ಇಲ್ಲಿ
ಯಾರೂ ಮುಖ್ಯರಲ್ಲ
ಯಾರೂ ಅಮುಖ್ಯರಲ್ಲ
ಯಾವುದೂ ಯ:ಕಶ್ಚಿತವಲ್ಲ!
~ ಕುವೆಂಪು
ಈ ಸಾಲುಗಳು ಎಷ್ಟು ಮುಖ್ಯ ಅಲ್ಲವೇ ? ನಾವು ಮನುಷ್ಯರು ಈ ಭೂಮಿಗೆ ನಾವೇ ಹಕ್ಕುದಾರರು ಅಂತ ಮೆರೆಯುತ್ತ, ಇದ್ದಬದ್ದ ಜೀವಿಗಳಲ್ಲಿ ಯಾವುದು ಇರಬೇಕು ಯಾವುದು ಹೋಗ್ಬೇಕು ಅಂತ ಹಕ್ಕು ಚಲಾಯಿಸ್ತಾ, ಒಂದೆಡೆ ತಮ್ಮ ಪರಿಸರವನ್ನೇ ನಾಶ ಮಾಡ್ತಾ ತನ್ನ ಅಂತ್ಯವನ್ನ ತಾವೇ ತಂದ್ಕೊತಾ ಇದ್ದೀವಿ. ಮಾನವನ ಕ್ರೌರ್ಯಕ್ಕೆ ಸಿಕ್ಕಿ ನಲುಗಿದಂತಹ ಪ್ರಾಣಿಗಳಲ್ಲಿ dhole ಅಥವಾ ಕಾಡು ನಾಯಿಗಳು, ನರಿಗಳು ಮುಂಚೂಣಿಯಲ್ಲಿವೆ. ತೇಜಸ್ವಿ ಅವರು ಒಂದ್ಕಡೆ ಹೇಳ್ತಾರೆ, 'ಈ ಪ್ರಕೃತಿ ವಿನಾಶ ಆಗ್ತಾ ಇರುವುದು ಮನುಷ್ಯನ ಪಾಲಿಗೆ ಹೊರತು ಪ್ರಕೃತಿಯ ಪಾಲಿಗೆ ಅಲ್ಲ' ಅಂತ. ಎಷ್ಟು ನಿಜ ಅಲ್ಲವೇ? ಹೀಗೆ ಕೆಲವು ಜೀವಿಗಳು ವಿನಾಶವಾಗಿ ಹೋದರೆ, ಇಕಾಲಾಜಿಕಲ್ ಕೊಂಡಿ ಕಳಚಿ ಬೀಳುವುದು. ಇದು ಮಾನವನ ಅಂತ್ಯಕ್ಕೆ ಎಚ್ಚರ ಘಂಟೆಯ ಮೊಳೆತವಷ್ಟೆ!
ಒಂದು wildlife documentary ಮಾಡೊದು ಸುಲಭದ ಮಾತಲ್ಲ. ಅದಕ್ಕೆ ತನ್ನದೇ ಆದ ಜ್ಞಾನ, ಆಸಕ್ತಿ, ಶಿಸ್ತು, ಕಾಡಿನಲ್ಲಿ ವಾಸಿಸಲು ಛಲ ಹಾಗೂ ಶ್ರದ್ಧೆ ಇರಲೇಬೇಕು. ಪ್ರತಿಯೊಬ್ಬ ಛಾಯಾಗ್ರಹಕನೂ ಉತ್ತಮ ಡಾಕ್ಯುಮೆಂಟರಿ ಮಾಡಲಾರ. ಕೃಪಾಕರ ಸೇನಾನಿ ಅವರ ಕಾನನದ ಬಗೆಗಿನ ಕಾಳಜಿ, ಅರಿವು ಹಾಗೆಯೆ ಕೆನ್ನಾಯಿಗಳ ಬಗೆಗಿನ ಆಸಕ್ತಿ, ಕುತೂಹಲ, ಕಾಳಜಿ, ಈ ಪುಸ್ತಕದ ಪ್ರತಿ ಪುಟದಲ್ಲಿಯೂ ಸುಪ್ತವಾಗಿದೆ ಅನ್ನಬಹುದು. ಲೇಖಕರ ಕಾಡಿನ ಕೆಲ ರೋಚಕ ಅನುಭವಗಳನ್ನ ಓದಿ, ಈ ಕಾಂಕ್ರೀಟ್ ಕಾಡಿನಲ್ಲಿ ಇದ್ದವರಿಗೆ ಬಂಡೀಪುರಕ್ಕೆ ಓಡಿ ಹೋಗುವ ಅಂತ ಎನ್ನಿಸಬಹುದು. ಎಷ್ಟೋ ವಿಚಾರಗಳು ನನ್ನ ಅರಿವಿಗೆ ಮೊದಲ ಬಾರಿಗೆ ಬಂದಿದ್ದು ಅಂತ್ತೆನ್ನಬಹುದು.
ಕೆಲವೆಡೆ ಓದುವಾಗ, ಅರಣ್ಯದಲ್ಲಿ ಕೆಲವು ಸಿಬ್ಬಂದಿಗಳ ಸ್ವಾರ್ಥದಿಂದ ಈ ಪ್ರಾಣಿಗಳಿಗೆ ತಮ್ಮ ಪಾಲಿನ ಆಹಾರವೂ ಸಿಗದಿದ್ದಾಗ ಬೇಸರವೆನಿಸಿತು. ಒಟ್ಟಿನಲ್ಲಿ ,ತುಂಬಾ ಅದ್ಭುತವಾಗಿ ರೋಚಕವಾಗಿ ತಮ್ಮ ಕಾಡಿನ ದಿನಚರಿ ಹಾಗೂ ಅನುಭವಗಳ ಬರೆದಿರುವ ಲೇಖಕರ ಜೊತೆ ಕಾಲ್ಪನಿಕವಾಗಿ ಸಾಗುವುದು ತುಂಬಾ ಸಂತಸವೆನಿಸಿತು.