Jump to ratings and reviews
Rate this book

nrupatunga

Rate this book
nrupatunga

210 pages, Kindle Edition

Published April 20, 2018

9 people are currently reading
143 people want to read

About the author

kannada r

30 books

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
33 (49%)
4 stars
28 (41%)
3 stars
5 (7%)
2 stars
1 (1%)
1 star
0 (0%)
Displaying 1 - 15 of 15 reviews
Profile Image for Chaitra.
187 reviews
January 22, 2021
Such a beautiful book! This was my first read of T R Subbaraya. Recently I had grown an urge to read works by him and luckily I came across Nripatunga.

I really loved this work. I had known Nripatunga as one of the kannada rulers but this book helped me know the person behind the titles he had won all across his life.

Chakravarti Nripatunga is that kind of ruler who would go at any length to protect and fight for righteousness. He was the symbol of just. Despite the fact that he despised bloodbaths the battles weren't ready to let go of him. The novel shows that no matter how much a just person you intend to be the external factors always exist to pose as obstacles. How you deal with them staying true to your principles is what helps you through it all.

The book describes the duties of a King. It also explains the loyalty and dishonesty by the ones in court which seemed to be common in the past ages. This is a novel of love, virtues, backstabbing, disloyalty and selfishness. At the same time it also shows that it's never too late to transform yourself and seek your ultimate 'dharma'

Not everyone has a same path but one should stay abide to his as Sri Krishna says in Sri Madbhagavad Gita one should always follow his dharma. And here, Nrupatunga triumphs over following his Raja and Kshaatradharma.

The book was fast paced yet it gave me a nostalgic sense where I'd sit at the corner of the tiny library in the neighborhood reading about kings and kingdom.

I am nobody to talk about the credibility however I must say Ta Ra Su books lay an excellent foundation to your quest for historical knowledge staying strictly abide to the facts.

Looking forward to read all of his books in future.
Profile Image for Raghavendra T R.
70 reviews17 followers
October 16, 2021
ಹೆಸರಿಗೆ ತಕ್ಕ ಹಾಗೆ ತನ್ನ ಸಾಮ್ರಾಜ್ಯವನ್ನು ಅಮೋಘವಾಗಿ ಆಳಿದ ಸಮ್ರಾಟನೊಬ್ಬನ ಕತೆ. ರಾಜ್ಯದ ಉಳಿವಿಗಾಗಿ ಆತ ಕೈಗೊಳ್ಳುವ ನಿರ್ಧಾರಗಳು, ಪ್ರಜೆಗಳ ಹಿತಕ್ಕಾಗಿ ಆತ ಕೈಗೊಳ್ಳುವ ಕ್ರಮಗಳು ಕಾದಂಬರಿಯ ಜೀವಾಳ.

ಐತಿಹಾಸಿಕ ಕಥಾವಸ್ತುವನ್ನಿಟ್ಟುಕೊಂಡು, ಅದನ್ನು ಸಚಿತ್ರ ವರದಿಯಂತೆ ಚಿತ್ರಿಸಿ ನಮ್ಮನ್ನು ಚರಿತ್ರೆಯ ಕಾಲಕ್ಕೇ ಕರೆದೊಯ್ಯುವ ತ.ರಾ.ಸು ಅವರ ಬರಹದ ಚಾಕಚಕ್ಯತೆ ಮತ್ತೊಮ್ಮೆ ನನ್ನ ಓದಿನ ಮಿತಿಯಲ್ಲಿ ಸಾಬೀತಾಯಿತು.
Profile Image for Kashyap Karthik.
43 reviews
December 2, 2020
ಅರಸೊತ್ತಿಗೆ ಎಂಬುದು ಹೂವು ಹಾಸಿಗೆಯಲ್ಲ ಅದೊಂದು ಮುಳ್ಳಿನ ಮಂಟಪ, ಬಂಗಾರದ ಪಂಜರ ಎಂಬುದು ನೃಪತುಂಗ ಕಾದಂಬರಿ ಚಿತ್ರಿಸುತ್ತದೆ.

- ರಾಜ್ಯಕ್ಕೆ ದ್ರೋಹ ಮಾಡಿದವನು ಮಗನಾದರೂ ಸರಿ ಅವನಿಗೆ ಮರಣದಂಡನೆಯೇ ಶಿಕ್ಷೆ.
- ಪ್ರಜೆಗಳು ಅಪೇಕ್ಷೆ ಪಟ್ಟಿದ್ದನ್ನು ರಾಜ ಪಾಲಿಸಬೇಕು.
- ಜನರು ಕೊಟ್ಟ ಪ್ರಾಣಭಿಕ್ಷೆಯನ್ನು ಅವರ ಸೇವೆ ಮಾಡುವ ಮೂಲಕ ಪ್ರಜೆಗಳ ಋಣ ತೀರಿಸುತ್ತೇನೆ ಅನ್ನುವ ರಾಜಕುಮಾರ.

ಈ ಘಟನೆಗಳು ಪ್ರಸ್ತುತ ರಾಜಕಾರಣಿಗಳಿಗೆ ಒಂದು ಪಾಠ. ಇಂದಿಗೆ ಮಾತ್ರವಲ್ಲದೆ ಎಂದೆಂದಿಗೂ ಈ ತತ್ವ ಆದರ್ಶ ಪ್ರಾಯವಾದದ್ದು.

