Jump to ratings and reviews
Rate this book

ಸಸ್ಯ ಸಗ್ಗ | Sasya Sagga

Rate this book
ತಮ್ಮ ಅನುಭವದ ಪರಿಧಿಗೆ ಬಂದಿರುವ ಸಸ್ಯಶಾಸ್ತ್ರದ ವಿಸ್ಮಯಕಾರಿ ಸಂಗತಿಗಳನ್ನು ಲೇಖಕರು ಈ ಕೃತಿಯಲ್ಲಿ ಪರಿಚಯಿಸಿದ್ದಾರೆ. ಲೇಖಕ ಕೆ.ಎನ್. ಗಣೇಶಯ್ಯ ಅವರು ಸಸ್ಯಶಾಸ್ತ್ರದ ವಿಜ್ಞಾನಿ. ನಾಲ್ಕು ದಶಕಗಳ ಸಸ್ಯ ಸಂಶೋಧನೆಯಲ್ಲಿ ಅವರು ಕಂಡ ಸಸ್ಯ ಜಗತ್ತಿನ ಸೋಜಿಗಗಳನ್ನು ಸಾಹಿತ್ಯ ರೂಪಕ್ಕಿಳಿಸಿದ್ದಾರೆ. ತಮ್ಮ ಸಂಶೋಧನೆಯ ವಿವಿಧ ಆಯಾಮ ಗಳನ್ನು ವೃತ್ತಿ ಜೀವನದ ಕಥನದೊಂದಿಗೆ ಮೇಳೈಸಿ ರಚಿಸಿರುವ ಈ ವಿಶಿಷ್ಟ ಕೃತಿ ಕನ್ನಡಕ್ಕೆ ಮತ್ತೊಂದು 'ಹಸಿರು ಹೊನ್ನು’ ತಂದುಕೊಟ್ಟಿದೆ.

376 pages, Paperback

First published January 1, 2019

3 people are currently reading
48 people want to read

About the author

K.N. Ganeshaiah

44 books167 followers
Dr. K.N. Ganeshaiah is an agricultural scientist and professor at the University of Agricultural Sciences, Bangalore. He is also a novelist specializing in thrillers, and writes in the Kannada language.

Education:
Ph. D. University of Agricultural Sciences, Bangalore, India, l983
M.Sc. (Agri.) in Genetics & Plant Breeding, UAS, Bangalore, l979
B.Sc (Agri.), University of Agricultural Sciences, Bangalore, l976.

Prof Ganeshaiah has pioneered a new style of writing novels and short stories in Kannada that seamlessly mixes facts and fiction in the form of thrillers. Through this style, his writings have captured a new generation of readers in Kannada contributing to the growth of story writing in Kannada.

Though an agriculture scientist, his novels and stories bring to the reader, the lesser-known and hidden facts of history along with science. Some of
his novels are also aimed at bringing the most complicated elements of science to the general reader.

Recognizing the novelty in the style of writing, he was awarded Kannada Sahitya Academy Datti Award for his novel Kanaka Musuku, which combines both history and science. As some experts have inferred, his thrillers have drawn a large number of new readers to Kannada.

In recognition of his novel contribution to Kannada Literature, Prof Ganeshaiah has also been honored with the Honorary President of Kolar District Sahitya Parishat during 2013

Prof Ganeshaiah has written Nine novels, and 41 short/long stories (in eight collections) and over 63 essays in the areas related Science and Society. His recent book Sasya Sagga on the wonders of plant life as told through his own journey in the field of botany and evolution has attracted your readers. Several of his novels and stories were serialized in Kannada Weekly Magazines

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
18 (69%)
4 stars
7 (26%)
3 stars
1 (3%)
2 stars
0 (0%)
1 star
0 (0%)
Displaying 1 - 10 of 10 reviews
180 reviews22 followers
January 29, 2026
#ಪರಿಚಯ_೪_೨೦೨೬
ಕೃತಿ: ಸಸ್ಯ ಸಗ್ಗ
ಲೇಖಕರು: ಕೆ.ಎನ್.ಗಣೇಶಯ್ಯ
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು

