Yashwant Vithoba Chittal was a Kannada fiction writer born in Hanehalli, Uttara Kannada District
He completed his primary school education from his village school and his high school from the Gibbs High School, Kumta (1944).Later he did his Bachelors in science and Bachelors in technology both from Bombay University being a top ranker and gold medalist in the year 1955 and master's degree in chemical engineering from Stevens Institute of Technology, United States, and simultaneously pursued a career in science and technology along with literature. His contributions in the field of Polymer Science and synthetic resins was well recognized and he was selected as Fellow of Plastics and Rubber Institute, London.
He is well know for his short stories as well as novels earning him Karnataka Sahitya Academy Award, Sahitya Academy Award, Vardhamana Award, Adikavi Pampa Award etc
ಇಲ್ಲಿನ ಕಥೆಗಳು ಗಾತ್ರದಲ್ಲಿ ಸಣ್ಣದ್ದು, ಆದರೆ ದಕ್ಕುವ ಅನುಭವ ಘಾಡ ಮತ್ತು ವಿಸ್ತಾರದ್ದು. ಎಲ್ಲ ಕಥೆಗಳು ನವ್ಯ ಶೈಲಿಯಲ್ಲಿದ್ದು, ಸಾಂಕೇತಿಕ ಪ್ರತಿಮೆ ಕಥೆಗಳನ್ನು ಸಂಕೀರ್ಣಗೊಳಿಸಿದೆ, ಜೊತೆಗೆ ಪ್ರಬಲವಾಗಿಸಿದೆ. ಸಾವು ಇಲ್ಲಿನ ಕಥೆಗಳ ಸಾಮಾನ್ಯ ವಸ್ತು, ಚಿತ್ತಾಲರು ಸಾವನ್ನು ವಿವಿಧವಾಗಿ ಅರಿಯುವ ಅಥವಾ ವಿಶ್ಲೇಷಿಸುವ ಬಗೆಯೇ ಕಥೆಗಳ ಸಾರವಾಗಿ ಕಥೆಗಳು ಬಿಂಬಿಸಿವೆ
'ಆಟ' ಚಿತ್ತಾಲರ ಸಾಹಿತ್ಯಕ್ಕೆ ನನ್ನ ಪ್ರವೇಶಿಕೆ. ಇದು ಆರು ಸಣ್ಣ-ಕಥೆಗಳ ಸಂಗ್ರಹ. ಚಿತ್ತಾಲರ ವಿಶಿಷ್ಟ ಭಾಷೆ, Non-linear ಆದ ನಿರೂಪಣಾ ಶೈಲಿ ಮೂದಲ ಕಥೆಯಲ್ಲಿಯೆ 'ಸೆರೆ' ಹಿಡಿಯುತ್ತದೆ. ಓದುಗನ ಮನಸಿನ ಯಾವುದಾದರೂ ಭಾವವನ್ನು ಈ ಕಥೆಗಳು ತಟ್ವದೆ ಇರವು. ಕಥೆಗಳಲ್ಲಿನ ಕತ್ತಲು,ಭ್ರಮೆ, ಭಯ, ಓದುಗನನ್ನುಆವರಿಸುತ್ತದೆ. ಗೋಪಾಲಕೃಷ್ಣ ಅಡಿಗರು ಪುಸ್ತಕಕ್ಕೆ ವಿಮರ್ಶಾತ್ಮಕ ಮುನ್ನುಡಿಯನ್ನು ಬರೆದಿದ್ದಾರೆ.
