರಡನೇ ಬಾರಿ ಓದಲ್ಲ. ಆದರೆ ಇದನ್ನ ಮತ್ತೊಮ್ಮೆ ಓದೋಣ ಅಂತ ಅನ್ನಕೊಂಡಿದೀನಿ. ಅಥವಾ ಭವಿಷ್ಯದ ಓದೇ ಇದಾಗಿದ್ಯಾ?!
‘ಪದೇ ಪದೇ ಓದಿದ ಸಾಲನ್ನೇ ಓದುತಿರಬಹುದು’
- ಅಶ್ರು
It is a must read science fiction about Déjàvu phenomenon in Kannada.

September 29, 2022
ಈ ದೇಜಾವು, ಪ್ಯಾರಲಲ್ ಯುನಿವರ್ಸ್, ಟೈಮ್ ಲೂಪ್ ಅನ್ನೋ ವಿಷಯಗಳು ಎಂತವರನ್ನೂ ಆಕರ್ಷಣೆಗೊಳಪಡಿಸುತ್ತವೆ. ಈ ವಿಷಯಗಳನ್ನು ಪ್ರಧಾನವಾಗಿರಿಸಿಕೊಂಡು ಇಂಗ್ಲೀಷ್ ಮತ್ತು ಇತರೆ ಭಾಷೆಗಳಲ್ಲಿ ಬಹಳ ಕಾದಂಬರಿಗಳು ಚಲನಚಿತ್ರಗಳು ಹಾಗೂ ವೆಬ್ ಸರಣಿಗಳು ಈಗಾಗಲೇ ರಚನೆಯಾಗಿವೆ. ಭಾರತದ ಕೆಲವು ಭಾಷೆಗಳಲ್ಲೂ ಕೂಡ ಈ ಪ್ರಯತ್ನಗಳು ನಡೆದಿವೆ, ಯಶಸ್ವಿಯಾಗಿವೆ ಕೂಡ.
ಅನುಷ್ ಎ ಶೆಟ್ಟಿಯವರ "ನೀನು ನಿನ್ನೊಳಗೆ ಖೈದಿ", ಇದೊಂದು Science-fiction ಕಾದಂಬರಿ. ದೇಜಾವು ಅನ್ನೋ fascinating phenomenon ಇದರ ಜೀವಾಳ. ನನಗೆ ತಿಳಿದಿರುವ ಮಟ್ಟಿಗೆ ಕನ್ನಡದಲ್ಲಿ ವೈಜ್ಞಾನಿಕ ಸಂಶೋಧನೆ ಇರುವಂತಹ ಸಾಹಿತ್ಯ ವಿರಳ. ಕನ್ನಡದ ಒಬ್ಬ ಯುವ ಲೇಖಕರು ಈ ರೀತಿಯ ಪ್ರಯತ್ನ ಮಾಡಿರೋದು ಖುಷಿಯ ವಿಚಾರ. ಈ ಅಪರೂಪದ ಕಾದಂಬರಿಯನ್ನೆಲ್ಲರೂ ಒಮ್ಮೆ ಓದಲೇಬೇಕು.

May 24, 2021
||▪︎ನೀನು ನಿನ್ನೊಳಗೆ ಖೈದಿ▪︎||
ಅನುಷ್ಕ ಎ ಶೆಟ್ಟಿ
ನೀನು ನಿನ್ನೊಳಗೆ ಖೈದಿ ಲೇಖಕರ ನುಡಿ ಬರಹ ಓದಿ ಮರುಕ್ಷಣವೇ ಅವರ ಅಭಿಮಾನಿಯಾದೆ .
ಈ ಕಾದಂಬರಿಯ ಹೆಸರೇ ಓದುವ ಕುತೂಹಲ ಹುಟ್ಟಿಸುತ್ತದೆ ಎಂದು ಹೇಳಿದರೆ ತಪ್ಪಾಗಲಾರದು .
ಕೋಳಿ ಮೊದಲ ಮೊಟ್ಟೆ ಮೊದಲ ? ಸಮಯ ಒಮ್ಮೆ ಕಳೆದರೆ ಮತ್ತೆ ಬರಬಾರದೆ ?ನದಿ ಯಾಕೆ ಮುಂದೆ ಚಲಿಸುತ್ತದೆ ? ಮರಣದ ನಂತರ ಜಗತ್ತೇನೂ ?
ಕದಂಬರಿ ಪ್ರಾರಂಭದಿಂದಲೇ ಕಾಲಾಘಟಿಯ ಮಾಯೆ ಜೈಲಿನ ಬಾಗಿಲ ತೆರೆದುಕೊಳ್ಳುತ್ತಿರುವ ಮಾಯಾಲೋಕದಲ್ಲಿ ಕಳೆದುಹೋಗುವ ರೋಮಾಂಚನ ಪ್ರತಿ ಹಂತದಲ್ಲೂ ಅನುಭವಿಸುತ್ತೇವೆ . ನಿಜಕ್ಕೂ ಇದೊಂದು ಹೊಸ ಬಗೆಯ ಕಾದಂಬರಿ ವೈಜ್ಞಾನಿಕ ಸಂಶೋಧನೆಯ ಮೂಲರೂಪ ಮತ್ತು ತದ್ರೂಪ ಆಧಾರದ ಮೂಲಕ ರೂಪಗೊಂಡಿರುವ ಹಾಗೂ parallel ಜಗತ್ತಿನ ಕಲ್ಪನೆಯ ಶೂನ್ಯ !
ಕಾದಂಬರಿಯಲ್ಲಿ ಬರುವ ಸೀಮಿತ ಪಾತ್ರಗಳಾದರೂ ಇಲ್ಲಿ ಬರುವ ಲೀಲಮ್ಮ ಪಾತ್ರ ಅವಳು ಅನುಭವಿಸಿರುವ ನೋವು ಮನಸಿನಲ್ಲಿ ಹಚ್ಚು ಹಾಕಿದ ಹಾಗೆ ಉಳಿಯುತ್ತದೆ .
ಓದುವಾಗ ನೂರೆಂಟು ಯೋಚನೆಯನ್ನು ಒಂದೇ ಸಮನೆ ಬರುತ್ತವೆ ಮತ್ತು ಬೇರೆ ಒಂದು ಜಗತ್ತಿಗೆ ಕರೆದುಕೊಂಡು ಹೋಗುತ್ತವೆ ಅನುಷಾ ಎ ಶೆಟ್ಟಿ ಅವರ ಬರಹಗಳು .ಲೇಖಕರ ವಿಚಾರಗಳು, ಚಿಂತನೆಗಳು, ಕಲ್ಪನೆ, ಯೋಚನೆ, ನನ್ನ ಎಷ್ಟೋ ಪ್ರಶ್ನೆಗಳಿಗೆ ಈ ಕಾದಂಬರಿ ಉತ್ತರದ ಕನ್ನಡಿಯಾಗಿದೆ .
ಕಳೆದ ಮೂರು ದಿನದಿಂದ ನನಗೆ ಕೂತ್ರು ನಿಂತ್ರು ಬೆಳಗ್ಗೆಯಿಂದ ರಾತ್ರಿಯವರೆಗೂ ಬಿಟ್ಟು ಬಿಡದ ಹಾಗೆ ತಲೆಯಲ್ಲಿ ನೀನು ನಿನ್ನೊಳಗೆ ಖೈದಿ ಕಾದಂಬರಿಯ ಕಥೆ ಬಿಟ್ಟರೆ ಬೇರ್ಯಾವ ಆಲೋಚನೆಯೂ ಇಲ್ಲ .ಓದಲು ಶುರು ಮಾಡಿದ ನನಗೆ ಕಡೆಯವರೆಗೂ ನಾನು ಖೈದಿಯಾಗಿದ್ದು
ಹರಿಣಿ