ಏನು ಹೇಳುವುದು ಈ ಪುಸ್ತಕದ ಬಗ್ಗೆ... ಸಸ್ಯಲೋಕದ ವಿಸ್ಮಯಗಳನ್ನು ತಿಳಿಸುವ ಅಪರೂಪದ ಕೃತಿಯೆಂದೋ? ದೈನಂದಿನ ವಹಿವಾಟುಗಳಲ್ಲಿ ಕಾಣುವ ವಿಚಾರಗಳನ್ನು ಬೆಂಬತ್ತಿದ ವಿಜ್ಞಾನಿಗಳ ಶ್ರದ್ಧೆ ಏಕಾಗ್ರತೆಗಳ ಫಲದಿಂದ ವಿಶ್ವವೇ ತಿರುಗಿ ನೋಡುವಂತೆ ಮಾಡಿದ ಸಂಶೋಧನಾ ಗ್ರಂಥವೆಂದೋ? ಸಾಮಾನ್ಯವಾಗಿ ಕಾಣಬಹುದಾದ ಘಟನೆಗಳನ್ನು, ಸನ್ನಿವೇಶಗಳನ್ನು ಒಂದು ಚೂರು ಕುತೂಹಲದಿಂದ ಕೆದಕಿ ಕೆದಕಿ ಆಳಕ್ಕಿಳಿದಾಗ ಎದುರಾದ ಪ್ರಕೃತಿಯ ವಿಸ್ಮಯಗಳನ್ನು ಭೇದಿಸಿದ ಕೃತಿಯೆಂದೋ? ಅಥವಾ ನಮ್ಮ ಪಾಲಿನ ಕೆಲಸಗಳನ್ನು ತನ್ಮಯತೆಯಿಂದ ಮಾಡುತ್ತಾ ಹೋದಂತೆ ಸಿಗಬಹುದಾದ ಫಲಿತಾಂಶವನ್ನು ತೆರೆದಿಟ್ಟ ಕೃತಿಯೆಂದೋ? ಯಾವುದೇ ಒಂದು ಎಂದು ನಿರ್ಧರಿಸುವಲ್ಲಿ ಮತ್ತೊಂದು ಪ್ರಶ್ನೆ ಎದುರಾಗಿ ನನ್ನನ್ನೇಕೆ ಬಿಟ್ಟೆ ಎಂದು ಕೇಳುತ್ತದೆ.‌ ಎಷ್ಟೆಂದರೂ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ ಫಲಶ್ರುತಿಯಾಗಿ ಪ್ರಕೃತಿಯ ಅನೇಕ ಸೋಜಿಗಗಳನ್ನು ನಮ್ಮೆದುರು ತೆರೆದಿಡುವ ಕೃತಿಯಲ್ಲವೇ.