ಯಶವಂತ ಚಿತ್ತಾಲರ 'ಆಟ' ಕಥಾ ಸಂಕಲನವನ್ನು ಓದಿ ಅವರ ಎಲ್ಲ ಪುಸ್ತಕವನ್ನ ಓದಬೇಕೆಂಬ ಹಂಬಲ ಶುರು ಆಗಿದೆ. ಗೋಪಾಲ ಕೃಷ್ಣರ ಮುನ್ನುಡಿಯು ಬರಿ ಹೊಗಳಿಕೆ ಆಗಿರದೆ ಅವರ ನೇರ ಅನಿಸಿಕೆ ಆಗಿದೆ. ಯಾವ ಕಥೆ ಅಡಿಗರಿಗೆ ಇಷ್ಟವಾಯಿತು ಯಾವುದರಲ್ಲಿ ಇನ್ನು ಸುಧಾರಣೆ ಇರಬಹುದಿತ್ತು ಎಂಬುದನ್ನು ಹೇಳಿದ್ದಾರೆ. ಆಟ ಎಂಬ ಕಥೆ ನನ್ನಲ್ಲಿ ಬಹಳ ಭಯ ಹುಟ್ಟಿಸಿದಂತ ಕಥೆ. ಆ ಸಾವಿನ ದೂತನನ್ನು ಎಷ್ಟೊಂದು ಭಯ ಹುಟ್ಟಿಸುವ ಹಾಗೆ ಬರೆದಿದ್ದಾರೆ. ಹಾವು ಎಂಬ ಕಥೆಯಲ್ಲಿ ನಾನೂ ಕೂಡ ಆ ಮನೆಯಲ್ಲಿ ವಾಸ ಮಾಡ್ತಾ ಇದ್ದೀನಿ ಅನ್ನಿಸೋಕೆ ಶುರು ಆಯ್ತು.
“ಚಿತ್ತಾಲರನ್ನು ಓದುವುದೆಂದರೆ ಧ್ಯಾನಸ್ಥ ಸ್ಥಿತಿ ಎನ್ನುವುದು ನನ್ನ ಅನುಭವ. ಲೇಖಕರು ಚಿಕ್ಕ ಕಥೆಯಲ್ಲಿನ ಆಳ ಅಗಲವನ್ನು ಯಾವುದೇ ರೇಖಾತ್ಮಕ ಶೈಲಿಗೆ ಒಗ್ಗಿಸಿಕೊಳ್ಳದೇ ಮನಸ್ಸಿನ ಸೂಕ್ಷ್ಮಾತಿಸೂಕ್ಷ್ಮ ಮನೋವೈಚಾರಿಕ ಗಾಢತೆಯ ಭಾವನೆಗಳಿಗೂ, ವಿಚಾರಗಳಿಗೂ ವಿಶಿಷ್ಟವಾದ ಅನುಭವದ ದರ್ಶನದ ಚಿಂತನೆ/ಕಾಣ್ಕೆಯ ಬೃಹತ್ ಪ್ರತಿಮೆಯನ್ನು ಕೆತ್ತುತ್ತಾ ಅದನ್ನೇ ಅತ್ಯುತ್ತಮ ಕಲೆಗಾರಿಕೆಯನ್ನಾಗೆ ಮಾಡಿ ಕಥಾಪ್ರತಿಮೆಯ ಮುಂದೆ ಓದುಗನನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಮಾನವ ಮನಸ್ಸಿನ ಒಳಗಿನ ಅಲೆಗಳನ್ನು, ಆಳವಾದ ಅನುಭವ-ಭಾವಗಳನ್ನು, ಮರಣ, ಓರ್ವನ ಆತ್ಮ-ಹೋರಾಟ, ಬದುಕಿನ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಕೂದಲು ಸೀಳಿದಂತೆ ಬರೆಯಲು ಚಿತ್ತಾಲರಿಂದ ಮಾತ್ರ ಸಾಧ್ಯ.
