Jump to ratings and reviews
Rate this book

ಆಹುತಿ | Ahuthi

Rate this book

200 pages, Paperback

Published January 1, 2013

Loading...
Loading...

About the author

ಅನುಷ್ ಜನಿಸಿದ್ದು ಮಂಗಳೂರಿನಲ್ಲಿ. ವಿದ್ಯಾಭ್ಯಾಸ ಹುಣಸೂರು, ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ವಿದ್ಯುನ್ಮಾನ ಮಾಧ್ಯಮದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಇವರು ಕನ್ನಡಪ್ರಭಾ, ಸಾಧ್ವಿ ದಿನಪತ್ರಿಕೆಗಳಲ್ಲಿ, ಜೀ ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 15 ವರ್ಷಗಳ ಕಾಲ ಮೃದಂಗ ವಾದನ ಕಲಿತ ಇವರು, ಅನೇಕ ಲಯವಾದ್ಯಗಳನ್ನು ನುಡಿಸಬಲ್ಲವರಾಗಿದ್ದು, ತಮ್ಮ ಗೆಳೆಯರೊಂದಿಗೆ ಸೇರಿ ಆರಂಭಿಸಿರುವ 'ನಾವು' ಮತ್ತು 'ರಿದಂ ಅಡ್ಡ' ಬ್ಯಾಂಡ್‌ಗಳ ಮೂಲಕ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕೆಲವು ವರ್ಷಗಳಿಂದ ರಂಗ ಸಂಗೀತವನ್ನೂ ಮಾಡುತ್ತ ದೇಶಾದ್ಯಂತ ಓಡಾಡುತ್ತಿದ್ದಾರೆ. ಅನುಗ್ರಹ ಪ್ರಕಾಶನವನ್ನು ಮುನ್ನಡೆಸುತ್ತಿದ್ದಾರೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳಿಂದ ಪ್ರೇರಿತರಾಗಿ ಸಾಹಿತ್ಯ ಸೃಜಿಸುವೆಡೆಗೆ ಬಂದ ಅನುಷ್‌ರ ಈವರೆಗಿನ ಬರಹದ ಮೂಲವಸ್ತು ಪ್ರಕೃತಿಮೇ ಆಗಿದೆ. ಸಣ್ಣ ವಿಷಯಗಳಲ್ಲೂ ಕೌತುಕ ತೋರುತ್ತ, ಸದಾ ಊರಿಂದ ಊರಿಗೆ ಓಡಾಡುತ್ತ, ಹಾಡುತ್ತ, ಬರೆಯುತ್ತ ಇರುವ ಇವರು ಸದ್ಯ ಮಡದಿ ಡಾ. ಅನುಷಾ ಅವರೊಂದಿಗೆ ಮೈಸೂರಿನಲ್ಲಿ ನೆಲೆಸಿದ್ದಾರೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
23 (45%)
4 stars
22 (43%)
3 stars
6 (11%)
2 stars
0 (0%)
1 star
0 (0%)
Displaying 1 - 15 of 15 reviews
Profile Image for Prashanth Bhat.
2,233 reviews145 followers
January 22, 2018
ಆಹುತಿ - ಅನುಷ್ ಎ ಶೆಟ್ಟಿ
ಇದು ಇವರ ಮೊದಲ ಕಾದಂಬರಿ. ತೇಜಸ್ವಿಯವರ ಚಿದಂಬರ ರಹಸ್ಯವನ್ನು ಅಲ್ಲಲ್ಲಿ ಹೋಲುತ್ತದೆ . ಆದರೆ ಕೇಳಿದ ಸತ್ಯ ಘಟನೆಯನ್ನೂ ಬರೆಯಲು ಗೊತ್ತಿರಬೇಕು. ಅನುಷ್ ರ ಪುಸ್ತಕ ಓದುವಾಗ ಅದು ಅನುಭವಕ್ಕೆ ಬರುತ್ತದೆ. ಮೊದಲ ಪುಸ್ತಕ ಅನ್ನುವುದ ಗಮನದಲ್ಲಿಟ್ಟುಕೊಂಡು ಪುಟ 72 ರಿಂದ 77 ರವರೆಗಿನ ಪುನಃ ಮುದ್ರಣವ ಮರೆತರೆ ಇದೊಂದು ರೋಚಕ ಕತೆ. ಪರಿಸರ ನಾಶದ ಕುರಿತು ,ಯುವಕರ ಹುಂಬತನದ ಕುರಿತು,ಕಾಡ್ಗಳರ ಬಗೆಗಳ ಕುರಿತು,ಭ್ರಷ್ಟಾಚಾರದ ವಿವಿಧ ಮುಖಗಳ ಕುರಿತು ಬರೆದದ್ದು ಇಷ್ಟವಾಯಿತು.
ಇವರ ಮುಂದಿನ ಕೃತಿಗಳ ಓದಬೇಕೆಂಬ ಆಸೆ ಇದನ್ನು ಓದುವಾಗ ಹುಟ್ಟಿತು. ಯಾಕೆಂದರೆ ಅದಕ್ಕೆ ಬೇಕಾದ ಅಧ್ಯಯನ ಶೀಲತೆ ಮತ್ತು ಓದಿಸಿಕೊಂಡು ಹೋಗುವ ಶೈಲಿ ಅನುಷ್ ರಿಗೆ ಇದೆ ಅಂತ ಗೊತ್ತಾಗುತ್ತದೆ.
Profile Image for Prashant Mujagond.
40 reviews9 followers
January 18, 2022
ತುಂಬಾ ಚೆನ್ನಾಗಿದೆ, ಕತೆ ಪೂರ್ತಿ ಓದಿಸಿಕೊಂಡು ಹೋಗುತ್ತದೆ, ಇದರಲ್ಲಿ ಇರುವ ಕೆಲವು ವಿಷಯಗಳು ನಿಜವಾದ ಗಟನೆಗಳು ಎಂದು ಬರಹಗಾರರು ಮೊದಲೇ ಹೇಳಿರುವುದರಿಂದ ಮತ್ತಿಷ್ಟು ಕುತೂಹಲ ಮೂಡಿಸಿತು.
Profile Image for Karthik.
61 reviews22 followers
December 18, 2021
“ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ, ನಾವು ಪ್ರಕೃತಿಯ ಒಂದು ಭಾಗ” ಎಂಬ ತೇಜಸ್ವಿಯವರ ಮಾತಿನಂತೆ ನಾವು ಪ್ರಕೃತಿಯೊಳು ಒಂದಾಗುವತ್ತ ಹೆಜ್ಜೆ ಹಾಕುವುದು ಇಂದು ಅನಿವಾರ್ಯ. ಆದರೆ ಮಾನವನ ದುರಾಸೆಗೆ ಕಾಡು ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಕಂಡು, ಸಾಗರದಂತೆ ಹಬ್ಬಿದ್ದ ಕಾಡು ಇಂದು ನಶಿಸುತ್ತಾ ಸೊರಗುತ್ತಿದೆ. ಇದಕ್ಕೆಲ್ಲ ಕಾರಣ ಮನುಷ್ಯನೇ ಹೊರತು ಇನ್ಯಾರಲ್ಲ.

