Jayanth Kaikini is an Indian poet, short stories author and a lyricist working in Kannada cinema. ಜಯಂತ ಗೌರೀಶ ಕಾಯ್ಕಿಣಿ(ಜನನ : ೨೪,ಜನವರಿ, ೧೯೫೫) ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಜಯಂತ್ ರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು.ಇಳಿಸಂಜೆಯ ಬಿಸಿಲು,ಬಿಸಿಲುಕೋಲು,ಪಾತರಗಿತ್ತಿ,ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ,ಮೆಲುದನಿಯ ವ್ಯಕ್ತಿತ್ವ ಅವರದು.[೩] ಸಾಹಿತ್ಯ ಪ್ರಕಾರಗಳ ಹಲವು ವಿಭಾಗಗಳಲ್ಲಿ, ಕವಿಯಾಗಿ, ಈಟಿವಿ ಕನ್ನಡ ವಾಹಿನಿಯಲ್ಲಿ ಸಂದರ್ಶಕನಾಗಿ, ಸಿನೆಮಾ ಹಾಡುಗಳ ಸಾಹಿತಿ,ಸಂಭಾಷಣೆಗಾರನಾಗಿ, ಅಂಕಣಕಾರ ನಾಗಿ, ನಾಟಕಕಾರನಾಗಿ, ಕಥೆಗಾರನಾಗಿ, ಮತ್ತು ಕನ್ನಡಿಗರ (ಸಾಗರದಾಚೆಗೂ ನೆಲೆ ನಿಂತಿರುವ ಕನ್ನಡಿಗರ) ಅಚ್ಚುಮೆಚ್ಚಿನ ಲೇಖಕರಾಗಿದ್ದಾರೆ.
ಕೊಂಡ, ಎರವಲು ತಂದ ಪುಸ್ತಕಗಳ ರಾಶಿಯ ಬಳಿ ಮೌನವಾಗಿ ನಿಂತು ಕಣ್ಣಿಗೆ ಬಿದ್ದ ಹೊಳೆವ ಪುಸ್ತಕಗಳ ಎತ್ತಿಕೊಂಡು ಓದಿಗೆ ತೆರೆದುಕೊಳ್ಳುವ ಕ್ಷಣ ಇದೆಯಲ್ಲ. ಅದು ಮಾತಿಗೆ ನಿಲುಕದ್ದು. ಬನ್ನಿ ,ಜಯಂತರ ಹೊಸ ಪುಸ್ತಕ ಬಂದಿದೆ. ಈ ಹಿಂದೆ ಓದಿದ ಬರಹಗಳ ಸಂಕಲನ ಅಂದಿರಾ? ಎಲ್ಲವನ್ನೂ ಬೆರಗು ಗಣ್ಣಿಂದ ನೋಡುವ ದೊಡ್ಡ ಮಗುವೊಂದರ ಗೀಚಿನಂತಿದೆ ಇದು! ಬಿಸಿ ಬಿಸಿ ಕುಚ್ಚಲಕ್ಕಿಯ ಗಂಜಿಯೊಳಗೆ ಸೇರಿ ಹೋದ ಉಪ್ಪಿನಕಾಯಿಯ ರುಚಿಯ ವರ್ಣಿಸಿದಂತೆ, ಕ್ರಿಕೆಟ್‌ನ ಮೊದಲ ಲಹರಿಯ ವರ್ಣಿಸಬಲ್ಲ, ಸಿನಿಮಾದ ಹೀರೋ ಎಂಟ್ರಿಯ ಸೆರೆ ಹಿಡಿವ ಜಾದೂಗಾರ!
ನಿಮಗೆ ಅವರ ಎದೆ ಕೊರೆವ ಸಿನಿಮಾ ಹಾಡುಗಳು ಗೊತ್ತಿರಬಹುದು. ಆದರೆ ಈ ಕಿಂದರಿಜೋಗಿಯ ಲೇಖನಗಳ ಪೆಪ್ಪರಮೆಂಟಿಗೆ ನೀವೂ ಮರುಳಾಗಿ ಕರಗಿ ಹೋಗದಿದ್ದರೆ ಕೇಳಿ. ರಾತ್ರಿ ಪಾಳಿಯ ಕೊನೆ ಕ್ಷಣಗಳಲ್ಲಿ ಇನ್ನೇನು ಕಣ್ಣು ಹೊಸಕಿ ಲಾಗ್ ಬರೆದು ಮುಗಿಸಿ ಹೊರಡುವ ಕ್ಷಣಗಳಲ್ಲಿ ಕೂಡ 'ಇನ್ನೊಂದೇ ಪುಟ' ಅಂತ ರಚ್ಚೆ ಹಿಡಿವ ಮನಸಿದೆಯಲ್ಲ ಅದು ಅಪ್ಪಟ 'ಕಾಯ್ಕಿಣಿ ಜಾದೂ'! ಮತ್ತದಕ್ಕೆ ಪಕ್ಕಾದವನೇ ಬಲ್ಲ ಅದರ ಮೋಡಿ!
ಚಿನ್ನದ ಗಟ್ಟಿಯಂತಹ ಪುಸ್ತಕಕ್ಕೆ 'ರಾವ್ ಬೈಲ್' ಚಿತ್ರಗಳ ,ಅಪಾರರ ಡಿಸೈನ್ ಕಿರೀಟವಿಟ್ಟಂತಿದೆ. ಈ ವರ್ಷ ಓದಬೇಕಾದ ಪುಸ್ತಕಗಳ ಪಟ್ಟಿಯಲ್ಲಿ ಇದು ಮೊದಲ ಸರದಿಯಲ್ಲಿ ಇರಲಿ.
