ದೇವುಡು(೧೮೮೬ ಡಿಸೆಂಬರ್ ೨೯ - ೧೯೬೨ ಅಕ್ಟೋಬರ್ ೨೭) ಎಂದೇ ಖ್ಯಾತರಾದ ದೇವುಡು ನರಸಿಂಹಶಾಸ್ತ್ರಿಯವರು ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲೊಬ್ಬರು. ಅವರು ಅನೇಕ ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಕಾದಂಬರಿಗಳನ್ನು ಬರೆದಿದ್ದಾರೆ. ಅವರ "ಮಹಾಕ್ಷತ್ರಿಯ" ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
“ದೇವತೆಗಳು ಯಾವಾಗಲೂ ವಿಷಮೃಶ್ರಿತವಾದ ಮೃಷ್ಟಾನ್ನವನ್ನೇ ವರವಾಗಿ ಕೊಡುವರು. ನಾವು ಮೃಷ್ಟಾನವನ್ನು ಕಾಣುವವೆ ಹೊರತು ವಿಷವನ್ನಲ್ಲ.”
ಒಂದು ಅನರ್ಥದಿಂದ ಶುರು ಆಗುವ ಕಥೆ. ದೇವಲೋಕವನ್ನು ಮೂವರು ಇಂದ್ರರು ಆಳಿದರು. ಶಾಶ್ವತ ಇಂದ್ರನಾದ ದೇವೇಂದ್ರ, ವೃತ್ರಾಸುರ (ದಾನವ) ಮತ್ತು ಮಧ್ಯಮಲೋಕ ಅಂದರೆ ಭೂಲೋಕದ ಅದಿಪತಿಯಾಗಿದ್ದ ನಹುಷ ಚಕ್ರವರ್ತಿ. ಇಂದ್ರನು ವೃತ್ರಾಸುರನ ಸಂಹರಿಸಿದ ಮೇಲೆ ಶುರುವಾಗುವ ಹತ್ಯಾಭೀತಿಂದ ತಲೆಮರೆಸಿಕೊಂಡಾಗಿಂದ ಎಳೆ ಎಳೆಯಾಗಿ ಕಥೆ ಪೀಡಿಸಿಕೊಳ್ಳುತ್ತದೆ. ದೇವತೆಗಳು, ದಾನವರು, ಸಪ್ತರ್ಷಿಗಳು ಒಬ್ಬರಾ ಇಬ್ಬರಾ ಮೂರುಲೋಕದಲ್ಲೂ ನಡೆಯುವ ವೃತಾಂತವನ್ನು ದೇವುಡು ಅವರು ಒಂದು ಮಾಯಲೋಕವನ್ನೇ ಶೃಷ್ಟಿಸಿದ್ದಾರೆ. ಇವರ ಒಂದು “ಮಹ” ಪುಸ್ತಕ ಓದಿದ್ದುಆಯಿತು ಮಿಕ್ಕಿದನ್ನು ಓದುವ ಆಸೆ ಬೇಗ ಈಡೇರಲಿ.
