Journalist, writer, and film critic Sandhyarani graduated from KGF and now works as an amateur journalist. She contributes to several Kannada e-newspapers, magazines, and shows like ‘Kotyadipati’, ETV Kannada News, and Avadhi Magazine. Her works include ‘Yake Kadutide Summane’, ‘Tumbe Hoo’, ‘Purvi Kalyani’, ‘Pondicherry Ennuva Rangoli’, ‘Eva Lebananinava’, ‘Kalyana Keduva Hadi’, ‘Love Today’, and ‘Chinmaya Loka’. She also wrote the screenplay for the National Award-winning movie ‘Natheecharami’, now a novel.
ಬಹಳ ಚಂದದ ಅಂಕಣ ಬರಹಗಳು. ಮೊದಲಬರಹವೇ ಎಲ್ಲ ತಡೆಗಳ ದಾಟಿ ಸೀದಾ ಎದೆಗೆ ನುಗ್ಗಿ ಬಿಟ್ಟಿತು. ಹೌದು.ಪುಸ್ತಕಗಳ ಬಗ್ಗೇ. ಹೇಗೆ ಚಿಕ್ಕವಳಿದ್ದಾಗ/ ಚಿಕ್ಕವನಿದ್ದಾಗ ಯಂಡಮೂರಿ ತರಹದ ಓದಿಂದ ಶುರುವಾಗಿ ಆಮೇಲೆ ಬೆಳೆದ ರೀತಿ ವಿವರಿಸುವಾಗಲೇ ಆಪ್ತ ಭಾವ. ಈ ಲೇಖಕ- ಓದುಗ ನಡುವಿನ ಕನೆಕ್ಷನ್ ಇದೆಯಲ್ಲ ಅದು ಒಂದು ಸಲ ಬೆಳೆದು ಬಿಟ್ಟರೆ ಆಮೇಲೆ ಲೇಖಕರ ಪಿಸುಮಾತಿನ ಸ್ವಗತದ ಹಿಂದಿನ ಭಾವ ಕೂಡ ತಟ್ಟುತ್ತಾ ಹೋಗುತ್ತದೆ. ಇಲ್ಲಿ ಆ ಹಂಗೂ ಇಲ್ಲ.ಯಾಕೆಂದರೆ ಎಲ್ಲವೂ ಸ್ವಗತಗಳೇ. ನಡು ನಡುವೆ ಅವರು ಹೆಕ್ಕಿಕೊಡುವ ಸಾಲಗಳೂ ಇಲ್ಲೇ ನಾನು ಕಂಡವರದ್ದೇ. ಜಯಲಕ್ಷ್ಮೀ ಪಾಟೀಲ್, ವಿದ್ಯಾ ಶಂಕರ್, ರಾಘವೇಂದ್ರ ಜೋಶಿ ಇವರುಗಳ ವ್ಹಾ ಅನಿಸಿದ ಸಾಲುಗಳೇ.ಮೌನದ ಶಕ್ತಿಯ ಬಗ್ಗೆ, ನೋಡಿದ ಸಿನಿಮಾ ಕಾಡುವ ಬಗ್ಗೆ, ಇದೇಕೆ ಹೀಗೆ? ಅಂತ ಪ್ರಶ್ನೆ ಮಾಡುವ ಸಂಧ್ಯಾ ರಾಣಿ ಇಷ್ಟವಾಗ್ತಾರೆ. ಎಲ್ಲಕ್ಕಿಂತ ಎಲ್ಲೂ 'ಫೆಮಿನಿಸಂ' ಟಚ್ ಇಲ್ಲ.ಹಾಗಾಗಿ ಓದು ಸರಾಗ ವಾಗುತ್ತದೆ. ಅವರ ತಂಗಿ ತಾಯಿಯಾದಾಗ ಹೇಳಿದ್ದನ್ನ ಬರೆದದ್ದು ನೋಡಿ ' ಹುಟ್ಟಿದ ಕೂಡಲೇ ನನಗೆ ಇದು ನನ್ನ ಮಗು ಅನ್ನುವ ಪ್ರೀತಿ ಇತ್ತು ನಿಜ, ಆದರೆ ಅದು ಆಳವಾಗಿದ್ದು,ನನ್ನನ್ನು ತಾಯಿಯಾಗಿಸಿದ್ದು ಆ ಮಗುವನ್ನು ನಾನು ಸಾಕುತ್ತಾ ಬೆಳೆಸುತ್ತಾ ಹೋದಹಾಗೆ.ರಾತ್ರಿಗಳಲ್ಲಿ ನಿದ್ದೆ ಕೆಟ್ಟಿದ್ದು ,ಅದರೊಂದಿಗೆ ಅತ್ತಿದ್ದು, ನಕ್ಕಿದ್ದು ಎಲ್ಲ ಸೇರಿ ನಾನು ತಾಯಿಯಾದೆ' . ಎಷ್ಟು ಸರಳ.ಎಷ್ಟು ಅರ್ಥಗರ್ಭಿತ.ಅಲ್ವ?
