What do you think?

ಎಸ್. ದಿವಾಕರ್ ಆಯ್ದ ಕತೆಗಳು
170 pages, Unknown Binding
Published January 1, 2009
About the author
S. Diwakar
29 books3 followersಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು. ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು.
ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ (ಪ್ರಬಂಧಗಳು), ಪ್ರಪಂಚ ಪುಸ್ತಕ (ವಿಮರ್ಶಾ ಲೇಖನಗಳು), ಪಂಡಿತ ಭೀಮಸೇನ ಜೋಶಿ (ವ್ಯಕ್ತಿಚಿತ್ರ), ಕಥಾಜಗತ್ತು, ಜಗತ್ತಿನ ಅತಿಸಣ್ಣ ಕತೆಗಳು, ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು, ಹಾರಿಕೊಂಡು ಹೋದವನು (ಅನುವಾದಿತ ಕಥೆಗಳು), ವೆನಿಸ್ಸಿನಲ್ಲಿ ಸಾವು, ಹಳ್ಳಿ, ಪೋಸ್ಟ್ ಮ್ಯಾನ್ (ಅನುವಾದಿತ ಕಾದಂಬರಿಗಳು), ಮಾಸ್ಟರ್ ಬಿಲ್ಡರ್ (ಅನುವಾದಿತ ನಾಟಕ), ಶತಮಾನದ ಸಣ್ಣಕತೆಗಳು, ಸಣ್ಣಕತೆ 1983, ಕನ್ನಡ ಅತಿ ಸಣ್ಣಕತೆಗಳು, ನಾದದ ನವನೀತ, ಬೆಸ್ಟ್ ಆಫ್ ಕೇಫ (ಸಂಪಾದಿತ ಕೃತಿಗಳು).

Ratings & Reviews
Friends & Following
Create a free account to discover what your friends think of this book!
Community Reviews
Displaying 1 - 1 of 1 review
December 5, 2018
ಎಸ್ ದಿವಾಕರ್ ಅವರ ಆಯ್ದ ಕತೆಗಳು - ದಿವಾಕರ್
ದಿವಾಕರ್ ಬಹಳ ಚೆನ್ನಾಗಿ ಕತೆ ಬರೆಯುತ್ತಾರೆ. ಅವರ ಈ ಸಂಕಲನದಲ್ಲಿ ಕನಿಷ್ಟ ಪಕ್ಷ ಕೆಲವಾದರೂ ಅತ್ಯುತ್ತಮ ಕತೆಗಳಿವೆ. ಕ್ರೌರ್ಯ, ಹೇಗೆ ಬದುಕುವುದೋ ಯಾರಿಗೆ ಗೊತ್ತು, ಬಿಳಿಯ ಹೂಗಳ ಕವಿತೆ, ಅನಾಥರು ಇವೆಲ್ಲ ಸಾರ್ವಕಾಲಿಕವಾಗಿಯಾದರೂ ಅತ್ಯುತ್ತಮ ಕತೆಗಳ ಸಾಲಿಗೆ ಸೇರಬಲ್ಲವು.
ಪಾಶ್ಚಾತ್ಯ ಸಾಹಿತ್ಯದ ಅತ್ಯಧಿಕ ಜ್ಞಾನ ಇದ್ದ ಕನ್ನಡದ ಬರಹಗಾರರಲ್ಲಿ ಕಂಡ ಸಮಾನ ಅಂಶ , ಅವರ ಸೃಜನಶೀಲ ರಚನೆಗಳಲ್ಲಿ ಕಾಣುವ ಅತಿ ವಾಸ್ತವತೆ. ಕತೆಯ ಅಂಶಗಳ ಜೊತೆ ಪರಿಸರದ ಗಾಢ ವಿವರಗಳು ಎದ್ದು ಕಾಣುತ್ತವೆ. ದಿವಾಕರ್ ಅವರ ಕತೆಗಳೂ ಇದಕ್ಕೆ ಹೊರತಲ್ಲ.
ಅದಲ್ಲದೆ ಇಲ್ಲಿನ ಕತೆಗಳಲ್ಲಿ ಎರಡು ಪ್ರಪಂಚಗಳ ನಡುವಿನ ಅಂತರ ತೆಳುವಾಗಿದೆ. ಬಾಹ್ಯ ಮತ್ತು ಅಂತರಂಗದ ಈ ಎರಡು ಪ್ರಪಂಚಗಳ ನಡುವೆ ಕತೆಯ ಪಾತ್ರಗಳ ಹೊಯ್ದಾಟ ನಮ್ಮನ್ನು ತಟ್ಟುತ್ತದೆ.
ಅಂತರಂಗದ ತಳಮಳ ಅಂದರೆ ಅದರಲ್ಲಿ ದೈನ್ಯತೆ, ಅಸಹಾಯಕತೆ ಮುಂತಾದ ಋಣಾತ್ಮಕ ಅಂಶಗಳಿಗೆ ಪ್ರಾಧಾನ್ಯತೆ ಜಾಸ್ತಿ.
ಇನ್ನೊಂದು ಮುಖ್ಯ ವಿಷಯ ಎಂದರೆ ಕತೆಯ ದೃಷ್ಟಿಯಿಂದ ದಿವಾಕರ್ ಅನೇಕ ಪ್ರಯೋಗಗಳ ಮಾಡಿದವರು. ಅವರ ಒಂದು ಕತೆಯಲ್ಲಿ ಒಂದೇ ವಾಕ್ಯ ಪ್ರತೀ ಸಲ ಒಂದು ಹೊಸ ಶಬ್ದ ಸೇರಿಸಿಕೊಂಡು ಕೊನೆಗೆ ಇಡಿಯ ಚಿತ್ರಣ ದೊರೆವಂತೆ ರೂಪುಗೊಂಡಿದೆ(ಆ ಕತೆ ಈ ಸಂಕಲನದಲ್ಲಿ ಇಲ್ಲ). ಇನ್ನೊಂದು ಒಂದು ಪೊಟೋ ಇಟ್ಟುಕೊಂಡು ಅದನ್ನು ವಿವರಿಸಿ ಕತೆಯಾಗಿಸಿದ್ದು.
ತಮಿಳುನಾಡಿನ ಪರಿಸರ ಇಲ್ಲಿನ ಹೆಚ್ಚಿನ ಕತೆಗಳಲ್ಲಿ ಕಾಣಬಹುದು.
ನನಗೆ ಇವರ ಕತೆಗಳ ಓದುವಾಗ ಇವರ ಪತ್ನಿ ಜಯಶ್ರೀ ಅವರ ಕತೆಗಳ ಇನ್ನೊಂದು ರೂಪದಲ್ಲಿ ಓದುತ್ತಿರುವಂತೆ ಭಾಸವಾಯಿತು.
ಇಬ್ಬರದೂ ದಟ್ಟ ವಿವರಗಳ, ಅಂತರಂಗದ ಸ್ವಗತದ,ಪರಿಸರದ ವಿವರದ ಮೂಲಕವೇ ತೆರೆದುಕೊಳ್ಳುವ ಶೈಲಿಯಾದ ಕಾರಣವೂ ಇರಬಹುದು.
ಒಳ್ಳೆಯ ಸಂಕಲನ.