What do you think?

ಕನ್ನಡಿ ಹರಳು | Kannadi Haralu
Unknown Binding
Published January 1, 2019
Ratings & Reviews
Friends & Following
Create a free account to discover what your friends think of this book!
Community Reviews
Displaying 1 - 10 of 10 reviews
July 25, 2021
ಅರೆ ವ್ಹಾ, ಎಂತ ಕಥೆಗಾರ ರೀ ಈ ಹುಡ್ಗ ಅಂತ ಕಥೆ ಕಥೆಗೂ ಅನ್ನಿಸುವಷ್ಟು ಆಪ್ತ ಕಥೆಗಾರ ಪದ್ಮನಾಭ ಭಟ್ ಶೇವ್ಕಾರ. ಇದೇ ಭಾವನೆ ಅವರ ಮೊದಲ ಕಥಾಸಂಕಲನ ಕೇಪಿನ ಡಬ್ಬಿಯಲ್ಲೇ ಅನ್ನಿಸಿದ್ದರೂ, ಈ ಕಥಾಸಂಕಲನ, ಆ ಅಭಿಪ್ರಾಯವನ್ನು ಇನ್ನೂ ದೃಢವನ್ನಾಗಿಸುತ್ತದೆ.
ಈ ಕಥಾ ಸಂಕಲನದಲ್ಲಿ ಒಟ್ಟು 8 ಕಥೆಗಳಿವೆ... ಎಲ್ಲವೂ ಸುಂದರ ಮತ್ತು ಆಳ ಭಾವಯುಳ್ಳ ವಸ್ತುಗಳು...ಮೊದಲ ಕಥೆ ಪೊಕ್ಕ ಹರಿಶ್ಚಂದ್ರಯಲ್ಲೇ ಓದುಗ clean bowled ಆಗುತ್ತಾನೆ... ಒಂದೊಂದು ಕಥೆಗೂ ಒಂದತ್ತು ನಿಮಿಷ ಕೂತು ಯೋಚಿಸುವಂತೆ ಮಾಡಿ, ಮುಂದೊಂದು ಲೋಕಕ್ಕೆ ಪರಿಚಯಿಸುವಷ್ಟು ಆಳವಾದ, ವಿಶಾಲವಾದ ಬರಹ ಲೇಖಕರದ್ದು... ಇಲ್ಲಿ ನನ್ನ ಇಷ್ಟದ ಕಥೆ "ಸ್ವಪ್ನ ಸಂಬಂಧ", ಪ್ರಾಯಶ್ಚಿತ್ತದ ಮಹತ್ವನ್ನು haunting ಫೀಲ್ ಅಲ್ಲಿ ಹೇಳುವ ಕಥೆಯಿದು... ಎಡಿಟ್ ಡಿಲೀಟ್ ಎಂಬ ಇನ್ನೊಂದು ಕಥೆ ಮನಸ್ಸನ್ನು ಭಾರವನ್ನಾಗಿಸುತ್ತದೆ.
ಕನ್ನಡ ಸಾಹಿತ್ಯ ಕಥಾ ಶ್ರೀಮಂತ ಸಾಹಿತ್ಯ.. ಇಲ್ಲಿ ಮಾಸ್ತಿ, ತೇಜಸ್ವಿ, ಬೆಸಗರಹಳ್ಳಿ ರಾಮಣ್ಣ, ಅನಂತಮೂರ್ತಿ, ಕಾಯ್ಕಿಣಿ ಮತ್ತು ಇತರೆ ದೈತ್ಯ ಪ್ರತಿಭೆಗಳು ಕೃಷಿ ಮಾಡಿವೆ... ಈ ಸಾಲಿಗೆ ಸೇರುವ ತಾಕತ್ತು ಪದ್ಮನಾಭರಿಗೆ ಇದೆ ಎಂದರೆ ಖಂಡಿತ ಉತ್ಪ್ರೇಕ್ಷೆ ಅನ್ನಿಸುವುದಿಲ್ಲ ಮತ್ತು ಅವರ ಎರಡೂ ಕಥಾ ಸಂಕಲನಗಳು ಕನ್ನಡ ಸಾಹಿತ್ಯ ಸುಪೋಷ್ಟ ಇಳುವರಿಗೆ ಸಿಕ್ಕ ಫಲವತ್ತಾದ ಗೊಬ್ಬರಗಳು.

