ಎಲ್ರೂ ಹೀಗ್ಹೀಗೆ ಬದುಕಬೇಕು ಅನ್ನೋರೆ; ಆದ್ರೆ ಹಾಗೆ ಬದುಕಿದೋರೆಷ್ಟು ಜನ?
ಪ್ರಕಾಶ್ ರೈ ಅವರು ತಮ್ಮ ಜೀವನದ ಅನುಭವಗಳನ್ನ ಸಣ್ಪುಟ್ಟ ಕತೆಗಳ ತರಹ ಲೇಖನಗಳಲ್ಲಿ ವಿವರಿಸ್ತಾ ಹೋಗ್ತಾರೆ. ಅಲ್ಲೊಂದು ಸಂದೇಶ ಕೊಡ್ತಾರೆ. ವಿಭಿನ್ನವಾದ ಶೈಲಿಯಲ್ಲಿ ಇಲ್ಲಿರೋ ಸುಃಖ, ದುಃಖ, ಪ್ರೀತಿ, ಪ್ರೇಮಗಳಂಹ ಹಲವು ಲೇಖನಗಳನ್ನ ಹೇಳ್ತಾ ಹೋಗೋದರಿಂದ ಒಂದು ಫೀಲ್ ಗುಡ್ ಫೀಲ್ ಸಿಗುತ್ತೆ. ಸುಮಾರು ವಿಷಯಗಳನ್ನ ಬಾರೀ ಗಜಿಬಿಜಿ (complicate) ಮಾಡಿಕೊಳ್ಳೋ ಜನರಿಗೆ ಈ ಪುಸ್ತಕ ಬಾರೀ ಸ್ಪೇಷನ್ ಅನ್ನೋ ಹಾಗಿದೆ. ನೀನಿದನ್ನ ನಂಬ್ಲೇಬೇಕು, ಹೀಗೆ ಮಾಡಬೇಕು, ಕರೆಂಟು ಕಂಬ ಕಂಡ್ರೆ ಒಂದು ಪುಲ್ಟಾಸ್ ಕಲ್ಲು ಎಸಿಲೇ ಬೇಕು ಅಂತೆಲ್ಲ ಹೇರೋಕೆ ಹೊಗದೆ ಹೌದಲ ಗುರು, ಈತರ ವಿಷಯಗಳನ್ನೂ ಹೀಗೂ ಯೋಚ್ನೆ ಮಾಡ್ಬೋದಲ ಅನಿಸುವಂತೆ ಮಾಡ್ತಾರೆ ಇಲ್ಲಿ. ಬದುಕನ್ನ ಬೇರೆ ಬೇರೆ ಕೋನಗಳಲ್ಲಿ ನಿಂತು ನೋಡಿವಂತೆ ಮಾಡೋ ಪುಸ್ತಕ “ಅವರವರ ಭಾವಕ್ಕೆ”
ಚೆನ್ನಾಗಿದೆ ಗುರು, ಆರಾಮಾಗಿ ಓದಿಸಿಕೊಂಡು ಹೋಗುತ್ತೆ. ಒಂತರ ಬೆಸ್ಟ್ ಪ್ರೆಂಡ್ ಜೊತೆ ಮಾತಾಡಿದಂಗಿರುತ್ತೆ. ಸುಮಾರು ಕತೆಗಳು ಮನಸಲ್ಲಿ ಉಳಿಯುತ್ತೆ. ಜೈ