Most of the time, I read the works of Kaikini not to learn or unlearn anything. Most of his books never taught me anything in terms of knowledge. But still, I buy his books whenever I visit the bookshop. I always wondered why. I am unsure whether the answer I have now is right or wrong. But whenever I am in the Metro, In Grandparents garden, or in my lonely nights, I pick up his work and just read. It's so comforting, the comfort that is not bound by words or thoughts. It's only bounded by the feelings that neither I can put into words, nor can I feel it in my hands. I can only feel those feelings through unknown feelings that are beyond my reach. His words don't make sense to me, but they come alive only in a certain place or maybe in a certain mindset. Those places are something that I longed for, or probably I lost with time. Maybe it's not the places, maybe life lost in time, maybe they are the catalyst that can only be triggered by Kaikini's words from their slumber. Every Kaikini word is as beautiful to hear as his Mungarumale songs in the never-ending monsoon.
ಜಯಂತ್ ಕಾಯ್ಕಿಣಿ ಅವರ ಹಾಡುಗಳನ್ನ ಕೇಳಿ ಬೆಳೆದವರು ನಾವು ಅಂತಹದರಲ್ಲಿ ಅವರ ಈ ಪುಸ್ತಕ ಹೇಗೆ ನನ್ನಿಂದ ಮಿಸ್ ಆಯ್ತೋ ಕಾಣೆ. ಇದರಲ್ಲಿಯ ಅವರ ಅನುಭವದ ಮಾತುಗಳು, ನೆನಪಿನ ಚಿತ್ರಗಳು ಮತ್ತು ಪ್ರಬಂಧಗಳು ಅದ್ಭುತ. ವಿಷಯ ಏನೇ ಇರಲಿ, ಆ ವಿಷಯ ನಿಮಗೆ ಹಿಡಸದಿದ್ದರೂ ಅವರ ಬರವಣಿಗೆಗೆ ಮರಳಾಗಿ ಓದಲು ಶುರುಮಾಡುವಿರಿ. ಅವರ ಲೇಖನಗಳೆಂದರೆ ಅಪ್ಪಟ ಚಿನ್ನ.
ಒಬ್ಬ ಲೇಖಕ ಅದರಲ್ಲೂ ಕವಿ ಅಥವಾ ಸಾಹಿತಿ ತನ್ನ ಮನಸಿನಲ್ಲಿ ನಿರಂತರವಾಗಿ ಓಡಾಡೋ ಆಲೋಚನೆಗಳಿಗೆ ಅಕ್ಷರ ರೂಪ ಕೊಟ್ಟು ಪುಸ್ತಕದ ಮೇಲೆ ಇಳಿಸಿದರೆ ಹೇಗಿರತ್ತೋ ಹಾಗಿದೆ ನಮ್ಮ ಜಯಂತ್ ಕಾಯ್ಕಿಣಿ ಅವರ ಗುಲ್ ಮೊಹರ್.
ಸಾಧಾರಣವಾಗಿ ಸಿನಿಮಾ ಹಾಡುಗಳ ಸಾಹಿತ್ಯದ ಮೂಲಕ ಚಿರಪರಿಚತರಾಗಿ ಅದ್ಭುತ ಸಂಗೀತದ ಮೂಲಕ ಪ್ರಸಿದ್ಧ ಆಗಿರೋ ಕಾಯ್ಕಿಣಿ ಅವರ ಗದ್ಯ ಪ್ರಕಾರಗಳನ್ನು ಓದೋ ಹಂಬಲ ಇತ್ತು. ಅದು ಗುಲ್ ಮೊಹರ್ ಮೂಲಕ ಶುರು ಆಗಿದ್ದೆ ಅಲ್ಲದೇ ಅವರ ಈ ಪ್ರಕಾರದ ಬರಹಕ್ಕೂ ಫ್ಯಾನ್ ಆದೆ.
ಮೊದಲ 5 -6 ಅಂಕಣ ಕಾವ್ಯಾತ್ಮಕವಾಗಿ ಇದ್ದರೂ ನಂತರದ ಬರಹಗಳು ತನ್ನಿಂದ ತಾನೇ ಓದಿಸಿಕೊಂಡು ಹೋಗುತ್ತೆ.
ಪ್ರತಿಯೊಂದು ಬರಹಗಳೂ ಒಂದು ರೀತಿ feel good ಅನುಭವ ನೀಡುತ್ತವೆ. ಮುಂಬೈ, ದಕ್ಷಿಣ ಕನ್ನಡ, ಸಾಹಿತ್ಯ ಮತ್ತು ಸಾಹಿತಿಗಳ ಒಡನಾಟ ಇವೆಲ್ಲದರ ಧಾರಾಳ ವಿಷಯವಿದೆ. ಜೊತೆಗೆ ಮನಸ್ಸಿಗೆ ಮುದ ನೀಡುವ ಒಂದಷ್ಟು ಕವನಗಳ ಸಂಗ್ರಹ ಇದೆ.
ಒಟ್ಟಿನಲ್ಲಿ ಈ ಪುಸ್ತಕ ಕಾಯ್ಕಿಣಿ ಅವರ ಅನುಭವ ಹಾಗೂ ಕಲ್ಪನಾ ಲೋಕಕ್ಕೆ ನಿಮ್ಮನ್ನೂ ಪಾಲುದಾರರನ್ನಾಗಿ ಮಾಡೋದಂತೂ ಖಂಡಿತ.