Jump to ratings and reviews
Rate this book

Mukhantara

Rate this book
Set in a fictitious village called Kanthapura in Kasaragod district, Mukhāntara spans across the life of seven generations of a Havyaka Brahmin family. A story about the realities of living in a society marked by caste distinctions, the desire to find communal harmony and the tribulations of the characters through the entirety of the novel, it is also a tale of changing times and people.

After unexpectedly coming into possession of a huge portion of land, Thirumalēshwara Bhat of Īshwarīmūle becomes a satisfied man. But childless, Thirumalēshwara Bhat and his wife Pārvathakka decide to adopt Venkappaiah and also give shelter to his widowed mother, Rathnamma. Venkappaiah is to inherit Thirumalēshwara’s vast wealth but when Krishnaiah, the illegitimate child of Thirumalēshwara and Rathnamma is born, rivalry ensues. Through the overlapping narratives of the characters, we get a glimpse into their journey from tradition to modernity. The characters strive to reshape new values when old values are slowly questioned and erased as they move on and are swept along in the waves of globalization

646 pages, Paperback

First published January 1, 2014

11 people want to read

About the author

N. Mogasale

18 books2 followers
ನಾ.ಮೊಗಸಾಲೆ ಎನ್ನುವ ಹೆಸರಿನಲ್ಲಿ ಓದುಗರಿಗೆ ಪರಿಚಿತರಾದ ಡಾ| ನಾರಾಯಣ ಭಟ್ಟ, ಮೊಗಸಾಲೆ ಇವರು ಹುಟ್ಟಿದ್ದು ೧೯೪೪ ಅಗಸ್ಟ ೨೭ ರಂದು. ಅವರು ಹುಟ್ಟಿದ ಊರು ಸಾರ್ಕುಡೇಲು ಮನೆ. ಈ ಗ್ರಾಮ ಇದೀಗ ಕಾಸರಗೋಡು ಜಿಲ್ಲೆಯ ಕೇರಳ ರಾಜ್ಯದಲ್ಲಿ ಮಂಜೇಶ್ವರದ ಹತ್ತಿರ ಇದೆ. ೧೯೪೯ರಲ್ಲಿ ತಂದೆ ತೀರಿಕೊಂಡದ್ದರಿಂದ ಮೊಗಸಾಲೆಯವರು ಚಿಕ್ಕಪ್ಪನ ಸುಪರ್ದಿನಲ್ಲಿ ಬೆಳೆದರು. ೧೯೬೧ರಲ್ಲಿ ಎಸ್.ಎಸ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ, ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ಕಲಿತು, ೧೯೬೫ರಲ್ಲಿ ಡಿ.ಎಸ್.ಸಿ.ಎ. ಪದವಿಯನ್ನು ಪಡೆದರು.

ಬರವಣಿಗೆ ಸಂಘಟನೆಗಳ ಮೂಲಕ ನಾ.ಮೊಗಸಾಲೆಯವರು ಕನ್ನಡ ಸಾಹಿತ್ಯಕ್ಕೆ ಬಹುಮುಖ ಸೇವೆ ಸಲ್ಲಿಸಿದ್ದಾರೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
2 (40%)
4 stars
3 (60%)
3 stars
0 (0%)
2 stars
0 (0%)
1 star
0 (0%)
Displaying 1 of 1 review
Profile Image for Karthikeya Bhat.
111 reviews16 followers
March 7, 2026
#ಪುಸ್ತಕ_ಪರಿಚಯ_೨_೨೦೨೬