ದೇವುಡು ಅವರ ಮೂರು 'ಮಹಾ' ಕಾದಂಬರಿಗಳಲ್ಲಿ ಒಂದಾದ ಮಹಾಕ್ಷತ್ರಿಯ ಅದ್ಭುತ ಕಾದಂಬರಿ. ಪುಸ್ತಕವು ದೇವಲೋಕದಲ್ಲಿ ಇಂದ್ರನ ಕಥಾನಕವನ್ನು ಹೊಂದಿದೆ. ಅವನು ದೇವಲೋಕದ ಅಧಿಪತ್ಯವನ್ನು ಕಳೆದುಕೊಳ್ಳುವ ಪ್ರಸಂಗಗಳು ಮೂಡಿ ಬಂದಿವೆ. ಆದ್ದರಿಂದ ಅವನು ಹೊರಗೆ ಬಂದಿದ್ದು ಮತ್ತೆ ದೇವೇಂದ್ರನಾಗಿದ್ದು ಚೆನ್ನಾಗಿ ಬರೆಯಲಾಗಿದೆ. ವೃತ್ರನ ಸಾವಿನ ತರುವಾಯ ಇಂದ್ರನು ಹತ್ಯೆಯಿಂದ ಅಶಕ್ತನಾಗಿ ಕಾಣೆಯಾದಾಗ ನಹುಷನನ್ನು ದೇವಲೋಕದ ಅಧಿಪತಿಯನ್ನಾಗಿ ಮಾಡುತ್ತಾರೆ. ಆಗ ನಹುಷ ತನ್ನ ಈ ಪದವಿ ಕ್ಷಣಿಕ ಎಂದು ತಿಳಿದು ಮತ್ತೆ ಇಂದ್ರನನ್ನು ಕರೆತರುತ್ತಾನೆ. ಅವನನ್ನು ಕರೆತರುವ ಆ ದೃಶ್ಯ ಬಹಳ ಚೆನ್ನಾಗಿ ಮೂಡಿ ಬಂದಿದೆ. ದೇವುಡು ನರಸಿಂಹಶಾಸ್ತ್ರಿಗಳು ಪುರಾಣಗಳಲ್ಲಿ ಪಾಂಡಿತ್ಯ ಹೊಂದಿದವರು, ಅದಕ್ಕಾಗಿ ಇಂತಹ ಕಾದಂಬರಿಗಳನ್ನು ಸರಾಗವಾಗಿ ಬರೆಯಬಲ್ಲರು.
ಈ ಕಾದಂಬರಿಯಲ್ಲಿ ನಹುಷನು ಮಹಾಕ್ಷತ್ರಿಯನೆನಿಸಿಕೊಂಡಿದ್ದಾನೆ. ಮಾನವಲೋಕದ ಹಿರಿಮೆಯನ್ನು ದೇವಲೋಕದಲ್ಲಿ ಸ್ಥಾಪಿಸಿದ ಮಹಾನುಭಾವ, ಈ ಮಾನವೇಂದ್ರನ ಮುಂದೆ ದೇವೇಂದ್ರ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಕಾಣುತ್ತಾನೆ. ದೇವಲೋಕವನ್ನು ಮೂವರು ಇಂದ್ರರು ಆಳಿದರು. ಅವರಲ್ಲಿ ನಿತ್ಯನಾದ ಮಹೇಂದ್ರ, ನಂತರ ಸ್ವಲ್ಪಕಾಲ ವೃತ್ರ, ನಂತರ ಮಧ್ಯಮ ಲೋಕದ ಚಕ್ರವರ್ತಿಯಾದ ನಹುಷ ಮೂರನೇ ಇಂದ್ರ. ಇವರಲ್ಲಿ ಯಾರು ಹೇಗೆ ಆಳಿದರು? ಅವರು ನಮ್ಮ ದೃಷ್ಟಿಯಲ್ಲಿ ಎಂತಹವರು ಎಂಬುದನ್ನು ದೇವುಡು ರವರು ಈ ಕೃತಿಯಲ್ಲಿ ಅತ್ಯದ್ಭುತವಾಗಿ ಚಿತ್ರಿಸಿದ್ದಾರೆ.