ನಾನು ಗಣೇಶಯ್ಯನವರ ಅನೇಕ ಪುಸ್ತಕಗಳನ್ನು ಓದಿರುವೆ. ಅದರಲ್ಲಿ ಇದು ನನಗೆ ಅತ್ಯಂತ ಮನಸ್ಸಿಗೆ ನಾಟಿದ ಪುಸ್ತಕ. ಸಸ್ಯಲೋಕದ ಅಚ್ಚರಿಗಳನ್ನು ಬಹಳ ಸರಳವಾಗಿ ವಿವರಿಸಿದ್ದಾರೆ. ಉದಾಹರಣೆಗೆ ಸಸ್ಯಗಳಲ್ಲಿ ಸ್ವಯಂವರ(sexual selection and Female choice),ದಾಯಾದಿ ಕಲಹ ಮತ್ತು ತಾಯಿ ಮಕ್ಕಳ ಕಲಹ(Sibling rivalry and Parent Offspring Conflict) ಎಂಬ ಸಾಮಾನ್ಯವಾಗಿ ನಾವು ಊಹಿಸಲೂ ಸಾಧ್ಯವಿಲ್ಲದಂತಹ ಮಾಹಿತಿಗಳು ಇದರಲ್ಲಿವೆ. ಅಂದಮಾತ್ರಕ್ಕೆ ಇವು ಕೇವಲ ಸಸ್ಯಶಾಸ್ತ್ರೀಯ ಅಭ್ಯಾಸ ಮಾಡುವವರಿಗೆ ಮಾತ್ರ ಅಲ್ಲ, ಸಾಮಾನ್ಯವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಬರೆಯಲ್ಪಟ್ಟಿದೆ. ಇನ್ನು ಇರುವೆಗಳಲ್ಲಿ ಕಂಡು ಬರುವ ಶಿಸ್ತು, ಕೀಟಗಳ ಪ್ರಪಂಚದಲ್ಲಿ ನಡೆಯುವ ಸಹ ಜೀವನ, ಅಶ್ವಥ ವೃಕ್ಷಗಳು ಮತ್ತು ಕಣಜಗಳ ನಡುವೆ ನಡೆಯುವ ಹೊಂದಾಣಿಕೆಯ ಜೀವನಚಕ್ರದ ಮಾಹಿತಿಗಳಿವೆ. ಇನ್ನು ಲೇಖಕರು ಕೈಗೊಂಡ ಅತ್ಯಂತ ದೊಡ್ಡ ಸಂಶೋಧನೆಯಾದ ಪಶ್ಚಿಮ ಘಟ್ಟಗಳಲ್ಲಿನ ಸಸ್ಯಸಂಕುಲಗಳ ಸಮೀಕ್ಷೆಯ ವಿವರಗಳನ್ನು ಓದುವಾಗ “ಅಯ್ಯೋ ಎಂತಹಾ ಮಹಾನ್ ವಿಜ್ಞಾನಿಯೊಬ್ಬರು ನಮ್ಮ ನಡುವೆ ಇದ್ದಾರಲ್ಲ” ಎಂದು ಸಖೇದಾಶ್ಚರ್ಯವಾಯಿತು. ಪಶ್ಚಿಮ ಘಟ್ಟಗಳ ಆಮೂಲಾಗ್ರ ಸಮೀಕ್ಷೆಯಿಂದ ಪ್ರೇರಿತವಾಗಿ ಇಡೀ ದೇಶದಲ್ಲಿ ಇಂತಹ ಹಲವು ಭಾಗಗಳಲ್ಲಿ ಅವರದ್ದೇ ನೇತೃತ್ವದಲ್ಲಿ ನಡೆದದ್ದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಈ ಯೋಜನೆ ಕಾರಣಾಂತರಗಳಿಂದ ನೆನೆಗುದಿಗೆ ಹೋಗುವ ಸಂದರ್ಭದಲ್ಲಿ ಅವರು ತೆಗೆದುಕೊಂಡ ಸಮಯೋಚಿತ ಮತ್ತು ತ್ವರಿತಗತಿಯ ನಿರ್ಧಾರಗಳು ಎಲ್ಲಾ ಅಡೆತಡೆಗಳನ್ನು ಮೀರಿ ನಿಂತದ್ದು ಅನೇಕ ಯುವ ವಿಜ್ಞಾನಿಗಳಿಗೆ ದಾರಿದೀಪದಂತಿದೆ.

ಶೈಕ್ಷಣಿಕ ಅರ್ಹತೆಗಳು ಏನೇ ಇರಲಿ ಅಥವಾ ನಮ್ಮ ಶೈಕ್ಷಣಿಕ ವಿಭಾಗಗಳು ಬೇರೆಯವೇ ಆಗಿದ್ದರೂ, ಆಸಕ್ತಿಯಿರುವ ಕ್ಷೇತ್ರದಲ್ಲಿ ಸ್ವಲ್ಪ ಪರಿಶ್ರಮವನ್ನು ಹಾಕಿದರೆ ಮನುಕುಲಕ್ಕೆ ಸಹಾಯಕವಾಗುವ ಹೊಸತೊಂದು ವಿಷಯವನ್ನು ಪ್ರಸ್ತುತಪಡಿಸಬಹುದು ಎಂದು ಲೇಖಕರು ಅವರ ಪತ್ನಿಯೊಡಗೂಡಿ ನಡೆಸಿದ ಹಲವಾರು ಸಂಶೋಧನೆಗಳ ಮೂಲಕ ಸಾಬೀತಾಗುತ್ತದೆ. ಇದರ ಜೊತೆಗೆ ಸಂಶೋಧನೆಗಳಿಗೆ ಬೇಕಾದ ಮನಸ್ಥಿತಿ, ಸಂಶೋಧಕರಗಿರಬೇಕಾದ ಮನಸ್ಥಿತಿ ತಾಳ್ಮೆ, ಸಂಶೋಧನೆ ಎಂದರೇನು, ಸಂಶೋಝನೆಯ ವಿಧಾನಗಳು ಯಾವುವು, ಒಬ್ಬ ಸಂಶೋಧನಕಾರನಿಗೆ ಬೆಳೆಯಲು ಮತ್ತು ಬೀಳಲು ಯಾವ ಸಂದರ್ಭಗಳು ಎದುರಾಗುತ್ತವೆ, ಈ ಎರಡೂ ಸಂದರ್ಭಗಳಲ್ಲಿ ಚತುರತೆಯಿಂದ ವ್ಯವಹರಿಸಿ ಸೃಜನಶೀಲತೆಯನ್ನು ಕಾಯ್ದುಕೊಳ್ಳಲು ಇರುವ ಮಾರ್ಗೋಪಾಯಗಳು ಏನು ಎನ್ನುವುದನ್ನು ಕೃತಿಯು ತಿಳಿಸಿಕೊಡುತ್ತದೆ.

