ಛೇದ
ಯಶವಂತ ಚಿತ್ತಾಲ
ಚಿತ್ತಾಲರ ಅತ್ಯದ್ಭುತ ತ್ರಿಲ್ಲರ್ ಕಾದಂಬರಿ
ಬೆಹರಾಮ್ ಮುಂಬಯಿಯ ಜೋಪಡಪಟ್ಟಿಯಲ್ಲಿ ತನ್ನ ಹೆಂಡತಿ ಹಾಗು ಮಗಳು ಶಿರೀನ್ ಜೊತೆ ವಾಸಿಸುತ್ತಿದ್ದನು. ಬಾಲ್ಕಾನಿಯಲ್ಲಿ ಚಹಾ ಸೇವಿಸುತ್ತಾ ಸೂರ್ಯಾಸ್ತವನ್ನು ಪ್ರತಿ ದಿನ ವೀಕ್ಷಿಸುತ್ತಾ ಆನಂದವಾಗಿ ಜೀವಿಸುತ್ತಿದ್ದನು, ಪರವಾಗಿಲ್ಲ ಮುದುಕ ಒಳ್ಳೆಯ ಕಡೆಯಲ್ಲಿ ಮನೆ ಮಾಡಿಕೊಂಡಿದ್ದಾನೆ, ಮನಸ್ಸು ನೆಮ್ಮದಿಯಿಂದಿರುವಾಗ, ಬೇಜಾರಾದಾಗ ಕಡಲನ್ನು ನೋಡಿಕೊಂಡು ಅದರಲ್ಲಿ ತಲ್ಲೀನನಾಗಿಬಿಡುತ್ತಿದ್ದನು, ಇನ್ನು ೨ ವರ್ಷದಲ್ಲಿ ಕೆಲಸದಿಂದ ನಿವೃತ್ತಿಯಾಗಬೇಕು ಅಷ್ಟರಲ್ಲಿ ತನ್ನ ಜೀವನದಲ್ಲಿ ನಡೆಯುವ ಪ್ರಸಂಗಗಳು ನೆಮ್ಮದಿಯಿಂದಿರುವ ಜೀವನದಲ್ಲಿ ಒಮ್ಮೆಲೆ ಭಯ, ಸಂಶಯ, ಸಿಟ್ಟು ಆತನ ಮೇಲೆ ಪರಿಣಾಮವಾದ ರೀತಿ ಅದಕ್ಕೆ ಕಾರಣರಾದ ಕೆಲವು ವ್ಯಕ್ತಿಗಳು, ಕೆಲವು ಸನ್ನಿವೇಶಗಳು ಇಡೀ ಕಾದಂಬರಿಯ ವಸ್ತು ಅದರ ಸುತ್ತ ಬಿಚ್ಚಿಕೊಳ್ಳುತ್ತದೆ. ಛೇದದಲ್ಲಿ ಭೀಕರ ಕೊಲೆ ನಡೆಯುತ್ತದೆ, ಈ ಕೊಲೆಗೆ ತುತ್ತಾದವನು ಯಾರೆಂಬುದು ಕೊನೆಯವರೆಗೂ ರಹಸ್ಯವಾಗಿಯೇ ಉಳಿದುಬಿಡುತ್ತದೆ.
ಕರುಣಾಕರನ್ ಎಕ್ಸಪ್ರೆಸ್ ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿರುತ್ತಾನೆ, ಒಮ್ಮೆ ಆಕಸ್ಮಿಕವಾಗಿ ಬೆಹರಾಮ್ ಮನೆಗೆ ಬಂದು ೩ ವರ್ಷ ಹಿಂದೆ ನಡೆದ ರದ್ದೀವಾಲನ ಕೊಲೆಯ ಬಗ್ಗೆ ತಾನು ರಿಪೋರ್ಟ್ ವರದಿ ಮಾಡಬೇಕೆಂದು ಬೆಹರಾಮಿನಿಗೆ ಕೇಳಿದಾಗ ಆತನಿಗೆ ಅತ್ಯಾಶ್ಚರ್ಯವಾಗುತ್ತದೆ, ೩ ವರ್ಷದ ಹಿಂದೆ ಅದೂ ರದ್ದೀವಾಲನ ಕೊಲೆಯ ಬಗ್ಗೆ ಏಕೆ ಈತನಿಗೆ ಅಷ್ಟು ಕುತುಹಲ ಎಂದು ಕರುಣಾಕರನ ಮೇಲೆ ಸಂಶಯ ಹುಟ್ಟುತ್ತದೆ. ಈತನು ತನ್ನ ಮಿತ್ರ ಅಗರ್ವಾಲ್ ಸ್ಥಾಪಿಸಿದ ಎಕ್ಸಪ್ರೆಸ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುತ್ತಾನೆ, ಅಂದರೆ ಇದು ಅಗರವಾಲನ ಪಿತೂರಿಯೇ ಎಂಬ ಸಂಶಯವೂ ಉಂಟಾಗುತ್ತದೆ. ಆದರೆ ಕೇರಳದಿಂದ ಬಂದ ಕರುಣಾಕರನ್ ಮುಖ್ಯವಾಗಿ ಮುಂಬಯಿಯಲ್ಲಿದ್ದ ತನ್ನ ಅಣ್ಣನನ್ನು ಹುಡುಕಲು ಬಂದಿರುತ್ತಾನೆ, ಆತನಿಗೆ ಸಹಿ ಇಲ್ಲದೇ ಇರುವ ಪತ್ರ ಬಂದಿರುತ್ತದೆ, ೩ ವರ್ಷದ ಹಿಂದೆ ತನ್ನ ಅಣ್ಣ ಕೊಲೆಯಾಗಿರುವನೆಂದು ಅದೂ ಬೆಹರಾಮ್ ವಾಸಿಸುತ್ತಿದ್ದ ಜೋಪಡಪಟ್ಟಿಗಳ ಸುತ್ತಮುತ್ತಲಲ್ಲಿ ನಡೆದಿರುವುದೆಂದು ಆದ್ದರಿಂದ ಮೊದಲು ರದ್ದೀವಾಲನ ಕೊಲೆಯಂದು ನೆಪ ಹೂಡಿ ತನ್ನ ಅಣ್ಣನು ಬದುಕಿರುವನೋ ಇಲ್ಲ ಕೊಲೆಯಾಗಿರುವನೋ ಅದನ್ನು ಹುಡುಕುವುದರಲ್ಲಿ ಬೆಹರಾಮ್ ನಿಂದ ಮಾಹಿತಿ ಪಡೆಯಲು ೨ ಬಾರಿ ಭೇಟಿಯಾಗುತ್ತಾನೆ. ೨ ನೆ ಸಲ ಮನೆಗೆ ಬಂದಾಗ ನಾಲ್ಕು ಜನ ಆಗುಂತಕ ವ್ಯಕ್ತಿಗಳು ಒಮ್ಮೆಲೆ ಮನೆಗೆ ಬಂದು ಕರುಣಾಕರನನ್ನು ಹಿಡಿಯಲು ಹೋದಾಗ ಹೇಗೋ ಆತನು ಪರಾರಿಯಾಗುತ್ತಾನೆ. ಆ ವ್ಯಕ್ತಿಗಳು ಯಾರೆಂಬುದು ಯಾರಿಗೂ ತಿಳಿಯದು ಅವರ ಮನೆಗೆ ಬರಲು ಕಾರಣ ಏನು ಕರುಣಾಕರನನ್ನು ಹಿಡಿಯಲು ಕಾರಣವೇನು ಎಂಬುದು ಸಂಶಯಕ್ಕೀಡುಮಾಡುತ್ತದೆ. ಈ ಭೇಟಿ ಹಾಗು ಘಟನೆಗಳಿಂದ ಅಲ್ಲಿರುವವರಿಗೆ ಆಗುವ ಭಯ, ಮನಸ್ಸಿನಲ್ಲಾಗುವ ತಳಮಳಗಳು, ಸಮಾಜದಲ್ಲಿ ಯಾರನ್ನು ನಂಬುವುದು ಬಿಡುವುದು ಎಂದು ಆತಂಕಕ್ಕೆ ಗುರಿಯಾಗುತ್ತಾರೆ.