ಇಂದ್ರ-೧: (ದೇವೇಂದ್ರ) ಒಮ್ಮೆ ಮಹರ್ಷಿಗಳ *ದೇಹವು ನಾನಲ್ಲ ಎಂದು ತಿಳಿದಿದ್ದರೂ, ದೇಹಗತವಾಗಿರುವ ಮನೋಬುದ್ಧಿಗಳನ್ನು ಪ್ರತ್ಯೇಕಿಸುವುದೆಂತು* ಪ್ರಶ್ನೆಗೆ ದೇವೇಂದ್ರನು ಉತ್ತರ ಕೊಡುವಲ್ಲಿ ಚಿಂತಾಕ್ರಾಂತನಾದನು. ಅದೇ ವೇಳೆಗೆ ದೇವಗುರು ಬೃಹಸ್ಪತಿ ಬಂದಾಗ ಪ್ರಶ್ನೆಗೆ ಉತ್ತರ ಹುಡುಕುವಲ್ಲಿ ದೇವಗುರುವನ್ನು ಲೆಕ್ಕಿಸದಿದ್ದಾಗ ಅವರು ಅಂತರ್ಧಾನ ಹೊಂದುತ್ತಾರೆ, ಅತ್ತ ಮಹರ್ಷಿಗಳಿಗೆ ಉತ್ತರಕೊಡಲು ಹೋಗಿ ದೇವಗುರುಗಳನ್ನು ನಿರಾಕರಿಸಿದ ತಪ್ಪು ಅರಿವಾಗಿ ಅವರನ್ನು ಹುಡುಕಲು ಪ್ರಯತ್ನಿಸುತ್ತಾನೆ. ಇಷ್ಟಕ್ಕೂ ಈ ದೇವಗುರುವಿನ ಪಾತ್ರವಾದರೂ ಏನು? ಧರ್ಮಾಚಾರ್ಯನಿಲ್ಲದೆ ತ್ರಿಲೋಕಾಧಿಪತ್ಯವನ್ನು ಕಾಪಾಡಿಕೊಳ್ಳುವುದು ಕಷ್ಟ ನಿಯತಕಾಲಿಕವಾದ ಕರ್ಮಗಳನ್ನು ಕಾಲವರಿತು ಮಾಡಿಸುವವನೇ ದೇವಗುರು. ರಕ್ಕಸರನ್ನು ತುಳಿದಿರಿಸಿ ದೇವತೆಗಳಿಗೆ ಅಜರಾಮತ್ವವನ್ನು ಕೊಟ್ಟರೇನೆ ಸುಖ, ಈ ಒಂದು ಸ್ಥಿತಿಯ ಪರಿಪಾಲನೆಗೆ ಧರ್ಮಾಚಾರ್ಯನ ಅವಶ್ಯಕತೆ ಅತಿ ಮುಖ್ಯವಾದದ್ದು, ಬೃಹಸ್ಪತಿಗಳು ಹೊರಟುಹೋದಾಗ ಅವರನ್ನು ಎಲ್ಲೂ ಕಾಣದೆ ಇರುವ ಸಂಧರ್ಭದಲ್ಲಿ ಬೇರೊಬ್ಬ ಧರ್ಮಾಚಾರ್ಯನನ್ನು ಹುಡುಕುವ ಕೆಲಸ ದೇವೇಂದ್ರನು ನಡೆಸುತ್ತಾನೆ.
ಇಂದ್ರ-೨:(ವೃತ್ರಾಸುರ) ಬೃಹಸ್ಪತಿ ಕುಪಿತನಾಗಿ ಅಂತರ್ಧಾನ ಹೊಂದಿದು ಬ್ರಹ್ಮನಿಗೆ ತಿಳಿದಿತ್ತು, ಅದೇ ಸಮಯದಲ್ಲಿ ಬ್ರಹ್ಮನ ಬಳಿಗೆ ದೇವೇಂದ್ರನು ಬಂದು ಬೇರೊಬ್ಬ ಧರ್ಮಾಚಾರ್ಯನನ್ನು ಗೊತ್ತು ಮಾಡಿಕೊಡಲು ಕೇಳಿಕೊಂಡಾಗ ತ್ವಷ್ಟೃಬ್ರಹ್ಮನ ಮಗನಾಗ ವಿಶ್ವರೂಪಾಚಾರ್ಯನೇ ಆ ಕೆಲಸಕ್ಕೆ ಯೋಗ್ಯನೆಂದು ಬ್ರಹ್ಮನು ಸೂಚಿಸಿದನು, ಆದರೆ ಆತನಿಗೆ ಸುರಾಪಾನ ಅಭ್ಯಾಸವಿತ್ತು, ಅದನ್ನು