Jump to ratings and reviews
Rate this book

ಅಗಸ್ತ್ಯ [Agastya]

Rate this book
'Agastya' - A kannada novel based on Vedic, Puranic, details of myths and hymns, anecdotes and accounts by K.S. Narayanacharya.

256 pages, Paperback

First published January 1, 1997

1 person is currently reading
36 people want to read

About the author

K.S. Narayanacharya

48 books33 followers
Prof. who is a senior scholar and speaker. K.S. Narayanacharya was originally from Kanakanahalli in Bangalore district (now Kanakapura).

Father: K.N. Srinivas Desikachar.
Mother: Ranganayakamma. He belongs to a family of Vedic scholars. B.Sc from Maharaja College, Mysore. graduates. After B.A. Graduated with Honors and Masters in Modern English Literature. Completed this Ph.D in W.B. Yates and T.S. Studied Indian culture on Eliot's poetry.

He retired as a professor of English at Karnataka College, Dharwad and as the principal of that college. Currently residing in Bangalore. Specializing in the Vedas, Ramayana, Mahabharata and Bhagavata, he wrote works on the economics of Bendre and Kautilya. Expert in Sanskrit, Kannada and English. He has authored more than 180 books and delivered more than 200 lectures

Works : Introduction to Vedic Culture, Ramayanasahsree, Geetaratnanidhi, The world of Ramayana character, Agastya, Acharya Chanakya, Tiruppavai, Tirumalai, Stotraratnam, Basic Concepts of Vishitadvaita, Who Killed Mahatma Gandhi?

ಹಿರಿಯ ವಿದ್ವಾಂಸ ಹಾಗೂ ಪ್ರವಚನಕಾರರೂ ಆಗಿರುವ ಪ್ರೊ. ಕೆ.ಎಸ್. ನಾರಾಯಣಾಚಾರ್ಯರು ಮೂಲತಃ ಬೆಂಗಳೂರು ಜಿಲ್ಲೆಯ (ಈಗಿನ ಕನಕಪುರ) ಕನಕನಹಳ್ಳಿಯವರು. ತಂದೆ ಕೆ.ಎನ್. ಶ್ರೀನಿವಾಸ ದೇಶಿಕಾಚಾರ್. ತಾಯಿ ರಂಗನಾಯಕಮ್ಮ. ವೈದಿಕ ವಿದ್ವಾಂಸರ ಕುಟುಂಬ ಇವರದು.ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎಸ್.ಸಿ. ಪದವೀಧರರು. ನಂತರ ಬಿ.ಎ. ಆನರ್ಸ್‌ ಮಾಡಿ, ಆಧುನಿಕ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯೆಟ್‌ ಅವರ ಕಾವ್ಯದ ಮೇಲೆ ಭಾರತೀಯ ಸಂಸ್ಕೃತಿಯ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ. ಪಡೆದರು.

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ, ಆ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೇದಗಳು, ರಾಮಾಯಣ, ಮಹಾಭಾರತ, ಭಾಗವತಗಳಲ್ಲಿ ವಿಶೇಷ ಪರಿಣಿತಿ ಪಡೆದಿದ್ದು, ಬೇಂದ್ರೆ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದ ಬಗ್ಗೆ ಕೃತಿ ರಚಿಸಿದ್ದಾರೆ. ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪರಿಣಿತರು. ಸುಮಾರು 180ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದು, ಸುಮಾರು 200ಕ್ಕೂ ಅಧಿಕ ಉಪನ್ಯಾಸಗಳನ್ನು ನೀಡಿದ್ದಾರೆ