ಕಾದಂಬರಿ: ಮುಖಾಂತರ
ಲೇಖಕರು: ಡಾ. ನಾ ಮೊಗಸಾಲೆ Na Mogasale
ಪುಟಗಳು :೬೪೪

ಮೊಗಸಾಲೆಯವರ ಕಾದಂಬರಿಗಳನ್ನು ಓದುವುದೆಂದರೆ ನನಗೆ ಇಷ್ಟ, ಕಾರಣ ಅವರ ಕಾದಂಬರಿಗಳನ್ನು ಓದಿದ ನಂತರ ಹಲವಾರು ಮಾಹಿತಿಗಳು ತಿಳಿಯುವುದಲ್ಲದೆ, ಕೆಲವು ಪ್ರಸಂಗಗಳು ಚಿಂತನೆಗೆ ಈಡುಮಾಡುತ್ತದೆ, ಉದಾಹರಣೆಗೆ ಉಲ್ಲಂಘನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಚಾರ ವಿಚಾರಗಳು, ಬಂಟ ಸಮುದಾಯದ ಕುರಿತು, ಗುತ್ತಿನ ಮನೆಯಲ್ಲಿ ಗುತ್ತಿನ ಯಜಮಾನ ಗುತ್ತಿನಾರ್ ಆಗಿದ್ದರೂ ಗುತ್ತಿನ ನಿಜವಾದ ಅಧಿಕಾರ ಇರುವುದು ಯಜಮಾನಿಯಲ್ಲೇ, ಆಕೆಯೇ ಇಡೀ ಜಮೀನಿಗೆ ಒಡತಿ ಎನ್ನುವ ಮಾಹಿತಿ ಚಿತ್ರಿತವಾಗಿದೆ, ಅದೇ ರೀತಿಯಲ್ಲಿ ಕೊಪ್ಪರಿಗೆ ಮನೆ ಕಾದಂಬರಿಯಲ್ಲಿ ತುಳುನಾಡು ಹಾಗು ಕಾಸರಗೋಡಿನ ಭಾಗದ ಅದರಲ್ಲೂ ಹವ್ಯಕ ಸಮುದಾಯದ ಬಗ್ಗೆ ಮಾಹಿತಿ ಸಿಗುತ್ತದೆ.

ಮುಖಾಂತರವು ಹವ್ಯಕಬ್ರಾಹ್ಮಣ ಕುಟುಂಬದ ಕಥೆಯನ್ನು ಹೇಳುತ್ತದೆ. ಸರಿ ಸುಮಾರು ೬೫೦ ಪುಟಗಳನ್ನು ಒಳಗೊಂಡಿರುವ ಈ ಕಾದಂಬರಿಯ ಪ್ರತಿ ಸಧ್ಯಕ್ಕೆ ಲಭ್ಯವಿಲ್ಲ, ಹೇಗಾದರೂ ಮಾಡಿ ಈ ಪುಸ್ತಕವನ್ನು ಓದಬೇಕೆನ್ನುವ ಆಸೆ ಇತ್ತು. ಒಮ್ಮೆ ಮೊಗಸಾಲೆಯವರನ್ನು ಕಾಂತಾವರದಲ್ಲಿ ಭೇಟಿಯಾದಾಗ ಪ್ರೀತಿಯಿಂದ ಸಾಪ್ಟ್ ಕಾಪಿ ಕೊಟ್ಟರು, ಇಷ್ಟು ದೊಡ್ಡ ಪುಸ್ತಕವನ್ನು ಅದರಲ್ಲೂ ಸಾಪ್ಟ್ ಕಾಪಿ ಓದಿದ್ದು, ಮೊದಮೊದಲು ಕಷ್ಟವಾದರೂ, ನಂತರ ಅಭ್ಯಾಸವಾಯಿತು, ಇದೊಂದು ಒಳ್ಳೆಯ ಅನುಭವ.