* ಕತ್ತಲೆಯಲ್ಲಿ ಹತ್ತಿಕ್ಕಲಾಗದ ಪ್ರಾಯದ ಕಾಮಪ್ರವೃತ್ತಿಯ ವಿರುದ್ಧವಾದ ಹೋರಾಟ (ಸೆರೆ). * ಕತ್ತಲಿನಲ್ಲಿನ ಭಯದಲ್ಲಿ ಅಡಗಿರುವ ಕಾಮದ ರೂಪಕವಾದ (ಹಾವು). * ಅನಾರೋಗ್ಯದ ಕತ್ತಲಕೂಪದಲ್ಲಿ ಮತ್ತೊಬ್ಬನ ಮುಖ ನೋಡಲಾಗದಿರುವ (ಅದೃಷ್ಟ). * ಅನಾಮಿಕ ದೂತನಿಂದ ಬರುವ ಆಕಸ್ಮಿಕ ಆಮಂತ್ರಣದಲ್ಲಿ ಸಾವಿನ (ಪಯಣ)ಕ್ಕೆ ತನ್ನನ್ನು ಶೃಂಗರಿಸಿಕೊಳ್ಳುವ ಮನುಷ್ಯ, * ಕಾಲಿಗೆ ಕಚ್ಚಿರುವ ವಿಷವನ್ನೇ ಕಡೆಗಾಣಿಸುವ ಜೂಜಿನ (ಆಟ)ದಲ್ಲಿರುವ ತನ್ಮಯತೆ ಮತ್ತು ಆ ಸಾವು ಸುತ್ತಿಬರುವುದನ್ನು ಕತ್ತಲಲ್ಲಿ ಕಣ್ತುಂಬಿಕೊಳ್ಳುವ ಬುಡಾಣಸಾಬುವು ಕತ್ತಲನ್ನು ಕ್ರಮಿಸುವ ವಿವರಣೆ ಅತ್ಯಮೋಘ. * ಅತಿರೇಕದ ಹೆಣ್ಣಿನ (ಛಲ)ದ ಸೇಡಿನಲ್ಲಿ ತನ್ನ ಕುಟುಂಬವನ್ನೇ ಬಲಿಕೊಟ್ಟು ಪಿಶಾಚಿಯಂತೆ ಛಲವೇ ರೋಗಗ್ರಸ್ತ ಕಾಯಿಲೆಯಾಗುವ ಪರಿಯನ್ನು ಲೇಖಕರು ಕಣ್ಣಿಗೆ ಕಟ್ಟಿಕೊಡುತ್ತಾ ವಿವರಿಸುತ್ತಾರೆ.
ಚಿತ್ತಾಲರ ಬರಹಗಳಲ್ಲಿ ಅವರ ಮುಖ್ಯ ಪಾತ್ರಗಳಾದ ಪುರುಷೋತ್ತಮ, ದೇವಿ, ಪೊತ್ತೆಮೀಸೆಯವ, ವೋಮು.. ಇತ್ಯಾದಿ ಪಾತ್ರಗಳು ಮತ್ತು ಮುಂಬಯಿ, ಹನೆಹಳ್ಳಿ ಊರುಗಳು ಹಲವು ಮುಖವಾಡ ಧರಿಸಿ ಗೂಢತೆಯನ್ನು ಪ್ರತಿಬಿಂಬಿಸುತ್ತವೆ. ಇಲ್ಲಿರುವ ಪ್ರತಿ ಕಥೆಯು ಮರು ಓದಿಗೆ ಹೆಚ್ಚು ಧಕ್ಕುವಂತವು, ಮತ್ತೆ ಮತ್ತೆ ಕಾಡುವಂತವು… ಚಿತ್ತಾಲತನ ಮುದ್ರೆ ಬಿದ್ದ ಪ್ರತೀ ಕಥೆಯು, ಪಾತ್ರವು ಬೇರೆ ಪ್ರಪಂಚಕ್ಕೆ ಕೊಂಡೊಯ್ಯುತ್ತವೆ.
ನಾನು ಓದಿರುವ ಚಿತ್ತಾಲರ ಒಂದೊಂದು ಕೃತಿಯೂ ಸುಂದರವಾಗಿದೆ, ಅರ್ಥ ಗ್ರಹಿಸಲು ಸ್ವಲ್ಪ ಸಮಯವೂ ಹಿಡಿಸುತ್ತದೆ,ಆದರೆ ಅವರ ಕೃತಿಗಳು ಅರ್ಥವಾದರೆ ನಾವು ಗೆದ್ದ ಹಾಗೆ. ಆದ್ದರಿಂದ ಚಿತ್ತಾಲರ ಕಾದಂಬರಿಗಳು, ಸಮಗ್ರ ಕಥೆಗಳು ತುಂಬಾ ಇಷ್ಟ, ಶಿಕಾರಿ, ಪುರುಷೋತ್ತಮ, ದಿಗಂಬರ ಕಾದಂಬರಿಗಳು ನನಗೆ ಅಚ್ಚುಮೆಚ್ಚು. ಹನೇಹಳ್ಳಿ ಅವರ ಎಲ್ಲಾ ಕಾದಂಬರಿಯಲ್ಲಿ ಕಾಣಿಸಿಕೊಳ್ಳುತ್ತದೆ, ಶಿಕಾರಿಯ ನಾಗನಾಥ್ ಪುರುಷೋತ್ತಮದ ಪುರುಷೋತ್ತಮ, ಮೂರು ದಾರಿಗಳು ಕಾದಂಬರಿಯಲ್ಲಿ ಬರುವ ನಿರ್ಮಲೆ, ಕತೆಯಾದಳು ಹುಡುಗಿಯಲ್ಲಿ ಬರುವ ಜಾನಕಿ, ಕೇಂದ್ರ ವೃತ್ತಾಂತದಲ್ಲಿ ಬರುವ ಅಭಿಜಿತ್, ಛೇದ ದಲ್ಲಿ ಬರುವ ಬೆಹರಾಮ್ ಈ ಎಲ್ಲಾ ಪಾತ್ರಗಳು ನನಗೆ ಇನ್ನೂ ನೆನಪಿವೆ, ಮರೆಯಲು ಸಾಧ್ಯವಿಲ್ಲ, ನಾಗನಾಥ್ ಪಾತ್ರವಂತೂ ನನಗೆ inspiration.