“ಆಹುತಿ” - Anush Shetty ಅವರ ಮೊದಲ ಕಾದಂಬರಿ. ಓದುಗರಿಗೆ First match ನಲ್ಲೆ century ಬಾರಿಸಿದ feel ಕೊಟ್ಟಿದ್ದಾರೆ ! ನಾಗರಹೊಳೆಯ ಕಾಡಿನ ಸಂಪತ್ತಿನ ಲೂಟಿ, ಭ್ರಷ್ಟ ಅಧಿಕಾರಿಯ ಕೈವಾಡ, ಕಾಯುವವನೇ ತಲೆ ಕಡಿಯುವ ಹಂತಕ್ಕೆ ಇಳಿದಾಗ ಉಂಟಾಗುವ ಪರಿಸ್ಥಿತಿ ಎಲ್ಲವನ್ನೂ ಬಹಳ ಅಚ್ಚುಕಟ್ಟಾಗಿ ಕಥೆಯ ಚೌಕಟ್ಟಿನಲ್ಲಿ ವಿವರಿಸಿದ್ದಾರೆ ಲೇಖಕರು.
ಒಂಥರಾ ಥ್ರಿಲ್ಲಿಂಗ್ ಅನುಭವ. ಅದರಲ್ಲೂ ಇವರು ಕಾಡನ್ನು ಬಣ್ಣಿಸಿದ ರೀತಿಯಂತೂ..ಅಬ್ಬಬ್ಬಾ.. ಓದುಗನನ್ನು ಕೂಡ ಕಾಡೊಳಗೆ virtual tour ಮಾಡಿಸಿದ್ದಂತಿತ್ತು!
ಮನುಜ ತನ್ನ ಸ್ವಾರ್ಥಕ್ಕಾಗಿ ಯಾವ ಮಟ್ಟಕ್ಕೆ ಇಳಿಯುತ್ತಾನೆ ಎಂಬುದಕ್ಕೆ ಇಲ್ಲಿಯ ಕಾಡ್ಗಿಚ್ಚಿನ ಸನ್ನಿವೇಶ ಸಾಕ್ಷಿ. ಮನ ಕಲುಕಿದ್ದಂತೂ ನಿಜ!
ತುಂಬಾ ಚೆನ್ನಾಗಿದೆ ಪುಸ್ತಕ, ಪರಿಸರ ಪ್ರೇಮಿಗಳು ಓದಲೇ ಬೇಕಾದಂತದ್ದು.