ಹಾಗೇ ನೋಡಿ ' ಇಲ್ಲಿ ಮನೆಯನ್ನು, ಮಕ್ಕಳನ್ನು ಅತ್ತೆಯ ಸುಪರ್ದಿನಲ್ಲಿ ಬಿಟ್ಟು, ಮನಸು ಬಿದ್ದಾಗ ಹಳ್ಳಿಗೆ ಹೋಗಿ ತೋಟದ ಮನೆಯಲ್ಲಿ ಇದ್ದು ಬರುತ್ತಿದ್ದ ಮಾವ ಹಾಗೆ ಪ್ರತೀ ಸಲ ಬಂದಾಗಲೂ ಒಂದಿಷ್ಟು ವಯಸ್ಸು ಅಲ್ಲಿ ಬಿಟ್ಟು ಬರುತ್ತಿದ್ದರು.ಅತ್ತೆಯ ಯೌವನವನ್ನು ಹೋಗುವಾಗ ತೆಗೆದುಕೊಂಡು ಹೋಗುತ್ತಿದ್ದರು. ಸ್ಟ್ರಾಂಗ್ ಆಗಿ ಇರುವ ಹಠವೇ ಅತ್ತೆಯ ವೀಕ್ನೆಸ್ ಆಗಿ ಬಿಟ್ಟಿತ್ತು. ಅತ್ತೆ ಹಚ್ಚಿದ ಕ್ಯಾಂಡಲ್ ಎರಡೂ ಕಡೆ ಉರಿದು ಸುತ್ತಲೂ ಕರಗಿದ ಮೇಣ…'
ಹಿಂದೆ ಒಂದು ವಿಳಾಸವಿತ್ತು ಈಗ ಒಂದು ವಿಳಾಸವಿದೆ ನಾಳೆಗಾದರೂ ಒಂದು ಗುರುತಿರಬೇಕು ಎಂದು ಯೋಚಿಸುವಷ್ಟು ಪುರುಸೊತ್ತಾದರೂ ಎಲ್ಲಿತ್ತು ಕರೆದೊಯ್ಯಲು ಯಾವುದೋ ಒಂದು ಬಸ್ಸು ಸಿದ್ಧವಿದ್ದಾಗ?
ಇನ್ನು ಅಪ್ಪನ ಮೇಲೆ ಮುನಿಸಾದ ಸಂದರ್ಭದಲ್ಲಿ ಅಪ್ಪ ಇಡ್ಲಿ ಕಟ್ಟಿಸಿಕೊಂಡು ನಡಕೊಂಡು ಬಂದು ಅನುನಯಿಸಿದಾಗಲೂ ತಿನ್ನದೆ ಆಮೇಲೆ ಅಪ್ಪ ತಾವು ತಿಂದರಾ ಹಾಗೇ ಮಲಗಿದರಾ ಅಂತ ತನ್ನ ತಾನು ಪ್ರಶ್ನಿಸುಕೊಳ್ಳುವಾಗ ಎಲ್ಲೋ ನಾವೇ ಕನ್ನಡಿಯಲ್ಲಿ ನೋಡಿಕೊಂಡ ಹಾಗೆ..