ಆಟ ಇದೊಂದು ವಿಭಿನ್ನವಾದ ಕೃತಿ, ಎಂತಹ ಕಥೆ ಮಾರಾಯರೆ ಓದಿದ ನಂತರ ಮುಂದೇ ಬೇರೇನನ್ನು ಓದಲು ಸಾಧ್ಯವಿಲ್ಲದೆ, ಇಲ್ಲಿ ಬರುವ ನರಸಿಂಹ ಹಾಗು ಬುಡಣಸಾಬರ ಪಾತ್ರಗಳದ್ದೇ ಗುಂಗಿನಲ್ಲಿದ್ದುಬಿಟ್ಟೆ. ಪುರಾಣ ಕಾಲದ ಋಷಿಯಂತೆ, ಪವಾಡಪುರುಷನಂತೆ ಒಬ್ಬೊಬ್ಬರಿಗೆ ಕಾಣುವ ಬುಡಣಸಾಬರಿಗೆ ಹಳ್ಳಿಯ ಪೂರ್ವದಿಕ್ಕಿಗೆ ಮೊಮ್ಮಗನ ಕಾಸೀಮನ ಮನೆ, ಪಶ್ಚಿಮ ದಿಕ್ಕಿಗೆ ಮೊಮ್ಮಗಳ ಫಾತೀಮಳ ಮನೆ. ಪ್ರತಿ ರಾತ್ರಿ ಊಟ ಮುಗಿಸಿದ್ದೇ ಕಾಸೀಮನ ಮನೆಯಿಂದ ಹೊರಟು ಫಾತೀಮಳ ಮನೆಯನ್ನು ಸೇರಿ, ರಾತ್ರಿ ಅಲ್ಲೇ ಕಳೆದು ಮರುದಿನ ಬೆಳಕು ಹರಿಯುವದರೊಳಗೆ ಕಾಸೀಮನ ಮನೆಗೆ ಹೋಗುವುದು ರೂಢಿ. ನಡೆಯುವಾಗ ಇವರ ಕೈಯಲ್ಲಿ ಇವರಿಗಿಂತಲೂ ಎತ್ತರವಾದ ಬಿದಿರಿನ ಕೋಲು, ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಪೇಟೆಯಲ್ಲಿ ತನಗಿರುವ ಪರಿಚಯದ ಅಂಗಡಿಗಳನ್ನು ಹಾಗು ಅಲ್ಲಿ ನಡೆಯುವ ಕೆಲಸಗಳನ್ನು ನೋಡುತ್ತಾ ಒಂದು ಕಡೆಯಿಂದ ಮತ್ತೊಂದು ಕಡೆ ಹೋಗುವಾಗ ಬುಡಣಸಾಬರಿಗೆ ಒಂದು ರೀತಿಯ ಆನಂದ.
ಹೀಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಕಾಶದಲ್ಲಿ ಕವಿದ ಮೋಡಗಳಿಂದಾಗಿ, ಓಣಿಯಲ್ಲಿ ಮುತ್ತಿನಿಂತ ಕತ್ತಲೆಯಲ್ಲಿ ಏನೇನೂ ಕಾಣಿಸದಂತಾಗಿ ದಾರಿ ತಪ್ಪುವುದೇನೊ ಎಂಬ ಯೋಚನೆಯಲ್ಲಿರುವಾಗ ಮಿಂಚಿನ ಅಬ್ಬರಕ್ಕೆ ಭಯವಾಗುತ್ತದೆ. ಹೀಗೆ ನಡೆದುಕೊಂಡು ಹೋಗುವಾಗ ಹಿಂದೆಯಿಂದ ಅಲಲ ಲಲಲ ಎಂದು ಶಬ್ದ ಮಾಡುತ್ತಾ ಬಂದ ವ್ಯಕ್ತಿ ಬುಡಣಸಾಬರ ಪಯಣ ಎತ್ತ ಕಡೆ ? ತಾನು ನಾಗೇಶ, ಪರಶುರಾಮಭಟ್ಟರ ಮಗ, ನರಸಿಂಹ ಆಟವಾಡಲಿಕ್ಕೆ ಕರೆ ಕಳಿಸಿದ್ದಾನೆ, ಅಲ್ಲಿಗೇ ಹೊರಟೆ ಬೇಗ ಬೇಗ ಹೆಜ್ಜೆ ಇಡೀ ಮಳೆ ಬರುವ ಸಾಧ್ಯತೆಯಿದೆ ಎಂದು ಹೇಳಿ ಆಟವಾಡಲು ಹುಮ್ಮಸ್ಸಿನಿಂದ ಹೊರಡುತ್ತಾನೆ.
ಹೀಗೆ ಮುಂದೆ ಸಾಗುವಾಗ ಹುರುಪಿನಿಂದ ಹಾಡಿಕೊಂಡು ಬಂದ ಮಾಧವನು ಬುಡಣಸಾಬರೇ ಮಳೆ ಬರುವ ಸಾಧ್ಯತೆಯುಂಟು ಬೇಗೆ ಹೆಜ್ಜೆ ಹಾಕಿ ಮನೆಗೆ ಸೇರಿಕೊಳ್ಳಿ, ನನ್ನನ್ನು ನರಸಿಂಹ ಆಟವಾಡಲಿಕ್ಕೆ ಕರೆ ಕಳಿಸಿದ್ದಾನೆ, ಅಲ್ಲಿಗೇ ಹೊರಟೆ ಎಂದು ಆತನೂ ಹೊರಡುತ್ತಾನೆ. *ಭೋರ್ ಭೋರ್ ತಂಗಿ - ಭಂಗಾರಕ್ಕನ ತಂಗೀ* ಎಂದು ಹಾಡಿಕೊಂಡು ಬಂದ ಸರ್ವೋತ್ತಮ ಬುಡಣಸಾಬರನ್ನು ಕಂಡು ಹೋ ಹೆಚ್ಚಿನ ಮಳೆ ಬರುವ ಸಾಧ್ಯತೆ ಇದೆ, ಈ ಮಳೆಯಲ್ಲಿ ಹೊರಗೆ ಹೊರಟಿರಾ ಬೇಗ ಮನೆಗೆ ಸೇರಿಕೊಳ್ಳಿ, ನನ್ನನ್ನು ನರಸಿಂಹ ಆಟವಾಡಲಿಕ್ಕೆ ಕರೆ ಕಳಿಸಿದ್ದಾನೆ, ಅಲ್ಲಿಗೇ ಹೊರಟೆ ಎಂದು ಆಟವಾಡಲು ಹುಮ್ಮಸ್ಸಿನಿಂದ ಈತನೂ ಹೊರಡುತ್ತಾನೆ. *ಸೋ ಮಳೆ ಬಂತೋ ಮಳೆರಾಯ ಕೊಡೆ ತಾರೋ* ಎಂದು ಹಾಡಿಕೊಂಡು ಬಂದ ವಿಠ್ಠಳ ಬುಡಣಸಾಬರನ್ನು ಕಂಡು ಮಳೆ ಬರುವ ಸಂಭವವಿದೆ ಜಾಗ್ರತೆ, ನನ್ನನ್ನು ಎನ್ನುವ ಮೊದಲೇ ಬುಡಣಸಾಬರು ನೀನೂ ನರಸಿಂಹನ ಮನೆಗೆ ಆಟವಾಡಲಿಕ್ಕೆ ಹೋಗುತ್ತಿರುವೆ ತಾನೆ ಎಂದು ಕೇಳಿದಾಗ, ಈ ವಿಷಯ ಮುದುಕನಿಗೆ ಹೇಗೆ ತಿಳಿಯಿತಪ್ಪ ಎಂದು ಆಶ್ಚರ್ಯವಾಗುತ್ತದೆ. ಬುಡಣಸಾಬರಿಗೆ ಒಂದು ಕಡೆ ಆಶ್ಚರ್ಯವೋ ಆಶ್ಚರ್ಯ ಈ ವ್ಯಕ್ತಿಗಳು ಬಂದು ಮುದುಕನಾದ ತನಗೆ ಜಾಗ್ರತೆ ಹೇಳಿ ನರಸಿಂಹನ ಮನೆಗೆ ಯಾವ ಆಟವಾಡಲು ಹೊರಟಿದ್ದಾರೆ ಎನ್ನುವುದೇ ಕುತೂಹಲ ಹುಟ್ಟಿಸುತ್ತದೆ.