ಇನ್ನು ಕೃತಿಯ ವಿಚಾರಕ್ಕೆ ಬಂದರೆ,

ಮುಖಾಂತರ ಕಾದಂಬರಿ ಮಂಜೇಶ್ವರ ಸೀಮೆಯ ಅದರಲ್ಲೂ ಕಾಸರಗೋಡಿಗೆ ಒಳಪಟ್ಟ ಈಶ್ವರಿಮೂಲೆ ತಿರುಮಲೇಶಭಟ್ಟರ ವಂಶಾವಳಿಯ ಕಥೆಯನ್ನು ಹೇಳುತ್ತದೆ. ತಿರುಮಲೇಶಭಟ್ಟರು ಮೂಲತಃ ಹವ್ಯಕರು, ಕೃಷಿಯೇ ತಮ್ಮ ಜೀವನ, ಕೃಷಿಗಾಗಿಯೇ ತಮ್ಮ ಇಡೀ ಜೀವನವನ್ನು ಸಾಗಿಸಿದವರು. ಮುಖಾಂತರ ಹವ್ಯಕಬ್ರಾಹ್ಮಣ ಕುಟುಂಬದ ಕಥೆಯನ್ನು ಹೇಳುವುದಲ್ಲದೆ, ಸ್ವಾತಂತ್ರದ ಪೂರ್ವ ಹಾಗು ದೇಶಕ್ಕೆ ಸ್ವಾತಂತ್ರ ಸಿಕ್ಕ ನಂತರ ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಚಿತ್ರಣವನ್ನು ಎಳೆ ಎಳೆಯಾಗಿ ಹೇಳುತ್ತದೆ. ಕೊಪ್ಪರಿಗೆ ಮನೆ ಕಾದಂಬರಿಯಲ್ಲಿ ಹೇಗೆ ಗಾಂಧಿಪ್ರಭಾವವನ್ನು ಕಾಣಬಹುದೋ, ಅದೇ ರೀತಿಯಲ್ಲಿ ಈ ಕಾದಂಬರಿಯಲ್ಲೂ ಗಾಂಧಿಯ ಪ್ರಭಾವವು ಅಸ್ಪೃಶ್ಯತೆಯ ಕುರಿತು, ಮೇಲು ಹಾಗು ಕೀಳು ಎಂಬ ಭಾವನೆಯಿಲ್ಲದೆ ಮಕ್ಕಳಿಗಾಗಿ ಶಾಲೆ ತೆರೆದು ವಿದ್ಯಾಭ್ಯಾಸ ಕೊಡಬೇಕೆನ್ನುವ ಹಂಬಲ ಶಂಕರಭಟ್ಟರ ಪಾತ್ರವು ತಿಳಿಹೇಳುತ್ತದೆ. ಗಾಂಧಿಯ ಪ್ರಭಾವವು ಕೆಲವರಿಗೆ ಸ್ವಾತಂತ್ರ ಚಳುವಳಿಯಲ್ಲಿ ಪಾಲ್ಗೊಳ್ಳಲೂ ಕಾರಣವಾಗುತ್ತದೆ. ಇಲ್ಲಿ ಎಲ್ಲೂ ಗಾಂಧೀ ಕಾಣಿಸಿಕೊಳ್ಳುವುದಿಲ್ಲ, ಆದರೆ ಅವರ ಆದರ್ಶಗಳು, ಅದನ್ನನುಸರಿಸುವ ವ್ಯಕ್ತಿಗಳು, ಸ್ವಾತಂತ್ರ ಗಳಿಸಲು ನಡೆಸುವ ಹೋರಾಟಗಳು ಕಂಡುಬರುತ್ತವೆ, ಇವರೆಲ್ಲರೂ ಗಾಂಧೀ ತತ್ವಗಳನ್ನೇ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಬಾಳಿ ಇಡೀ ಈಶ್ವರಿಮೂಲೆಯಲ್ಲೇ ಹೆಸರುವಾಸಿಯಾಗುತ್ತಾರೆ.

