ಬರ್ಮಾ ದೇಶದ ಚಾರಿತ್ರಿಕ ನಗರವಾದ ಭಾಗನ್‌ನಲ್ಲಿನ ಸಾವಿರಾರು ಪಗೋಡಗಳ ನಡುವೆ ತನ್ನ ಕುಟುಂಬಕ್ಕೆ ಸಂಬಂಧಿಸಿದ ರಹಸ್ಯ ವಸ್ತುವನ್ನು ಹುಡುಕಲೆಂದು ಲಂಡನ್ ಪತ್ರಕರ್ತೆ ಮೇರಿ ಒಂದು ರಾತ್ರಿ ಕದ್ಡು ಡ್ರೋನ್ ಹಾರಿಸಿ ಪರಿಶೀಲಿಸುತ್ತಾಳೆ. ನಂತರ, ತನ್ನ ಮೇಲೆ ನಡೆದ ಗುಂಡಿನ ದಾಳಿಯಿಂದ ಹೆದರಿ ಬರ್ಮ ತೊರೆದು ಭಾರತದ ಪಶ್ಚಿಮ ಕರಾವಳಿಯಲ್ಲಿನ ರತ್ನಗಿರಿಗೆ ಬಂದಾಗ ಆಕೆಯ ಮೇಲೆ ಮತ್ತೆ ಕೊಲೆ ಪ್ರಯತ್ನ ನಡೆಯುತ್ತದೆ. ಮೇರಿ ನಡೆಸುತ್ತಿದ್ದ ಹುಡುಕಾಟದ ಬಗ್ಗೆ ಆತಂಕಗೊಂಡ ಬರ್ಮ ದೇಶದ ಬೌದ್ಧ ಗುರು. ತನ್ನ ಸಹಾಯಕನನ್ನು ಆಕೆಯ ಬಳಿ ಅಟ್ಟುತ್ತಿದ್ದಂತೆ, ಆಕೆಗೆ ಸಹಾಯ ಮಾಡಿದ್ದ ಟೂರಿಸ್ಟ್ ಗೈಡ್ ಅನ್ನು ಭೂಗತ ಗುಂಪೊಂದು ಸಂಪರ್ಕಿಸಿ ಚರಿತ್ರೆಯ ರಹಸ್ಯವೊಂದರ ಬೆನ್ನತ್ತಿ ಹೋಗಲು ಪ್ರಚೋದಿಸುತ್ತದೆ.
ಇತ್ತ ಭಾರತದಲ್ಲಿ ಸಿಬಿಐ ಸಿಬ್ಬಂದಿ. ಚರಿತ್ರೆಯ ಪ್ರಾಧ್ಯಾಪಕಿ ಡಾ ಸುನಿತಾ ಅವರ ಜೊತೆಗೂಡಿ ಕೈಗೊಂಡ ಶೋಧನದಿಂದಾಗಿ ಲಂಡನ್ನಿನ ಪತ್ರಕರ್ತೆ ನಡೆಸುತ್ತಿದ್ದ ಹುಡುಕಾಟಕ್ಕೂ, ಭಾರತದ ಸೈನ್ಯ ನಡೆಸಿದ ಸರ್ಜಿಕಲ್ ಸ್ಟ್ರೈಕ್ಗೂ ಸಂಬಂಧ ಇರುವ ಬಗ್ಗೆ ಅರಿವಾಗುತ್ತದೆ. ಡಾ ಸುನಿತಾ ಅವರ ಸಂಶೋಧನೆಯ ಮೂಲಕ ಘಟನೆಗಳು ಬಿಚ್ಚಿಕೊಳ್ಳುತ್ತಿದ್ದಂತೆ. ಮರೆತುಹೋಗಿದ್ದ ದಾರುಣ ಚರಿತ್ರೆಯ ತುಣುಕೊಂದು ಅನಾವರಣವಾಗುವುದರ ಜೊತೆಗೆ, ಅತ್ಯಂತ ಬೆಲೆ ಬಾಳುವ, ರತ್ನವೊಂದರ ರಕ್ತಸಿಕ್ತ ರಹಸ್ಯ ಬಯಲಾಗತೊಡಗುತ್ತದೆ.
Dr. K.N. Ganeshaiah is an agricultural scientist and professor at the University of Agricultural Sciences, Bangalore. He is also a novelist specializing in thrillers, and writes in the Kannada language.
Education: Ph. D. University of Agricultural Sciences, Bangalore, India, l983 M.Sc. (Agri.) in Genetics & Plant Breeding, UAS, Bangalore, l979 B.Sc (Agri.), University of Agricultural Sciences, Bangalore, l976.
Prof Ganeshaiah has pioneered a new style of writing novels and short stories in Kannada that seamlessly mixes facts and fiction in the form of thrillers. Through this style, his writings have captured a new generation of readers in Kannada contributing to the growth of story writing in Kannada.
Though an agriculture scientist, his novels and stories bring to the reader, the lesser-known and hidden facts of history along with science. Some of his novels are also aimed at bringing the most complicated elements of science to the general reader.
Recognizing the novelty in the style of writing, he was awarded Kannada Sahitya Academy Datti Award for his novel Kanaka Musuku, which combines both history and science. As some experts have inferred, his thrillers have drawn a large number of new readers to Kannada.
In recognition of his novel contribution to Kannada Literature, Prof Ganeshaiah has also been honored with the Honorary President of Kolar District Sahitya Parishat during 2013
Prof Ganeshaiah has written Nine novels, and 41 short/long stories (in eight collections) and over 63 essays in the areas related Science and Society. His recent book Sasya Sagga on the wonders of plant life as told through his own journey in the field of botany and evolution has attracted your readers. Several of his novels and stories were serialized in Kannada Weekly Magazines
ಗಣೇಶಯ್ಯನವರ ಕಾದಂಬರಿಗಳಲ್ಲಿ ಎರಡು ಅಂಶ ಸಾಮಾನ್ಯ. ಒಂದು ರೋಚಕತೆ. ಇನ್ನೊಂದು ಭರಪೂರ ಮಾಹಿತಿ ಮತ್ತು ಆಧಾರ.