ನರಸಿಂಹನ ಮನೆಗೆ ಬಂದ ನಾಗೇಶ ಮತ್ತಿತರರು ನರಸಿಂಹ ಆಗಲೇ ಚಾಪೆಯ ಮೇಲಿಟ್ಟ ಇಸ್ಪೀಟು ಎಲೆಗಳಿಗೆ ಕೈ ಹಾಕಿ ಹುರುಪಿನಿಂದ ಆಟವಾಡುತ್ತಾ ಮಾತುಕತೆಯಲ್ಲಿ ತೊಡಗಿದರು. ನರಸಿಂಹನ ಅಜ್ಜಿ ಅಡುಗೆ ಮನೆಯಲ್ಲಿ ನರಸಿಂಹನ ಮಿತ್ರರಿಗೆ ತಿಂಡಿ ಮಾಡುತ್ತಾ ಇವರ ಮಾತುಗಳನ್ನೇ ಕೇಳಿಸಿಕೊಳ್ಳುತ್ತಿದ್ದಳು, ಇವರ ಮಾತುಗಳೆಂದರೆ ಆಕೆಗೆ ತುಂಬಾ ಇಷ್ಟ. ಕೊಟ್ಟಿಗೆಯ ಹತ್ತಿರ ಉದ್ದ ಮೀಸೆ ಬಿಟ್ಟುಕೊಂಡು ಕಂಬಳಿ ಕೊಪ್ಪೆ ಹಾಕಿಕೊಂಡ ಕರಿ ಮನುಷ್ಯನನ್ನು ತಾವೆಲ್ಲರೂ ಬರುವಾಗ ಕಂಡವೆಂದಾಗ ಇವರ ಪುಕ್ಕುಲು ತನಕ್ಕೆ ನರಸಿಂಹನಿಗೆ ನಗು ಬರುತ್ತದೆ. ಸಮಯ ಸರಿದಂತೆ ಹೊರಗೆ ಮಳೆ ಒಳಗೆ ಇಸ್ಪೀಟಿನ ಆಟ ಎರಡೂ ರಂಗವೇರಿತ್ತು.
ಇತ್ತ ಬೆಳಗಿನ ಜಾವದಲ್ಲಿ ಕಂಡ ಕೆಟ್ಟ ಕನಸಿನಿಂದ ಎಚ್ಚೆತ್ತ ಬುಡಣಸಾಬರು ಗಾಬರಿಯಲ್ಲಿ ಪ್ರಾರ್ಥನೆಯನ್ನೂ ಸಲ್ಲಿಸದೆ ಕಾಸೀಮನ ಮನೆಗೆ ಹೊರಡಲು ಸಿದ್ಧವಾದಾಗ ಫಾತಿಮನಿಗೆ ಗಾಬರಿಯಾಗುತ್ತದೆ, ಅಜ್ಜನಿಗೆ ಬಂದ ಕನಸು ಅಷ್ಟು ಕೆಟ್ಟದ್ದೋ? ಅದು ನಿಜವಿರಲೂ ಬಹುದೆಂದು ಹೇಗಾದರೂ ಆಗಲಿ ಆಕೆಯ ಗಂಡ ಉಸ್ಮಾನನನ್ನು ಜೊತೆಗೆ ಕಳುಹಿಸಿಕೊಡುತ್ತಾಳೆ. ಬೇಗ ಬೇಗ ಹೆಜ್ಜೆ ಇಡುತ್ತಾ ನರಸಿಂಹನ ಮನೆಯ ಮುಂದೆ ಹೋಗುತ್ತಿದ್ದಾಗ ಜನವೋ ಜನ, ಇಷ್ಟೆಲ್ಲಾ ಜನರು ಆಟಕ್ಕೆ ಬಂದಿದ್ದರೇ?