ಈ ಪುಸ್ತಕವು ಯಾರು ಬೇಕಾದರೂ ಓದಬಹುದು, ಆದರೆ ಹೈಸ್ಕೂಲು ಅಥವಾ ಪಿಯುಸಿಯಲ್ಲಿ ಓದುತ್ತಿರುವ ಮಕ್ಕಳಿಗೆ ಓದಿಸಿದರೆ ಅವರು ತಮ್ಮ ಯೋಚನಾ ಲಹರಿಗಳನ್ನು ತಿದ್ದಿಕೊಳ್ಳಲು ಸಹಾಯಕವಾಗಬಹುದು.

ನಮಸ್ಕಾರ,
ಅಮಿತ್ ಕಾಮತ್
Profile Image for Abhiram's  Book Olavu.
113 reviews4 followers
August 6, 2025
ಜಗತ್ತು ಒಂದು ಕೌತುಕದಾಗರ! ಈ ಜೀವ ವೈವಿಧ್ಯ, ಬೆಟ್ಟ ಬಯಲು, ಸಾಗರ ತರಂಗಿಣಿ, ವರ್ಣರಂಜಿತ ಆಗಸವನ್ನೆಲ್ಲಾ ನೋಡಿದಾಗ‌ 'ಆಹಾs ಏನ್ಭುತ?!' ಅಂತ ಅನ್ನಿಸಿದೆ ಇರುವುದೇ? ನನಗಂತೂ ಈ ಸಮಸ್ತ ಸೃಷ್ಟಿಯ ಹಿಂದಿರುವ ಪರಬ್ರಹ್ಮನ ಶಕ್ತಿ ಎಷ್ಟು ಅಗಣಿತ, ಅಪ್ರಮೇಯ ಹಾಗೂ ಊಹಾತೀತ ಅಂತ ಅನ್ನಿಸಿಬಿಡುವುದು! ಇನ್ನೂ ಈ ಸೃಷ್ಟಿಯ ಬಗೆಗೆ ಮಾನವನ ಅರಿವಿಗೆ ಬಂದಿರುವ ತಿಳುವಳಿಕೆ ಎಷ್ಟು ಅಲ್ಪ ಅಲ್ಲವೇ? ಇಷ್ಟೆಲ್ಲಾ ಪೀಠಿಕೆ ಇಲ್ಲಿ ಬೇಡವಾದರೂ ಕೌತುಕದ ಬಗೆಗೆ ಹೇಳಲು ಅದು ಅವಶ್ಯಕ ಅನ್ನಿಸುವುದು. ಜಗತ್ತಿನ ಬಗ್ಗೆ ಕೌತುಕವಿಲ್ಲದೆಯೇ ಮಾನವನ ಸಮಾಜ ವಿಕಾಸಗೊಳ್ಳದೆಯೆ ಇಲ್ಲಿಯವರೆಗೆ ಬಂದು ನಿಲ್ಲುತ್ತಿರಲಿಲ್ಲ!

ಗಣೇಶಯ್ಯನವರು ತಮ್ಮ ವೃತ್ತಿ ಬದುಕಿನ ವೃತ್ತಾಂತವನ್ನು ತಂಬ ರಂಜನಾತ್ಮಕವಾಗಿಯೂ ಸಂಕ್ಷಿಪ್ತವಾಗಿಯೂ ಈ ಪುಸ್ತಕ ರಚಿಸಿದ್ದಾರೆ.‌ ವೃತ್ತಿ ಜೀವನವಷ್ಟೇ ಅಲ್ಲ, ಅವರ ಶಿಕ್ಷಣದ ದಿನಗಳು, ಮಿತ್ರರ ಒಡನಾಟ, ಪ್ರಣಯ ರಾಗ, ಶಿಷ್ಯ ಸಂಘ, ಕಾಫಿ ಸಮಯದ ಚರ್ಚಾಕೂಟ, ಹೀಗೆ ಅವರ ಜೀವನದ ಹಲವು ಮಜಲುಗಳನ್ನೂ ಒಳಗೊಂಡಿದೆ; ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಇವು ಅವರ ಸಂಶೋಧನಾ ಬದುಕಿಗೆ ಪೂರಕವಾಗಿದೆ ಕೂಡ. ವಿವಿಧ ವಿಷಯಗಳ ಸತ್ಯಾನ್ವೇಷಣೆಯಲ್ಲಿ ಅವರ ತಂಡ ನಿರಂತರ ತೊಡಗಿರುವರು. ಜೀವವಿಕಾಸ, ಸಸ್ಯಶಾಸ್ತ್ರ ಕೀಟಶಾಸ್ತ್ರ, ಪಶು ವಿಜ್ಞಾನ, ತಂತ್ರಜ್ಞಾನ, ಚರಿತ್ರೆ, ಸಂಗೀತ, ಒಂದೇ ಎರಡೇ? ಗಣೇಶಯ್ಯನವರ team outshine ಆಗುವುದೇ ಈ ವಿಚಾರದಲ್ಲಿ. ತಾವು ಕೈಗೊಂಡ ಸಂಶೋಧನೆಯಲ್ಲಿ ತೋರುವ ಚಾಕುಚಕ್ಯತೆ ಹಾಗೂ ಕಾರ್ಯಪಟುತ್ವ ನಿಜಕ್ಕೂ ಶ್ಲಾಘನೀಯ!

