Jump to ratings and reviews
Rate this book

ಕಳ್ಬೆಟ್ಟದ ದರೋಡೆಕೋರರು | Kalbettada Darodekoraru

Rate this book

120 pages, Paperback

Published January 1, 2015

2 people are currently reading
30 people want to read

About the author

ಅನುಷ್ ಜನಿಸಿದ್ದು ಮಂಗಳೂರಿನಲ್ಲಿ. ವಿದ್ಯಾಭ್ಯಾಸ ಹುಣಸೂರು, ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ವಿದ್ಯುನ್ಮಾನ ಮಾಧ್ಯಮದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಇವರು ಕನ್ನಡಪ್ರಭಾ, ಸಾಧ್ವಿ ದಿನಪತ್ರಿಕೆಗಳಲ್ಲಿ, ಜೀ ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 15 ವರ್ಷಗಳ ಕಾಲ ಮೃದಂಗ ವಾದನ ಕಲಿತ ಇವರು, ಅನೇಕ ಲಯವಾದ್ಯಗಳನ್ನು ನುಡಿಸಬಲ್ಲವರಾಗಿದ್ದು, ತಮ್ಮ ಗೆಳೆಯರೊಂದಿಗೆ ಸೇರಿ ಆರಂಭಿಸಿರುವ 'ನಾವು' ಮತ್ತು 'ರಿದಂ ಅಡ್ಡ' ಬ್ಯಾಂಡ್‌ಗಳ ಮೂಲಕ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕೆಲವು ವರ್ಷಗಳಿಂದ ರಂಗ ಸಂಗೀತವನ್ನೂ ಮಾಡುತ್ತ ದೇಶಾದ್ಯಂತ ಓಡಾಡುತ್ತಿದ್ದಾರೆ. ಅನುಗ್ರಹ ಪ್ರಕಾಶನವನ್ನು ಮುನ್ನಡೆಸುತ್ತಿದ್ದಾರೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳಿಂದ ಪ್ರೇರಿತರಾಗಿ ಸಾಹಿತ್ಯ ಸೃಜಿಸುವೆಡೆಗೆ ಬಂದ ಅನುಷ್‌ರ ಈವರೆಗಿನ ಬರಹದ ಮೂಲವಸ್ತು ಪ್ರಕೃತಿಮೇ ಆಗಿದೆ. ಸಣ್ಣ ವಿಷಯಗಳಲ್ಲೂ ಕೌತುಕ ತೋರುತ್ತ, ಸದಾ ಊರಿಂದ ಊರಿಗೆ ಓಡಾಡುತ್ತ, ಹಾಡುತ್ತ, ಬರೆಯುತ್ತ ಇರುವ ಇವರು ಸದ್ಯ ಮಡದಿ ಡಾ. ಅನುಷಾ ಅವರೊಂದಿಗೆ ಮೈಸೂರಿನಲ್ಲಿ ನೆಲೆಸಿದ್ದಾರೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
14 (26%)
4 stars
30 (57%)
3 stars
6 (11%)
2 stars
1 (1%)
1 star
1 (1%)
Displaying 1 - 16 of 16 reviews
Profile Image for Abhiram's  Book Olavu.
104 reviews3 followers
December 10, 2025
ಬಹಳ ಚೆಂದದ, ಕೌತುಕದ, ಹಾಸ್ಯ ಭರಿತ ಕೃತಿ ಅಂತೆನ್ನಬಹುದು. ಹುಣಸೂರಿನ ಆಸುಪಾಸಿನ ಜನ ಜೀವನ, ಗ್ರಾಮ್ಯ ಭಾಷಾ ಸೊಗಡು, ಕೋಟೆ ಬೀದಿ ಆನೆ ಬೀದಿಗಳ ಮಕ್ಕಳು ಮತ್ತವರ ಕ್ಲೇಶ, ಕಳ್ಬೆಟ್ಟದ ಸುತ್ತ ಪ್ರಚಲಿತ ದಂತಕಥೆ, ಹೀಗೆ ಹತ್ತು ಹಲವು! ಓದ್ತಾ ಓದ್ತಾ ಕಳೆದೇ ಹೋದೆ! ದರೋಡೆಕೋರರನ್ನ ಅರಸುತ್ತಾ ಕೊನೆಯ ಪುಟವನ್ನು ತಲುಪಿದ್ದು ಗೊತ್ತಾಗಲೇ ಇಲ್ಲ! ತೇಜಸ್ವಿ ಅವರ ಗೈಯ್ಯಾಗಳು ಹಾಗೆ ಚಿದಂಬರ ರಹಸ್ಯವನ್ನ ಒಮ್ಮೆ ನೆನಪಿಸಿತು. ಒಟ್ಟಿನಲ್ಲಿ, ವಿಭಿನ್ನತೆ ಇಂದ ಕೂಡಿರುವ ಅನುಷ್ ರವರ ಬರವಣಿಗೆಗೆ ಫಿದಾ ಆದೆ ಅಂದ್ರೂ ತಪ್ಪಾಗಲಾರದು! ಹೀಗೆ ಇನ್ನಷ್ಟು ವೈವಿಧ್ಯಮಯ ಕಥೆಗಳು ಲೇಖಕರು ನಮ್ಮ ಮುಂದಿಡಲಿ ಎನ್ನುವುದೇ ನನ್ನ ಆಶಯ.
Profile Image for Nayaz Riyazulla.
420 reviews93 followers
September 9, 2020
ಅನುಷ್ ರವರ ಪುಟ್ಟ ಕಾದಂಬರಿ... ವಸ್ತುವಿನಲ್ಲಿ ವಿಭಿನ್ನತೆ ಇಲ್ಲದಿದ್ದರೂ ಕಥೆ ಕಟ್ಟುವ ಕ್ರಮ ಮತ್ತು ಇಂತಹ ವಸ್ತುವಿನಲ್ಲೂ ಕೌತುಕತೆ ಮತ್ತು ಮುಂದೇನು ಎಂದು ಓದುಗರನ್ನು ಕಾಯುವ ಹಾಗೆ ಮಾಡುವ ಪ್ರಯತ್ನದಲ್ಲಿ ಗೆದ್ದಿದ್ದಾರೆ....
Profile Image for Soumya.
217 reviews48 followers
June 16, 2021
ದರೊಡೆಕೋರರ ಬಗ್ಗೆ ಯೋಚನೆ ಮಾಡ್ಕೊಂಡ್ ಹಾಂಗ್ ಆಗ್ಬೋದು ಹಿಂಗ್ ಆಗ್ಬೋದು ಅಂತ ಓದ್ತಾ ಓದ್ತಾ ಪುಸ್ತಕನೇ ಮುಗಿಸಬಹುದು.