ಅಮೋಘವರ್ಷನ ಜೀವನವನ್ನು ವರ್ಣಿಸುವ ಮೂಲಕ ರಾಜ ಪರಂಪರೆಗೆ ಪಾಠ ಮಾಡಿದಂತಿದೆ ಈ ಕೃತಿ. ಕಾದಂಬರಿಯ ಕರ್ತೃ ತ.ರಾ.ಸು ರವರಿಗೆ ಧನ್ಯವಾದಗಳು.
Profile Image for Sandesh GH.
8 reviews1 follower
June 14, 2021
ಐತಿಹಾಸಿಕ ಕಾದಂಬರಿಗಳನ್ನು ಕಣ್ಣಗೆ ಕಟ್ಟುವಂತೆ, ನಾವು ಆ ಕಾಲಘಟ್ಟದಲ್ಲಿ ಜೀವಿಸಿದ್ದೆವೊ ಎಂಬ ಭಾಸವಾಗುವಂತೆ ರಚಿಸುವುದು, ಅದು ಕೆವಲ ತ.ರಾ.ಸು ಅವರ ಎಕಮಾತ್ರ ಬರವಣಿಗೆಯ ಶೈಲಿ

ಪುಸ್ತಕದ ಪ್ರತಿ ಪುಟವು ಕನ್ನಡಿಗರು ಹೆಮ್ಮೆ ಪಡುವಂತೆ ಮಾಡುತ್ತದೆ
Profile Image for mahesh.
270 reviews25 followers
January 24, 2021
ತ ರಾ ಸು ರವರು ಬರೆದ ಕೃತಿಯನು ಓದಲು "ನೃಪತುಂಗ " ಚಾರಿತ್ರಿಕಾ ಕಾದಂಬರಿಯ ಮೂಲಕ ಶುರು ಮಾಡಿದೆ. ಸ್ವಾತಂತ್ರ ಪೂರ್ವ ಕಾಲದಲ್ಲಿ ಬರೆದ ಈ ಕಾದಂಬರಿಯಲಿ ಅಂದಿನ ಉಚ್ಛ ಕನ್ನಡದ ಬಳಕೆಯನು ನೋಡಿ ಆಶ್ಚರ್ಯ ಮತ್ತು ಸಂತಸ ತಂದಿತು.

ತ ರಾ ಸು ಅವರು ತುಂಬಾ ಅಧ್ಯಯನ ಮಾಡಿ, ಇತಿಹಾಸದ ಪುಟಗಳಲಿ ಮಾಸಿ ಹೋದ ಘನತೆವೆತ್ತ ಕನ್ನಡ ನಾಡಿನ ಧರ್ಮ ಪಾಲನೆ, ನ್ಯಾಯ ಪಾಲನೆ ಮತ್ತು ಕ್ಷತ್ರಿಯ ಧರ್ಮ ಪಾಲನೆಗೆ ಹೆಸರಾದ ರಾಷ್ಟ್ರಕೂಟ ದೊರೆ ನೃಪತುಂಗರ ಬಗೆಗಿನ ಚಾರಿತ್ರಿಕ ಕಾದಂಬರಿ, ಲೇಖಕರ ಕರುನಾಡಿನ ಸೇವೆಯ ಎದ್ದು ತೋರಿಸುತದೆ.

ರಾಜ ನಿಷ್ಠೆ, ಧರ್ಮ ಪಾಲನೆ, ಪ್ರಜಾ ಹಿತ ಮತ್ತು ಅಧಿಕಾರಶಾಹಿತನವನ್ನು ಮೂಲವಾಗಿ ಇಟ್ಟುಕೊಂಡು ಕಟ್ಟಿರುವ ಕಥೆ ನನ್ನನು ನೃಪತುಂಗರ ಗತಕಾಲದ ವೈಭವ ಮತ್ತು ಆಡಳಿತ ವೈಖರಿಯ ಸಂದರ್ಶನ ನೀಡಿತು.

ಸೃಜನಶೀಲ ಬರವಣಿಗೆ ಕಾದಂಬರಿಗೆ ಹುಣಿಮೆ ರಾತ್ರಿಯಲ್ಲಿ ಬೆಳದಿಂಗಳಿಗೆ ಮೆರುಗು ನೀಡುವು ಗಾಡ ಕತ್ತಲ ನಿಶ್ಯಬ್ದತೆಯಾಗಿದೆ.