- ಕಾರ್ತಿಕ್.
17.7.2021
Profile Image for Harini  S T.
28 reviews11 followers
May 5, 2024
|!•ಆಹುತಿ•!|
ಅನುಷ್ ಎ ಶೆಟ್ಟಿ

ಅನುಷ್ ಅವರ ಬರಹಗಳು ಕಥೆ ಕಟ್ಟುವಿಕೆ ಸರಳವಾಗಿ ಓದಿಸಿಕೊಂಡು ಹೋಗುವ ಕಾದಂಬರಿ.
ಅನುಷಾ ಅವರ ಲೇಖನಗಳು ಪ್ರಕೃತಿಯ ಪ್ರೀತಿ ಇದರ ಜೊತೆಯಲ್ಲಿ ನಮಗೆ ಪೂರ್ಣಚಂದ್ರ ತೇಜಸ್ವಿಯವರು ನೆನಪಾಗುತ್ತಾರೆ.

ಪಾತ್ರದ ವಿವರಣೆ,ಕಥೆ ಓದುವಾಗ ಘಟನೆಗಳು ಚಿತ್ರಗಳಂತೆ ನಮ್ಮ ಸುತ್ತಮುತ್ತಲೇ ನಡೆಯುತ್ತಿರುವುದು ಎಂದು ಭಾವನೆ ಮೂಡುತ್ತದೆ.

ಹರಿಣಿ
Profile Image for Soumya.
229 reviews50 followers
August 29, 2021
ಚೆನ್ನಾಗಿದೆ.

ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಆದ ನೈಜ ಘಟನೆ ಆಧರಿಸಿ ರಚಿಸಿರುವ ಕಾದಂಬರಿ.
ಹೆಚ್ಚಿನ character ಗಳ ನಿಜವಾದ ಹೆಸರನ್ನೇ ಉಳಿಸಿಕೊಳ್ಳಲಾಗಿದೆ.