Original research from South Asia ಅಂದರೆ ಮೂಗು ಮುರಿಯುತಿದ್ದ, ಅಸಡ್ಡೆ ತಿರಸ್ಕಾರದಿಂದ ಕಾಣುತ್ತಿದ್ದ (ಈಗಲೂ ಅದೇ ದಾಸ್ಯವೆ ಸಾಗುತ್ತಾ ಇರುವುದು ವಿಪರ್ಯಾಸ!) ಪಾಶ್ಚಾತ್ಯರ ಮುಂದು ವಿಶ್ವಾಸದಿಂದ ತಮ್ಮ ಎಷ್ಟೋ ಸಂಶೋಧನೆಗಳನ್ನ ಮಂಡಿಸಿರುವರು ಮತ್ತು ಪ್ರಕಟಿಸಿರುವರು. ಅವರ ಸಾಗಿಬಂದ ಹಾದಿ ಸುಖಕರವಾಗಿಯೇನು ಇರಲಿಲ್ಲ. ಒಂದೆಡೆ ಸೌಲಭ್ಯಗಳ ಕೊರತೆ (ಈಗಿನ ತಂತ್ರಜ್ಞಾನ ಕಳೆದ ದಶಕದಲ್ಲಿ ಎಲ್ಲಿತು?), ಇನ್ನೊಂದೆಡೆ ಸಹೋದ್ಯೋಗಿಗಳ ಮತ್ಸರ ಹಾಗೂ ಉಪಟಳ, ಮತ್ತೊಂದೆಡೆ ಪಾಶ್ಚಾತ್ಯರ ಕುತಂತ್ರ, ಮಗದೊಂದೆಡೆ ಭ್ರಷ್ಟ ವ್ಯವಸ್ಥೆ ಹಾಗೂ ರಾಜಕೀಯ; ಒಂದೇ ಎರಡೇ? ಆದರೆ ಇದನ್ನೆಲ್ಲ ಮೆಟ್ಟಿನಿಂತು ತಮ್ಮ ಕೆಲಸವನ್ನು ನಿರಂತರವಾಗಿ ಮಾಡಿರುವರು; ಅವರ ತಂಡದ ಛಲ ಮತ್ತು ಅರಿವಿನ ಹಸಿವು ಎಲ್ಲರಿಗೂ ಸ್ಫೂರ್ತಿದಾಯಕ ಕೂಡ. ಪರವಿರೊಧಗಳ ನಡುವೆಯೂ ಅವರು ಪಶ್ಚಿಮ ಘಟ್ಟದಲ್ಲಿನ ಸಸ್ಯವರ್ಗದ census ಮಾಡುವಲ್ಲಿ ಶ್ರಮಿಸಿರುವುದು ನನಗೆ ತುಂಬ ಹೆಮ್ಮೆಯೆನ್ನಿಸಿತು!