ಕೃತಿಗಳು : ವೇದ ಸಂಸ್ಕೃತಿಯ ಪರಿಚಯ, ರಾಮಾಯಣಸಹಶ್ರೀ, ಗೀತಾರತ್ನನಿಧಿ, ರಾಮಾಯಣ ಪಾತ್ರ ಪ್ರಪಂಚ, ಅಗಸ್ತ್ಯ, ಆಚಾರ್ಯ ಚಾಣಕ್ಯ, ತಿರುಪ್ಪಾವೈ, ತಿರುಮಲೈ, ಸ್ತೋತ್ರರತ್ನಂ, ವಿಶಿಷ್ಟಾದ್ವೈತ ಮೂಲ ಪರಿಕಲ್ಪನೆಗಳು, ಮಹಾತ್ಮಗಾಂಧಿಯನ್ನು ಕೊಂದಿದ್ದು ಯಾರು? ಸುಭಾಷರ ಕಣ್ಮರೆ, ವಾಲ್ಮೀಕಿ ಯಾರು?, ಮತಾಂತರ, ಶ್ರೀ ರಾಮಜನ್ಮಭೂಮಿ ತೀರ್ಪು, ಮಹಾಮಾತೆ ಕುಂತಿ ಕಣ್ತೆರೆದಾಗ, ದೇವಕಿಯ ಚಿಂತನೆಗಳು, ಮಹಾ ಪ್ರಸ್ಥಾನ, ಕೃಷ್ಣಾವತಾರದ ಕೊನೆಯ ಗಳಿಗೆಗಳು-ಈ ಕೃತಿಯು ಅಪಾರ ಸಂಖ್ಯೆಯಲ್ಲಿ ಓದುಗರನ್ನು ಸೆಳೆದಿದ್ದು, ಸುಮಾರು 20000ಕ್ಕೂ ಅಧಿಕ ಕೃತಿಗಳು ಮಾರಾಟವಾಗಿವೆ. ‘ಶ್ರೀ ರಾಮಾವತಾರ ಸಂಪೂರ್ಣವಾದಾಗ’ ಕೃತಿಯು ಸಹ ಮಾರಾಟದಲ್ಲಿ ದಾಖಲೆ ನಿರ್ಮಿಸಿದೆ. ಶ್ರೀರಾಮಾಯಾಣದ ಮಹಾಪ್ರಸಂಗಗಳು, ಶ್ರೀಮದ್ ರಾಮಾಯಣದ ಮಹಾಪ್ರಸಂಗಗಳು, ವೇದ ಸಂಸ್ಕೃತಿಯನ್ನು 10 ಕೃತಿಗಳಲ್ಲಿ ಪರಿಚಯಿಸಿದ್ದಾರೆ. ರಾಮಾಯಣ, ರಾಮಕಥಾ ಸಾರ, ರಾಮಾಯಣ ಪಾತ್ರ ಪರಿಚಯ, ರಾಮಾಯಣ ಸಾಹಶ್ರೀ, ಮಹಾಭಾರತ ಪಾತ್ರ ಪರಿಚಯ, ವನದಲ್ಲಿ ಪಾಂಡವರು, ರಾಜಸೂಯದ ರಾಜಕೀಯ, ಶ್ರೀಕೃಷ್ಣ ಮತ್ತು ಮಹಾಭಾರತ ಯುದ್ಧ, ಆ ಹದಿನೆಂಟು ದಿನಗಳು (2 ಬೃಹತ್ ಸಂಪುಟಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಗೊಂಡಿವೆ) ಗುರುದೇವ ರಾನಡೆ ಅವರ ಉಪನ್ಯಾಸ ಸರಣಿ ಮಾಲಿಕೆಯ ಮಹಾಭಾರತದಲ್ಲಿ ಶ್ರೀಕೃಷ್ಣನ ಪಾತ್ರ, ವನಪರ್ವ, ವಿರಾಟಪರ್ವ ಸೇರಿದಂತೆ ಮಹಾಭಾರತ, ರಾಮಾಯಣ, ವೇದ ಸಂಸ್ಕೃತಿ, ಸನಾತನ ಪರಂಪರೆಯ ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ. ಸಮಾಕಾಲೀನ ವಿಷಯಗಳಿಗೂ ಅವರು ಸ್ಪಂದಿಸಿ ಬರೆದ ಹಲವಾರು ಲೇಖನಗಳು ಕನ್ನಡ ಹಾಗೂ ಇಂಗ್ಲಿಷ್ ಪತ್ರಿಕೆ, ಪಾಕ್ಷಿಕ, ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಪ್ರಶಸ್ತಿ-ಪುರಸ್ಕಾರಗಳು ರಾಮಾಯಣ, ಭಾಗವತ, ಮಹಾಭಾರತ, ವೇದಗಳು, ಭಗವದ್ಗೀತೆ, ಹರಿದಾಸ ಸಾಹಿತ್ಯ ಪ್ರಸಾರಕ್ಕಾಗಿ ಪ್ರೊ.,ಕೆ.ಎಸ್. ನಾರಾಯಣಾಚಾರ್ಯ ಅವರಿಗೆ ಬೆಂಗಳೂರಿನಲ್ಲಿ ಜರುಗಿದ ( 2016), ವಿಶ್ವ ರಾಮಾಯಣ ಸಮ್ಮೇಳನದಲ್ಲಿ ಇವರಿಗೆ ‘ವಾಲ್ಮೀಕಿ ಪ್ರಶಸ್ತಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವು ಡಿ.ಲಿಟ್ ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ವಿದ್ವನ್ಮಣಿ, ವೇದಭೂಷಣ, ಗಮಕ ರತ್ನಾಕರ, ಕರ್ನಾಟಕ ಕಲಾಶ್ರೀ, ಉಪನ್ಯಾಸ ಕೇಸರಿ ಬಿರುದು ಸಂದಿವೆ. ಕನ್ನಡ, ಇಂಗ್ಲಿಷ್ ಹಾಗೂ ತಮಿಳು ಭಾಷೆಯಲ್ಲಿ ರಾಮಾಯಣವನ್ನು ಆಧಿಕೃತವಾಗಿ ಉಪನ್ಯಾಸ ನೀಡುವ ವಿದ್ವತ್ ಗಾಗಿ ಸಾಹಿತ್ಯಾಸಕ್ತರು ಅವರಿಗೆ ‘ರಾಮಾಯಣಾಚಾರ್ಯರು’ ಎಂದೇ ಕರೆಯುತ್ತಾರೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
15 (71%)
4 stars
2 (9%)
3 stars
3 (14%)
2 stars
0 (0%)
1 star
1 (4%)
Displaying 1 - 2 of 2 reviews
180 reviews22 followers
April 25, 2024
#ಅಕ್ಷರವಿಹಾರ_೨೦೨೪
ಕೃತಿ: ಅಗಸ್ತ್ಯ
ಲೇಖಕರು: ಪ್ರೊ.ಕೆ.ಎಸ್.ನಾರಾಯಣಾಚಾರ್ಯ
ಪ್ರಕಾಶಕರು: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ

“ವಾತಾಪಿ ಜೀರ್ಣೋ ಭವಃ” ಎಂದು ವಾತಾಪಿಯನ್ನು ಅರಗಿಸಿಕೊಂಡ ಕತೆಯು ಬಹುತೇಕ ಎಲ್ಲರಿಗೂ ತಿಳಿದಿರುತ್ತದೆ. ಅಗಸ್ತ್ಯರು ಪೂರ್ತಿ ಸಮುದ್ರವನ್ನೇ ಆಪೋಶನ ತೆಗೆದುಕೊಂಡು ಕಾಲಕೇಯರನ್ನು ಮಣಿಸಿದ ಕತೆಯು ಸಹ ಅಷ್ಟೇ ಜನಪ್ರಿಯ. ಈ ಕತೆಗಳಿಂದ ಪ್ರೇರಿತನಾಗಿ ಮಗನಿಗೆ ಅಗಸ್ತ್ಯ ಎಂದು ನಾಮಕರಣ ಮಾಡಿದ್ದು. ಹಾಗಾಗಿ ಅವರು ಕುರಿತಾದ ಪೂರ್ತಿ ವಿಚಾರಗಳನ್ನು ತಿಳಿಯಬೇಕೆಂಬ ಆಸಕ್ತಿ ನನ್ನಲ್ಲಿತ್ತು. ಅದಕ್ಕೆ ತಕ್ಕಂತೆ ವಿದ್ವಾಂಸರಾದ ನಾರಾಯಣಾಚಾರ್ಯರ “ಅಗಸ್ತ್ಯ” ಕೃತಿಯನ್ನು ಓದಲು ಕೈಗೆತ್ತಿಕೊಂಡೆ. ಅವರ ಪೌರಾಣಿಕ ಕೃತಿಗಳಲ್ಲಿರುವ ಪಾಂಡಿತ್ಯವನ್ನು ಇತರ ಕೃತಿಗಳಲ್ಲಿ ಓದಿ ತಿಳಿದುಕೊಂಡಿದ್ದರಿಂದ “ಅಗಸ್ತ್ಯ” ಮಹರ್ಷಿಗಳ ಕುರಿತು ತಿಳಿಯಲು ಈ ಕೃತಿಯೇ‌ ಸರಿಯಾದ ಆಯ್ಕೆಯಾಗಿತ್ತು.

