ಇದು ರಹಮತ್ ತರೀಕೆರೆಯವರು ನಡೆಸಿದ 30 ಆಯ್ದ ಮುಖ್ಯ ಸಂದರ್ಶನಗಳ ಮೊದಲ ಭಾಗ.. ಈ ಭಾಗದಲ್ಲಿ ಇರುವುದು 15 ಸಂದರ್ಶನಗಳು...
ಈ ಪುಸ್ತಕ ಓದುವುದಕ್ಕಿಂತ ಮುಂಚೆ ಇಲ್ಲಿರುವ ವ್ಯಕ್ತಿಗಳನ್ನು ಮತ್ತು ಅವರ ಜೀವನದ ಬಗ್ಗೆ ನಮಗೆ ಸ್ವಲ್ಪ ತಿಳಿದಿರಲೇಬೇಕು... ಇಲ್ಲವೆಂದರೆ ಓದುವುದು ಕೊಂಚ ಕಷ್ಟ... ನನಗೆ ಇಲ್ಲಿನ ಬಹುತೇಕರ ಬಗ್ಗೆ ತಿಳಿದಿರುವದರಿಂದ ಓದುವುದು ಸುಲಭವಾಯಿತು ಮತ್ತು ಇಷ್ಟವೂ ಆಯಿತು..
ಇಲ್ಲಿ ಇರುವ ವ್ಯಕ್ತಿಗಳು ತಮ್ಮ ಸಾಹಿತ್ಯ ಸೃಷ್ಟಿಯಲ್ಲೋ, ತಮ್ಮ ವಿಚಾರಧಾರೆಯಿಂದನೋ, ತಮ್ಮ ವಿಮರ್ಶೆಯಿಂದನೋ ಅಥವಾ ತಮ್ಮ ಹೋರಾಟದಿಂದನೋ ಪ್ರಸಿದ್ದಿಯಾದವರು.. ಇವರ ವ್ಯಕ್ತಿತ್ವ ಮತ್ತು ಇವರು ಜೀವನವನ್ನು ನೋಡುವ ಪರಿ ಓದಿ ಮನ ಪಕ್ವಗೊಳ್ಳಲು ತಡವರಿಸುತ್ತದೆ... ಈ ರೀತಿಲೇ ಬದುಕಬೇಕಂತಲ್ಲ... ಈ ಕೋನದಿಂದಲೂ ನಾವು ಯೋಚಿಸಬಹುದು ಅಂತ....
ಕೃತಿ : ಲೋಕವಿರೋಧಿಗಳ ಜತೆಯಲ್ಲಿ ಸಂದರ್ಶನ : ರಹಮತ್ ತರೀಕೆರೆ
ಪ್ರಸ್ತುತ ಈ ಕೃತಿಯಲ್ಲಿ ಮುಖ್ಯವಾಗಿ ಎಂ.ಡಿ. ನಂಜುಂಡಸ್ವಾಮಿ, ದೇವನೂರ ಮಹಾದೇವ, ಶಂಕರ ಮೊಕಾಶಿ ಪುಣೇಕರ, ಕೆ. ರಾಘವೇಂದ್ರರಾವ್, ಎಲ್. ಬಸವರಾಜು, ಎಚ್. ಗಣಪತಿಯಪ್ಪ, ಎ.ಎನ್. ಮೂರ್ತಿರಾವ್, ಚೆನ್ನವೀರ ಕಣವಿ, ಜಿ.ಎಚ್. ನಾಯಕ, ಕಡಿದಾಳು ಶಾಮಣ್ಣ, ಕೆ.ಎಸ್. ನಿಸಾರ್ ಅಹಮದ್, ಸಾರಾ ಅಬೂಬಕ್ಕರ್, ಮುದೇನೂರ ಸಂಗಣ್ಣ, ನೀಲಗಂಗಯ್ಯ ಪೂಜಾರ್ ಮತ್ತು ಷ. ಷಟ್ಟರ್ ಅವರನ್ನು ಒಳಗೊಂಡಂತೆ ೧೫ ಜನರ ಸಂದರ್ಶನಗಳಿವೆ. ಕನ್ನಡದ ದೊಡ್ಡ ಸಾಹಿತಿಗಳನ್ನು ಮಾತುಕತೆಗೆ ಎಳೆದು ಅವರಿಂದ ವಿಚಾರವನ್ನು ಹೀರಿಕೊಳ್ಳುವ ಪ್ರಯತ್ನವನ್ನು ಈ ಕೃತಿಯಲ್ಲಿ ರಹಮತ್ ತರೀಕೆರೆಯವರು ಮಾಡಿದ್ದಾರೆ. ಈ ಕೃತಿಯನ್ನು ಓದಲಿಚ್ಛಿಸುವವರು ಓದುವ ಮುಂಚಿತವಾಗಿ ಐದಿನೈದು ಲೇಖಕರ ಸಂಕ್ಷಿಪ್ತ ಪರಿಚಯನ್ನಾದರೂ ಮಾಡಿಕೊಳ್ಳಬೇಕು. ಇವರೆಲ್ಲರೂ ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡದ ಅರಿವನ್ನು ವಿಸ್ತರಿಸಿದವರು. ಕಡಿದಾಳು ಶಾಮಣ್ಣನವರ ಮಾತುಕತೆಯಲ್ಲಿ ತೇಜಸ್ವಿಯವರೊಂದಿಗಿನ ಗಾಢವಾದ ಸ್ನೇಹ, ಜಿ.ಎಚ್ ನಾಯಕರ ಸಂದರ್ಶನದಲ್ಲಿ ಅನಂತಮೂರ್ತಿಯವರೊಂದಿಗಿನ ಒಡನಾಟ ಹೀಗೆ ಹಲವು ವಿಷಯಗಳು ಕಾಣಬಹುದು. ಇಲ್ಲಿನ ಬಹುತೇಕರು ಬರಹ ಬಲ್ಲವರೇ ಆಗಿದ್ದರೂ ಮಾತುಕತೆಯಲ್ಲಿ ವಾಗ್ವಾದ ನಡೆಸುವಾಗ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಈ ಕೃತಿಯನ್ನು ಓದುವುದು ನಿಜವಾಗಿಯೂ ಕುತೂಹಲಕಾರಿ ಸಂಗತಿ. 'ನ್ಯಾಯನಿಷ್ಠುರಿಗಳ ಜತೆಯಲ್ಲಿ' ಈ ಕೃತಿಯಲ್ಲಿಯೂ ಐದಿನೈದು ಲೇಖಕರ ಸಂದರ್ಶನಗಳಿವೆ.
ಭಿನ್ನ ಚಿಂತಕರ ಸಂದರ್ಶನ. ಅರ್ಥಪೂರ್ಣ ಮುಖಪುಟ. ಸಂದರ್ಶನಗಳು ಅವರ ಒಳ ಹೊರಗ ಚೆನ್ನಾಗೇ ತೆರೆದಿಟ್ಟಿದೆ. ಸಂದರ್ಶನದ ಕೊನೆಯ ಟಿಪ್ಪಣಿಗಳು,ಅನುಬಂಧದ ಪರಿಚಯ ಕೂಡ ಕೃತಿಯ ಸೊಗಸ ಹೆಚ್ಚಿಸಿದೆ.