ಹೇಳುತ್ತಾ ಹೋದರೆ ಇನ್ನು ಇದೆ, ಆದರೆ ಈ ಪೋಸ್ಟಿಗೆ ಇಷ್ಟು ಸಾಕು! ಒಟ್ಟಿನಲ್ಲಿ 'ಆಡು ಮುಟ್ಟದ ಸೊಪ್ಪಿಲ್ಲ' ಅನ್ನುವ ಹಾಗೆ ಗಣೇಶಯ್ಯ ಅವರು ಮುಟ್ಟದ ವಿಷಯವಿಲ್ಲ! Truly he's our GOAT!
Profile Image for Prashanth Bhat.
2,192 reviews143 followers
January 11, 2020
ಸಸ್ಯ ಸಗ್ಗ - ಡಾ.ಕೆ‌.ಎನ್‌.ಗಣೇಶಯ್ಯ
ಅಂಕಿತ ಪ್ರಕಾಶನ
ಮೊದಲ ಮುದ್ರಣ -2019
ಪುಟ 376
ಬೆಲೆ - 350

ನಾನು ಗಣೇಶಯ್ಯನವರ ಪ್ರಕಟಿತ ಎಲ್ಲಾ ಕೃತಿಗಳ ಓದಿರುವೆ. ಅವರ ಪ್ರತೀ ಪುಸ್ತಕವೂ ಹೊಸದೊಂದು ಮಾಹಿತಿಯನ್ನು ನಮಗೆ ಉಣಬಡಿಸುತ್ತದೆ. ಚರಿತ್ರೆಯಲ್ಲಿ ಮರೆದ ಸರಿದ ರಹಸ್ಯವೊಂದು ಡಾನ್‌ ಬ್ರೌನ್ ಶೈಲಿಯ ರೋಚಕ ಕತೆಯಾಗಿ ನಮ್ಮ ಮುಂದೆ ತೆರೆದುಕೊಳ್ಳುವ ಶೈಲಿಯ ಬರವಣಿಗೆ ಅವರದ್ದು. ಕನ್ನಡದ ಮಟ್ಟಿಗೆ ಅನನ್ಯ.

ಈ ಪುಸ್ತಕ ನನ್ನನ್ನು ಆವರಿಸಿಕೊಂಡದ್ದು ಮಾತ್ರ ಆಶ್ಚರ್ಯ. ಸಸ್ಯಶಾಸ್ತ್ರ ನಮಗೆಲ್ಲ ಕಷ್ಟದ ವಿಷಯ. ಅಂತಹದ್ದರಲ್ಲಿ ಎರಡೇ ಎರಡು ದಿನದಲ್ಲಿ ಓದಿ ಮುಗಿಸುವಷ್ಟು ಒಳ್ಳೆಯ ಓದು ಕೊಟ್ಟ ಪುಸ್ತಕ ಇದು.
ಸಸ್ಯಗಳ ಜೊತೆಗಿನ ತಮ್ಮ ಸಂಶೋಧನೆ,ಜೊತೆಗೊಂದಿಷ್ಟು ವೈಯಕ್ತಿಕ ವಿವರಗಳು, ಹಾಗೆಯೇ ವಿಜ್ಞಾನಿಯಾಗಿ ಎದುರಿಸಿದ ಸಮಸ್ಯೆಗಳು,ಸಂಶೋಧನೆಯ ಹಾದಿ, ನಿರೀಕ್ಷಣಾ ವಿಧಾನ ಇವೆಲ್ಲವನ್ನೂ ಎಲ್ಲೂ ಬೋರಾಗದಂತೆ ನಿರೂಪಿಸಿದ್ದು ನನಗೆ ಬಹಳ ಇಷ್ಟವಾಯಿತು.
ಸಸ್ಯಗಳಲ್ಲೂ ಸೋದರ ಕಲಹ ಇದೆ,ಸ್ವಾರ್ಥ ಬುದ್ಧಿ ಇದೆ ಎಂದು ತೋರಿಸಿಕೊಟ್ಟ ಬಗೆ, ಕೀಟಗಳ ಬಳಸಿ ಹೇಗೆ ಬೀಜ ಪ್ರಸರಣ‌ ಮಾಡುತ್ತವೆ ಎಂಬುದರ ಸಚಿತ್ರ ವಿವರಣೆ, ಅಶ್ವತ್ಥ ಮರ ಯಾಕೆ ಪ್ರಕೃತಿಯ ಸಮತೋಲನ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂಬ ವಿವರಣೆ, ಸಸ್ಯಗಳಲ್ಲಿ ನಡೆವ ತಾಯಿ ಮಕ್ಕಳ ಕಾದಾಟ ಒಂದೇ ಎರಡೇ!

ನಮ್ಮ ಸುತ್ತಮುತ್ತಲಿನ ನಮಗೇ ಗೊತ್ತಿಲ್ಲದ ಹೊಸ ಜಗತ್ತೊಂದರ ಪರಿಚಯ ಇದು.