May 21, 2024
ಇತ್ತೀಚಿಗೆ ಬ್ಲಿಂಕ್ ಚಲನಚಿತ್ರ ನೋಡಿದೆ, ಈ ಕಾದಂಬರಿಯಿಂದ ಪ್ರೇರಣೆ ಪಡೆದು ಚಲನಚಿತ್ರ ಮಾಡಿರಬಹುದೇ? ಕನ್ನಡದಲ್ಲಿ ಹೊಸದಾದ ಈ sci-fi ಕಾದಂಬರಿಗಳು ಬರುವುದೇ ವಿರಳ ಅಂಥದರಲ್ಲಿ ಇದು ಓದುಗರಿಗೆ ಮಜ ನೀಡುವುದು
October 1, 2024
ಕೃತಿ : ನೀನು ನಿನ್ನೊಳಗೆ ಖೈದಿ
ಲೇಖಕರು : ಅನುಷ್ ಎ ಶೆಟ್ಟಿ
ಪ್ರಕಟಣೆ : ಅನುಗ್ರಹ ಪ್ರಕಾಶನ
ಪುಟಗಳು : ೨೪೦
ಬೆಲೆ : ೧೮೦/-
ದೇಜಾವು ವಸ್ತುವನ್ನೇ ಮೂಲವಾಗಿ ಇಟ್ಟು ಅದಕ್ಕೆ ಸಮಯ ಪ್ರಯಾಣ, ಸಮಾನಾಂತರ ಜಗತ್ತು ಸೇರಿಸಿ ಹೆಣೆದ ಕಥೆ .
ಕಥೆ ಶುರುವಾಗುವುದೇ ಕಾಲಘಾಟಿಯ ಜೈಲಿನಲ್ಲಿದ್ದ ಗಿಲ್ಬರ್ಟ್ ರಾತ್ರೋ ರಾತ್ರಿ ' ಮಾಯ ' ಆದಾಗಿನಿಂದ.
ಅದೊಂದು ಮಧ್ಯರಾತ್ರಿ , ಡೈರಿಯಲ್ಲಿ ಏನೇನೋ ಬರೆಯುತ್ತಿದ್ದ ಗಿಲ್ಬರ್ಟ್, ಜ್ಞಾನೋದಯ, ಸಮಯ ಹೀಗೆ ಆ ಕತ್ತಲ ಕೋಣೆಯಲ್ಲಿ ಚಂದ್ರನ ಬೆಳಕಿನಲ್ಲಿ ಬರೀತಾ ಇದ್ದ , ಸಮಯ ಮೀರುತ್ತ ಇದೆ ಅಂತ ಚಡಡಿಸುತ್ತಲೇ ಇನ್ನೇನು ತನ್ನ ಕೊನೆಯ ಸಾಲು ಪೂರ್ತಿಗೊಳಿಸಬೇಕು ಅನ್ನುವಾಗಲೇ ಮಾಯವಾಗಿದ್ದ.
ಬೆಳಗ್ಗೆ ಎದ್ದ ನಂತರ ಇಡೀ ಕಾಲಘಾಟಿಯಲ್ಲಿ ಅಲ್ಲೋಲ್ಲ ಕಲ್ಲೋಲ ಯಾಕೆಂದರೆ ಗಿಲ್ಬರ್ಟ್ ತಪ್ಪಿಸಿಕೊಂಡಿರಲಿಲ್ಲ , ಜೈಲಿನ ಕಂಬಿ, ಬಾಗಿಲು ಯಾವುದೂ ಸಹ ಮುರಿದಿರಲಿಲ್ಲ. ಗೋಡೆ , ನೆಲ ಕೊರೆದಿರಲಿಲ್ಲ. ಆದ್ರೆ " ಮಾಯ" ವಾಗಿದ್ದ.
ಸುಬ್ರಹ್ಮಣ್ಯ ರಾವ್ ಎನ್ನುವವರು ಓರ್ವ ವಿಜ್ಞಾನಿ, ಮನುಷ್ಯನ ಒಂದು ತದ್ರೂಪ ಸೃಷ್ಟಿಸಿ ಅದನ್ನ ಇನ್ನೊಂದು ಕಾಲಘಟ್ಟಕ್ಕೆ ಕಳಿಸಿ ( ಸಮಾನಾಂತರ ಜಗತ್ತು ಯಾವ ಕಾಲಮಾನದಲ್ಲಿ ಬೇಕಾದರೂ ಇರಬಹುದು) ದೇಜಾವೂ ಇರುವಿಕೆಯ ಬಗ್ಗೆ ತಿಳಿಯುವುದೇ ಇವರ ಆಶಯ. ಭಾರತದ ಹೆಸರನ್ನು ವಿಜ್ಞಾನದ ಇತಿಹಾಸ ಪುಟಗಳಲ್ಲಿ ಸೇರಿಸುವ ಹಂಬಲ ಉಳ್ಳವರು. ಈ ಕನಸನ್ನು ನನಸು ಮಾಡಲು ರಾವ್' ಅವರಿಗೆ ಜೊತೆಯಾಗಿದ್ದು ಗಿಲ್ಬರ್ಟ್ ಮತ್ತು ಶಾರದಾ.
ಹೀಗೆ ಒಂದು ದಿನ ರಾವ್, ಗಿಲ್ಬರ್ಟ್ , ಶಾರದೆ ಮೂವರು ಸಂಶೋಧನೆ ನಡೆಸುವ ವೇಳೆ ಪೊನ್ನಣ್ಣ, ರಾವ್ ಅವ್ರ ಮನೆಗೆ ಬಂದು ಒಂದು ದೊಡ್ಡ ಅನಾಹೂತವೆ ಮಾಡಿದ ,ಇದರ ಫಲಿತಾಂಶವಾಗಿ ಗಿಲ್ಬರ್ಟ್ ಜೈಲು ಸೇರಿದ, ಆದರೆ ಈಗ ಮಾಯವೇ ಆಗಿರುವ.
ಹಾಗಾದರೆ ಗಿಲ್ಬರ್ಟ್ ಹೇಗೆ ಮಾಯವಾದ? ಪೊನ್ನಣ್ಣ ಮಾಡಿದ ಅನಾಹೂತವೇನು? ಪೊನ್ನಣ್ಣ ಹಾಗೆ ಮಾಡಲು ಕಾರಣವೇನು? ಸಂಶೋಧನೆ ಯಶಸ್ಸು ಕಂಡಿತಾ? ರಾವ್ ಮತ್ತು ಶಾರದೆ ಏನಾದರು? ದೇಜಾವು , ಸಮಯ ಪ್ರಯಾಣ, ಸಮಾನಾಂತರ ಜಗತ್ತು ಎಲ್ಲವನ್ನೂ ಹೇಗೆ ಒಂದರ ಜೊತೆಗೊಂದು ಬೆಸೆದಿದ್ದಾರೆ? ಎಲ್ಲವನ್ನೂ ತಿಳಿಯಲು ನೀವು ಪುಸ್ತಕ ಒಮ್ಮೆ ಓದಲೇ ಬೇಕು .