ಕ್ಷತ್ರಿಯರ ಕ್ಷಾತ್ರಬಲವು ಕ್ಷೀಣಿಸುತ್ತಾ ಆರ್ಯಾವರ್ತವು ಅನಾಯಕತ್ವದತ್ತ ಹೊರಳುತ್ತಿರುವಾಗ, ದಕ್ಷಿಣದಲ್ಲಿ ಇಲ್ವಲ ವಾತಾಪಿ ಎಂಬ ಸಹೋದರರು ತಮಗೆ ಸಿದ್ಧಿಸಿದ ಮಾಯಾ ವಿದ್ಯೆಯಿಂದ ಇಡೀ ಭರತಖಂಡವನ್ನು ಬ್ರಾಹ್ಮಣ ಮುಕ್ತವಾಗಿಸಿ ತಮ್ಮ ಚಕ್ರಾಧಿಪತ್ಯಕ್ಕೆ ಒಳಪಡಿಸಬೇಕೆನ್ನುವ ಸಂದರ್ಭದಲ್ಲಿ ಭಾರತದ ಅಖಂಡತೆಗೆ ಧಕ್ಕೆ ತರಬಾರದು, ಸಾಂಸ್ಕೃತಿಕವಾಗಿ ಭಾರತವು ಏಕೀಕರಣವಾಗಬೇಕು ಎಂಬ ಉದ್ದೇಶದಿಂದ ಅಗಸ್ತ್ಯರು ಪಾದಯಾತ್ರೆಯನ್ನು ಆರಂಭಿಸುತ್ತಾರೆ. ಇದೇ ಸಮಯಕ್ಕೆ ಸಹಸ್ರಾರ್ಜುನನನ್ನು ಕೊನೆಗಾಣಿಸಿ ಕ್ಷತ್ರಿಯರ ನಿರ್ವಂಶ ಮಾಡಲು ಪರಶುರಾಮರು ಹೊರಡುತ್ತಾರೆ. ಇಡೀ ಆರ್ಯಾವರ್ತದ ಕ್ಷತ್ರಿಯ ವಂಶವು ನಿರ್ನಾಮವಾಗದಂತೆ ಅಗಸ್ತ್ಯರ ಮುತ್ಸದ್ದಿತನವು ಕೆಲಸ ಮಾಡುತ್ತದೆ. ಇಲ್ಲಿಂದ ಮುಂದೆ ದಕ್ಷಿಣದ ಕಡೆಗೆ ಹೊರಡುವ ಅಗಸ್ತ್ಯರು ಬೆಳೆಯುತ್ತಿರುವ, ಹಿಮಾಲಯಕ್ಕೆ ಪ್ರತಿಸ್ಪರ್ಧಿಯಾಗಿ ಬೆಳೆಯಬೇಕೆಂಬ ವಿಂಧ್ಯನನ್ನು ಚಾಣಾಕ್ಷವಾಗಿ ಮಲಗಿಸುತ್ತಾರೆ, ಮತ್ತೆ ಮೇಲೇಳದಂತೆ…