ಈ ಕಾದಂಬರಿ ತ ರ ಸು ಅವರ ಇತರ ಕೃತಿಗಳ ಓದಲು ಸ್ಫೂರ್ತಿ ಯಾಗುವುದರಲ್ಲಿ ಎರಡು ಮಾತಿಲ್ಲ.
Profile Image for Skanda Prasad.
69 reviews2 followers
February 28, 2023
ಐತಿಹಾಸಿಕ ಕಾದಂಬರಿಯನ್ನು ತ.ರಾ.ಸುಬ್ಬರಾಯರಷ್ಟು ರೋಚಕವಾಗಿ ಕಟ್ಟಿಕೊಡುವವರು ಮತ್ತೊಬ್ಬರಿಲ್ಲಾ ಎನಿಸುತ್ತದೆ. ಕನ್ನಡದ ರಾಷ್ಟ್ರಕೂಟ ರಾಜವಂಶದ ಅತ್ಯುನ್ನತ ಚಕ್ರವರ್ತಿ ಎಂದರೆ ಅಮೋಘವರ್ಷ ನೃಪತುಂಗ. ಆತನ ಬಗೆಗಿನ ಲಭ್ಯ ಶಾಸನಗಳು, ಕೃತಿಗಳನ್ನು ಆಧರಿಸಿ ಕಾದಂಬರಿಯನ್ನು ಮನೋಜ್ಞವಾಗಿ ಬರೆದಿದ್ದಾರೆ. ನೃಪತುಂಗನ ಸುದೀರ್ಘ 64 ವರ್ಷಗಳ ಆಳ್ವಿಕೆಯಲ್ಲಿ ಕೇವಲ ಆಯ್ದ ಭಾಗವನ್ನು ಅಂದರೆ ನೃಪತುಂಗನ ಮಗನಾದ ಎರಡನೇ ಕೃಷ್ಣನ ಜನನದಿಂದ ಅವನಿಗೆ ಪಟ್ಟಾಭಿಷೇಕ ಮಾಡುವವರೆಗಿನ ಕಥೆಯನ್ನು ಹೆಣೆದಿದ್ದಾರೆ. ಸುಮಾರು ಒಂಭತ್ತನೇ ಶತಮಾನದಲ್ಲಿ ಈ ಕಥೆ ನಡೆದುದ್ದರಿಂದ ನೈಜ ಮಾಹಿತಿ ಅತ್ಯಲ್ಪ.ಹಾಗಾಗಿ ಅನೇಕ ಕಡೆ ಅವರ ಊಹೆಯಿಂದ ಕಥೆ ಹೆಣೆದು ರಾಷ್ಟ್ರಕೂಟರ ಕಾಲವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಕೇವಲ 185 ಪುಟಗಳ ಸಣ್ಣ ಹೊತ್ತಗೆ ವೇಗವಾಗಿ ಓದಬಹುದಾದ ಸುಂದರ ಕಾದಂಬರಿ.
Profile Image for Prashanth Mysore.
56 reviews1 follower
June 15, 2021
As the title suggests, this book is about the illustrious Rashtrakuta emperor and most celebrated kannada monarch Nripatunga Amoghavarsha. He ruled for 64 years in 9th Century. I rate this as Ta.Ra.Su's next best after Durgastamana. It brings out in vivid details not just the political situation, but also the social, cultural, religious, trade and literature details. Just wondering why no movie has been made out of it. A brilliant and must read.
Profile Image for Karthikeya Bhat.
109 reviews13 followers
June 23, 2022
ನೃಪತುಂಗ
ತ.ರಾ.ಸು

ರಾಜಧಾನಿಯಲ್ಲಿಷ್ಟೇ ಅಲ್ಲ, ಇಡೀ ದೇಶವೇ ಸಂತೋಷ ಪಡುತ್ತಿದೆ ೨ ಮಹೋತ್ಸವದ ಘಟನೆಗಳಿಂದ. ಆದರೆ ರಾಷ್ಟ್ರಕೂಟ ರಾಜ್ಯಕ್ಕೆ ವೆಂಗವಳ್ಳಿಯ ವಿಜಯ ಹಾಗು ರಾಜಪುತ್ರನ ಜನನ ಚಕ್ರವರ್ತಿ ನೃಪತುಂಗರಿಗೆ ಭೀತಿಗೆ ಕಾರಣವಾಗಿತ್ತು. ಜಿನಸೇನಾಚಾರ್ಯರ ಶಿಷ್ಯರಾದ ನೃಪತುಂಗ ಚಕ್ರವರ್ತಿಗಳು *ಅಹಿಂಸೆ ಗರ್ವಶ್ರೇಷ್ಠವಾದ ಧರ್ಮ* ಎಂಬ ಸಿದ್ಧಾಂತದ ಮೇಲೆ ರಾಜ್ಯವನ್ನಾಳುತ್ತಿದ್ದರು. ತಾವಾಗಿ ಯುದ್ಧಕ್ಕೆ, ರಕ್ತಪಾತಕ್ಕೆ ಹಾತೊರೆಯಬಾರದು, ಆದರೆ ಪ್ರಜಾಪಾಲನೆಗೆ ಅಗತ್ಯವಾದಾಗ ಯುದ್ಧಕ್ಕೆ ಹಿಂಜರಿಯುವ ಅರಸನನ್ನು ರಾಜ್ಯಲಕ್ಷ್ಮಿ ಹೇಸಿ ದೂರವಾಗುತ್ತಾಳೆ, ಆದ್ದರಿಂದ ಶತ್ರುವನ್ನಾಗಲಿ, ದುಷ್ಟಪುತ್ರನನ್ನಾಗಲಿ ಸಮಾನವಾಗಿ ನಿಗ್ರಹಿಸಿ, ಚಕ್ರವರ್ತಿ ಪದವಿಯಿಂದ ಅಖಂಡ ಪ್ರಜಾಕೋಟಿಗಾಗಿ ಸಮಯ ಬಂದಾಗ ತಮ್ಮ ಪ್ರಾಣವನ್ನೂ ಕೊಡಲು ಸಿದ್ಧವಾಗಿ ಪ್ರಜಾಪಾಲನೆ ಮಾಡುತ್ತಿದ್ದರು.