ಹಾಗಾಗಿ ಅವರ ಎಲ್ಲಾ ಪುಸ್ತಕಗಳ ಒಂದೇ ಪಟ್ಟಿಗೆ ಮುಗಿಸಬೇಕು ಅಂತ ಹೊರಡುವವ ಎರಡನೇ ಅಥವಾ ಮೂರನೆಯ ಪುಸ್ತಕದ ಕೊನೆಗೆ ಬರುವಾಗಲೇ ಸುಸ್ತಾಗಿರುತ್ತಾನೆ.
ಬರ್ಮಾದ ರಾಜಮನೆತನದ ಚರಿತ್ರೆ, ಅದರ ರಾಜ ತೀಬಾ ಅವನ ಮೂವರು ಪತ್ನಿಯರು, ಅವನ ಎರಡನೆಯ ಪತ್ನಿ ಸುಫಯಾತ್ ಹೇಗೆ ಅಧಿಕಾರ ಕೈಗೆ ತೆಗೆದುಕೊಂಡಳು ,ಬ್ರಿಟಿಷರ ಕುತಂತ್ರದಿಂದ ಹೇಗೆ ಅದಕ್ಕೆ ಅಳಿವು ಬಂತು? ಅವರ ಅಪಾರ ಪ್ರಮಾಣದ ನಿಧಿಯ ಕತೆ ಏನಾಯಿತು? ಅದನ್ನು ಮೇರಿ ಎಂಬ ಪತ್ರಕರ್ತೆ ಏಕೆ ಹುಡುಕಿಕೊಂಡು ಹೊರಟಳು? ಅವಳ ಸಂಶೋಧನಾ ಭೇಟಿ ಯಾಕೆ ಇಂಗ್ಲೆಂಡ್‍ನ ಎಮ್ - 16 ನಂತಹ ಗೂಢಚಾರಿ ಪಡೆಗಳ ಕಣ್ಣು ಕೆಂಪಾಗಿಸಿತು? ಇವೆಲ್ಲ ಘಟನೆಗೂ ಭಾರತದ ಸೇನೆ ಕೈಗೊಂಡ ಸರ್ಜಿಕಲ್ ಸ್ಟ್ರೈಕ್ಗೂ ಸಂಬಂಧ ಏನು? ಹೀಗೆ ಹಲವಾರು ಪ್ರಶ್ನೆಗಳ ಹುಟ್ಟುಹಾಕುತ್ತಾ ಅವಕ್ಕೆಲ್ಲ ಪೂರಕ ಮಾಹಿತಿ ಚಿತ್ರ ಸಮೇತ ಕೊಡುತ್ತಾ ಕತೆ ಸಾಗುತ್ತದೆ.
ಇತಿಹಾಸದಲ್ಲಿ ದಂತಕತೆಗಳ ಚಿನ್ನದ ಚೌಕಟ್ಟು ತೆಗೆದರೆ ಅದರೊಳಗೆ ಬದುಕಿದ್ದು ನಮ್ಮ ನಿಮ್ಮಂತಹ ಸಾಮಾನ್ಯ ಮನುಷ್ಯರೇ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ ಈ ಪುಸ್ತಕ.
ಎಂದಿನ ಗಣೇಶಯ್ಯನವರ ಶೈಲಿಯ ಪುಸ್ತಕ. ಸಮಯ ತೆಗೆದುಕೊಂಡು ಓದಿ.
ಇದು ನಾ ಓದಿದ ಗಣೇಶಯ್ಯ ಅವರ 2ನೇ book. ಅವರ book ಓದಿದ ಎಲ್ಲರೂ ಈ ಕೆಳಗಿನ 2 ಅಂಶಗಳನ್ನ ಒಪ್ಪುತ್ತಾರೆ.
1. ಅವರು ತಮ್ಮ ಎಲ್ಲ ಪುಸ್ತಕಗಳಲ್ಲಿ ಕೊಡುವ ಯರ್ರಾಬಿರ್ರಿ ಮಾಹಿತಗಳು ಹಾಗೂ ಅವುಗಳ referenceಗಳು. ಈ reference ನ ಸಹಾಯದಿಂದ ನಾವು ಆ ಚರಿತ್ರೆಯ ಬಗ್ಗೆ ಮತ್ತು ಹೆಚ್ಚು ಮಾಹಿತಿ ಪಡೆಯಬಹುದು.
2. ನಿಜ ಚರಿತ್ರೆಯ ಸುತ್ತ ಅವರು ಹೆಳೆಯುವ ಕಾಲ್ಪನಿಕ ರೋಚಕ ಕಥೆ.
ಈ book ಅಲ್ಲಿ ಅವರು Burma ದೇಶದ ಚರಿತ್ರೆ ಬಗ್ಗೆ ಹೇಳ್ತಾರೆ. ಅಲ್ಲಿನ ರಾಜಮನೆತನ, ಬೌದ್ಧ ಧರ್ಮ ಬೆಳೆದು ಬಂದ ಹಾದಿ, ಭಾರತ ಬರ್ಮ ನಡುವಿನ ಸಾಮ್ಯತೆ ಬಗ್ಗೆ ಬಹಳ ಚೆನ್ನಾಗಿ ವಿವರಿಸಿದ್ದಾರೆ. ರಾಜ ಮನೆತನ ಅಂದ ಮೇಲೆ ನಿಧಿ ವಿಚಾರ ಬರಲೇಬೇಕು. ತೀಬಾ ರಾಜ, ಮಿಂಡೊನ್, ಸುಫಯಲಾತ್ ರಾಣಿ ಹಾಗೂ ಇವರ ಭಾರತದ ಜತೆಗಿನ ನಂಟು ಇವೆಲ್ಲವುಗಳ ವಿವರಣೆ ಈ book ನಲ್ಲಿ ಇದೆ. ಇಷ್ಟೇ ಅಲ್ಲದೆ ಬ್ರಿಟಿಷರು ಅಂದು ಮಾಡಿದ ತಪ್ಪನ್ನು ಇಂದಿನವರೆಗೂ ಮರೆಮಾಚಲು ಅಥವಾ ಸರಿಪಡಿಸಲು ಪ್ರಯತ್ನಿಸುವ ಪರಿ ಎಂಥವರನ್ನೂ ದಂಗು ಬಡಿಸುತ್ತದೆ.