ತನ್ನ ತಾಯಿಯಿಂದ ಪಡೆದಿದ್ದನು ಆಕೆ ರಾಕ್ಷಸ ಕುಲದವಳು. ಅಂತೂ ವಿಶ್ವರೂಪಾಚಾರ್ಯನು ದೇವಗುರು ಪೀಠವನ್ನೇರುತ್ತಾನೆ, ಇದರಿಂದ ರಾಕ್ಷಸರಿಗೆ ಒಳಿತೇ ಆಗುತ್ತದೆ. ವಿಶ್ವರೂಪನಿಗೆ ದೇವತೆಗಳಿಗೂ ಹಾಗು ಅಸುರರಿಗೂ ಒಳಿತು ಮಾಡಬೇಕೆನ್ನುವ ಆಸೆಯಾಗುತ್ತದೆ. ಆದರೆ ದೇವೇಂದ್ರನು ಗೂಢಾಚಾರರಿಂದ ವಿಶ್ವರೂಪಾಚಾರ್ಯನ ಚಟುವಟಿಕೆಗಳನ್ನೆಲ್ಲಾ ಪರೀಶೀಲಿಸುತ್ತಾನೆ, ಸುರಾಪಾನ ಬದಲು ಸೋಮಪಾನ ಮಾಡಬೇಕೆಂದು ಸಲಹೆ ಇತ್ತನು, ಇದರಿಂದ ವಿಶ್ವರೂಪನಿಗೆ ಕೋಪ ಬರುತ್ತದೆ, ಅದೇ ಸಮಯದಲ್ಲಿ ಬೃಹಸ್ಪತಿಗಳಿಗೂ ಇಂದ್ರನ ವಿಷಯದಲ್ಲಿ ತಾವು ನಡೆದುಕೊಂಡ ರೀತಿಯಿಂದ ಬೇಸರವಾಗುತ್ತದೆ, ಬೃಹಸ್ಪತಿಯ ಆಗಮನದಿಂದ ಇಂದ್ರನಿಗೆ ವಿಶ್ವರೂಪನು ಬೇಡವಾಗಿದ್ದಿತು, ಅದೇ ಸಮಯದಲ್ಲಿ ಇಂದ್ರನು ವಿಶ್ವರೂಪನ ವಧೆ ಮಾಡಿ ಬ್ರಹ್ಮಹತ್ಯೆ ಪಾಪವನ್ನು ಪಡೆದುಕೊಳ್ಳುತ್ತಾನೆ, ವಿಶ್ವರೂಪನ ವಧೆಯಿಂದ ಕುಪಿತನಾದ ತ್ವಷ್ಟೃಬ್ರಹ್ಮನು ವೃತ್ರನನ್ನು ಸೃಷ್ಟಿಸಿ ಇಂದ್ರನ ಮೇಲೆ ಬಿಟ್ಟಾಗ, ವೃತ್ರನನ್ನು ಎದುರಿಸಲಾಗದೇ ದೇವೇಂದ್ರನು ಇಂದ್ರ ಪದವಿ ಬಿಟ್ಟುಕೊಡುತ್ತಾನೆ, ವೃತ್ರನನ್ನು ಸಂಹಾರ ಮಾಡಲು ಇಂದ್ರನು ಕಾಯುತ್ತಿದ್ದಾಗ ದೇವತೆಗಳ ಆದೇಶದಂತೆ ದಧೀಚಿಯ ಬೆನ್ನು ಮೂಳೆಯಿಂದ ವಜ್ರಾಯುಧವನ್ನು ತಯಾರಿಸಿ ವೃತ್ರನು ಪಾನಮತ್ತನಾಗಿರುವ ಸಮಯದಲ್ಲಿ ಆತನನ್ನು ವಜ್ರಾಯುಧದಿಂದ ವಧೆ ಮಾಡುತ್ತಾನೆ. ಆದರೆ ಹತ್ಯೆ ಇಂದ್ರನ ಬೆನ್ನು ಹತ್ತಿದಾಗ ದೇವೇಂದ್ರನು ಕಣ್ಮರೆಯಾಗುತ್ತಾನೆ, ಇಂದ್ರ ಪದವಿಯನ್ನು ಶೂನ್ಯವಾಗಿ ಉಳಿಯಲು ಬಿಡದೇ ದೇವತೆಗಳ ಕೋರಿಕೆಯಂತೆ ನಹುಷ ಚಕ್ರವರ್ತಿ ಇಂದ್ರ ಪದವಿಯನ್ನು ವಹಿಸಿಕೊಳ್ಳುತ್ತಾನೆ.
