*ನೆಲೆ* :
ಭೈರಪ್ಪನವರ ವಿಭಿನ್ನ ಕಾದಂಬರಿಗಳಲ್ಲಿ ನೆಲೆಯು ಓಂದು. ತಂದೆಯ ಮತ್ತು ಮಗನ ಸಂಬಂಧದ ಕುರಿತಾದ ಕಾದಂಬರಿ. ಕಾದಂಬರಿ ಉದ್ದಕ್ಕೂ ದಟ್ಟ ಸಾವಿನ ವಾಸನೆಯೆ. ಮನುಷ್ಯ ಸತ್ತ ನಂತರ ೧೦ ದಿವಸ ನಡೆಯುವ ಕರ್ಮಗಳನ್ನೆಲ್ಲ (ದಹನ ಸಂಸ್ಕಾರ, ದರ್ಮೋದಕ ಇನ್ನೂ ಹಲವು), ಭೈರಪ್ಪನವರು ಜವರಾಯಿಯ ಸಾವಿನ ಮೂಲಕ ಅದ್ಭುತವಾಗಿ ವರ್ಣಿಸಿದ್ದಾರೆ.
ಕಾಳಪ್ಪನವರಿಗೆ ತನ್ನ ಆಪ್ತಮಿತ್ರನಾದ ಜವರಾಯಿಯ ಸಾವಿನ ಸುದ್ದಿ ತಲುಪಿದಾಗ ಕಡೆಯ ಬಾರಿ ಓಮ್ಮೆ ನೋಡಲು ಹೋಗುತ್ತಾನೆ. ಅಲ್ಲಿ ಕಾಳಪ್ಪನವರಿಗೆ ಜವರಾಯಿಯ ಡೈರಿ ಸಿಗುತ್ತದೆ, ಜವರಾಯಿಯು ಎಷ್ಟೋ ವಿಷಯಗಳನ್ನು ಕಾಳಪ್ಪನವರ ಹತ್ತಿರ ತೋಡಿಕೊಂಡಿರುತ್ತಾನೆ, ಆದರೆ ಇನ್ನೂ ಎಷ್ಟೋ ಹೊಸ ವಿಷಯಗಳು ತಾನು ಏಕಾಂತದಲ್ಲಿ ಕೂತು ಓದುತ್ತಾ ಜವರಾಯಿಯ ಬಗ್ಗೆ ತಿಳಿದುಕೊಳ್ಳುತ್ತಾನೆ, ಕಾದಂಬರಿಯ ಉದ್ದಕ್ಕೂ ಕಾಳಪ್ಪನವರು ಜವರಾಯಿಯ ಬಗ್ಗೆ ಓದುತ್ತಾ ಹೋಗುತ್ತಾರೆ.
*ಮನುಷ್ಯನನ್ನು ಇರುವಾಗ ತೆಗಳುವುದು, ದ್ವೇಷಿಸುವುದು,ಸತ್ತ ನಂತರ ಹೊಗಳುವುದು, ಪ್ರೀತಿಸುವುದು. ತಂದೆಯ ಬೆಲೆಯನ್ನು ತಿಳಿಯದೇ ಕುಮಾರನು ತನ್ನನ್ನು ಹುಟ್ಟಿಸಿದ್ದೇಕೆ,ತಂದೆಯಾದವನು ತನಗೆ ಏನೂ ಮಾಡಿಲ್ಲವೆಂದು ದೂರುತ್ತಾನೆ. ಅದೇ ತನ್ನ ತಂದೆ ತೀರಿಹೋದಾಗ, ತಂದೆಯು ತನಗೆ ಜನ್ಮ ನೀಡಿದ್ದೆ ಒಂದು ಪುಣ್ಯವೆಂದು ಅರ್ಥಮಾಡಿಕೊಳ್ಳುತ್ತಾನೆ. ಶಾಸ್ತ್ರದಲ್ಲಿ ನಂಬಿಕೆ ಇಲ್ಲದಿರುವ ಕುಮಾರನಿಗೆ ತನ್ನ ತಂದೆಯ ಸಾವಿನಿಂದ ಶಾಸ್ತ್ರದ ಬಗ್ಗೆ ಅಪಾರ ನಂಬಿಕೆ ಹುಟ್ಟಿ ತಂದೆಯ ಕರ್ಮವನ್ನೆಲ್ಲ ನಿಷ್ಟೆಯಿಂದ ಮುಗಿಸುತ್ತಾನೆ. ಮಾಲತಿಯನ್ನು ಮದುವೆಯಾದ ನಂತರ ಕುಮಾರನ ವ್ಯಕ್ತಿತ್ವವೇ ಬದಲಾಗುತ್ತದೆ, ಮಾಲತಿಯು ಖರ್ಚಿನ ವಿಷಯಕ್ಕಾಗಲಿ, ತಂದೆ ತಾಯಿಯರನ್ನು ನೋಡಿಕೊಳ್ಳುವುದಕ್ಕಾಗಲಿ ತುಂಬಾ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ಸ್ವಭಾವದವಳು, ನಮ್ಮ ಸಮಾಜದಲ್ಲಿ ಹಲವಾರು ಕುಮಾರ ಮತ್ತು ಮಾಲತಿಯರನ್ನು ಕಾಣಬಹುದು. ಜವರಾಯಿಯ ಸಾವಿನ ಪರಿಣಾಮ ಸದಾ ದ್ವೇಷಿಸುತ್ತಿದ್ದ ತನ್ನ ಮಗ ಕುಮಾರನ ಮೇಲೆ ಹಾಗು ತನ್ನ ಧರ್ಮಪತ್ನಿ ಸುಬ್ಬುಲಕ್ಷ್ಮಿಯ ಮೇಲೆ ಹೇಗೆ ಪರಿಣಾಮ ಬೀರಿತೆಂದು ಇಲ್ಲಿ ಕಾಣಬಹುದು. ಭೈರಪ್ಪನವರು ಈ ಪಾತ್ರಗಳನ್ನು ಆಧಾರವಾಗಿಟ್ಟುಕೊಂಡು ಮನುಷ್ಯರ ಸ್ವಭಾವಗಳ ಬಗ್ಗೆ ಸುಂದರವಾಗಿ ವಿವರಿಸಿದ್ದಾರೆ*
ಸಮಯ ಸಿಕ್ಕಾಗ ತಪ್ಪದೇ ಓದಿ
------ *ಕಾರ್ತಿಕ್*