ಅವರು ಬರ್ಮಾ ದೇಶದ ಬಗ್ಗೆ ಈ ಬುಕ್ನಲ್ಲಿ ಕೊಟ್ಟಿರುವ ಯಥೇಚ್ಚ್ಚ್ ಮಾಹಿತಿ, ನಾವು ಒಂದ್ ಸರಿ ಬರ್ಮಾ ನೋಡಿ ಬರಬೇಕು ಅನ್ನೋ ಹಂಬಲ ಕೊಡೋದಂತೂ ಖಂಡಿತ.
ಗಣೇಶಯ್ಯ ಅವರ ಫ್ಯಾನ್ ಲಿಸ್ಟ್ ಪಟ್ಟಿಲಿ ಒಂದ್ ಹೆಸ್ರು ಜಾಸ್ತಿ ಆಗಿದೆ ಅಂತ ಹೇಳ್ಬೋದು. ಅವರ ಉಳಿದ ಎಲ್ಲ ಪುಸ್ತಕಗಳನ್ನು ಓದಬೇಕು ಅಂತ ನಾ ನಿರ್ಧಾರ ಮಾಡಿಯಾಗಿದೆ 😊
ಗಣೇಶಯ್ಯನವರ ಕಾದಂಬರಿಗಳನ್ನು ಓದದೇ ಬಹಳ ಕಾಲವಾಗಿತ್ತು. ಅವರ ಪುಸ್ತಕಗಳು ಒಂದೇ ತರಹದಲ್ಲಿ ಇರುತ್ತವೆ ಎಂಬ ಒಂದು ಅಂಶವನ್ನು ಹೊರತುಪಡಿಸಿದರೆ ಅವರನ್ನು ಓದುವುದು ರಸಗವಳ. ಐತಿಹಾಸಿಕ ವಿವರಗಳ ಜೊತೆಗೆ ಕಲ್ಪನೆಯನ್ನು ಹದವಾಗಿ ಬೆರೆಸಿ, ಅದಕ್ಕೊಂದು ಪತ್ತೇದಾರಿ ಎಳೆಯನ್ನು ಸೇರಿಸಿ, ಅಲ್ಲಲ್ಲಿ ಛಾಯಾಚಿತ್ರಗಳನ್ನು ಮತ್ತು ರೇಖಾಚಿತ್ರಗಳನ್ನು ಬಳಸಿ,ಅನೇಕಾನೇಕ ತಿರುವುಗಳ ಮೂಲಕ ಹಂತಹಂತವಾಗಿ ಕತೆಯನ್ನು ಓದುಗರ ಕುತೂಹಲವನ್ನು ಕೆರಳಿಸುವಂತೆ ಮುಂದಿಡುವುದನ್ನು ಓದುತ್ತಿದ್ದರೆ ಸಮಯ ಸರಿದದ್ದೇ ತಿಳಿಯುವುದಿಲ್ಲ.
ಪುಸ್ತಕದ ಹೆಸರೇ ಸೂಚಿಸುವಂತೆ ಬರ್ಮಾ(ಈಗಿನ ಮ್ಯಾನ್ಮಾರ್) ದೇಶದ ಒಂದು ಅತ್ಯಮೂಲ್ಯವಾದ ರತ್ನ ಮತ್ತು ಅದರ ಸುತ್ತ ಹೆಣೆದುಕೊಂಡಿರುವ ರಕ್ತಸಿಕ್ತ ಚರಿತ್ರೆಯ ಬಗೆಗಿನ ಕಾದಂಬರಿ ಇದು. ಆಂಗ್ಲರ ಜೊತೆಗಿನ ಯುದ್ಧದಲ್ಲಿ ತೀಬಾ ರಾಜ ಸೋತ ನಂತರ ಅವನ ಬಳಿ ಇದ್ದ ಂಗಾ ಮಾಕ್(Nga maak) ಎಂಬ ರತ್ನವು ನಿಗೂಢವಾಗಿ ಕಳೆದು ಹೋಗುತ್ತದೆ. ಆ ರತ್ನದ ಶೋಧಕ್ಕೆ ಬಂದ ಮೇರಿ ಎಂಬ ಹುಡುಗಿಯ ಮೂಲಕ ಬರ್ಮಾ ದೇಶದ ಚಾರಿತ್ರಿಕ ವಿವರಗಳನ್ನು ಧಾರಾಳವಾಗಿ ಸವಿಯಬಹುದು. ಅಲ್ಲಿನ ಪಗೋಡಗಳ ವಿಶಿಷ್ಟತೆ, ರಾಜವಂಶದ ವಿಶೇಷವಾದ ನಡಾವಳಿಗಳು, ಬೌದ್ಧ ಧರ್ಮವು ಅಲ್ಲಿ ಹಾಸುಹೊಕ್ಕಾಗಿರುವ ಬಗ್ಗೆ ಸಮೃದ್ಧವಾದ ಮಾಹಿತಿಯನ್ನು ಕಾಣಬಹುದು. ಸಾಂದರ್ಭಿಕವಾಗಿ ಸನ್ನಿವೇಶಗಳನ್ನು ಮತ್ತು ಐತಿಹಾಸಿಕ ಕುರುಹುಗಳನ್ನು ಬಳಸಿಕೊಂಡು ಒಂದು ಬಗೆಯ ರೋಚಕತೆಯನ್ನು ತರುವುದರ ಜೊತೆಗೆ ಒಂದಕ್ಕೊಂದು ಕೊಂಡಿಗಳನ್ನು ಜೋಡಿಸುತ್ತಾ ಮಾಡುವ ಸತ್ಯ ಶೋಧನೆಯ ತರಹದ ಶೈಲಿ ಈ ಕಾದಂಬರಿಯಲ್ಲಿ ಸಹ ಅಡಕವಾಗಿದೆ. ಅದರ ಜೊತೆಗೆ ಬರ್ಮಾದ ಕೊನೆಯ ರಾಜನಾದ ತೀಬಾ ರಾಜ ಮತ್ತು ಅವನ ಪರಿವಾರ ಮೂವತ್ತು ವರ್ಷಗಳ ಕಾಲ ಭಾರತದ ರತ್ನಗಿರಿಯಲ್ಲಿ ಬ್ರಿಟಿಷರ ಸೆರೆಯಾಳಾಗಿ ವಾಸವಿದ್ದರು ಮತ್ತು ಆ ರಾಜನ ಕುರಿತಾದ ಆಸಕ್ತಿಯೇ ಈ ಕೃತಿಯ ರಚನೆಗೆ ಪ್ರೇರಣೆಯಾಯಿತು ಎಂಬ ಅಂಶವನ್ನು ಲೇಖಕರು ಪುಸ್ತಕದ ಕೊನೆಯಲ್ಲಿ ಹೇಳಿದ್ದಾರೆ.
