Jump to ratings and reviews
Rate this book

ವಿಸ್ಮಯ-೧ | Vismaya - 1

Rate this book

100 pages, Unknown Binding

Published January 1, 1993

7 people are currently reading
61 people want to read

About the author

K.P. Poornachandra Tejaswi

59 books1,113 followers
K.P. Purnachandra Tejaswi was a prominent Kannada writer, novelist, photographer, ornithologist, publisher, painter and environmentalist. He made a great impression in the "Navya" period of Kannada literature and and inaugurated the bandaya sahitya.

Tejaswi was born on September 8, 1938. His father is the famous poet, Rashtrakavi Kuvempu. He completed his education in Mysore. Tejaswi has written in almost all forms of literature including poems, short stories, novels, travel literature, plays and science fiction. He has translated several English books to Kannada. His famous translations include the series on Kenneth Anderson's hunting expeditions and Henri Charrière's Papillon.

He has won several awards for his contribution to literature such as the Rajyotsava and Kannada Sahitya Academy awards.

Poornachandra Tejaswi died of cardiac arrest at the age of 69

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
23 (74%)
4 stars
8 (25%)
3 stars
0 (0%)
2 stars
0 (0%)
1 star
0 (0%)
Displaying 1 - 3 of 3 reviews
Profile Image for Abhiram's  Book Olavu.
119 reviews6 followers
September 12, 2025
ಈ ಅದ್ಭುತ ಜಗತ್ತು ಸರಣಿಯು ಕುತೂಹಲಭರಿತವಾಗಿಯೂ ರಂಜನಾತ್ಮಕವಾಗಿಯೂ ಮೂಡಿ ಬಂದಿದೆ ಅಂತಲೇ ಹೇಳಬಹುದು. ನಮ್ಮ ಜಗತ್ತು ಹಾಗು ಇದರ ಉಗಮ, ನೈಸರ್ಗಿಕ ವಿಸ್ಮಯಗಳು, ಜೀವ ವೈವಿಧ್ಯಗಳು, ಪರಿಸರ ಹಾಗು ಮಾನವ, ಕ್ರೌರ್ಯ, ಇಕಾಲಜಿಯ ವಿವಿಧ ಮಜಲುಗಳು ಹೀಗೆ ಹೇಳ್ತಾ ಹೋದ್ರೆ ಉದ್ದದ ಪಟ್ಟಿಯೇ ಆಗಬಹುದು! ಈ ಎಲ್ಲಾ ವಿಚಾರಗಳ ಬಗೆಗೆ ಕಲಾತ್ಮಕವಾಗಿ ಬರೆಯುವಲ್ಲಿ ತೇಜಸ್ವಿ ಅಗ್ರಗಣ್ಯರು ಅನ್ನುವುದರಲ್ಲಿ ಎರಡು ಮಾತಿಲ್ಲ! ಎಷ್ಟೋ ವೈಜ್ಞಾನಿಕ ವಿಷಯಗಳ ಕುರಿತು ಓದುಗರಿಗೆ ನಿರಾಯಾಸವಾಗಿ ಅರ್ಥವಾಗುವ ಹಾಗೆ ಸರಳವಾಗಿಯು ರೋಚಕವಾಗಿಯು ಬರೆಯುವಲ್ಲಿ ನಿಸ್ಸೀಮರು! ನಾವು ಬದುಕಿರುವ ಈ ಜಗತ್ತಿನಲ್ಲಿ ಈ ಸುಂದರ ಮನೋಹರ ಪರಿಸರದಲ್ಲಿ, ಆದರೆ ಈ ಪರಿಸರದ ಬಗೆಗೆ ಕುತೂಹಲಗೊಳ್ಳದೇ ತಿಳಿಯುವ ಪ್ರಯತ್ನ ಮಾಡದೇ ಬದುಕಿ ಇಹಲೋಕ ತ್ಯಜಿಸಿದರೆ ಏನು ಪ್ರಯೋಜನ? ಈ ನಮ್ಮ ಚೆಂದದ ಬೀಡನ್ನ ಮುಂದಿನ ಪೀಳಿಗೆಗೆ ಉಳಿಸಿ ಬೆಳಸದಿದ್ದರೆ, ಏನು ಪ್ರಯೋಜನ? ಅಲ್ಲವೇ? ಈ ಸರಣೆಯನ್ನ ಕನ್ನಡಿಗರ ಮುಂದಿಡುವಲ್ಲಿ ತೇಜಸ್ವಿ ಮತ್ತು ಪ್ರದೀಪ ಕೆಂಜಿಗೆ ಅವರು ಎಷ್ಟು ಅಧ್ಯಯನ ಕೈಗೊಂಡಿರುವರು ಎನ್ನುವುದು ಪ್ರತಿ ಪುಟದಲ್ಲಿಯೂ ನಮ್ಮ ಅರಿವಿಗೆ ಬರುವುದು! ತೇಜಸ್ವಿ ಅವರನ್ನ ಪಡೆದ ನಾವೆಷ್ಟು ಅದೃಷ್ಟವಂತರು ಅಲ್ವಾ ಅಂತ ಎಷ್ಟೋ ಸಲ ಅನ್ನಿಸಿದ್ದುಂಟು. ಇತ್ತೀಚೆಗೆ ತೇಜಸ್ವಿಯಂತೆ ಹಾಗೆಯೇ ತಮ್ಮದೆ ವಿನೂತನ ಬರವಣಿಗೆ ಶೈಲಿಯಲ್ಲಿ ತಮ್ಮನ ತಾವು ತೊಡಗಿಸಿಕೊಂಡಿರುವವರಲ್ಲಿ ಡಾI ಗಣೇಶಯ್ಯನವರ ಮುಂಚೂಣಿಯಲ್ಲಿ ಇರುವರು ಅಂತ ನನ್ನ ಅನಿಸಿಕೆ! ನನಗೆ ಶಾಲೆಯಲ್ಲಿ ಓದುವಾಗ EVS ಅನ್ನುವ ಸಬ್ಜೆಕ್ಟ್ ಇತ್ತು. ಅಲ್ಲಿ ಪರಿಸರದ ಬಗೆಗೆ ತಿಳಿದಿದ್ದಕಿಂತಾ ತೇಜಸ್ವಿ ಅವರ ಕೃತಿಗಳಲ್ಲಿ ಪರಿಸರ ವಿಜ್ಞಾನ ಹಾಗು ಅದರ ವಿಶ್ವರೂಪವನ್ನ ಅರಿತುಕೊಂಡೆ ಅಂದರೆ ಅದು ಅತಿಶಯೋಕ್ತಿಯಾಗಲಾರದು. ನೀವು ಈ ಅದ್ಭುತ ಜಗತ್ತು ಸರಣಿ ಓದಿಲ್ಲ ಅಂದರೆ ಒಂದು ವಿಶಿಷ್ಟ ಅನುಭವನ್ನ ಕಳೆದುಕೊಂಡಂತೆಯೇ ಸರಿ!
Profile Image for Anagha S Jahgirdar.
76 reviews
April 30, 2023
I read these in my high school holidays, 1,2,3 books
It is so deep and to enjoy the essays some general kannada is the requirement. And can use dictionary. Because few words are complex. Description is very good and useful for high school students. It really instigates deep understanding of nature and reading about and a self talk while you observe dogs or nature.
Displaying 1 - 3 of 3 reviews