ರಾಜಪುತ್ರನ ಜನನ ಚಕ್ರವರ್ತಿ ನೃಪತುಂಗರಿಗೆ ಭೀತಿಗೆ ಕಾರಣವಾಗಿತ್ತು ಕಾರಣ ಗೋಲಯಭಟ್ಟರು ಹೇಳಿದಂತೆ ರಾಜಕುಮಾರನ ಜನ್ಮಕಾಲದ ಶಕುನ, ಗ್ರಹಗತಿಗಳಿಂದ ರಾಜ್ಯಕ್ಕೆ ಅಶುಭಶಂಕೆ ಕಂಡುಬರುತ್ತದೆಂದು, ಪತ್ನಿ ಲಕ್ಷ್ಮಾಗೆ ಬೇಸರ ತಾನು ತನ್ನ ಪತಿಗೆ ಒಳ್ಳೆಯ ಮಗನನ್ನು ಕೊಡಲಿಲ್ಲವೆಂದು, ನಂತರ ಕೃಷ್ಣಾ ಎಂದು ನಾಮಕರಣ ಮಾಡಿದರು. ಕೃಷ್ಣಾ ತಾಯಿಯ ಅತೀ ಪ್ರೀತಿಯಿಂದ ಅರಮನೆಯಲ್ಲಿ ತಾನು ಚಕ್ರವರ್ತಿಗಳ ಮಗನೆಂದು ಇತರರನ್ನು ಗೌರವಿಸದೇ ಅಹಂಭಾವದಿಂದ ಬೆಳೆಯುತ್ತಾನೆ. ರಾಷ್ಟ್ರಕೂಟದ ಸುತ್ತಾ ಭೀತಿ ಕವಿದುಬಂದ ಹೊತ್ತಿನಲ್ಲೇ ಚಕ್ರವರ್ತಿಗಳು ಚಿಂತಾಕ್ರಾಂತರಾಗುತ್ತಾರೆ, ಯುದ್ಧವನ್ನು ತಪ್ಪಿಸಲು ಹಾಗು ಉತ್ತರ ದಕ್ಷಿಣಗಳಲ್ಲಿ ತಲವನಪುರದ ಗಂಗರಾಚಮಲ್ಲ ದಾಳಿಯನ್ನು ತಪ್ಪಿಸಲು ಹಾಗು ರಾಜ್ಯಕ್ಕೆ ಪ್ರಬಲ ವೈರಿಗಳಾಗಿ ನಿಂತ ಕನ್ಯಾಕುಬ್ಜದ ಮಿಹಿರಭೋಜ ಭೃಗಕೃಚ್ಚ ನಗರವನ್ನು ಆಕ್ರಮಿಸಿ ರಾಷ್ಟ್ರಕೂಟ ರಾಜ್ಯದತ್ತ ಕಾಲು ಚಾಚುತ್ತಿರುವುದನ್ನು ಕಂಡು, ತನ್ನ ಮಗಳಾದ ಶಂಖಾದೇವಿಯನ್ನು ಪಲ್ಲವ ರಾಜಕುಮಾರ ನಂದಿವರ್ಮನಿಗೆ ವಿವಾಹಮಾಡಿಕೊಟ್ಟು ಅದರಿಂದ ಪಾಂಡ್ಯರ ವಿರುದ್ಧ ರಾಷ್ಟ್ರಕೂಟ ರಾಜ್ಯಕ್ಕೆ ಪಲ್ಲವರು ನೆರವಾಗುವಂತೆ ಮಾಡುತ್ತಾರೆ ಹಾಗು ವೆಂಗವಳ್ಳಿಯ ವಿಜಯದಿಂದ ಪೂರ್ವ ಚಾಲುಕ್ಯರೂ ಸಾಮಂತರಾಗಿ ಅವರ ಭೀತಿಯೂ ತಪ್ಪ��ರುತ್ತದೆ, ಹೀಗೆ ರಾಜ್ಯದ ರಕ್ಷಣೆಗಾಗಿ ಚಕ್ರವರ್ತಿಗಳು ಚಾತುರ್ಯದಿಂದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.