ಇಂದ್ರ-೩ (ನಹುಷ ಚಕ್ರವರ್ತಿ): ಮನುಷ್ಯರು ದೇವತೆಗಳ ಮೇಲೆ ಅಧಿಕಾರವನ್ನು ಚಲಾಯಿಸುವುದೇ ಎಂಬುದು ನಹುಷನು ಚಿಂತೆ, ಅಂತೂ ದೇವತೆಗಳ ಕೋರಿಕೆಯಂತೆ ಇಂದ್ರಪದವಿ ಏರುತ್ತಾನೆ. ಅವರಿಂದ ೨ ವರವನ್ನೂ ಪಡೆದಿರುತ್ತಾನೆ: ತನ್ನ ಪತ್ನಿ ವಿರಜಾದೇವಿ ಇಂದ್ರಲೋಕದಲ್ಲೂ ತನ್ನ ಪತ್ನಿಯಾಗಿರಬೇಕು ಹಾಗು ಅರಮನೆಯಲ್ಲಿ ನಡೆಯುವ ಎಲ್ಲಾ ಧರ್ಮಗಳೂ ತಾನಿರುವಲ್ಲಿ ನಡೆಯಬೇಕು, ತಾನು ಕೇಳುವ ಯಾವುದೇ ರಹಸ್ಯವನ್ನು ತನಗೆ ತಿಳಿಸಬೇಕು. ಈತನ ಅಧಿಕಾರದಿಂದ ಈತನ ಮುಂದೆ ದೇವೇಂದ್ರ ಒಬ್ಬ ಸಾಮಾನ್ಯನಾಗಿ ಕಾಣುತ್ತಾನೆ, ದೇವಲೋಕದಲ್ಲಿ ದೊರೆತ ಅವಕಾಶವನ್ನು ತನ್ನ ಕುಲದ ಶ್ರೇಷ್ಠತೆಯನ್ನು ಹೆಚ್ಚಿಸಿಕೊಳ್ಳಲು ಉಪಯೋಗಿಸಿಕೊಳ್ಳುತ್ತಾನೆ, ಇಂದ್ರನಿಂದ,ಯಮನಿಂದ, ಬೃಹಸ್ಪತಿಗಳಿಂದ, ಸಪ್ತರ್ಷಿಗಳಿಂದ ತನಗೆ ಬೇಕಾದುದನ್ನೆಲ್ಲಾ ಸಂಗ್ರಹಿಸಿ ತನ್ನ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾನೆ. ಆಡಳಿತ ನಡೆಸುತ್ತಾ ದೇವಲೋಕದಲ್ಲಿ ಮಾನವಧರ್ಮವನ್ನು ಬಿಡದೆ ಆಸಕ್ತಿಯಿಂದ ತನ್ನ ಕಾರ್ಯವನ್ನು ನೆರವೇರಿಸುತ್ತಾನೆ. ನಹುಷನ ಆಡಳಿತದಿಂದ ದೇವತೆಗಳಿಗೆ ಒಂದು ಕಡೆ ಅಸೂಯೆಯೂ ಆಗುತ್ತದೆ, ದೇವತೆಗಳ ವರ್ತನೆಯಿಂದ ಸಮಯಬಂದಾಗ ಉಪಯೋಗಿಸಿಕೊಂಡು ಬೇಡವಾದಾಗ ತಳ್ಳಿಬಿಡುವ ಅವರ ಬುದ್ಧಿಯನ್ನು ಕಂಡುಕೊಳ್ಳುತ್ತಾನೆ, ಅವರ ಒಳಸಂಚಿಗೆ ತಾನು ಒಳಗಾಗದೇ ಆಡಳಿತವನ್ನು ನಿಷ್ಠೆಯಿಂದ ನೆರವೇರಿಸುತ್ತಿರುತ್ತಾನೆ. ಆತನ ಆಡಳಿತಾ ಸಾಮರ್ಥ್ಯವನ್ನು ಹಾಗು ವಿವೇಚನಾಶಕ್ತಿಯನ್ನು ಕಂಡು ಭಲೇ ನಹುಷ, ಅಧಿಕಾರವಿರುವುದು ದೊಡ್ಡದಲ್ಲ, ಅದನ್ನು ಸರಿಯಾಗಿ ಉಪಯೋಗಿಸಿ ನೆರವೇರಿಸುವ ಸಾಮರ್ಥ್ಯವಿದೆಯೆಂದು ದೇವತೆಗಳಿಂದಲೇ ಹೊಗಳಿಸಿಕೊಳ್ಳುತ್ತಾನೆ.