ಮನುಷ್ಯ ಸ್ವಾರ್ಥಿ. ಇಡೀ ಜಗತ್ತೇ ತಂದು ಅನ್ನೋ ಅಹಂ.
ಕಾಡನ್ನ ನಾಶ ಮಾಡಿ ಏನು ಆಗೆ ಇಲ್ಲ ಅಂತ ಬದುಕಬಲ್ಲ ಏಕ ಮಾತ್ರ ಜೀವಿ ಮನುಷ್ಯ ಅನ್ಸತ್ತೆ. ಅವನ ದುರಾಸೆಗೆ ಮಿತಿನೆ ಇಲ್ಲ.
ಪ್ರಕೃತಿಯನ್ನು ದೇವರು ಅಂತ ಪೂಜಿಸುತ್ತಿದ್ದ ಜನರು ಇದ್ದ ಈ ನಮ್ಮ ದೇಶದಲ್ಲಿ ಅದೇ ಪ್ರಕೃತಿಯನ್ನು ಗುಡ್ಸಿ ಗುಂಡಾತರ ಮಾಡೋ ಜನರು ಇದ್ದಾರೆ.
Profile Image for Abhiram's  Book Olavu.
119 reviews5 followers
December 14, 2025
ನಮ್ಮ ರಾಜ್ಯದ ಅರಣ್ಯಗಳ ಮೇಲೆ, ಅರಣ್ಯವಾಸಿಗಳ ಮೇಲೆ ಆಗಿರುವ, ಆಗ್ತಾ ಇರುವ ಕ್ರೌರ್ಯವನ್ನ ಹಾಗೂ ಅಧಿಕಾರದ ದುರುಪಯೋಗದಿಂದ ಸರ್ವನಾಶ ಆಗ್ತಾ ಇರೋ ಪರಿಸರದ ಬಗೆಗೆ ತುಂಬಾ ಹೃದಯ ವಿದ್ರಾವಕವಾಗಿಯೂ, ರೋಚಕವಾಗಿಯೂ ಈ ಕಾದಂಬರಿ ಮೂಲಕ ಅನುಷ್ ರವರು ಚಿತ್ರಿಸಿದ್ದಾರೆ.

ನಾಗರಹೊಳೆ ಅಂತಹ ಬೃಹತ್ ಕಾಡುಗಳಲ್ಲಿ ಆದ ದುರಂತಗಳು, ಹಾಗೆಯೇ ಅವುಗಳನ್ನ ತಡೆದು ಮತ್ತು ಕಾಡ್ಗಳ್ಳತನವನ್ನ ನಿಲ್ಲಿಸುವುದರಲ್ಲಿ ಎಷ್ಟೋ ಜನರು ವಹಿಸಿದ ಪರಿಶ್ರಮವೂ ಇಲ್ಲಿ ಬಹಳ ಕುತೂಹಲಕಾರಿಯಾಗಿದೆ. ಓದುವಾಗ ಹಲವೆಡೆ ನನ್ನ ಬಿಪಿ ರೌಸ್ ಆಗಿದ್ದೂ ಉಂಟು! ಬರೇ ಮರುಗಿದರೇನು ಫಲ! ಹಾಗಿದೆ ನಮ್ಮ ಪರಿಸ್ಥಿತಿ. ಕೆಲವೂಮ್ಮೆ ಅನ್ನಿಸುತ್ತೆ, ನಾವೆಷ್ಟು ಸ್ವಾರ್ಥಿಗಳು ಅಂತ! ನಮ್ಮ ನೆಲ-ಜಲದ ಮೇಲೆ, ಅರಣ್ಯ ಸಂಪತ್ತಿನ ಮೇಲೆ, ಭಾಷೆ ಮೇಲೆ, ಸಂಸ್ಕೃತಿ ಮೇಲೆ, ನಾವು ಓಟು ಹಾಕಿ ಗೆಲ್ಲಿಸಿದ ಪುಣ್ಯಾತ್ಮರಿಗೆ ಕಿಂಚಿತ್ತು ಕಳಕಳಿಯಿದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ಲವೇ?! ಇನ್ನೂ ಅದೆಷ್ಟು ನಮ್ಮ ರಾಜ್ಯವನ್ನ ತಮ್ಮ ದುರಾಸೆಗೆ ಹರಿದು ಹಂಚುವರೋ?!
Profile Image for ಲೋಹಿತ್  (Lohith).
91 reviews1 follower
August 29, 2023
ಹುಲಿ ಪತ್ರಿಕೆ ೧ ಮತ್ತು ೨ ಓದಿದ ನಂತರ ಅನುಷ್ ಅವರ ಎಲ್ಲ ಪುಸ್ತಕಗಳ್ಳನ್ನು ಕೊಂಡು ಓದಬೇಕೆಂದು ಮನಸಾಯಿತು,
ಹಾಗೆಯೇ ಸಪ್ನ ಬುಕ್ಹೌಸ್ ಗೆ ಹೋಗಿ ಅನುಷ್ ವರ ಹೆಸರಿನಲ್ಲಿದ್ದ ಎಲ್ಲ ಪುಸ್ತಕಗಳನ್ನೂ ತಂದೆ,