ರಾಜಕುಮಾರನನ್ನು ದಾರಿಗೆ ತರಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ ಇದೇ ಸಮಯದಲ್ಲಿ ಬನವಾಸಿಯ ಬಂಕರಸರು ತಮ್ಮ ಮಗ ಲೋಕಾದಿತ್ಯನನ್ನು ಗುಣಭದ್ರಾಚಾರ್ಯರಲ್ಲಿಗೆ ವಿದ್ಯೆ ಕಲಿಯಲು ಸೇರಿಸಲು ನಿರ್ಧರಿಸಿ ಚಕ್ರವರ್ತಿಗಳ ಬಳಿ ಹೇಳಿಕೊಂಡಾಗ ಇದು ಸರಿಯಾದ ಆಯ್ಕೆ ಎಂದು ಮನಗೊಂಡು ತಮ್ಮ ಮಗ ಕೃಷ್ಣನನ್ನೂ ಅವರ ಬಳಿ ವಿದ್ಯೆ ಕಲಿಯಲು ಗುರುಕುಲಕ್ಕೆ ಕಳುಹಿಸಿಕೊಡುತ್ತಾರೆ. ಸುಖವಾಗಿ ಅರಮನೆಯಲ್ಲಿ ಬೆಳೆದ ಕೃಷ್ಣನಿಗೆ ತಂದೆಯ ಈ ನಿರ್ಧಾರದಿಂದ ಅವರ ಮೇಲೆ ಕುಪಿತನಾಗುತ್ತಾನೆ. ಇದೇ ಸಮಯದಲ್ಲಿ ಲಕ್ಷ್ಮಾ ಪುನಃ ಗರ್ಭವತಿಯಾಗುತ್ತಾಳೆ, ಆಕೆಗೆ ಬನವಾಸಿ ನೋಡಲು ಬಯಕೆಯಾಗುತ್ತದೆ, ಕಷ್ಟಪಟ್ಟು ಚಕ್ರವರ್ತಿಗಳನ್ನು ಒಪ್ಪಿಸಿ ಬನವಾಸಿಗೆ ಇಬ್ಬರೂ ತೆರಳಿ ಅಲ್ಲಿಯ ಪ್ರಕೃತಿಯ ಸೌಂದರ್ಯವನ್ನು ಕಂಡು ಹಾಗು ಪ್ರಜೆಗಳ ಸತ್ಕಾರಗಳನ್ನು ಕಂಡು ಬೆರಗಾಗುತ್ತಾರೆ. ನಂತರ ಹೆಣ್ಣುಮಗುವಿಗೆ ಜನ್ಮ ನೀಡುತ್ತಾಳೆ ಆ ಮಗುವಿಗೆ ಚಂದ್ರಕಲಾ ( ತನ್ನ ಉತ್ಕರ್ಷ ಕಾಲದಲ್ಲಿ ತಾನು ಮಾತ್ರ ಹಿಗ್ಗದೆ ಕಡಲನ್ನೂ ಹರ್ಷ ಪಡಿಸುವ ಪೂರ್ಣಿಮಾ ಚಂದ್ರನಂತೆ ಸಕಲರಿಗೂ ಆನಂದ ನೀಡಿದ ಕನ್ಯೆಗೆ) ಎಂದೂ ನಾಮಕರಣ ಮಾಡುತ್ತಾರೆ.

ಗುಣಭದ್ರಾಚಾರ್ಯರ ಶಿಷ್ಯತ್ವದಲ್ಲಿ ರಾಜಕುಮಾರನ ವಿದ್ಯಭ್ಯಾಸ ಯಾವ ಭೀತಿಯೂ ಇಲ್ಲದಯೇ ಮುಂದುವರೆಯುತ್ತಿರುತ್ತದೆ, ಕೃಷ್ಣನಿಗೆ ಯೌವರಾಜ್ಯಭಿಷೇಕ ಮಾಡಿಸಬೇಕೆಂದು ನಿರ್ಧರಿಸುವಲ್ಲಿ ರಾಜ್ಯದಲ್ಲಿ ಹಲವಾರು ಘಟನೆಗಳು ನಡೆಯುತ್ತವೆ. ಕಂಚಿ ದೇವಿಯನ್ನು ನೋಡಲು ಬಯಕೆಪಟ್ಟ ತನ್ನ ಪತ್ನಿ ಕಂಚಿಯಲ್ಲಿ ಸಾವನ್ನಪ್ಪುತ್ತಾಳೆ. ಮಿಹಿರಾಭೋಜ ರಾಷ್ಟ್ರಕೂಟದತ್ತ ಬರುತ್ತಿರುವುದನ್ನು ಕಂಡು ತನ್ನ ಸೇನೆಗೆ ತಕ್ಕ ಸೇನಾಧಿಪತಿಯನ್ನು ಆರಿಸಲು ಗುಣಭದ್ರಾಚಾರ್ಯರ ಸಲಹೆಯಿಂದ ಒಂದು ಪರೀಕ್ಷೆ ಏರ್ಪಡಿಸುತ್ತಾರೆ, ಬಂಕರಸರ ಮಗ ಲೋಕಾದಿತ್ಯ, ವೆಂಗಿಯರಸರು ಕಳಿಸಿದ ಪಾಂಡುರಂಗ, ತಗರದ ಆದಿತ್ಯವರ್ಮರ ದಂಡನಾಯಕ ದುರ್ಗಾದಿತ್ಯ, ಚೇದಿಯವರ ಪಡೆಯ ದಂಡನಾಯಕನಾಗಿ ಬಂದ ಶಂಕರಗಣ,ನೊಳಂಬಬಲದ ನಾಯಕ ಮಂಗಿ ಪಾಲ್ಗೊಂಡು ಅವರೆಲ್ಲರೂ ಸೋತು ಲೋಕದಿತ್ಯನು ಮಾತ್ರ ಗೆದ್ದಾಗ ಆತನಿಗೆ ಸೇನಾಧಿಪತ್ವವನ್ನು ವಹಿಸುತ್ತಾರೆ, ಇದರಿಂದ ಶಂಕರಗಣ, ವೆಂಗಿ ಚಕ್ರವರ್ತಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುತ್ತಾರೆ. ಚಕ್ರವರ್ತಿಗಳಿಗೂ ಮಗನಿಗೂ ಮನಸ್ತಾಪಗಳು ಇರುವುದನ್ನು ಅರಿತ ಶಂಕರಗಣ ಹಾಗು ವೆಂಗಿ ಕೃಷ್ಣನನ್ನು ಕುತಂತ್ರದಿಂದ ತಮ್ಮ ಬಲೆಗೆ ಹಾಕಿಕೊಳ್ಳುತ್ತಾರೆ. ಲೋಕಾದಿತ್ಯನಿಗೆ ಸೇನಾಧಿಪತ್ವವನ್ನು ವಹಿಸಿದ್ದು, ಪರೀಕ್ಷೆಯ ಸಲಹೆ ಆಚಾರ್ಯರದ್ದೂ ಇದೆಲ್ಲವೂ ತನಗೆ ಯೌವರಾಜ್ಯ ಪದವಿ ತಪ್ಪಿಸಲು ಎಲ್ಲರೂ ಹೂಡಿರುವ ಸಂಚೆಂದು ಶಂಕರಗಣ, ವೆಂಗಿ ಮಾತುಗಳನ್ನು ನಂಬಿ ತಂದೆಯ ಮೇಲೆ ಸೇಡು ತೀರಿಸಿಕೊಳ್ಳಲು ಕೃಷ್ಣಾ ಕಾಯುತ್ತಿರುತ್ತಾನೆ. ವೆಂಗಿಗೆ ಆನಂದವೋ ಆನಂದ ಅಂತೂ ಅವನ ಸಂಚು ಸಫಲನಾಗಿ ಗಂಗರಾಜ್ಯದ ನೀತಿಮಾರ್ಗನನ್ನು ರಾಷ್ಟ್ರಕೂಟದ ಮೇಲೆ ದಾಳಿಮಾಡಲು ಸೂಚಿಸುತ್ತಾನೆ. ನೀತಿಮಾರ್ಗನು ರಾಜಾರಮಡುವಿನಲ್ಲಿ ರಾಷ್ಟ್ರಕೂಟ ಪಡೆಗಳ ಮೇಲೆ ದಾಳಿಮಾಡುತ್ತಾನೆ, ರಾಷ್ಟ್ರಕೂಟ ಪಡೆಗಳಿಗೆ ಸೋಲಾಯಿತೆಂಬ ಸುದ್ಧಿ ತಿಳಿದ ಕೂಡಲೆೇ ಶಂಕರಗಣ ಕೃಷ್ಣನನ್ನೇ ರಾಷ್ಟ್ರಕೂಟ ಚಕ್ರವರ್ತಿಯಂದು ಘೋಷಿಸುತ್ತಾನೆ. ಈ ಸುದ್ಧಿ ನೃಪತುಂಗ ಚಕ್ರವರ್ತಿಗಳಿಗೆ ತಿಳಿದಾಗ ತನ್ನ ಮಗನೇ ರಾಜ್ಯದ್ರೋಹ ಮಾಡಿದನೆಂದು ದುಃಖಪಡುತ್ತಾರೆ, ಮಗನ ಮೇಲೆ ದಂಡೆತ್ತಿ ಹೋಗಲು ತಾವೇ ಸೇನಾಧಿಪತ್ಯ ಸ್ವೀಕಾರ ಮಾಡುತ್ತಾರೆ, ವಿದ್ರೋಹಿ ರಾಜಕುಮಾರನನ್ನು ಹಿಡಿದು ತಂದವರಿಗೆ ಬಹುಮಾನವೆಂದು ಘೋಷಿಸುತ್ತಾರೆ. ತಲವನಪುರವನ್ನು ಗೆದ್ದು ಚಕ್ರವರ್ತಿಗಳಿಂದ ಮೆಚ್ಚುಗೆಯ ಓಲೆ ಬರಬಹುದೆಂದು ನಿರೀಕ್ಷಿಸಿದ ಬಂಕರಸರಿಗೆ ಈ ಸುದ್ಧಿ ಬೇಸರವನ್ನುಂಟುಮಾಡುತ್ತದೆ. ಕೃಷ್ಣನನ್ನು ಹಿಡಿದು ತರುವುದಾಗಿ ತಾವೇ ಜವಾಬ್ದಾರಿ ವಹಿಸುತ್ತಾರೆ. ಗಂಗರ ದಾಳಿಯ ವಿರುದ್ಧ ಬಂಕರಸರು ದಂಡಯಾತ್ರೆ ಹೊರಟು ಕೈದಾಳವನ್ನು ವಶಪಡಿಸಿಕೊಂಡರೆಂದು ತಿಳಿದು ವೆಂಗಿ ಪಲಾಯನ ಮಾಡುತ್ತಾನೆ. ವೆಂಗಿಯ ಸಂಚನ್ನರಿತ ಶಂಕರಗಣನ ಕಣ್ಣೂ ತೆರೆಯುತ್ತದೆ. ಅನ್ಯರ ಮಾತು ಕೇಳಿ ತಂದೆಯ ಮೇಲೆ ದಂಡೆತ್ತಿ ಹೋದುದಕ್ಕಾಗಿ ಕೃಷ್ಣ ತನ್ನ ತಪ್ಪಿನ ಅರಿವಿನಿಂದ ಪಶ್ಚಾತ್ತಾಪ ಪಡುತ್ತಾನೆ.

