ಒಂದು ಒಳ್ಳೆಯ ಸಾಮಾಜಿಕ ಕಾದಂಬರಿ . ಕ್ರಿಸ್ಚಿಯನ್ ಧರ್ಮದಲ್ಲಿ ನಡೆಯುವ ಧಾರ್ಮಿಕ ರಾಜಕೀಯ ಮತ್ತು ನಿಷ್ಟಾವಂತ ಪಾದರಿ ಮತ್ತು ಸಿಸ್ಟರ್ ಅನುಭವಿಸುವ ಹಿಂಸೆ , ಕಿರುಕುಳ , ನೋವಿನ ಚಿತ್ರ ಕಣ್ಣಿನ ಮುಂದೆ ಬರುತ್ತದೆ .
ದೇವರ ಹೆಸರಿನಲ್ಲಿ ನಡೆಯುವ ಅನ್ಯಾಯ, ದೌರ್ಜನ್ಯ, ಕ್ರೂರತೆಗಳ ಪ್ರತಿಬಿಂಬಿಸುವ, ಒಂದು ಅದ್ಭುತ ಕಾದಂಬರಿ. ದೇವರ ಪ್ರತಿನಿಧಿಗಳಾಗಿ ಸಾಮಾನ್ಯ ಜನತೆಯ ಕಷ್ಟಗಳಲ್ಲಿ ನೆರವಾಗಿ, ಕರುಣಾಮಯಿಗಳಾಗಿ ಅವರ ಕಣ್ಣೀರ ಒರೆಸಬೇಕಾದ ಧಾರ್ಮಿಕ ಸಂಘ, ಸಂಸ್ಥೆಗಳ ಮುಖಂಡರು ಮತ್ತು ಪ್ರಚಾರಕರೇ, ಒಳಗೊಳಗೇ ಒಂದು ಕ್ರೂರ ವ್ಯವಸ್ಥೆಯನ್ನು ಸೃಷ್ಟಿಸಿ, ತಮಗಿರುವ ದೈವೀಕ ಸ್ಥಾನಮಾನಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಬರೆಯಲು ಇದೊಂದು ಕ್ಲಿಷ್ಟ ವಸ್ತು. ಆದ್ರೆ ಲೇಖಕರ ಅವರ ಎಂದಿನ ಸರಳ ನಿರೂಪಣೆ, ಓದುಗರಿಗೆ ಪರಿಚಿತವೆನ್ನುವ ಪರಿಸರ, ಘಟನಾವಳಿಗಳಿಂದ, ಒಂದು ಶ್ರೇಷ್ಠ ಕಾದಂಬರಿಯನ್ನು ನೀಡಿದ್ದಾರೆ.
ಕ್ರೈಸ್ತ ಸಮಾಜದಲ್ಲಿ ಕೆಲವು ಕೆಟ್ಟ ಜನರ ಕೈಯಲ್ಲಿರುವ ಅಧಿಕಾರ ದುರ್ಬಳಕೆಯಿಂದ ಏಸುವಿನ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಕಥಾ ಹಂದರ. ಇದರಿಂದ ನೈಜವಾಗಿ ಏಸುವಿನ ತತ್ವ ಪಾಲಿಸುವವರನ್ನು ತುಳಿಯಲಾಗುತ್ತಿದೆ ಎಂಬುದನ್ನು ಕಾದಂಬರಿಯ ಕಥೆ ಸಾಗುತ್ತದೆ.