ತಿರುಮಲೇಶಭಟ್ಟರಿಗೆ ಶಿರಸ್ತೇದಾರರ ಮೂಲಕ ಭೂಮಿ ಸಿಕ್ಕಾಗ, ತಮ್ಮ ಇಡೀ ಜೀವನವನ್ನು ಕೃಷಿಗಾಗಿ ಪಣವಿಟ್ಟು ತಮಗೆ ಸಿಕ್ಕ ಜಾಗವನ್ನು ಅಭಿವೃದ್ಧಿಪಡಿಸುವುದನ್ನು ಕಂಡು ಕೆಲವರಿಗೆ ಖುಷಿ, ಇನ್ನು ಪಟೇಲರಂಥ ಕೆಲವರಿಗೆ ಅಸೂಯೆಯಾಗುತ್ತದೆ, ಇವರ ತಲೆಮಾರಿನ ನಂತರ ಮತ್ತೊಂದು ತಲೆಮಾರಿನಕ್ಕೆ ಬಂದಾಗ ಈ ದಾಯಾದಿ ಕಲಹಗಳ ಕಾರಣದಿಂದ ಮನೆ, ಆಸ್ತಿ, ಭೂಮಿ ಎರಡು ಪಾಲಾಗಿ ಕೃಷ್ಣಯ್ಯನು ಅಪ್ಪನ ಆದರ್ಶವನ್ನೇ ಪಾಲಿಸುತ್ತಾನೆ, ಆದರೆ ದತ್ತು ಮಗ ವೆಂಕಯ್ಯನು ಪಾಲಾಗಿ ಬಂದ ಆಸ್ತಿಯನ್ನು ಜೂಜು, ಕುಡಿಯುವ ಚಟದ ಮೂಲಕ ಕಳೆದುಕೊಳ್ಳುತ್ತಾನೆ. ಇನ್ನು ಮೂರನೆ ತಲೆಮಾರಿಗೆ ಬಂದಾಗ ( ಮಾಪಣ್ಣ ಹಾಗು ಕೇಚಣ್ಣ) ಕೇಚಣ್ಣನು ಮದುವೆಯಾಗಿ ಸುಳ್ಯದ ಕಡೆ ತನ್ನದೇ ಆಸ್ತಿ ಮಾಡಿಕೊಂಡು ಅಪ್ಪನಿಂದ ದೂರಹೋದಾಗ, ತಿಳುವಳಿಕೆ ಇಲ್ಲದ ಮಾಪಣ್ಣನು ಅಪ್ಪನ ನೆರಳಿನಲ್ಲೇ ಬದುಕನ್ನು ಸಾಗಿಸುತ್ತಾನೆ. ಇನ್ನು ನಾಲ್ಕನೆ ತಲೆಮಾರಿಗೆ ಬಂದಾಗ (ಮಾಪಣ್ಣನ ಮಗ ಶಂಕರನು) ಶಂಕರನಿಗೆ ತಂದೆಗಿಂತ ಅಜ್ಜನೇ ಎಲ್ಲದರಲ್ಲೂ ನೆರವಾಗುತ್ತಾನೆ. ಶಂಕರನು ಕೃಷಿಗಿಂತಲೂ ಸಮಾಜ ಸುಧಾರಣೆ, ಗಾಂಧಿ ಪ್ರಭಾವ, ಸ್ವಾತಂತ್ರ ಹೋರಾಟಕ್ಕೆ ಮಹತ್ವವನ್ನು ಕೊಡುತ್ತಾನೆ. ಐದನೆ ತಲೆಮಾರಿಗೆ ಬಂದಾಗ(ಬಂಗಾರಣ್ಣನ ಕಾಲದಲ್ಲಿ) ಅಪ್ಪನ ಸ್ವಾತಂತ್ರದ ಹಾಗು ಗಾಂಧಿಯ ಆದರ್ಶಗಳನ್ನು ಪಾಲಿಸುವುದಲ್ಲದೆ, ಮಕ್ಕಳಿಗೆ ವಿದ್ಯಾಭ್ಯಾಸ ಹಾಗು ಸ್ವಂತ ಖರ್ಚಿನಲ್ಲಿ ಕನ್ನಡ ಮಾಧ್ಯಮ ಶಾಲೆಯನ್ನು ತೆರೆಯುವುದರ ಮೂಲಕ ಸ್ವತಂತ್ರ ಭಾರತವನ್ನು ಕಾಣಬೇಕೆನ್ನುವ ಕನಸನ್ನು ಕಾಣುತ್ತಾನೆ. ಇನ್ನು ಕಡೆಯ ಹಾಗು ಆರನೆ ತಲೆಮಾರಿಗೆ ಬಂದಾಗ ಬಂಗಾರಣ್ಣನು ತಾನು ಸ್ಥಾಪಿಸಿದ ಶಾಲೆಯು ಮುಚ್ಚಿಹೋಗುವ ಪರಿಸ್ಥಿತಿ ಎದುರಾಗುತ್ತದೆ ಹಾಗು ತನ್ನ ಮಗನ ಕುತಂತ್ರದಿಂದ ಸ್ವಂತ ಭೂಮಿಯನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ.