ಇದನ್ನು ಮರೆಯದೆ ಓದಿ. ಒಂದೇ ಒಂದು ವಿನಂತಿ ಎಂದರೆ ನಿಮ್ಮ ಮನೆಯಲ್ಲಿ ಹೈಸ್ಕೂಲ್ ಓದುವ ಹುಡುಗರಿದ್ದರೆ ಅವರಿಗೆ ಇದನ್ನು ಕೊಟ್ಟು ಓದಿಸಿ. ಹೊಸದೊಂದು ಕಲಿಕೆಯ ಹಾದಿ ಅವರ ಮುಂದೆ ತೆರೆದುಕೊಳ್ಳುತ್ತದೆ.

ಈ ಪುಸ್ತಕ ಮಾತ್�� ಮರೆಯದೆ ಓದಿ. ಗಣೇಶಯ್ಯನವರ ಉಳಿದ ಕೃತಿಗಳಿಗಿಂತ ಇದು ಭಿನ್ನ. ಬಿ.ಜಿ.ಎಲ್. ಸ್ವಾಮಿಯವರ 'ಹಸಿರು ಹೊನ್ನು ' ನಂತರ ಅದಕ್ಕಿಂತ ಆಳವಾದ ವಿಷಯ ವೈವಿಧ್ಯದ ಕೃತಿ ಇದು. ಕನ್ನಡದಲ್ಲಿ ಇಂತಹ ಕೃತಿ ಬಂದದ್ದು ನಮ್ಮ‌ ಅದೃಷ್ಟ.
Profile Image for Nayaz Riyazulla.
434 reviews93 followers
February 9, 2020
ನಾನು ಕೃಷಿ ಪದವೀಧರನೆ ಆಗಿರುವದರಿಂದನೋ ಅಥವಾ ಗಣೇಶಯ್ಯ ಮತ್ತು ಉಮಾಶಂಕರ್ ನನ್ನ ಅಧ್ಯಾಪಕರಾಗಿದ್ದರಿಂದಲೋ ಅಥವಾ ನಾನು ದಿನವು ಇಂತ ಕೌತಕಗಳನ್ನು ನೋಡುವದರಿಂದಲೋ ಈ ಕೃತಿ ಬಹಳ ಹಿಡಿಸಿತು.... B G L ಸ್ವಾಮಿರ ಹಸಿರ ಹೊನ್ನು ಇದಕ್ಕೂ ಸಾಮ್ಯತೆ ಇಲ್ಲ, ಅಲ್ಲಿ ಸಸ್ಯದ botany ತಿಳಿಹಾಸ್ಯದ ರೂಪದಲ್ಲಿ ಉಣಿಸಿದರೆ... ಇಲ್ಲಿ ಸಸ್ಯದ ಭಿನ್ನ, ತೋರದೆ ಇರುವ ಅದರ ನಡುವಳಿಕೆಗಳನ್ನು ಸುಲಭ ರೀತಿಯಲ್ಲಿ ತಮ್ಮದೇ ಥ್ರಿಲ್ಲರ್ ಶೈಲಿಯಲ್ಲಿ ಹೇಳಿದ್ದಾರೆ.... ಹೌದು ಅವರೇ ಹೇಳಿರುವಂತೆ ನಮ್ಮ ವಿಶ್ವವಿದ್ಯಾಲಯದಲ್ಲಿ ಅವರ ವಿರುದ್ಧ ಒಂದು ಆಪಾದನೆ ಇತ್ತು... ಗಣೇಶಯ್ಯರ ಸಂಶೋಧನೆಗಳು ರೈತರ ಒಳಿತಿಗೆ ಸಹಾಯ ಮಾಡುವುದಿಲ್ಲವೆಂದು, ಆದರೆ ಅವರು ಅದಕ್ಕೆ ತಲೆ ಕೆಡಿಸಿಕೊಳ್ಳದೆ ಆನೆ ನೆಡದದ್ದೇ ದಾರಿ ಎಂಬಂತೆ ಬಾಳಿದರು... ಸಂಶೋಧನೆ ಮಾಡಿ ಅದನ್ನು ವಿಸ್ತರಿಸಬೇಕೆಂದು ನಂಬಿದವರು.... ಇಂಥ ಕೃತಿಗಳು ಕನ್ನಡಕೆ ಅಪರೂಪ ಮತ್ತು ಅತ್ಯಗತ್ಯ... ತೇಜಸ್ವಿರ ನಂತರ ಈ ಕೃತಿಗಳ ಪರ್ವ ನಿಂತೆ ಹೋಗಿತ್ತು, ಗಣೇಶಯ್ಯರಿಂದ ಮುಂದುವರೆಯಲಿ ಎಂದು ಆಶಿಸುತ್ತೇನೆ....
Profile Image for Srikanth.
239 reviews
November 22, 2021
ಈ ಪುಸ್ತಕ ಗಣೇಶಯ್ಯ ಹಾಗು ಅವರ ಸಹೋದ್ಯೋಗಿಗಳು ಸಸ್ಯಗಳ ಬಗ್ಗೆ, ಕೀಟಗಳ ಬಗ್ಗೆ ಹಾಗು ಇನ್ನಿತರ ವಿಜ್ಞಾನದ ವಿಷಯಗಳ ಕುರಿತು ನಡೆಸಿದ ಅಧ್ಯಯನಗಳ ಸಂಗ್ರಹ ಎನ್ನಬಹುದು. ವಿಶೇಷವೆಂದರೆ ಈ ಅಧ್ಯಯನಗಳು ಹುಟ್ಟಿಕೊಂಡ ಬಗೆಯನ್ನೂ ಬಹಳ ಕುತೂಹಲಕಾರಿಯಾಗಿಯೇ ತಮ್ಮ ಕಾದಂಬರಿಗಳನ್ನು ಬರೆಯುವ ಶೈಲಿಯಲ್ಲೇ ವಿವರಿಸಿದ್ದಾರೆ.