October 7, 2025
ವಾಹ್! ಇದೊಂದು ಅದ್ಭುತ ಕಾದಂಬರಿ! ಕನ್ನಡದಲ್ಲಿ ದೇಜಾವು, Parallel universe, Time travel ಬಗೆಗಿನ ಸಾಹಿತ್ಯ ನಾನಂತೂ ಓದಿಲ್ಲ! ಅನುಷ್ ರವರ ಈ ಮೂಲಕ ಕನ್ನಡದಲ್ಲಿ ಒಂದು ಹೊಸ ಪ್ರಕಾರವನ್ನೇ ಸೃಷ್ಟಿ ಮಾಡಿರುವರು ಎಂದರೂ ತಪ್ಪಾಗಲಾರದು. ಕಥಾವಸ್ತುವಿನಲ್ಲಿ ವಿಶಿಷ್ಟತೆಯಲ್ಲದೆ, ನಿರೂಪಣೆಯಲ್ಲಿಯೂ ವಿಭಿನ್ನತೆಯಿದೆ. ಒಟ್ಟಾರೆ, ಈ ಕಾದಂಬರಿ ರೋಚಕವಾಗಿ, ಕುತೂಹಲಕಾರಿಯಾಗಿ, ಯಾವುದೋ sci-fi TV show ತರಹ ಮನಸ್ಸಿನ ಚಿಂತನಾ ಲಹರಿಯನ್ನ ಕೆರಳಿಸಿತು. Definitely a page-turner!
September 16, 2019
ಖ್ಯಾತ ವಿಜ್ಞಾನ ಸಂವಹನಕಾರ ಜಾನ್ ಗಿಬ್ರಿನ್ ಹೇಳುವಂತೆ, ಕಳೆದ ಶತಮಾನದ ಭೌತವಿಜ್ಞಾನ ಲೋಕದಲ್ಲಿ ಆದ ಬಹುದೊಡ್ಡ ಸಾಧನೆ ಎಂದರೆ ಅದು ಕ್ವಾಂಟಮ್ ಮೆಕ್ಯಾನಿಕ್ಸ್‌ನ ಬೆಳವಣಿಗೆ. ಸಾಮಾನ್ಯರ ಅರಿವಿಗೇ ಬಾರದಂತೆ, ಅವರ ಜೀವನವನ್ನ ಬದಲಿಸಿರುವ ವೈಜ್ಞಾನಿಕ ಸಿದ್ಧಾಂತವಿದು. ಒಂದೀಡಿ ಕೋಣೆಯನ್ನು ತುಂಬುತ್ತಿದ್ದ ಒಂದು ಕಂಪ್ಯೂಟರ್ ಇಂದು ನಮ್ಮ ಅಂಗೈ ಅಗಲವಾಗಿರುವುದರಲ್ಲಿ ಈ ಸಿದ್ಧಾಂತದ ಕೊಡುಗೆ ಸಾಕಷ್ಟಿದೆ ಎಂದರೆ ಅದರ ಆಳ ಅರಿವಾದೀತು.
ವಿಜ್ಞಾನದ ಇತರ ವಿಭಾಗಗಳಿಗೆ ಹೋಲಿಸಿದರೆ ಕ್ವಾಂಟಮ್ ಮೆಕ್ಯಾನಿಕ್ಸ್ ಇನ್ನೂ ಬೆಳವಣಿಗೆ ಕಾಣುತ್ತಿರುವ ಒಂದು ವಿಭಾಗ. ಭೌತವಿಜ್ಞಾನದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾದರೂ ಸದಾ ಕುತೂಹಲ ತುಂಬುವ ವಿಷಯವಿದು. ಪ್ರಾಯೋಗಿಕವಾಗಿ ಇನ್ನೂ ಸಾಧ್ಯವಾಗಿರದಿದ್ದರೂ, ಸೈದ್ಧಾಂತಿಕವಾಗಿ ಸಾಧ್ಯ ಎಂದು ವಾದಿಸಬಲ್ಲ ಹಲವು ವಿದ್ಯಾಮಾನಗಳನ್ನು (phenomenons) ಕ್ವಾಂಟಮ್ ಮೆಕ್ಯಾನಿಕ್ಸ್ ಮುನ್ನೆಲೆಗೆ ತರುತ್ತದೆ. ಅಂಥವುಗಳಲ್ಲಿ parallel universe ಹಾಗೂ time travel ಪ್ರಮುಖವಾದಂತವು.
ಅನುಷ್ ಶೆಟ್ಟಿ ಅವರ 'ನೀನು ನಿನ್ನೊಳಗೆ ಖೈದಿ' ಕೃತಿಯು ಇಂತಹ ವಿದ್ಯಾಮಾನಗಳನ್ನು ಆಧಾರವಾಗಿರಿಸಿಕೊಂಡು ರಚಿತವಾಗಿರುವ ಒಂದು sci-fi ಕಾದಂಬರಿ. ಕನ್ನಡದ ಮಟ್ಟಿಗೆ ಇದೊಂದು ವಿಭಿನ್ನ ಕೃತಿ ಎಂದು ಹೇಳಿದರೆ ಖಂಡಿತ ತಪ್ಪಾಗಲಿಕ್ಕಿಲ್ಲ. ಅಲ್ಲದೇ,ಅತ್ಯಂತ ವಿಶಿಷ್ಟವಾದ ವಸ್ತುವನ್ನು ಆಯ್ದುಕೊಂಡು, ಅಷ್ಟೇ ವಿಶಿಷ್ಟವಾದ ಕತೆಯನ್ನು ಹೆಣೆಯುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
ಕೇವಲ ಕಾದಂಬರಿಯ ವಸ್ತುವಿನ ವಿಚಾರದಲ್ಲಷ್ಟೇ ಅಲ್ಲದೇ, ನಿರೂಪಣೆಯಲ್ಲಿಯೂ ಈ ಕೃತಿ ಹೊಸತನ ತೋರುತ್ತದೆ. ಖೈದಿಯ ಡೈರಿಯ ಪುಟಗಳನ್ನು ಯಥಾವತ್ತಾಗಿ ಮುದ್ರಿಸುವ ಪ್ರಯತ್ನ ಹಾಗೂ ಕಾದಂಬರಿಯ ಅಂತಿಮ ಭಾಗದ ನಿರೂಪಣೆ ಓದುಗನಿಗೆ ಒಂದು ಹೊಸ ಅನುಭವ ನೀಡುವಲ್ಲಿ ಯಶಸ್ವಿಯಾಗುತ್ತವೆ. ಒಂದೇ ಗುಟುಕಿನಲ್ಲಿ ಓದಿ ಮುಗಿಸಲು ಬೇಕಾದ ಎಲ್ಲ ಅರ್ಹತೆಗಳನ್ನೂ ಈ ಕೃತಿ ಹೊಂದಿದೆ.
ಈ ಕೃತಿ ಕೆಲವರಿಗೆ ಒಂದೇ ಓದಿಗೆ ಅತ್ಯಂತ ಇಷ್ಟವಾಗಿ ಮತ್ತೆ ಓದುವ ಹಂಬಲ ಮೂಡಬಹುದು. ಕೆಲವು ಭಾಗಗಳಲ್ಲಿ, ಕೆಲವರಿಗೆ ಈ ಕೃತಿ ಸಂಕೀರ್ಣವೂ ಎನ್ನಿಸಬಹುದು. ಈ ಎರಡು ಸಂದರ್ಭಗಳಿಗೂ ಖೈದಿಯ ಡೈರಿಯ ಈ ಸಾಲು ಉತ್ತರವಾಗಬಹುದು- "ಪದೇ ಪದೇ ಓದಿದ ಸಾಲನ್ನೇ ಓದುತಿರಬಹುದು."

June 29, 2018
Simply mindblowing!!!!
Was always used to get amazed whenever I read about concepts of Quantum Physics, Time and space relativity. Used to get thrilled when movies such as 'Interstellar' actually used these concepts in their gripping story and showed them on screen. But, boy! never ever imagined I would be reading a Kannada novel which used these concepts and having a story which revolves around 'DEJAVU'.
Anush A Shetty, hats off to you for penning down such a wonderful Science fiction in Kannada without losing out the nativity of Coorg (Irpu falls) where almost the entire story is set up.
Once you start reading it, I bet you will not keep it down until you finish reading it!
Liked the way the handwritten fonts are used in the novel whenever Gilbert's diary is referred.
Gilbert, the Irpu falls, the firefly, the coffin, and the experiment will surely haunt you even after you finish the book.
KoLi modla, motte modla!!!
Naanu Nannolage Khaidi.