ತನ್ನ ಇಂದ್ರಪದವಿ ಶಾಶ್ವತವಲ್ಲ ಎಂದು ತಿಳಿದ ನಹುಷನು ಶಚಿಪತಿಯಾಗುವವರೆಗೂ ಇಂದ್ರತ್ವ ಪೂರ್ಣವಾಗುವುದಿವ್ಲವೆಂದು ದೇವಗುರುವಿನಿಂದ ತಿಳಿಯುತ್ತಾನೆ, ಆದರೆ ಆಕೆಯನ್ನು ಇಂದ್ರಾಣಿಯಾಗಿ ಸ್ವೀಕರಿಸದೇ ಎಷ್ಟುಕಾಲವಾದರೂ ದೇವೇಂದ್ರನನ್ನು ಹುಡುಕಿಸುವ ಪ್ರಯತ್ನಮಾಡು ಅಲ್ಲಿವರೆಗೂ ತಾನು ಇಂದ್ರ ಪದವಿಯಲ್ಲಿರುವನೆಂದು ಭರವಸೆಕೊಡುತ್ತಾನೆ, ಇದರಿಂದ ದೇವೇಂದ್ರನ ಪತ್ನಿಯಾದ ಶಚೀದೇವಿ ನಹುಷನ ದೊಡ್ಡತನವನ್ನು ಮೆಚ್ಚಿಕೊಳ್ಳುತ್ತಾಳೆ. ಸಪ್ತರ್ಷಿ ಶಿಬಿಕಾರೋಹಣವು ಇಂದ್ರನಿಗೆ ಮಾತ್ರ ಸಲ್ಲುವ ಮರ್ಯಾದೆಯೆಂದು ತಿಳಿಯುತ್ತಾನೆ, ಸಪ್ತರ್ಷಿಗಳೇ ಇಂದ್ರನನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಗೌರವ ಸಲ್ಲಿಸುತ್ತಾರೆ, ಅದೇ ಸಮಯದಲ್ಲಿ ಹತ್ಯಾಭೀತಿಯಿಂದ ತಲೆಮರಿಸಿಕೊಂಡಿದ್ದ ಇಂದ್ರನಿರುವ ಜಾಗ ಪತ್ತೆ ಹಚ್ಚುತ್ತಾನೆ, ಉತ್ತರಾಯಣ ಪುಣ್ಯಕಾಲದ ಮರುದಿನ ಶಿಬಿಕಾರೋಹಣ ನಡೆಯಲು ನಿಶ್ಚಯಿಸಿ ದೇವೇಂದ್ರನಿಗೆ ಇಂದ್ರಾಭಿಷೇಕ ಮಾಡಲು ನಿರ್ಧರಿಸುತ್ತಾನೆ. ಆಗ ಶಚಿ ಹೇಳುವ ಮಾತು ಅತ್ಯದ್ಭುತ, ನಹುಷನ ಕಾರ್ಯದಿಂದ ದೇವತ್ವಕ್ಕಿಂತ ಮನುಷ್ಯತ್ವ ಶ್ರೇಷ್ಠವಾಯಿತು, ಇದುವರೆಗೂ ದೇವತೆಗಳು ಮಾನವರಿಗೆ ವರಕೊಡುಕ್ತಿದ್ದರು, ಈಗ ಮಾನವನು ದೇವತೆಗಳಿಗೆ ವರಕೊಡುವಂತಾಯಿತು ಎಂದು ಹೇಳುತ್ತಾಳೆ.
