ಜಿ.ಎನ್.ಮೋಹನ್ ಬರಹಗಳು ನಂಗಿಷ್ಟ. ಅವರ 'ಡೋರ್ ನಂ 142' ' ನನ್ನೊಳಗಿನ ಹಾಡು ಕ್ಯೂಬಾ' ಎಲ್ಲ ತಮ್ಮ ಮನಸಿನೊಳಗಿನ ಪಿಸುದನಿಯಿಂದ ಕಾಡಿದ್ದವು. ಪ್ರಸ್ತುತ ಬರಹಗಳ ಸಂಕಲನ ವಿಜಯಕರ್ನಾಟಕದಲ್ಲಿ ಪ್ರಕಟಿತ ಬರಹಗಳ ಸಂಕಲನ.
ಚೆಗೆವಾರನ ಬಗೆಗಿನ ಮುಗಿಯದ ಪ್ರೀತಿಗೆ, ತೇಜಸ್ವಿ ಎಂಬ ಕಿಂದರಿಜೋಗಿಯ ಬಗೆಗಿನ ಆಪ್ತ ಬರಹಕ್ಕೆ, ಕಾಫಿ ಕಪ್ಪಿನ ನೆಪ ಹಿಡಿದು ದಾಳಿಕೋರರ ಆಳ ಬಗೆದದ್ದಕ್ಕೆ, ಚಿರಸ್ಮರಣೆಯ ಬೆನ್ನು ಹತ್ತಿ ಕಯ್ಯೂರಿಗೆ ಕರಕೊಂಡು ಹೋದದ್ದಕ್ಕೆ, ಎಂಡೋಸಲ್ಫಾನ್ ಎಂಬ ಮಾರಿಯ ಕುರಿತ ಆಕ್ರೋಶಕ್ಕೆ, ನರಗುಂದ ಬಂಡಾಯದ ಪರಿಚಯಕ್ಕೆ, ತಿರುಪತಿಯ ಕೂದಲ ವಿಶ್ವರೂಪ ದರ್ಶನಕ್ಕೆ,
ಬೆಸಗರಹಳ್ಳಿ ರಾಮಣ್ಣ,ಸಿಜಿಕೆಯ ಒಳಗನ್ನು ತೋರಿಸಿದ್ದಕ್ಕೆ, ಬೋದಿಲೇರನ ಕುರಿತ ಒಳನೋಟಕ್ಕೆ, ಗೂಗಲ್ ಸತ್ಯಗಳ ಹೇಳಿದ್ದಕ್ಕೆ
ಈ ಪುಸ್ತಕ ಓದಬೇಕು.
ಸಿದ್ಧಾಂತ ಭಿನ್ನವಾದರೂ ಅವರೊಳಗೆ ಒಬ್ಬ ಭಾವಜೀವಿ ಇರುವುದನ್ನು ಇದು ಹೇಳುತ್ತದೆ. (ಇದನ್ನ ಓದಿದವರು ಅವರ ಡೋರ್ ನಂ 142, ನನ್ನೊಳಗಿನ ಹಾಡು ಕ್ಯೂಬಾ ಓದಬೇಕಾಗಿ ವಿನಂತಿ)