What do you think?

ಕನ್ನಡ ಅತಿ ಸಣ್ಣ ಕತೆಗಳು
165 pages, Unknown Binding
Published January 1, 2013
About the author
S. Diwakar
29 books3 followersಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು. ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು.
ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ (ಪ್ರಬಂಧಗಳು), ಪ್ರಪಂಚ ಪುಸ್ತಕ (ವಿಮರ್ಶಾ ಲೇಖನಗಳು), ಪಂಡಿತ ಭೀಮಸೇನ ಜೋಶಿ (ವ್ಯಕ್ತಿಚಿತ್ರ), ಕಥಾಜಗತ್ತು, ಜಗತ್ತಿನ ಅತಿಸಣ್ಣ ಕತೆಗಳು, ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು, ಹಾರಿಕೊಂಡು ಹೋದವನು (ಅನುವಾದಿತ ಕಥೆಗಳು), ವೆನಿಸ್ಸಿನಲ್ಲಿ ಸಾವು, ಹಳ್ಳಿ, ಪೋಸ್ಟ್ ಮ್ಯಾನ್ (ಅನುವಾದಿತ ಕಾದಂಬರಿಗಳು), ಮಾಸ್ಟರ್ ಬಿಲ್ಡರ್ (ಅನುವಾದಿತ ನಾಟಕ), ಶತಮಾನದ ಸಣ್ಣಕತೆಗಳು, ಸಣ್ಣಕತೆ 1983, ಕನ್ನಡ ಅತಿ ಸಣ್ಣಕತೆಗಳು, ನಾದದ ನವನೀತ, ಬೆಸ್ಟ್ ಆಫ್ ಕೇಫ (ಸಂಪಾದಿತ ಕೃತಿಗಳು).

Ratings & Reviews
Friends & Following
Create a free account to discover what your friends think of this book!
Community Reviews
Displaying 1 - 2 of 2 reviews
September 3, 2021
||•ಕನ್ನಡದ ಅತಿ ಸಣ್ಣ ಕತೆಗಳು•||
ಸಂಪಾದಕರು ಎಸ್ ದಿವಾಕರ್
ಪುಸ್ತಕದ ಮುಖಪುಟ ಹೇಳುವ ಹಾಗೆ ಕನ್ನಡದ ಅತಿಸಣ್ಣ ಕತೆಗಳು ೫೭ ಕಥೆಗಳು ಮತ್ತು ಲೇಖಕರು .
ಒಂದು ಬಗೆಯಲ್ಲಿ ಹೇಳುವುದಾದರೆ ಕನ್ನಡದ ಶ್ರೇಷ್ಠ ಲೇಖಕರು ಅವರ ಕಥೆಗಳು ಸೆರೆಹಿಡಿದ ಸಂಪಾದಕರು ಎಸ್ ದಿವಾಕರ್ ಅವರಿಗೆ ಧನ್ಯವಾದಗಳು ಸರ್ .
ಮೊದಲನೇದಾಗಿ ಕಾಡುವ ಪ್ರಶ್ನೆ ಎಂದರೆ ಸಣ್ಣ ಕಥೆಗಳು ಅಂದರೆ ಒಂದು ಪುಟದ ಅಥವಾ ನಾಲ್ಕು ಸಾಲಿನ ಕಥೆ ! ಸಣ್ಣಕಥೆ ,ಒಂದು ಲಘು ಕಥೆ ,ಚುಟುಕು ಕತೆ , ಕತೆಗೆ ಮೂಲವಾದ ಪಾತ್ರ ಊರು ನಿರ್ದಿಷ್ಟ ಸಮಯ ಕಾಲ ಇರುವ ಯಾವುದೂ ಕೂಡ ಅನುಗುಣವಾಗುವ ದಿಲ್ಲ .ಅತಿ ಸಣ್ಣ ಕಥೆಗಳು ಕಲಾವತಿ ತೀರ ಸಂಕುಚಿತ ಗೊಂಡಿರುತ್ತದೆ ಕೆಲವೇ ಗಂಟೆಗಳಲ್ಲಿ ಅಥವಾ ಕೆಲವೇ ನಿಮಿಷದಲ್ಲಿ ಒಂದು ಜೀವ ಅನಾವರಣಗೊಳ್ಳುತ್ತದೆ .ಹೆಚ್ಚಿನ ಅಂಶಗಳಲ್ಲಿ ಲೇಖಕರು ಘಟನೆಗಳು ಮತ್ತು ಸಂದರ್ಭಗಳನ್ನು ಓದುಗರೆ ಉಳಿಸಿಕೊಳ್ಳಬೇಕು ಅಷ್ಟೇ .
ಸಂಜೆ ಸಮಯ ಚಾ ಜೊತೆಗೆ ಕನ್ನಡದ ಅತಿಸಣ್ಣ ಕತೆಗಳು ದಿನಕ್ಕೊಂದು ಕಥೆ ಓದಬಹುದು . ಈ ಪುಸ್ತಕವನ್ನು ಓದಿದರೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ
ಹರಿಣಿ