January 29, 2026
“ನಾನು ಬರೆದರೆ ಇಂತಹ ಕತೆಗಳನ್ನೇ ಬರೀಬೇಕು”ಎನ್ನುವಂತಹ ಸ್ಟ್ಯಾಂಡರ್ಡ್ ಸೆಟ್ ಮಾಡುವ ಕತೆಗಳು ಇಲ್ಲಿಯವು. ಇವರ ಮೊದಲ ಕಥಾಸಂಕಲನ “ಕೇಪಿನ ಡಬ್ಬಿ”ಬಹಳ ಹಿಡಿಸಿತ್ತು, “ಕನ್ನಡಿ ಹರಳು” ಸಹ ಮೆಚ್ಚುಗೆಯಾಯ್ತು.
ಇಲ್ಲಿನ ಎಂಟೂ ಕತೆಗಳು ಮನುಷ್ಯನ ಅಂತರಂಗಕ್ಕೆ ಹೊಕ್ಕು ಬಾಚಿ ತಂದ ಘಟನೆಗಳಂತಿದ್ದವು, ಮನುಷ್ಯನ ಅಸಹಾಯಕತೆ ಮತ್ತು ನಿರುಪಯುಕ್ತ ಸ್ಥಿತಿಯನ್ನ ಪ್ರತಿ ಕತೆಯಲ್ಲೂ ಕಾಣಬಹುದು. ಪ್ರತಿ ಕತೆಯನ್ನ ಓದಿದಮೇಲೆ ಸುಧಾರಿಸಿಕೊಳ್ಳಲು ಸಮಯ ಹಿಡಿಯಿತು ಎಂದು ಹೇಳಿದರೆ ಉತ್ಪ್ರೇಕ್ಷೆಯೇನಲ್ಲ. ಓದಿ, ನಿಮಗೂ ಇಷ್ಟವಾಗುತ್ತೆ.
- ವಸಂತ್
೨೯/೦೧/೨೦೨೬

October 6, 2020
ಬಹಳ ಇಷ್ಟವಾದ ಕಥಾ ಸಂಕಲನ. ಇದರ ಒಂದೊಂದು ಕಥೆಗಳೂ ಇನ್ನೂ ತಲೆಯಲ್ಲಿ ಗುಯ್ಗುಟ್ಟುತ್ತಿವೆ. ಸಾಧ್ಯವಾದರೆ ಇನ್ನೊಮ್ಮೆ ಓದಲೇ ಬೇಕು...
March 5, 2024
I must say I am happy that I came across a book that made me get stuck in thoughts, introspect the same for few minutes and proceed. This happened in every story, probably. Some of them impacted me deeply as I could connect (definitely most would) with them, imagine myself stuck in such situations, analyse what I would do and what not. The thought that some wrong decisions/wrongdoings in haste could make our lives topsy-turvy sends chills down the spine.
We have around us Harishchandras who want to unite with their families (ಪೊಕ್ಕ ಹರಿಶ್ಚಂದ್ರ), strong Aayis whose age is a number (ಆಯಿಮನೆ), countless friends like Prabhu stuck in cities for livelihood (ಬಾಗಿಲು), Sadashivas urging to live their lives on their own (ಮಧ್ಯವಿಲ್ಲದ ಧರಣಿ ಮಂಡಲ) psychologically affected Bhattas who want to be free (ಸ್ವಪ್ನ ಸಂಬಂಧ), single mothers like Vaishali balancing work life struggles, worrying about their daughter's future (ಎಡಿಟ್... ಡಿಲೀಟ್...), people like 'ಅವನು' (literally he's referenced with a pronoun, no name mentioned) struggling to forget that one disastrous event that turned their life upside down (ಅವನು), helpless Srinivasas who cant be of any help to that one person who always pulled you out of life's troubles (ಸದ್ದಿನ ಸೆರೆಮನೆ).