January 29, 2019
ಹೊಸ ಬಗೆಯ ಸೈನ್ಸ್ ಫಿಕ್ಷನ್.
June 15, 2024
ಈ ಪುಸ್ತಕ ಅದೆಷ್ಟು ಇಷ್ಟ ಆಯಿತು ಎಂದರೆ ಅನುಷ್ ಅವರು ಬರೆದ ಉಳಿದೆಲ್ಲ ಪುಸ್ತಕ್ಗಳನ್ನೂ ಕೊಂಡೆ... ಈ ಪುಸ್ತಕ ತೆಲುಗಿನಲ್ಲಿ "ಆರಂಭಮ್ "ಹೆಸರಿನಲ್ಲಿ ಸಿನಿಮಾ ಆಗಿ ಒಳ್ಳೆಯ ಹಿಟ್ ಕೂಡ ಆಗಿದೆ...ನನಗೆ ಹಿಡಿಸಿದ ಟಾಪ್ 10 ಪುಸ್ತಕಗಳಲ್ಲಿ ಇದು ಕೂಡ ಒಂದು...
January 14, 2026
Mind-blowing Story. ನಿಜವಾಗ್ಲೂ ಒಂದು ಮೂವೀ ನೋಡಿದ ಹಾಗೆ ಅನ್ಸ್ತು, ಯಾಕಂದ್ರೆ ಲೇಖಕರ ಬರವಣಿಗೆ ಶೈಲಿನೇ ಹಾಗ್ ಇದೆ. ಈ ಕಾದಂಬರಿನ ಓದಿ ಮುಗ್ಸಿದ್ರು ಈ ವಿಷಯ ನನ್ ತಲೆಯಿಂದ ಹೋಗಲ್ಲ ಅನ್ಸುತ್ತೆ, ಅಷ್ಟು ಚೆನ್ನಾಗಿದೆ.
December 20, 2019
Nija helbeku Andre nanna idi jevanadalli odida modala kadambari Andre adu " neenu ninnolage kidhi " nanu science student agirodrinda nange Anush avru heloka Horatiro subject arta aytu , but elladakkinta avru katenaaa henadiro Shili nannanna kadambari mugiyo varegu yellu alugaadalu bittilla , so tq brother for the amazing book
August 16, 2019
Outstanding!!!!
January 4, 2020
An unique science fiction novel , Good read..
November 22, 2022
ಕ್ವಾಂಟಮ್ ಮೆಕ್ಯಾನಿಕ್ಸ್ ಭೌತವಿಜ್ನಾನ ಲೋಕದ ಬಹುದೊಡ್ಡ ಜಗತ್ತು. ಅದರೊಳಗಿನ ಸಿದ್ಧಾಂತ, ಥೀಯರಿಗಳು ವಿಜ್ನಾನ ಲೋಕದಲ್ಲಿ ಹುಟ್ಟು ಹಾಕಿರುವ ಹೊಸ ಹೊಸ ಸಂಶೋಧನೆಗಳು ಅತ್ಯದ್ಭುತವಾದವುಗಳು. ಮೊದಲೆಲ್ಲಾ ಇಡಿ ಕೊಣೆಯನ್ನು ಆವರಿಸಿಕ್ಕೊಳ್ಳುತ್ತಿದ್ದ ಗಣಕಯಂತ್ರಗಳು ಅಥವಾ ವಿವಿಧ ಯಂತ್ರೋಪಕರಣಗಳು ಇವತ್ತು ಅಂಗೈಯಗಲದಷ್ಟು ಕಿರಿದಾಗಿರುವುದರಲ್ಲಿ ಇದರ ಕೊಡುಗೆ ಬಹಳ ಇದೆ.
ವಿಜ್ಞಾನದ ಇತರ ವಿಭಾಗಗಳಿಗೆ ಹೋಲಿಸಿದರೆ ಕ್ವಾಂಟಮ್ ಮೆಕ್ಯಾನಿಕ್ಸ್ ಇನ್ನೂ ಬೆಳವಣಿಗೆ ಕಾಣುತ್ತಿರುವ ಒಂದು ವಿಭಾಗ. ಭೌತವಿಜ್ಞಾನದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾದರೂ ಸದಾ ಕುತೂಹಲ ತುಂಬುವ ವಿಷಯವಿದು. ಪ್ರಾಯೋಗಿಕವಾಗಿ ಇನ್ನೂ ಸಾಧ್ಯವಾಗಿರದಿದ್ದರೂ, ಸೈದ್ಧಾಂತಿಕವಾಗಿ ಸಾಧ್ಯ ಎಂದು ವಾದಿಸಬಲ್ಲ ಹಲವು ವಿದ್ಯಾಮಾನಗಳನ್ನು (phenomenons) ಕ್ವಾಂಟಮ್ ಮೆಕ್ಯಾನಿಕ್ಸ್ ಮುನ್ನೆಲೆಗೆ ತರುತ್ತದೆ. ಅಂಥವುಗಳಲ್ಲಿ parallel universe ಹಾಗೂ time travel ಪ್ರಮುಖವಾದಂತವು.
ಅನುಷ್ ಶೆಟ್ಟಿ ಅವರ 'ನೀನು ನಿನ್ನೊಳಗೆ ಖೈದಿ' ಕೃತಿಯು ಇಂತಹ ವಿದ್ಯಾಮಾನಗಳನ್ನು ಆಧಾರವಾಗಿರಿಸಿಕೊಂಡು ರಚಿತವಾಗಿರುವ ಒಂದು sci-fi ಕಾದಂಬರಿ. ಕನ್ನಡದ ಮಟ್ಟಿಗೆ ಇದೊಂದು ವಿಭಿನ್ನ ಕೃತಿ ಎಂದು ಹೇಳಿದರೆ ಖಂಡಿತ ತಪ್ಪಾಗಲಿಕ್ಕಿಲ್ಲ. ಅಲ್ಲದೇ,ಅತ್ಯಂತ ವಿಶಿಷ್ಟವಾದ ವಸ್ತುವನ್ನು ಆಯ್ದುಕೊಂಡು, ಅಷ್ಟೇ ವಿಶಿಷ್ಟವಾದ ಕತೆಯನ್ನು ಹೆಣೆಯುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
ಕೇವಲ ಕಾದಂಬರಿಯ ವಸ್ತುವಿನ ವಿಚಾರದಲ್ಲಷ್ಟೇ ಅಲ್ಲದೇ, ನಿರೂಪಣೆಯಲ್ಲಿಯೂ ಈ ಕೃತಿ ಹೊಸತನ ತೋರುತ್ತದೆ. ಖೈದಿಯ ಡೈರಿಯ ಪುಟಗಳನ್ನು ಯಥಾವತ್ತಾಗಿ ಮುದ್ರಿಸುವ ಪ್ರಯತ್ನ ಹಾಗೂ ಕಾದಂಬರಿಯ ಅಂತಿಮ ಭಾಗದ ನಿರೂಪಣೆ ಓದುಗನಿಗೆ ಒಂದು ಹೊಸ ಅನುಭವ ನೀಡುವಲ್ಲಿ ಯಶಸ್ವಿಯಾಗುತ್ತವೆ. ಒಂದೇ ಗುಟುಕಿನಲ್ಲಿ ಓದಿ ಮುಗಿಸಲು ಬೇಕಾದ ಎಲ್ಲ ಅರ್ಹತೆಗಳನ್ನೂ ಈ ಕೃತಿ ಹೊಂದಿದೆ.
ವಿಜ್ಞಾನದ ಇತರ ವಿಭಾಗಗಳಿಗೆ ಹೋಲಿಸಿದರೆ ಕ್ವಾಂಟಮ್ ಮೆಕ್ಯಾನಿಕ್ಸ್ ಇನ್ನೂ ಬೆಳವಣಿಗೆ ಕಾಣುತ್ತಿರುವ ಒಂದು ವಿಭಾಗ. ಭೌತವಿಜ್ಞಾನದ ವಿದ್ಯಾರ್ಥಿಗಳಿಗೆ ಕಬ್ಬಿಣದ ಕಡಲೆಯಾದರೂ ಸದಾ ಕುತೂಹಲ ತುಂಬುವ ವಿಷಯವಿದು. ಪ್ರಾಯೋಗಿಕವಾಗಿ ಇನ್ನೂ ಸಾಧ್ಯವಾಗಿರದಿದ್ದರೂ, ಸೈದ್ಧಾಂತಿಕವಾಗಿ ಸಾಧ್ಯ ಎಂದು ವಾದಿಸಬಲ್ಲ ಹಲವು ವಿದ್ಯಾಮಾನಗಳನ್ನು (phenomenons) ಕ್ವಾಂಟಮ್ ಮೆಕ್ಯಾನಿಕ್ಸ್ ಮುನ್ನೆಲೆಗೆ ತರುತ್ತದೆ. ಅಂಥವುಗಳಲ್ಲಿ parallel universe ಹಾಗೂ time travel ಪ್ರಮುಖವಾದಂತವು.
ಅನುಷ್ ಶೆಟ್ಟಿ ಅವರ 'ನೀನು ನಿನ್ನೊಳಗೆ ಖೈದಿ' ಕೃತಿಯು ಇಂತಹ ವಿದ್ಯಾಮಾನಗಳನ್ನು ಆಧಾರವಾಗಿರಿಸಿಕೊಂಡು ರಚಿತವಾಗಿರುವ ಒಂದು sci-fi ಕಾದಂಬರಿ. ಕನ್ನಡದ ಮಟ್ಟಿಗೆ ಇದೊಂದು ವಿಭಿನ್ನ ಕೃತಿ ಎಂದು ಹೇಳಿದರೆ ಖಂಡಿತ ತಪ್ಪಾಗಲಿಕ್ಕಿಲ್ಲ. ಅಲ್ಲದೇ,ಅತ್ಯಂತ ವಿಶಿಷ್ಟವಾದ ವಸ್ತುವನ್ನು ಆಯ್ದುಕೊಂಡು, ಅಷ್ಟೇ ವಿಶಿಷ್ಟವಾದ ಕತೆಯನ್ನು ಹೆಣೆಯುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
ಕೇವಲ ಕಾದಂಬರಿಯ ವಸ್ತುವಿನ ವಿಚಾರದಲ್ಲಷ್ಟೇ ಅಲ್ಲದೇ, ನಿರೂಪಣೆಯಲ್ಲಿಯೂ ಈ ಕೃತಿ ಹೊಸತನ ತೋರುತ್ತದೆ. ಖೈದಿಯ ಡೈರಿಯ ಪುಟಗಳನ್ನು ಯಥಾವತ್ತಾಗಿ ಮುದ್ರಿಸುವ ಪ್ರಯತ್ನ ಹಾಗೂ ಕಾದಂಬರಿಯ ಅಂತಿಮ ಭಾಗದ ನಿರೂಪಣೆ ಓದುಗನಿಗೆ ಒಂದು ಹೊಸ ಅನುಭವ ನೀಡುವಲ್ಲಿ ಯಶಸ್ವಿಯಾಗುತ್ತವೆ. ಒಂದೇ ಗುಟುಕಿನಲ್ಲಿ ಓದಿ ಮುಗಿಸಲು ಬೇಕಾದ ಎಲ್ಲ ಅರ್ಹತೆಗಳನ್ನೂ ಈ ಕೃತಿ ಹೊಂದಿದೆ.
April 20, 2026
ಅನುಷ್ ಶೆಟ್ಟಿ ಅವರ “ನೀನು ನಿನ್ನೊಳಗೆ ಕೈದಿ” ಕೃತಿ ಆತ್ಮಪರಿಶೀಲನೆ, ಮನಸ್ಸಿನ ಸಂಘರ್ಷ ಮತ್ತು ಜೀವನದ ಆಳವಾದ ಅರ್ಥಗಳನ್ನು ಹುಡುಕುವ ಪ್ರಯಾಣವನ್ನು ಚಿತ್ರಿಸುವ ಚಿಂತನೆಗೆ ದೂಡುವ ಪುಸ್ತಕವಾಗಿದೆ.
ಈ ಪುಸ್ತಕದ ಕೇಂದ್ರಭಾವನೆ — ಮಾನವನು ಹೊರಗಿನ ಬಂಧನಕ್ಕಿಂತ ಹೆಚ್ಚು ತನ್ನೊಳಗಿನ ಬಂಧನದಲ್ಲೇ ಕೈದಿಯಾಗಿರುತ್ತಾನೆ — ಎಂಬುದು. ಲೇಖಕ ಮನಸ್ಸಿನ ಎರಡು ಬದಿಗಳನ್ನು (ಒಂದು ಧೈರ್ಯ, ಮತ್ತೊಂದು ಭಯ) ಬಹಳ ಸ್ಪಷ್ಟವಾಗಿ ತೋರಿಸುತ್ತಾರೆ. ಈ “ಎರಡು ಬದಿಗಳ” ಒಳಸಂಘರ್ಷವೇ ಕಥೆಯ ಮುಖ್ಯ ಆಧಾರ.
ಪುಸ್ತಕದಲ್ಲಿ ನಾಯಕನ ಆತ್ಮಸಂವಾದಗಳ ಮೂಲಕ ಜೀವನದ ಪ್ರಶ್ನೆಗಳು ಎದುರಾಗುತ್ತವೆ:
ಲೇಖಕರು ನಮ್ಮನ್ನು ದೇಜಾಗೌ ನ ಒಳಗೆ ಇಳಿಸಿರುತ್ತಾರೆ. ಕೆಲವು ಪ್ರಶ್ನೆಗಳು ಓದುಗರನ್ನೇ ಒಳಗೆ ನೋಡುವಂತೆ ಮಾಡುತ್ತವೆ. ಕಥೆ ಸಾಗುವಂತೆ, ವ್ಯಕ್ತಿ ತನ್ನೊಳಗಿನ ಭಯ, ಹೀನಭಾವನೆ, ಮತ್ತು ಸಮಾಜದ ಒತ್ತಡಗಳಿಂದ ಹೇಗೆ “ಕೈದಿ” ಆಗುತ್ತಾನೆ ಎಂಬುದು ತಿಳಿಯುತ್ತದೆ.
ಲೇಖಕ ಬಳಸಿರುವ ಭಾಷೆ ಸರಳವಾದರೂ, ಅದರ ಅರ್ಥ ಗಾಢವಾಗಿದೆ. ಕೆಲವೊಮ್ಮೆ ಕಾವ್ಯಾತ್ಮಕ ಶೈಲಿಯೂ ಕಾಣಿಸುತ್ತದೆ, ಇದು ಓದುಗರಿಗೆ ಭಾವನಾತ್ಮಕ ಸಂಪರ್ಕವನ್ನು ನೀಡುತ್ತದೆ. ಕಥೆಯ ನಿರೂಪಣೆಯಲ್ಲಿ ತಾತ್ವಿಕ ಅಂಶಗಳ ಜೊತೆಗೆ ಜೀವನದ ನೈಜ ಅನುಭವಗಳ ಸ್ಪರ್ಶವಿದೆ.
ಆತ್ಮಜ್ಞಾನ ಮತ್ತು ಸ್ವಪರಿಚಯದ ಹುಡುಕಾಟ,
ಮನಸ್ಸಿನ ಒಳಸಂಘರ್ಷ ,
ಭಯ ಮತ್ತು ಆತ್ಮವಿಶ್ವಾಸದ ನಡುವಿನ ಹೋರಾಟ
ಸಮಾಜದ ನಿರೀಕ್ಷೆಗಳು ಮತ್ತು ವೈಯಕ್ತಿಕ ಸ್ವಾತಂತ್ರ್ಯ
ಒಟ್ಟಾರೆ, “ನೀನು ನಿನ್ನೊಳಗೆ ಕೈದಿ” ಕೇವಲ ಕಥೆ ಅಲ್ಲ; ಅದು ಒಂದು ಆತ್ಮಪ್ರಯಾಣ. ಅನುಷ್ ಶೆಟ್ಟಿ ಅವರು ಈ ಕೃತಿಯಲ್ಲಿ ಓದುಗರಿಗೆ ತಮ್ಮೊಳಗಿನ ಬಂಧನವನ್ನು ಅರಿತು ಅದರಿಂದ ಮುಕ್ತರಾಗುವ ಸಂದೇಶವನ್ನು ನೀಡಿದ್ದಾರೆ.

