ಕುವೆಂಪು ಅವರ ಹಲವು ಭಾಷಣಗಳು ಮತ್ತು ಲೇಖನಗಳನ್ನು ಒಟ್ಟುಮಾಡಿ ಈ ಕೃತಿಯನ್ನು ಹೊರತಲಾಗಿದೆ. ಮೂಢನಂಬಿಕೆ, ಮಡಿವಂತಿಕೆ, ಪ್ರಶ್ನಿಸದೆಯೇ ಒಪ್ಪಿನಡೆಯುವುದು, ಇವುಗಳನ್ನು ಖಂಡಿಸುವ ವಿಚಾರಗಳು ಈ ಪುಸ್ತಕದಲ್ಲಿವೆ
Kuppali Venkatappa Puttappa widely known by the pen name Kuvempu was a Kannada writer and poet, widely regarded as the greatest poet of 20th century Kannada literature. He is immortalised by some of his phrases, and in particular for his contribution to Universal Humanism or in his own words Vishwa maanavataa Vaada. He has penned the Karnataka State anthem Jaya Bharata Jananiya Tanujate.
He has written several Poems, stories and plays. His work Sri Ramayana Darshanam, the rewriting of the great ancient Indian epic Ramayana in modern Kannada, is regarded as revival of the era of Mahakavya (Epic poetry) in a contemporary form and charm.
He has received several awards for his works in the field of literature such as, Jnanpith Award, Sahitya Akademi Award , Pampa Award , Karnataka Ratna. He has also received The Padma Bhushan, the third highest civilian award in the Republic of India and Padma Vibhushan, the second highest civilian award in the Republic of India. He is the second among Kannada poets to be revered as Rashtrakavi
His son K P Poornachandra Tejaswi was a famous writer as well.
ಕುವೆಂಪು ಅವರ ಹಲವು ಭಾಷಣಗಳ ಸಂಗ್ರಹ..ಬಿಡಿ ಬಿಡಿ ಹೂವಿನಂತೆ ಅಂದು ಕೊಂಡರೆ ಇದು ಬಿಡಿ ಹೂವುಗಳನ್ನು ಕೂಡಿಸಿ ಕಟ್ಟಿದ ಮಲ್ಲಿಗೆಯ ದಂಡೆಯಂತೆ !! ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ ನಿಜ ಆದರೆ ಇದು ಶಾಂತಿಯುತ ಕ್ರಾಂತಿ. ಕ್ರಾಂತಿ ಆಗಬೇಕಾದ್ದು ಒಬ್ಬರ ಮೆದುಳಿನಲ್ಲಿ...ಆಲೋಚನೆಯಲ್ಲಿ.
ಇದನ್ನು ಓದಿದ ಮೇಲೆ ಮರೆಯದೆ ಪೂರ್ಣಚಂದ್ರ ತೇಜಸ್ವಿಯವರ ಹೊಸವಿಚಾರಗಳು ಪುಸ್ತಕವನ್ನು ಓದಿ.