November 10, 2024
ತುಂಬಾ ಒಳ್ಳೇಯ ಕಥಾ ಗುಚ್ಛ . ಪ್ರತಿ ಕಥೆಯು ವಿಭಿನ್ನ ವಿಶಿಷ್ಟ.
January 27, 2020
ಕನ್ನಡಿ ಹರಳು - ಪದ್ಮನಾಭ ಭಟ್ ಶೇವ್ಕಾರ
ಪ್ರೀತಿಯ ಪದ್ಮನಾಭ, ಹಳ್ಳಿಯ ಹವ್ಯಕ ಹುಡುಗನೊಬ್ಬನ ಕನವರಿಕೆಗಳೆಲ್ಲ ಅಕ್ಷರ ರೂಪ ತಾಳಿ ಈ ಸಂಕಲನವಾಗಿ ಬಂದಂತೆ ಅನಿಸಿತು. ಕೇಪಿನ ಡಬ್ಬಿಯ ಮೊದಲ ಸಂಕಲನದ ಹಿಂಜರಿತವನ್ನೆಲ್ಲ ದಾಟಿ ಪಳಗಿದ ಕಥೆಗಾರರಾಗಿ ಬಿಟ್ಟಿದ್ದೀರಿ.
ಹೇಗೆಂದರೆ ಸಂಜೆ ಹೊತ್ತಿಗೆ ಮಕ್ಕಳ ಸುತ್ತ ಕೂರಿಸಿ ಎಲೆ ಅಡಿಕೆ ಹಾಕಿಕೊಂಡು ಕಥೆ ಹೇಳುವ ಅಜ್ಜ ನಡುವೆ ಅದನ್ನು ಉಗುಳಲೆಂದು ಏಳುವಾಗ ಕಥೆ ಅರ್ಧಕ್ಕೆ ನಿಲ್ಲುತ್ತದಲ್ಲ ಆಗ ಆ ಮಕ್ಕಳ ಕಣ್ಣಲ್ಲಿ ಉಳಿದ 'ಮುಂದೇನಾಗಬಹುದು?' ಎಂಬುದು ಓದುಗರಾದ ನಾವೂ, ' ಇವರನ್ನೆಲ್ಲ ಕಾದು ಕುಳಿತಿಡುವ ಶಕ್ತಿ ನನಗಿದೆ.ಯಾಕೆಂದರೆ ನನಗೆ ಕಥೆ ಹೇಳಲಿಕ್ಕಿದೆ.ಮತ್ತು ಹೇಳುವ ಬಗೆ ಗೊತ್ತಿದೆ' ಎಂಬ ಹೆಮ್ಮೆಯ ನಗುವಿನ ಅಜ್ಜನಾಗಿ ನೀವೂ ಕಣ್ಣೆದುರು ಬಂದಿರಿ.
ಬಾಗಿಲು ಕಥೆಯ ಹೆಸರನ್ನು ಕ್ರೌರ್ಯ ಅಂತ ಬದಲಾಯಿಸಿದ್ದರೇ ಒಪ್ಪುತ್ತಿತ್ತಾ?
ಊರಿನ ಅಡಿಕೆ ಬೆಳೆವ ಹವ್ಯಕ ಕುಟುಂಬದ ಮಾಣಿ,ನಗರಕ್ಕೆ ಬರುವಾಗ ಆಗುವ ಯಾತನೆಗಳೆಲ್ಲ ನಮ್ಮೆಲ್ಲರ ಅನುಭವವೇ.ಅದಕ್ಕೆ ಅಕ್ಷರ ರೂಪ ಮಾತ್ರ ನಿಮ್ಮದು. ಇನ್ನು ಪ್ರೀತಿ ,ಪ್ರಣಯ ಇತ್ಯಾದಿ ಎಲ್ಲ ಹೂಬೇ ಹೂಬು.
ಇಷ್ಟೆಲ್ಲ ಖುಷಿಯಾದ ಮೇಲೆ ಒಂಚೂರು ಇಷ್ಟವಾಗದ್ದೂ ಹೇಳಬೇಕು.
ಕೊನೆಯ ಕಥೆ ನೀವು ಕೂತು ಸುಮ್ಮನೇ ಬರೆದಂತೆ ಅನಿಸಿತು.ಅದು ತಟ್ಟಬೇಕಾದ ತೀವ್ರತೆಯಲ್ಲಿ ತಟ್ಟಲಿಲ್ಲ. ನಡುವೆ ಇನ್ನೊಂದು ಕಥೆಯಲ್ಲಿ ಬರುವ ಸೂಳೆಮನೆಯ ಸೀನು ಕೂಡ ಸ್ವಲ್ಪ ಕೃತಕವಾಯಿತು ಅನಿಸಿತು. ಅಥವಾ ಅಂಥಹದ್ದು ಎಷ್ಟೋ ಓದಿದ ಬಳಿಕದ ಪುನರಾವರ್ತನೆಯ ಭಾಸವೋ!
ಇವೆರಡು ಕೊರೆಗಳ ಬಿಟ್ಟರೆ ಕನ್ನಡಿ ಹರಳು ಹಳ್ಳಿಯ ಮನೆಗಳ ಹಾಗೆ.
ಅಥವಾ ಖಂಡವಿದೆಕೋ ಮಾಂಸವಿದೆಕೋ ಅಂತ ಒಳಗಿನದನ್ನು ಬಸಿದು ಕೊಟ್ಟ ಹಾಗೆ.
ಬಹುಶಃ ಈ ತರಹದ ಪರಿಸರದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಬೆಳೆದ, ನಗರ ಬದುಕಲ್ಲಿ ಹಿಡಿ ಸಂಬಳಕ್ಕೆ ಬಾಸ್ ಎದುರು ಬೈಸಿಕೊಳ್ಳುತ್ತಾ ಊರಿಗೆ ಮರಳಲೂ ಆಗದೆ,ಇರಲೂ ಆಗದ ಮುಕ್ಕಾಲು ಪಾಲು ಜೀವಗಳಿಗೆ ಇನ್ನೂ ಆಪ್ತವಾಗುವ ಕಥೆಗಳು ಇಲ್ಲಿವೆ.
ನಾನೇನು ನಿರೀಕ್ಷೆ ಮಾಡಿದ್ದೇನೋ ಅದರ ಡಬ್ಬಲ್ ಸಿಕ್ಕಿತು ನನಗೆ.ಧನ್ಯವಾದ.