ಚಿಕ್ಕ ಪುಸ್ತಕ.
ಗ್ರಾಮ್ಯ ಕನ್ನಡ ಇಡೀ ಪುಸ್ತಕದಲ್ಲಿ ಸಿಗತ್ತೆ.

ಮನಸಲ್ಲಿ ಹನಗೋಡು, ದೊಡ್ಡಜ್ಜ, ಊರಿನ ಮಕ್ಕಳು, ಕಥೆ ಓದಿದ ನಂತರನೂ ಉಳಿತಾರೆ.
Profile Image for Prashanth Bhat.
2,156 reviews138 followers
January 29, 2019
ತೇಜಸ್ವಿಯ ಕತೆಯ ಪರಿಸರ, ಚಂದದ ಪುಟ್ಟ ಕಾದಂಬರಿ
Profile Image for Akasharagala Alemaari.
15 reviews2 followers
November 22, 2022
ಕಳ್ಬೆಟ್ಟದ ದರೋಡೆಕೋರರು.

ಇದೊಂದು ತಾಸಿನ ಮಿನಿ ಪಯಣ. ಹನುಗೋಡಿನ ಅಜ್ಜಯ್ಯನ ಕೈ ಹಿಡಿದು ಹುಡುಗರ ಜೊತೆ ಕಳ್ಬೆಟ್ಟದ ದರೋಡೆಕೋರರ ಕಥೆ ಕೇಳುತ್ತಾ, ಊರಿನ ಜನರ ಜೊತೆ ಜೀಕುತ್ತಾ, ಸುಮ್ಮನೇ ಒಂದು ರೌಂಡ್ ಹೋಗಿ ಬರುವವಷ್ಟರಲ್ಲಿ ನಗು, ವಿಷಾದ ಎರಡು ಮನಸಲ್ಲಿ ತುಂಬಿ ಬಿಟ್ಟಿರುತ್ತೆ. ’ನೀನು ನಿನ್ನೋಳಗೆ ಖೈದಿ’ ನಾನು ಓದಿದ ಅನುಷ್ ಅವರ ಮೊದಲ ಪುಸ್ತಕ. ಟೈಂ ಟ್ರಾವೆಲ್ ಬಗ್ಗೆ ಕನ್ನಡದ ಮಟ್ಟಿಗೆ ಹೊಸ ವಿಷಯದ ಪುಸ್ತಕವಾದ್ದರಿಂದ. ಜೊತೆಗೆ ಕ್ವಾಂಟಮ್ ಫಿಸಿಕ್ಸ್ ನನ್ನಿಷ್ಟದ ಸಜ್ಬೆಕ್ಟ ಆಗಿದ್ದಕ್ಕೆ ತುಂಬಾ ಹಿಡಿಸಿತ್ತದು. ಅಷ್ಟೇ ಸೋಗಾಸಾಗಿ ಅವರು ಕಥೆಯನ್ನು ಹೇಳುತ್ತಾ, ತಮ್ಮದೇ ಲೋಕದೊಳಕ್ಕೆ ಕರೆದುಕೊಂಡು ಹೋಗಿ ಕೊನೆಯನ್ನು ಮುಟ್ಟಿಸಿ, ಪಯಣ ಮುಗಿತು ಅನ್ನುತ್ತಾರಲ್ಲ ಆಗ ಛೇ, ಇನ್ನೊಂದು ಸ್ವಲ್ಪ ಹೊತ್ತು ಇರಬೇಕಿತ್ತು ಅನ್ನಿಸಿದರು, ತೃಪ್ತಿಯ ಭಾವ ಮನಸ್ಸಾವರಿಸಿರುತ್ತದೆ.

ಅವರು ಸೃಷ್ಟಿಸೋ ಆ ಊರು. ಅದರಲ್ಲಿನ ಪಾತ್ರಗಳು. ಆ ಬೀದಿಗಳು. ಕಾಡು ಎಲ್ಲವೂ ಜೀವಂತಿಕೆ ಕಾಣುತ್ತದೆ. ಓದುವ ಅಷ್ಟು ಸಮಯ ನೀವು ಆ ಊರಿನವರೇ ಆಗಿರುತ್ತಿರಿ. ಬರಿ ಕಥೆಯನ್ನು ಹೇಳುವುದಷ್ಟೆ ಅಲ್ಲ, ಅಲ್ಲಲಿ ಬದುಕಿನ ಚೆಂದದ ಪಾಠವನ್ನು ಸಲೀಸಾಗೆ ಸಾಗಿಸುತ್ತಾರೆ. ಹಾಗೇ ಬದುಕಿನ ಪಾಠ ಹೇಳುವ ಹಿರಿಯರ ಹಾಗೇ ಇಲ್ಲಿ ದೊಡ್ಡಜ್ಜ ಇದ್ದಾರೆ. ಊರಿನ ಉಸಾಬರಿ ಮಾಡುತ್ತ, ಸಣ್ಣದ್ದನ್ನೆ ದೊಡ್ಡದು ಎಂಬಂತೆ, ಇಲಿ ಬಂದ್ರೆ ಹುಲಿ ಹೋಯ್ತು ಎನ್ನುವಂತಹ ಆ ನಾಲ್ಕು ಜನ ಇಲ್ಲಿಯು ಇದ್ದಾರೆ. ಎಲ್ಲಾ ಊರಿನಲ್ಲಿಯು ಇರುವ ಒಂದು ಹಳೆಯ, ನಿಗೂಢ ರಹಸ್ಯದ ದಂತೆ ಕಥೆಗಳು ಇಲ್ಲಿಯು ಇವೆ. ಅವುಗಳು ಅಜ್ಜಿ-ಅಜ್ಜಂದಿರ ಬಾಯಿಂದ ಮಕ್ಕಳು, ದೊಡ್ಡವರ ತಲೆಯಲ್ಲಿ ಹೊಸ ಹೊಸ ಕಲ್ಪನೆಗಳನ್ನು ಹುಟ್ಟಿಸುವಂತೆ ಇಲ್ಲಿಯು ಆಗುತ್ತದೆ. ಗಲ್ಲಿ ಗಲ್ಲಿಯ ಜಗಳಗಳಂತೆ ಇಲ್ಲಿಯು ಬೀದಿಯ ಹುಡುಗರ ಜಗಳವಿದೆ. ಗಣೇಶನ ಹಬ್ಬದ ಪೈಪೋಟಿಯಿದೆ. ಸದ್ದಿಲ್ಲದೇ ಅರಳೋ ಪ್ರೇಮವಿದೆ. ಆಗಾಗ ಊರಿನ ಪಂಚಾಯಿತಿಯು ಸೇರುತ್ತದೆ. ಹೀಗೆ ಕಳ್ಬೆಟ್ಟದ ಇಕ್ಕೆಲ್ಲಗಳೆಲ್ಲಾ ಅನುಷ್ ನಿಮ್ಮನ್ನು ತಿರುಗಾಡಿಸುತ್ತಾರೆ.