ಇಲ್ಲಿಂದ ಮುಂದೆ ಇಲ್ವಲ ಹಾಗೂ ವಾತಾಪಿಯರ ಸಂಹಾರ. ಇಲ್ಲಿ ಅಗಸ್ತ್ಯರು ತೆಗೆದುಕೊಳ್ಳುವ ನಿರ್ಧಾರಗಳು, ಸಂಕಷ್ಟದ ಸಮಯದಲ್ಲಿ ಅವರು ತೋರುವ ಸಮಚಿತ್ತತೆ, ಸರಿಯಾದ ಸಂದರ್ಭಕ್ಕೆ ಕಾಯುವಿಕೆ ಅವರ ವ್ಯಕ್ತಿತ್ವದ ಹತ್ತು ಹಲವು ಆಯಾಮಗಳನ್ನು ತೆರೆದಿಡುತ್ತದೆ. ಎಷ್ಟೇ‌ ಪ್ರಬಲನಾಗಿದ್ದರೂ, ವಿಷ್ಣು ರುದ್ರರನ್ನು ಸಾಕ್ಷಾತ್ಕಾರ ಮಾಡಿಕೊಂಡಿರುವವರಾಗಿದ್ದರೂ ಅಗತ್ಯಕ್ಕೆ ತಕ್ಕಂತೆ ಜನಸಾಮಾನ್ಯರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ನಡೆಸುವ ಕಾರ್ಯಾಚರಣೆಯ ವೈಖರಿ ನಿಜವಾದ ಲೋಕಪಾಲಕನಿಗಿರಬೇಕಾದ ಬದ್ಧತೆಯನ್ನು ತಿಳಿಯಪಡಿಸುತ್ತದೆ. ಇನ್ನು ಅಗಸ್ತ್ಯರ ಪತ್ನಿ ಲೋಪಾಮುದ್ರೆಯ ತ್ಯಾಗ,ಸಹನೆ, ಸಹಿಷ್ಣುತೆಗಳು ಆಕೆಯನ್ನು ಸಹ‌ ಒಬ್ಬ ಮಹರ್ಷಿಯ ಮಟ್ಟಕ್ಕೆ ಏರಿಸುತ್ತದೆ. ಆರ್ಯರು ಮತ್ತು ದ್ರಾವಿಡರ ನಡುವಿನ ತಿಕ್ಕಾಟದ ಕುರಿತಾದ ಚಿಂತನ ಮಂಥನಗಳು, ಅವರುಗಳ ನಡುವೆ ನಡೆಯುವ ವಿಚಾರ ವಿನಿಮಯಗಳು ಈ ಚರ್ಚೆಗೊಂದು ಹೊಸ ದಿಶೆಯನ್ನು ತೋರುತ್ತವೆ. ಇದಾದ ತರುವಾಯ ನಡೆಯುವ ಸಹ್ಯಾದ್ರಿ ಶ್ರೇಣಿಗಳ ಪ್ರವಾಸ ಹಾಗೂ ಶ್ರೀ ರಾಮಚಂದ್ರ ಮತ್ತು ಅಗಸ್ತ್ಯರ ಭೇಟಿ ಅವರ ನಡುವಿನ ಸಂಭಾಷಣೆಗಳು ನವಿರಾಗಿದ್ದು ಓದಿಸಿಕೊಳ್ಳುತ್ತದೆ. ಇಲ್ಲಿ ಉಲ್ಲೇಖಿಸಿರುವ ಅನೇಕ ಸ್ಥಳನಾಮಗಳು ಕೆಲವು ಹಾಗೆಯೇ ಬಳಕೆಯಲ್ಲಿದ್ದರೆ ಇನ್ನು ಕೆಲವು ಅಲ್ಪ ಸ್ವಲ್ಪ ಮಾರ್ಪಾಟಿನೊಂದಿಗೆ ಈಗಲೂ ಬಳಕೆಯಲ್ಲಿರುವುದು ಐತಿಹಾಸಿಕವಾಗಿ ಸಹ ಮಹತ್ವದೆನಿಸುತ್ತದೆ. ಇನ್ನು ಅಗಸ್ತ್ಯ,ವಸಿಷ್ಠ, ಅತ್ರಿ ಮುಂತಾದ ಹೆಸರುಗಳು ಒಬ್ಬ ಮಹರ್ಷಿಗಳ ಹೆಸರು ಮಾತ್ರ ಎಂದು ತಿಳಿದುಕೊಂಡಿದ್ದೆ .ಆದರೆ‌ ಈ ಹೆಸರುಗಳು ಅವರ ಪೂರ್ತಿ ವಂಶಕ್ಕೆ ಪರಂಪರಾಗತವಾಗಿ ಬರುತ್ತವೆ ಎಂಬ ವಿಷಯ ತಿಳಿಯಿತು.

ಭಾರತೀಯ ಪೌರಾಣಿಕ ಹಾಗೂ ಐತಿಹಾಸಿಕ ವ್ಯಕ್ತಿಗಳು ನಮಗೊಂದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರೆ. ದುರದೃಷ್ಟವಶಾತ್ ಅದು ಯಾವುದೂ ಇಂದಿನ ಯುವ ಜನಾಂಗಕ್ಕೆ ಸರಿಯಾಗಿ ತಲುಪುತ್ತಿಲ್ಲ. ಹಾಗಾಗಿ ಎಲ್ಲರೂ ತಮಗೆ ಬೇಕಾದಂತೆ ಎಲ್ಲವನ್ನೂ ತಿರುಚಿ ಲಾಭ ಮಾಡಿಕೊಳ್ಳುವವರೇ. ಇಂತಹ ವಿದ್ವತ್ಪೂರ್ಣ ಕೃತಿಗಳು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಸರಿಯಾದ ಮಾಹಿತಿಯನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ನಮಸ್ಕಾರ,
ಅಮಿತ್ ಕಾಮತ್
Profile Image for Satyendra Avadhani.
14 reviews
March 23, 2023
ಕೃಷ್ಣಾವತಾರದ ಕೊನೆಯ ಗಳಿಗೆಗಳು ಆದಮೇಲೆ ನನಗೆ ಹಿಡಿಸಿದ ಅತ್ಯಂತ ಪ್ರೀತಿಯ ೨ನೇ ಪುಸ್ತಕ
Displaying 1 - 2 of 2 reviews

Can't find what you're looking for?

Get help and learn more about the design.