ಚಕ್ರವರ್ತಿಗಳು ರಾಜಕುಮಾರನಿಗೆ ಮರಣದಂಡನೆ ವಿಧಿಸುತ್ತಾರೆ, ಆದರೆ ಕೃಷ್ಣನು ತನ್ನ ತಪ್ಪಿನ ಅರಿವಿನಿಂದ ಪಶ್ಚಾತ್ತಾಪಪಟ್ಟದನ್ನು ಕಂಡು ಪ್ರಜೆಗಳು ಮರಣದಂಡನೆಗೆ ಒಪ್ಪುವುದಿಲ್ಲ, ಅವೆರಲ್ಲರ ಒತ್ತಾಯದಿಂದ ಹಾಗು ಅವರೆಲ್ಲರ ಕೋರಿಕೆಯಂತೆ ಕೃಷ್ಣನನ್ನು ಬಿಡುಗಡೆ ಮಾಡುತ್ತಾರೆ, *ರಾಜ್ಯಕ್ಕೆ ದ್ರೋಹ ಮಾಡಲು ಹೊರಟ ತನ್ನ ಸ್ವಂತ ಮಗನೆಂದೂ ಲೆಕ್ಕಿಸದೆ ಆತನಿಗೆ ಶಿಕ್ಷೆ ವಿಧಿಸಿದ್ದನ್ನು ಕಂಡು ಪ್ರಜೆಗಳ ಹೃದಯದಲ್ಲಿ ಚಕ್ರವರ್ತಿಗಳ ಮೇಲಿದ್ದ ಅಭಿಮಾನವೂ ಹೆಚ್ಚಿ ಚಕ್ರವರ್ತಿಗಳು ಇನ್ನೂ ಹೆಚ್ಚು ವರ್ಷ ಬಾಳಬೇಕೆಂದು ಆಶೀರ್ವಾದ ನೀಡಿದರಿಂದ ಅವರು *ಅಮೋಘವರ್ಷ ನೃಪತುಂಗ* ಎಂದೇ ಪ್ರಸಿದ್ಧಿ ಹೊಂದುತ್ತಾರೆ. ರಾಷ್ಟ್ರಕೂಟ ರಾಜ್ಯಕ್ಕೆ ಕವಿದ ವೈರವನ್ನು ಅಳಿಸಲು ತನ್ನ ರಾಜಕುಮಾರಿ ಚಂದ್ರಕಲಾನನ್ನು ಮಾನ್ಯಖೇಟವನ್ನು ಬಿಟ್ಟು ತಲವನಪುರವನ್ನು ಬೆಳಗಿಸಲು ಕೇಳಿಕೊಳ್ಳುತ್ತಾರೆ, ಯುದ್ಧ ಭೀತಿ ಹೋಗಿ ಈಗ ಎಲ್ಲೆಲ್ಲೂ ಶಾಂತಿ ನೆಲಸುವುದಾಗಿ ಮನಗಂಡ ಚಕ್ರವರ್ತಿಗಳು ಆನಂದದಿಂದಿರಬೇಕಾದರೆ ಆಕಾಶದಲ್ಲಿ ಉತ್ಪಾತ ಸೂಚನೆ ಕಂಡು ಬರುತ್ತದೆ. ಇದು ಪ್ರಕೃತಿಯ ವಿಕೋಪದಿಂದ ಮುಂಬರುವ ದಿನಗಳಲ್ಲಿ ಪ್ರಜೆಗಳು ಕ್ಷಾಮದಿಂದ, ರೋಗರುಜಿನಗಳಿಂದ ಸಾಯುವರೆಂದು ಆಚಾರ್ಯರು ತಿಳಿಸಿದಾಗ ಅದಕ್ಕೆ ಪರಿಹಾರವನ್ನು ಕೇಳುತ್ತಾರೆ. ಕರವೀರಪುರದ ಮಹಾಲಕ್ಷ್ಮಿಗೆ ಅಂಗುಲಿದಾನ ಮಾಡಿ ಪ್ರಕೃತಿಯನ್ನು ಶಾಂತಗೊಳಿಸಲು ಯಜ್ಞ ಮಾಡಿ ಸನ್ಯಾಸ ಸ್ವೀಕರಿಸಿ ಕೃಷ್ಣನಿಗೆ ರಾಜ್ಯದ ಜವಾಬ್ದಾರಿ ವಹಿಸಿ ಹೊರಟುಹೋಗುತ್ತಾರೆ.

*ಪ್ರಜಾಹಿತೇ ಹಿತಂ ರಾಜ್ಞಃ— ಪ್ರಜೆಗಳ ಮನಸ್ಸನ್ನು ಗೆದ್ದ ಚಕ್ರವರ್ತಿಗಳು ರಾಜ ಪರಮೇಶ್ವರ, ಪರಮ ಭಟ್ಟಾರಕ,ಅಮೋಘರಾಮಂ, ಗರುಡಲಾಂಛನಂ, ಬುದ್ಧ ಮನೋಹರಂ, ಅಭಿಮಾನಮಂದಿರಂ, ಅಮೋಘವರ್ಷ ಚಕ್ರವರ್ತಿ ಉಘೇ ಉಘೇ ಎಂದು ಘೋಷಿಸಿತು*.