ಇಲ್ಲಿ ತಿರುಮಲೇಶಭಟ್ಟರ ಕುಟುಂಬದ ಕಥೆಯ ಜೊತೆ ಗುತ್ತಿನ ತಲೆಮಾರಿನ ಕಥೆಯನ್ನೂ ಹಾಗು ಪುರೋಹಿತ ವರ್ಗದ ಹಯಗ್ರೀವಾಚಾರ್ಯರ, ಗೋವಿಂದಾಚಾರ್ಯರ ಆಚಾರ ವಿಚಾರಗಳನ್ನೂ ಮುಖಾಂತರ ತಿಳಿಹೇಳುತ್ತದೆ. ದ್ವೈತ ಹಾಗ ಅದ್ವೈತ ಸಿದ್ಧಾಂತಗಳ ಕುರಿತು, ಮಾಧ್ವ ಪುರೋಹಿತರು ಕೆಲವು ಕಾರಣಗಳಿಂದ ಸ್ಮಾರ್ಥ ಕುಟುಂಬದವರಿಗೆ ಪೂಜೆ ಮಾಡಿಸುವ ಪ್ರಸಂಗ ಬಂದಾಗ ಈ ಎರೆಡೂ ಪಂಗಡಳು ಹೇಗೆ ಟೀಕಿಸುತ್ತಾರೆ ಎನ್ನುವುದನ್ನು ಮುಖಾಂತರ ತಿಳಿಹೇಳುತ್ತದೆ. ಮುಖ್ಯವಾಗಿ ಇಲ್ಲಿ ದೇವರಿಗೆ ಬದಲು(ಆಸ್ತಿಕ, ಹಾಗು ನಾಸ್ತಿಕ), ಪ್ರಕೃತಿಗೆ ಹೆಚ್ಚು ಆದ್ಯತೆ ಕೊಟ್ಟಿದ್ದಾರೆ. ಹುಟ್ಟಾಗಲಿ, ಸಾವಾಗಲಿ ಅವೆಲ್ಲವೂ ಪ್ರಕೃತಿಯಲ್ಲಾಗುವ ಬದಲಾವಣೆಗಳೇ ಎನ್ನುವ ಕೆಲವು ಪ್ರಸಂಗಗಳಿಂದು ನಮ್ಮನ್ನು ಚಿಂತನಾ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಪಟೇಲರ ಮಗ ಮಂಜುನಾಥನು, ಈಶ್ವರಿಮೂಲೆಯ ಶಂಕರನು ಭೇಟಿಯಾದಾಗ ಅವರ ಆದರ್ಶಗಳೂ ಒಂದೇ ಆಗಿರುತ್ತವೆ, ಅದುವೇ ಸ್ವಾತಂತ್ರ ಹೋರಾಟ. ಮುಖಾಂತರ ಕಾದಂಬರಿಯು ಈ ಎರೆಡೂ ಪಾತ್ರಗಳ ಮೂಲಕ ದಕ್ಷಿಣಕನ್ನಡ ಜಿಲ್ಲೆಯ ಸ್ವಾತಂತ್ರದ ಹೋರಾಟದ ಚಿತ್ರಣವನ್ನು ಕಟ್ಟಿಕೊಡುತ್ತದೆ. ಈ ಸ್ವಾತಂತ್ರ ಹೋರಾಟದಲ್ಲಿ ಕಾರ್ನಾಡ್ ಸದಾಶಿವರಾಯರು, ಕುದ್ಮಲ್ ರಂಗಾರಾಯರು, ಸಾಂತ್ಯಾರು ಅನಂತಪದ್ಮನಾಭ ಭಟ್ಟರು ಭೇಟಿಯಾಗುತ್ತಾರೆ. ಅವರ ಮೂಲಕ ಅಸ್ಪೃಶ್ಯತೆಯ ನಿವಾರಣೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಮಂಗಳೂರಿಗೆ ಹೋದಾಗ ಸ್ವಾತಂತ್ರ ಭಾಷೆಣೆಯ ಸಂದರ್ಭದಲ್ಲಿ ಯಾವುದೋ ಕಾರಣಕ್ಕೆ ಗಲಭೆಯಾದಾಗ ಶಂಕರನು ತನ್ನ ಕಾಲನ್ನೇ ಕಳೆದುಕೊಳ್ಳುತ್ತಾನೆ. ಮಂಜುನಾಥನು ಹಾಗು ಶಂಕರನು ತಮ್ಮ ಸ್ವಗ್ರಾಮದಲ್ಲಿ ಅಸ್ಪೃಶ್ಯತೆಯ ನಿವಾರಣೆ, ಮಕ್ಕಳಿಗಾಗಿ ಶಾಲೆ ತೆರೆಯುವುದು, ಅದನ್ನು ಯಶಸ್ವಿ ಗೊಳಿಸಲು ಪಡುವ ಸಂಕಷ್ಟಗಳು ಹೇಳತೀರದು.