ಒಟ್ಟಿನಲ್ಲಿ ಗಣೇಶಯ್ಯನವರ ಎಂದಿನ ಶೈಲಿಯಲ್ಲಿ ಮೂಡಿಬಂದಿರುವ ಈ ಕೃತಿಯು ಸಾಮಾನ್ಯರಿಗೆ ತಿಳಿಯದ ಇತಿಹಾಸದ ಪರಿಚಯವನ್ನು ಮಾಡುತ್ತದೆ.
ಮುಂಚೆ ಬರ್ಮಾ ಎಂದು ಕರೆಯಲ್ಪಡುತ್ತಿದ್ದ ಭಾರತದ ಒಂದು ಸೋದರ ದೇಶ ಇಂದು ಮಯ್ನನ್ಮಾರ್ ಎಂದು ಕರೆಯಲ್ಪಡುತ್ತದೆ. ಬರ್ಮಾ ಎಂದರೆ ನಮ್ಮ ಮನಸ್ಸಿಗೆ ಬರುವುದು ಬಹುಷ ಅಲ್ಲಿ ಹರಡಿರುವ ಬೌದ್ಧ ಧರ್ಮ. ಆದರೆ ಅಲ್ಲಿನ ರಾಜರ ಬಗ್ಗೆಯಾಗಲಿ, ಇತಿಹಾಸವಾಗಲಿ ತಿಳಿಯುವುದು ಕಷ್ಟವೇ. ಗಣೇಶಯ್ಯನವರ ಈ ಪುಸ್ತಕ ಬರ್ಮಾದ ಇತಿಹಾಸದ ಒಂದು ಪಾಠ ಎನ್ನಬಹುದು. ಈ ಕಾದಂಬರಿಯನ್ನು ಎಂದಿನಂತೆ ಕಾಲ್ಪನಿಕ ಪಾತ್ರಗಳನ್ನುಪಯೋಗಿಸಿ ಐತಿಹಾಸಿಕ ಪುರಾವೆಗಳೊಂದೆ ಸಮ್ಮಿಳಿಸಿ ಬರೆಯಲಾಗಿದೆ.
ಚರಿತ್ರೆ ಯಾವತ್ತೂ ನಿಗೂಢ. ಅದು ಎಲ್ಲವನ್ನೂ ಅಷ್ಟು ಸುಲಭವಾಗಿ ಬಿಟ್ಟು ಕೊಡುವುದಿಲ್ಲ. ವಿಪರೀತ ದುಡಿಮೆಯನ್ನು ಕೇಳುತ್ತದೆ. ಆ ದುಡಿಮೆ ಹೆಚ್ಚಾದಂತೆ ನಮಗೆ ಗೊತ್ತಿರದ ಅನೇಕ ಸಂಗತಿಗಳು ಒಂದೊಂದಾಗಿ ಅರ್ಥವಾಗುತ್ತಾ ಹೋಗಿ ಅದು ಇನ್ನಷ್ಟು-ಮತ್ತಷ್ಟು ಕುತೂಹಲ ಹೆಚ್ಚಿಸುತ್ತಾ ಹೋಗುತ್ತದೆ. ಇದು ಚರಿತ್ರೆಯ ಸಂಶೋಧನಾತ್ಮಕ ಪ್ರಕಾರ, ಇದಕ್ಕೆ ಸಂಶೋದನೆ ಬೇಕು, ತಿರುಗಾಟ ಬೇಕು, ಅದಕ್ಕೆ ಸಂಬಂಧ ಪಟ್ಟವರ ಪರಿಚಯವಿದ್ದರೆ ಇನ್ನೂ ಅನುಕೂಲ. ಇಂದು ನನಗೆ ಗೊತ್ತಿರುವ ಸಂಗತಿ ಇನ್ನೊಬ್ಬರಿಗೆ ಗೊತ್ತಿಲ್ಲದೇ ಇರಬಹುದು, ಆ ಸಂಗತಿಯನ್ನು ಅವರಿಗೆ ಹೇಳಿದಾಗ ಅದು ಅವರಿಗೆ ಕುತೂಹಲ ವಿಷಯವೇ. ಆದರೆ ಆ ಕುತೂಹಲ ಹುಟ್ಟಿಸುವ ಒಂದು ಗಳಿಗೆ ಇದೆಯಲ್ಲಾ ಆ ಗಳಿಗೆ ಸಿಗಬೇಕಾದರೆ ಇವೆಲ್ಲಕ್ಕಿಂದ ಹೆಚ್ಚಾಗಿ ಚರಿತ್ರೆಯನ್ನು ತಿಳಿಯುವ ಹಂಬಲ (interest) ತುಂಬಾ ಮುಖ್ಯವಾಗುತ್ತದೆ. ನಾನು ಡಾ.ಕೆ.ಎನ್.ಗಣೇಶಯ್ಯನವರ ಎಲ್ಲಾ ಕಾದಂಬರಿಗಳನ್ನು ಓದಿದ್ದೇನೆ. ನನ್ನ ಒಂದು Observation ಅಂದರೆ ಒಂದೊಂದು ಕಾದಂಬರಿ ರಚನೆಗೂ ಹಲವು ವರ್ಷಗಳ ಕಾಲ ಸಂಶೋಧನೆ ಮಾಡಿರುತ್ತಾರೆ, ಅದಕ್ಕೆ ಸಂಬಂಧಪಟ್ಟ ಪುಸ್ತಕ ಓದಿರುತ್ತಾರೆ, ತಜ್ಞರ ಸಲಹೆ ತಗೊಂಡಿರ್ತಾರೆ, ಅದಕ್ಕೆ ಸಂಬಂಧಪಟ್ಟ ನೂರಾರು ಪುಸ್ತಕಗಳನ್ನು ಹುಡುಕಿ ಹುಡುಕಿ ಓದಿರ್ತಾರೆ, ಕಾದಂಬರಿಯಲ್ಲಿ ಬಳಸಿಕೊಳ್ಳುವ ಸ್ಥಳಗಳಿಗೆ ಹಾಗೂ ಅದಕ್ಕೆ ಪೂರಕವಾಗಿರುವ ಸ್ಥಳಗಳಿಗೆ ಭೇಟಿ ನೀಡಿ ನಾವೆಲ್ಲರೂ ಗಮನಿಸದ ಸಂಗತಿಗಳನ್ನು ಟಿಪ್ಪಣಿ ಮಾಡಿಕೊಂಡು ಇನ್ಯಾವುದೋ ರೂಪದಲ್ಲಿ ಜೀವತುಂಬಿ ಕಾದಂಬರಿಯಲ್ಲಿ ತರ್ತಾರೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಕಾದಂಬರಿಯಲ್ಲಿ ಬಳಸಿಕೊಂಡ ಮಾಹಿತಿಗೆ ಪ್ರತಿಯೊಂದುಕ್ಕೂ ಉಲ್ಲೇಖವನ್ನು ನೀಡಿ ಅದಕ್ಕೊಂದು authenticity ಕೊಟ್ಟು ಅದರ ಬಗ್ಗೆ ಓದುಗರಲ್ಲಿ ಮತ್ತಷ್ಟು ಕುತೂಹಲವನ್ನು ಹುಟ್ಟಿಸುತ್ತಾರೆ. ಹೊಸ ಕಾದಂಬರಿ “ರಕ್ತಸಿಕ್ತ ರತ್ನ” ಈ ಮೇಲೆ ತಿಳಿಸಿದ ಎಲ್ಲ ಸ್ವರೂಪವನ್ನು ಒಳಗೊಂಡಿದೆ. ಭಾರತದಲ್ಲಿ ಅನೇಕ ಸಾಮ್ರಾಜ್ಯಗಳು ತಮ್ಮದೇ ಆದ ವಿಶಿಷ್ಟತೆಯಿಂದ ಕೂಡಿವೆ. ಆ ವಿಷ್ಟತೆಯನ್ನು ಇಟ್ಟುಕೊಂಡು ಗಣೇಶಯ್ಯನವರು ಕರಿಸಿರಿಯಾನ, ಕನಕಮುಸುಕು, ಬಳ್ಳಿಕಾಳ ಬೆಳ್ಳಿ ಕಾದಂಬರಿಯನ್ನು ಹೆಣೆದಿದ್ದರು. ಅಂತದೇ ಬರ್ಮಾ (ಮಯನ್ಮಾರ) ದೇಶದಲ್ಲಿನ ಪ್ರಸಿದ್ದ ಸಾಮ್ರಾಜ್ಯವಾದ Konbaung ಬಗ್ಗೆ ಸಮಗ್ರವಾಗಿ ತಿಳಿಸಿಕೊಡುವ ಕಾದಂಬರಿ ಇದು. ಅದರ ರಾಜ ತೀಬಾ, ಆತನ ಮೂರು ಜನ ಪತ್ನಿಯರು ಅದರಲ್ಲಿ ಎರನೇ ಪತ್ನಿಯಾದ ಸುಫಾಯಾಲಾತ್ ಇಡೀ ಸಾಮ್ರಾಜ್ಯವನ್ನು ಗಂಡನ ಕೈಯಿಂದ ತಾನು ತಗೆದುಕೊಂಡು ಒಂದು ವೈಭವಪೂರಿತ ಸಾಮ್ರಾಜ್ಯಕ್ಕೆ ಕರಾಳ ದಿನಗಳನ್ನು ತರುವಂತೆ ಮಾಡುತ್ತಾಳೆ ಹಾಗೂ ಅದೇ ಸಮಯದಲ್ಲಿ ಬ್ರಿಟಿಷರು ಸೇರಿ ಆ ಸಾಮ್ರಾಜ್ಯ ಹೇಗೆ ನುಚ್ಚುನೂರಾಯಿತು, ನಂತರ ಅಲ್ಲಿನ ಸಂಪತ್ತಿನ ಕಣ್ಮೆರೆಯ ಬಗ್ಗೆ ಇದ್ದ ನಿಗೂಢತೆ ಈ ಕಾದಂಬರಿಯ ಕಥಾವಸ್ತು. ಇನ್ನು ನಿಧಿಯ ಹುಡುಕಾಟ ಯಾವತ್ತು ಅಪಾಯದ ಸನ್ನಿವೇಶಗಳನ್ನೇ ಹುಟ್ಟು ಹಾಕುವುದು ಇಂತಹ ಪ್ರಸಂಗಗಳು ಈ ಕಾದಂಬರಿಯಲ್ಲಿ ರೋಚಕತೆಯಿಂದ ಕೂಡಿವೆ. ಇಡೀ ಕಾದಂಬರಿ ಒಂದು ರೋಚಕ ಡಾಕ್ಯೂಮೆಂಟರಿ ತರಾ ಶಿಸ್ತಿನಿಂದ ಸಾಗುತ್ತದೆ. ಲೇಖಕರು ಸಾದ್ಯವಾದಷ್ಟು ಸಮಗ್ರ ಮಾಹಿತಿ ಒದಗಿಸಿದ್ದಾರೆ. ತೀಬು ರಾಜನ ಸಾಮ್ರಾಜ್ಯಸ ಸಂಪತ್ತಿನ ನಿಧಿ ಕೇವಲ ಕಾದಂಬರಿಯ ಚೌಕಟ್ಟಿಗಾಗಿ ಮಾತ್ರ ಬಳಿಸಿದ್ದು ಲೇಖಕರ ಜಾಣ್ಮೆ. ಇನ್ನುಳಿದಂತೆ ವಿಜ್ರಂಭಿಸಿದ ಕಥಾವಸ್ತು ಎಂದರೆ ಅದು Konbaung ಸಾಮತ್ರಾಜ್ಯದ ಕರಾಳ ಚರಿತ್ರೆ. ಇನ್ನುಳಿದಂತೆ ಸಿಬಿಐ ಅಧಿಕಾರಿ ಹಾಗೂ ಇತಿಹಾಸ ತಜ್ಞೆ ಎಲ್ಲ ಕಾದಂಬರಿಯಂತೆ ಇಲ್ಲಿ ಕೂಡ ತುಂಬಾ ಚನ್ನಾಗಿ ಮೂಡಿ ಬಂದಿದ್ದಾರೆ. ಮೇರಿಯ ಪಾತ್ರದಿಂದ ಆರಂಭವಾಗಿ ಟುನ್ ಪಾತ್ರದಿಂದ ಮುಕ್ತಾಯವಾಗುವ ಈ ಕಾದಂಬರಿಯ ಮದ್ಯದಲ್ಲಿ ತೀಬು ಮತ್ತು ಸುಫಾಯಾಲಾತ್ ಇವರು ತುಂಬಾ ಕಾಡುವ ಪಾತ್ರಗಳು. ಭೌದ್ದ ಧರ್ಮದ ಬಗ್ಗೆ ಬಾಂಗ್ಲಾ ಜನಜೀವನದ ಬಗ್ಗೆ ತಿಳಿಯುವುದು ನಿಜವಾಗಿಯೂ ಬೋನಸ್. ಇದೂ ಸೇರಿದಂತೆ ಲೇಖಕರ ಎಲ್ಲಾ ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕದ ಆಸ್ತಿಗಳು. ಎಲ್ಲರೂ ಓದಲೇ ಬೇಕಾದ ಪುಸ್ತಕಗಳು.
ಪುಸ್ತಕ-ರಕ್ತಸಿಕ್ತ ರತ್ನ ಲೇಖಕರು-ಡಾ.ಕೆ.ಎನ್ ಗಣೇಶಯ್ಯ ಪ್ರಕಾಶಕರು-ಅಂಕಿತ ಪುಸ್ತಕ ಬೆಲೆ-350₹
ವರ್ಷದ ಆರಂಭ ಒಂದು ಅದ್ಬುತ ಪುಸ್ತಕದಿಂದ. ಶಾಲೆಯಲ್ಲಿದ್ದಾಗ ಇತಿಹಾಸ ಅಂದ್ರೆ ಘಟನೆಗಳು,ಅವುಗಳು ನಡೆದ ಕಾಲಮಾನ,ಸ್ಥಳ,ಸಂಬಂಧಿಸಿದ ವ್ಯಕ್ತಿಗಳು ಇವೆಲ್ಲವನ್ನ ಉರು ಹೊಡೆದು ನೆನಪಲ್ಲಿಟ್ಟುಕೊಳ್ಳೋದು ಮಾತ್ರ ಅಂದುಕೊಂಡಿದ್ದೆ.ಒಬ್ಬ ರಾಜನ ಸಾಧನೆಗಳನ್ನ ಉರು ಹೊಡೆದು ಅದನ್ನೇ ಎಲ್ಲಾ ರಾಜರಿಗೂ ಅಷ್ಟಿಷ್ಟು ಬದಲಾವಣೆ ಮಾಡಿ ಬರೆದು ಬಂದದ್ದೂ ಇದೆ.ಗಣಿತದಂತೆ ಚರಿತ್ರೆ ಕೂಡಾ ಆಸಕ್ತಿಯ ವಿಷಯವೇನೂ ಆಗಿರ್ಲಿಲ್ಲ. ಆದ್ರೆ ಗಣೇಶಯ್ಯನವರ ಪುಸ್ತಕಗಳನ್ನ ಓದಲು ಶುರುಮಾಡಿದ ನಂತರ, ಇತಿಹಾಸದ ಮೇಲೆ ಆಸಕ್ತಿ ಶುರುವಾಗಿದೆ.ಅವರು ಆಯ್ದುಕೊಳ್ಳೋ ಕಥಾವಸ್ತು ಅದನ್ನ ಕಾದಂಬರಿ ರೂಪಕ್ಕಿಳಿಸೋ ಪರಿ ತುಂಬಾ ಇಷ್ಟವಾಗತ್ತೆ.ಪುಸ್ತಕವನ್ನ ಕೈಗೆತ್ತಿಕೊಂಡು ಕೂರೋದಷ್ಟೇ ನಮ್ಮ ಕೆಲಸ.ಮನಸ್ಸನ್ನ ಎಳೆದು ಕೂರಿಸಿ ಅತ್ತಿತ್ತ ಅಲುಗಾಡದ ಹಾಗೆ ಬಂಧಿಸಿ ಓದಿಸಿಕೊಂಡು ಹೋಗೋ ಕೆಲಸವನ್ನ ಪುಸ್ತಕವೇ ಸಶಕ್ತವಾಗಿ ಮಾಡತ್ತೆ. ಗಣೇಶಯ್ಯನವರ ಹೊಸಾ ಕಾದಂಬರಿ'ರಕ್ತಸಿಕ್ತ ರತ್ನ'.ಬರ್ಮಾ ದೇಶದ ಕೊನೆಯ ರಾಜ 'ತೀಬಾ' ಹಾಗೂ ರಾಣಿ 'ಸುಫಾಯಲಾತ್'ರ ಜೀವನ, ಬ್ರಿಟಿಶರ ಆಕ್ರಮಣ , ಅವರು ಸೋತ ರಾಜರನ್ನ ನಡೆಸಿಕೊಂಡ ರೀತಿ,ಆ ದೇಶದ ಸಂಪತ್ತನ್ನ ಕಾಡುಗಳನ್ನ ಲೂಟಿ ಎಷ್ಟರ ಮಟ್ಟಿಗೆ ಲೂಟಿ ಮಾಡಿದ್ದು, ಪ್ರಸಿದ್ದ 'ಂಗಾ ಮಾಕ್'ರತ್ನದ ರಕ್ತಸಿಕ್ತ ಚರಿತ್ರೆ,ಬೌದ್ಧ ಭಿಕ್ಷುಗಳು,ನಾಥ ಪರಂಪರೆ,ರಾಜರ ಕಾಲದ ನಿಧಿ ಹೀಗೆ ಸಾಕಷ್ಟು ವಿಷಯಗಳನ್ನ ಹೆಣೆದು ಈ ಕಾದಂಬರಿಯನ್ನ ಬರೆದಿದ್ದಾರೆ. ಪಗೋಡಗಳು,ಬೌದ್ಧಧರ್ಮ,ತೀಬಾ ರಾಜ ಮತ್ತವನ ಪೂರ್ವಜರ ಇತಿಹಾಸ ಇವೆಲ್ಲವನ್ನ ಓದುತ್ತಾ ಹೋದಂತೆ ಲೇಖಕರು ಪುಸ್ತಕ್ಕಾಗಿ ಅದೆಷ್ಟು ಸಂಶೋಧನೆ ಮಾಡಿದ್ದಾರೆ ಅನ್ನೋದು ಅರ್ಥವಾಗತ್ತೆ. ಪುಸ್ತಕ ತುಂಬಾ ಇಷ್ಟವಾಯ್ತು.ಶುರು ಮಾಡಿದ ಮೇಲೆ ಕೆಳಗಿಡಲು ಮನಸ್ಸಾಗದಂತೆ ಓದಿಸಿಕೊಂಡು ಹೋಯ್ತು.