*ಕಾರ್ತಿಕೇಯ*

5 reviews
December 9, 2024
ತ ರಾ ಸು ಅವರು ರಚಿಸಿರುವ ಕಾದಂಬರಿ ಒಂದು ಚಾರಿತ್ರಿಕ ಕಾದಂಬರಿ ಎನ್ನಬಹುದು. ಆ ಕಾಲದ ಇತಿಹಾಸವನ್ನು ಸಂಪೂರ್ಣ ಅಧ್ಯಯನ ಮಾಡಿ ಬರೆದಿದ್ದಾರೆ. ಕವಿರಾಜಮಾರ್ಗದಲ್ಲಿ ಹೇಳಿರುವಂತೆ ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿರುವ ಕನ್ನಡ ನಾಡು , ಅಲ್ಲಿಯ ಜನ ಹೆಚ್ಚು ಅಧ್ಯಯನ ಮಾಡದೆಯೂ ಕಾವ್ಯಪ್ರಯೋಗ ಮಾಡುವಷ್ಟು ಪರಿಣಿತಿ ವುಳ್ಳವರಿದ್ದರು ಅಂತಹ ಕನ್ನಡ ನಾಡನ್ನು ಆಳುತ್ತಿದ್ದವರು ಅಮೋಘವರ್ಷ ನೃಪತುಂಗ. Pluto ಹೇಳಿದಂತೆ ಆತ್ಮಜ್ಞಾನಿಗಳೇ ರಾಜರಾಗಬೇಕು ಅಥವಾ ಆಡಳಿತ ನಡೆಸುವವರು ಸಂಪೂರ್ಣವಾಗಿ ತತ್ವಜ್ಞಾನ ಹೊಂದಿರಬೇಕು . ಈ ಹೇಳಿಕೆಗೆ ಸರಿಯಾದ ಉದಾಹರಣೆ ಅಮೋಘವರ್ಷ, ಪ್ರಜೆಗಳಿಗೆ ಚಕ್ರವರ್ತಿಗಳ ಮೇಲೆ ಅತಿಯಾದ ಅಭಿಮಾನ ಹಾಗೆ ಚಕ್ರವರ್ತಿಗಳಿಗೆ ಪ್ರಜೆಗಳ ಮೇಲೆ ಅಭಿಮಾನ. ಇಲ್ಲಿ ತ ರಾ ಸು ಅವರು ಪ್ರತಿಯೊಂದು ದೃಶ್ಯವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ
Profile Image for Ajay Kumar.
17 reviews3 followers
November 14, 2017
Ta Ra Su writes about this king whom Sulaiman from Arabia had called him, one among the four greatest kings of the world 'Nrupatunga'. The novel starts off with a lot of family drama and king's stressful life in managing such a big kingdom (60% of present India) with a troubling son (heir). Narration picks up the curiosity as it moves towards the half. A lot of misconceptions have been cleared by the writer about Rashtrakuta's functioning. A tailor made role for Dr. Rajkumar. 4 stars from my side.
Profile Image for Aditya Kulkarni.
92 reviews40 followers
October 10, 2017
Excellent book about Amoghavarsha Nrupatunga, the greatest king of the Rashtrakuta dynasty which was the most powerful dynasty in the Indian subcontinent from the 8th century CE to the 10th century CE. Ta Ra Su is known for his brilliance in writing historical novels and this work is of the highest order by Ta Ra Su. The book describes Amoghavarsha as the ideal king that he was, his relationship with his wife, son, and daughter and how he ruled the empire.
Profile Image for Bhuvan N.
73 reviews26 followers
March 21, 2025
2.5/5

ನಾನು ಓದಿ ಮುಗಿಸಿದ ಎರಡನೇ ಕನ್ನಡ ಪುಸ್ತಕ.

ನೃಪತುಂಗ suffers from a lack of a well-written Antagonist. The two negative characters that do appear aren't etched out well-enough. To make things worse, the good people including the King are one-dimensional.

If you read this book after having read ದುರ್ಗಾಸ್ತಮಾನ, you will be disappointed.
Profile Image for Sumana.
20 reviews5 followers
July 7, 2017
Very interesting story for those who like Indian history and keen to know about famous kings and kingdoms. Narration by Sri Ta Ra Su is as usual very heart touching and informative.
Profile Image for Rakshith Kumar P.
23 reviews1 follower
June 8, 2018
ಅರಸಾದವನಿಗೆ ಎಲ್ಲವೂ ಇದ್ದು ಏನು ಇಲ್ಲದವ ಎಂಬುದನ್ನು ಸಾಕ್ಷಾತ್ಕರಿಸುವ ಚಿಕ್ಕದಾದರೂ ಅಧ್ಭುತ ಕಾದಂಬರಿ... ಅಮೋಘವರ್ಷ ನೃಪತುಂಗ ಚಕ್ರವರ್ತಿಯ ಬದುಕು ಎಲ್ಲರಿಗೂ ಆದರ್ಶ..
Displaying 1 - 15 of 15 reviews

Can't find what you're looking for?

Get help and learn more about the design.