February 2, 2022
ಜೈಲಿನಲ್ಲಿರು ಖೈದಿ ಜೈಲೂ ಗೋಡೆಯ ಹೊರಗಿನ ಪ್ರಪಂಚವನ್ನೆ ಸ್ವಾತಂತ್ರ್ಯ ಅಂದುಕೊಂಡಿರುತ್ತಾನೆ. ನಿಜವಾಗಲೂ ಅದು ಸ್ವಾತಂತ್ರ್ಯವೆ? ಹೊರಗಡೆಯ ಜೀವನವೂ ಇಂತಹ ಹಲವಾರು ಗೋಡೆಗಳ ಬಂಧನವಾಗಿರುತ್ತದೆ. ಅದರ ಮಧ್ಯೆ ಬಂಧಿಯಾಗಿರುವ ಪ್ರತಿಯೊಬ್ಬನು ಒಂದಲ್ಲ ಒಂದು ರೀತಿಯ ಖೈದಿಯೇ.
ಕೋಳಿ ಮೊದಲ ಮೊಟ್ಟೆ ಮೊದಲ, ಕಳೆದು ಹೋದ ಸಮಯ ಮರಳಿ ಬರಬಹುದೆ. ಮುಂದೆ ಆಗೊದನ್ನ ಮೊದಲೆ ತಿಳಿಯಬಹುದೆ.
ಕಾಲಘಾಟಿಯ ಜೈಲೊಂದರಲ್ಲಿ ನಿಗೂಢವಾಗಿ ಮಾಯವಾಗಿರುವ ಖೈದಿ ಹೇಗೆ ತಪ್ಪಿಸಿಕೊಂಡ. ತನಿಖೆಯಲ್ಲಿ ಬಯಲಾಗುವ ವಿಷಯಗಳು ರೋಮಾಂಚನಕಾರಿಯಾಗಿದೆ.
ದೇಜಾ ವು ಪರಿಕಲ್ಪನೆಯ ಆಧಾರದ ಮೇಲೆ ಅಪರಿಚಿತ ಘಟನೆಗಳು, ವ್ಯಕ್ತಿಗಳನ್ನು ಮೊದಲ ಬಾರಿ ನೋಡಿದರೂ, ಇದಕ್ಕೂ ಮುಂಚೆ ಅದೇ ಘಟನೆಗಳು ನಮ್ಮ ಜೀವನದಲ್ಲಿ ನಡೆದ ಅನುಭವಗಳನ್ನು ತರುತ್ತದೆ. ಇದು ಭ್ರಮೆನೋ ಅಥವಾ ನಿಜಾನೋ? ಇಲ್ಲ ನಮ್ಮಂತೆಯೇ ನಮ್ಮ ಪ್ರಪಂಚಾನೇ ಹೋಲುವಂತ ಇನ್ನೊಂದು ಸಮನಾಂತರ ಪ್ರಪಂಚ ಇರಬಹುದೇ? ಅಲ್ಲಿ ಮತ್ತೆ ಇಲ್ಲಿ ನಡೆಯುವ ಘಟನೆಗಳಿಗೆ ಸಾಮಾನ್ಯ ಹೋಲಿಕೆ ಇದ್ದೂ ಕಾಲಘಟ್ಟಗಳ ವ್ಯತ್ಯಾಸದಿಂದ ಭವಿಷ್ಯದಲ್ಲಿ ನಡೆಯುವ ಘಟನೆಗಳು ಅಲ್ಲಿ ಮೊದಲೆ ನಡೆದಿರಬಹುದೇ? ಇದೇ ಕಾರಣಕ್ಕೆ ಕೆಲವು ಅಪರಿಚಿತ ವಿಷಗಳು ನಮಗೆ ಮೊದಲೇ ಅನುಭವ ಆಗಿರುವಂತೆ ಭಾಸವಾಗಿರಬಹುದೇ?
ಇದೆಲ್ಲದಕ್ಕೂ ಉತ್ತರ ಈ ಅನನ್ಯ ಕಾಂದಂಬರಿಯಲ್ಲಿ ದೊರೆಯುತ್ತದೆ. ವಿಜ್ಞಾನ ಮತ್ತು ಕಾಲ್ಪನಿಕ ಅಂಶಗಳ ಮಿಶ್ರಿತವಾದ ಈ ಪುಸ್ತಕ ಓದುಗರ ಕುತೂಹಲವನ್ನು ಇಮ್ಮಡಿ ಗೊಳಿಸುತ್ತದೆ.
ನೀನು ನಿನ್ನೊಳಗೆ ಖೈದಿ
🖊️ ಅನುಷ್ ಎ ಶೆಟ್ಟಿ.