ಅದರಲ್ಲಿ "ಆಹುತಿ" ಅವರ ಮೊದಲ ಕಾದಂಬರಿ..
ಅವರೇ ಹೇಳುವಂತೆ ತೇಜಸ್ವಿ ಅವರ ಛಾಯೆ ಕಾದಂಬರಿಯ ಪೂರಾ ಇತ್ತು ಅದೇ ತುಂಬ ಹಿಡಿಸಿತು...

ಈಗಿನ ಕಾಲಘಟ್ಟದಲ್ಲಿ ಕಾಡು ವನ್ಯ ಅರಣ್ಯ ಪ್ರಾಣಿ ಪಕ್ಷಿ ಜಲ ಸಂರಕ್ಷಣೆಯ ಬಗ್ಗೆ ರೋಚಕ ಥ್ರಿಲ್ಲರ್ ಕಥೆಗಳ ಮೂಲಕ ಓದುಗರಲ್ಲಿ ಪೂ. ಚಂ.ತೆ ಯವರನ್ನು ಜೀವಂತವಾಗಿರಿಸಿದ್ದಾರೆ ಅನುಷ್ ವಿ ಶೆಟ್ಟಿ ಯವರು..
Profile Image for Madhu B.
105 reviews10 followers
October 11, 2025
ಪ್ರಕೃತಿಯನ್ನು ನಾವು ಪ್ರೀತಿಸಿದರೆ ಅದು ಕೂಡ ನಮ್ಮ ಇನ್ನು ಹೆಚ್ಚು ಪ್ರೀತಿಸುತ್ತೆ ...
ಇಲ್ಲಿ ಯಾವ ಪ್ರಾಣಿಯೂ ಬೇಟೆಗಾರನಾಗಿರದೆ, ಯಾವುದೂ ಬೇಟೆಯಾಗಿರದೆ, ಎಲ್ಲಾರು ಕಾಡ್ಗಿಚ್ಚು ಎಂಬ ಬೇಟೆಗಾರನ ಬೇಟೆಯಾಗಿದ್ದರು... ಇಷ್ಟವಾದ ಸಾಲುಗಳು.
ಸತ್ಯ ಘಟನೆ ಆಧಾರಿತ ಕಥೆ ಅಂತ ಕೇಳಿಯೇ ಹೀಗೂ ನೆಡೆದಿತ್ತಾ ನಮ್ಮ ಕರ್ನಾಟಕದ ನಾಗರಹೊಳೆಯಲ್ಲಿ ಅಂತ ಆಶ್ಚರ್ಯ ಆಗುತ್ತೆ.
ಅನುಷ್ ಶೆಟ್ಟಿ ಯವರಿಗೆ ಅಭಿನಂದನೆಗಳು ಪ್ರಥಮ ಕೃತಿಯಲ್ಲೇ ಬಹಳ ಭರವಸೆ ಹುಟ್ಟಿಸೋ ಯುವ ಪ್ರತಿಭೆ.
Profile Image for Prathima Deepak.
154 reviews4 followers
December 6, 2022
ಕಾಡಿನ ಬಗ್ಗೆ ಹಾಗೂ ಕಾಡ್ಗಳ್ಳತನದ ಬಗ್ಗೆ ತುಂಬಾ ನೈಜವಾಗಿ ಬರೆದಿದ್ದಾರೆ. ಕಥೆ ಸ್ವರಸ್ಯಕರವಾಗಿದ್ದು ಓದುಗರಿಗೆ ಪರಿಸರವನ್ನು ಪ್ರೀತಿಸಲು ಹಾಗೂ ಗೌರವಿಸಲು ಪ್ರೇರಪಿಸುತ್ತದೆ.
Profile Image for Akasharagala Alemaari.
15 reviews2 followers
November 23, 2022
ಆಹುತಿ