ಕರುಣಾಕರನ್ ಬಂದು ಹೋದ ನಂತರ ವಾಸುದೇವನ್ ಇವರ ಮನೆಗೆ ಬರುತ್ತಾನೆ, ಮೊದಲು ಕೇಳುವುದೇ ಕರುಣಾಕರನ್ ಬಗ್ಗೆ. ಬೆಹರಾಮ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವಾಸುದೇವನ್ ೩ ವರ್ಷಗಳ ಹಿಂದೆ ಭೀಕರ ಕೊಲೆಯ ಬಗೆಗೆ ತಿಳಿಸಿದವನೇ ಈತನು, ಕಣ್ಣೆದುರು ನಡೆದ ಕೊಲೆಯನ್ನು ನೋಡಿದ ವಾಸುದೇವನ್ ಹೇಗೋ ಠಕ್ಕರ ಗ್ಯಾಂಗಿನಿಂದ ಪರಾರಿಯಾಗಿ ಬಂದಾಗ ಬೆಹರಾಮ್ ಸಲಹೆಯಂತೆ ವಾಸುದೇವನ್ ಮಸ್ಕತ್ತಿಗೆ ಪರಾರಿಯಾಗಿದ್ದು,ಈಗ ಕೊಲೆಯಾದವನು ತಮ್ಮನೋ ಇನ್ನಾರೋ ಬಂದು ತನಿಖೆ ಮಾಡುತ್ತಿರುವ ಹೊತ್ತಿಗೆ ಮಸ್ಕತ್ತಿನಿಂದ ಹಿಂದುರಿಗಿ ಬಂದಿರುವ ವಾಸುದೇವನ್ ತನ್ನ ಹೆಸರು ಈ ಹುಡುಗ ಒಟ್ಟು ಮಾಡುತ್ತಿದ್ದ ಮಾಹಿತಿಯಲ್ಲಿ ಸೇರಿಕೊಳ್ಳಬಹುದೆಂಬ ಭಯವಾಗಿರಬಹುದೆ? ವಾಸುದೇವನ್ ಕೊಟ್ಟ ಮಾಹಿತಿಯನ್ನು ಯಾರಿಗೂ ತಿಳಿಸಲ್ಲಿಲ್ಲ, ಆದರೆ ಕರುಣಾಕರನ್ ತನ್ನನ್ನೇ ಬಂದು ವಿಚಾರಿಸಿದ ಬಗ್ಗೆ ತಿಳಿದು ಈ ಸಂಬಂಧಗಳೆ ಆತನಿಗೆ ಅರ್ಥವಾಗಲಿಲ್ಲ, ಜೋಪಡಪಟ್ಟಿಯ ಸುತ್ತಲಲ್ಲಿ ನಡೆದ ಕೊಲೆಯ ಬಗ್ಗೆ ರಿಪೋರ್ಟ್ ಕೊಡಲು ಅಗರ್ವಾಲ್ ಮಾಡಿದ ಹುನ್ನಾರವೇ ಅದೂ ತಿಳಿಯದು ಇದರಿಂದ ತನ್ನ ಪತ್ರಿಕೆಗೆ ಒಳ್ಳೆಯ ಹೆಸರು ತಮಗೆ ಕೆಟ್ಟಹೆಸರು ತರಲು ಹೊರಟಿರುವುದನ್ನು ನೆನೆದು ಆತಂಕಪಡುತ್ತಾನೆ. ಕರುಣಾಕರನ್ ಹೇಳಿದ ಪತ್ರ ವಾಸುದೇವನ್ ಕಳುಹಿಸಿರುವುದೆಂದು ವಾಸುದೇವನ್ ತಿಳಿಸಿದಾಗ ಒಂದು ಸಂಶಯ ನಿವಾರಣೆಯಾಯಿತು. ಕರುಣಾಕರನ್ ಹುಡುಕುತ್ತಿರುವ ಅಣ್ಣ ವಾಸುದೇ��ನ್ ಎಂದು ಆತನು ಕೊಲೆಯಾಗಿಲ್ಲವೆಂದು ಅವರಿಬ್ಬರಿಗೆ ತಿಳಿಸೋಣವೆಂದರೆ ಇಬ್ಬರೂ ಪರಾರಿ ಅವರು ಭೇಟಿಯಾದರೋ ಇಲ್ಲವೋ ದೇವರೇ ಬಲ್ಲ.