ಓದಿ ಮುಗಿಸುವ ಹೋತ್ತಿಗೆ ತೇಜಸ್ವಿ ನೆನಪಾಗುತ್ತಾರೆ. ಅವರ ಚಿದಂಬರ ರಹಸ್ಯ ನೆನಪಾಗುತ್ತದೆ. ಅನುಷ್ ತೇಜಸ್ವಿಯ ಹಾದಿಯಲ್ಲಿ ನಡೆಯುತ್ತಿದ್ದಾರ ಎಂದನಿಸದೇ ಇರಲಾರದು.
Profile Image for Aadharsha Kundapura.
59 reviews
July 22, 2022
ಅನುಷ್ ಎ ಶೆಟ್ಟಿಯವರ‌ ಇನ್ನೊಂದು ಕಾದಂಬರಿ. ಮತ್ತೆ ಅದೇ ವಿಶಿಷ್ಟವಾದ ಸರಳ ಬರವಣಿಗೆ, ಕ್ಷಣ ಕ್ಷಣಕ್ಕೂ ಸಸ್ಪೆನ್ಸ್, ಕತೆಯುದ್ದಕ್ಕೂ ಗ್ರಾಮ್ಯ ಭಾಷೆ ಹಾಗು ತಲೆಯಲ್ಲಿ ಓಡಾಡುವ ಪ್ರಶ್ನೆಗಳು.
ಊರಿನಲ್ಲಿ‌ ನಡೆಯುತ್ತಿರುವ ಕಳ್ಳತನ ಹೆಚ್ಚಾಗಿ, ಕಳ್ಬೆಟ್ಟದಲ್ಲಿನ ಕಳ್ಳರ ಭಯದಿಂದ ಜನರು ರಾತ್ರಿಯಾಗುತಿದ್ದಂತೆ ಗೂಡು ಸೇರಿ ಭಯದಿಂದ ರಾತ್ರಿ ಕಳೆಯುತ್ತಿದ್ದರು.
ಸರ್ಕಾರಿ ಬಸ್. ಮುಂಜಾನೆ ವೇಳೆ ತೆಂಗಿನ ಮರದ ಕಳ್ಳತನ, ಹೀಗೆ ಹಲವಾರು ವಿಚಿತ್ರ ಘಟನೆಗಳು ನಿಗೂಢವಾಗಿ ನಡೆಯುತ್ತಿರುತ್ತದೆ.
ಕಳ್ಳರ ಹುಡುಕಾಟದಲ್ಲಿ ಪುಸ್ತಕದ ಕೊನೆ ಪುಟ ಬಂದದ್ದೆ ಅರಿಯಾವಾಗುದಿಲ್ಲ..
ಎಲ್ಲ ಪ್ರಶ್ನೆಗಳಿಗೆ ಕೊನೆ ಪುಟಗಳಲ್ಲಿ ಉತ್ತರ ಸಿಗುತ್ತದೆ..
‌ ಚಿಕ್ಕ ಪುಸ್ತಕವಾದರು ಕತೆ ಪರಿಪೂರ್ಣವೆನ್ನಿಸಿತು..

*ಕಳ್ಬೆಟ್ಟದ ದರೋಡೆಕೋರರು*
*🖊️ಅನುಷ್ ಎ ಶೆಟ್ಟಿ*
Profile Image for milton.reads.
59 reviews1 follower
May 30, 2024
I was mesmerized by Anush Shetty's first novel "ಆಹುತಿ" and decided that I would read all his books as soon as possible. Better late than never.

As mentioned in Publisher's words about the author, Anush' writing has a lot of influence from ಪೂಚಂತೆ, one that has Nature as its core element. This short novel definitely reminds you of ಚಿದಂಬರ ರಹಸ್ಯ, the street side friends, their misadventures, the commotion at the end etc.
62 reviews9 followers
December 31, 2020
"ಕಳ್ಬೆಟ್ಟದ ದರೋಡೆಕೋರರು" - ಪುಸ್ತಕದ ಹೆಸರನ್ನೇ ಮನಸಲ್ಲಿ ಇಟ್ಕೊಂಡು ದರೋಡೆಕೋರರು ಬರಬಹುದು , ಬಂದು ಏನು ಮಾಡ್ತಾರೆ , ಇನ್ನೂ ಏನೇನು ವಿಷಯಗಳು ಇದೆ ಅಂತ ಪುಸ್ತಕದ ತುಂಬಾ ಹುಡುಕಾಡಿ ಕೊನೆಗೆ ನೋಡಿದರೆ ಪುಸ್ತಕದ ಕೊನೆ ಹಾಳೆಯಲ್ಲಿ ಇರ್ತೀರ. ಕತೆ ಚೆನ್ನಾಗಿದೆ, ಅಲ್ಲಲ್ಲಿ ನಾವೇ ಕಥೆಯೊಳಗಿದ್ದೆವೇನೋ ಅನ್ನೋ ಭಾಸ ಖಂಡಿತ. ಕ್ಲಿಷ್ಟಕರವಲ್ಲದ ಸಾಹಿತ್ಯ ಸರಾಗವಾಗಿ ಓದಿಸಿಕೊಂಡು ಹೋಗತ್ತೆ.
Profile Image for ಲೋಹಿತ್  (Lohith).
89 reviews1 follower
October 3, 2023
ಇದು ಅನುಷ್ ಅವರ ಎರಡನೇ ಪುಸ್ತಕ,ಅವರ ಎಲ್ಲ ಕಥೆಗಳಂತೆ ಇಲ್ಲಿ ಒಂದು ಹಳ್ಳಿಯಿದೆ,ಇಲ್ಲಿ ಒಂದು ದಂತಕಥೆಯಿದೆ,ಅದು ಅದರ ನಿಜ ರೂಪ ತೊರೆದು ಊರ ಜನರ ಮುಂದೆ ಬರಲು ಕಾತರಿಸುತ್ತಿದೆ..

