Jump to ratings and reviews
Rate this book

ಮಲೆನಾಡಿನ ರೋಚಕ ಕಥೆಗಳು

Rate this book
ಬಟ್ಟ ಬಯಲಿನಂತಲ್ಲ ಮಲೆನಾಡು. ಇಲ್ಲಿನ ಜಡಿಗುಟ್ಟಿ ಸುರಿವ ಮಳೆಯ ರುದ್ರ ನರ್ತನ, ಮೊಗೆವ ಹಸಿರಿನ ಮೇಲೆ ಹಾಸುವ ಮಂಜು, ಬೆಟ್ಟ-ಗುಡ್ಡಗಳ ಮೇಲಿನ ಎಳೆಬಿಸಿಲ ಚೇತೋಹಾರಿ ನೋಟ, ಹನ್ನೆರಡು ತಿಂಗಳ ವೈವಿಧ್ಯಮಯವಾದ ಪ್ರಕೃತಿ ಸೌಂದರ್ಯ ಇನ್ನೆಲ್ಲೂ ಸಿಗದು. ಭತ್ತ, ಏಲಕ್ಕಿ, ಕಾಫಿ, ಕಿತ್ತಳೆ, ಕಾಳುಮೆಣಸಿನ ಪರಿಮಳದ ಇಲ್ಲಿನ ಸಂ‌ಘರ್ಷದ ಬದುಕಿನ ಜೊತೆಗೆ ತುಳುಕು ಹಾಕಿಕೊಂಡ ಪ್ರಾಣಿ-ಪಕ್ಷಿಗಳ ಚಿತ್ರ ವಿಚಿತ್ರ ಘಟನೆಗಳು ಕೂಡ ಬೆರುಗ ಹುಟ್ಟಿಸುವಂಥದ್ದೇ. ಹಾವು-ಮುಂಗುಸಿ ವೈರ, ದೈತ್ಯ ಆನೆಯ ಶಕ್ತಿಪ್ರದರ್ಶನ, ಹೆಜ್ಜೇನುಗಳ ಮಾರಕ ದಾಳಿ, ಮೊಸಳೆ ಭಯ, ಕಳ್ಳಭಟ್ಟಿಯ ದುರಂತ, ಕೃಷಿಕನ ಕಷ್ಟ-ನಷ್ಟಗಳು, ಹಾದರದ ವ್ಯಥೆ, ಎಲ್ಲದರಲ್ಲಿಯೂ ಅವುಗಳದ್ದೇ ಆದ ರೋಚಕತೆ ಇದೆ. ಮಲೆನಾಡಿಗೆ ಸಾಟಿ ಮಲೆನಾಡು ಮಾತ್ರ! ಅನುಭವ ಇಲ್ಲದವರು ಅದನ್ನು ಓದಿಯೂ ಅನುಭವಿಸಬಹುದು.