June 7, 2025
ಸರಳ, ಸುಂದರ, ಬರವಣಿಗೆ, ಚಂದದ ಕಥೆಗಳು.
September 29, 2021
ಸಹ ಓದುಗರ reviews ನೋಡಿ ಓಡಿದಂತಹ ಮತ್ತೊಂದು ಪುಸ್ತಕ.
8 ಕಥೆಗಳ collection.
ಹೆಚ್ಚು ಕಮ್ಮಿ ಎಲ್ಲ ಕಥೆಗಳಿಗೂ open ending ಕೊಟ್ಟಿದಾರೆ. ಓದುಗರು ಕೂತು ಯೋಚನೆ ಮಾಡಿ ತಮಗೆ ಬೇಕಾದ ಹಾಗೆ ಅರ್ಥೈಸಿಕೊಳ್ಳಬಹುದು.

August 25, 2026
"ಪೊಕ್ಕ ಹರಿಶ್ಚಂದ್ರ", "ಸ್ವಪ್ನ ಸಂಬಂಧ", "ಸದ್ದಿನ ಸೆರೆಮನೆ" ತುಂಬ ಹಿಡಿಸಿದ ಕಥೆಗಳು..
ಮೊದಲ ಕಥೆ "ಪೊಕ್ಕ ಹರಿಶ್ಚಂದ್ರ" ತುಂಬಾ ಹಿಡಿಸಿತು,ಇಲ್ಲಿದ್ದ ನಿಗೂಢತೆ,ರೋಮಾಂಚಕತೆ, ಮೈನವಿರೇಳಿಸುವಂತಿತ್ತು.
"ಸ್ವಪ್ನ ಸಂಬಂಧ"ದಲ್ಲಿದ್ದ ಗೋಪಿಭಟ್ಟನ ತೊಳಲಾಟ, ನರಳಾಟದ ಪರಿ ತುಂಬಾ ಕಾಡಿತು.
ಕೊನೆಯ ಕಥೆ "ಸದ್ದಿನ ಸೆರೆಮನೆ"ಯಲ್ಲಿದ್ದ ಸಿನಿರಂಗದ ಒಳನೋಟ,ಅಲ್ಲಿದ್ದ ಪಾತ್ರಗಳ ಆಕಾಂಕ್ಷೆಗಳು,ಅವರವರುಗಳ ಪಯಣನಗಳು ಒಂದು ಕಿರುಚಿತ್ರವನ್ನೇ ನೋಡಿದ ಅನುಭವವಾಯಿತು..

April 22, 2020
ಬಹಳ ಇಷ್ಟವಾದ ಕಥಾಸಂಕಲನ. ಹಳ್ಳಿಯಿಂದ ಬೇರೆ ಬೇರೆ ಕಾರಣಗಳಿಗೆ ಪಟ್ಟಣಕ್ಕೆ ವಲಸೆ ಬರುವ ಯುವಕರ ತಳಮಳ ಹಾಗೂ ಅನಿವಾರ್ಯತೆಯನ್ನು ಅತ್ಯಂತ ಚೊಕ್ಕವಾಗಿ ಮನಮುಟ್ಟುವಂತೆ ಕೆಲವು ಕತೆಗಳಲ್ಲಿ ನಿರೂಪಿಸಿದ್ದಾರೆ.
Displaying 1 - 10 of 10 reviews