ದರೋಡೇಕಾರರು ಯಾರು..? ಎಂಬ ಪ್ರಶ್ನೆಗೆ ಕೊನೆಯಲ್ಲಿ ತುಂಬಾ ಸೊಗಸಾದ ಉತ್ತರ ದೊರೆಯುತ್ತದೆ..

ಅನುಷ್ ಅವರು ಹೀಗೆ ಗುಡ್ಡಗಾಡಿನ, ಹಳ್ಳಿಗಾಡಿನ,ಪರ್ವತದ,ಶಿಖರ ಶ್ರೇಣಿಯ,ವನ್ಯ ಜಲ ಜೀವದ ಬಗ್ಗೆ ಬರೆಯುತಿರಲಿ ಎಂದು ಆಶಿಸುತ್ತೇನೆ..
29 reviews1 follower
June 16, 2024
ಅನುಷ್ ಅವರ ನೀನು ನಿನ್ನೊಳಗೆ ಖೈದಿ ಮತ್ತು ಹುಲಿ ಪತ್ರಿಕೆ ಬಹುವಾಗಿ ಇಷ್ಟಪಟ್ಟಿದ್ದೆ... ಆದರೆ ಕಳ್ಬೆಟ್ಟದ ದರೋಡೆಕೋರರು ಅಷ್ಟಾಗಿ ಹಿಡಿಸಲಿಲ್ಲ... ಕಥೆ ಕಟ್ಟುವ ಕ್ರಮ ಚೆನ್ನಾಗಿದೆ... ಆದರೆ ಅಂತ್ಯದಲ್ಲಿ ಸಸ್ಪೆನ್ಸ್ ಅನಿಸುವುದಿಲ್ಲಾ... ಒಮ್ಮೆ ಓದಬಹುದು...
4 reviews
April 21, 2022
ತುಂಬಾ ನಿರೀಕ್ಷೆ ಇಟ್ಟುಕೊಳ್ಳದೆ.. ಸಿಕ್ಕಾಪಟ್ಟೆ ಏನೂ ಕಥಾವಸ್ತು ಇಲ್ಲದ.. ಸಾದಾ ಕಥೆಯ.. ಆದರೂ ಓದಿಸಿಕೊಂಡು ಹೋಗುವ.. ಸಣ್ಣದಾದ ಒಂದು ಟೈಂಪಾಸ್ ಕಾದಂಬರಿ..
1 review
December 6, 2023
ಕಾಳ್ ಬೆಟ್ಟದ ದರೋಡೆಕೊರರನ್ನ ಹುಡುಕಾಡಾಟದಲ್ಲಿ ನಮ್ಮೂಲ್ಲು ಒಬ್ಬ ದರೋಡೆ ಕೋರ ಇರತಾನೆ ಅಂತ ತಮಾಷೆಯಾಗಿ ತೋರಿಸ್ಕೊಡೋ ಚಂದದ ಕಾದಂಬರಿ...

Thank you ಅನುಷ್...
9 reviews
October 8, 2024
ಕಾದಂಬರಿ ಚೆನ್ನಾಗಿದೆ. ಒಳ್ಳೆಯ ಪ್ರಯತ್ನ. ಇನ್ನೂ ಸ್ವಲ್ಪ ವಿಷ್ಲೇಷಿಸಬಹುದಿತ್ತು.
Displaying 1 - 16 of 16 reviews

Can't find what you're looking for?

Get help and learn more about the design.