ಅನುಷ್ ಶೆಟ್ಟಿಯವರ ಮೊದಲ ಕಾದಂಬರಿ. ಸರಳವಾಗಿ ಕಥೆ ಹೇಳುವುದು ಮತ್ತು ಪಾತ್ರಗಳನ್ನ ಹೆಣಿಕೆ ಆ ಮೂಲಕ ಕಥೆಯನ್ನ ಎಲ್ಲಿಯೂ ಬೋರ್ ಹೋಡೆಸದಂತೆ ಹೇಳುವ ಕಲೆ ಅವರ ತಾಕತ್ತು. ಅವರ ಪುಸ್ತಕ ಓದುವಾಗ ತೇಜಸ್ವಿ ತುಂಬಾ ನೆನಪಾಗುತ್ತಾರೆ. ತೇಜಸ್ವಿ ಕಾಡನ್ನು ನಮ್ಮೆದುರು ತೆರೆದಿಟ್ಟಷ್ಟಲ್ಲದಿದ್ದರು, ಅದೇ ರೀತಿ ಅನುಷ್ ಸಹ ಕಾಡಿನ ಕಾರಳ ಮುಖಗಳನ್ನ ಇಲ್ಲಿ ಪರಿಚಯಿಸುತ್ತಾರೆ. ಇದು ಅವರ ಮೊದಲ ಕಾದಂಬರಿ ಇದ್ದರು ಸಹ, ಅದಕ್ಕೆ ಅವರು ಮಾಡಿಕೊಂಡ ತಯ್ಯಾರಿ ಮತ್ತು ಅವರೇ ಹೇಳಿದಂತೆ ಸತ್ಯ ಕಥೆಗಳ ಸುತ್ತ ಸಾಗುವ ಕಥೆ ರೋ��ಕತೆಯ ಮಜಲುಗಳಲ್ಲೆ ಸಾಗುತ್ತದೆ. ಕಾಡಿನ ಇಕಾಲಾಜಿ, ಅಲ್ಲಿನ ಆದಿವಾಸಿಗಳ ಜೀವನ, ಅದನ್ನ ಕಾಯುವ ಮನುಷ್ಯರೆಂಬ ಧನಪಿಪಾಸು ರಕ್ಕಸರು. ಅವರ ಕೈಗೆ ಸಿಕ್ಕು ನಲುಗುತ್ತಿರುವ ಕಾಡು ಮತ್ತದರ ಒಡಲಿನ ಮೂಕ ಪ್ರಾಣಿಗಳು. ಎಲ್ಲವೂ ಒಂದರೊಳಗೊಂದು ಮಿಳಿತವಾಗಿ ಸತ್ಯಾಂಶಗಳ ಅಂಕಿ ಅಂಶಗಳನ್ನೇ ನಮ್ಮೇದುರು ತೆರೆದಿಡುತ್ತಾ ಸುಮ್ಮನೇ ಕಾಡೊಳಗೆ ಕೈ ಹಿಡಿದು ಅನುಷ್ ಕರೆದೊಯ್ಯುತ್ತಾರೆ.