ಆಟಕ್ಕಲ್ಲಾ ನರಸಿಂಹನನ್ನು ಕಡೆಯದಾಗಿ ನೋಡಲು ಜನ ಸೇರಿರುತ್ತಾರೆ . ಜೈಶ್ರೀರಾಮ್ ಎಂದು ಕುಗಿಕೊಳ್ಳುತ್ತಾ ಹಿಂದಿನ ದಿನ ತನ್ನನ್ನು ಮಾತನಾಡಿಸಿದ ವ್ಯಕ್ತಿಗಳ ಹೆಗಲ ಮೇಲೆ ಒಂದು ಹೆಣ, ನರಸಿಂಹನ ಮನೆಯಿಂದ ಕೇಳಿ ಬಂದ ಆಕ್ರಂದನ ಕರುಳು ಕಿವುಚಿದಂತಾಗುತ್ತದೆ, ನಸುಕಿನಲ್ಲಿ ಬಂದ ಕನಸು ನಿಜವಾದದ್ದನ್ನು ನೆನೆದು ಕಣ್ಣೀರು ಸುರಿಸುತ್ತಾರೆ, ಇದೆಲವೂ ದೇವರದೇ ಆಟ, ಆಟವಾಡಲು ಸೇರಿದ ಹುಡುಗರಲ್ಲಿ ನರಸಿಂಹನಿಗೆ ದೇವರು ಬೇರೆ ಆಟವನ್ನೇ ಬಯಸಿದ್ದ.
ಸಂಜೆ ಕೊಟ್ಟಿಗೆಯಲ್ಲಿ ಅಟ್ಟದ ಮೇಲಿನಿಂದ ಹುಲ್ಲನ್ನು ಇಳಿಸುವಾಗ ಇಲಿ ಕಚ್ಚಿತೆಂದು ತಿಳಿದು ಗಾಯಕ್ಕೆ ಸುಣ್ಣ ಹಾಕಿಕೊಂಡ ನರಸಿಂಹನಿಗೆ ಕಚ್ಚಿದ್ದು ಇಲಿಯಲ್ಲ, ಕಚ್ಚಿದ್ದು ಹಾವು ಎಂದು ಆತನ ಹೆಪ್ಪು ಗಟ್ಟಿದ ಬೆರಳನ್ನು ನೋಡಿದಾಗಲೇ ಅಜ್ಜಿಗೆ ಗೊತ್ತಾಗಿದ್ದು, ತಿಳಿಯುವ ಹೊತ್ತಿಗೆ ಕಾಲ ಮೀರಿಹೋಗಿತ್ತು. ಈ ವಿಷಯ ತಿಳಿದು ಬುಡಣಸಾಬರಿಗೆ ಮಾತೇ ಹೊರಡಲಿಲ್ಲ, ಹಿಂದಿನ ಸಂಜೆಯಿಂದ ಅನುಭವಿಸಿದ್ದು, ದಾರಿಯಲ್ಲಿ ಗಮನ ಸೆಳದದ್ದು, ನೆನಪು ಕೆರಳಿಸಿದ್ದು, ಕಂಡಂತೆ ಕಾಣದಂತೆ ಭಾಸವಾದದ್ದು, ಮಳೆ ಬಿದ್ದದ್ದು, ಆಟವಾಡಲು ಹೊರಟ ಹುಡುಗರನ್ನು ಮಾತನಾಡಿಸಿದ್ದು ಎಲ್ಲವೂ ನೆನಪಾಗಿ ಮೈ ಜುಮ್ಮೆನ್ನುತ್ತದೆ. ಗೆಳೆಯರನ್ನು ಆಟಕ್ಕೆಂದು ಕರೆದ ನರಸಿಂಹನು ಇನ್ಯಾವುದೋ ಆಟದಲ್ಲಿ ತನ್ನ ಜೀವನ ಕಳೆದುಕೊಂಡದ್ದು ಬುಡಣಸಾಬರಿಗೆ ಆಕಾಶವೇ ಕಳಚಿ ಬೀಳುವಂತಾಗುತ್ತದೆ.