ಓದುವಾಗ ಪುಟ ಪುಟವೂ ಪಾಪಪ್ರಜ್ಞೆಯಿಂದಲೇ ಓದಿದೆ. ಇದರಲ್ಲಿನ ಹಲವು ಲೇಖನ 'ಹಸಿರುವಾಸಿ' ಪತ್ರಿಕೆಯಲ್ಲಿ ಬಂದಿವೆ. ಇಡಿಯಾಗಿ ತಮ್ಮ ಯಾತ್ರೆಯನ್ನು , ಐಟಿಯಿಂದ ಮಣ್ಣಿಗೆ ಮರಳಬೇಕಾದ ಸಮಯದ ಚಿಂತನೆಗಳನ್ನು, ನಾವೆಷ್ಟು 'ಘೋರವಾಗಿ' ಬದುಕುತ್ತಿದ್ದೇವೆ ಎಂಬುದನ್ನು ವಿವರಿಸಿದ ಲೇಖಕರಿಗೆ ವಂದನೆ. ಇದನ್ನು ಓದಿ ಈಗಿನ ಈ ಅವಲಂಬನೆ ಕೊಂಚವಾದರೂ ನಾನು ಕಡಿಮೆ ಮಾಡಿಕೊಂಡರಷ್ಟೇ ನಿಜವಾಗಿ 'ಓದಿದಂತೆ' . ಆದ್ದರಿಂದ ಇದನ್ನು ಇನ್ನೂ ಓದುತ್ತಾ ಇದ್ದೇನಷ್ಟೇ. ಜೀವನ ನಡೆಸಲು ಪರಿಸರ ನಾಶದ ಉದ್ಯೋಗ ಮಾಡುತ್ತಿರುವ ನಮಗೆಲ್ಲ ಇದನ್ನು ಓದುವಾಗ ಪಾಪಪ್ರಜ್ಞೆ ಕಾಡುತ್ತದೆ. 'ಪಡೆದ ಜೀವನವನ್ನೇ ಬಯಸಿದಂತಿದೆ ' ಎನ್ನುವ ಸಾಹಸಿಗೆ ನಮನ.
ಅವರ ಸಾಲುಗಳು ಈ ಕೆಳಗಿನವು “ITಯಿಂದ ಮೇಟಿಗೆ” ಪುಸ್ತಕವು ಓದುವವರಿಗೆ ತೆರೆದುಕೊಂಡು ಇಂದಿಗೆ 19 ದಿನಗಳು ಸಂದಿವೆ. ಸಾವಿರ ಪ್ರತಿಗಳಲ್ಲಿ 900 ಪ್ರತಿಗಳು ಮುಗಿದು ಸುಮಾರು ನೂರಕ್ಕೂ ಕಡಿಮೆ ಪ್ರತಿಗಳು ಉಳಿದಿವೆ. ಒಂದು ಪ್ರತಿ ಖರೀದಿಸಿ, ಓದಿ, ಮತ್ತೆ ಇಪ್ಪತ್ತೈದು ಪ್ರತಿ, ಹತ್ತು ಪ್ರತಿ, ಐದು ಪ್ರತಿ, ಮೂರು ಪ್ರತಿ ಹೀಗೆ ಬೇರೆ ಬೇರೆ ಸಂಖ್ಯೆಯಲ್ಲಿ ಮತ್ತೆ ಪಡೆದುಕೊಂಡ ಓದುಗರು ‘ಪುಸ್ತಕದ ಆಶಯವು ನಮಗೆ ಇಷ್ಟವಾಗಿದೆ’ ಎಂದು ಸೂಚಿಸಿದ್ದಾರೆ. ಪುಸ್ತಕದ ಸಹ ಪ್ರಕಾಶಕರಲ್ಲಿ ಅನೇಕರು ಮತ್ತು ಇತರೆ ಓದುಗರು ಬೇರೆ ಬೇರೆ ಮಾಧ್ಯಮಗಳಲ್ಲಿ ಪುಸ್ತಕದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ, ಅನೇಕರು ನನಗೇ ನೇರವಾಗಿ ಕಾಲ್ ಮಾಡಿದ್ದಾರೆ. ಶ್ರೀವತ್ಸ ಜೋಷಿಯವರು ತಮ್ಮ ಅಂಕಣದಲ್ಲಿ ಈ ಪುಸ್ತಕದ ಬಗ್ಗೆ, ಅದರ ಬಗ್ಗೆ ಶ್ರೀಮತಿ ವಿದ್ಯಾ ದತ್ತಾತ್ರಿ ಅವರು ಬರೆದ ಮಾತುಗಳ ಸಹಿತ ಬರೆದುದು ಇನ್ನಷ್ಟು ಓದುಗರು ಆಸಕ್ತಿ ವಹಿಸಲು ಕಾರಣವಾಗಿದೆ. ಪ್ರಕಾಶಕರಾದ ಡಿವಿಜಿ ಬಳಗ ಮತ್ತು ನಾನು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ವೇಗದಲ್ಲಿ ಇವೆಲ್ಲ ನಡೆದಿವೆ.
ಇನ್ನು ಮುಂದೆ ಪುಸ್ತಕವನ್ನು ಖರೀದಿಸಬೇಕೆಂದಿರುವವರು ಈ ಕೆಳಗಿನ ವಿಧಾನಗಳ ಮೂಲಕ ಪಡೆದುಕೊಳ್ಳಬಹುದು. ೧) ನನ್ನಿಂದ ನೇರವಾಗಿ (ACCOUNT NUMBER - 115601502333, NAME - VASANTHA KESHAVA KAJE, IFSC CODE - ICIC0001156, BANK - ICICI) ಅಥವಾ UPI Id : 9008666266@icici) ೨) “ಕನ್ನಡ ಲೋಕ” ವೆಬ್ ಸೈಟ್ ಮೂಲಕ. https://www.kannadaloka.in/index.php?... ೩) ಪುತ್ತೂರಿನಲ್ಲಿ ‘ಅಮೃತ ಸಾವಯವ ಮಳಿಗೆ’ಯಲ್ಲಿ ೪) ಮೈಸೂರು “ಇಂದ್ರಪ್ರಸ್ಥ” ಸಾವಯವ ತೋಟ