As usual So much information passed in disguise of the story. very interesting. Ganeshiah would make a great historian. He has the knack of explaining history interwoven to a story. He makes story also very interesting and nail baiting.
On the down side his technique is repetitive and predictable. After reading many of his books, you feel its almost same except for the historical facts hidden in it. Still his books provide a good reading
K.N. ಗಣೇಶಯ್ಯನವರ ರಕ್ತ ಸಿಕ್ತ ರತ್ನ ತುಂಬಾ ಚೆನ್ನಾಗಿ ಮೂಡಿಬಂದಿದೆ. ಮಾತಿನ ಶೈಲಿಯಲ್ಲಿ ರೋಚಕ ಐತಿಹಾಸಿಕ ತಿರುವುಗಳ ಕಥಾನಕ ಇಷ್ಟವಾಯಿತು. ಸೂಕ್ತ ಅಧ್ಯಯನದೊಂದಗೆ ಬರೆದ ಕಥೆ ಚೆನ್ನಾಗಿದೆ. ಆದರೆ ಕೆಲವು ಮುಖ್ಯ ಮಾಹಿತಿಗಳು ಮಧ್ಯದಲ್ಲಿಯೇ ಕಳೆದು ಹೋದಂತೆ ಅನ್ನಿಸಿದ್ದು ನಿಜ.
ಬರ್ಮಾದ ಕೊನೆಯ ರಾಜ ತೀಬಾನ ನಿಧಿಯನ್ನು ಹುಡುಕಿಕೊಂಡು ಹಲವು ತಂಡಗಳು ಹೊರಡುತ್ತವೆ. ಬ್ರಿಟನ್ನಿನ ಪತ್ರಕರ್ತೆ ಮೇರಿ ಹಾಗೂ ಅವಳ ಕೊಲೆಯ ಜಾಡು ಹಿಡಿದ ಭಾರತದ ಸಿ.ಬಿ.ಇ ಸಿಬ್ಬಂದಿ ಮತ್ತು ಚರಿತ್ರೆಯ ಉಪನ್ಯಾಸಕಿ ಕೊನೆಯ ತನಕ ತಲಪುತ್ತಾರೆ. ಕೆ. ಏನ್. ಗಣೇಶಯ್ಯನವರ ಪುಸ್ತಕಗಳನ್ನು ಕತೆಗಾಗಿ ಓದಬಾರದು, ಏಕೆಂದರೆ ಅವರ ಎಲ್ಲ ಕಥೆಗಳೂ ಒಂದೇ ರೀತಿಯ ಕಥಾಏಳೆ ಹೊಂದಿರುತ್ತವೆ. ಸಾಮಾನ್ಯವಾಗಿ ಹುದುಗಿ ಹೋದ ಯಾವುದೊ ಒಂದು ನಿಧಿ ಅಥವಾ ರಹಸ್ಯದ ಜಾಡು ಹಿಡಿದು ಹೋಗುತ್ತಾರೆ. ಈ ಬಾರಿ ಬರ್ಮಾ ದೇಶದ ಕೊನೆಯ ರಾಜ ತೀಬಾ ಮತ್ತು ಅವನ ರಾಣಿ ಸುಫಯಾಲಾತ್ . ಅವರು ಬ್ರಿಟಿಷರಿಂದ ಸೋತು ಗಡಿಪಾರು ಮಾಡಿದಾಗ ಬಿಟ್ಟು ಹೋದ ಅವರ ಸಂಪತ್ತಿನ ಕುರುಹು. ಬರ್ಮಾ ಅಥವಾ ಮಯನ್ಮಾರ್ ನ ಕೇವಲ ಹೆಸರು ಕೇಳಿದ್ದ ನನಗೆ ಆ ದೇಶದ ಸಂಸ್ಕೃತಿ, ಇತಿಹಾಸ, ಸಾಮಾಜಿಕ ಜೀವನದ ಪರಿಚಯವಾಯಿತು. ಭಾರತ ಮತ್ತು ಬರ್ಮಾದ ಸಂಭಂದಗಳ ಅರಿವಿಲ್ಲದಿರುವುದರಿಂದ ವಿಷಾದವೂ ಆಯಿತು. ನಾಗ ಎಂಬ ನಾಥ ಪಂಥದ ಪರಿಚಯ ರೋಚಕವಾಗಿದೆ. ಬೌದ್ಧ ಬಿಕ್ಕುಗಳು ಅವರ ಜೀವನ, ಬರ್ಮಾದ ಪ್ರವಾಸಿ ತಾಣಗಳಾದ ರಂಗೂನ್, ಬಾಗನ್, ಮಂಡಲೇ, ಮತ್ತು ಅವುಗಳ ವಿವರಣೆ ಚೆನ್ನಾಗಿದೆ. ಒಟ್ಟಾರೆ ಒಬ್ಬ ಬ್ರಿಟಿಷ್ ಪತ್ರಕರ್ತೆ ತನ್ನ ವಂಶದ ರಹಸ್ಯ ಶೋಧದಲ್ಲಿ ಹಲವಾರು ಜನರನ್ನು ತನ್ನ ಸಾವಿನೊಂದಿಗೆ involve ಮಾಡುತ್ತಾಳೆ. ಅವಳ ಕೊಲೆಯ ಜಾಡು ಹಿಡಿದ ವ್ಯಕ್ತಿಗಳಿಗೆ ನಿಧಿಯ ಸ್ಥಳ ಗೊತ್ತಾಗುವ ಹೊತ್ತಿಗೆ ಅದನ್ನು ಸ್ಥಳಂತೀರಿಸುತ್ತಾರೆ. ಕೆ. ಏನ್. ಗಣೇಶಯ್ಯ ಅವರ ಬರವಣಿಗೆಯ ಪರಿಚಯ ಇರುವವರಿಗೆ predictable and informative story line.
This entire review has been hidden because of spoilers.
ಎಂದಿನಂತೆ ಗಣೇಶಯ್ಯನವರ ರೋಚಕ ಕಥಾವಸ್ತು ಹೊಂದಿದಂತಹ ಕಾದಂಬರಿ. ಗಣೇಶಯ್ಯನವರ ಬರವಣಿಗೆಯ ವಿಶೇಷತೆ ಏನೆಂದರೆ ಅವರು ಇತಿಹಾಸದ ಹಿನ್ನೆಲೆ ಹೊಂದಿರುವಂತಹ ವಿಷಯಗಳನ್ನು ಆರಿಸಿಕೊಂಡು ಅದಕ್ಕೆ ಬೇಕಾದ ಸಂಶೋಧನೆ ಮಾಡಿ, ಅಲ್ಲಲ್ಲಿ ಅವುಗಳ ಉಲ್ಲೇಖ ಮಾಡಿತ್ತಾರೆ. ಮುಂದೆ ಯಾರೂ ಅವರು ತಪ್ಪು ಬರೆದಿದ್ದಾರೆ ಎಂದು ಬಟ್ಟು ತೋರಿಸಬಾರದು ಹಾಗಿರುತ್ತದೆ ಅವರ ಬರಹದ ಶೈಲಿ. ಬಹಳ ದಿನಗಳಿಂದ ಈ ಪುಸ್ತಕವನ್ನು ತಂದಿದ್ದೆ ಹೊರತು ಓದಲಾಗಿರಲಿಲ್ಲ ಆದರೆ ಓದಲು ಹಿಡಿದ ಎರಡೇ ದಿನಗಳಲ್ಲಿ ಈ ಪುಸ್ತಕವನ್ನು ಮುಗಿಸುವಂತಾಯಿತು. ಮುಗಿಸಿದಾಗ, ಅರೇ ಮುಗಿದೇ ಹೋಯ್ತಾ ಅಂತ ಅನಿಸಿದ್ದುಂಟು. ತಮ್ಮನ್ನು ತಾವೇ ಅತಿ ಮುಂದುವರಿದ ನಾಗರಿಕರು ಅಂತ ಅಂದುಕೊಂಡಿರುವ ಬ್ರಿಟಿಷರ ಕರಾಳ ಮುಖವನ್ನು ಈ ಪುಸ್ತಕದಲ್ಲಿ ಲೇಖಕರು ಅನಾವರಣ ಮಾಡಿದ್ದಾರೆ. ಒಂದು ಕಾಲದಲ್ಲಿ ವೈಭವ ರಾಜ್ಯಭಾರ ನಡೆಸುತ್ತಿದ್ದ ಬರ್ಮಾ ದೇಶವನ್ನು ಸರ್ವನಾಶ ಮಾಡಿದ ದಾರುಣ ಕಥೆ ಈ ಕಾದಂಬರಿ. ರಾಜ್ಯವಂಶದ ಕೊನೆಯ ರಾಜ ತಿಬಾವ್ ಅವನತಿಯ ಬಗ್ಗೆ ಇಲ್ಲಿ ಬರೆಯಲಾಗಿದೆ. ಬ್ರಿಟಿಷರಿಗೆ ತಿಬಾ ಮಣಿದ ನಂತರ ಅವನು ಬಿಟ್ಟು ಹೋದ ನಿಧಿಯ ಹುಡುಕಾಟ ಮನರಂಜನೆ ನೀಡುತ್ತದೆ. ಅದರಲ್ಲಿ ರೋಚಕತೆಯನ್ನು ಲೇಖಕರು ತುಂಬಾ ಚೆನ್ನಾಗಿ ನಿಯಂತ್ರಿಸಿದ್ದಾರೆ
Story woven with Wikipedia articles and developed with few twists and turns. Not a great read, no proper conclusion and ending as such. This is more of a travel log of an author with story tied with some turns.