ವಿಶಾಲ ಸಮೃದ್ಧ ಅರಣ್ಯ ಪ್ರದೇಶ ಹೊಂದಿರುವ ಕರ್ನಾಟಕದ ಯಾವ ಭಾಗದಲ್ಲಿ ಏನೇನು ಕಳ್ಳ ಸಾಗಾಣಿಕೆಯ ಕೆಲಸಗಳು ನಡೆಯುತ್ತಿರಬಹುದೆಂದು ಒಮ್ಮೆ ಅನ್ನಿಸದೆ ಇರಲಾರದು. ಭ್ರಷ್ಟ ಅಧಿಕಾರಿಗಳ ಆದಿವಾಸಿಗಳ ಮುಗ್ಧತೆಯನ್ನು ಬಳಸಿಕೊಂಡು ನಡೆಸುವ ಕೃತ್ಯಗಳು ಅಸಹ್ಯ ಹುಟ್ಟಿಸುತ್ತವೆ. ಪ್ರಕೃತಿಯ ಮೇಲೆ ಮನುಷ್ಯ ನಿರಂತರವಾಗಿ ಮಾಡುತ್ತಿರುವ ಅತ್ಯಾಚಾರಗಳು ನೆನಪಾಗಿ ತೇಜಸ್ವಿ ಹೇಳುತ್ತಿದ್ದ ಮಾತು ’ಪ್ರಕೃತಿ ಬೇಕಾಗಿರುವುದು ನಮಗೆ ಹೊರತು, ನಾವು ಪ್ರಕೃತಿಗಲ್ಲ’ ನೆನಪಾಗುತ್ತದೆ. ಕಾಡಿನ ಬಗ್ಗೆ ಅವರಷ್ಟೇ ಪ್ರೀತಿ ಅನುಷಗಿದೆ ಎನ್ನುವುದು ಕಾದಂಬರಿಯ ಪ್ರತಿ ಸಾಲಿನಲ್ಲಿಯು ಕಾಣಿಸುತ್ತದೆ.

ಸರವಾಗಿ, ಕಥೆಯು ನಮ್ಮ ಸುತ್ತಮುತ್ತಲೇ ನಡೆಯುತ್ತಿರುವಂತೆ ಹೇಳುವ ಕಲೆ ಅವರಿಗೆ ಸಿದ್ಧಿಸಿದೆ. ಅದು ಅವರ ಬರಹದ ತಾಕತ್ತು. ಅವರ ಪ್ರತಿ ಪುಸ್ತಕದ ಪುಟಗಳಲ್ಲಿ ತೇಜಸ್ವಿಯ ಕಾಣಸಿಗುತ್ತಾರೆ ಅನ್ನುವ ಕಾರಣಕ್ಕೆ ಮತ್ತೆ ಮತ್ತೆ ಅವರ ಪುಸ್ತಕದ ಪುಟಗಳನ್ನು ತಿರುವಿ ಹಾಕಬೇಕು ಅನ್ನಿಸುತ್ತಲೇ ಇರುತ್ತದೆ.!
Profile Image for Aadharsha Kundapura.
64 reviews
July 12, 2022
ಅನುಷ್ ಎ ಶೆಟ್ಟಿಯವರ ಮೊದಲ ಕಾದಂಬರಿ. ಸತ್ಯ ಘಟನೆಗಳ ಸುತ್ತ ಹೆಣೆಯಲಾದ ಕಾಲ್ಪನಿಕ ಕಥೆ. ಕೆಲವು ಪಾತ್ರಗಳ ಹೆಸರುಗಳನ್ನು ನೈಜವಾಗಿಯೆ ಬಿಟ್ಟಿರುತ್ತಾರೆ,

ಇದೊಂದು ಥ್ರಿಲ್ಲರ್, ಸಸ್ಪೆನ್ಸ್ ಕಾಂದಂಬರಿ. ಬರಗಾಲದ ಒಂದು ಸಂದರ್ಭದಲ್ಲಿ ಹುಣಸೂರು ಪಂಪಹೌಸ್‌ನಲ್ಲಿ ಪ್ರತಿದಿನ ನಿಗೂಢವಾಗಿ ಆಗುತ್ತಿರುವ ನೀರು ಕಳ್ಳತನ ಪ್ರಕರಣ ಹಾಗು ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಕಾಡ್ಗಳ್ಳರ ಬೆನ್ನತ್ತಿ ಹೊರಡುವ ದಾರಿಯಲ್ಲಿ ಕಾದಂಬರಿ ಹಲವಾರು ತಿರುವುಗಳನ್ನು ಪಡೆಯುತ್ತದೆ. ನಾವು ಪ್ರಕೃತಿಯಲನ್ನು ಹಾಳುವಾಡಲು ಹೋದಷ್ಟು ನಾವೇ ಹಾಳಾಗುತ್ತೇವೆ ಎಂದು ಲೇಖಕರು ಉಲ್ಲೇಖಿಸುವ ಜೊತೆ ಅದರಂತೆ ಕಥೆ ಕೂಡ ಹೆಣೆದಿದ್ದಾರೆ..