“ಕುವೆಂಪುರವರ ವಿಚಾರ ದೃಷ್ಟಿ ಅನನ್ಯ ಅನಿಕೇತನವೇ ಆಗಿದೆ ಈ ಪುಟ್ಟ ಕೃತಿಯಲ್ಲಿ. ತಮ್ಮ ಜೀವಿತಾವಧಿಯಲ್ಲಿ ರಚಿಸಿದ ಹಲವು ಕಾವ್ಯ, ಕೃತಿಗಳನ್ನು ಓದದೇ ಇದ್ದರೂ ಪರವಾಗಿಲ್ಲ, ನನ್ನ ಕೆಲವು ವಿಚಾರ ಕೃತಿಗಳನ್ನು ಓದುಗರು-ಪ್ರತಿಯೊಬ್ಬರೂ ಓದಬೇಕು ಎಂದು ಹೇಳುತ್ತಾರೆ. ವ್ಯಕ್ತಿ ಓದುತ್ತಾ ವಿಚಾರವಂತನಾದರೆ ಸೀಮಿತ ಪಂಥಗಳೊಳಗೆ(ಎಡ-ಬಲ) ಎಳೆದು ಗುರುತಿಸುತ್ತಾರೆ ಮತ್ತು ಇಂತೆಯೇ ಇಲ್ಲೂ ಆಗಿದೆ ಎನ್ನಬಹುದು. ಕುವೆಂಪುರವರ “ವಿಚಾರ ಕ್ರಾಂತಿಗೆ ಆಹ್ವಾನ” ಕೃತಿ ನಮ್ಮ ಚಿಂತನೆ, ನಂಬಿಕೆ ಮತ್ತು ಬದುಕಿನ ಮಾರ್ಗವನ್ನು ಬದಲಾಯಿಸಲು ಶಕ್ತಿಯುತವಾದ ಕಾವ್ಯದಂತೆ ಕಾರ್ಯನಿರ್ವಹಿಸುತ್ತದೆ. ಸಮಾಜದಲ್ಲಿ ನೆಲಸಿರುವ ಮೂಢನಂಬಿಕೆ, ಜಾತಿ-ಪಾತದ ಬಿಕ್ಕಟ್ಟು, ಧರ್ಮಾಂಧತೆಗಳ ವಿರುದ್ಧವಾಗಿ ಕುವೆಂಪು ಅವರ ತೀಕ್ಷ್ಣವಾದ ವಾಗ್ಮಿ ಶೈಲಿ ಬೆಳಕು ಚೆಲ್ಲುತ್ತದೆ.
ಈ ಕೃತಿಯ ಮೂಲಕ ಲೇಖಕರು ಜನತೆಗೆ ಪ್ರಶ್ನಿಸಲು, ಯೋಚಿಸಲು, ಹಾಗೂ ಬದಲಾವಣೆಯ ದಾರಿಯನ್ನು ತೋರಲು ಆಹ್ವಾನಿಸುತ್ತಾರೆ. “ಮಾನವನ ಬೆಳವಣಿಗೆಗೆ ವಿಚಾರವೇ ಶಕ್ತಿಯ ಮೂಲ” ಎಂಬ ಸಂದೇಶವನ್ನು ತುಂಬಾ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ.
ಈ ಕೃತಿ ಓದುಗರಿಗೆ ಕೇವಲ ವಾದವಿವಾದವಲ್ಲ, ಬದಲಾವಣೆಯ ವಿಚಾರವಂತಿಕೆ ಶಕ್ತಿ ತುಂಬುವಂತಹ ಪ್ರೇರಣೆ. ಮನುಷ್ಯ ವಿದ್ಯಾವಂತನಾದರೆ ಸಾಲದು ವಿಚಾರವಂತನಾಗಬೇಕು. ನಿಜವಾದ ಸ್ವಾತಂತ್ರ್ಯವು ಆಲೋಚನೆ ಸ್ವಾತಂತ್ರ್ಯದಲ್ಲಿದೆ ಎನ್ನುವ ಅರಿವು ಬರಬೇಕಾದರೆ ಇದನ್ನು ಓದಲೇಬೇಕು.
ಒಮ್ಮೆ ಓದಿದ ಮೇಲೆ ನಿಮ್ಮ ಒಳಗಿನ ಚಿಂತನೆಗೆ ಬೆಂಕಿ ಹಚ್ಚುವ ಶಕ್ತಿಯುಳ್ಳ ಕೃತಿ ಇದು. “ಇದು ಕೇವಲ ಪುಸ್ತಕವಲ್ಲ, ಬದಲಾವಣೆಗೆ ಕರೆ ನೀಡುವ ಘೋಷಣೆಯಂತಿದೆ. ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು, ರಾಮಾಯಣಂ ದರ್ಶನಂ ಕುವೆಂಪು ಇವರೇನಾ ಎನಿಸುವುದುಂಟು.
ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ, ಬಡತನವ ಬುಡಮಟ್ಟಿ ಕೀಳಬನ್ನಿ. ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ; ಮತಿಯಿಂದ ದುಡಿಯಿರೈ ಲೋಕಹಿತಕೆ. ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು ಸೇರಿರೈ ಮನುಜಮತಕೆ: ಓ, ಬನ್ನಿ, ಸಹೋದರರೆ ವಿಶ್ವಪಥಕೆ.!