February 18, 2022
One of the most unique Kannada novels I have read in the recent past. It's a joy to see Science Fiction books are getting written in Kannada. Kudos to the author for that.
For Fiction, Anush follows the footsteps of authors like Tejaswi by setting the story near waterfalls surrounded by dense forest. The Nature descriptions are exquisite and make you feel that you are living in that area.
In terms of science, the author has chosen an interesting idea that is not explored in many earlier SF novels. But I felt the amount of Focus given to fiction was not given to the science part. Often the description was vague and not fleshed out as other part stories. Also, It would have been great if it was woven very beginning of the story so that was enough page time for science to flourish. Currently, it feels a little rushed in the end. Hopefull Author improves on it in future.
Overall a great read. Hope to see more SF books in Kannada.

November 21, 2024
ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಕಾದಂಬರಿಗಳು ತುಂಬಾ ಕಡಿಮೆ. ಅದರಲ್ಲೂ ದೇಜಾವು, ಸಮಯ ಪ್ರಯಾಣ, ಮತ್ತು ಸಮಾನಾಂತರ ಜಗತ್ತಿನ ಬಗ್ಗೆ ಬರೆದಿರೋ ಈ ಕಾದಂಬರಿ ನಿಜಕ್ಕೂ ವಿಶೇಷ. ಪುಸ್ತಕ ತೆಗೆದ ಕ್ಷಣದಿಂದ ಮುಗಿಸುವವರೆಗೂ ಬಿಡಲು ಮನಸ್ಸೇ ಆಗಲ್ಲ - ಅಷ್ಟು ಕುತೂಹಲಕಾರಿಯಾಗಿ ಕಥೆ ಹೆಣೆದಿದ್ದಾರೆ.
ಕಾಲಾಘಾಟಿ ಜೈಲಿನಿಂದ ಗಿಲ್ಬರ್ಟ್ ಎಂಬ ಖೈದಿ ಅದ್ಭುತವಾಗಿ ಮಾಯವಾಗ್ತಾನೆ - ಜೈಲಿನ ಯಾವ ಗೋಡೆನೂ ಹಾಳಾಗಿಲ್ಲ, ಯಾವ ಗೇಟೂ ಮುರಿದಿಲ್ಲ, ಆದ್ರೂ ಅವನು ಇಲ್ಲ! ಈ ರಹಸ್ಯದ ಹಿಂದೆ ಇರೋದು ವಿಜ್ಞಾನಿ ಸುಬ್ರಹ್ಮಣ್ಯ ರಾವ್ ಅವರ ದೇಜಾವು ಕುರಿತ ಸಂಶೋಧನೆ. ಈ ಸಂಶೋಧನೆ ನಮ್ಮನ್ನ ಹೊಸ ಜಗತ್ತಿಗೆ ಕರೆದೊಯ್ಯುತ್ತೆ.
ಇದು ನಾನು ಓದಿದ ಅನುಷ್ ಅವರ ಮೂರನೇ ಪುಸ್ತಕ. ಖೈದಿಯ ಡೈರಿ ಪುಟಗಳು ಮತ್ತು ಕಾದಂಬರಿಯ ಕೊನೆಯ ಭಾಗ ನಮ್ಮನ್ನ ಯೋಚನೆಗೆ ಹಚ್ಚುತ್ತೆ. ಕಥೆ ಹೇಳೋ ರೀತಿ ತುಂಬಾ ವಿಭಿನ್ನವಾಗಿದೆ. ಅನುಷ್ ಅವರು ವಿಜ್ಞಾನದ ಕಠಿಣ ವಿಷಯಗಳನ್ನು ಸುಲಭವಾಗಿ ಅರ್ಥವಾಗುವಂತೆ ಹೇಳಿದ್ದಾರೆ.
ಆದರೆ ನನಗನ್ನಿಸಿದ್ದು, ಈ ಕಥೆಯನ್ನು ಇನ್ನೂ ಮುಂದುವರೆಸಬಹುದಿತ್ತು. ಸಮಾನಾಂತರ ಜಗತ್ತಿನ ಪರಿಕಲ್ಪನೆಯಲ್ಲಿ ಇನ್ನೂ ಅನ್ವೇಷಿಸಬಹುದಾದ ಸಾಧ್ಯತೆಗಳಿವೆ. ಒಂದು ವೇಳೆ ಲೇಖಕರು ಈ ಕಥೆಯ ಮುಂದಿನ ಭಾಗವನ್ನು ಬರೆಯಲು ಯೋಚಿಸಿದರೆ, ಅದು ಇನ್ನೂ ಆಸಕ್ತಿದಾಯಕವಾಗಿರಬಹುದು. ಒಟ್ಟಾರೆ, ಇಂತಹ ಹೊಸ ಪ್ರಯೋಗಗಳು ಕನ್ನಡದಲ್ಲಿ ಇನ್ನಷ್ಟು ಬರಲಿ ಅನ್ನಿಸುತ್ತೆ.

February 21, 2026
ಅರೆ ನಾ ಈ ಜಾಗಕ್ಕೆ ಮೊದಲೇ ಬಂದಿದ್ದೇನೆ ಅಲ್ವಾ, ಆ ವ್ಯಕ್ತಿಯನ್ನು ಮೊದಲೇ ಎಲ್ಲೋ ನೋಡಿದ್ದೇನೆ ಮಾತನಾಡಿಸಿದ್ದೇನೆ, ಈ ವಸ್ತು ಮೊದಲು ಎಲ್ಲೋ ನೋಡಿದ ಹಾಗಿದೆ ಅಲ್ವಾ. ಕೆಲವೊಮ್ಮೆ ನಿಮಗೂ ಹೀಗೂ ಅನಿಸುತ್ತದೆ ಅಲ್ಲವೇ ಮೊದಲ ಬಾರಿ ಹೋದ ಜಾಗಕ್ಕೆ ಮೊದಲೊಮ್ಮೆ ಹೋದಂತೆ, ಒಮ್ಮೆಯೂ ಭೇಟಿಯಾಗದ ವ್ಯಕ್ತಿಯನ್ನು ಮೊದಲೇ ಎಲ್ಲೋ ನೋಡಿ ಮಾತನಾಡಿಸಿದಂತೆ ಇದೆಲ್ಲಾ ನಮ್ಮ ಕಲ್ಪನೆಯೋ,? ಭ್ರಮೇಯೋ.? ಅಥವಾ ಸಮಾನಾಂತರ ಜಗತ್ತೋ..?.
ಕನ್ನಡಿ ಮುಂದೆ ನಿಂತಾಗ ಕಾಣಿಸುವ ಪ್ರತಿಬಿಂಬ ನಮ್ಮದೇನಾ...?ಅಥವಾ ನಮ್ಮ ತದ್ರೂಪವಾ...?
ಈ loop ಎಂದರೇನು, parallel world ಅಂದರೇನು, science fiction ಎಂದರೇನು ತಿಳಿಯೋಕೆ ಈ ಬುಕ್ ಓದಿದರೆ ತಿಳಿಯದಿರಲು ಸಾಧ್ಯವೇ.
ಕಾಲಘಟಿಯ ಜೈಲಿನಲ್ಲಿ ಒಬ್ಬ ವ್ಯಕ್ತಿ ಇದ್ದಕ್ಕಿದಂತೆ ಪರಾರಿಯಾಗುತ್ತಾನೆ, ಅಲ್ಲಲ್ಲ ಮಾಯವಾಗುತ್ತಾನೆ. ಅವನೇಗೆ ಮಾಯವಾದ, ಅವನಿಗೂ ಈ parallel ವರ್ಲ್ಡ್ ಗೂ ಇರುವ ಸಂಬಂಧವೇನು, ಅವನು ನಿಜವಾಗಿಯೂ ಅಪರಾಧಿಯೇ, ಸ್ವಂತತ್ರ ಜೈಲ್ ಒಳಗಿದಿಯೋ ಹೊರಗಿದಿಯೋ ಎಂಬುದೇ ಈ ಕತೆಯ ಹಂದರ.
ಅನುಷ್ ಬಿ ಶೆಟ್ಟಿಯವರ "ನೀನು ನಿನ್ನೊಳಗೆ ಕೈದಿ" ಒಮ್ಮೆ ಓದಿ ಓದಿಸಿ...

January 21, 2022
ದೇಜಾವು ಬಗ್ಗೆ ಮೊದಲು ಕೇಳಿದ್ದೆನಾದರೂ ಅದನ್ನು ಪೂರ್ಣ ಪ್ರಮಾಣದಲ್ಲಿ ಅರ್ಥೈಸಿಕೊಂಡದ್ದು ಈ ಕಾದಂಬರಿಯಲ್ಲಿ. ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಬರೆಯುವ ಸಾಹಸವನ್ನು ಮೆಚ್ಚಬೇಕು. ಕಾದಂಬರಿಯು ಪೂಚಂತೆ ಅವರ ಕರ್ವಾಲೋ ಮಾದರಿಯಲ್ಲಿದ್ದರೂ, ಕಥಾ ಹಂದರ ಅದಕ್ಕಿಂತ ಭಿನ್ನವಾಗಿದೆ.
ಕಥೆಯು ಪ್ರಾರಂಭದಿಂದಲೇ ಓದುಗರ ಕುತೂಹಲವನ್ನು ಕೆರಳಿಸುತ್ತಾ ಸಾಗುತ್ತದೆ. ಹಿಡಿದ ಪುಸ್ತಕವನ್ನು ಕೆಳಗಿಡಲು ಮನಸ್ಸಾಗುವುದಿಲ್ಲ. ಇನ್ನೊಂದು ಭಾಗವನ್ನು ಓದಿಬಿಡೋಣ ಎನ್ನಿಸುತ್ತದೆ. ಹಾಗೆಯೇ ಇಡೀ ಪುಸ್ತಕವನ್ನು ಒಂದು ಸಿಟ್ಟಿಂಗ್ ಅಲ್ಲಿ ಓದಿ ಬಿಡಬಹುದು. ಗುರು-ಶಿಷ್ಯರ ಸಂಬಂಧ, ಚಿಗುರಿ ಪಕ್ವವಾಗುವ ಪ್ರೇಮ ಕಥನ ಎಲ್ಲವೂ ಮುಖ್ಯಕಥೆಯ ಕಾಂತಿಯನ್ನು ಕುಂದದಂತೆ ಪೋಣಿಸಲ್ಪಟ್ಟಿವೆ. ಕೊನೆಯ ಭಾಗಕ್ಕೆ ಬರುವಷ್ಟರಲ್ಲಿ ಕಥೆ ಕ್ಲಿಷ್ಟವಾಗಿ ಓದುಗರ ತಲೆ ಒಮ್ಮೆ ಗಿರ್ ಎಂದರೆ ಅದು ಸಾಮಾನ್ಯ.
ಒಳ್ಳೆಯ ಪ್ರಯತ್ನ.

December 14, 2023
ಈ ಕೃತಿಯೊಂದಿಗೆ ನಾನು ಅನುಷ್ ಅವರು ಈವರೆಗೆ ಬರೆದ ಎಲ್ಲಾ ಪುಸ್ತಕಗಳನ್ನು ಓದಿ ಮುಗಿಸಿರುತ್ತೇನೆ.
ಈ ಪುಸ್ತಕವನ್ನು ಕೊನೆಯದಾಗಿ ಓದುತ್ತೆನ್ನೆಂದು ಉಳ್ಳಿಸಿದ್ದೆ.
ಯಾಕೆಂದರೆ ಅನುಷ್ ಈ ಕೃತಿಯಲ್ಲಿ Sci -Fi,Time Travel, ಹಾಗೂ Parallel Universe ಸಿದ್ಧಾಂತಗಳ್ಳನು ಬಳಸಿ ವಿಭಿನ್ನವಾಗಿ ಕಥೆ ಹೆಣೆದಿದ್ದಾರೆಂದು ತಿಳಿಯಿತು..
ಮೊದಲ ಪುಟದಿಂದಲ್ಲೇ ತುಂಬಾ ರೋಚಕವಾಗಿ ಕಥೆ ಸಾಗಿ,ರೋಮಾಂಚನ ರೀತಿಯಲ್ಲಿ ಕಥೆ ಅಂತ್ಯವಾಗುತ್ತದೆ..
ಒಂದೇ ಬಾರಿ ಓದಿ ಅರ್ಥವಾಗುವ ಕಥೆ ಇದಲ್ಲ,ಮತ್ತೆ ಮಗದೊಮ್ಮೆ ಓದಿ ಅರ್ಥೈಸಿಕೊಳ್ಳಬೇಕಾಗಿದೆ..
ಇದು ಕನ್ನಡ ನವ ಸಾಹಿತ್ಯಕ್ಕೆ ಒಬ್ಬ ಯುವ ಬರಹಗಾರನಿಂದ ಬಂದ ಒಂದು ಕೊಡುಗೆಯೆನ್ನಬಹುದು..
ಅನುಷ್ ಅವರು ಇನ್ನೂ ಹೆಚ್ಚು ಕಾಲ್ಪನಿಕ ಕತೆಗಳ್ಳನ್ನು ಬರೆಯಲಿ ಎಂದು ಆಶಿಸುತ್ತಾ,ಅವರ ಮುಂದಿನ ಪ್ರಕಟಣೆಗಾಗಿ ಕಾಯುತ್ತಿರುತ್ತೇನೆ ಎಂದು ಹೇಳಲು ಇಚ್ಚಿಸುತ್ತೇನೆ..

