ತೀರ್ಥರಾಮ ವಳಲಂಬೆ ಅವರು ಚಿಂತಕರು.ತತ್ವಜ್ಞಾನ, ಅಧ್ಯಾತ್ಮ ಇವರ ಆಸಕ್ತಿಯ ಕ್ಷೇತ್ರಗಳು. ದೇಶ-ಕಾಲ-ಬದುಕು-ದೇವರು, ಧ್ಯಾನ, ಪುನರ್ಜನ್ಮ ಮತ್ತು ಪುರುಷಾರ್ಥ, ಬ್ರಹ್ಮಜ್ಞಾನ ಮತ್ತು ಬ್ರಹ್ಮವಿದ್ಯೆ, ಇಪ್ಪತ್ತೆಂಟು ಹಣತೆಗಳು, ವಿಚಾರವಾದ, ವಿಜ್ಞಾನ, ಅಧ್ಯಾತ್ಮ, ಮೃತ ಸಂಜೀವಿನಿ, ಅಜಬಿರು -ಇವು ಪ್ರಮುಖ ಕೃತಿಗಳು.
ಸಾಮಾನ್ಯವಾಗಿ ನಾನು ಆಧ್ಯಾತ್ಮಿಕ ಪುಸ್ತಕ ಅಥವಾ ಒಳಗಿನದನ್ನ ತೆರೆಯಿರಿ ಅಥವಾ ವ್ಯಕ್ತಿತ್ವ ಬೆಳೆಸಿಕೊಳ್ಳಿ ಓದುವುದಿಲ್ಲ. ಅಹಂಕಾರ ಅಂಥಲ್ಲ ಅದನ್ನು ಓದಿದರೆ ಪಾಪಪ್ರಜ್ಞೆ ಕಾಡುತ್ತದೆ. 'ಅಯ್ಯೋ, ಈ ಲೋಕದಲ್ಲಿ ಬದುಕಲು ಬೇಕಾದ ಯಾವ ಅರ್ಹತೆಯೂ ನನಗಿಲ್ವೇ' ಅಂತ. ಆದರೆ 'ಅಜಬಿರು' ಅನ್ನುವ ಕಾದಂಬರಿ ಅಥವಾ ಚಿಂತನೆ ಓದಿದಾಗ ನನಗೆ ಕುತೂಹಲ ಹುಟ್ಟಿತು. ಆಮೇಲೆ ನನ್ನ ಗುರುಗಳಾದ ಗುರುಪ್ರಸಾದ್ ಆಚಾರ್ಯ ಅವರು ಹಾಕುತ್ತಿದ್ದ ಇವರ ಬರಹಗಳ ತುಣುಕುಗಳೂ ಆಕರ್ಷಿಸಿದವು. ಹಾಗಾಗಿ ಇದನ್ನು ಓದಿದೆ. ಬಹಳ ಚೆನ್ನಾಗಿದೆ. ಧ್ಯಾನ ಅಂದರೇನು ಮತ್ತು ಅದು ಹೇಗೆ ಸಹಕಾರಿ ಅಂತ ಸರಳವಾಗಿ ವಿವರಿಸಿದ್ದಾರೆ.ಒಂದೇ ಕಿರಿಕಿರಿ ಅಂದರೆ ನಡು ನಡುವೆ ಹಲವಾರು ಪುಟಗಳು ಮಾಯ.ಬಹುಶಃ ಮುದ್ರಣ ದೋಷ.