Profile Image for Sindhu.
27 reviews11 followers
January 19, 2020
ಮೊದಲಿಗೆ ಹಸುರು ಹೊನ್ನು ಪುಸ್ತಕ ಓದಿದಾಗ ಅಬ್ಬಾ! ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕವನ್ನ ಕನ್ನಡದಲ್ಲಿ ಎಷ್ಟು ಸರಳವಾಗಿ ಬರೆದಿದ್ದಾರೆ ಅನ್ನಿಸಿತ್ತು.
ಗಣೇಶಯ್ಯನವರ 'ಸಸ್ಯ ಸಗ್ಗ' ಪುಸ್ತಕವನ್ನೋದಿದಾಗಲೂ ಅದೇ ಭಾವನೆ.ಇಂತಹ ಪುಸ್ತಕ ಅಪರೂಪಕ್ಕೆ ಕನ್ನಡಲ್ಲಿ ಬಂದು ನನಗೆ ಅದು ಓದೋಕೆ ಸಿಕ್ಕಿದೆ ಅನ್ನೋದೇ ದೊಡ್ಡ ಖುಶಿ.
ಗಣೇಶಯ್ಯನವರ ಕಾದಂಬರಿ, ಕತೆಗಳು ರೋಚಕವಾಗಿರ್ತಾವೆ,ಒಮ್ಮೆ ಶುರು ಮಾಡಿದ್ರೆ ಕೆಳಗಿಡೋದು ಕಷ್ಟ ಅನ್ನೋದು ಎಲ್ರಿಗೂ ತಿಳಿದದ್ದೆ.ಇದು ವಿಜ್ಞಾನ,ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕವಾದ್ರೂ ಅಷ್ಟೇ ಕುತೂಹಲಕಾರಿಯಾಗಿದೆ.
ಅವರ ಕೆಲವೊಂದು ಸಂಶೋಧನೆಗಳ ಬಗೆಗಿನ ಲೇಖನಗಳನ್ನ ಓದ್ತಿದ್ರೆ ನಾವೂ ಊಹೆ ಕೂಡಾ ಮಾಡದ ಒಂದು ಹೊಸ ಲೋಕ ನೋಡಿದಂತಾಗುತ್ತದೆ.ಸಸ್ಯಗಳಲ್ಲಿ ಇಷ್ಟೊಂದು ಸಂಕೀರ್ಣ ವ್ಯವಸ್ಥೆಗಳಿವೆಯಾ?ಅನ್ನಿಸದೆ ಇರಲಾರದು.
ಅದ್ಭುತವಾದ ಪುಸ್ತಕ!❤❤
Profile Image for Bhavya.
18 reviews7 followers
May 30, 2021
Such an inspirational book for science students.. ❤️❤️ wonderful read.... ❤️
18 reviews
September 20, 2020
This book is one of a kind. Much needed. Sheds light on plant ecology and evolution. It is author's journey as a scientist. Having known the author and having interacted with a couple of scientists (Dr. Umashaanker and Dr. Belavadi) mentioned in the book, it only gets interesting to read about the curious scientific journey of the author.
Displaying 1 - 10 of 10 reviews

Can't find what you're looking for?

Get help and learn more about the design.