ಶಚಿಗೆ ಪತಿಯನ್ನು ದೊರಕಿಸಿಕೊಟ್ಟು, ಎಲ್ಲೋ ಅವಿತಿದ್ದ ಇಂದ್ರನನ್ನು ವಿಪತ್ತಿನಿಂದ ಪಾರುಮಾಡಿ, ಆತನನ್ನು ಅಮರಾವತಿಗೆ ಕರೆಸಿಕೊಂಡು, ಇಂದ್ರಾಭಿಷೇಕ ನೆರವೇರಿಸಿ, ತನ್ನ ಪರಮಾಧಿಕಾರವನ್ನೂ ಇಂದ್ರನಿಗೊಪ್ಪಿಸಿ ತಾನು ಮತ್ತೆ ರಾಜ್ಯವಾಳಲು ಇಷ್ಟಪಡದೆ ತಪಸ್ಸನ್ನು ಮಾಡಲು ಅರಣ್ಯಕ್ಕೆ ಹೊರಟುಹೋಗುತ್ತಾನೆ. ಹೀಗೆ ಭೂಲೋಕದಲ್ಲಿ ನ್ಯಾಯ ವಿತರಣೆ ಮಾಡಿ ಧರ್ಮಪ್ರಭುವೆಂಬ ಖ್ಯಾತಿಪಡೆದಿದ್ದ ನಹುಷನು ಇಂದ್ರಪದವಿಯಲ್ಲೂ ಇದೇರೀತಿ ನ್ಯಾಯನಿಷ್ಠೆಯನ್ನು ಪಾಲಿಸಿ ದೇವತೆಗಳಿಂದಲೇ ಭಲೇ ಎನಿಸಿಕೊಂಡನು. *ಭೋಗವನ್ನು ನಿರಾಕರಿಸಿ ತ್ಯಾಗವನ್ನು ಎತ್ತಿಹಿಡಿದ ನಹುಷನು ಅತೀಂದ್ರ ಎನಿಸಿಕೊಂಡನು.* ಅತ್ತುತ್ತಮ ಕೃತಿ.
I am zapped with the knowledge and the nitty gritty provided in this book by the author. Thanks to my friend who referred me to this book. The language and the vocab is so command-able. I would recommend this book to anyone who wants to understand how humans can still behave like God...!!! Dharma is all the matters... Why do we get doubts? How is our life compared to the cream of milk? Though the book deviates from the actual/truth story of Nahusha, it is definitely an eye opener. Enjoyed reading this book
ದೇವತೆಗಳಿಗೆ ಅನಿಶ್ಚಿತತೆ ಕಾಡಿದರೆ ತಮ್ಮ ಪುಣ್ಯ ಬರಿದಾಗುವಂತೆ ಕಂಡರೆ ಮಾನವರ ಬಳಿ ದೌಡಯಿಸಲುಬಹುದು ಎಂಬುದಕ್ಕೆ ಇದೊಂದು ನಿದರ್ಶನ. ನಹುಷನ ಸಮಚಿತ್ತತೆ,ಇಂದ್ರನ ಆಸ್ಥನದಲ್ಲೇ ಅವನಿಗಿಂತ ಉತ್ತಮ ಆಡಳಿತ ಇತ್ತು ಪದವಿ ತ್ಯಜಿಸುವಾಗಲು ಒಂಚೂರೂ ಅಳುಕಿಲ್ಲದೇ ಬಿಟ್ಟುಕೊಟ್ಟು ಅತೀಂದ್ರೀಯನೆನಿಸಿಕೊಳ್ಳುತ್ತಾನೆ.
While this book is at a small scale compared to Mahabrahmana, sensitivity and deapth of the subject is same. I like the fact that a character which doesn't come almost for first half of the book is the main character. I also like the fact that this is a beautiful attempt to see the whole two page story which I had read in Chandamama in a totally detailed beautiful character study. Enjoyed the reading.
This entire review has been hidden because of spoilers.