ಆರನೇ ತಲೆಮಾರಿನಲ್ಲಿ ಬಂಗಾರಣ್ಣನ ಮಗ ನಾರಾಯಣನಿಗೆ ಕೃಷಿಯಲ್ಲಿ ಆಸಕ್ತಿಯಿಲ್ಲದೆ, ಕೃಷಿಯ ಬದಲು ಆ ಜಾಗವನ್ನು ಎಸ್, ಇ, ಝೆಡ್ ಗೆ ಒಳಪಡಿಸಿದರೆ ಅಲ್ಲಿ ಹಲವು ಕಂಪನಿಗಳು ಸ್ಥಾಪನೆಯಾಗಿ ಉದ್ಯೋಗ ಅವಕಾಶಗಳು ಲಭಿಸುತ್ತದೆ ಹಾಗು ಕೃಷಿಯಲ್ಲಿ ಅಪ್ಪನ ಆದರ್ಶಗಳನ್ನು ಪಾಲಿಸಲು ಇಚ್ಚೆಯಿಲ್ಲದೆ ಈಶ್ವರಿಮೂಲೆಯ ಜಾಗ ಮಾರಿ ಬಂದ ಹಣದಿಂದ ಬೆಂಗಳೂರಿನಂತಹ ನಗರದಲ್ಲಿ ಜೀವನವನ್ನು ಸಾಗಿಸದರೆ ಉತ್ತಮವೆನ್ನುವ ಮನೋಭಾವನೆ. ಬಂಗಾರಣ್ಣನ ಕಾಲದಲ್ಲಿ ತಾನು ಸ್ಥಾಪಿಸಿದ ಕನ್ನಡ ಮಾಧ್ಯಮ ಶಾಲೆಗಳು ಇನ್ನಿತರೆ ಆಂಗ್ಲ ಮಾಧ್ಯಮ ಶಾಲೆಗಳಿಂದ ಮುಚ್ಚುವ ಪರಿಸ್ಥಿತಿ ಎದುರಾಗುತ್ತದೆ. ಕೊನೆಯಲ್ಲಿ ಎರಡನೆ ತಲೆಮಾರಿನ ವೆಂಕಪಯ್ಯನ ಹಾಗು ಕೃಷ್ಣಯ್ಯನ ಕುಟುಂಬದವರು ಮುಖಾಮುಖಿಯಾಗುವ ಪ್ರಸಂಗಗಳು ಅಚ್ಚರಿ ಮೂಡಿಸುತ್ತದೆ.

*ಕಾರ್ತಿಕೇಯ*
Displaying 1 of 1 review

Can't find what you're looking for?

Get help and learn more about the design.