July 28, 2021
ಕನ್ನಡ ಅತಿ ಸಣ್ಣ ಕತೆಗಳು - ಸಂಪಾದಕರು ಎಸ್ ದಿವಾಕರ್.
ಯಾವುದೇ ಸಂಗ್ರಹ ಕಾರ್ಯ ಇರಬಹುದು ಅಚ್ಚುಕಟ್ಟಾಗಿ ಎಲ್ಲರ ಪ್ರಾತಿನಿಧಿಕ ಕತೆಗಳ ಒಟ್ಟು ಮಾಡುವಲ್ಲಿ ಮತ್ತು ಅದಕ್ಕೊಂದು ಪ್ರವೇಶ ಬರೆಯುವಲ್ಲಿ ದಿವಾಕರ್ ಸರ್ ಮತ್ತು ಜನಾರ್ದನ ಭಟ್ಟರು ಕನ್ನಡದಲ್ಲಿ ಅಭಿನಂದನಾರ್ಹರು.
ಅವರ ಸಾಹಿತ್ಯದ ಕೊಡುಗೆ ಬಿಟ್ಟು ಬರೀ ಈ ಸಂಪಾದನಾ ಕಾರ್ಯವೇ ಒಂದು ಸಮಿತಿ ಮಾಡುವಷ್ಟು ದೊಡ್ಡ ಕೆಲಸ.
ಇಲ್ಲಿನ ಕತೆಗಳೂ ಹಾಗೆಯೇ.
ಏಳು ಪುಟದ ದೊಡ್ಡ ಕತೆಯ ಯಾಕೆ ಸೇರಿಸಿದೆ ಅಂತ ಅವರು ಕೊಡುವ ವಿವರಣೆ ಸಮರ್ಥನೀಯ. ಹೀಗೇ ಪುಟ್ಟ ಕತೆಯೊಂದು ಯಾಕೆ ತಮಾಷೆಯಾಗದೆ ಅಥವಾ ಜೋಕ್ ಆಗದೆ ಕತೆಯಾಗುತ್ತದೆ ಎಂಬುದಕ್ಕೂ.
ಎಲ್ಲ ಓದಲು ಆಗದವರು ದಿವಾಕರ್ ಸರ್ ಮತ್ತು ಜನಾರ್ದನ ಭಟ್ಟರ ಸಂಪಾದಿತ ಶತಮಾನದ ಕತೆಗಳು, ಕನ್ನಡ ಸಣ್ಣ ಕತೆಗಳು ಮತ್ತು ದಕ್ಷಿಣ ಕನ್ನಡದ ಶತಮಾನದ ಕತೆಗಳು ಈ ಸಂಗ್ರಹ ಓದಿದರೆ ಸಾಕು.
ಪೂರಕವಾಗಿ ' ಹೊನ್ನ ಕಣಜ, ಜಿ.ಎಚ್.ನಾಯಕ ಸಂಪಾದಿತ ಕತೆಗಳು ಇವಿಷ್ಟು ಧಾರಾಳ ಸಾಕು.