Unknown Binding

9 people are currently reading
84 people want to read

About the author

Girimane Shyamarao

27 books13 followers
ಗಿರಿಮನೆ ಶ್ಯಾಮರಾವ್ ಆಧುನಿಕ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿನೂತನ ರೀತಿಯ ಬರವಣೆಗೆಗಳಿಂದ ಕನ್ನಡ ಓದುಗ ಆಸಕ್ತರ ನಡುವೆ ಚಿರಪರಿಚಿತರು. ಇವರ ಹುಟ್ಟೂರು ಹಾಸನ ಜಿಲ್ಲೆಯ ಸಕಲೇಶಪುರದ ಗಾಣದಹೊಳೆ ಗ್ರಾಮ. ಪತ್ನಿ ಶಶಿಕಲಾ ಹಾಗು ಪುತ್ರ ಚೇತನ್ ಶರ್ಮ. ಕೃಷಿಕನಾಗಿ 35 ವಸಂತಗಳ ಸುದೀರ್ಘ ಅನುಭವವಿದೆ. ಪಶ್ಚಿಮ ಘಟ್ಟದ ಪ್ರಕೃತಿ, ಜೀವಜಗತ್ತಿನ ಪರಿಚಯ, ಮನುಷ್ಯರ ಮನಸ್ಸಿನ ಅವಲೋಕನ, ವೈಜ್ಞಾನಿಕವಾದ ವೇದದ ಒಳಗನ್ನು ತಿಳಿಯುವ ಕುತೂಹಲ ಇವೆಲ್ಲವೂ ಇವರನ್ನು ಬರವಣಿಗೆಯ ಕ್ಷೇತ್ರದೆಡೆಗೆ ಸೆಳೆದಿದೆ. ಹವ್ಯಾಸಿ ಪತ್ರಿಕಾ ಅಂಕಣಕಾರರಾಗಿದ್ದಾರೆ. ಮಕ್ಕಳ ಸಾಹಿತ್ಯ, ವ್ಯಕ್ತಿತ್ವ ವಿಕಸನ, ಚಿಂತನೆ, ಕಾದಂಬರಿ ಹೀಗೆ ಹಲವಾರು ಪ್ರಕಾರಗಳಲ್ಲಿ ಓದುಗರಿಗೆ ಮೆಚ್ಚುವಂತಹ 26ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಗಿರಿಮನೆ ಪ್ರಕಾಶನ ಮೂಲಕ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
8 (20%)
4 stars
21 (52%)
3 stars
10 (25%)
2 stars
0 (0%)
1 star
1 (2%)
Displaying 1 - 7 of 7 reviews
Profile Image for Raghavendra T R.
70 reviews17 followers
January 23, 2020
ಈ ಸರಣಿಯಲ್ಲಿ ಮೊದಲು ಬಂದ ಪುಸ್ತಕದ ಓದು ಯಾವತ್ತು ತೃಪ್ತಿ ಕೊಡುವಂತದ್ದು. ಸರಳವಾದ ಭಾಷೆಯಲ್ಲಿ, ಪ್ರಕೃತಿಯೊಡನೆ ಇರುವ ತಮ್ಮ ಸ್ವಂತ ಅನುಭಗಳನ್ನು , ಚೊಕ್ಕವಾಗಿ ನಿರೂಪಿಸಿದ್ದಾರೆ.
Profile Image for Soumya.
219 reviews49 followers
August 30, 2020
ಸಣ್ಣ ಕಥೆಗಳ ಸಂಗ್ರಹ. ಮಲೆನಾಡಿನ ನಿತ್ಯ ಜೀವನದ ಆಗುಹೋಗುಗಳ ಪರಿಚಯ ಮಾಡಿಸಿದ್ದಾರೆ. ದೂರದ ಬೆಟ್ಟ ನುಣ್ಣಗೆ ಅನ್ನೋ ಹಾಗೆ ಹೊರಗಿನವರಿಗೆ ಮಲೆನಾಡು ಚೆಂದ, ಆದ್ರೆ ಅಲ್ಲೇ ಇದ್ದೋರಿಗೆ ಗೊತ್ತು ಅಲ್ಲಿ ಆಗೋ ಅಂತ ಫಜೀತಿಗಳು. ಬೇಗ ಓದಿ ಮುಗಿಸಬಹುದು.
Profile Image for ಸುಶಾಂತ ಕುರಂದವಾಡ.
429 reviews25 followers
June 22, 2021
ಮಲೆನಾಡಿನ ತಮ್ಮ ಅನುಭವಗಳನ್ನು ಕಥೆಯಾಗಿ ಮಾರ್ಪಾಡಿಸಿದ್ದಾರೆ ಶ್ಯಾಮರಾವ್ ಅವರು. ಒಳ್ಳೆಯ ರೀತಿಯಲ್ಲಿ ಬರೆದಿರುವ 14 ಕಥೆಗಳು ಓದುಗರನ್ನು ಆಕರ್ಷಿಸುತ್ತವೆ.
Profile Image for Subrahmanya V .
24 reviews
June 30, 2023
Read Part-1 of this series. Interesting read for someone who wants to know the Malenadu life style. While the author narrates a series of incidents that he encountered while living there, the 'story' element is missing & the content seems more like a commentary ...
22 reviews
July 7, 2024
Great book! I randomly picked it up.
The way he narrates his own experience is incredible
Profile Image for Dhananjaya Poojari.
6 reviews
October 16, 2022
ಮಲೆನಾಡಿನ ಜೀವನದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದಾರೆ.
Displaying 1 - 7 of 7 reviews

Can't find what you're looking for?

Get help and learn more about the design.