*ಪ್ರಾಣ ರಕ್ಷಣೆಗೆ ಹುಲಿ, ಜಿಂಕೆ ಎಂಬ ಭೇದಭಾವವಿಲ್ಲದೆ ಪ್ರಾಣಿಗಳೆಲ್ಲ ಒಂದಾಗಿ ಒಟ್ಟಿಗೆ ಓಡುತ್ತಿದ್ದವು. ಅಲ್ಲಿ ಯಾವ ಪ್ರಾಣಿಯು ಬೇಟೆಗಾರನಾಗಿರದೆ, ಯಾವುದು ಬೇಟಿಯಾಗಿರದೆ, ಎಲ್ಲರು ಕಾಡ್ಗಿಚ್ಚೆಂಬ ಬೇಟೆಗಾರನ ಬೇಟೆಯಾಗಿದ್ದವು.

ಈ ಸಾಲುಗಳು ಅದ್ಭುತವೆನ್ನಿಸಿತು.

7.5/10⭐

ಆಹುತಿ

ಅನುಷ್ ಎ ಶೆಟ್ಟಿ
Profile Image for milton.reads.
61 reviews2 followers
September 11, 2023
ಇಂಥ ಸಾವಿರಾರು ಹಸಿ ಕೊಂಬೆಗಳು ಸುಡುವಾಗ, ಮನುಷ್ಯರು ಶಿಳ್ಳೆ ಹೊಡೆಯುವಂತೆ 'suii...' ಎಂದು ಸದ್ದು ಮಾಡುತ್ತಿದ್ದವು.
My second book of Anush A Shetty after reading Neenu Ninnologe Khaidi. Personally I was much engrossed with the way the writer described the happenings in the forest taking turns between different settings and different set of characters. It was as if a movie was playing alongside, the immersive effect by the writer is commendable.
Last few pages definitely brings tears describing the helpless nature of the characters.
Profile Image for Skanda Prasad.
70 reviews2 followers
September 25, 2023
ಇದು ಅನುಷ್ ಶೆಟ್ಟಿಯವರ ಚೊಚ್ಚಲ ಕಾದಂಬರಿ. ನಾಗರಹೊಳೆ ಅಭಯಾರಣ್ಯದಲ್ಲಿ ಭ್ರಷ್ಟ ಅರಣ್ಯಾಧಿಕಾರಿಯೊಬ್ಬನಿಂದಾಗಿ ಕಾಡಿನ ಮರಗಳು ಅಹುತಿಯಾದ ನೈಜ ಘಟನೆಯೇ ಕಥಾವಸ್ತು‌. ಒಂದೇ ಓದಿನಲ್ಲಿ ಓದಿ ಮುಗಿಸಬಹುದಾದ ಒಳ್ಳೆಯ ಪುಸ್ತಕ. ಅನುಷ್ ಶೆಟ್ಟಿಯವರ ಹುಲಿ ಪತ್ರಿಕೆ ಕಾದಂಬರಿ ಓದಿ ಅವರ ಅಭಿಮಾನಿಯಾಗಿದ್ದೆ. ಅವರ ಮೊದಲ ಕಾದಂಬರಿ ಆಹುತಿಯೂ ನಂತರದ ಹುಲಿ ಪತ್ರಿಕೆಯೂ ಕಾಡಿನ ಒಳಗಿನ ಕಥೆಯೇ ಆಗಿರುವುದು ಕಾಡು ಹಾಗೂ ತೇಜಸ್ವಿಯವರು ಅವರ ಮೇಲೆ ಅತಿಹೆಚ್ಚು ಪ್ರಭಾವ ಬೀರಿರುವಂತೆ ಕಾಣುತ್ತದೆ‌.
8 reviews
March 18, 2026
Bere pusthakagala, madhye idondannu odi mugisabahudu. Barediruvudannu, kalpisikollabahudu.
Displaying 1 - 15 of 15 reviews