October 23, 2024
ಇದು ನಾನು ಓದಿದ ಅನುಷ್ ಅವರ ನಾಲ್ಕನೇಯ ಕಾದಂಬರಿ..!! ಇತ್ತೀಚೆಗೆ ದಿನಗಳಲ್ಲಿ ಪರಿಸರ ಮತ್ತು ವೈಜ್ಞಾನಿಕ ಹಿನ್ನೆಲೆಯಲ್ಲಿ ಕಥೆಗಳನ್ನು ಸೃಷ್ಟಿಸುವಲ್ಲಿ ಲೇಖಕರು ಸೈ ಎನ್ನಿಸಿಕೊಂಡಿದ್ದಾರೆ. ಆಹುತಿ, ಹುಲಿ ಪತ್ರಿಕೆ 1-2 ರಲ್ಲಿ ಕೂಡ ಗಟ್ಟಿಯಾದ ಪರಿಸರದ ಕಥೆಗಳ ಜೊತೆಗೆ, ಅದರ ಸುತ್ತಲಿನ ಮನುಷ್ಯನ ರಾಜಕೀಯ ಹಾಗೂ ಸಾಮಾಜಿಕ ಬದುಕಿನ ಕಥೆಗಳು ಅನಾವರಣಗೊಂಡಿದ್ದವು.
ಇಲ್ಲಿ ಪರಿಸರಕ್ಕೆ ಜೊತೆಯಾಗಿರೋದು ದೇಜಾವು ಎಂಬಂಥ ಭೌತಶಾಸ್ತ್ರದ ವಿಷಯ. ಕಾದಂಬರಿಯಲ್ಲಿ ಬರೋದು ಕೆಲವೇ ಪಾತ್ರಗಳಾದರೂ, ಅವುಗಳಿಗೆ ಒಳ್ಳೆಯ ನಿರೂಪಣೆಯನ್ನು ಒದಗಿಸಿದ್ದಾರೆ ಲೇಖಕರು..!! ಅಲ್ಲಲ್ಲಿ ಸ್ವಲ್ಪ ಗೊಂದಲ ಉಂಟಾಗುತ್ತದೆ ಅನ್ನಿಸಿದರೂ, ಕೊನೆಗೆ ತಲುಪುವಾಗ ಬಹುತೇಕ ಗೊಂದಲ ಪರಿಹಾರವಾಗುತ್ತೆ. ಒಟ್ಟಾರೆ ಒಂದೊಳ್ಳೆ ಕಾದಂಬರಿ. ವೈಜ್ಞಾನಿಕ ಕಥೆಗಳು ಇನ್ನೂ ಕನ್ನಡದಲ್ಲಿ ಬರಬೇಕು..!!

August 11, 2025
Probably this is my first science fiction novel in Kannada. This book is mainly based on Deja vu or quantum physics. The Story is quite similar to some parts of the Dark Series on Netflix. The story mainly revolves around the Jail environment, Detectives, Gilbart, the Scientist, and his daughter. A good director from Kannada should definitely pick this book, make a movie out of it. It has great content for a movie. Overall, it's an easy read. If you have already watched the Dark series, it's very easy to understand the theme behind the story.
It's good to see even the Kannada literature world exploring different genres rather than sticking to a specific genre.

January 26, 2022
ಕನ್ನಡದಲ್ಲಿ ನಾನು ಓದಿರೋ ಎರಡನೇ science fiction ಕಥೆ ಇದು. ಅನುಷ್ ಅವ್ರ ನಾಲ್ಕನೇ ಪುಸ್ತಕ. ಅಚ್ಚುಕಟ್ಟಾದ ನಿರೂಪಣೆ, ಸರಳ ಭಾಷೆ, ಕುತೂಹಲಕಾರಿ, ರೋಮಾಂಚಕ.
ಕನ್ನಡದಲ್ಲಿ ಈ ತರಹದ ಕಥೆ ಬರೋಕೆ ಸಾಧ್ಯನಾ ಅನ್ನೋ ಪ್ರಶ್ನೆ ಇನ್ನು ಮೇಲೆ ನಾವು ಕೇಳೋದು ನಿಲ್ಲಿಸಬಹುದು. ವೈಜ್ಞಾನಿಕ ಅಂಶಗಳನ್ನ ಹೆಚ್ಚು complicate ಮಾಡದೆ ಇರೋದು ತುಂಬಾ ಇಷ್ಟ ಆಗುತ್ತೆ. ಕಥೆಯಲ್ಲಿ ಬರುವ ಡೈರಿಯ ಕೆಲವು ಸಾಲುಗಳು ಕಾಡುತ್ತವೆ. ಕಥೆಯ ಬಗ್ಗೆ ಇನ್ನೇನು ಹೇಳಿದ್ರೂ ಮೋಸ ಮಾಡಿದ ಹಾಗೆ. ಸ್ವತಃ ಓದಿ ಅನುಭವಿಸಬೇಕು.
ಕಥೆಯ ಪ್ರತಿಯೊಂದು ಘಟನೆಗಳನ್ನು ನೆನಪಿನಲ್ಲಿಟ್ಕೊಳ್ಳಬೇಕಾಗಿರೋದ್ರಿಂದ ಒಂದು ಅಥವಾ ಎರಡು sitting ನಲ್ಲಿ ಓದಿ mugisodu ಒಳ್ಳೇದು.
ಸರಳ ಭಾಷೆಯ ಕಥೆಗಳನ್ನ ಇಷ್ಟಪಡುವವರಿಗೆ ನಿರಾಶೆ ಆಗೋದಿಲ್ಲ.

January 27, 2023
ಒಂದೊಳ್ಳೆ ಮಿಸ್ಟರಿ ಥ್ರಿಲ್ಲರ್ ಟೈಮ್ ಟ್ರಾವೆಲ್ ಬಗೆಗಿನ ಕಾದಂಬರಿ ಓದಬೇಕು ಅಂತಿದ್ದರೆ ಈ ಕೃತಿನ ಕಣ್ಣು ಮುಚ್ಚಿಕೊಂಡು ಯಾವುದೇ ಸಂದೇಹ ಅನುಮಾನಗಳಿಲ್ಲದೆ ತಗೊಂಡು ಓದಿ. ಕನ್ನಡದಲ್ಲಿ ಇಲ್ಲವೇ ಇಲ್ಲ ಅನಿಸುವ ಹಾಗಿರುವ ಬಗೆಯ ಕಾದಂಬರಿ. ಕತೆ ಶುರುವಾದ ಮೇಲೆ ನಿಲ್ಲಿಸೋಕೆ ಆಗಲ್ಲ. ಮುಗಿದಮೇಲೆ ಅಯ್ಯೋ ಇನ್ನೂ ಇದಿದ್ರೆ ಸೂಪರ್ ಆಗಿರೋದು ಅನಿಸುತ್ತೆ ಇದನ್ನ ಓದಿದ ಮೇಲೆ. ಬರೋ ಟ್ವಿಸ್ಟ್ ಗಳು ತಲೆ ವ್ಹಾವ್ ಅನಿಸದೆ ಬಿಡಲ್ಲ. ಪ್ಯಾರಾಲಲ್ ಅಂದ್ರೆ ಸಮಾನಾಂತರ ಬ್ರಹ್ಮಾಂಡ, ದೇಜಾವು, ಸಮಯಯಾತ್ರೆ ಎಲ್ಲಾನೂ ಮಿಕ್ಸಿಗೆ ಹಾಕಿ ಒಂದೊಳ್ಳೆ ರಸಾಯನ ಮಾಡಿಕೊಟ್ಟಿದ್ದಾರೆ ಲೇಖಕರು. ಇದು ನಾನು ೫ನೇ ಬಾರಿ ಓದುತ್ತಿರೋದು.
ಕಾಡು ಮತ್ತೆ ಮಳೆ ಮದ್ಯೆ ಬರೆದಿರುವ ಈ ಕಾದಬರಿ ಒಮ್ಮೆ ಪೂಚಂತೇ ಅವರನ್ನ ನೆನಪಿಸೋದು ಖಂಡಿತ.

September 4, 2023
"ಮತ್ತೆ ಮತ್ತೆ ಬರುವ ಸೂರ್ಯ ಚಂದ್ರರಂತೆ ಕಳೆದ ಸಮಯವೇಕೆ ಮತ್ತೆ ಮತ್ತೆ ಬರಲಾರದು?"
My first reading experience which was suggested by a random person in Twitter comments.
An amazing sci-fi story revolving around the concept of Parallel Universe, the beautiful Tropical Iruppu and the characters around it, emotions between the trio of characters, everything has been beautifully sketched by the writer that keeps you hooked till the end, also the last few pages were just mind-blowing.
The writer's other books are definitely next in my list. Thank you Sir.