ಅಷ್ಟರಲ್ಲಿ ಎಕ್ಸಪ್ರೆಸ್ ಪತ್ರ��ಕೆಯಲ್ಲಿ ೩ ವರ್ಷದ ಹಿಂದೆ ಕೊಲೆಯಾದ ಸಂಗತಿ ಪ್ರಕಟವಾದಗ ಕೆರಳಿದ ಬೆಹರಾಮ್ ಅಗರ್ವಾಲಿಗೆ ಕರೆ ಮಾಡಿ ತಾವು ನೆಲಸಿರುವ ಜೋಪಡಿಪಟ್ಟಿಯ ಜನರಿಗೆ ಕೆಟ್ಟ ಹೆಸರು ತರಲು ಹೊರಟ ಈತನನ್ನು ಫೋನಿನಲ್ಲಿ ಬೈದಾಗ ಅಗರ್ವಾಲನ ಪ್ರತಿಕ್ರಿಯೆಯೇ ಇರುವುದಿಲ್ಲ, ಅಂದಹಾಗೆ ಯಾರೀ ಅಗರ್ವಾಲ್? ತನ್ನ ಕಂಪನಿಯಲ್ಲಿ ತನ್ನ ಜೊತೆ ೧೩ ವರ್ಷ ಕೆಲಸ ಮಾಡಿದ ಈ ಪುಂಡ ಬಿಟ್ಟುಹೋಗಿ ೮ ವರ್ಷದಲ್ಲಿ ಅವನನ್ನು ಕಂಡದ್ದು ಒಂದೇ ಸತಿ ಅದೂ ೩ ವರ್ಷದ ಹಿಂದೆ, ಟೆಲಿಪೋನೆ ಮೇಲೆ ಮಾತಾಡಿದ್ದೂ ಪತ್ರಿಕೆಯಲ್ಲಿ ನ್ಯೊಸ್ ಪ್ರಕಟವಾದಾಗ ಅದೂ ಆತನ ಪ್ರತಿಕ್ರಿಯೆಯಿಲ್ಲ, ಕಂಪನಿ ಸೇರಿದಾಗ ಆತನಿಗೆ ಎಳೆಯ ಪ್ರಾಯ ಸ್ಮಾರ್ಟ್ ಹುಡುಗ, ಬಹಳ ಬುದ್ಧಿವಂತ, ಬೇಗನೆ ಬೆಳೆದು ಒಳ್ಳೆ ಹುದ್ದೆಗೆ ಬಂದು ಕಂಪನಿ ಬಿಟ್ಟು ಪತ್ರಿಕೋದ್ಯಮವನ್ನು ತೆರೆದ, ತನ್ನ ಮೇಲೆ ಹಗೆ ಯಾಕೆ ಕಾರಣ ತಿಳಿಯದು ಇದೇ ಗೊಂದಲಾಟದಲ್ಲಿರಬೇಕಾದರೆ ಒಂದು ದಿನ ಅಕಸ್ಮಾತ್ ಆಗಿ ಅಗರವಾಲ ಅಣ್ಣ ಬಂದು ಬೆಚ್ಚಿ ಬೀಳುವ ಸುದ್ಧಿ ಕೊಟ್ಟ, ೩ ವರ್ಷದ ಹಿಂದೆ ಅಗರ್ವಾಲ್ ಕೊಲೆಯಾದದ್ದೆಂದು.
೩ ವರ್ಷ ಹಿಂದೆ ಕೊಲೆಯಾದದ್ದು ಅಗರ್ವಾಲ್ ಇರಬಹುದೇ ಇಲ್ಲವೆ ಈ ಪ್ರಕರಣ ಕಡೆಯವರೆಗೂ ರಹಸ್ಯವಾಗಿಯೇ ಉಳಿಯಿತು, ಕರುಣಾಕರನ್ ಬಂದದ್ದಾದರೂ ಏಕೆ, ವಾಸುದೇವನ್ ಕರುಣಾಕರನ್ ಬಂದಮೇಲೆ ಬಂದುದು ಆಶ್ಚರ್ಯ ಸಂಗತಿಯೇ, ಇವರಿಬ್ಬರು ನಿಜವಾಗಿ ಒಂದೇ ತಾಯಿಯ ಮಕ್ಕಳೇ? ಇವರಿಬ್ಬರು ಈಗ ಸುರಕ್ಷಿತವಾಗಿರುವರೇ? ನಾಲ್ಕು ಜನ ಆಗುಂತಕರು ಕರುಣಾಕರನನ್ನು ಹಿಡಿಯಲು ಹೊರಟದ್ದು ಏಕೆ? ಅಗರ್ವಾಲ್ ಕೊಲೆಯಾದದ್ದಾದರೂ ಏಕೆ? ಮತ್ತೆ ಕೊಲೆಯ ಬಗ್ಗೆ ಪತ್ರಿಕೆಯಲ್ಲಿ ಯಾರು ಪ್ರಕಟಿಸಿದ್ದು?ಅಂದಹಾಗೆ ಯಾರು ಕೊಲೆಯಾದದ್ದು, ಈ ಘಟನೆಗಳಿಗೆಲ್ಲಾ ತನನ್ನೇ ಏಕೆ ಆಯ್ದು ಪ್ರಶ್ನೆ ಮಾಡಿ ಯಾವುದಕ್ಕೂ ಉತ್ತರ ಸಿಗದೆ ತನ್ನ ಮನಸ್ಸಿನ ನೆಮ್ಮದಿಯನ್ನು ಹಾಳುಮಾಡಲು ಹೊರಟವರಾದರೂ ಯಾರು ? ಕಡೆಯವರೆಗೂ ಬೆಹರಾಮ್ ಗೆ ಯಾವುದಕ್ಕೂ ಉತ್ತರ ಸಿಗದೆ ಮನಸ್ಸಿಗೆ ಬಡಿದ ಛೇದ ದಿಂದ ತನ್ನ ಮನೆಯ ಬಾಲ್ಕಾನಿಯಿಂದ ಸಮುದ್ರವನ್ನು ನೋಡುತ್ತಾ ತಲ್ಲೀನನಾಗಿಬಿಡುತ್ತಾನೆ.
*ಕಾರ್ತಿಕೇಯ*